Tag: anjan

  • ಸುರೇಶ್ ಡಿ.ಎಂ ನಿರ್ದೇಶನದ `ಚೋಳ’ ಟೀಸರ್ ರಿಲೀಸ್: ರಗಡ್ ಪಾತ್ರದಲ್ಲಿ ಅಂಜನ್

    ಸುರೇಶ್ ಡಿ.ಎಂ ನಿರ್ದೇಶನದ `ಚೋಳ’ ಟೀಸರ್ ರಿಲೀಸ್: ರಗಡ್ ಪಾತ್ರದಲ್ಲಿ ಅಂಜನ್

    ರೂರಲ್ ಸ್ಟಾರ್ ಅಂಜನ್ (Anjan) ನಾಯಕನಾಗಿ ನಟಿಸಿರುವ `ಚೋಳ’ (Chola) ಚಿತ್ರ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರ ಗಮನ ಸೆಳೆದುಕೊಂಡಿತ್ತು. ಸುರೇಶ್ ಡಿ.ಎಂ (Suresh DM) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಭಿನ್ನವಾದ ಕಥಾ ಹಂದರ ಹೊಂದಿದೆ. ಇದೀಗ ಚೋಳ ಚಿತ್ರದ ಟೀಸರ್ (Teaser) ಬಿಡುಗಡೆಯಾಗಿದೆ. ರೂರಲ್ ಸ್ಟಾರ್ ಅಂಜನ್ ಅಕ್ಷರಶಃ ಮಾಸ್ ಲುಕ್ ನಲ್ಲಿ ಅಬ್ಬರಿಸಿದ್ದಾರೆ. ಇದರೊಂದಿಗೆ ಸಿನಿಮಾ ಮೇಕಿಂಗ್, ಕಥೆ, ಪಾತ್ರವರ್ಗ ಸೇರಿದಂತೆ ಎಲ್ಲ ದಿಕ್ಕುಗಳಲ್ಲಿಯೂ ಸಿನಿಮಾ ಗಮನ ಸೆಳೆದಿದೆ. ನಿರ್ದೇಶಕ ಸುರೇಶ್ ಡಿ.ಎಂ ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದ್ದಾರೆ.

    ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದವರು ಸುರೇಶ್ ಡಿ.ಎಂ. ನಿರ್ಮಾಪಕರಾಗಿ ಭಿನ್ನ ಅಭಿರುಚಿಯ ಸಿನಿಮಾ ನೀಡಿದವರು. ಚೋಳ ಸಿನಿಮಾ ಮೂಲಕ ನಿರ್ದೇಶಕರಾದ ಸುದ್ದಿ ಹೊರ ಬಂದಾಗ ಸಹಜವಾಗಿಯೇ ಕುತೂಹಲ ಮೂಡಿತ್ತು. ಈಗ ಟೀಸರ್ ನೋಡಿದಾಗ ಅವರ ಕಸುಬುದಾರಿಕೆಯನ್ನು ಎತ್ತಿ ಹಿಡಿದಿದೆ. ನಾನಾ ಅಂಶಗಳು ಮಿಳಿತವಾಗಿರುವ ಪಕ್ಕಾ ರಗಡ್ ಕಥೆಯೊಂದಿಗೆ ಸುರೇಶ್ ಅವರು ಈ ಚಿತ್ರವನು ರೂಪಿಸಿರುವುದು ಟೀಸರ್ ಮೂಲಕ ಋಜುವಾತಾಗಿದೆ.

    ರೂರಲ್ ಸ್ಟಾರ್ ಅಂಜನ್, ಸಿಕ್ಕ ಸೀಮಿತ ಅವಕಾಶದಲ್ಲಿಯೇ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದಾರೆ. ಈ ಹುಡುಗನಿಗೆ ಸರಿಯಾದ ಅವಕಾಶ ಸಿಕ್ಕರೆ ಹೀರೋ ಆಗಿ ನೆಲೆ ಕಂಡುಕೊಳ್ಳುತ್ತಾರೆ ಎಂದು ಪ್ರೇಕ್ಷಕರೇ ಅಭಿಪ್ರಾಯ ಪಟ್ಟಿದ್ದರು. ಕಡೆಗೂ ಸುರೇಶ್ ಡಿ.ಎಂ ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದರ ಫಲವಾಗಿಯೇ ಅಂಜನ್ ಮಾಸ್ ಮೂಡಿನಲ್ಲಿ ಆರ್ಭಟಿಸಿದ್ದಾರೆ. ಈ ಟೀಸರ್ ನೋಡಿದವರೆಲ್ಲರೂ ಖುಷಿಯಾಗಿದ್ದಾರೆ.

    ಸುರೇಶ್ ಡಿ.ಎಂ ಸೃಷ್ಟಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಈ ಚಿತ್ರವನ್ನು ಸ್ವತಃ ನಿರ್ಮಾಣ ಮಾಡಿದ್ದಾರೆ. ಇಲ್ಲಿ ದಿಶಾ ಪಾಂಡೆ ಮತ್ತು ಪ್ರತಿಭಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ದಿನೇಶ್ ಮಂಗಳೂರು ಮತ್ತು ಬಲ ರಾಜವಾಡಿ ಖಳನಟರಾಗಿ ನಟಿಸಿದ್ದಾರೆ. ಅವರೆಲ್ಲರ ಪಾತ್ರಗಳ ಝಲಕ್ ಟೀಸರ್ ನಲ್ಲಿ ಕಾಣಿಸಿವೆ. ಅದು ಪ್ರೇಕ್ಷಕರು ಥ್ರಿಲ್ ಆಗುವಂತೆಯೂ ಮಾಡಿದೆ.

    ತುಳುವಿನಲ್ಲಿ ಸೂಪರ್ ಹಿಟ್ ಆಗಿರುವ, ರೂಪೇಶ್ ಶೆಟ್ಟಿ ನಿರ್ದೇಶನದ ಸರ್ಕಸ್ ಎಂಬ ಚಿತ್ರಕ್ಕೆ  ಸಂಗೀತ ನಿರ್ದೇಶನ ಮಾಡಿದ್ದ ಲಾಯ್ ವ್ಯಾಲೆಂಟೈನ್  ಸಲ್ಡಾನ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಿರಿಯ ನಟ ಮನಮೋಹನ್ ರಾಯ್ ಸೇರಿದಂತೆ ಈ ತಾರಾಗಣದಲ್ಲಿ ಪ್ರತಿಭಾನ್ವಿತ ನಟ ವರ್ಧನ್, ಮಜಾ ಭಾರತ ಖ್ಯಾತಿಯ ಜಗಪ್ಪ, ಮಿಂಚು ಮುಂತಾದವರಿದ್ದಾರೆ. ಸಂದೀಪ್ ಹೊನ್ನಾಳ್ಳಿ ಛಾಯಾಗ್ರಹಣ, ಶಿವಕುಮಾರ್ ಎ. ಸಂಕಲನ ಈ ಚಿತ್ರಕ್ಕಿದೆ.

     

    ಚೋಳ ಎಂಬ ಶೀರ್ಷಿಕೆ ಕೇಳಿದಾಕ್ಷಣ ಬಹುತೇಕರ ಗಮನ ಬೇರೆತ್ತಲೋ ವಾಲಿಕೊಂಡಿತ್ತು. ಆದರೆ, ಇದೊಂದು ಆಧುನಿಕ ದಿನಮಾನದ ಕಥನ ಎಂಬುದನ್ನು ಈ ಟೀಸರ್ ಸಾರಿ ಹೇಳಿದೆ. ಪ್ರೀತಿ, ರೌಡಿಸಂ ಸೇರಿದಂತೆ ಅನೇಕ ಅಂಶಗಳನ್ನು ಸಿನಿಮಾ ಒಳಗೊಂಡಿದೆ. ಅದು ನಿಜಕ್ಕೂ ಭಿನ್ನವಾಗಿದೆ ಎಂಬುದು ಈ ಟೀಸರ್ ತಿಳಿಸುತ್ತದೆ. ಈಗಾಗಲೇ ಒಂದಷ್ಟು ಭಾಗಗಳ ಚಿತ್ರೀಕರಣ ಸುಸೂತ್ರವಾಗಿ ನೆರವೇರಿದೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸಿಕೊಳ್ಳಲು ಸುರೇಶ್ ಅವರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಹಂತದಲ್ಲಿ ಚೋಳ ಬಗೆಗಿನ ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿಗಳು ಹಂತ ಹಂತವಾಗಿ ಪ್ರೇಕ್ಷಕರನ್ನು ತಲುಪಿಕೊಳ್ಳಲಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಗಸ್ಟ್ 20ರಂದು ಬಿಡುಗಡೆಗೊಳ್ಳಲಿದೆ ‘ಚೋಳ’ ಟೀಸರ್!

    ಆಗಸ್ಟ್ 20ರಂದು ಬಿಡುಗಡೆಗೊಳ್ಳಲಿದೆ ‘ಚೋಳ’ ಟೀಸರ್!

    ತ್ತರ ಕರ್ನಾಟಕ ಸೀಮೆಯಲ್ಲಿ ಸಿನಿಮಾ ಸಾಹಸಗಳನ್ನು ಮಾಡುತ್ತಾ ಕರ್ನಾಟಕದ ತುಂಬೆಲ್ಲ ಪ್ರಸಿದ್ಧಿ ಪಡೆದುಕೊಂಡಿರುವವರು ಅಂಜನ್. ಬಹುಶಃ ಬರೀ ಅಂಜನ್ ಅಂದರೆ ಗುರುತು ಹತ್ತೋದು ಕಷ್ಟ. ರೂರಲ್ ಸ್ಟಾರ್ ಅಂಜನ್ ಅಂದರೆ ಕಲಾ ಪ್ರೇಮಿಗಳೆಲ್ಲ ಕಣ್ಣರಳಿಸುತ್ತಾರೆ. ಹೀಗೆ ಸೀಮಿತ ಚೌಕಟ್ಟಿನಲ್ಲಿ ಒಂದಷ್ಟು ಹೆಸರಾಗಿರುವ ಅಂಜನ್ ಇದೀಗ ‘ಚೋಳ’ (Chola Film) ಎಂಬ ಚಿತ್ರದ ಮೂಲಕ ಮಾಸ್ ಲುಕ್ಕಿನಲ್ಲಿ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ವಿಶೇಷವೆಂದರೆ, ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಸುರೇಶ್ ಡಿ.ಎಂ (Suresh D.M) ಅವರು ‘ಚೋಳ’ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಈ ಸಿನಿಮಾದ ಟೀಸರ್ ಇದೇ ಆಗಸ್ಟ್ 20ರಂದು ಬಿಡುಗಡೆಗೊಳ್ಳಲಿದೆ. ಇದನ್ನೂ ಓದಿ:ವಿಕ್ಕಿ ಜೈನ್‌ ಜೊತೆ ಮತ್ತೆ ಮದುವೆಯಾದ ಅಂಕಿತಾ ಲೋಖಂಡೆ

    ತನ್ನ ಸೃಷ್ಟಿ ಎಂಟರ್‌ಪ್ರೈಸಸ್ ಬ್ಯಾನರಿನಡಿಯಲ್ಲಿ ಸುರೇಶ್ ಡಿ.ಎಂ ‘ಪ್ರಯಾಣಿಕರ ಗಮನಕ್ಕೆ’ ‘ರಣಹೇಡಿ’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಭಿನ್ನ ಕಥಾನಕದೊಂದಿಗೆ ಚೋಳ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಇದರಲ್ಲಿ ಗ್ರಾಮೀಣ ಪ್ರತಿಭೆಯಾದ ರೂರಲ್ ಸ್ಟಾರ್ ಅಂಜನ್‍ರನ್ನು ನಾಯಕನನ್ನಾಗಿಸುವ ಮೂಲಕ, ಅವರ ಕನಸುಗಳಿಗೆ ಜೊತೆಯಾಗಿದ್ದಾರೆ. ಅಂದಹಾಗೆ, ಚೋಳ ಎಂಬ ಟೈಟಲ್ ಕೇಳಿದಾಕ್ಷಣವೇ ಇದೊಂದು ಐತಿಹಾಸಿಕ ಕಥಾ ಹಂದರದ ಚಿತ್ರವಾ ಎಂಬಂಥಾ ಅನುಮಾನ ಕಾಡುತ್ತದೆ. ಆದರೆ, ಇದು ಪಕ್ಕಾ ಆಧುನಿಕ ಕಥನ. ಪ್ರೀತಿ, ರೌಡಿಸಂ ಸೇರಿದಂತೆ ಎಲ್ಲವೂ ಬೆರೆತಿರುವ ಚಿತ್ರವೆಂಬ ಸ್ಪಷ್ಟನೆ ನಿರ್ದೇಶಕರ ಕಡೆಯಿಂದ ಸಿಗುತ್ತದೆ.

    ಯರ್ರಾಬಿರ್ರಿ ಅಂತೊಂದು ಸಿನಿಮಾ ಮಾಡಿದ್ದ ರೂರಲ್ ಸ್ಟಾರ್ ಅಂಜನ್‍ರ (Anjan) ಪ್ರತಿಭೆಯನ್ನು ಗಮನಿಸಿದ್ದ ನಿರ್ದೇಶಕ ಸುರೇಶ್ ಈ ಚಿತ್ರಕ್ಕೆ ನಾಯಕನನ್ನಾಗಿಸಿದ್ದಾರೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ದಿಶಾ ಪಾಂಡೆ (Disha Panday) ಮತ್ತು ಪ್ರತಿಭಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ದಿನೇಶ್ ಮಂಗಳೂರು ಮತ್ತು ರಾಜ ಬಲವಾಡಿ ವಿಲನ್‌ಗಳಾಗಿ ನಟಿಸಿದ್ದಾರೆ. ಮನಮೋಹನ್ ರಾಯ್ ರಂಥ ಹಿರಿಯ ನಟರು ವಿಶೇಷಪಾತ್ರಗಳನ್ನು ನಿಭಾಯಿಸಿದ್ದಾರೆ. ಮಜಾ ಭಾರತ ಖ್ಯಾತಿಯ ಜಗಪ್ಪ, ಮಿಂಚು, ವರ್ಧನ್‌ ತೀರ್ಥಹಳ್ಳಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

    ಸಂದೀಪ್ ಹೊನ್ನಾಳ್ಳಿ ಛಾಯಾಗ್ರಹಣ, ಶಿವಕುಮಾರ್.ಎ ಸಂಕಲನ ಈ ಚಿತ್ರಕ್ಕಿದೆ. ಸಾಕಷ್ಟು ತಯಾರಿ ನಡೆಸಿಕೊಂಡು ಅಖಾಡಕ್ಕಿಳಿದಿರುವ ಸುರೇಶ್ ಅವರು ಸ್ವತಃ ಈ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಈಗಾಗಲೇ ಭರದಿಂದ ಒಂದಷ್ಟು ಚಿತ್ರೀಕರಣ ನಡೆದಿದೆ. ಮುಖ್ಯ ಭಾಗಗಳ ಇನ್ನೊಂದಿಷ್ಟು ಚಿತ್ರೀಕರಣ ಬಾಕಿ ಇದೆ. ಅದು ಮುಗಿದಾಕ್ಷಣವೇ ಆಡಿಯೋ ರಿಲೀಸ್ ಮಾಡಿ, ಅದರ ಬೆನ್ನಲ್ಲಿಯೇ ಟ್ರೈಲರ್ ಅನ್ನೂ ಬಿಡುಗಡೆಗೊಳಿಸುವ ಯೋಜನೆ ಚಿತ್ರತಂಡದ್ದಾಗಿದೆ.

    ತುಳುವಿನಲ್ಲಿ ಸೂಪರ್‌ ಹಿಟ್‌ ಆಗಿರುವ ಸರ್ಕಸ್‌ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಲಾಯ್‌ ವ್ಯಾಲೆಂಟೈನ್‌ ಸಾಲ್ಡಾನಾ ‘ಚೋಳ’ ಚಿತ್ರಕ್ಕೂ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಿಮ್ ಟ್ರೇನರ್ ಅಂಜನ್ ಈಗ ಹೀರೋ: ‘ಅಂಜನ್’ ಟ್ರೈಲರ್ ಬಿಡುಗಡೆ ಮಾಡಿದ ಶಾಸಕ ರವಿ ಸುಬ್ರಮಣ್ಯಂ

    ಜಿಮ್ ಟ್ರೇನರ್ ಅಂಜನ್ ಈಗ ಹೀರೋ: ‘ಅಂಜನ್’ ಟ್ರೈಲರ್ ಬಿಡುಗಡೆ ಮಾಡಿದ ಶಾಸಕ ರವಿ ಸುಬ್ರಮಣ್ಯಂ

    ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ತಂಡವೊಂದು ‘ಅಂಜನ್’ ಎನ್ನುವ ಸಿನಿಮಾ ಮುಖಾಂತರ ಸುದ್ದಿಯಲ್ಲಿದೆ. ಬಿಡುಗಡೆಯ ಆಸುಪಾಸಿನಲ್ಲಿರುವ ಈ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್‌ ಅನ್ನು ಶಾಸಕ ರವಿ ಸುಬ್ರಮಣ್ಯಂ ಬಿಡುಗಡೆ ಮಾಡಿರೋದು ವಿಶೇಷ. ಚಿತ್ರದ ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು ಸಿನಿಮಾ ತಂಡಕ್ಕೆ ಯಶಸ್ಸು ಸಿಗಲೆಂದು ಹಾರೈಸಿದ್ದಾರೆ.

    ಟ್ರೇಲರ್ ಮೂಲಕ ಮಾಧ್ಯಮಗಳೆದುರು ಬಂದ ಚಿತ್ರತಂಡ ಸಿನಿಮಾ ಬಗ್ಗೆ ತಮ್ಮ ಪರಿಶ್ರಮದ ಬಗ್ಗೆ ಅನಿಸಿಕೆ ಹಂಚಿಕೊಂಡಿದೆ. ಚಿತ್ರದಲ್ಲಿ ಅಂಜನ್ ನಾಯಕ ನಟನಾಗಿ ಬಣ್ಣಹಚ್ಚಿದ್ದಾರೆ. ನಾಯಕ ನಟನಾಗಿ ಇದು ಇವರ ಮೊದಲ ಸಿನಿಮಾ. ಜಿಮ್ ತರಬೇತಿದಾರನಾಗಿದ್ದ ಅಂಜನ್ ಈ ಸಿನಿಮಾ ಮೂಲಕ ತಮ್ಮ ಕನಸಿನ ಹಾದಿ ಹಿಡಿದಿದ್ದಾರೆ. ಅಣ್ಣ, ತಂಗಿ ಸೆಂಟಿಮೆಂಟ್ ಜೊತೆಗೆ ಆಕ್ಷನ್ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಅಂಜನ್ ಎರಡು ಶೇಡ್‌ನಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು

    ಅಂಜನ್ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಸಾರಥ್ಯ ವಹಿಸಿಕೊಂಡಿರೋದು ಆರ್. ಸಾಗರ್. ಮಾಸ್, ಸೆಂಟಿಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಥ್ರಿಲ್ ನೀಡುವ ಐದು ಆಕ್ಷನ್ ಸೀನ್‌ಗಳು, ಮನಸೆಳೆಯುವ ನಾಲ್ಕು ಹಾಡುಗಳಿವೆ. ಚಿತ್ರವನ್ನು ಬೆಂಗಳೂರು, ಶಿವಮೊಗ್ಗ, ಶಂಕರಘಟ್ಟ, ಹೊನ್ನಾವರ ಮುಂತಾದ ಕಡೆಗಳಲ್ಲಿ ಸೆರೆ ಹಿಡಿಯಲಾಗಿದೆ. ಪ್ರದೀಪ್ ಸೋನ್ಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ಚಿತ್ರದಲ್ಲಿ ನೆಗೆಟಿವ್ ರೋಲ್‌ನಲ್ಲಿ ಕೂಡ ಬಣ್ಣ ಹಚ್ಚಿ ಮಿಂಚಿದ್ದಾರೆ. ಅಂಜನ್ ಜೋಡಿಯಾಗಿ ಜೋಷಿತಾ ಅಲೋಲ ತೆರೆ ಹಂಚಿಕೊಂಡಿದ್ದು, ಗೋಪಿ ಕಲಾಕಾರ್ ಸಂಗೀತ, ಗುರುದತ್ ಮುಸೂರಿ ಕ್ಯಾಮೆರಾ ವರ್ಕ್, ಕೋಟೆರಾಜು ಸಾಹಸ ಚಿತ್ರಕ್ಕಿದೆ. ಇದನ್ನೂ ಓದಿ: ‘ಕಂಟ್ರಿಮೇಡ್’ನಲ್ಲಿ ಗ್ಯಾಂಗ್ ಸ್ಟಾರ್ ಆದ ಟಾಮ್ ಅಂಡ್ ಜೆರ್ರಿಯ ನಿಶ್ವಿತ್ ಕೊರೋಡಿ