Tag: Anjali Singh

  • ಯುವತಿಯನ್ನು ಕಾರಿನಲ್ಲಿ ಭೀಕರವಾಗಿ ಎಳೆದೊಯ್ದ ಕೇಸ್ – ನಿರ್ಲಕ್ಷ್ಯವಹಿಸಿದ 11 ಪೊಲೀಸರು ಅಮಾನತು

    ಯುವತಿಯನ್ನು ಕಾರಿನಲ್ಲಿ ಭೀಕರವಾಗಿ ಎಳೆದೊಯ್ದ ಕೇಸ್ – ನಿರ್ಲಕ್ಷ್ಯವಹಿಸಿದ 11 ಪೊಲೀಸರು ಅಮಾನತು

    ನವದೆಹಲಿ: ಹೊಸ ವರ್ಷದಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಯುವತಿಯೊಬ್ಬಳು ಭೀಕರವಾಗಿ ಕಾರಿನಲ್ಲಿ (Car) ಎಳೆದುಕೊಂಡು ಹೋಗಿ ಸಾವನ್ನಪ್ಪಿರುವ ಘಟನೆಗೆ ಸಂಬಂಧ ಪಟ್ಟಂತೆ ನಿರ್ಲಕ್ಷ್ಯವಹಿಸಿದ್ದ 11 ಪೊಲೀಸರನ್ನು (Cops) ಅಮಾನತುಗೊಳಿಸಲಾಗಿದೆ.

    20 ವರ್ಷದ ಯುವತಿ ಅಂಜಲಿ ಸಿಂಗ್ (Anjali Singh) ಅಪಘಾತದಿಂದಾಗಿ ಕಾರೊಂದರ ಅಡಿ ಸಿಲುಕಿ ಹಲವು ಕಿಮೀ ವರೆಗೆ ರಸ್ತೆಯಲ್ಲಿ ಎಳೆಯಲ್ಟಟ್ಟಿದ್ದಳು. ಆಕೆಯ ಮೃತದೇಹ ಬಳಿಕ ರಸ್ತೆಯ ಬದಿಯಲ್ಲಿ ಪತ್ತೆಯಾಗಿತ್ತು. ಯುವತಿಯನ್ನು ಎಳೆಯಲಾಗಿದ್ದ ಮಾರ್ಗದಲ್ಲಿ 3 ಪಿಸಿಆರ್ ವ್ಯಾನ್ ಹಾಗೂ 2 ಕಡೆ ಪೊಲೀಸರು ಕರ್ತವ್ಯದಲ್ಲಿದ್ದರೂ ಭೀಕರ ಘಟನೆ ಬಗ್ಗೆ ಪೊಲೀಸರು ಗಮನಹರಿಸಿರಲಿಲ್ಲ.

    ಯುವತಿಯನ್ನು ಎಳೆಯಲಾಗಿದ್ದ ಮಾರ್ಗದಲ್ಲಿ ನಿಯೋಜಿಸಲಾಗಿದ್ದ ಎಲ್ಲಾ ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆ ದೆಹಲಿ ಪೊಲೀಸ್ ಆಯುಕ್ತ ಅಂಜಯ್ ಅರೋರಾ ಅವರಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. ಈ ಹಿನ್ನೆಲೆ ಘಟನೆಗೆ ಸಂಬಂಧಪಟ್ಟಂತೆ 11 ಪೊಲೀಸರನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಮೆಟ್ರೋ ಪಿಲ್ಲರ್‌ ಕುಸಿದು ತಾಯಿ, ಮಗು ಸಾವು ಕೇಸ್ – ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು

    ಅಮಾನತುಗೊಂಡಿರುವ ಎಲ್ಲರೂ ರೋಹಿಣಿ ಜಿಲ್ಲೆಯ ಪೊಲೀಸರಾಗಿದ್ದು, ಈ ಭಯಾನಕ ಘಟನೆ ನಡೆದ ದಿನ ಅವರೆಲ್ಲರೂ ದೆಹಲಿಯ ಕಂಝವಾಲಾ ಪ್ರದೇಶವನ್ನು ನೋಡಿಕೊಳ್ಳುತ್ತಿದ್ದರು.

    ಈ ಭೀಕರ ಅಪಘಾತ ಪ್ರಕರಣ ಭಾರೀ ಆಕ್ರೋಶ ಹಾಗೂ ಖಂಡನೆಗಳಿಗೆ ಕಾರಣವಾಗಿದೆ. ಘಟನೆ ನಡೆದ ಪ್ರದೇಶದಲ್ಲಿ ಸಾಕ್ಷ್ಯ ಹಾಗೂ ಮಾದರಿಗಳನ್ನು ಸಂಗ್ರಹಿಸಲು ಗುಜರಾತ್‌ನಿಂದ ವಿಧಿವಿಜ್ಞಾನ ತಜ್ಞರನ್ನು ಕರೆಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಓಲ್ಡ್ ಮೈಸೂರು ಆಪರೇಷನ್ ಕಮಲಕ್ಕೆ ಹೈಕಮಾಂಡ್ ಅಸಮಾಧಾನ – ಅಖಾಡಕ್ಕಿಳಿಯಲು ಸಜ್ಜಾದ ಅಮಿತ್ ಶಾ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಾಯುಸೇನೆಯಿಂದ ಇತಿಹಾಸ – ವಿದೇಶಾಂಗ ಇಲಾಖೆಯ ಉನ್ನತ ಹುದ್ದೆ ಅಲಂಕರಿಸಿದ ಮಹಿಳಾ ವಿಂಗ್ ಕಮಾಂಡರ್

    ವಾಯುಸೇನೆಯಿಂದ ಇತಿಹಾಸ – ವಿದೇಶಾಂಗ ಇಲಾಖೆಯ ಉನ್ನತ ಹುದ್ದೆ ಅಲಂಕರಿಸಿದ ಮಹಿಳಾ ವಿಂಗ್ ಕಮಾಂಡರ್

    ನವದೆಹಲಿ: ಭಾರತೀಯ ವಾಯುಪಡೆಯ ಮಹಿಳಾ ವಿಂಗ್ ಕಮಾಂಡರ್ ಅಂಜಲಿ ಸಿಂಗ್ ಅವರು ರಷ್ಯಾದ ಮಾಸ್ಕೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಡೆಪ್ಯೂಟಿ ಏರ್ ಅಟ್ಯಾಚೆ ಸೇವೆಗೆ ನಿಯೋಜನೆಗೊಂಡಿದ್ದಾರೆ. ಈ ಮೂಲಕ ವಿದೇಶಿ ಸೇವೆಗೆ ನೇಮಕವಾದ ಭಾರತದ ಮೊದಲ ಸೇನಾ ಮಹಿಳೆ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ.

    ಡೆಪ್ಯೂಟಿ ಏರ್ ಅಟ್ಯಾಚೆ ಸೇವೆಗೆ ನೇಮಕವಾದ ಅಧಿಕಾರಿ ವಿದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳಲ್ಲಿ ರಕ್ಷಣಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ಇಂತಹ ಉನ್ನತ ಹುದ್ದೆಗೆ ನೇಮಕವಾದ ಮೊದಲ ಮಹಿಳಾ ಕಮಾಂಡರ್ ಆಗಿ ಅಂಜಲಿ ಅವರು ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇಲ್ಲಿಯವರೆಗೂ ಈ ಹುದ್ದೆಗೆ ಭಾರತದ ಮೂರೂ ಶಸಸ್ತ್ರ ಪಡೆಗಳಲ್ಲಿ ಪುರುಷ ಅಧಿಕಾರಿಗಳನ್ನೇ ನೇಮಕ ಮಾಡಲಾಗುತ್ತಿತ್ತು.

    ಈ ಬಾರಿ ಈ ಸಂಪ್ರದಾಯವನ್ನು ವಾಯುಪಡೆ ಮುರಿದು ಮೊದಲ ಬಾರಿಗೆ ಮಹಿಳಾ ಅಧಿಕಾರಿಯನ್ನು ನೇಮಿಸಿದೆ. ಈ ಮೂಲಕ ಅಂಜಲಿ ಅವರಿಗೆ ವಿದೇಶದಲ್ಲಿ ದೇಶದ ಪರವಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.

    ಸೆ. 10ರಂದು ಅಂಜಲಿ ಸಿಂಗ್ ಅವರು ಮಾಸ್ಕೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಡೆಪ್ಯೂಟಿ ಏರ್ ಅಟ್ಯಾಚೆ ಹುದ್ದೆಗೆ ಸೇರಿದ್ದಾರೆ. ವಿದೇಶದಲ್ಲಿರುವ ಭಾರತೀಯ ಕಾರ್ಯಾಚರಣೆಗಳಲ್ಲಿ ಮಿಲಿಟರಿ ರಾಜತಾಂತ್ರಿಕರಾಗಿ ನೇಮಕಗೊಂಡ ಭಾರತದ ಮೊದಲ ಮಹಿಳಾ ಸಶಸ್ತ್ರ ಪಡೆ ಅಧಿಕಾರಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

    ಮಿಗ್-29 ಯುದ್ಧ ವಿಮಾನ ಹಾರಾಟದ ತರಬೇತಿ ಪಡೆದಿರುವ ಅಂಜಲಿ ಅವರು, ಏರೋನಾಟಿಕಲ್ ಎಂಜಿನಿಯರ್ ಅಧಿಕಾರಿಯಾಗಿ 17 ವರ್ಷಗಳ ಸೇವಾ ಅನುಭವವನ್ನು ಹೊಂದಿದ್ದಾರೆ.