Tag: anitha kumaraswamy

  • ಎಮೋಷನಲ್ ಬ್ಲಾಕ್‍ಮೇಲ್ ಬಿಡಿ, ಜನರನ್ನ ಎಷ್ಟ ಸಲ ಮೋಸ ಮಾಡ್ತಿರಾ- ಸಿಎಂ ಎಚ್‍ಡಿಕೆಗೆ ಯೋಗೇಶ್ವರ್ ಟಾಂಗ್

    ಎಮೋಷನಲ್ ಬ್ಲಾಕ್‍ಮೇಲ್ ಬಿಡಿ, ಜನರನ್ನ ಎಷ್ಟ ಸಲ ಮೋಸ ಮಾಡ್ತಿರಾ- ಸಿಎಂ ಎಚ್‍ಡಿಕೆಗೆ ಯೋಗೇಶ್ವರ್ ಟಾಂಗ್

    ರಾಮನಗರ: ಕಳೆದ ಬಾರಿ ಅಧಿಕಾರದಲ್ಲಿದ್ದಾಗ ಗ್ರಾಮವಾಸ್ತವ್ಯ ಮಾಡುತ್ತಿದ್ದ ಸಿಎಂ ಎಚ್‍ಡಿಕೆ, ಇವತ್ತು ಗಂಡ ಹೆಂಡತಿ ಇಬ್ಬರು ಫೈವ್ ಸ್ಟಾರ್ ಹೋಟೆಲ್‍ನಲ್ಲಿ ಜೀವನ ಮಾಡುತ್ತಿದ್ದಾರೆ. ಚುನಾವಣೆ ಬಂದ ಕೂಡಲೇ ಎಮೋಷನಲ್ ಬ್ಲಾಕ್‍ಮೇಲ್ ಮಾಡಿ ಜನರನ್ನ ಮೋಸ ಮಾಡುತ್ತಾರೆ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಸಿಪಿ ಯೋಗೇಶ್ವರ್ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಆರೋಪ ಮಾಡಿದ್ದಾರೆ.

    ಉಪಚುನಾವಣೆ ಮತದಾನದ ದಿನಾಂಕ ಹತ್ತಿರವಾಗುತ್ತಿದಂತೆ ರಾಜಕೀಯ ನಾಯಕರ ಆರೋಪ, ಪ್ರತ್ಯಾರೋಪಗಳ ಹೆಚ್ಚಾಗುತ್ತಿದ್ದು, ಇಂದು ಸಿಪಿ ಯೋಗೇಶ್ವರ್ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ರಾಮನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೈಲಾಂಚ ಹೋಬಳಿಯಲ್ಲಿ ಪ್ರಚಾರ ನಡೆಸಿದ ಅವರು ಮಾಧ್ಯಮಗಳೊಂದಿಗೆ ಮಾತುನಾಡಿದರು. ಸಿಎಂ ಕುಮಾರಸ್ವಾಮಿ ಅವರು ತಾಜ್ ವೆಸ್ಟೆಂಡ್ ಹೋಟೆಲ್‍ಗೆ ದಿನಕ್ಕೆ ಲಕ್ಷ ಬಾಡಿಗೆ ಕೊಡುತ್ತಿದ್ದು, ಗಂಡ ಹೆಂಡತಿ ಇಬ್ಬರು ಫೈವ್ ಸ್ಟಾರ್ ಹೋಟೆಲ್‍ನಲ್ಲಿ ಜೀವನ ಮಾಡುತ್ತಿದ್ದಾರೆ. ಜಂತಕಲ್ ಮೈನಿಂಗ್ ಹಗರಣದ ಕತ್ತಿ ಅವರ ಮೇಲೆ ತೂಗಾಡುತ್ತಿದೆ. ಕಳೆದ 20 ವರ್ಷಗಳಿಂದ ಕಾಂಗ್ರೆಸ್‍ನವರು, ಜೆಡಿಎಸ್‍ನವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದು, ಅದನ್ನು ಬಿಟ್ಟು ನ್ಯಾಯಾಲಯದಲ್ಲಿ ಚಾಲೆಂಜ್ ಮಾಡಲಿ ಎಂದು ಸವಾಲು ಎಸೆದರು.

    ಇದೇ ವೇಳೆ ಅನಿತಾ ಕುಮಾರಸ್ವಾಮಿಯವರು ಬಹಿರಂಗವಾಗಿ ಈ ತಾಲೂಕಿನ ಅಧಿಕಾರಿಗಳ ಬಳಿ ಹಣ ವಸೂಲಿ ಮಾಡಿದ್ದಾರೆ. ಅದರ ದಾಖಲೆಗಳು ನನ್ನ ಬಳಿ ಇದೆ. ಸಿಎಂ ಎಚ್‍ಡಿಕೆ ನಮ್ಮನ್ನ ಮೋಸಗಾರ ಎಂದು, ಅವರನ್ನ ಸತ್ಯ ಹರಿಶ್ಚಂದ್ರ ಎಂದುಕೊಂಡಿದ್ದಾರೆ. ಕುಮಾರಸ್ವಾಮಿಯವರು ಎಲ್ಲೂ ಹೋಗಿ ಕೆಲಸ ಮಾಡಿದ್ದು, ಉದ್ಯೋಗ ಮಾಡಿದ್ದು ನಾವು ನೋಡಿಲ್ಲ. ಆದರೆ ಅವರ ಆಸ್ತಿಯೆಲ್ಲಾ ನೂರಾರು ಕೋಟಿ, ಸಾವಿರಾರು ಕೋಟಿ ಜಾಸ್ತಿಯಾಗುತ್ತಿದೆ. ಅಲ್ಲದೇ ಅನಿತಾ ಕುಮಾರಸ್ವಾಮಿ ಅವರು ಆಸ್ತಿಯೂ ಹೇಗೆ ಜಾಸ್ತಿಯಾಗುತ್ತದೆ ಎಂದು ಪ್ರಶ್ನಿಸಿದರು.

    ಕುಮಾರಸ್ವಾಮಿಯವರು ಮುಖವಾಡ ಹಾಕಿಕೊಂಡು ರಾಜಕೀಯ ಮಾಡುತ್ತಿದ್ದು, ಚುನಾವಣೆ ಬಂದ ತಕ್ಷಣ ಸಾಯುವ ಮಾತನಾಡುವ ಮೂಲಕ ಡ್ರಾಮಾ ಮಾಡುತ್ತಿದ್ದಾರೆ. ಇಂತಹ ಎಮೋಷನಲ್ ಬ್ಲಾಕ್‍ಮೇಲ್ ಬಿಡಿ, ಜನರನ್ನ ಎಷ್ಟ ಸಲ ಮೋಸ ಮಾಡುತ್ತೀರಿ. ಕರ್ನಾಟಕದ ಕಣ್ಣೊರೆಸ್ತೀನಿ ಎನ್ನುವ ಸಿಎಂ ಕುಮಾರಸ್ವಾಮಿಯವರು ಮೊದಲು ರಾಮನಗರದ ಜನರ ಕಣ್ಣೀರು ಒರೆಸಬೇಕು ಎಂದು ಸಲಹೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನಿತಾರನ್ನು ಗೆಲ್ಲಿಸಲು, ಡಿಕೆ ಬ್ರದರ್ಸ್ ಟೊಂಕ ಕಟ್ಟಿ ನಿಂತಿದ್ದಾರೆ: ಸಿ.ಪಿ.ಯೋಗಿಶ್ವರ್

    ಅನಿತಾರನ್ನು ಗೆಲ್ಲಿಸಲು, ಡಿಕೆ ಬ್ರದರ್ಸ್ ಟೊಂಕ ಕಟ್ಟಿ ನಿಂತಿದ್ದಾರೆ: ಸಿ.ಪಿ.ಯೋಗಿಶ್ವರ್

    ರಾಮನಗರ: ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಯವರನ್ನು ಗೆಲ್ಲಿಸಲು ಡಿಕೆ ಸಹೋದರರು ಟೊಂಕ ಕಟ್ಟಿ ನಿಂತಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗಿಶ್ವರ್ ವ್ಯಂಗ್ಯವಾಡಿದ್ದಾರೆ.

    ಉಪ ಚುನಾವಣೆ ಹಿನ್ನೆಲೆಯಲ್ಲಿ ಇಂದಿನಿಂದ ಜಿಲ್ಲೆಯಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಅವರು, ಪತ್ರಿಕಾಗೋಷ್ಠಿ ನಡೆಸಿ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ಹಾಗೂ ಡಿಕೆ ಬ್ರದರ್ಸ್ ವಿರುದ್ದ ಹರಿಹಾಯ್ದರು. ಅನಿತಾ ಕುಮಾರಸ್ವಾಮಿಯವರು ನೂರಾರು ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ. ಜಿಲ್ಲೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಬೇಕು ಅಂದರೆ, ಅವರು ದುಡ್ಡು ತೆಗೆದುಕೊಳ್ಳದೇ ಏನು ಮಾಡುತ್ತಿಲ್ಲ. ಇದರಲ್ಲಿ ಎಸಿ, ಡಿಸಿ, ತಹಶೀಲ್ದಾರರು ಸಹ ವರ್ಗಾವಣೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆಂದು ಜಿಲ್ಲೆಯ ಜನ ಹಾಗೂ ಜೆಡಿಎಸ್ಸಿನ ಮುಖಂಡರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

    ಡಿಕೆ ಸಹೋದರರು ಅನಿತಾ ಕುಮಾರಸ್ವಾಮಿಯವರನ್ನು ಗೆಲ್ಲಿಸಲು ಟೊಂಕ ಕಟ್ಟಿ, ಹಠಕ್ಕೆ ಬಿದ್ದಿದ್ದಾರೆ. ಕೇವಲ ಅಧಿಕಾರದ ಆಸೆಯಿಂದ ಇಷ್ಟು ದಿನ ಕಿತ್ತಾಡಿಕೊಂಡಿದ್ದ ಅವರು ಇಂದು ಒಂದಾಗಿದ್ದಾರೆ. ಆದರೆ ಈ ಬಾರಿ ರಾಮನಗರ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಅನಿತಾ ಕುಮಾರಸ್ವಾಮಿ ಎಲ್ಲೇ ಪ್ರಚಾರಕ್ಕೆ ಹೋದರೂ, ಗ್ರಾಮಸ್ಥರು ಪ್ರತಿಭಟನೆ ಮಾಡಲು ಮೂಲಕ ಅವರನ್ನು ವಾಪಾಸ್ ಕಳುಹಿಸುತ್ತಿದ್ದಾರೆ. ತಾಲೂಕಿನಾದ್ಯಂತ ಅನಿತಾರ ವಿರುದ್ಧವಾದ ಮಾತುಗಳು ಕೇಳಿಬರುತ್ತಿವೆ ಎಂದು ಹೇಳಿದರು.

    ಈ ಹಿಂದೆ ಮಧುಗಿರಿಯಲ್ಲಿ ಶಾಸಕಿಯಾಗಿದ್ದಾಗ ಅವರು ಕ್ಷೇತ್ರಕ್ಕೆ ಬರಲಿಲ್ಲ ಎಂದು ಅಲ್ಲಿಂದ ವಾಪಾಸ್ ಕಳುಹಿಸಿದ್ದರು. ಅಲ್ಲದೇ ಚನ್ನಪಟ್ಟಣದ ಜನರು ಕೂಡಾ ಅನಿತಾರನ್ನು ಸ್ವೀಕರಿಸಲಿಲ್ಲ. ಶಾಸಕಿ ಸ್ಥಾನ ಅವರಿಗೆ ಹೆಸರಿಗೋಸ್ಕರ ಬೇಕು. ಹಠಕ್ಕೆ ಬಿದ್ದಂತೆ ರಾಮನಗರದಲ್ಲಿ ತಮ್ಮ ಪತಿಯವರ ಸ್ಥಾನವನ್ನ ಖಾಲಿ ಮಾಡಿಸಿ, ಚುನಾವಣೆಗೆ ಬಂದಿದ್ದಾರೆ. ಇದು ಬಲವಂತದ ಚುನಾವಣೆಯಾಗಿದೆ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮನಗರದಲ್ಲಿ ಇಂದಿನಿಂದ ಅನಿತಾ ಕುಮಾರಸ್ವಾಮಿ ಪ್ರಚಾರ

    ರಾಮನಗರದಲ್ಲಿ ಇಂದಿನಿಂದ ಅನಿತಾ ಕುಮಾರಸ್ವಾಮಿ ಪ್ರಚಾರ

    ರಾಮನಗರ: ಇಷ್ಟು ದಿನ ತೆರೆಮರೆಯಲ್ಲಿ ಕಸರತ್ತು ನಡೆಸ್ತಿದ್ದ ರಾಮನಗರ ದೋಸ್ತಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಇಂದಿನಿಂದ ಫೀಲ್ಡ್ ಗಿಳಿಯಲಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಸಭೆ ಮೇಲೆ ಸಭೆ ಮಾಡ್ತಿದ್ದ ಅವರು ಇಂದಿನಿಂದ ಅಧಿಕೃತವಾಗಿ ಅಖಾಡಕ್ಕೆ ಇಳಿಯಲಿದ್ದಾರೆ.

    ಬೆಳಗ್ಗೆ 10 ಗಂಟೆಗೆ ರಾಮನಗರ ಜಿಲ್ಲೆಯ ಕೆಂಪನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಸಬಾ ಹೋಬಳಿಯ 32 ಹಳ್ಳಿಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಕೆಲ ರಾಜ್ಯ ನಾಯಕರು, ಸ್ಥಳೀಯ ಮುಖಂಡರು ಅನಿತಾ ಕುಮಾರಸ್ವಾಮಿಗೆ ಸಾಥ್ ನೀಡಲಿದ್ದಾರೆ. ಇದಕ್ಕೆ ಪೂರ್ವತಯಾರಿಯಾಗಿ ನಿನ್ನೆ ಹುಸಣನಹಳ್ಳಿ ರಸ್ತೆಯಲ್ಲಿನ ಹಜ್ಮತುಲ್ಲಾ ಫಾರಂಹೌಸ್‍ನಲ್ಲಿ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿದ್ರು.

    ಇತ್ತ ಡಿಕೆ ಶಿವಕುಮಾರ್ ಕೂಡಾ ಬೆಂಗಳೂರಿನ ನಿವಾಸದಲ್ಲಿ ಸಭೆ ನಡೆಸಿದ್ರು. ರಾಮನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ರಾಮನಗರ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹಾಗೂ ರಾಮನಗರ ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರು ಭಾಗಿಯಾಗಿದ್ದರು. ಸಭೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಚರ್ಚೆ ನಡೆಸಲಾಯಿತು. ರಾಮನಗರ ಉಸ್ತುವಾರಿ ಡಿ ಕೆ ಶಿವಕುಮಾರ್, ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲ್ಲಿರುವ ಸಭೆ ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮನಗರ ನಗರದಲ್ಲಿ ಎಚ್‍ಡಿಕೆಗೆ ಆದಂತೆ ಆಗದೇ ಇರಲು ಅನಿತಾ ಕುಮಾರಸ್ವಾಮಿ ಸಭೆ

    ರಾಮನಗರ ನಗರದಲ್ಲಿ ಎಚ್‍ಡಿಕೆಗೆ ಆದಂತೆ ಆಗದೇ ಇರಲು ಅನಿತಾ ಕುಮಾರಸ್ವಾಮಿ ಸಭೆ

    ರಾಮನಗರ: ಉಪಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಒಮ್ಮತದ ಅಭ್ಯರ್ಥಿ ಮತಗಳಿಕೆ ಹೆಚ್ಚಿಸಲು ಅನಿತಾ ಕುಮಾರಸ್ವಾಮಿ ರಾಮನಗರ ನಗರದಲ್ಲಿ ಸಭೆ ನಡೆಸುತ್ತಿದ್ದಾರೆ.

    ಹೊರವಲಯದ ಹಿಲ್ ವ್ಯೂ ರೆಸಾರ್ಟ್ ನಲ್ಲಿ ರಾಮನಗರ ಟೌನ್ ಮುಖಂಡರ ಸಭೆ ನಡೆಸಿದ್ದಾರೆ. ನಗರಸಭೆ ವ್ಯಾಪ್ತಿಯ 31 ವಾರ್ಡ್ ಗಳ ಮುಖಂಡರ ಸಭೆಯಲ್ಲಿ ಚುನಾವಣಾ ರಣತಂತ್ರಗಳನ್ನು ಅನಿತಾ ಕುಮಾರಸ್ವಾಮಿ ಚರ್ಚಿಸಿದ್ದಾರೆ.

    ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರಿಗೆ ರಾಮನಗರ ಟೌನ್ ನಲ್ಲಿ ಹಿನ್ನಡೆಯನ್ನುಂಟಾಗಿತ್ತು. 20 ಸಾವಿರಕ್ಕೂ ಅಧಿಕ ಮುನ್ನಡೆಯಲ್ಲಿದ್ದ ಕುಮಾರಸ್ವಾಮಿ ರಾಮನಗರ ಟೌನ್ ಮತ ಏಣಿಕೆ ವೇಳೆ 578 ಮತಗಳ ಹಿನ್ನೆಡೆ ಅನುಭವಿಸಿದ್ದರು. ಈ ಚುನಾವಣೆಯಲ್ಲಿ ಈ ರೀತಿ ಆಗದೇ ಇರಲು ಚರ್ಚೆ ನಡೆಸಿದ್ದಾರೆ.

    ಟೌನ್ ನಲ್ಲಿ ಪ್ರಚಾರ ಕಾರ್ಯ ಹೇಗೆ ನಡೆಸಬೇಕೆಂಬ ಚರ್ಚೆ ನಡೆದಿದೆ. ಕಳೆದ ಬಾರಿಯ ಹಿನ್ನೆಡೆಗೆ ಕಾರಣಗಳು ಏನು ಎನ್ನುವುದರ ಬಗ್ಗೆಯೂ ಚರ್ಚೆ ನಡೆದಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ 92,626 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ 69,990 ಮತಗಳನ್ನು ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋಟ್ಯಂತರ ರೂ. ಆಸ್ತಿಯ ಒಡತಿ ಅನಿತಾ ಕುಮಾರಸ್ವಾಮಿ: 2013ರಲ್ಲಿ ಎಷ್ಟಿತ್ತು? ಈಗ ಎಷ್ಟಿದೆ?

    ಕೋಟ್ಯಂತರ ರೂ. ಆಸ್ತಿಯ ಒಡತಿ ಅನಿತಾ ಕುಮಾರಸ್ವಾಮಿ: 2013ರಲ್ಲಿ ಎಷ್ಟಿತ್ತು? ಈಗ ಎಷ್ಟಿದೆ?

    ರಾಮನಗರ: ಜಿಲ್ಲೆಯ ಉಪಚುನಾವಣೆಗೆ ಜೆಡಿಎಸ್ ನಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿಯವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ಮೌಲ್ಯದ ಪ್ರಕಾರ ಕೋಟಿ ಆಸ್ತಿಗೆ ಒಡತಿಯಾಗಿದ್ದಾರೆ.

    ಕಾರ್ಯಕರ್ತರ ಜೊತೆ ಮೆರವಣಿಗೆಯೊಂದಿಗೆ ಆಗಮಿಸಿದ ಅವರು ಪತಿ ಸಿಎಂ ಕುಮಾರಸ್ವಾಮಿಯವರೊಂದಿಗೆ ನಾಮಪತ್ರ ಸಲ್ಲಿಸಿದರು. ಒಟ್ಟು 64,22,61,822 ರೂಪಾಯಿ ಚರಾಸ್ತಿಯನ್ನು ಹೊಂದಿದ್ದು, ಇದರಲ್ಲಿ 8,14,86,685 ರೂಪಾಯಿ ಸಾಲವನ್ನು ಹೊಂದಿದ್ದಾರೆ. ಅಲ್ಲದೇ ಅನಿತಾ ಕುಮಾರಸ್ವಾಮಿಯವರ ವಾರ್ಷಿಕ ಆದಾಯ 76,35,650 ರೂ. ಆಗಿದೆ.

    ಏನೆಲ್ಲಾ ಇದೆ ಅನಿತಾ ಕುಮಾರಸ್ವಾಮಿಯವರ ಬಳಿ?
    ಸದ್ಯ ಕೈಯಲ್ಲಿ 42,36,638 ರೂಪಾಯಿ ಹಣ ಇದ್ದು, ಬ್ಯಾಂಕುಗಳಲ್ಲಿ 1,90,88,775 ರೂಪಾಯಿ ಇಟ್ಟಿದ್ದಾರೆ. ಇದಲ್ಲದೇ ವಿವಿಧ ಕಂಪೆನಿಗಳು ಹಾಗೂ ಷೇರು ಮಾರುಕಟ್ಟೆ ಮೇಲೆ 68,79,58,000 ರೂ. ಹೂಡಿಕೆ ಮಾಡಿದ್ದಾರೆ. ಇದರ ಜೊತೆ 93,30,000 ರೂ. ಚಿನ್ನಾಭರಣವನ್ನು ಹೊಂದಿದ್ದು, ಇದರಲ್ಲಿ 2.6 ಕೆಜಿ ಚಿನ್ನಾಭರಣ, 17 ಕೆಜಿ ಬೆಳ್ಳಿ ಹಾಗೂ 40 ಗ್ರಾಂ ಕ್ಯಾರೇಟ್ ಡೈಮಂಡ್ ಇದೆ.

    ಇದಲ್ಲದೆ ಬೆಂಗಳೂರಿನ ಜಯನಗರದ 4ನೇ ಬ್ಲಾಕ್‍ನಲ್ಲಿ 14 ಕೋಟಿ ರೂ. ಹಾಗೂ ದೊಡ್ಡನಕುಂಟೆ ಬಳಿ 16 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. 28,29,557 ರೂ ಮೌಲ್ಯದ ಹಾರ್ಲೇ ಡೆವಿಡ್ಸನ್ ಬೈಕ್ ಹಾಗೂ ಪ್ರಚಾರದ ಬಸ್ ಒಂದನ್ನು ಹೊಂದಿದ್ದಾರೆ. 2013 ರಲ್ಲಿ ಚನ್ನಪಟ್ಟಣ ವಿಧಾನಸಭೆಗೆ ಸ್ಪರ್ಧಿಸಿದಾಗ ಅನಿತಾ ಕುಮಾರಸ್ವಾಮಿ ಆಸ್ತಿ 137,96,87,114 ರೂ. ಆಸ್ತಿ ಹೊಂದಿದ್ದರು. ಇದನ್ನೂ ಓದಿ: ರಾಮನಗರದಲ್ಲಿ ಕೋಟ್ಯಧಿಪತಿಗಳ ಸ್ಪರ್ಧೆ: ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಆಸ್ತಿ ಎಷ್ಟಿದೆ?

    2013ರ ಆಸ್ತಿ ವಿವರ:

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮನಗರದಲ್ಲಿ ಅನಿತಾರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಯಾಕೆ: ಉತ್ತರ ಕೊಟ್ಟ ಸಿಎಂ

    ರಾಮನಗರದಲ್ಲಿ ಅನಿತಾರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಯಾಕೆ: ಉತ್ತರ ಕೊಟ್ಟ ಸಿಎಂ

    ರಾಮನಗರ: ಕಾರ್ಯಕರ್ತರ ಭಾವನೆಯ ಮೇರೆಗೆ ಅನಿತಾ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಈ ದಿನದ ಬೆಳವಣಿಗೆಗೆ ಕ್ಷೇತ್ರದ ಜನರೇ ಕಾರಣ. ಕಾರ್ಯಕರ್ತರ ಭಾವನೆ ಮೇರೆಗೆ ಅನಿತಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಆದರೆ ಕೆಲವರು ಬೇರೆಯವರಿಗೆ ಟಿಕೆಟ್ ಕೊಡಲಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾನು ಇಲ್ಲಿಗೆ ಬಾರದೇ ಇದ್ದರೂ ಜನ ನನ್ನನ್ನು ಗೆಲ್ಲಿಸಿದ್ದಾರೆ. ರಾಮನಗರಕ್ಕೆ ರಾಜೀನಾಮೆ ಕೊಡುವ ಮುನ್ನ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ನಿಮ್ಮ ಕುಟುಂಬದವರೇ ಮುಂದಿನ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಮಾತು ತೆಗೆದುಕೊಂಡಿದ್ದರು. ಹೀಗಾಗಿ ಅನಿವಾರ್ಯವಾಗಿ ಅನಿತಾ ಸ್ಪರ್ಧೆ ಮಾಡಬೇಕಾಯಿತು ಎಂದು ಸ್ಪಷ್ಟನೆ ನೀಡಿದರು.

      

    ಈ ಚುನಾವಣೆಗೆ ಕೆಲವು ಕಾಂಗ್ರೆಸ್ ಮುಖಂಡರಲ್ಲಿ ಅಸಮಧಾನವಿದೆ. ಏಕೆಂದರೆ ಮೊದಲಿನಿಂದಲೂ ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಜಿದ್ದಾ-ಜಿದ್ದಿನಿಂದಲೇ ಚುನಾವಣೆಯನ್ನು ಎದುರಿಸಿದ್ದವು. ಹೀಗಾಗಿ ಕೆಲವು ನಾಯಕರಲ್ಲಿ ಮಾತ್ರ ಅಸಮಾಧಾನವಿದೆ. ಮುಂದಿನ ರಾಜಕೀಯ ಪರಿಸ್ಥಿತಿಯನ್ನು ಬದಲಾವಣೆ ತರಲು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರು ಎಲ್ಲಾ ಮುಖಂಡರ ಸಹಮತದಿಂದ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಎಂದು ಹೇಳಿದರು.

    ಮೈತ್ರಿ ಮೂಲಕ ಹೊಸ ಪ್ರಯೋಗಕ್ಕೆ ಸುಗಮ ಹೆಜ್ಜೆ ಇಟ್ಟಿದ್ದೇವೆ. ಹಳೇ ದ್ವೇಷ ಮರೆತು ಹೊಸ ಹೆಜ್ಜೆ ಹಾಕಿದ್ದೇವೆ. ಅಲ್ಲದೇ ಕಾಂಗ್ರೆಸ್ಸಿನವರೇ ಇರಲಿ, ಬಿಜೆಪಿಯವರೇ ಇರಲಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ. ಅಧಿಕಾರ ಇದೆ ಎಂದು ದುರ್ಬಳಕೆ ಮಾಡಿಕೊಂಡಿಲ್ಲ. ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ವಿರುದ್ಧ ನಾವು ಕಾಂಗ್ರೆಸ್ ಜೊತೆ ಇದ್ದೇವೆ. ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ನಾಯಕರೂ ಸಹ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮನಗರದಲ್ಲಿ ಅನಿತಾ ಸ್ಪರ್ಧೆಗೆ ಎಚ್‍ಡಿಡಿ ಗ್ರೀನ್‍ಸಿಗ್ನಲ್

    ರಾಮನಗರದಲ್ಲಿ ಅನಿತಾ ಸ್ಪರ್ಧೆಗೆ ಎಚ್‍ಡಿಡಿ ಗ್ರೀನ್‍ಸಿಗ್ನಲ್

    – ಮಂಡ್ಯದಲ್ಲೂ ಆಪರೇಷನ್ ಕಮಲಕ್ಕೆ ಪ್ಲ್ಯಾನ್

    ಬೆಂಗಳೂರು: ಉಪ ಚುನಾವಣಾ ಕಣ ರಂಗೇರ್ತಿದೆ. ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿಕ್ಕಟ್ಟು ಗೊಂದಲ ಶಮನಗೊಂಡಿದ್ದು ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಗ್ರೀನ್‍ಸಿಗ್ನಲ್ ನೀಡಿದ್ದಾರೆ.

    ದೇವೇಗೌಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಆಯ್ಕೆಯಾಗಲು ಕಾರ್ಯಕರ್ತರು ಸರ್ವಾನುಮತದ ಒಪ್ಪಿಗೆ ನೀಡಿದ್ದಾರೆ. ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಅನಿತಾ ಅವರು ಸೋಮವಾರ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

    ರಾಮನಗರದಲ್ಲಿ ಆಪರೇಷನ್ ಕಮಲ ಮಾಡುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ಚಿತ್ತ ಈಗ ಮಂಡ್ಯದತ್ತ ನೆಟ್ಟಿದೆ. ಮಂಡ್ಯದ ಹಲವು ಜೆಡಿಎಸ್, ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರಲಿದ್ದು, ಇಂದು ಆರ್. ಅಶೋಕ್ ನೇತೃತ್ವದಲ್ಲಿ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಲಿದೆ.

    ಸಭೆಯಲ್ಲಿ ಮಂಡ್ಯದಲ್ಲಿ ಆಪರೇಷನ್ ಕಮಲ ಮುಂದುವರಿಸಲು ಬಿಎಸ್‍ವೈ ಗ್ರೀನ್‍ಸಿಗ್ನಲ್ ನೀಡುವ ಸಾಧ್ಯತೆ ಇದೆ. ಈ ಜವಾಬ್ದಾರಿಯನ್ನು ಅಶೋಕ್ ಹಾಗೂ ಯೋಗೇಶ್ವರ್‍ಗೆ ನೀಡಲಿದ್ದಾರೆ. ಇತ್ತ ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕೂಡ ಕಗ್ಗಂಟಾಗೆ ಉಳಿದಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿಕೆಶಿ ಅವರ ಕೈಯಲ್ಲೇ ಅಭ್ಯರ್ಥಿ ಆಯ್ಕೆ ಮಾಡಲಾಗ್ತಿಲ್ಲ. ಹೀಗಾಗಿ ಇಂದು ಕೂಡ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಯಡಿಯೂರಪ್ಪ, ಶ್ರೀರಾಮುಲು, ಪುಟ್ಟರಾಜು ಅವರಿಂದ ತೆರವಾಗಿರುವ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಕ್ಷೇತ್ರದ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದ್ದು, ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ವಿರುದ್ಧ ಪಕ್ಷದ ಕಾರ್ಯಕರ್ತರೇ ಗರಂ

    ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ವಿರುದ್ಧ ಪಕ್ಷದ ಕಾರ್ಯಕರ್ತರೇ ಗರಂ

    ರಾಮನಗರ: ವಿಧಾನಸಭಾ ಉಪಚುನಾವಣೆಗೆ ರಾಮನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದಕ್ಕೆ ಪಕ್ಷದ ಕಾರ್ಯಕರ್ತರೇ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಅವರಿಗೆ ನಾಯಕತ್ವದ ಗುಣವೇ ಇಲ್ಲ, ಸ್ಥಳೀಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ದೂರಿದ್ದಾರೆ.

    ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಎಚ್.ಡಿ.ಕುಮಾರಸ್ವಾಮಿ ಅನಿತಾ ಅವರು ಅಭ್ಯರ್ಥಿಯಾಗಲು ಸಮ್ಮತಿಸಿದ್ದಾರೆ. ಹೀಗಾಗಿ ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧೆಗೆ ಇಳಿಯಲಿದ್ದಾರೆ ಅಂತಾ ಮುಖಂಡರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದಕ್ಕೆ ಕಾರ್ಯಕರ್ತರು ಅಸಮಾಧಾನ ಹೊರಹಾಕಿದರು. ಈ ವೇಳೆ ಕಾರ್ಯಕರ್ತರು ಹಾಗೂ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.

    ಈ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ರಾಜಶೇಖರ್, ಈ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕೆ ನಿಲ್ಲಿಸಲು ಪಕ್ಷದ ಹಿರಿಯರು ತೀರ್ಮಾನ ಕೈಗೊಂಡಿದ್ದಾರೆ. ಅಕ್ಟೋಬರ್ 11ರ ಬೆಳಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಸಲ್ಲಿದ್ದಾರೆ ಎಂದು ತಿಳಿಸಿದರು. ಇದನ್ನು ಓದಿ: ನಾನೇ ಜೆಡಿಎಸ್ ಪಕ್ಷದ ಅಭ್ಯರ್ಥಿ ಇನ್ನೆರಡು ದಿನದಲ್ಲಿ ಅಂತಿಮ: ಅನಿತಾ ಕುಮಾರಸ್ವಾಮಿ

    ಈ ಸಂದರ್ಭದಲ್ಲಿ ಅಲ್ಲಿದ್ದ ಕಾರ್ಯಕರ್ತರು, ಯಾರನ್ನು ಕೇಳಿ ಅನಿತಾ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ? ಅವರು ಬಂದು ನಾನೇ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರಾ ಎಂದು ಪ್ರಶ್ನಿಸಿ ಕಾರ್ಯಕರ್ತರು ರಾಜಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಷ್ಟೇ ಅಲ್ಲದೇ ಕ್ಷೇತ್ರದಲ್ಲಿ ಪ್ರಬಲ ಎದುರಾಳಿ ಇಲ್ಲ ಎನ್ನುವ ಕಾರಣಕ್ಕೆ ಇಂತಹ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ದೂರಿದರು.

    ರಾಮನಗರಲ್ಲಿ ಪಕ್ಷದ ಕಚೇರಿಯಿಲ್ಲ. ಆದರೂ ಪಕ್ಷದ ಸಭೆಯನ್ನು ಕಾರ್ಯಕರ್ತರು ತಮ್ಮ ಮನೆಯನ್ನು ನೀಡುತ್ತಾರೆ. ಅಷ್ಟೇ ಅಲ್ಲದೆ ಅವರು ತಮ್ಮ ಹಣದಲ್ಲಿಯೇ ಚುನಾವಣೆಯ ವೆಚ್ಚವನ್ನು ನೋಡಿಕೊಳ್ಳುತ್ತಿದ್ದಾರೆ. ಅನಿತಾ ಕುಮಾರಸ್ವಾಮಿ ಅವರು ಜಿಲ್ಲೆಗೆ ಬಂದರೆ ಕೇವಲ ನಾಲ್ಕು ಜನರ ಹಿಂದೆ ಓಡಾಡುತ್ತಿದ್ದು, ಸ್ಥಳೀಯ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ನಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಹೋದರೆ ಅಲ್ಲಿಯೂ ನಮ್ಮನ್ನು ಮಾತನಾಡಿಸುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಮ್ಮಿಶ್ರ ಸರ್ಕಾರದ ಜವಾಬ್ದಾರಿಗಳಿವೆ. ಆದರೆ ಅನಿತಾ ಕುಮಾರಸ್ವಾಮಿ ಅವರು ಖಾಲಿಯಿದ್ದರೂ ಕ್ಷೇತ್ರಕ್ಕೆ ಒಂದು ದಿನವೂ ಬಂದು ಕಾರ್ಯಕರ್ತರ ಜೊತೆಗೆ ಚರ್ಚೆ ಮಾಡಿಲ್ಲ. ನಾಮಪತ್ರ ಸಲ್ಲಿಸಲು ಇನ್ನೂ ಸಮಯವಿದೆ. ಹೀಗಿರುವಾಗ ಪಕ್ಷದ ವರಿಷ್ಠರು ಯಾವ ನಿರ್ಧಾರಕ್ಕೆ ಬರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಪಕ್ಷದಲ್ಲಿ ಭಾರೀ ಗೊಂದಲವಿದೆ. ಮುಸ್ಲಿಮರನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ ಎಂದು ದೂರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/HAaUXB4ushw

  • ರಾಮನಗರ ಉಪಚುನಾವಣೆ- ಅನಿತಾರನ್ನು ಭವಾನಿ ರೇವಣ್ಣ ಆಕ್ಷೇಪಿಸಿದ್ರೆ ಜೆಡಿಎಸ್‍ನಿಂದ ನಿಖಿಲ್ ಕಣಕ್ಕೆ?

    ರಾಮನಗರ ಉಪಚುನಾವಣೆ- ಅನಿತಾರನ್ನು ಭವಾನಿ ರೇವಣ್ಣ ಆಕ್ಷೇಪಿಸಿದ್ರೆ ಜೆಡಿಎಸ್‍ನಿಂದ ನಿಖಿಲ್ ಕಣಕ್ಕೆ?

    – ಅತ್ತ ಬಿಜೆಪಿಯಿಂದಲೂ ಕಸರತ್ತು

    ರಾಮನಗರ: ಬೆಂಗಳೂರು ಹೊರವಲಯದ ರಾಮನಗರ ಉಪಚುನಾವಣೆಗೆ ಜೆಡಿಎಸ್‍ನಿಂದ ಇಂದು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

    ಜೆಡಿಎಸ್‍ನಿಂದ ಅನಿತಾ ಕುಮಾರಸ್ವಾಮಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಕೊನೆ ಕ್ಷಣದಲ್ಲಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದರೂ ಅಚ್ಚರಿಯಿಲ್ಲ. ಯಾಕಂದ್ರೆ ನಿಖಿಲ್ ರಾಜಕೀಯ ರಂಗಕ್ಕೆ ಕಾಲಿಡಲು ಸೂಕ್ತ ಸಮಯ ಅನ್ನೋದು ಗೌಡರ ಲೆಕ್ಕಾಚಾರವಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸೋದಕ್ಕೆ ಭವಾನಿ ರೇವಣ್ಣ ಆಕ್ಷೇಪಿಸಿದ್ರೆ ನಿಖಿಲ್ ಕಣಕ್ಕಿಳಿಯುತ್ತಾರೆ. ಆದ್ರೆ ಸದ್ಯಕ್ಕೆ ರಾಜಕೀಯ ಬೇಡ ಅಂತ ನಿಖಿಲ್ ಕುಮಾರಸ್ವಾಮಿ ಹೇಳುತ್ತಿದ್ದಾರೆ.

    ಇತ್ತ ಬಿಜೆಪಿಯಲ್ಲೂ ಅಭ್ಯರ್ಥಿ ಆಯ್ಕೆ ಬಗ್ಗೆ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಸಿ.ಪಿ.ಯೋಗೇಶ್ವರ್ ಕಣಕ್ಕಿಳಿಸಲು ಬಿಜೆಪಿ ಮುಖಂಡರ ಆಲೋಚನೆ ಮಾಡಿದ್ರೆ, ತಾನು ಸ್ಪರ್ಧಿಸಲ್ಲ ಅಂತ ಯೋಗೇಶ್ವರ್ ಹೇಳುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಮಗೆ ಈ ಸಂಬಂಧ ಇಷ್ಟವಿಲ್ಲ ಅಂದ್ರಂತೆ ಅನಿತಾಕುಮಾರಸ್ವಾಮಿ!

    ನಮಗೆ ಈ ಸಂಬಂಧ ಇಷ್ಟವಿಲ್ಲ ಅಂದ್ರಂತೆ ಅನಿತಾಕುಮಾರಸ್ವಾಮಿ!

    ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ತಮ್ಮ ಪುತ್ರ ನಿಖಿಲ್ ಗೆ ಆಂಧ್ರ ಮೂಲದ ಹುಡುಗಿಯೊಂದಿಗೆ ವಿವಾಹ ಮಾಡಲು ಮಾತುಕತೆ ನಡೆದಿದೆ ಎಂಬ ಸುದ್ದಿಗೆ ಇಂದು ಮತ್ತೊಂದು ಟ್ವಿಸ್ಟ್ ದೊರೆತಿದೆ.

    ಶುಕ್ರವಾರ ಕುಮಾರಸ್ವಾಮಿ ದಂಪತಿ ಆಂಧ್ರದ ಉದ್ಯಮಿ ಬೋಡಪುಡಿ ಶಿವ ಕೋಟೇಶ್ವರ್ ರಾವ್ ಮನೆಗೆ ಹೋಗಿದ್ದರು. ವಿಜಯವಾಡದಲ್ಲಿರುವ ಉದ್ಯಮಿಯ ಮನೆಗೆ ಹೋಗಿ ದಂಪತಿ ಮದ್ವೆ ಮಾತುಕತೆ ನಡೆಸಿದ್ದರು. ಆದ್ರೆ ಈ ಸಂಬಂಧ ಅನಿತಾ ಕುಮಾರಸ್ವಾಮಿಗೆ ಇಷ್ಟನೇ ಇರಲಿಲ್ಲ. ಆದ್ರೆ ಮನೆಗೆ ಬರ್ತಿವಿ ಅಂತ ಕುಮಾರಸ್ವಾಮಿ ಮೊದಲೇ ಹುಡುಗಿ ಮನೆಯವರಿಗೆ ಮಾತು ಕೊಟ್ಟಿದ್ದರು. ಕೊಟ್ಟ ಮಾತು ಉಳಿಸಿಕೊಳ್ಳಲು ಅನಿವಾರ್ಯವಾಗಿ ಕುಮಾರಸ್ವಾಮಿ ದಂಪತಿ ಹುಡುಗಿ ಮನೆಗೆ ಹೋಗಿದ್ದರು. ಮಾತುಕತೆ ವೇಳೆ ಅನಿತಾ ಕುಮಾರಸ್ವಾಮಿ ಅವರು `ನಮಗೆ ಈ ಸಂಬಂಧ ಇಷ್ಟ ಇಲ್ಲ’ ಅಂತ ಹುಡುಗಿ ಮನೆಯವರಿಗೆ ತಿಳಿಸಿದ್ದಾರೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಇತ್ತ ಮದ್ವೆ ಮಾತುಕತೆ ಸುದ್ದಿಯ ಬಗ್ಗೆ ಪುತ್ರ ನಿಖಿಲ್ ತಾಯಿ ಬಳಿ ವಿಚಾರಿಸಿದ್ದಾರೆ. ಈ ವೇಳೆ `ಕರ್ನಾಟಕ ಬಿಟ್ಟು ಬೇರೆ ಕಡೆಯಿಂದ ಹೆಣ್ಣು ತರಲ್ಲ, ತಲೆಕೆಡಿಸಿಕೊಳ್ಳಬೇಡ’ ಅಂತ ಅನಿತಾ ಅವರು ತಮ್ಮ ಪುತ್ರನಿಗೆ ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆಂಧ್ರ ಅಲ್ಲ, ಕನ್ನಡದ ಹುಡುಗಿಯನ್ನೇ ವರಿಸಲಿದ್ದಾರೆ ನಿಖಿಲ್

    ನಿನ್ನೆ ನಿಖಿಲ್ ಅವರಿಗೆ ಹುಡುಗಿ ನೋಡುವುದಕ್ಕಾಗಿ ಸಿಎಂ ದಂಪತಿ ಆಂಧ್ರಕ್ಕೆ ತೆರಳಿದ್ದರು ಎಂಬ ಸುದ್ದಿಯ ಬೆನ್ನಲ್ಲೇ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ನಿಖಿಲ್ ಅವರ ಮ್ಯಾನೇಜರ್, ಈ ಕುರಿತು ಶೀಘ್ರವೇ ಅಧಿಕೃತವಾಗಿ ಕುಟುಂಬ ಸದಸ್ಯರು ಮಾಹಿತಿ ನೀಡಲಿದ್ದಾರೆ. ಆದರೆ ನಿಖಿಲ್ ಅವರು ಆಂಧ್ರ ಹುಡುಗಿಯನ್ನು ಮದುವೆಯಾಗಲಿದ್ದಾರೆ ಎನ್ನುವುದು ಸುಳ್ಳು. ಅವರು ಕನ್ನಡ ಹುಡುಗಿಯನ್ನೇ ಮದುವೆಯಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

    ಈ ವೇಳೆ ಆಂಧ್ರ ಪ್ರದೇಶದ ಖ್ಯಾತ ಉದ್ಯಮಿ ಬೋಡೆಪುಡಿ ಶಿವ ಕೋಟೇಶ್ವರ ರಾವ್ ಕೂಡ ಪ್ರತಿಕ್ರಿಯೆ ನೀಡಿದ್ದು, ಸಿಎಂ ಕುಮಾರಸ್ವಾಮಿ ಅವರು ನಾವು ಸ್ನೇಹಿತರಾಗಿದ್ದು, ಸಹಜವಾಗಿ ಇಂದು ಮನೆಗೆ ಭೇಟಿ ನೀಡಿದ್ದಾರೆ. ನಿಖಿಲ್‍ರೊಂದಿಗೆ ಮದುವೆಯ ಸುದ್ದಿ ಬಗ್ಗೆ ಈ ವೇಳೆ ಚರ್ಚೆ ನಡೆದಿಲ್ಲ. ಸ್ನೇಹಿತರಾದ ಕಾರಣಕ್ಕೆ ಮಾತ್ರ ಭೇಟಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=yCWzT5DwKiM

    https://www.youtube.com/watch?v=gRdK_wrERMI