Tag: Anitha Bhat

  • ನಟಿ ಅನಿತಾ ಭಟ್ ಸಹೋದರ ನಿಧನ

    ನಟಿ ಅನಿತಾ ಭಟ್ ಸಹೋದರ ನಿಧನ

    ಸ್ಯಾಂಡಲ್‌ವುಡ್ (Sandalwood) ನಟಿ ಅನಿತಾ ಭಟ್ (Anita Bhat) ಸಹೋದರ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಈ ಕುರಿತು ನಟಿಯೇ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಸಹೋದರನ ಸಾವಿನ ನೋವಿನ ಬಗ್ಗೆ ನಟಿ ಭಾವುಕರಾಗಿದ್ದಾರೆ. ಈ ಪೋಸ್ಟ್ ಸದ್ಯ ಸದ್ದು ಮಾಡ್ತಿದೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ದಿವ್ಯಾ ಸುರೇಶ್

    ಸೈಕೋ, ಕನ್ನೇರಿ, ಬೆಂಗಳೂರು 69 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅನಿತಾ ಭಟ್ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ನಟಿ ಟ್ವೀಟ್ ಮಾಡಿದ್ದಾರೆ.

    ನಿನ್ನೆ ನನ್ನ ಹೃದಯ ತುಂಡಾಗಿದೆ. ನನ್ನ ಸಹೋದರ ಹೃದಯ ಸ್ತಂಭನದಿಂದ (Cardiac Arrest) ನಮ್ಮನ್ನು ಅಗಲಿದ್ದಾರೆ. ನಾವು ಅನುಭವಿಸುತ್ತಿರುವ ನೋವು ಯಾವುದೇ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನಾನು ಒಪ್ಪಿಕೊಳ್ಳಬೇಕಾದ ಕಹಿ ಸತ್ಯವೆಂದರೆ ಅವನು ಎಂದಿಗೂ ಹಿಂತಿರುಗುವುದಿಲ್ಲ. ಆತನಿಗೆ ಸದ್ಗತಿ ಸಿಗುವಂತೆ ಅನುಗ್ರಹಿಸಿ. ಈಗ ನಿಮ್ಮ ಆಶೀರ್ವಾದ ಬೇಕು ಎಂದು ನಟಿ ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್‌ಗೆ ಅಭಿಮಾನಿಗಳು, ಆಪ್ತರು, ಚಿತ್ರರಂಗದ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

  • ಹರ್ಷ ಸಾವಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಕಲಾವಿದರ ಆಕ್ರೋಶ

    ಹರ್ಷ ಸಾವಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಕಲಾವಿದರ ಆಕ್ರೋಶ

    ಶಿವಮೊಗ್ಗದ ಹರ್ಷ ಹತ್ಯೆಗೆ ಸ್ಯಾಂಡಲ್ ವುಡ್ ಕೂಡ ದಿಗ್ಭ್ರಮೆ ವ್ಯಕ್ತಪಡಿಸಿದೆ. ಆ ಹುಡುಗನ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಸರಕಾರಕ್ಕೆ ಹಲವು ಕಲಾವಿದರು ಮತ್ತು ತಂತ್ರಜ್ಞರು ಒತ್ತಾಯ ಮಾಡಿದ್ದಾರೆ. ಜಾತಿ, ಧರ್ಮ ಯಾವುದೇ ಆಗಿರಲಿ, ಇಂತಹ ಹತ್ಯೆಗಳನ್ನು ಯಾರೂ ಸಹಿಸಬಾರದು ಎನ್ನುವ ಸಂದೇಶವನ್ನೂ ಸಾರಿದೆ.  ಇದನ್ನೂ ಓದಿ : ಸ್ಮಾರಕವಾಗಲಿದೆ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಮನೆ

    ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಹರ್ಷ ಹತ್ಯೆಯನ್ನು ಖಂಡಿಸಿದ್ದು ಈ ಹುಡುಗನ ಕುಟುಂಬಕ್ಕೆ 25 ಸಾವಿರ ರೂಪಾಯಿ ನೀಡಿದ್ದಾರೆ. ಸಿನಿಮಾ ಮಾಡಿಕೊಂಡು ಸಾಲದಲ್ಲಿದ್ದೇನೆ. ಇಲ್ಲದಿದ್ದರೆ ಮತ್ತಷ್ಟು ಸಹಾಯವನ್ನು ಆ ಕುಟುಂಬಕ್ಕೆ ಮಾಡುತ್ತಿದ್ದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಬಡ್ಡೀಸ್ ಚಿತ್ರಕ್ಕೆ ಯುಎಸ್ಎ ಕ್ಯಾಮೆರಾವುಮೆನ್ : ಇವರು ಎಮ್ಮಿ ಅವಾರ್ಡ್ ನಾಮಿನೇಟರ್

    ಹತ್ಯಗೀಡಾದ ಹರ್ಷ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ನಟಿ ಅನಿತಾ ಭಟ್ ಒತ್ತಾಯಿಸಿದ್ದಾರೆ. ‘ಇವತ್ತು ಹರ್ಷ, ನಾಳೆ ನಾವುಗಳು. ಎಂತಹ ದುರಂತ. ಯಾವ ತಾಯಿಗೂ ಇಂತಹ ಪರಿಸ್ಥಿತಿ ಬಾರದಿರಲಿ’ ಎಂದು ಟ್ವಿಟ್ ಮಾಡಿದ್ದಾರೆ. ಇದನ್ನೂ ಓದಿ : ಸೀಮಂತ ಕಾರ್ಯಕ್ರಮದಲ್ಲಿ ನೇತ್ರದಾನ ಮಾಡಿದ ಕಾಮಿಡಿ ಕಿಲಾಡಿ ಜೋಡಿ

    ನಟಿ ಮಾಳ್ವಿಕಾ ಅವಿನಾಶ ಕೂಡ ಈ ಘಟನೆಗೆ ಪ್ರತಿಕ್ರಿಯಿಸಿದ್ದು ‘ಸದ್ಗತಿ ಪ್ರಾಪ್ತಿರಸ್ತು ಹರ್ಷ’ ಎಂದು ಕಂಬನಿ ಮಿಡಿದಿದ್ದಾರೆ. ಈ ಘಟನೆಯನ್ನು ಸರಕಾರ ಗಂಭೀರವಾಗಿ ತಗೆದುಕೊಳ್ಳಲಿದೆ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ : ನಟ ಧನ್ವೀರ್ ಮೇಲೆ ನಿಲ್ಲುತ್ತಿಲ್ಲ ದಾಳಿ : ದಾಳಿ ಹಿಂದೆ ಸ್ಟಾರ್ ನಟರ ಕೈವಾಡ?

    ಬಾಲಿವುಡ್ ಖ್ಯಾತ ನಟಿ ರವಿನಾ ಟಂಡನ್ ಕೂಡ ಈ ಹತ್ಯೆಗೆ ದಿಗ್ಭ್ರಮೆ ವ್ಯಕ್ತ ಪಡಿಸಿದ್ದು, ‘ಜಸ್ಟಿಸ್ ಟು ಹರ್ಷ’ ಎಂದು ಸೋಷಿಯಲ್ ಮೀಡಿಯಾ ಮೂಲಕ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

    ಬಾಲಿವುಡ್ ನಿರ್ಮಾಪಕ ಮನಿಶ್ ಮುಂದ್ರಾ ಸೇರಿದಂತೆ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನ ಹಲವು ಕಲಾವಿದರು ಮತ್ತು ತಂತ್ರಜ್ಞರು ಹರ್ಷ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಒತ್ತಾಯಿಸಿದ್ದಾರೆ.

     

  • ಗೋಡ್ಸೆಯ ದೇಶಪ್ರೇಮಕ್ಕೆ ಜೈ, ಬಡಪಾಯಿ ಬ್ರಾಹ್ಮಣರು ಮೂಗು ಮುಚ್ಚಿಕೊಂಡು ಕೂತಿದ್ದಾರೆ: ಅನಿತಾ ಭಟ್

    ಗೋಡ್ಸೆಯ ದೇಶಪ್ರೇಮಕ್ಕೆ ಜೈ, ಬಡಪಾಯಿ ಬ್ರಾಹ್ಮಣರು ಮೂಗು ಮುಚ್ಚಿಕೊಂಡು ಕೂತಿದ್ದಾರೆ: ಅನಿತಾ ಭಟ್

    ಬೆಂಗಳೂರು: ನಾಥೂರಾಮ್ ಗೋಡ್ಸೆ ಮತ್ತು ಬ್ರಾಹ್ಮಣರ ಬಗ್ಗೆ ಚಂದನವನದ ನಟಿ ಅನಿತಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿದ್ದು, ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಬಿಗ್‍ಬಾಸ್ ಕನ್ನಡ ಸ್ಪರ್ಧಿ ಅನಿತಾ ಭಟ್ ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಬ್ರಾಹ್ಮಣ್ಯ ಮತ್ತು ಗಾಂಧೀಜಿಯನ್ನು ಕೊಂದ ಗೋಡ್ಸೆಗೆ ಜೈ ಎಂದು ಟ್ವೀಟ್ ಮಾಡಿದ್ದಾರೆ. ಈಗ ಈ ವಿಚಾರ ಪರ, ವಿರೋಧ ಚರ್ಚೆ ಆಗುತ್ತಿದೆ.

    ಟ್ವೀಟ್‍ನಲ್ಲಿ ಏನಿದೆ?
    ಅನಿತಾ ಭಟ್ ಟ್ವೀಟ್‍ನಲ್ಲಿ, ಗಾಂಧಿಯನ್ನು ಕೊಂದು ಎಂತ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಎಂದು ಗೊತ್ತಿದ್ರೂ, ಅದನ್ನ ಮಾಡಿದ ಗೋಡ್ಸೆಯ ದೇಶಪ್ರೇಮಕ್ಕೆ ಜೈ. ದೇಶಕ್ಕಿಂತ ಏನೂ ದೊಡ್ಡದಲ್ಲ. ಇನ್ನೆಷ್ಟು ಚೂರಾಗ್ತಾ ಇತ್ತೋ ನಮ್ಮ ಭಾರತ ಎಂದು ಪೋಸ್ಟ್ ಮಾಡಿದ್ದು, ಅದಕ್ಕೆ ವೀಕ್ಷಕರು ಗೋಡ್ಸೆ ಜಿಂದಾಬಾದ್ ಎಂದು ಕಾಮೆಂಟ್ ಮಾಡಿದ್ದಾರೆ.

    ನಟಿ ಮುಂದುವರೆದು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡಿದ್ದ ಗೋಡ್ಸೆ ಅವರು ದೇಶಭಕ್ತನೇ. ಅವರನ್ನ ಭಯೋತ್ಪಾದಕ ಅಂತ ಕರೆಯೋದು ನಿಮ್ಮಗಳ ಅಜ್ಞಾನ. ಯಾರೋ ಒಬ್ಬರಿಂದ ದೇಶಕ್ಕೆ ಸ್ವಂತಂತ್ರ ಬಂದಿಲ್ಲ. ಕೋಟಿಗಟ್ಟಲೆ ವೀರರು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದಾರೆ ಅನ್ನೋದು ಅರಿತುಕೊಂಡರೆ ಸಾಕು ಎಂದು ಅನಿತಾ ಭಟ್ ಹೇಳಿದ್ದಾರೆ. ಇದನ್ನೂ ಓದಿ: ಅಫ್ಘಾನ್ ನಿರಾಶ್ರಿತರಿಗೆ ಭಾರತದ ಆಶ್ರಯ – ಏನಿದು ವೀಸಾ? ವಿಶೇಷತೆ ಏನು? 

    ಮುಂದೆ ನೆಗೆಟಿವ್ ಕಾಮೆಂಟ್ ಬರುತ್ತಿರುವುದನ್ನು ಗಮನಿಸಿದ ಅವರು, ನನ್ನ ಟ್ವಿಟ್ಟರ್, ಪೋಸ್ಟ್ ಮಾಡುವುದು ನನ್ನ ಆಯ್ಕೆ. ನನ್ನ ಅಭಿಪ್ರಾಯವನ್ನು ನಿಮ್ಮ ಕೆಟ್ಟ ಕಾಮೆಂಟ್‍ಗಳು ಬದಲಾಯಿಸುವುದಿಲ್ಲ. ಇಷ್ಟಕ್ಕೆಲ್ಲ ಹೆದರೋ ಹಾಗಿದ್ರೆ ಭೂಮಿಯಿಂದಾನೆ ಹೋಗಿ ಬಿಡ್ತಿದ್ದೆ ಇಷ್ಟೊತ್ತಿಗೆ. ಎಷ್ಟು ಬೇಕಾದ್ರೂ ಗಂಟಲು ಹರ್ಕೊಳಿ ಹೋಗಿ ಎಂದು ಗರಂ ಆಗಿ ಉತ್ತರಿಸಿದ್ದಾರೆ.

    ಬ್ರಾಹ್ಮಣರು ಮೂಗು ಮುಚ್ಚಿಕೊಂಡು ಕೂತಿದ್ದಾರೆ
    ಸೋಶಿಯಲ್ ಮೀಡಿಯಾದಲ್ಲಿ ಬ್ರಾಹ್ಮಣ್ಯದ ಕುರಿತು ಮಾತನಾಡಿದ ಅವರು, ಇವರುಗಳು ತಮ್ಮ ಪದವಿ ಮುಂದೆ ಜಾತಿ ಹೆಸರು ಹಾಕಿದ ಹಾಗೆ ನಾನೇನಾದ್ರೂ ಬ್ರಾಹ್ಮಣ ನಟಿ ಅಂತ ಹಾಕಿದ್ದೇನಾ? ಜಾತಿ ಹೆಸರು ಹೇಳಿ ಕೆಲಸ ಗಿಟ್ಟಿಸೋ ಗತಿ ಇನ್ನು ನನಗೆ ಬಂದಿಲ್ಲ. ದೇವಸ್ಥಾನದ ಪ್ರಸಾದ ತಿಂದು ಬದುಕಿದ್ರೂ ಸರಿ. ಅದಕ್ಕೆ ಬ್ರಾಹ್ಮಣ್ಯ ಅನ್ನೋ ಹೆಸರು ಯಾಕ್ರೀ? ಬೇರೆ ಜಾತಿಯವರೂ ಮಾಡ್ತಾರೆ ಅಂದ್ರೆ ಅವರವರ ಜಾತಿ ಹೆಸರು ಹಾಕಿ. ಬಡಪಾಯಿ ಬ್ರಾಹ್ಮಣರು ಮೂಗು ಮುಚ್ಕೊಂಡು ಕೂತಿದ್ದಾರೆ, ಅದಕ್ಕೆ ಬೇಕಾಬಿಟ್ಟಿ ಮಾತಾಡ್ತಾರೆ. ಅಷ್ಟೇ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್

    ಅದಕ್ಕೆ ಒಬ್ಬ ನೆಟ್ಟಿಗ, ತಾವೇ ಸರ್ವಶ್ರೇಷ್ಠರು ಅನ್ನೋ ವಾದ, ಮಡಿವಂತಿಕೆ ಆಚರಣೆಗಳು ಇದೆಯಲ್ಲ ಅದೇ ಬ್ರಾಹ್ಮಣ್ಯ. ಅದಕ್ಕೆ ಎಲ್ಲರ ವಿರೋಧ ಅಷ್ಟೇ. ಅದು ಬಿಟ್ಟರೆ ಎಲ್ಲರೂ ಒಂದೇ ಯಾರು ಸಹ ಮೇಲಿಲ್ಲ ಕೀಳಿಲ್ಲ. ಎಂದು ಕಾಮೆಂಟ್ ಮಾಡಿದ್ದಾರೆ.

    ನನ್ನ ಅಮ್ಮ ಎಷ್ಟೋ ವರ್ಷಗಳ ಹಿಂದೇನೆ ಜಾತಿ ಪದ್ದತಿಯನ್ನ ದೂರ ಇಟ್ಟಿದ್ದಾರೆ. ಒಂದು ಲಂಬಾಣಿ ಹುಡುಗಿ ನಮ್ಮ ಮನೆಯಲ್ಲಿ ಓದೋಕೆ ಅಂತ 4 ವರ್ಷ ಇದ್ದಳು. ನಮ್ಮನೇ ದೇವರ ಪೂಜೆ ಕೂಡ ಮಾಡಿದ್ದಾಳೆ. ನನಗೆ ಇದರಲ್ಲಿ ವಿಶೇಷತೆ ಏನು ಕಂಡಿಲ್ಲ. ಸಂದರ್ಭ ಬಂದಿದ್ದರಿಂದ ಹೇಳಿದೆ ಅಷ್ಟೇ ಎಂದು ಅದಕ್ಕೆ ಉತ್ತರಿಸಿದ್ದಾರೆ.

    ಅನಿತಾ ಭಟ್, 2008ರಲ್ಲಿ ಬಿಡುಗಡೆ ಆದ ‘ಸೈಕೊ’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟದ್ದಾರೆ. ನಂತರ ‘ಡರ್ಟಿ ಪಿಕ್ಚರ್; ಸಿಲ್ಕ್ ಸಖತ್ ಹಾಟ್ ಮಗಾ’, ‘ದೊಡ್ಮನೆ ಹುಡ್ಗಾ’, ‘ಟಗರು'(ಡಾಲಿ ಗರ್ಲ್‍ಫ್ರೆಂಡ್ ಪಾತ್ರ), ‘ಹೊಸ ಕ್ಲೈಮ್ಯಾಕ್ಸ್’, ‘ಡಿಎನ್‍ಎ’, ‘ಕನ್ನೇರಿ’, ‘ಕಲಿವೀರ’, ‘ಬೆಂಗಳೂರು-69’, ‘ಬಳೆಪೇಟೆ’, ‘ಜೂಟಾಟ’, ತೆಲುಗಿನ ‘ಕೃಷ್ಣ ಲಂಕಾ’ ಸಿನಿಮಾ ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಬಳೆಪೇಟೆ ಟೀಸರ್ ಸೌಂಡ್ ಬಲು ಜೋರು

    ಬಳೆಪೇಟೆ ಟೀಸರ್ ಸೌಂಡ್ ಬಲು ಜೋರು

    ‘ಬಳೆಪೇಟೆ’ ಚಿತ್ರದ ಟೀಸರ್ ಬಿಡುಗಡೆಯಾಗಿ ಸ್ಯಾಂಡಲ್​ವುಡ್​​ ಅಂಗಳದಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿದೆ. ಟೀಸರ್ ತುಣುಕು ಇಂಟ್ರಸ್ಟಿಂಗ್ ಆಗಿ ಮೂಡಿ ಬಂದಿದ್ದು ಚಿತ್ರತಂಡದ ಕುಸುರಿ ಕೆಲಸ ಸಿನಿ ಪ್ರಿಯರ ಮನಸೆಳೆದಿದೆ.

    ಕನ್ನಡದ ಹೊಸ ಮುಖಗಳು, ಕ್ರಿಯಾಶೀಲ ಪ್ರತಿಭೆಗಳು ಸೇರಿ ತುಂಬಾ ಕಾಳಜಿ, ಪ್ರೀತಿಯಿಂದ ತೆಗೆದಿರುವ ಸಿನಿಮಾ ‘ಬಳೆಪೇಟೆ’. ‘ಬಳೆಪೇಟೆ’ ಬೆಂಗಳೂರಿನಲ್ಲಿ ಕೇಳಿ ಬರುವ ಏರಿಯಾವೊಂದರ ಹೆಸರು. ಇದೀಗ ಈ ಹೆಸರು ಸಿನಿಮಾ ಟೈಟಲ್​ ಆಗಿ ಬಿಡುಗಡೆಗೂ ಸಜ್ಜಾಗಿದೆ.

    ಟೀಸರ್ ಝಲಕ್ ಮೂಲಕ ಎಲ್ಲರ ಗಮನ ತಮ್ಮ ಸಿನಿಮಾದತ್ತ ಸೆಳೆದಿರುವ ಈ ಚಿತ್ರದ ಸೂತ್ರದಾರ ರಿಷಿಕೇಶ್. ಇದು ರಿಷಿಕೇಶ್ ಚೊಚ್ಚಲ ಚಿತ್ರ ಎನ್ನುವ ಮಾತೇ ಬಾರದಂತೆ ಟೀಸರ್ ತುಣುಕು ಮೂಡಿಬಂದಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಮಾತ್ರವಲ್ಲದೆ ಕ್ಯಾಮೆರಾ ನಿರ್ದೇಶಕನಾಗಿ, ಎಡಿಟರ್, ಕಲರಿಸ್ಟ್ ಆಗಿಯೂ ರಿಷಿಕೇಶ್ ಬಹುಮುಖ ಪ್ರತಿಭೆಯನ್ನ ಇಲ್ಲಿ ಪ್ರದರ್ಶಿಸಿದ್ದಾರೆ.

    ಚಿತ್ರತಂಡ ಮೊದಲೇ ಹೇಳಿದಂತೆ ಇದೊಂದು ಸಿನಿಮಾವಲ್ಲ ಅದಕ್ಕಿಂತ ಹೆಚ್ಚು ಎನ್ನುವ ಮಾತಿನಂತೆ ಟೀಸರ್ ಮೂಡಿಬಂದಿದ್ದು ಟೀಸರ್ ನೋಡಿದವರು ವಾವ್ ಎನ್ನುತ್ತಿದ್ದಾರೆ. ಕರೊನಾ ಲಾಕ್​ಡೌನ್ ಸಮಯದಲ್ಲೂ ಜಗ್ಗದೇ ಬಳೆಪೇಟೆಯಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮಾಡಿ ಸೈ ಎನಿಸಿಕೊಂಡು ಸಿನಿಮಾ ಪ್ರೀತಿ ಮೆರೆದಿದೆ ಚಿತ್ರತಂಡ.

    ಸೈಕೋ ಸಿನಿಮಾ ಖ್ಯಾತಿಯ ಗ್ಲಾಮರ್ ಗೊಂಬೆ ಅನಿತಾ ಭಟ್, ಯುವ ನಟ ಪ್ರಮೋದ್ ಬೋಪಣ್ಣ ಬಳೆಪೇಟೆ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮಯೂರ್ ಪಟೇಲ್, ಉಮೇಶ್ ಬಣಕಾರ್, ಅಭಿಷೇಕ್ ಮಠದ್, ಚೇತನ್, ಲೋಕೇಶ್ ರೇವಣ್ಣ, ಅಪೂರ್ವ, ಉಗ್ರಂ ರವಿ ಸೇರಿದಂತೆ ಹಲವು ನುರಿತ ಕಲಾವಿದರ ಬಳಗ ‘ಬಳೆಪೇಟೆ’ ಅಂಗಳದಲ್ಲಿ ಬಣ್ಣಹಚ್ಚಿದ್ದಾರೆ.

    ಆರ್ ವಿ ಎಸ್ ಪ್ರೊಡಕ್ಷನ್ಸ್ ಬ್ಯಾನರ್ ಮುಖಾಂತರ ಬನಾನ ಶಿವರಾಂ ಬಳೆಪೇಟೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಉತ್ತಮ್, ಲೋಹಿತ್ ಸಂಗೀತ ನಿರ್ದೇಶನ ಬಳೆಪೇಟೆ ಚಿತ್ರಕ್ಕಿದೆ.