Tag: anitha kumaraswamy

  • ನಮ್ಮದು ಕುಟುಂಬ ರಾಜಕಾರಣ ಎನ್ನಲು ಯಾರಿಗೂ ಹಕ್ಕಿಲ್ಲ: ಅನಿತಾ ಕುಮಾರಸ್ವಾಮಿ

    ನಮ್ಮದು ಕುಟುಂಬ ರಾಜಕಾರಣ ಎನ್ನಲು ಯಾರಿಗೂ ಹಕ್ಕಿಲ್ಲ: ಅನಿತಾ ಕುಮಾರಸ್ವಾಮಿ

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಪುತ್ರನ ಸ್ಪರ್ಧೆ ವಿಚಾರವಾಗಿ ಕುಟುಂಬ ರಾಜಕಾರಣ ಎಂದಿದ್ದ ವಿರೋಧಿ ಪಕ್ಷಗಳ ಟೀಕೆಗಳಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.

    ಮದ್ದೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪ ಅವರ ಮಗ ರಾಜಕೀಯದಲ್ಲಿಲ್ವಾ? ಮಾಜಿ ಸಿಎಂ ಸಿದ್ದರಾಯಮ್ಯ ಪುತ್ರ ರಾಜಕೀಯದಲ್ಲಿಲ್ವಾ? ನಮ್ಮದು ಕುಟುಂಬ ರಾಜಕೀಯ ಎಂದು ಹೇಳಲು ಯಾರಿಗೂ ಹಕ್ಕಿಲ್ಲ ಎಂದು ಟಾಂಗ್ ನೀಡಿದರು.

    ನಾವು ಹಿಂಬಾಗಿಲಿನಿಂದ ಬಂದು ರಾಜಕೀಯ ಮಾಡುತ್ತಿಲ್ಲ. ಜನರ ಬಳಿ ತೆರಳಿ ಮತ ಹಾಕಿಸಿಕೊಂಡೇ ನಾವು ಕೂಡ ರಾಜಕೀಯ ಮಾಡುತ್ತಿದ್ದೇವೆ. ಹಾಗೊಂದು ವೇಳೆ ಇದನ್ನು ಟೀಕೆ ಮಾಡಿದರೆ ಅವರದ್ದು ವಿಕೃತ ಮನಸ್ಸು ಎಂದು ಹೇಳಬೇಕಾಗುತ್ತದೆ. ನಾವು ನಮ್ಮ ಕುಟುಂಬಸ್ಥರು ಬದ್ಧತೆಯನ್ನಿಟ್ಟಿಕೊಂಡು ರಾಜಕೀಯ ಮಾಡುತ್ತೇವೆ ಎಂದರು. ಇದನ್ನು ಓದಿ: ನಾನು ಮಗಳ ಬಗ್ಗೆ ಯೋಚನೆ ಮಾಡಿಲ್ಲ, ಕೆಲವರು ಮಕ್ಕಳು, ಮರಿಮಕ್ಕಳ ಬಗ್ಗೆ ಯೋಚಿಸುತ್ತಾರೆ: ಪ್ರತಾಪ್ ಸಿಂಹ

    ಮಂಡ್ಯ ಕ್ಷೇತ್ರದಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಕೂಡ ನಾವು ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ಚುನಾವಣೆ ಎಂದ ಮೇಲೆ ವಿರೋಧಿಗಳು ಇದ್ದೇ ಇರುತ್ತಾರೆ. ಇರಲೇಬೇಕಲ್ವಾ? ಎಂದು ಪ್ರಶ್ನಿಸಿ ಸುಮಲತಾ ಅವರ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅಲ್ಲದೇ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಿಂದಲೂ ನಿಖಿಲ್ ಮಂಡ್ಯದಲ್ಲಿ ಮನೆ ಖರೀದಿ ಮಾಡುವಂತೆ ಹೇಳುತ್ತಿದ್ದ. ಈಗ ನಿಖಿಲ್ ಮನೆ ಮಾಡುವ ವಿಚಾರ ಅವನು ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದರಿಂದ ಮನೆ ಮಾಡಬೇಕೆಂದಿಲ್ಲ ಎಂದು ಸ್ಪಷ್ಟನೆ ನೀಡಿದರು.

    ನಾನು ಮೊದಲಿಂದಲೂ ಮಹಾನ್ ದೈವ ಭಕ್ತೆ ಆಗಿದ್ದು, ನಾನು ಪೂಜೆ ಸಲ್ಲಿಸಲು ದೇವಾಲಯಕ್ಕೆ ಬಂದಿದ್ದೇನೆ. ನನ್ನ ಪೂಜೆಗೂ ನಿಖಿಲ್ ಸ್ಪರ್ಧೆಗೂ ಸಂಬಂಧವಿಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಖಿಲ್‍ಗಾಗಿ ಒಂದು ಕಾಲು ರೂ. ಹರಕೆ ಹೊತ್ತ ಅನಿತಾ ಕುಮಾರಸ್ವಾಮಿ

    ನಿಖಿಲ್‍ಗಾಗಿ ಒಂದು ಕಾಲು ರೂ. ಹರಕೆ ಹೊತ್ತ ಅನಿತಾ ಕುಮಾರಸ್ವಾಮಿ

    ಮಂಡ್ಯ: ಲೋಕಸಭೆ ಚುನಾವಣೆ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಸಿಕ್ಕಿ ಆತ ಎಲೆಕ್ಷನ್‍ನಲ್ಲಿ ಗೆಲವು ಸಾಧಿಸಲಿ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಒಂದೂ ಕಾಲು ರೂ. ಹರಕೆ ಕಟ್ಟಿಕೊಂಡಿದ್ದಾರೆ.

    ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಹೊರವಲಯದಲ್ಲಿರುವ ಹೊಳೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಅನಿತಾ ಕುಮಾರಸ್ವಾಮಿ ಅವರು ಹರಕೆ ಹೊತ್ತು ಪೂಜೆ ಸಲ್ಲಿಸಲಿದ್ದಾರೆ. ಹೊಳೆ ಆಂಜನೇಯ ಸ್ವಾಮಿ ದೇಗುಲಕ್ಕೆ ಹರಕೆ ಹೊತ್ತರೆ ಇಷ್ಟಾರ್ಥ ನೆರವೇರಲಿದೆ ಎನ್ನುವ ನಂಬಿಕೆಯಿದೆ.

    ಅನಿತಾ ಕುಮಾರಸ್ವಾಮಿ ಪೂಜೆಯ ನಂತರ ನಿಖಿಲ್‍ಗೆ ಎಲ್ಲಾ ರೀತಿಯಲ್ಲೂ ಒಳಿತಾಗಲಿ ಎಂದು ಹರಕೆ ಹೊತ್ತು ಪೂಜೆ ಸಲ್ಲಿಸುತ್ತಿದ್ದಾರೆ. ಅನಿತಾ ಕುಮಾರಸ್ವಾಮಿ ಅವರು ದೇವಾಲಯಕ್ಕೆ ಒಟ್ಟು ಐದು ಮಂಗಳವಾರ ಸತತವಾಗಿ ಬಂದು ಪೂಜೆ ಸಲ್ಲಿಸಲಿದ್ದಾರೆ.

    ಕಳೆದ ಮಂಗಳವಾರವೂ ಕೂಡ ಅನಿತಾ ಅವರು ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಬಂದು ಒಂದು ಕಾಲು ರೂ. ಹರಕೆ ಸಮರ್ಪಿಸಿ ಪೂಜೆ ಸಲ್ಲಿಸಿದ್ದರು. ಇಂದು ಎರಡನೇ ಬಾರಿಗೆ ಪೂಜೆ ಸಲ್ಲಿಸಲಿದ್ದಾರೆ. ಇನ್ನೂ ಮೂರು ಮಂಗಳವಾರ ಅನಿತಾ ಕುಮಾರಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಮ್ಮದೇ ಪಕ್ಷದ ಕಾರ್ಯಕರ್ತನಿಂದ ಅನಿತಾ ಕುಮಾರಸ್ವಾಮಿಗೆ ಕ್ಲಾಸ್

    ತಮ್ಮದೇ ಪಕ್ಷದ ಕಾರ್ಯಕರ್ತನಿಂದ ಅನಿತಾ ಕುಮಾರಸ್ವಾಮಿಗೆ ಕ್ಲಾಸ್

    ರಾಮನಗರ: ತಮ್ಮದೇ ಪಕ್ಷದ ಕಾರ್ಯಕರ್ತ, ಅರಣ್ಯ ಇಲಾಖೆ ಗುತ್ತಿಗೆ ನೌಕರರೊಬ್ಬರು ಇಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಿಮ್ಮ ಮಾವನವರಿಗೆ ಹಗಲು ರಾತ್ರಿ ಎನ್ನದೇ ಕ್ಯಾನ್ವಾಸ್ ಮಾಡಿದ್ದೇವೆ. ಆ ಋಣಕ್ಕಾದ್ರೂ ನಮ್ಮ ಕೆಲಸ ಮಾಡಿಕೊಡಿ. ನಿಮ್ಮ ಯಜಮಾನ್ರು ಸಿಎಂ, ನೀವು ನಮ್ಮ ಕ್ಷೇತ್ರದ ಶಾಸಕಿಯಾಗಿದ್ದೀರಿ. ನಿಮ್ಮನ್ನ ಕೇಳದೇ ಇನ್ಯಾರನ್ನ ಕೇಳೋಣಾ ಎಂದು ಹೇಳಿದ್ದಾರೆ. ಈ ವೇಳೆ ಶಾಸಕಿ ಅವರನ್ನೇ ಕೇಳ್ಬಿಟ್ರೆ ಆಯ್ತದಲ್ಲ. ನಾನು ಕೇಳಿದ್ರೆ ಅವರು, ನಾನು ಬರೀ ರಾಮನಗರಕ್ಕೆ ಮಾತ್ರ ಮುಖ್ಯಮಂತ್ರಿ ಅಲ್ಲ, ರಾಜ್ಯಕ್ಕೆ ಸಿಎಂ ಎಂದು ಹೇಳುತ್ತಾರೆ. ಹೀಗಾಗಿ ಅಪಾಯಿಂಟಮೆಂಟ್ ಕೊಡಿಸ್ತೀನಿ ಅವರನ್ನೇ ಕೇಳಿ ಅಂದಿದ್ದಾರೆ.

    ಕ್ಲಾಸ್ ಯಾಕೆ..?:
    1,800 ಜನ ಡಿ ಗ್ರೂಪ್ ಗುತ್ತಿಗೆ ನೌಕರರನ್ನು ಪರ್ಮನೆಂಟ್ ಮಾಡಿದ್ದಾರೆ. ನಾವಿರುವುದು 600 ಜನ. ಯಾಕೆ ನಮ್ಮನ್ನ ಪರ್ಮನೆಂಟ್ ಮಾಡೋಕೆ ಆಗಲ್ಲ. ಅವರು ಕೇಳಿದ್ರೂ ಎಂದು ಪರ್ಮನೆಂಟ್ ಮಾಡಿದ್ದೀರಿ. ನಿಮಗೆ ನಮ್ಮನ್ನ ಯಾಕೆ ಪರ್ಮನೆಂಟ್ ಮಾಡೋಕೆ ಆಗಲ್ಲ. ನಿಮ್ಮ ಯಜಮಾನರು, ಮಾವ ಅಲ್ಲದೇ ನಿಮಗೋಸ್ಕರ ಚುನಾವಣೆಗಾಗಿ ಹಗಲು-ರಾತ್ರಿ ಎನ್ನದೆ ದುಡಿದಿದ್ದೇವೆ. ಆ ಋಣಕ್ಕಾಗದ್ರೂ ನಮ್ಮ ಕೆಲಸ ಮಾಡಿಕೊಡಿ ಮೇಡಂ ಎಂದು ಕಾರ್ಯಕರ್ತ ಶಾಸಕಿ ಹಿಂದೆ ದುಂಬಾಲು ಬಿದ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನು ತೆಲುಗಿನವಳಲ್ಲ, ಕನ್ನಡದವಳು: ಅನಿತಾ ಕುಮಾರಸ್ವಾಮಿ

    ನಾನು ತೆಲುಗಿನವಳಲ್ಲ, ಕನ್ನಡದವಳು: ಅನಿತಾ ಕುಮಾರಸ್ವಾಮಿ

    ಬೆಂಗಳೂರು: ನಾನು ತೆಲುಗಿನವಳಲ್ಲ, ಕನ್ನಡದವಳು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕೆಲವು ಮಾಧ್ಯಮಗಳಲ್ಲಿ ನಾನು ತೆಲುಗಿನವಳು ಎಂದು ತೋರಿಸುತ್ತಿದ್ದಾರೆ. ಅದು ಸಿನಿಮಾ ವಿಚಾರದಲ್ಲಿ ಮಾತಾನಾಡಿರುವುದು. ನಾನು ಕನ್ನಡದವಳು. ನನಗೆ ತೆಲುಗು ಒಂದು ವರ್ಡ್ ಬರಲ್ಲ. ನಾನು ಮೂಲತಃ ಕೋಲಾರ, ಚಿಕ್ಕಬಳ್ಳಾಪುರದವಳು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಆಂಧ್ರ ಪ್ರದೇಶದ ಗಡಿಭಾಗದಲ್ಲಿ ಇರುವುದರ ಕಾರಣ ಅಲ್ಲಿ ತೆಲುಗಿನವರು ಇದ್ದಾರೆ. ಹಾಗಂತ ನಾನು ತೆಲುಗಿನವಳಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

    ಶ್ರೀಕಂಠೇಗೌಡ ಸುಮಲತಾ ಬಗ್ಗೆ ಹೇಳಿಕೆ ಕೊಟ್ಟ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ನಾನು ಮಾತ್ರ ಕನ್ನಡದವಳು. ನನಗೂ ತೆಲುಗಿಗೂ ಸಂಬಂಧ ಇಲ್ಲ. ಅಲ್ಲಿ ಭಾಷೆ ಮಾತಾನಾಡಬಹುದು. ಕುಮಾರಸ್ವಾಮಿ ಸಿನಿಮಾ ವಿಚಾರದ ಬಗ್ಗೆ ಮಾತಾನಾಡುವಾಗ ಹೇಳಿರಬಹುದು. ಇದಕ್ಕೆ ರಾಜಕೀಯ ಬೆರೆಸಬೇಡಿ ಎಂದು ಅನಿತಾ ಕುಮಾರಸ್ವಾಮಿ ಅವರು ಹೇಳಿದ್ದಾರೆ.

    ಯಡಿಯೂರಪ್ಪ ಅವರು ಮೂರು ನಾಲ್ಕು ದಿನ ಸಿಎಂ ಆಗಿ ಕುರ್ಚಿ ಕೈತಪ್ಪಿ ಹೋಗಿದ್ದರಿಂದ ತಬ್ಬಿಬ್ಬು ಆಗಿದ್ದಾರೆ. ಅದಕ್ಕೆ ಕೊನೆ ಕ್ಷಣದ ಯತ್ನ ಮಾಡುತ್ತಿದ್ದಾರೆ. ಇದೇ ವೇಳೆ ಬಜೆಟ್ ಬಗ್ಗೆ ಮಾತನಾಡಿದ ಅವರು ಬಜೆಟ್ ಚೆನ್ನಾಗಿ ಇರುತ್ತೆ. ಮಹಿಳೆ, ಯುವಕರ, ಬಡವರ ಪರ ಬಜೆಟ್ ಇರಲಿ ಎಂದು ಸಿಎಂಗೆ ಸಲಹೆ ಕೊಟ್ಟಿದ್ದೇನೆ ಎಂದು ನಗುತ್ತಾ ಅನಿತಾ ಅವರು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಸಕಿ ಅನಿತಾ ಕುಮಾರಸ್ವಾಮಿಗೆ ಛತ್ರಿ ಸೇವೆ ನೀಡಿದ ಶಾಲಾ ಸಿಬ್ಬಂದಿ

    ಶಾಸಕಿ ಅನಿತಾ ಕುಮಾರಸ್ವಾಮಿಗೆ ಛತ್ರಿ ಸೇವೆ ನೀಡಿದ ಶಾಲಾ ಸಿಬ್ಬಂದಿ

    ರಾಮನಗರ: ನಗರದ ಖಾಸಗಿ ಶಾಲೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕಿ ಅನಿತಾ ಕುಮಾರಸ್ವಾಮಿಯವರಿಗೆ ಸಿಬ್ಬಂದಿ ಛತ್ರಿ ಸೇವೆ ನೀಡಿದ್ದಾರೆ.

    ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ನೂತನವಾಗಿ ಆಯ್ಕೆಯಾಗಿ ಬಂದ ಅನಿತಾ ಕುಮಾರಸ್ವಾಮಿಯವರು ಬಿಸಿಲಿಗೆ ಅಂಜಿ, ಸಿಬ್ಬಂದಿಯಿಂದ ಛತ್ರಿ ಸೇವೆ ಪಡೆದುಕೊಂಡಿದ್ದಾರೆ. ಅನಿತಾರವರು ನಗರದ ಖಾಸಗಿ ಶಾಲೆಯ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮ ಶಾಲಾ ಆವರಣದಲ್ಲೇ ನಡೆಯುತ್ತಿದ್ದರಿಂದ ಬಿಸಿಲ ಝಳ ನೇರವಾಗಿ ಅವರನ್ನು ಕುಟುಕುತ್ತಿತ್ತು.

    ಈ ವೇಳೆ ಇದನ್ನು ಗಮನಿಸಿದ ಶಾಲಾ ಆಡಳಿತ ಸಿಬ್ಬಂದಿ ಮೊದಲು ತಾವೇ ಛತ್ರಿ ಹಿಡಿದಿದ್ದರು, ಬಳಿಕ ಅನಿತಾರವರ ಗನ್ ಮ್ಯಾನ್ ಛತ್ರಿ ಹಿಡಿದು ಕಾರ್ಯಕ್ರಮ ಮುಗಿಯುವವರೆಗೂ ಬಿಸಿಲಿನಿಂದ ರಕ್ಷಿಸಿದ್ದಾರೆ. ನಂತರ ಅನಿತಾರವರು ಭಾಷಣ ಮಾಡುವ ವೇಳೆಯು ಸಿಬ್ಬಂದಿ ಛತ್ರಿ ಹಿಡಿದೇ ನಿಂತಿದ್ದರು. ವಿಪರ್ಯಾಸವೆಂದರೇ ಮಕ್ಕಳು ಹಾಗೂ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಎಲ್ಲರೂ ಸುಡು ಬಿಸಿಲಿನಲ್ಲೇ ಕುಳಿತಿದ್ದರೇ, ಶಾಸಕರು ಮಾತ್ರ ತಮ್ಮ ಸಿಬ್ಬಂದಿಯಿಂದ ಛತ್ರಿ ಸೇವೆ ಪಡೆದುಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತಿ ಕ್ಷೇತ್ರದಲ್ಲಿನ ಕಾಮಗಾರಿಗಳಿಗೆ ಪತ್ನಿ ಅನಿತಾ ಕುಮಾರಸ್ವಾಮಿ ಚಾಲನೆ!

    ಪತಿ ಕ್ಷೇತ್ರದಲ್ಲಿನ ಕಾಮಗಾರಿಗಳಿಗೆ ಪತ್ನಿ ಅನಿತಾ ಕುಮಾರಸ್ವಾಮಿ ಚಾಲನೆ!

    ರಾಮನಗರ: ಸಿಎಂ ಕುಮಾರಸ್ವಾಮಿ ಅವರು ತಮ್ಮ ಸ್ವಕ್ಷೇತ್ರ ಚನ್ನಪಟ್ಟಣದತ್ತ ಮುಖ ಮಾಡುವುದು ಕಡಿಮೆಯಾಗಿರುವ ಬೆನ್ನಲ್ಲೇ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಪತಿ ಕ್ಷೇತ್ರದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.

    ಸಿಎಂ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿದ್ದು ರಾಮನಗರ ಶಾಸಕಿಯಾಗಿ ಪತ್ನಿ ಅನಿತಾ ಕುಮಾರಸ್ವಾಮಿ ಆಯ್ಕೆ ಆಗಿದ್ದಾರೆ. ಭಾನುವಾರ ರಾಮನಗರ ಕ್ಷೇತ್ರದ ಹಲವೆಡೆ ವಿವಿಧ ಉದ್ಘಾಟನೆ ಕಾರ್ಯಕ್ರಮವಿತ್ತು. ತಮ್ಮ ಕ್ಷೇತ್ರದಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅವರು ಬಳಿಕ ನೇರವಾಗಿ ಚನ್ನಪಟ್ಟಣಕ್ಕೆ ತೆರಳಿದರು. ಅಲ್ಲದೇ ಚನ್ನಪಟ್ಟಣ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ.

    ಸಿಎಂ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕೃತಜ್ಞತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಿಟ್ಟರೆ ಸಿಎಂ ಕುಮಾರಸ್ವಾಮಿ ಬರುತ್ತಿಲ್ಲ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ ಕುಮಾರಸ್ವಾಮಿ ಬದಲು ಇದೀಗ ಅವರ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.

    ಕಾರ್ಯಕ್ರಮಕ್ಕೆ ಮಾಧ್ಯಮಗಳನ್ನು ದೂರವಿಟ್ಟು ಚನ್ನಪಟ್ಟಣದ ಅಂಬೇಡ್ಕರ್ ಭವನದ ಸುಮಾರು 2.5 ಕೋಟಿ ವೆಚ್ಚದ ಉಳಿದ ಕಾಮಗಾರಿ, ಹಾರೋಕೊಪ್ಪ ಗ್ರಾಮದಲ್ಲಿ ಒಂದು ಕೋಟಿ ವೆಚ್ಚದ ಸುವರ್ಣ ಗ್ರಾಮ ಯೋಜನೆಗೆ ಚಾಲನೆ ನೀಡಿದರು. ಇದರ ಜೊತೆಗೆ ಮಾರ್ಚನಹಳ್ಳಿ ಗ್ರಾಮದಲ್ಲಿ ಬಮೂಲ್ ವತಿಯಿಂದ ಹಮ್ಮಿಕೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮತ್ತು ಕ್ಯಾನ್ ವಿತರಣೆಯನ್ನು ಮಾಡಿದ್ದಾರೆ. ಪತಿಯ ಕ್ಷೇತ್ರದಲ್ಲಿ ಪತ್ನಿ ಶಂಕುಸ್ಥಾಪನೆ ನಡೆಸಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಈಗ ಚರ್ಚೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 3 ದಿನ ಪಶ್ಚಿಮ ಘಟ್ಟದಲ್ಲಿ ಎಚ್‍ಡಿಕೆ ವಿಶ್ರಾಂತಿ

    3 ದಿನ ಪಶ್ಚಿಮ ಘಟ್ಟದಲ್ಲಿ ಎಚ್‍ಡಿಕೆ ವಿಶ್ರಾಂತಿ

    ಬೆಂಗಳೂರು: ರಾಜಕೀಯ ಜಂಜಾಟದಿಂದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೊಂಚ ಬಿಡುವು ಪಡೆದುಕೊಂಡಿದ್ದು, ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.

    ಅರಣ್ಯ ಪ್ರದೇಶಕ್ಕೆ ತೆರಳಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸಿಎಂ ಅವರು 3 ದಿನ ವಿಶ್ರಾಂತಿಗೆ ತೆರಳಿದ್ದಾರೆ. ಪಶ್ಚಿಮ ಘಟ್ಟ ಅರಣ್ಯ ಪ್ರದೇಶದ ವಿಶ್ರಾಂತಿ ಗೃಹವೊಂದರಲ್ಲಿ 3 ದಿನ ವಾಸ್ತವ್ಯ ಹೂಡಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿಯವರು ತಮ್ಮ ಪತ್ನಿ ಹಾಗೂ ಪುತ್ರ ನಿಖಿಲ್ ಜೊತೆ ಅಲ್ಲಿಗೆ ತೆರಳಿದ್ದಾರೆ. ವಿಶ್ರಾಂತಿ ಪಡೆದ ಬಳಿಕ ಅಂದರೆ ನವೆಂಬರ್ 11 ರ ಸಂಜೆ ರಾಜಧಾನಿಗೆ ವಾಪಸ್ಸಾಗಲಿದ್ದಾರೆ.

    ಅಕ್ಟೋಬರ್ ತಿಂಗಳಲ್ಲಿ ಎರೋಟಿಕ್ ವಾಲ್ವ್ ಅಳವಡಿಕೆ ಹಿನ್ನೆಲೆಯಲ್ಲಿ ಅಪೋಲೋ ಆಸ್ಪತ್ರೆಗೆ ದಾಖಲಾಗಿ, ಡಿಸ್ಚಾರ್ಜ್ ಆಗಿದ್ದರು. ಎಚ್‍ಡಿ ಕುಮಾರಸ್ವಾಮಿ ಹೃದಯ ಶಸ್ತ್ರ ಚಿಕಿತ್ಸೆ ಸಂಬಂಧ ಸೆಪ್ಟೆಂಬರ್ 23 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಡಾ. ಸತ್ಯಕೀ ಹಾಗೂ ಡಾ.ಮಂಜುನಾಥ್ ಅವರ ನೇತೃತ್ವದಲ್ಲಿ ಆಪರೇಷನ್ ನಡೆದಿತ್ತು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಎಚ್‍ಡಿಕೆ ಗುಣಮುಖರಾಗಲೆಂದು ದೇವರ ಮೊರೆ ಹೋಗಿದ್ದ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ದೇವಾಲಯ, ಚರ್ಚ್ ಹಾಗೂ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಫಲಿತಾಂಶಕ್ಕೂ ಮೊದಲೇ ಗೆದ್ದ ಅನಿತಾ ಕುಮಾರಸ್ವಾಮಿ..!

    ಫಲಿತಾಂಶಕ್ಕೂ ಮೊದಲೇ ಗೆದ್ದ ಅನಿತಾ ಕುಮಾರಸ್ವಾಮಿ..!

    ರಾಮನಗರ: ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಮತ್ತು ಅನಿವಾರ್ಯವಾಗಿದ್ದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಇನ್ನಷ್ಟೇ ಹೊರಬೀಳಲಿದ್ದು, ಈ ಮೊದಲೇ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಗೆದ್ದಿದ್ದಾರೆ.

    ಹೌದು. ನಗರದಲ್ಲಿ ಅನಿತಾ ಕುಮಾರಸ್ವಾಮಿ ನೂತನ ಶಾಸಕಿ ಅಂತಾ ಬ್ಯಾನರ್ ಗಳು ರಾರಾಜಿಸ್ತಿವೆ. ಕಾರ್ಯಕರ್ತರು ಮತ ಎಣಿಕೆಗೂ ಮುನ್ನವೇ ಅನಿತಾ ಕುಮಾರಸ್ವಾಮಿ ಅವರು ರಾಮನಗರದ ನೂತನ ಶಾಸಕಿ ಅಂತಾ ಬ್ಯಾನರ್ ಹಾಕಿದ್ದಾರೆ.

    ಬೆಂಗಳೂರು ಟು ರಾಮನಗರ ರಸ್ತೆಯಲ್ಲಿ ಈ ಬ್ಯಾನರ್ ಗಳು ರಾರಾಜಿಸ್ತಿವೆ. ರಾಮನಗರ ನೂತನ ಶಾಸಕಿಯಾಗಿ ಆಯ್ಕೆಯಾಗಿರುವ ಅನಿತಾ ಕುಮಾರಸ್ವಾಮಿಗೆ ಅಭಿನಂದನೆಗಳು ಅಂತ ಬ್ಯಾನರ್ ನಲ್ಲಿ ಶುಭಾಶಯ ಕೋರಿದ್ದಾರೆ. ಈ ಮೂಲಕ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿಯೇ ಗೆಲ್ಲೋದು ಅನ್ನೋ ವಿಶ್ವಾಸದಲ್ಲಿ ಕಾಯಕರ್ತರು ಈ ಬ್ಯಾನರ್ ಹಾಕಿದ್ದಾರೆ ಎನ್ನಲಾಗುತ್ತಿದೆ.

    ರಾಮನಗರದಲ್ಲಿ ಉಪ ಸಮರ ರಂಗೇರುವ ಮುನ್ನವೇ ಬಿಜೆಪಿ ಅಭ್ಯರ್ಥಿ ಶಸ್ತ್ರತ್ಯಾಗ ಮಾಡಿದ್ರೆ, ಕಾಂಗ್ರೆಸ್‍ನಿಂದ ವಲಸೆ ಬಂದ ಮುಖಂಡನನ್ನೇ ಅಭ್ಯರ್ಥಿಯಾಗಿ ನಿಲ್ಲಿಸಿ ಟಾಂಗ್ ಕೊಟ್ಟಿದ್ದೇವೆ ಅಂತ ಬೀಗುತ್ತಿದ್ದ ಯಡಿಯೂರಪ್ಪ-ಯೋಗೇಶ್ವರ್ ದಂಡಿಗೆ ಮತದಾನಕ್ಕೆ ಎರಡು ದಿನಗಳ ಹಿಂದೆ ಗರ್ವಭಂಗ ಆಯ್ತು. ಡಿಕೆಶಿ ಬ್ರದರ್ಸ್ ಆಡಿದ ಕಡೇ ಕ್ಷಣದ ಆಟದಲ್ಲಿ ಎದುರಾಳಿಯೇ ಇಲ್ಲದೇ ರಾಮನಗರದಲ್ಲಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿಯವ್ರದ್ದೇ ಆಟವಾಗಿ ಮಾರ್ಪಟ್ಟಿತ್ತು. ಪತಿ ಖಾಲಿ ಮಾಡಿದ್ದ ಕ್ಷೇತ್ರಕ್ಕೆ ಪತ್ನಿಯೇ ಅಧಿಪತಿ ಆಗ್ತಾರಾ ಅನ್ನೋದಕ್ಕೆ ಕೆಲವೇ ಹೊತ್ತಲ್ಲಿ ಉತ್ತರ ಸಿಗಲಿದೆ.

    ರಾಮಗರದಲ್ಲಿ ಜೆಡಿಎಸ್ ನಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದ್ರೆ ಬಿಜೆಪಿಯಿಂದ ಎಲ್ ಚಂದ್ರಶೇಖರ್ ಅವರು ಅಭ್ಯರ್ಥಿಯಾಗಿದ್ದರು. ಆದ್ರೆ ಚಂದ್ರಶೇಖರ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ನಾಡಿನ ಜನತೆ, ಪತಿಗಾಗಿ ಅನಿತಾ ಕುಮಾರಸ್ವಾಮಿ ಹಾಸನಾಂಬೆಯಲ್ಲಿ ವಿಶೇಷ ಪ್ರಾರ್ಥನೆ

    ನಾಡಿನ ಜನತೆ, ಪತಿಗಾಗಿ ಅನಿತಾ ಕುಮಾರಸ್ವಾಮಿ ಹಾಸನಾಂಬೆಯಲ್ಲಿ ವಿಶೇಷ ಪ್ರಾರ್ಥನೆ

    ಹಾಸನ: ನಾಡಿನ ಜನರು ಸುಖ ಶಾಂತಿಯಿಂದ ಇರಬೇಕು ಜೊತೆಗೆ ಪತಿ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಪೂರ್ಣಗೊಳಿಸಲು ಅನುಗ್ರಹ ನೀಡುವಂತೆ ಅನಿತಾ ಕುಮಾರಸ್ವಾಮಿ ಪ್ರಾರ್ಥಿಸಿದ್ದಾರೆ.

    ಹಾಸನದ ಅಧಿದೇವತೆ ಹಾಸನಾಂಬೆ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ದೇವರ ಮೇಲೆ ಅಪಾರ ನಂಬಿಕೆ ಇದೆ. ದೇವರ ಆಶೀರ್ವಾದದಿಂದ ಕುಮಾರಸ್ವಾಮಿ ಅವರಿಗೆ ಸಿಎಂ ಸ್ಥಾನ ಸಿಕ್ಕಿದೆ. ಚುನಾವಣೆ ನಂತರ ನಮಗೆ ಸಿಎಂ ಸ್ಥಾನ ಸಿಗಲಿದೆ ಎಂದು ನಾವು ಅಂದುಕೊಂಡಿರಲಿಲ್ಲ. ಹೀಗಾಗಿ ದೇವರು ಕೊಟ್ಟ ಅಧಿಕಾರವನ್ನು ಉಳಿಸು ಎಂದು ದೇವಿಯಲ್ಲಿ ಬೇಡಿಕೊಂಡಿದ್ದೇನೆ. ಹಾಗೆಯೇ ನಾಡಿನ ಜನರು ಸುಖ ಶಾಂತಿಯಿಂದ ಇರಬೇಕು. ಜೊತೆಗೆ ರೈತರ ಸಂಕಷ್ಟವನ್ನು ನಿವಾರಿಸು ಎಂದು ದೇವಿಯಲ್ಲಿ ಕೇಳಿಕೊಂಡಿದ್ದೇನೆ ಎಂದು ಅವರು ಹೇಳಿದರು.

    ರಾಮನಗರ ಉಪ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಅವರು ಉಳಿದ ನಾಲ್ಕು ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳೇ ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಶಾಸಕಿಯಾದ ನಂತರ ಸಚಿವೆ ಸ್ಥಾನ ಸಿಗುವ ನಿರೀಕ್ಷೆ ಇದೆಯೇ ಎಂಬ ಪ್ರಶ್ನೆಗೆ, ಆ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಮುಂದೆ ನೋಡೋಣ ಎಂದಷ್ಟೇ ಹೇಳಿ ನಕ್ಕರು. ಪುತ್ರ ನಿಖಿಲ್ ಕುಮಾರಸ್ವಾಮಿ ಚುನಾವಣಾ ರಾಜಕೀಯ ಪ್ರವೇಶ ಮಾಡುವುದರ ಬಗ್ಗೆ ಮಾತನಾಡಿ, ಸದ್ಯಕ್ಕೆ ಆ ಬಗ್ಗೆ ಮನೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ಮುಂದೆ ಏನಾಗುವುದೋ ಗೊತ್ತಿಲ್ಲ. ನಾನೂ ರಾಜಕೀಯಕ್ಕೆ ಬರುತ್ತೇನೆ ಅಂದುಕೊಂಡಿರಲಿಲ್ಲ ಎನ್ನುವ ಮೂಲಕ ಮಗ ಬಂದರೂ ಬರಬಹುದು ಎಂದು ಪರೋಕ್ಷವಾಗಿ ಹೇಳಿದರು.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಎಲ್ಲಾ ಕಡೆ ಕ್ರೀಯಾಶೀಲವಾಗಿ ಓಡಾಡಿದ್ದ. ಹಾಗಾಗಿ ನಿಖಿಲ್ ರಾಜಕೀಯ ಪ್ರವೇಶ ಮಾಡಬೇಕು ಎಂಬುದು ಅನೇಕರ ಒತ್ತಾಸೆ. ಅವನು ಏನೇ ಮಾಡಿದರೂ ನನ್ನ ಆಶೀರ್ವಾದ ಇರಲಿದೆ ಎಂದು ಅಭಯ ನೀಡಿದರು.

    ಮಾಜಿ ಪ್ರಧಾನಿ ದೇವೇಗೌಡರ ಉತ್ತರಾಧಿಕಾರಿ ಪ್ರಜ್ವಲ್ ಎಂಬ ಮಾತಿದೆ ಎಂಬ ಪ್ರಶ್ನೆಗೆ ಯಾರಿಗೆ ಜನಬೆಂಬಲ, ದೇವರ ಆಶೀರ್ವಾದ ಇರುತ್ತೋ ಅವರು ಗೆಲ್ಲುತ್ತಾರೆ ಎಂದರು. ಇದೇ ವೇಳೆ ಬ್ಯಾಂಕ್ ನಿಂದ ರೈತರಿಗೆ ಆಗುತ್ತಿರುವ ತೊಂದರೆಯನ್ನು ಸಿಎಂ ಆದಷ್ಟು ಬೇಗ ಸರಿಪಡಿಸಲಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮನಗರದಲ್ಲಿ ಮುಸ್ಲಿಮರಿಂದ ಅನಿತಾ ಕುಮಾರಸ್ವಾಮಿಗೆ ಫುಲ್ ಕ್ಲಾಸ್ – ವಿಡಿಯೋ ನೋಡಿ

    ರಾಮನಗರದಲ್ಲಿ ಮುಸ್ಲಿಮರಿಂದ ಅನಿತಾ ಕುಮಾರಸ್ವಾಮಿಗೆ ಫುಲ್ ಕ್ಲಾಸ್ – ವಿಡಿಯೋ ನೋಡಿ

    ರಾಮನಗರ: ರಾಮನಗರ ಟೌನ್ ನಲ್ಲಿ ಪ್ರಚಾರದ ಸಮಯದಲ್ಲಿ ಮೈತ್ರಿ ಸರ್ಕಾರದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು ಮುಸ್ಲಿಂ ಮತದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.

    ರಾಮನಗರದ ಗೀತಾಮಂದಿರ ಬಡಾವಣೆಯ ದರ್ಗಾ ಬಳಿ ಈ ಘಟನೆ ನಡೆದಿದೆ. ಪ್ರಚಾರದ ವೇಳೆ ಮುಸ್ಲಿಮರು ಮೂಲಭೂತ ಸೌಕರ್ಯ, ರಸ್ತೆ ಮತ್ತು ಚರಂಡಿ ಅವ್ಯವಸ್ಥೆಯಿಂದ ಆಕ್ರೋಶಗೊಂಡು ಅನಿತಾ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿ ಕಿಡಿಕಾರಿದ್ದಾರೆ.

    ನಮಗೆ ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲದಂತಾಗಿದೆ. ಆದರೆ ನೀವು ಚುನಾವಣೆ ಬಂದಾಗ ಬರುತ್ತೀರಿ ಆಮೇಲೆ ಈ ಕಡೆ ಮುಖ ಕೂಡಾ ಹಾಕಲ್ಲ. ನಮ್ಮ ಪ್ರದೇಶಕ್ಕೆ ಸಮಸ್ಯೆ ನೋಡಲು ಬನ್ನಿ. ಮೊದಲು ನಮ್ಮ ಸಮಸ್ಯೆಯನ್ನು ನೀವು ಬಗೆಹರಿಸಿ. ಆಮೇಲೆ ನೀವು ವೋಟ್ ಕೇಳಿ ಎಂದು ಸಾರ್ವಜನಿಕರು ಗರಂ ಆಗಿಯೇ ಪ್ರಶ್ನೆ ಮಾಡಿದ್ದಾರೆ.

    ಸಾರ್ವಜನಿಕರ ಮಾತಿನಿಂದ ಅನಿತಾ ಕುಮಾರಸ್ವಾಮಿ ಅವರು ಇರಿಸು ಮುರಿಸಿಗೆ ಒಳಗಾಗಿ ಕೆಲಹೊತ್ತು ಏನೂ ಮಾತನಾಡದೇ ನಿಂತಿದ್ದರು. ಕಡೆಗೆ ಸ್ಥಳೀಯ ನಗರಸಭೆ ಸದಸ್ಯರಿಂದ ಸಮಾಧಾನ ಮಾಡುವ ಯತ್ನ ಮಾಡಿಸಿದ ಬಳಿಕ ಹಾಗೆ ಅನಿತಾ ಕುಮಾರಸ್ವಾಮಿ ಮುಂದೆ ಸಾಗಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv