Tag: anjali ambigera

  • ಅಂಜಲಿ ಹತ್ಯೆಯ ರಹಸ್ಯ ಬಿಚ್ಚಿಟ್ಟ ಹಂತಕ ವಿಶ್ವ

    ಅಂಜಲಿ ಹತ್ಯೆಯ ರಹಸ್ಯ ಬಿಚ್ಚಿಟ್ಟ ಹಂತಕ ವಿಶ್ವ

    ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ಬಳಿಕ ವೀರಾಪುರ ಓಣಿಯಲ್ಲಿ ಯುವತಿ ಅಂಜಲಿ ಅಂಬಿಗೇರ (Anjali Ambigera) ಕೊಲೆ ಪ್ರಕರಣ ಇಡೀ ಹುಬ್ಬಳ್ಳಿಯನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಹಂತಕ ವಿಶ್ವ ಸಿಐಡಿ ಅಧಿಕಾರಿಗಳ ಮುಂದೆ ಅಂಜಲಿ ಕೊಲೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾನೆ.

    ನ್ಯಾಯಾಲಯದ ಅನುಮತಿ ಪಡೆದು ಸಿಐಡಿ (CID) ಎಸ್‍ಪಿ ವೆಂಕಟೇಶ್ ನೇತೃತ್ವದ ತಂಡ ಅಂಜಲಿ ಹಂತಕ ವಿಶ್ವನನ್ನು ಇಂದು ಕಿಮ್ಸ್ ಆಸ್ಪತ್ರೆಯಿಂದ ವಶಕ್ಕೆ ಪಡೆದಿದೆ. ಬಳಿಕ ಬೆಂಡಿಗೇರಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಈ ವೇಳೆ ಹಂತಕ, ನಾನು ಮೈಸೂರಿಗೆ ಬಾ ಅಂತ ಕರೆದೆ, ಅವಳು ಬರಲಿಲ್ಲ. ಅಲ್ಲದೇ ಕೊಲೆಯಾಗುವ ಹಿಂದಿನ ದಿನ 1000 ರೂ. ಫೋನ್ ಪೇ ಮಾಡಿದ್ದೆ ಹಣ ತಗೊಂಡು ಬ್ಲಾಕ್ ಮಾಡಿಬಿಟ್ಟಳು. ಅದೇ ಕಾರಣಕ್ಕೆ ಸಿಟ್ಟು ಬಂದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಇತ್ತ ಹಂತಕ ವಿಶ್ವನ ತಾಯಿಯನ್ನು ಕೂಡ ಸಿಐಡಿ ತಂಡವು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದೆ. ಅಲ್ಲದೇ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಮೇ 13ರಿಂದ ನಾಪತ್ತೆಯಾಗಿದ್ದ ಸಂಸದ ಶವವಾಗಿ ಪತ್ತೆ- ಮೂವರ ಬಂಧನ

    ಮೇ 15 ರಂದು ಅಂಜಲಿಯನ್ನು ವಿಶ್ವ ಕೊಲೆ ಮಾಡಿ ಪರಾರಿಯಾಗಲು ದಾವಣಗೆರೆ (Davanagere) ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ. ಈ ವೇಳೆ ರೈಲಿನಲ್ಲಿ ಮಹಿಳೆ ಜೊತೆ ಗಲಾಟೆ ಮಾಡಿ ಸಿಟ್ಟಾಗಿ ಚಾಕು ಹಾಕಲು ಮುಂದಾಗಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಪ್ರಯಾಣಿಕರು ಆತನಿಗೆ ರೈಲಿನಲ್ಲೇ ಹಿಗ್ಗಾಮುಗ್ಗ ಥಳಿಸಿದ್ದರು. ಜನರಿಂದ ತಪ್ಪಿಸಿಕೊಳ್ಳಲು ವಿಶ್ವ ರೈಲಿನಿಂದ ಜಿಗಿದಿದ್ದ. ಹಳಿಯಲ್ಲಿ ಬಿದ್ದು ಗಾಯಗೊಂಡಿದ್ದ ಈತನನ್ನು ದಾವಣಗೆರೆ ರೈಲ್ವೇ ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

    ಚಿಕಿತ್ಸೆ ವೇಳೆ ವಿಶ್ವನ ವಿಳಾಸ ಇತ್ಯಾದಿ ಮಾಹಿತಿಗಳನ್ನು ಪರಿಶೀಲಿಸಿದಾಗ ಈತನೇ ಅಂಜಲಿಯನ್ನು ಕೊಲೆ ಮಾಡಿದ ಆರೋಪಿ ಎನ್ನುವುದು ಪೊಲೀಸರಿಗೆ ದೃಢಪಡುತ್ತದೆ. ಬಳಿಕ ವಿಶ್ವನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

  • ಅಕ್ಕನ ಸಾವನ್ನು ಕಣ್ಣಾರೆ ನೋಡಿದ್ರಿಂದ ಆತ್ಮಹತ್ಯೆ ನಿರ್ಧಾರ ಮಾಡಿದ್ದೆ: ಮೃತ ಅಂಜಲಿ ಸಹೋದರಿ

    ಅಕ್ಕನ ಸಾವನ್ನು ಕಣ್ಣಾರೆ ನೋಡಿದ್ರಿಂದ ಆತ್ಮಹತ್ಯೆ ನಿರ್ಧಾರ ಮಾಡಿದ್ದೆ: ಮೃತ ಅಂಜಲಿ ಸಹೋದರಿ

    ಹುಬ್ಬಳ್ಳಿ: ಅಕ್ಕ ಅಂಜಲಿ ಅಂಬಿಗೇರ ಸಾವನ್ನು ಕಣ್ಣಾರೆ ಕಂಡು ಮನಸ್ಸಿಗೆ ಘಾಸಿಯಾಗಿದೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿರುವುದಾಗಿ ಸಹೋದರಿ ಯಶೋಧಾ ಹೇಳಿದ್ದಾರೆ.

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದ ಬಳಿಕ ಪ್ರತಿಕ್ರಿಯಿಸಿದ ಅವರು, ನನಗೆ ಪೊಲಿಸರ ಮೇಲೆ ನಂಬಿಕೆಗಿಂತ ನಿರಂಜನ ಹಾಗೂ ಅನೂಪ ಅಂಕಲ್ ಅವರ ಮೇಲೆ ಇದೆ. ಈಗಾಗಲೇ ಕೋರ್ಟ್ ಆರ್ಡರ್ ಬಂದಿದೆ ಅಂತ ಅವನಿಗೆ ಚಿಕಿತ್ಸೆ ಕೊಡ್ತಿದ್ದಾರಂತೆ. ಅವನು ನಮ್ಮ ಅಕ್ಕನ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತಾಡ್ತಿದ್ದಾನೆ. ಹಾಗಾಗಿ ಮನಸ್ಸಿಗೆ ನೋವಾಗಿದೆ. ಬರೀ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾನೆ. ಅವನಿಗೆ ಗಲ್ಲು ಶಿಕ್ಷೆ ಕೊಡಿ ಇಲ್ಲವೇ ಎನ್ ಕೌಂಟರ್ ಮಾಡಿ ಎಂದು ಆಗ್ರಹಿಸಿದರು.

    ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ (21) ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಆರೋಪಿ ಗಿರೀಶ್ ಅಲಿಯಾಸ್ ವಿಶ್ವ ಏಕಾಏಕಿ ಮನೆಗೆ ನುಗ್ಗಿದ್ದ. ಬಳಿಕ ಆಕೆಯ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರವಾಗಿ ಹತ್ಯೆಗೈದಿದ್ದ. ಘಟನೆ ಸಂಬಂಧ ಶನಿವಾರ (ಮೇ 18) ಅಂಜಲಿ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಂಜಲಿ ಸಹೋದರಿ ಯಶೋಧಾ, ಮನೆಗೆ ಮರಳಿದ ಬಳಿಕ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರತಿಭಟನೆ ವೇಳೆ ಸಹ ಯಶೋಧಾ ತೀವ್ರ ಅಸ್ವಸ್ಥಗೊಂಡಿದ್ದು, ಪ್ರಜ್ಞೆ ತಪ್ಪಿದ್ದರು ಎನ್ನಲಾಗಿತ್ತು.

  • ಅಂಜಲಿ ಕುಟುಂಬಕ್ಕೆ ವೈಯಕ್ತಿಕವಾಗಿ 50 ಸಾವಿರ ಚೆಕ್ ನೀಡಿದ ಸಚಿವ ಜೋಶಿ

    ಅಂಜಲಿ ಕುಟುಂಬಕ್ಕೆ ವೈಯಕ್ತಿಕವಾಗಿ 50 ಸಾವಿರ ಚೆಕ್ ನೀಡಿದ ಸಚಿವ ಜೋಶಿ

    ಹುಬ್ಬಳ್ಳಿ: ನಗರದ ವೀರಾಪುರ ಓಣಿ ನಿವಾಸಿ ಮೃತ ಅಂಜಲಿ ಅಂಬಿಗೇರ (Anjali Ambigera) ಕುಟುಂಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯವರು (Pralhad Joshi) ವೈಯಕ್ತಿಕವಾಗಿ 50 ಸಾವಿರ ರೂ. ಚೆಕ್‌ ಅನ್ನು ಹಸ್ತಾಂತರಿಸಿದರು.

    ಅಂಜಲಿ ಮನೆಗೆ ಭೇಟಿ ನೀಡಿದ‌ ಬಳಿಕ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಹಾರದಿಂದ‌ ನೇರವಾಗಿ ಅಂಜಲಿ ಮನೆಗೆ ಭೇಟಿ ನೀಡಿದ್ದೇನೆ. ಅಂಜಲಿಯ ಅಜ್ಜಿ‌ಸಹೋದರಿಯರು‌ ಹೇಳಿದ ಮಾತು ಕೇಳಿದ್ರೆ ಭಯ ಹುಟ್ಟುತ್ತೆ. ಈ ಹಿಂದೆಯೂ ಆರೋಪಿ ಬಗ್ಗೆ ದೂರು ಕೇಳಿಬಂದಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಆ ಸಂದರ್ಭ ಯಾವ ಅಧಿಕಾರಿಗಳಿದ್ದರು‌ ಅವರ ಬಗ್ಗೆಯೂ‌ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

    ನೇಹಾ ಹತ್ಯೆಯಾದಾಗ ಬಹೊದೊಡ್ಡ ಜನಾಂದೋಲನವಾಯಿತು. ಆ ವೇಳೆ ಸಿಎಂ ಹಾಗೂ ಗೃಹ ಸಚಿವರ ಹೇಳಿಕೆ‌ ಕೃತ್ಯ ನಡೆಸುವವರಿಗೆ‌ ಪ್ರೋತ್ಸಾಹ ನೀಡಿದಂತಾಯಿತು. ಸಿಎಂ‌ ಅವರು ಹೊಣೆಗೇಡಿತನದ ಹೇಳಿಕೆ‌‌ ನೀಡಿದ್ದರ ಪರಿಣಾಮ‌ ಈ‌ ಘಟನೆಯಾಗಿದೆ. ಸರ್ಕಾರಕ್ಕೆ ಗಂಭೀರತೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 490 ಕೊಲೆ 600 ರೈತರ ಆತ್ಮಹತ್ಯೆಗಳಾಗಿವೆ. ಇದನ್ನ ಪ್ರಶ್ನೆ ಮಾಡಿದ್ರೆ ಈ ಹಿಂದೆ ಎಷ್ಟು ಪ್ರಕರಣಗಳಾಗಿವೆ ಅಂತಾ ಹುಡುಕುತ್ತಾರೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣ – ಮನನೊಂದು ಸಹೋದರಿ ಆತ್ಮಹತ್ಯೆಗೆ ಯತ್ನ

    ಟ್ರಾನ್ಸ್ ಫರ್ ಗಳಲ್ಲಿ‌‌ ಸಿಕ್ಕಾಪಟ್ಟೆ ಹಣ ತೆಗೆದುಕೊಳ್ತಾರೆ. ಗಾಂಜಾ‌ ಅಫೀಮು‌ ಚಟುವಟಿಕೆಗಳಿಗೆ‌ ಕಡಿವಾಣ ಹಾಕಲು ಆಗ್ತಿಲ್ಲ. ಕಾನೂನು‌ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ‌ ಸರ್ಕಾರದಲ್ಲಿ‌‌ ಹತ್ಯೆ ಹಾಗೂ ಆತ್ಮಹತ್ಯೆ ಸೇರಿದಂತೆ‌ ಅಭಿವೃದ್ದಿಯ ಸಮಾಧಿಯಾಗಿದೆ. ಅನೇಕ‌ ಬಡ‌ಜನರು ತಮ್ಮ‌ ಮಕ್ಕಳನ್ನ ಕಾಲೇಜಿಗೆ ಶಾಲೆಗೆ ಕಳುಹಿಸಲು ಭಯಪಡುತ್ತಿದ್ದಾರೆ. ಯಾರೋ ಒಬ್ಬ ಅಧಿಕಾರಿ‌ ಸಸ್ಪೆಂಡ್ ಮಾಡಿ‌ ಕೈತೊಳೆದುಕೊಳ್ಳಬಾರದು. ಜನರು ಗಾಬರಿಗೊಂಡಿದ್ದಾರೆ ಎಂದರು.

    ಜನರೇ ಬಂದು‌ ಹೋರಾಟ ಮಾಡುವ ಪರಿಸ್ಥಿತಿಯನ್ನ‌ ಸರ್ಕಾರ ತಂದುಕೊಳ್ಳಬಾರದು. ಡ್ರಗ್ಸ್, ಗಾಂಜಾ ಅಫೀಮು‌ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಈ‌ ಪ್ರಕರಣದ ಸಂಪೂರ್ಣ ತನಿಖೆ‌ಗೆ ಫಾಸ್ಟ್ ಟ್ರ್ಯಾಕ್‌ ಕೋರ್ಟ್ ತೆರೆಯಬೇಕು. ಈ‌ಘಟನೆಗಳಿಗೆ ಸರ್ಕಾರ ಹಾಗೂ‌ ಗೃಹ‌ ಸಚಿವರ ನಿರ್ಲಕ್ಷ್ಯವೇ ಕಾರಣ ಎಂದು ಜೋಶಿ ಗರಂ ಆದರು.

  • ವಿಶ್ವನಿಗೂ ನಮ್ಮ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ: ಅಂಜಲಿ ಸಹೋದರಿ ಸ್ಪಷ್ಟನೆ

    ವಿಶ್ವನಿಗೂ ನಮ್ಮ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ: ಅಂಜಲಿ ಸಹೋದರಿ ಸ್ಪಷ್ಟನೆ

    ಹುಬ್ಬಳ್ಳಿ: ಆರೋಪಿ ವಿಶ್ವನಿಗೂ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ ಎಂದು ಮೃತ ಅಂಜಲಿ ಅಂಬಿಗೇರ (Anjali Ambigera) ಸಹೋದರಿ ಸ್ಪಷ್ಟನೆ ನೀಡಿದ್ದಾಳೆ.

    ಆರೋಪಿ ಬಂಧನ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯಶೋಧ, ಆರೋಪಿ ವಿಶ್ವನನ್ನು ಆಸ್ಪತ್ರೆಗೆ ಸೇರಿಸಿ ಯಾಕೆ ಚಿಕಿತ್ಸೆ ನೀಡುತ್ತಿದ್ದೀರಿ. ನಮ್ಮ ಅಕ್ಕ ಹೇಗೆ ರಕ್ತ ಹರಿದು ನರಳಿ ನರಳಿ ಸತ್ತಳೊ ಹಾಗೇ ಅವನು ಸಾಯಲಿ ಎಂದು ಆಕ್ರೋಶ ಹೊರಹಾಕಿದ್ದಾಳೆ.

    ನಮ್ಮ ಅಕ್ಕನ ರಕ್ತ ಹರಿದಷ್ಟು ಅವನಿಂದ ಹರಿಯಲಿ. ವಿಶ್ವನಿಗೆ ಹಾಗೂ ನಮ್ಮ ಅಕ್ಕನಿಗೆ ಯಾವುದೇ ಸಂಬಂಧ ಇಲ್ಲ. ಅವಳು ಸತ್ತ ಮೇಲೆ ಈ ರೀತಿ ಕಥೆ ಹುಟ್ಟುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದಳು. ಇದನ್ನೂ ಓದಿ: ಅಂಜಲಿ ಬಳಿಕ ರೈಲಿನಲ್ಲಿ ಮಹಿಳೆಗೆ ಚಾಕು ಹಾಕಲು ಯತ್ನಿಸಿ ಸಿಕ್ಕಿಬಿದ್ದ ಕಿರಾತಕ ವಿಶ್ವ

    ಅವನು ದಾವಣಗೆರೆ ರೈಲಿನಲ್ಲಿ ಮಹಿಳೆ ಮೇಲೆ ಚಾಕು ಹಾಕಿದಾನಲ್ಲಾ ಹಾಗಿದ್ರೆ ಅವಳಗೇನು ಸಂಬಂಧ?. ಯಾಕೆ ಚಾಕು ಹಾಕೋಕೆ ಹೋದ?. ವಿಶ್ವ ಮನಸ್ಥಿತಿ ಹಾಗಿದೆ ಹೀಗಾಗಿ ನಮ್ಮ ಅಕ್ಕ ಬಲಿಯಾಗಿದ್ದಾಳೆ ಎಂದು ಕಿಡಿಕಾರಿದಳು.

    ಪ್ರಕರಣದ ವಿವರ: ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ (21) ಮನೆಯಿದೆ. ಅಂಜಲಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಗಿರೀಶ್ ಅಲಿಯಾಸ್ ವಿಶ್ವ ಏಕಾಏಕಿ ಮನೆಗೆ ಎಮಟ್ರಿ ಕೊಟ್ಟಿದ್ದಾನೆ. ಅಲ್ಲದೆ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನು ಮನೆ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರ ಹತ್ಯೆಗೈದಿದ್ದಾನೆ.

    ಮೊದಲಿಗೆ ಮನೆಯ ಪಡಸಾಲೆಯಲ್ಲಿ ಅಂಜಲಿಗೆ ಚಾಕು ಹಾಕಿ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದುಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದಾನೆ. ಅಷ್ಟಕ್ಕೇ ತೃಪ್ತಿಯಾಗದೇ ಅಲ್ಲಿಂದ ಅಡುಗೆ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕುವಿನಿಂದ ಚುಚ್ಚಿ ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.

  • ಆಟೋದಲ್ಲಿ ಬಂದು ಅಂಜಲಿ ಕೊಲೆಗೈದು ಹಂತಕ ಎಸ್ಕೇಪ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಆಟೋದಲ್ಲಿ ಬಂದು ಅಂಜಲಿ ಕೊಲೆಗೈದು ಹಂತಕ ಎಸ್ಕೇಪ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಭೀಕರ ಕೊಲೆ ಘಟನೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ (Hubballi) ಮತ್ತೊಂದು ಯುವತಿಯ ಬರ್ಬರ ಹತ್ಯೆಯಾಗಿದೆ. ಆಟೋದಲ್ಲಿ ಬಂದ ಹಂತಕ ಯುವತಿ ಅಂಜಲಿ ಅಂಬಿಗೇರಳನ್ನು ಕೊಲೆ ಮಾಡಿದ್ದಾರೆ.

    ಹಂತಕ ವಿಶ್ವ ಆಟೋದಲ್ಲಿ ಬಂದು ಇಳಿಯುತ್ತಿರುವ ದೃಶ್ಯ ಸ್ಥಳೀಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಆಟೋದಿಂದ ಇಳಿದು 2 ನಿಮಿಷದಲ್ಲೇ ಕೊಲೆಗೈಯ್ದು ಬಳಿಕ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ತಲೆಮರೆಸಿಕೊಂಡಿದ್ದಾನೆ. ಈ ದೃಶ್ಯ ಬಸ್ ನಿಲ್ದಾಣ ಇರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಸಹೋದರಿಯರ ಮುಂದೆಯೇ ಯುವತಿಯ ಭೀಕರ ಹತ್ಯೆ – ಸಹಪಾಠಿಯಿಂದಲೇ ಕೃತ್ಯ

    ಪ್ರಕರಣದ ವಿವರ: ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ (21) ಮನೆಯಿದೆ. ಅಂಜಲಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಗಿರೀಶ್ ಅಲಿಯಾಸ್ ವಿಶ್ವ ಏಕಾಏಕಿ ಮನೆಗೆ ಎಮಟ್ರಿ ಕೊಟ್ಟಿದ್ದಾನೆ. ಅಲ್ಲದೆ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನು ಮನೆ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರ ಹತ್ಯೆಗೈದಿದ್ದಾನೆ.

    ಮೊದಲಿಗೆ ಮನೆಯ ಪಡಸಾಲೆಯಲ್ಲಿ ಅಂಜಲಿಗೆ ಚಾಕು ಹಾಕಿ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದುಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದಾನೆ. ಅಷ್ಟಕ್ಕೇ ತೃಪ್ತಿಯಾಗದೇ ಅಲ್ಲಿಂದ ಅಡುಗೆ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕುವಿನಿಂದ ಚುಚ್ಚಿ ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.