Tag: Anita

  • ಸಪ್ತಪದಿ ತುಳಿದ ನಟ ಸುಮಂತ್ ಶೈಲೇಂದ್ರ

    ಸಪ್ತಪದಿ ತುಳಿದ ನಟ ಸುಮಂತ್ ಶೈಲೇಂದ್ರ

    ಬೆಂಗಳೂರು: ಇಂದು ಸ್ಯಾಂಡಲ್‍ವುಡ್‍ನ ಎರಡು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಂದು ಕಡೆ ದೂದ್ ಪೇಡ ದಿಗಂತ್ ಹಾಗೂ ಐಂದ್ರಿತಾ ರೇ ಮದುವೆಯಾಗಿದ್ದು, ಮತ್ತೊಂದೆಡೆ ನಟ ಸುಮಂತ್ ಶೈಲೇಂದ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಸುಮಂತ್ ಶೈಲೇಂದ್ರ ಅವರು ಖ್ಯಾತ ನಿರ್ಮಾಪಕ ಶೈಲೇಂದ್ರ ಬಾಬು ಅವರ ಮಗನಾಗಿದ್ದು, ಶ್ರೀನಿವಾಸ್ ಮತ್ತು ಚಂದ್ರಕಲಾ ಅವರ ಪುತ್ರಿ ಅನಿತಾ ಅವರನ್ನು ಸುಮಂತ್ ಇಂದು ವರಿಸಿದ್ದಾರೆ. ಇಂದು ಬೆಳಗ್ಗೆ ಸುಮಾರು 9.30ರ ಮುಹೂರ್ತದಲ್ಲಿ ಮದುವೆಯಾಗಿದ್ದಾರೆ.

    ಮಂಗಳವಾರ ವಸಂತನಗರದಲ್ಲಿರುವ ಬೆಂಗಳೂರು ಮೇನ್ ಪ್ಯಾಲೇಸ್ ನಲ್ಲಿ ಸುಮಂತ್ ಮತ್ತು ಅನಿತಾ ಅವರ ಆರತಕ್ಷತೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸುಮಂತ್ ಮತ್ತು ಅನಿತಾ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ನವಜೋಡಿ ಒಂದೇ ಬಣ್ಣದ ಬಟ್ಟೆ ಧರಿಸಿದ್ದು, ಅದ್ಧೂರಿಯಾಗಿ ಮಿಂಚಿದ್ದರು. ದೇವರಾಜ್, ಪ್ರಜ್ವಲ್, ಪ್ರಣವ್, ನಾದಬ್ರಹ್ಮ ಹಂಸಲೇಖ, ಹಿರಿಯ ನಿರ್ದೇಶಕ ಎಸ್. ವಿ ರಾಜೇಂದ್ರ ಸಿಂಗ್ ಬಾಬು, ಇನ್ನಿತರ ಸಿನಿಮಾ ರಂಗದವರು ಮತ್ತು ಆತ್ಮೀಯರು ಆಗಮಿಸಿ ನವಜೋಡಿಗೆ ಶುಭ ಕೋರಿದರು.

    ಸುಮಂತ್ ‘ಆಟ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿದ್ದು, ನಂತರ ರಾಧಿಕಾ ಪಂಡಿತ್ ಅವರ ಜೊತೆ ‘ದಿಲ್‍ವಾಲಾ’ ಹಾಗೂ ಕೃತಿ ಕರಬಂಧ ಜೊತೆ ‘ತಿರುಪತಿ ಎಕ್ಸ್‌ಪ್ರೆಸ್‌’ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv