Tag: Anita Bhatt

  • ‘ಸಮುದ್ರಂ’ ಚಿತ್ರದ ವಿವಾದ : ನಟಿ ಅನಿತಾ ಭಟ್ ಪ್ರತಿಕ್ರಿಯೆ ಏನು?

    ‘ಸಮುದ್ರಂ’ ಚಿತ್ರದ ವಿವಾದ : ನಟಿ ಅನಿತಾ ಭಟ್ ಪ್ರತಿಕ್ರಿಯೆ ಏನು?

    ಮ್ಮ ನಿರ್ಮಾಣದ ‘ಸಮುದ್ರಂ’ (Samudram) ಸಿನಿಮಾದ ಹಾರ್ಡ್ ಡಿಸ್ಕ್ ನೀಡಿಲ್ಲವೆಂದು ಮತ್ತು ಹಾಡ್ಸ್ ಡಿಸ್ಕ್ ಕೊಡುವಂತೆ ಕೇಳಿದರೆ ಚಿತ್ರದ ಸಿನಿಮಾಟೋಗ್ರಾಫರ್ ರಿಶಿಕೇಷ್ (Rishikesh) ಎನ್ನುವವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕರು ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪ್ರದೇಶದ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಈ ಕುರಿತಂತೆ ಸಿನಿಮಾದ ನಾಯಕಿ ಮತ್ತು ಚಿತ್ರಕ್ಕೆ ಸಹಯೋಗ ನೀಡಿರುವ ಅನಿತಾ ಭಟ್ (Anita Bhatt) ಪ್ರತಿಕ್ರಿಯೆ ನೀಡಿದ್ದಾರೆ.

    ‘ಈ ಸಿನಿಮಾ ಶುರು ಮಾಡಿದ್ದು ನಾವೇ. ನಾನೇ ಈ ಸಿನಿಮಾವನ್ನು ಮೊದಲು ನಿರ್ಮಾಣ ಮಾಡಿದ್ದು. ಆನಂತರ ಹಣಕಾಸಿನ ತೊಂದರೆ ಆದ ಕಾರಣಕ್ಕಾಗಿ ನಿರ್ದೇಶಕ ರಾಘವ ಮಹರ್ಷಿ ಅವರು ರಾಜಲಕ್ಷ್ಮಿ ಅವರನ್ನು ಕರೆತಂದರು. ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ಆದರೆ, ರಾಜಲಕ್ಷ್ಮಿ (Rajalakshmi) ನಿರ್ಮಾಪಕರು ತಾವೊಬ್ಬರೇ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದರು. ಅದಕ್ಕೂ ಒಪ್ಪಿ, ನಾವು ಈವರೆಗೂ ಮಾಡಿರುವ ಖರ್ಚನ್ನು ಕೊಡುವಂತೆ ಕೇಳಿದಾಗ ಒಪ್ಪಿಕೊಂಡರು. ಈವರೆಗೂ ಅವರು ಹಣ ಕೊಟ್ಟಿಲ್ಲ’ ಎನ್ನುತ್ತಾರೆ ಅನಿತಾ ಭಟ್.

    ಮುಂದುವರೆದು ಮಾತನಾಡಿದ ಅನಿತಾ, ‘ಟೆಕ್ನಿಷನ್ ಗೆ ಕೊಡಬೇಕಾದ ಹಣ ಇನ್ನೂ ಬಾಕಿ ಉಳಿಸಿಕೊಂಡಿದ್ದಾರೆ. ಸಿನಿಮಾಟೋಗ್ರಾಫರ್ ರಿಶಿಕೇಷ ಅವರಿಗೂ ದುಡ್ಡು ಕೊಡಬೇಕು. ಹಾಗಾಗಿ ಇಬ್ಬರ ಮಧ್ಯ ಮನಸ್ತಾಪವಾಗಿದೆ. ಈ ದೂರು ಕೊಡುವುದು ಇವತ್ತಿನದ್ದೇನೂ ಅಲ್ಲ. ಈ ಹಿಂದೆ ಎರಡ್ಮೂರು ಬಾರಿ ಹೀಗೆ ಮಾಡಿ ತೊಂದರೆ ಕೊಟ್ಟಿದ್ದಾರೆ. ಇದರಲ್ಲಿ ರಿಶಿಕೇಷ್ ಅವರದ್ದು ಯಾವುದೇ ತಪ್ಪಿಲ್ಲ’ ಅಂತಾರೆ ಅನಿತಾ ಭಟ್.

    ‘ರಾಜಲಕ್ಷ್ಮಿ ಅವರ ವಿರುದ್ಧ ನಾವೂ ಕೂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದೆವು. ಸಿನಿಮಾ ರಿಲೀಸ್ ಆದ ನಂತರ ಹಣ ಕೊಡುವುದಾಗಿ ಅವರು ಹೇಳಿದರು. ಆದರೆ, ಈಗ ಅವರ ವರ್ತನೆಯೇ ಬೇರೆಯಾಗಿದೆ. ಆ ಸಿನಿಮಾಗಾಗಿ ಈಗಲೂ ಎಲ್ಲರೂ ಕೆಲಸ ಮಾಡುತ್ತಾರೆ. ಆದರೆ, ಕೊಡಬೇಕಾದ ಹಣವನ್ನು ಕೊಡಬೇಕು’ ಎನ್ನುವುದು ಅನಿತಾ ಭಟ್ ಮಾತು.

    ‘ಸಿನಿಮಾಗಳಿಗೆ ಸುಪ್ರೀಂ ಅಂದರೆ ಅದು ನಿರ್ದೇಶಕರು. ಸಿನಿಮಾಟೋಗ್ರಾಫರ್ ಹೇಗೆ ಹಾರ್ಡ್ ಡಿಸ್ಕ್ ಇಟ್ಟುಕೊಳ್ಳಲು ಸಾಧ್ಯ? ಹಣಕಾಸಿನ ವಿಷಯದಲ್ಲಿ ಮನಸ್ತಾಪ ಆಗಿರುವುದು ನಿಜ. ಅದನ್ನು ಹೇಳದೇ ಸುಖಾಸುಮ್ಮನೆ ಯಾರಿಗೂ ತೊಂದರೆ ಕೊಡಬಾರದು. ಆ ಸಿನಿಮಾದಲ್ಲಿ ನಾನ ನಟಿಸಿದ್ದೇನೆ. ನಿರ್ಮಾಪಕಿಯೂ ಆಗಿದ್ದೇನೆ. ಆ ಸಿನಿಮಾದ ಬಿಡುಗಡೆಗೆ ಬೇಕಾದ ಎಲ್ಲ ಸಹಾಯವನ್ನು ಈಗಲೂ ನಾನು ಮಾಡಲು ಸಿದ್ದಳಿದ್ದೇನೆ. ಆದರೆ, ತಂಡವನ್ನು ಒಡೆಯುವುದು ಸರಿಯಾದದ್ದು ಅಲ್ಲ’ ಅಂತಾರೆ ಅನಿತಾ ಭಟ್.ಇದನ್ನೂ ಓದಿ:ವಿಜಯ್ ದೇವರಕೊಂಡ ಬಳಿ ‘ಸಮಂತಾ ಎಲ್ಲಿ’ ಎಂದು ಪ್ರಶ್ನಿಸಿದ ನಾಗಾರ್ಜುನ

    ಏನಿದು ವಿವಾದ?

    ಅನಿತಾ ಭಟ್ ಮತ್ತು ಶಿವಧ್ವಜ ಕಾಂಬಿನೇಷನ್ ‘ಸಮುದ್ರಂ’ ಸಿನಿಮಾದ ಸಿನಿಮಾಟೋಗ್ರಾಫರ್ ರಿಶಿಕೇಷ್ ವಿರುದ್ಧ ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿನಿಮಾಟೋಗ್ರಫರ್ ರಿಶಿಕೇಷ್ ಸಮುದ್ರಂ ಚಿತ್ರದ ಹಾರ್ಡ್ ಡಿಸ್ಕ್ ಕೊಡದೆ ನಿರ್ಮಾಪಕರಿಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಚಿತ್ರತಂಡ ದೂರು ನೀಡಿದೆ.

    ರಾಜಲಕ್ಷ್ಮಿ ಸಿನಿ ಕ್ರಿಯೇಷನ್ ನಿರ್ಮಾಣ  ಮತ್ತು ಅನಿತಾ ಭಟ್ ಕ್ರಿಯೇಷನ್ ಹಾಗೂ ಡಾಟ್ ಟಾಕೀಸ್ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಚಿತ್ರದ ಸಂಗೀತ, ಡಬ್ಬಿಂಗ್, ರೀ ರೆಕಾರ್ಡಿಂಗ್, ಎಡಿಟಿಂಗ್ ಸೇರಿ ಡಿಐ ಜವಾಬ್ದಾರಿಯನ್ನು ರಿಶಿಕೇಷ್ ವಹಿಸಿಕೊಂಡಿದ್ದರಂತೆ. ಇದಕ್ಕೆ ಹಂತಹಂತವಾಗಿ 19 ಲಕ್ಷ ಹಣವನ್ನೂ ನಿರ್ಮಾಪಕರಿಂದ ಪಡೆದುಕೊಂಡಿದ್ದರಂತೆ ರಿಶಿಕೇಷ್. ಇಲ್ಲಿಯವರೆಗೂ ಶೂಟ್ ಮಾಡಿರುವ ಹಾರ್ಡ್ ಡಿಸ್ಕ್ ಕೊಡದೆ ಪರಾರಿ’ ಆಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ನಿರ್ಮಾಪಕರು ಕರೆ ಮಾಡಿ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕರು ಆರೋಪ ಮಾಡಿದ್ದಾರೆ. ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸಮುದ್ರಂ’ ಚಿತ್ರದ ಛಾಯಾಗ್ರಾಹಕನ ಮೇಲೆ ದೂರು

    ‘ಸಮುದ್ರಂ’ ಚಿತ್ರದ ಛಾಯಾಗ್ರಾಹಕನ ಮೇಲೆ ದೂರು

    ನಿತಾ ಭಟ್ ಮತ್ತು ಶಿವಧ್ವಜ ಕಾಂಬಿನೇಷನ್ ‘ಸಮುದ್ರಂ’ (Samudram) ಸಿನಿಮಾದ ಸಿನಿಮಾಟೋಗ್ರಾಫರ್ ರಿಶಿಕೇಷ್ (Rishikesh) ವಿರುದ್ಧ ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿನಿಮಾಟೋಗ್ರಫರ್ ರಿಶಿಕೇಷ್ ಸಮುದ್ರಂ ಚಿತ್ರದ ಹಾರ್ಡ್ ಡಿಸ್ಕ್ ಕೊಡದೆ ನಿರ್ಮಾಪಕರಿಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಚಿತ್ರತಂಡ ದೂರು ನೀಡಿದೆ.

    ರಾಜಲಕ್ಷ್ಮಿ ಸಿನಿ ಕ್ರಿಯೇಷನ್ ನಿರ್ಮಾಣ  ಮತ್ತು ಅನಿತಾ ಭಟ್ (Anita Bhatt) ಕ್ರಿಯೇಷನ್ ಹಾಗೂ ಡಾಟ್ ಟಾಕೀಸ್ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಚಿತ್ರದ ಸಂಗೀತ, ಡಬ್ಬಿಂಗ್, ರೀ ರೆಕಾರ್ಡಿಂಗ್, ಎಡಿಟಿಂಗ್ ಸೇರಿ ಡಿಐ ಜವಾಬ್ದಾರಿಯನ್ನು ರಿಶಿಕೇಷ್ ವಹಿಸಿಕೊಂಡಿದ್ದರಂತೆ. ಇದಕ್ಕೆ ಹಂತಹಂತವಾಗಿ 19 ಲಕ್ಷ ಹಣವನ್ನೂ ನಿರ್ಮಾಪಕರಿಂದ ಪಡೆದುಕೊಂಡಿದ್ದರಂತೆ ರಿಶಿಕೇಷ್. ಇಲ್ಲಿಯವರೆಗೂ ಶೂಟ್ ಮಾಡಿರುವ ಹಾರ್ಡ್ ಡಿಸ್ಕ್ ಕೊಡದೆ ಪರಾರಿ’ ಆಗಿದ್ದಾರೆ ಎಂದು ದೂರಿನಲ್ಲಿ (Complainant) ಉಲ್ಲೇಖಿಸಲಾಗಿದೆ.

     

    ನಿರ್ಮಾಪಕರು ಕರೆ ಮಾಡಿ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕರು ಆರೋಪ ಮಾಡಿದ್ದಾರೆ. ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಭುತ್ವದ ಮೂಲಕ ಹೊಸ ಕಥೆ ಹೇಳಲಿದ್ದಾರೆ ಚೇತನ್ ಚಂದ್ರ

    ಪ್ರಭುತ್ವದ ಮೂಲಕ ಹೊಸ ಕಥೆ ಹೇಳಲಿದ್ದಾರೆ ಚೇತನ್ ಚಂದ್ರ

    ತ್ತೀಚೆಗೆ ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳೇ ಹೆಚ್ಚು ಗೆಲುತ್ತಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉತ್ತಮ ಕಥಾಹಂದರ ಹೊಂದಿರುವ ‘ಪ್ರಭುತ್ವ’ (Prabhutva) ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚೇತನ್ ಚಂದ್ರ (Chetan Chandra) ನಾಯಕರಾಗಿ ನಟಿಸಿರುವ ಈ ಚಿತ್ರದ ಟ್ರೈಲರನ್ನು ರಾಜಕೀಯ ಮುಖಂಡರಾದ ರವೀಂದ್ರ ಅನಾವರಣ ಮಾಡಿದರು. ಈ ಚಿತ್ರದ ಟ್ರೈಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

    ಪ್ರತಿಯೊಬ್ಬ ಪ್ರಜೆ ಈ ಚಿತ್ರವನ್ನು ನೋಡಬೇಕು. ಮತದಾನ ಅಮೂಲ್ಯವಾದ್ದದ್ದು. ಹಾಗಾಗಿ ಮತದಾನವನ್ನು ಮಾರಾಟ ಮಾಡಿಕೊಳ್ಳಬಾರದು. ಈ ರೀತಿ ಮತದಾನದ ಮಹತ್ವ ಸಾರುವ ಈ ಸಿನಿಮಾಗೆ ನಾನೇ ಕಥೆ ಬರೆದಿದ್ದೇನೆ. ನನ್ನ ಮಗ ರವಿರಾಜ್ ಎಸ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.  ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಮೇಘಡಹಳ್ಳಿ ಶಿವಕುಮಾರ್. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ಕೂಡ ತೆರೆಗೆ ಬರಲಿದೆ. ಚುನಾವಣೆ ಮುಂಚೆಯೇ ಚಿತ್ರವನ್ನು ಬಿಡುಗಡೆ ‌ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ಮಾಪಕ ರವಿರಾಜ್ ಎಸ್ ಕುಮಾರ್ ತಿಳಿಸಿದರು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಸತ್ಯ’ ಸೀರಿಯಲ್ ನಟ ಸೀರುಂಡೆ ರಘು

    ಚಿತ್ರದ ಕಥಾಹಂದರದ ಬಗ್ಗೆ ಪರಿಚಯ ನೀಡಿದ್ದ, ನಿರ್ದೇಶಕ ಆರ್ ರಂಗನಾಥ್, ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ತಮ್ಮ ತಂಡಕ್ಕೆ ಧನ್ಯವಾದ ಹೇಳಿದರು. ಇದು ನನ್ನ ಹನ್ನೆರಡನೇ ಸಿನಿಮಾ. ಮೇಘಡಹಳ್ಳಿ ಶಿವಕುಮಾರ್ ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಳ್ಳೆಯ ಕಥೆ ಬರೆದಿದ್ದಾರೆ. ರಂಗನಾಥ್ ಅಷ್ಟೇ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಹಾಗೂ ಎಲ್ಲಾ ಕಲಾವಿದರ ಅಭಿನಯ ಅದ್ಭುತವಾಗಿದೆ ಎಂದರು ನಾಯಕ ಚೇತನ್ ಚಂದ್ರ.

    ಅನು ಎಂಬ ಪಾತ್ರದಲ್ಲಿ ನಟಿಸಿರುವುದಾಗಿ ನಾಯಕಿ ಪಾವನ ತಿಳಿಸಿದರು. ಚಿತ್ರದಲ್ಲಿ ಅಭಿನಯಿಸಿರುವ ಅರವಿಂದ್ ರಾವ್, ಹರೀಶ್ ರಾಯ್, ಆದಿ ಲೋಕೇಶ್, ವಿಜಯ್ ಚೆಂಡೂರ್, ವೀಣಾ ಸುಂದರ್, ಅನಿತಾ‌ ಭಟ್ ಮುಂತಾದ ಕಲಾವಿದರು ಹಾಗೂ ಸಂಭಾಷಣೆ ಬರೆದಿರುವ ವಿನಯ್ ‘ಪ್ರಭುತ್ವ’  ಚಿತ್ರದ ಕುರಿತು ‌ಮಾತನಾಡಿದರು.  ಎಮಿಲ್ ಸಂಗೀತ ನಿರ್ದೇಶನ, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಚೇತನ್ ಚಂದ್ರ, ಪಾವನ, ನಾಸರ್, ಶರತ್ ಲೋಹಿತಾಶ್ವ, ಆದಿ ಲೋಕೇಶ್, ಅರವಿಂದ್ ರಾವ್, ಹರೀಶ್ ರಾಯ್, ವಿಜಯ್ ಚೆಂಡೂರ್, ವೀಣಾ ಸುಂದರ್, ರಾಜೇಶ್ ನಟರಂಗ, ಅನಿತಾ ಭಟ್ ಮುಂತಾದವರಿದ್ದಾರೆ.

  • ತಮ್ಮನ್ನು ಪೋರ್ನ್ ನಟಿ ಎಂದವರ ವಿರುದ್ಧ ಗರಂ ಆದ ಅನಿತಾ ಭಟ್

    ತಮ್ಮನ್ನು ಪೋರ್ನ್ ನಟಿ ಎಂದವರ ವಿರುದ್ಧ ಗರಂ ಆದ ಅನಿತಾ ಭಟ್

    ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಅನಿತಾ ಭಟ್ (Anita Bhatt), ಈ ವಿಷಯವಾಗಿ ಸಾಕಷ್ಟು ಕಿರಿಕಿರಿಯನ್ನು ಅವರು ಎದುರಿಸಿದ್ದಾರೆ. ಅನಿತಾ ಭಟ್ ಹಾಕಿರುವ ಕಾಸ್ಟ್ಯೂಮ್, ಮಾಡಿರುವ ಪಾತ್ರಗಳನ್ನು ಕೆಲವರು ಹುಡುಕಿ ಹುಡುಕಿ ಇವರನ್ನು ರೇಗಿಸುತ್ತಾರೆ. ಅನಿತಾ ಅವುಗಳಿಗೆ ತನ್ನದೇ ಆದ ರೀತಿಯಲ್ಲಿ ಉತ್ತರ ಕೊಡುತ್ತಾರೆ. ಅದರಲ್ಲೂ ಎಡ ಮತ್ತು ಬಲಗಳ ಚರ್ಚೆ ಇವರ ಖಾತೆಯಲ್ಲಿ ಅನೇಕ ಬಾರಿ ಆಗಿದೆ. ಈ ಬಾರಿ ಬೇರೆ ಕಾರಣಕ್ಕಾಗಿ ಅನಿತಾ ಗರಂ ಆಗಿದ್ದಾರೆ.

    ಕೆಲವು ಖಾತೆಗಳಿಂದ ತಮಗೆ ನಿರಂತರವಾಗಿ ಅವಹೇಳನಕಾರಿ ಮಸೇಜ್ ಗಳು ಬರುತ್ತಿವೆ ಎಂದು ಸ್ವತಃ ಅನಿತಾ ಬರೆದುಕೊಂಡಿದ್ದಾರೆ. ಅದರಲ್ಲಿ ಒಬ್ಬ ತಮ್ಮನ್ನು ಅಶ್ಲೀಲ (Porn) ಚಿತ್ರಗಳ ನಟಿ (Actress) ಎಂದು ಕರೆದಿರುವ ಕುರಿತು ಹೇಳಿಕೊಂಡಿದ್ದಾರೆ. ಯಾವ ಅಶ್ಲೀಲ ಚಿತ್ರದಲ್ಲಿ ನಟಿಸಿದ್ದೇನೆ ಎಂದು ಬಹಿರಂಗ ಪಡಿಸಿ ಎಂದು ಅನಿತಾ ಸವಾಲು ಹಾಕಿದ್ದಾರೆ. ಇಂತಹ ಬೆದರಿಕೆಗೆ ಜಗ್ಗುವುದಿಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ತಮ್ಮ ಬಗ್ಗೆ ಕೆಟ್ಟದ್ದಾಗಿ ಕಾಮೆಂಟ್ ಮಾಡುವವರು ಹೆಸರಿನ ಸಮೇತ ಟ್ವಿಟರ್ ಖಾತೆಯಿಂದಲೇ ಅನಿತಾ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಪೊಲೀಸರು ಕೂಡ ಉತ್ತರಿಸಿದ್ದು, ಹತ್ತಿರದ ಪೊಲೀಸ್ ಠಾಣೆಗೆ ದೂರು ಕೊಡುವಂತೆ ಸಲಹೆ ನೀಡಿದ್ದಾರೆ. ಲಿಖಿತ ದೂರು ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರು 69 ಚಿತ್ರಕ್ಕಾಗಿ ಯೂರೋಪ್ ಬೆಲ್ಲಿ ಡ್ಯಾನ್ಸರ್.!

    ಬೆಂಗಳೂರು 69 ಚಿತ್ರಕ್ಕಾಗಿ ಯೂರೋಪ್ ಬೆಲ್ಲಿ ಡ್ಯಾನ್ಸರ್.!

    ಇದುವರೆಗೂ ಯಾರೂ ಮಾಡಲಾಗದ ಸ್ಥಳಗಳಲ್ಲಿ ಬೆಂಗಳೂರು 69 ಚಿತ್ರೀಕರಣ.!

    ಕ್ರಾಂತಿ ಚೈತನ್ಯ ನಿರ್ದೇಶನದಲ್ಲಿ ಅನಿತಾ ಭಟ್ ಹಾಗೂ ಪವನ್ ಶೆಟ್ಟಿ ನಟಿಸುತ್ತಿರುವ ‘ಬೆಂಗಳೂರು 69’ ಶೂಟಿಂಗ್ ಭರದಿಂದ ಸಾಗುತ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಯಾಗಿದ್ದು ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ.

    ಕನ್ನಡದ ಆರ್ ಜಿವಿ (RGV) ಎಂದೇ ಹೆಸರಾಗುತ್ತಿರುವ ನಿರ್ಮಾಪಕ ಝೀಕೆ (ZK) ಮತ್ತೆ ಸುದ್ದಿಯಾಗುತ್ತಿದ್ದಾರೆ. ಬೆಂಗಳೂರು 69 ಚಿತ್ರಕ್ಕಾಗಿ ಇತ್ತೀಚೆಗೆ ಕಬಿನಿ ರೆಸಾರ್ಟನಲ್ಲಿ ಬಹಳ ವಿಭಿನ್ನವಾಗಿ ಚಿತ್ರೀಕರಣ ಮಾಡಿ ಸದ್ದು ಮಾಡಿದ್ದ ಝಾಕೀರ್ ಹುಸೇನ್ ಕರೀಂಖಾನ್ ಇದೀಗ ಮತ್ತೊಂದು ಹಾಡನ್ನು ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ಚಿತ್ರೀಕರಿಸಿದ್ದು ಇಡೀ ಗಾಂಧಿನಗರವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಚಿತ್ರತಂಡ ಇತ್ತೀಚೆಗೆ ದುಬೈ ಬುರ್ಜ್ ಖಲೀಫಾ ಬಳಿಯ ರೆಡ್‍ಝೋನ್ ಹಾಗೂ ಶಾರ್ಜಾ ಮರುಭೂಮಿ ಬಳಿ ಚಿತ್ರೀಕರಣ ನಡೆಸಿದೆ. ಈ ಶೂಟಿಂಗ್‍ನಲ್ಲಿ ಯೂರೋಪ್‍ನ ಖ್ಯಾತ ಬೆಲ್ಲಿ ಡ್ಯಾನ್ಸರ್ ಗ್ರೆಸಿಲ್ಲಾ ಪಿಶ್ಚನರ್ ಭಾಗವಹಿಸಿದ್ದರು.

    ಇದೇ ಮೊದಲ ಬಾರಿಗೆ ಗ್ರೆಸಿಲ್ಲಾ ಭಾರತದ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇದಕ್ಕೂ ಮುನ್ನ ಎಷ್ಟೋ ಬಾಲಿವುಡ್ ನಿರ್ಮಾಪಕರು ಗ್ರೆಸಿಲ್ಲಾ ಡೇಟ್ಸ್ ಕೇಳಿದರೂ ಆಕೆ ಒಪ್ಪಿರಲಿಲ್ಲ. ಆದರೆ ಬೆಂಗಳೂರು 69 ಚಿತ್ರದ ಕಥೆ ಕೇಳಿ ಖುಷಿಯಿಂದ ಒಪ್ಪಿ ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಅಮೆರಿಕದ ಕಾಸ್ಟ್ಯೂಮ್ ಡಿಸೈನರ್, ಗ್ರೆಸಿಲ್ಲಾ ಡ್ಯಾನ್ಸ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಈ ಒಂದು ವಿಶೇಷ ಡ್ಯಾನ್ಸ್ ಗೆ ಇನ್ನೂ ಹೆಚ್ಚಿನ ಮೆರುಗು ತರಲು ನಿರ್ಮಾಪಕ ಝಾಕೀರ್ ಹುಸೇನ್ ಕರೀಂಖಾನ್ ಅವರು ಲ್ಯಾಟಿನ್ ಅಮೆರಿಕದ ಕೊರಿಯೋಗ್ರಾಫರ್ ಹಾಗೂ ರಷ್ಯಾ, ಸೌತ್ ಆಫ್ರಿಕಾ ತಂತ್ರಜ್ಞರನ್ನು ಚಿತ್ರಕ್ಕಾಗಿ ಕರೆತಂದಿದ್ದಾರೆ.

    ಟ್ರಿಪಲ್ ಎ ಸಿನಿಮಾಸ್ ಬ್ಯಾನರ್ ಅಡಿ ಝಾಕೀರ್ ಹುಸೇನ್ ಕರೀಂಖಾನ್ ಅವರ ಪತ್ನಿ ಗುಲ್ಜಾರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಪರಮೇಶ್ ಛಾಯಾಗ್ರಹಣವಿದ್ದು, ವಿಕ್ರಮ್ ಚಂದನಾ ಸಂಗೀತ ನೀಡಿದ್ದಾರೆ. ಚಿತ್ರ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ.