Tag: Anitha Kumarasway

  • ರಾಮನಗರದಲ್ಲಿ ಗೆದ್ದು ಕರ್ನಾಟಕದಲ್ಲೇ ದಾಖಲೆ ಬರೆದ ಅನಿತಾ ಕುಮಾರಸ್ವಾಮಿ!

    ರಾಮನಗರದಲ್ಲಿ ಗೆದ್ದು ಕರ್ನಾಟಕದಲ್ಲೇ ದಾಖಲೆ ಬರೆದ ಅನಿತಾ ಕುಮಾರಸ್ವಾಮಿ!

    ಬೆಂಗಳೂರು: ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲುವು ಸಾಧಿಸುವ ಮೂಲಕ ಕರ್ನಾಟಕ ವಿಧಾನಸಭೆ ಇತಿಹಾಸದಲ್ಲಿ ವಿಶಿಷ್ಟ ದಾಖಲೆ ಬರೆದಿದ್ದಾರೆ.

    ಹೌದು, ಉಪ ಚುನಾವಣೆಯನ್ನು ಗೆಲ್ಲುವ ಮೂಲಕ ಶಾಸಕಿಯಾದ ಅನಿತಾ ಕುಮಾರಸ್ವಾಮಿ ಪತಿ ಸಿಎಂ ಕುಮಾರಸ್ವಾಮಿಯವರ ಜೊತೆ ಒಟ್ಟಿಗೆ ವಿಧಾನಸೌಧ ಪ್ರವೇಶಿಸಿದ್ದಾರೆ. ಪತಿ ಜೊತೆ ವಿಧಾನಸಭೆಗೆ ಪ್ರವೇಶ ಕೊಟ್ಟ ಮೊದಲ ಮಹಿಳೆ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಇದರ ಜೊತೆಯಲ್ಲಿ ಪತಿ ಸಿಎಂ ಆಗಿರುವಾಗಲೇ ಆಯ್ಕೆಯಾದ ಶಾಸಕಿ ಎನ್ನುವ ಮತ್ತೊಂದು ದಾಖಲೆಯನ್ನು ಅನಿತಾ ಕುಮಾರಸ್ವಾಮಿ ಬರೆದಿದ್ದಾರೆ.

    ರಾಮನಗರ ಕ್ಷೇತ್ರದಿಂದ ಆಯ್ಕೆಯಾದ ಮೊದಲ ಮಹಿಳೆ ಎನ್ನುವ ಹೆಸರನ್ನು ಸಹ ಪಡೆದುಕೊಂಡಿದ್ದಾರೆ. ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಮರಳಿ ಕಾಂಗ್ರೆಸ್ ಸೇರಿದ್ದರಿಂದ ಫಲಿತಾಂಶಕ್ಕೂ ಮೊದಲೇ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅವರ ಗೆಲುವು ನಿಶ್ಚಯವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv