Tag: Aniruddha jatkar

  • ಸಾಹಸಸಿಂಹ ವಿಷ್ಣುವರ್ಧನ್‌ಗೆ ʻಕರ್ನಾಟಕ ರತ್ನʼ..?

    ಸಾಹಸಸಿಂಹ ವಿಷ್ಣುವರ್ಧನ್‌ಗೆ ʻಕರ್ನಾಟಕ ರತ್ನʼ..?

    ಅಭಿಮಾನಿಗಳ ಆರಾಧ್ಯ ದೈವ, ಸಾಹಸಸಿಂಹ ಬಿರುದಾಂಕಿತ ನಟ ದಿ. ಡಾ.ವಿಷ್ಣುವರ್ಧನ್‌ರಿಗೆ (Vishnuvardhan) ಮರಣೋತ್ತರ ʻಕರ್ನಾಟಕ ರತ್ನʼ ಪ್ರಶಸ್ತಿ (Karnataka Ratna Award) ನೀಡಬೇಕೆಂಬ ಒತ್ತಾಯ ಹೆಚ್ಚಾಗಿದೆ. ಬಹುಶಃ ನಾಳೆ (ಸೆ.4) ಈ ಕುರಿತು ಸರ್ಕಾರ ತೀರ್ಮಾನಿಸಿ, ನಾಳೆಯೇ ಘೋಷಣೆ ಮಾಡುವ ಸಾಧ್ಯತೆ ಇದೆ.

    ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ವಿಷ್ಣುವರ್ಧನ್, ನಾಡು, ನುಡಿ, ಕಲೆಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಈ ಕಲಾವಿದನಿಗೆ ಗೌರವ ಸೂಚಕವಾಗಿ ʻಕರ್ನಾಟಕ ರತ್ನʼ ಪ್ರಶಸ್ತಿ ನೀಡುವಂತೆ ಹಿಂದಿನಿಂದಲೂ ಒತ್ತಾಯ ಕೇಳಿ ಬರುತ್ತಿತ್ತು. ಇದೀಗ ಭಾರತಿ ವಿಷ್ಣುವರ್ಧನ್ (Bharathi Vishnuvardhan) ಹಾಗೂ ಅಳಿಯ ಅನಿರುದ್ಧ ಜಟ್ಕರ್‌ ಬುಧವಾರ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನ ಭೇಟಿಮಾಡಿ ಅಭಿಮಾನ್ ಸ್ಡುಡಿಯೋ ಜಾಗದ ವಿಚಾರ ಪ್ರಸ್ತಾಪಿಸಿದ್ದಾರೆ.

    ಇದೇ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗದ ತಾರೆಯರ ಒತ್ತಾಯದ ಮೇರೆಗೆ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ʻಕರ್ನಾಟಕ ರತ್ನʼ ಕೊಡುವ ವಿಚಾರವನ್ನ ಸರ್ಕಾರ ಭಾರತಿಯವರ ಗಮನಕ್ಕೆ ತಂದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ರಸ್ತೆಯಲ್ಲಿ ಅಡುಗೆ ಮಾಡಿ ಖುಷಿಪಟ್ಟ ನಾಗಾರ್ಜುನ ಸೊಸೆ 

    ಒಂದು ದಿನದ ಹಿಂದಷ್ಟೇ ಮಾಜಿ ಸಚಿವೆ ಜಯಮಾಲಾ, ಹಿರಿಯ ನಟಿ ಶ್ರುತಿ, ನಟಿ ಮಾಳವಿಕಾ ಅವಿನಾಶ್‌ ಸೇರಿ ಅನೇಕರು ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ವಿಷ್ಣುವರ್ಧನ್‌ ಅವರಿಗೆ ʻಕರ್ನಾಟಕ ರತ್ನʼ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದರು. ಇದೇ ತಿಂಗಳು ಸೆ. 18ರಂದು ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟುಹಬ್ಬವಿದೆ. ಈ ಶುಭ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ವಿಷ್ಣುವರ್ಧನ್‌ ಅವರಿಗೆ ಪ್ರಶಸ್ತಿ ಘೋಷಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಬಿಗ್‌ ಬಾಸ್‌ ಪ್ರೋಮೋ ರಿಲೀಸ್‌ – ಸ್ಪರ್ಧಿಗಳ ಬಗ್ಗೆ ಮಾಹಿತಿಯೂ ಔಟ್‌

    ನಟ ಅನಿರುದ್ಧ ಹೇಳಿದ್ದೇನು?
    ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಅನಿರುದ್ಧ (Aniruddha Jatkar), ಅಭಿಮಾನ್ ಸ್ಟುಡಿಯೋದಲ್ಲಿರುವ 19 ಗುಂಟೆ ಜಾಗಕ್ಕಾಗಿ ಮನವಿ ಮಾಡಿದ್ದೇವೆ. ಆ ಜಾಗದಲ್ಲಿ ಮಂಟಪ ನಿರ್ಮಿಸಲು ಅನುಮತಿ ಕೊಡಿ ಎಂದು ಕೇಳಿದ್ದೇವೆ. ಹಿಂದೆ ಅಲ್ಲಿ ಮಂಟಪವನ್ನು ನಾವು ಕಟ್ಟಿದ್ವಿ. ಈಗಲೂ ಜಾಗ ಕೊಟ್ಟರೆ ನಾವೇ ಮಂಟಪ ಕಟ್ಟಿಕೊಳ್ತೇವೆ. ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸೆಪ್ಟೆಂಬರ್ 18ರ ಒಳಗೆ ಜಾಗಕ್ಕೆ ಅನುಮತಿ ಸಿಗೋ ಸಾಧ್ಯತೆಯಿದೆ. ಅಲ್ಲದೇ ನಾಳೆಯ ಕ್ಯಾಬಿನೆಟ್‌ನಲ್ಲಿ ʻಕರ್ನಾಟಕ ರತ್ನʼದ ಬಗ್ಗೆ ಸಿಎಂ ಚರ್ಚೆ ಮಾಡೋದಾಗಿ ಹೇಳಿದ್ದಾರೆ. ನಾಳೆಯೇ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಿ.ಡಾ.ವಿಷ್ಣುವರ್ಧನ್, ಸರೋಜಾದೇವಿಯವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಗೆ ನಟಿಯರ ಮನವಿ

  • ಅಭಿಮಾನ್ ಸ್ಟುಡಿಯೋ ಮುಟ್ಟುಗೋಲಿಗೆ ಸರ್ಕಾರ ಆದೇಶ – ಅನಿರುದ್ಧ ರಿಯಾಕ್ಷನ್ ಏನು?

    ಅಭಿಮಾನ್ ಸ್ಟುಡಿಯೋ ಮುಟ್ಟುಗೋಲಿಗೆ ಸರ್ಕಾರ ಆದೇಶ – ಅನಿರುದ್ಧ ರಿಯಾಕ್ಷನ್ ಏನು?

    1970ರಲ್ಲಿ ಬೆಂಗಳೂರಿನಲ್ಲಿ (Bengaluru) ಸ್ಟುಡಿಯೋ ನಿರ್ಮಾಣ ಮಾಡುವ ಸಲುವಾಗಿ ಸರ್ಕಾರ ಅರಣ್ಯ ಪ್ರದೇಶದ ಆದೇಶ ಜಾರಿ ಮಾಡಿ ಕೆಲವು ನಿಯಮಗಳಡಿ 20 ಎಕರೆ ಜಾಗವನ್ನ ಹಿರಿಯ ನಟ ಟಿ.ಎನ್ ಬಾಲಣ್ಣ ಅವರ ಕುಟುಂಬಕ್ಕೆ ನೀಡಿತ್ತು. ಬಳಿಕ ಬಾಲಣ್ಣ ಕುಟುಂಬಸ್ಥರು ಸರ್ಕಾರ ವಿಧಿಸಿದ್ಧ ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪದಡಿ ಆ ಜಾಗವನ್ನ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿ ಅರಣ್ಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಪತ್ರವನ್ನ ಬರೆದಿದೆ. ಈ ಬಗ್ಗೆ ನಟ ಹಾಗೂ ಡಾ.ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಜಟ್ಕರ್ (Aniruddha Jatkar) ʻಪಬ್ಲಿಕ್ ಟಿವಿʼಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಸರ್ಕಾರ ಅಭಿಮಾನ್ ಸ್ಟುಡಿಯೋ (Abhiman Studio) ಜಾಗ ವಶಪಡಿಸಿಕೊಳ್ಳಬಹುದು ಅಂತಾ ಮೊದಲೇ ನನಗೆ ಗೊತ್ತಿತ್ತು. ಆ ನಿಟ್ಟಿನಲ್ಲಿ 6 ವರ್ಷದಿಂದ ನಾವು ಸಾಕಷ್ಟು ಪ್ರಯತ್ನ ಪಟ್ಟೆವು, ಆದ್ರೆ ಅದು ಆಗ್ಲಿಲ್ಲ. ಈಗ ನಮಗೆ ತುಂಬಾ ಖುಷಿ ಕೊಟ್ಟಿದೆ. ಅಪ್ಪಾಜಿ ಅಂತ್ಯ ಸಂಸ್ಕಾರ ಆದ ಜಾಗದಲ್ಲಿ ಭಾರತಿ ಅಮ್ಮ ಸ್ಮಾರಕವನ್ನ ಕಟ್ಟಿದರು. ಆದರೆ ಹಬ್ಬದ ದಿನವೇ ರಾತ್ರೋ ರಾತ್ರಿ ಅಲ್ಲಿ ನೆಲಸಮ ಮಾಡಲಾಯಿತು. ಅದು ಅಭಿಮಾನಿಗಳಿಗೆ ಹಾಗೂ ನಮ್ಮ ಕುಟುಂಬಕ್ಕೆ ಬೇಸರ ತಂದಿತ್ತು. ಈಗ ಅರಣ್ಯ ಪ್ರದೇಶ ಅಂತಾ ಹೇಳಿದೆ. ಸರ್ಕಾರಕ್ಕೆ ಅಲ್ಲಿ 10 ಗುಂಟೆ ಜಾಗ ಕೊಡಿ ಸ್ಮಾರಕ ಕಟ್ಟಿಕೊಡೋದು ಬೇಡ ಅಂತಾ ಮನವಿ ಮಾಡ್ತೀವಿ. ಸರ್ಕಾರ ಈ ಮನವಿಗೆ ಖಂಡಿತ ಸ್ಪಂದಿಸುತ್ತೆ ಅನ್ನೋ ಭರವಸೆ ಇದೆ ಅಂತಾ ಅನಿರುದ್ಧ ಹೇಳಿದ್ದಾರೆ.

    ಈ ವಿಚಾರದಲ್ಲಿ ನಾನು ಏನು ಹೇಳ್ತಿದಿನೋ ಅದನ್ನ ಅಮ್ಮನೂ ಹೇಳೋದು. ಸಿಎಂ ಕಳೆದ ಬಾರಿ ಹೋದಾಗಲೂ ಈ ಬಾರಿ ಹೋದಾಗಲೂ ಕರ್ನಾಟಕ ರತ್ನ ಗೌರವದ ನೀಡುವ ಬಗ್ಗೆ ಭರವಸೆ ಕೊಟ್ಟಿದ್ದಾರೆ. ನಾನು ಅಲ್ಲಿ ಬೇಡಿಕೊಂಡಿಲ್ಲ ಬದಲಾಗಿ ನೆನಪಿಸಿದ್ದೇನೆ. ಅವರ ಗಮನಕ್ಕೆ ತಂದಿದ್ದೇನೆ. ಬಾಲಣ್ಣ ಅವರ ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಸಾಕಷ್ಟು ಗೌರವ ಇದೆ. ಆ ಜಾಗದಲ್ಲಿ ಅಭಿವೃದ್ಧಿ ಆಗಿದ್ರೆ ಚೆನ್ನಾಗಿರ್ತಿತ್ತು. ಅಲ್ಲಿ ಅಪ್ಪಾಜಿ ಅವರ ಸಮಾಧಿಗೆ ಅವಕಾಶ ಕೊಟ್ಟಿದ್ದರು ಅವರಿಗೂ ಗೌರವ ಇರ್ತಿತ್ತು. ಈಗ ಸರ್ಕಾರ ಮುಟ್ಟುಗೋಲು ಹಾಕಿಕೊಳ್ತಿದೆ ಎಂದಿದ್ದಾರೆ ಅನಿರುದ್ಧ.

  • ನಟ ವಿಷ್ಣುವರ್ಧನ್‌ರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡಿ: ಸಿಎಂಗೆ ಅನಿರುದ್ಧ ಮನವಿ

    ನಟ ವಿಷ್ಣುವರ್ಧನ್‌ರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡಿ: ಸಿಎಂಗೆ ಅನಿರುದ್ಧ ಮನವಿ

    ಟ ಸಾಹಸಸಿಂಹ ವಿಷ್ಣುವರ್ಧನ್‌ರಿಗೆ (Vishnuvardhan) ಮರಣೋತ್ತರ ಕರ್ನಾಟಕ ರತ್ನ ನೀಡುವಂತೆ ವಿಷ್ಣುವರ್ಧನ್ ಅಳಿಯ ಅನಿರುದ್ಧ (Aniruddha Jatkar), ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದರು. ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾಗಿ ಅನಿರುದ್ಧ ಮನವಿ ಸಲ್ಲಿಸಿದರು.

    ಸಿಎಂ ಭೇಟಿ ಬಳಿಕ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದೆ. ಹಿಂದೆಯೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಇವತ್ತು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ ಎಂದು ಹೇಳಿದ್ದಾರೆ ಅಂತ ತಿಳಿಸಿದರು. ಇದನ್ನೂ ಓದಿ: ವಿಷ್ಣು ಸಮಾಧಿ ನೆಲಸಮ, ಅಭಿಮಾನ್‌ ಸ್ಟುಡಿಯೋದ ಅವ್ಯವಹಾರ: ವಿಷ್ಣು ಫ್ಯಾನ್ಸ್ ಗರಂ

    ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ಕೊಡಿ ಎಂದು ಕೇಳುವುದು ಎಂದರೆ ತಪ್ಪು ಆಗುತ್ತದೆ. ಕರ್ನಾಟಕ ರತ್ನ ಪ್ರಶಸ್ತಿಗೆ ವಿಷ್ಣುವರ್ಧನ್ ಅವರು ಅರ್ಹರು. ಹಾಗಾಗಿ, ಕೇಳುವ ಬದಲಾಗಿ ನೆನಪು ಮಾಡುತ್ತೇನೆ. ಈ ಬಾರಿಯೂ ನೆನಪು ಮಾಡಿದ್ದೇನೆ‌‌ ಎಂದು ಹೇಳಿದರು.

    ವಿಷ್ಣುವರ್ಧನ್ ಸಮಾಧಿ ಧ್ವಂಸ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದರ ಬಗ್ಗೆ ಈಗಾಗಲೇ ಸರ್ಕಾರದ ಮತ್ತು ಸಿಎಂ ಗಮನಕ್ಕಿದೆ. ಹಿಂದೆ ನಾವು ಕೇಳಿದ ಹಾಗೆ ಕರ್ನಾಟಕ ಸರ್ಕಾರ ಅಪ್ಪ ಅವರ ಸ್ಮಾರಕ ಮಾಡಿದ್ದಾರೆ. ಈಗಾಗಲೇ ಸರ್ಕಾರ ಐದು ಎಕರೆ ಜಮೀನಿನಲ್ಲಿ ಸ್ಮಾರಕ ಮಾಡಿದೆ. ಮೊನ್ನೆ ಸಮಾಧಿ ಧ್ವಂಸ ಮಾಡಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದೇನೆ. ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಸರ್ಕಾರ ಮಾಡಿದೆ. ಹೀಗಾಗಿ, ಬೆಂಗಳೂರಿನಲ್ಲಿಯೂ ಸ್ಮಾರಕ ಬೇಕು ಅನ್ನೋದು ತಪ್ಪಾಗುತ್ತದೆ ಎಂದರು. ಇದನ್ನೂ ಓದಿ: ಡಾ. ವಿಷ್ಣು ಅಭಿಮಾನ ಸ್ಮಾರಕ – ಪುತ್ಥಳಿ ನಿರ್ಮಾಣಕ್ಕೆ ಚಾಲನೆ

    ವಿಷ್ಣು ಸ್ಮಾರಕ ಇರೋದನ್ನ ಧ್ವಂಸ ಮಾಡಿದ್ದು ದುರಂತ. ಅಲ್ಲಿಯೇ ಅವರ ಅಂತ್ಯಕ್ರಿಯೆ ಆಗಿರೋದ್ರಿಂದ ಅದಕ್ಕೆ ಆದ್ಯತೆ ಪ್ರಾಮುಖ್ಯತೆ ಇದೆ. ಬಾಲಣ್ಣ ಅವರ ಜಾಗದಲ್ಲಿಯೂ ನಾವು ಸ್ಮಾರಕ ಬೇಕು ಅನ್ನೋದು ತಪ್ಪಾಗುತ್ತದೆ. ರಾಜ್ಯ ಸರ್ಕಾರ ಆ ಜಾಗ ಖರೀದಿ ಮಾಡುತ್ತದೆಯಾ ನೋಡಬೇಕು. ಒಂದು ದುರಂತದ ಘಟನೆಯಾಗಿದೆ. ಆ ಜಮೀನು ಬಾಲಣ್ಣ ಕುಟುಂಬಕ್ಕೆ ಸೇರಿದೆ. ಬಾಲಣ್ಣ ಕುಟುಂಬದ ಬಳಿಯೂ ಕೂಡ ಅಭಿಮಾನಿಗಳಿಗಾಗಿ 10 ಗುಂಟೆ ಜಾಗ ಕೇಳಿದ್ದೆ. ಸರ್ಕಾರ ಇದನ್ನು ಏನು ಮಾಡುತ್ತದೆ ಗೊತ್ತಿಲ್ಲ. ನಾವು ಕುಟುಂಬದವರಾಗಿ ಮತ್ತೆ ಮತ್ತೆ ಕೇಳೋದು ತಪ್ಪಾಗುತ್ತದೆ. ನಾವು ಕೇಳಿದ ಹಾಗೆ ಮೈಸೂರಿನಲ್ಲಿ ಸ್ಮಾರಕವಾಗಿದೆ. ಮತ್ತೆ ಇಲ್ಲಿಯೂ ಮಾಡಿ ಎನ್ನೋದರಲ್ಲಿ ಅರ್ಥ ಇಲ್ಲ. ಬಾಲಣ್ಣ ಕುಟುಂಬ ಮನಸು ಮಾಡಿ ಮತ್ತೆ ಸ್ಮಾರಕ ಕಟ್ಟೋಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

  • ಭವಿಷ್ಯದಲ್ಲಿ ಒಳ್ಳೆಯ ವಿಷ್ಣು ಸ್ಮಾರಕ ತಲೆ ಎತ್ತಲಿದೆ: ಭಾರತಿ ವಿಷ್ಣುವರ್ಧನ್

    ಭವಿಷ್ಯದಲ್ಲಿ ಒಳ್ಳೆಯ ವಿಷ್ಣು ಸ್ಮಾರಕ ತಲೆ ಎತ್ತಲಿದೆ: ಭಾರತಿ ವಿಷ್ಣುವರ್ಧನ್

    ವಿಷ್ಣುವರ್ಧನ್ (Vishnuvardhan) 15ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಮೈಸೂರಿನ ವಿಷ್ಣು ಸ್ಮಾರಕ ಭವನದಲ್ಲಿ ವಿಷ್ಣುವರ್ಧನ್ ಪ್ರತಿಮೆಗೆ ಕುಟುಂಬಸ್ಥರು ನಮನ ಸಲ್ಲಿಸಿದರು. ಈ ವೇಳೆ, ವಿಷ್ಣು ಸ್ಮಾರಕದ ಬಗ್ಗೆ ಮಾತನಾಡಿ, ಭವಿಷ್ಯದಲ್ಲಿ ಒಳ್ಳೆಯ ವಿಷ್ಣು ಸ್ಮಾರಕ ತಲೆ ಎತ್ತಲಿದೆ ಎಂದು ಭಾರತಿ ವಿಷ್ಣುವರ್ಧನ್ ಮಾತನಾಡಿದರು. ಇದನ್ನೂ ಓದಿ:ಸಕ್ಸಸ್‌ಗಾಗಿ ದಿಟ್ಟ ನಿರ್ಧಾರ ಕೈಗೊಂಡ ಶ್ರೀಲೀಲಾ

    ಸಾಹಸಸಿಂಹ ವಿಷ್ಣುವರ್ಧನ್ ವಿಧಿವಶರಾಗಿ ಇಂದಿಗೆ 15 ವರ್ಷ ಕಳೆದಿದೆ. ಆದರೆ ಇನ್ನೂ ಕೂಡ ಸ್ಮಾರಕ ವಿವಾದ ಮುಗಿದಿಲ್ಲ. ಅಭಿಮಾನಿ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸಮಾಧಿ ಇದ್ದರೂ, ಕೋರ್ಟ್‌ನಲ್ಲಿ ತಡೆ ಇರೋದ್ರಿಂದ ಅಭಿಮಾನಿಗಳಿಗೆ ಪೊಲೀಸರು ಪೂಜೆಗೆ ಅವಕಾಶ ಕೊಡಲಿಲ್ಲ. ಸಮಾಧಿ ಸ್ಥಳದಿಂದ ದೂರದಿಂದಲೇ ಪೂಜೆ ಸಲ್ಲಿಸಲು ಅವಕಾಶ ಕೊಟ್ಟಿದ್ದರಿಂದ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ, ಸಮಾಧಿಗೆ ಪೂರ್ತಿ ಹೂವು ಅಲಂಕರಿಸಲು ಅವಕಾಶ ಕೊಟ್ಟಿಲ್ಲ. ವಿಷ್ಣುವರ್ಧನ್ ಅವರ ಭಾವಚಿತ್ರ ಹಾಕಲು ಬಿಟ್ಟಿಲ್ಲ. ದೂರದ ಊರಿನಿಂದ ಬಂದಿದ್ದೇವೆ ಅಂತ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ಇನ್ನೂ, ಪ್ರತಿಬಾರಿಯಂತೆ ಈ ಬಾರಿಯೂ ಮೈಸೂರಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೈಸೂರಲ್ಲಿ ಯಾವುದೇ ಕಾರಣಕ್ಕೂ ನಮಗೆ ಸ್ಮಾರಕ ಬೇಡ. ಅಂತ್ಯಕ್ರಿಯೆ ನಡೆದ ಈ ಜಾಗವೇ ನಮಗೆ ಪುಣ್ಯಸ್ಥಳ. ಅಂತ್ಯಕ್ರಿಯೆ ನಡೆದ ಈ ಜಾಗವನ್ನು ನಮಗೆ ಬಿಟ್ಟುಕೊಡಿ ಅಂತ ಅಭಿಮಾನಿಗಳು ಒತ್ತಾಯಿಸಿದ್ದಾರೆ.

    ಇವೆಲ್ಲದರ ಮಧ್ಯೆ, ಮೈಸೂರಿನ ವಿಷ್ಣು ಸ್ಮಾರಕ ಭವನದಲ್ಲಿ ವಿಷ್ಯುವರ್ಧನ್‌ಗೆ ನಮನ ಸಲ್ಲಿಸಲಾಗಿದೆ. ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ಅಳಿಯ ಅನಿರುದ್ಧ್ ವಿಷುವರ್ಧನ್ ಪ್ರತಿಮೆಗೆ ನಮನ ಸಲ್ಲಿಸಿದ್ದರು. ಬಳಿಕ ಮಾಧ್ಯಮಕ್ಕೆ ಭಾರತಿ ಪ್ರತಿಕ್ರಿಯಿಸಿ, ಭವಿಷ್ಯದಲ್ಲಿ ವಿಷ್ಣು ಅವರ ಒಳ್ಳೆಯ ಸ್ಮಾರಕ ತಲೆ ಎತ್ತಲಿದೆ. ಅಭಿಮಾನಿಗಳು ಸಂಭ್ರಮಿಸಲಿದ್ದಾರೆ. ನಮ್ಮ ಕೈಯಲ್ಲಿ ಏನೂ ಇಲ್ಲ. ದೇವರು ನಡೆಸಿದಂತೆ ಆಗುತ್ತದೆ ಅಂತ ಸ್ಮಾರಕ ನಿರ್ಮಾಣವನ್ನು ಸಮರ್ಥಿಸಿಕೊಂಡಿದ್ದಾರೆ. ಒಟ್ನಲ್ಲಿ ವಿಷ್ಣು ವಿಧಿವಶರಾಗಿ 15 ವರ್ಷ ಕಳೆದಿದ್ದರೂ, ಸ್ಮಾರಕ ವಿಚಾರದಲ್ಲಿ ಕಿತ್ತಾಟ ನಡೆಯುತ್ತಿರೋದು ದುರಂತವೇ ಸರಿ.

    ಇಂದು ಅಪ್ಪಾಜಿ ಅವರ 15ನೇ ವರ್ಷದ ಪುಣ್ಯ ಸ್ಮರಣೆಯಾಗಿದ್ದು, ನಮ್ಮ ಕುಟುಂಬದ ಪರವಾಗಿ ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ. ನನ್ನ ಪಾಲಿಗೆ ಮಾಸ್ ಹೀರೋ ಒಬ್ಬರೆ, ಅದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಎಂದರು. ಈ ರೀತಿ ಯಾವುದೇ ಯುದ್ಧಗಳು ಆಗಬಾರದು. ನಾವೆಲ್ಲ ಒಂದೇ ಕುಟುಂಬವಿದ್ದಂತೆ. ಈ ರೀತಿ ಯುದ್ಧಕ್ಕೆ ಅವಕಾಶ ಕೊಡಬಾರದು. ಆದರೆ ಅಭಿಮಾನಿಗಳು ಅವರ ಅಭಿಮಾನವನ್ನ ಬೇರೆ ಬೇರೆ ರೀತಿ ತೋರಿಸಿಕೊಳ್ಳುತ್ತಾರೆ. ಕಲಾವಿದರು ನಾವೆಲ್ಲ ಒಂದೇ ಕುಟುಂಬ ಇದ್ದಹಾಗೆ. ಆದಷ್ಟು ಯುದ್ಧ ಹೋರಾಟ ಕಮ್ಮಿ ಮಾಡಿ, ಜೊತೆಗೆ ಪ್ರೀತಿಯನ್ನ ಎಲ್ಲರೂ ಹಿಂಚಿಕೆ ಮಾಡಿ ಎಂದು ಅನಿರುದ್ಧ್ ಮನವಿ ಮಾಡಿದರು. ಅದರಿಂದ ನಮ್ಮ ಚಿತ್ರರಂಗ ಬೆಳೆಯುತ್ತದೆ. ಬೇರೆ ರಾಜ್ಯಗಳಿಗೂ ನಾವು ಮಾದರಿ ಆಗುತ್ತೇವೆ ಎಂದರು.

  • ತಮ್ಮ ಚಿತ್ರದ ಟೈಟಲ್ ಸಾಂಗ್ ಹಾಡಿದ ನಟ ಅನಿರುದ್ಧ

    ತಮ್ಮ ಚಿತ್ರದ ಟೈಟಲ್ ಸಾಂಗ್ ಹಾಡಿದ ನಟ ಅನಿರುದ್ಧ

    ಎಂ.ಆನಂದರಾಜ್ ನಿರ್ದೇಶನದ ಹಾಗೂ ಅನಿರುದ್ದ್ ಜತಕರ್ ನಾಯಕರಾಗಿ ನಟಿಸಿರುವ  “chef ಚಿದಂಬರ” ಚಿತ್ರದ ಚಿತ್ರೀಕರಣ ಹಾಗೂ ಪೊಸ್ಟ್ ಪ್ರೊಡಕ್ಷನ್ ವರ್ಕ್ ಪೂರ್ಣವಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಆರಂಭದ ಫಸ್ಟ್ ಲುಕ್ ಪೋಸ್ಟರ್ ನಿಂದಲೇ ಈ ಚಿತ್ರ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಇತ್ತೀಚಿಗೆ ಈ ಚಿತ್ರದ ಟೈಟಲ್ ಟ್ರ್ಯಾಕ್  ಬಿಡುಗಡೆಯಾಗಿದೆ. ಇದು ಬಿಡುಗಡೆಯಾಗುತ್ತಿರುವ ಚಿತ್ರದ ಮೊದಲ ಗೀತೆಯೂ ಹೌದು. ಶ್ರೀಗಣೇಶ್ ಪರಶುರಾಮ್ ಬರೆದು, ರಿತ್ವಿಕ್ ಮುರಳಿಧರ್ ಸಂಗೀತ ನೀಡಿರುವ ಈ ಹಾಡನ್ನು ನಾಯಕ ಅನಿರುದ್ಧ್ ಅವರೆ ಹಾಡಿದ್ದಾರೆ. ಅನಿರುದ್ದ್ ಅವರ ಗಾಯನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.  ಈ ಹಾಡಿನ ಕೆಲವು ಭಾಗ  RAP   ಶೈಲಿಯಲ್ಲಿದ್ದು ಅದನ್ನು ರೋಹಿತ್ ಅವರು ಹಾಡಿದ್ದಾರೆ. ಮೊದಲ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಿಣೆಯಾಗುತ್ತಿದೆ.

    ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ, “ವಿಕ್ರಾಂತ್ ರೋಣ” ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

    ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ “ಲವ್ ಮಾಕ್ಟೇಲ್” ಖ್ಯಾತಿಯ ರೆಚೆಲ್ ಡೇವಿಡ್‌ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್‌, ಶಿವಮಣಿ ಮುಂತಾದವರು “chef ಚಿದಂಬರ” ಚಿತ್ರದ ತಾರಾಬಳಗದಲ್ಲಿದ್ದಾರೆ.

  • ‘ಸೂರ್ಯವಂಶ’ದ ಭವ್ಯ ಪರಂಪರೆ ಹೇಳಲು ಬಂದ ನಟ ಅನಿರುದ್ಧ

    ‘ಸೂರ್ಯವಂಶ’ದ ಭವ್ಯ ಪರಂಪರೆ ಹೇಳಲು ಬಂದ ನಟ ಅನಿರುದ್ಧ

    ನ್ನಡ ಟೆಲಿವಿಷನ್ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನರಂಜನೆ ಉಣಬಡಿಸುತ್ತಿದೆ. ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ಕನ್ಯಾದಾನ, ಗಂಗೆಗೌರಿ, ಅಣ್ಣತಂಗಿ, ಶಾಂಭವಿ, ಸೇವಂತಿ, ರಾಧಿಕಾ, ಮೈನಾ, ಜನನಿ, ಗೌರಿಪುರದ ಗಯ್ಯಾಳಿಗಳು ವೈವಿಧ್ಯಮಯ ನೈಜ ಕತೆಗಳಿಂದ ಜನಮನ ಗೆದ್ದಿವೆ.

    ಬಹುನಿರೀಕ್ಷಿತ ಹೊಸ ಧಾರಾವಾಹಿ ʼಸೂರ್ಯವಂಶʼ (Suryavamsa) ಈ ಸಾಲಿಗೆ ವಿಶಿಷ್ಟ ಸೇರ್ಪಡೆ. ಒಂದು ಹಳೆಯ ಭವ್ಯ ಪರಂಪರೆಯ ಹೆಗ್ಗುರುತಾಗಿ ನಿಂತಿರುವ ʼಸೂರ್ಯವಂಶʼ ಕುಟುಂಬದಲ್ಲಿ ತಾತ ಸತ್ಯಮೂರ್ತಿಗೆ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ವಂಶದ ಕುಡಿಯದೇ ಚಿಂತೆ. ಯಾಕೆಂದರೆ ಇಪ್ಪತ್ತು ವರ್ಷಗಳ ಹಿಂದೆ ಮೊಮ್ಮಗ ಸೂರ್ಯವರ್ಧನ ಕಾಣೆಯಾಗಿದ್ದಾನೆ. ಆದರೆ ಆತ ಬರುವ ಸಾಧ್ಯತೆ ಇಲ್ಲ ಎನ್ನುವುದು ಕುಟುಂಬದ ಉಳಿದ ಸದಸ್ಯರ ನಂಬಿಕೆ. ಬಂದೇ ಬರುತ್ತಾನೆ ಎಂದು ನಂಬಿರುವ ಸತ್ಯಮೂರ್ತಿಯ ಸಮಾಧಾನಕ್ಕೆ ಕುಟುಂಬದ ವಕೀಲರು ಒಬ್ಬ ಸೂಕ್ತ ವ್ಯಕ್ತಿಯ ತಲಾಶ್ ಮಾಡುತ್ತಾರೆ. ಒಂದು ಆಕಸ್ಮಿಕ ಸಂದರ್ಭದಲ್ಲಿ ಒಬ್ಬ ಆಕರ್ಷಕ ಹುಡುಗ ಸಿಕ್ಕೇಬಿಡುತ್ತಾನೆ. ತಾಯಿಯ ಚಿಕಿತ್ಸೆಗೆ ಹಣ ಬೇಕಿರುವ ಒಂದೇ ಕಾರಣಕ್ಕೆ ಆತ ಈ ನಾಟಕಕ್ಕೆ ಒಪ್ಪಿಕೊಳ್ಳುತ್ತಾನೆ. ಅವನೇ ಕಥಾನಾಯಕ ಕರ್ಣ.

    ಕರ್ಣ ʼಸೂರ್ಯವಂಶʼಕ್ಕೆ ಕಾಲಿಟ್ಟ ನಂತರ ಮುಂದಿನ ದಾರಿ ಸವಾಲುಗಳಿಂದ ತುಂಬಿರುತ್ತದೆ. ಮನೆಯೊಳಗೂ ಹೊರಗೂ ವಿರೋಧಿಗಳಿದ್ದಾರೆ. ಅದೇ ಊರಿನಲ್ಲಿ ಸೂರ್ಯವಂಶದ ಬದ್ಧಶತ್ರು ಕಾಳಿಂಗನ ಕುಟುಂಬವಿದೆ. ಅವನ  ಆಟಾಟೋಪ ಮಿತಿಮೀರಿರುತ್ತದೆ. ಅವನನ್ನು ಬಗ್ಗುಬಡಿಯುವುದು ಕರ್ಣನಿಂದ ಮಾತ್ರ ಸಾಧ್ಯ ಅಂತ ಊರ ಜನ ನಂಬಿದ್ದಾರೆ. ಈ ನಡುವೆ ಕಥಾನಾಯಕಿ ಸುರಭಿಯ ಆಗಮನವಾಗುತ್ತದೆ.  ಕತೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಎಲ್ಲ ಸವಾಲುಗಳನ್ನು ಸೂರ್ಯನಾಗಿ ನಟಿಸುತ್ತ ಕರ್ಣ ಹೇಗೆ ಎದುರಿಸುತ್ತಾನೆ ? ಕರ್ಣನೇ ʻಸೂರ್ಯವಂಶʼದ ಕುಡಿ ಸೂರ್ಯವರ್ಧನ ಎನ್ನುವ ವಿಷಯ ಹೇಗೆ, ಯಾರಿಂದ, ಯಾವಾಗ ಬಹಿರಂಗವಾಗುತ್ತದೆ ? ಇವೆಲ್ಲ ಮುಂದಿರುವ ರೋಚಕ ತಿರುವುಗಳು.

    ಕಥಾನಾಯಕ ಸೂರ್ಯವರ್ಧನ/ಕರ್ಣನ ಪಾತ್ರದಲ್ಲಿ ಜನಪ್ರಿಯ ನಟ ಅನಿರುದ್ಧ್ (Aniruddha Jatkar) ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಸುರಭಿ (Surabhi) ಪಾತ್ರದಲ್ಲಿ ಅಶ್ವಿನಿ, ತಾತ ಸತ್ಯಮೂರ್ತಿ ಪಾತ್ರದಲ್ಲಿ ಸುಂದರರಾಜ್, ಖಳನಟ ಕಾಳಿಂಗನ ಪಾತ್ರದಲ್ಲಿ ದಿ.ಉದಯಕುಮಾರ್ರ ಪುತ್ರ ವಿಕ್ರಂ ಉದಯಕುಮಾರ್ ನಟಿಸುತ್ತಿದ್ದಾರೆ. ಉಳಿದಂತೆ ರವಿ ಭಟ್, ಸುಂದರಶ್ರೀ, ಲೋಕೇಶ್ ಬಸವಟ್ಟಿ, ಪುಷ್ಪಾ ಬೆಳವಾಡಿ, ನಯನಾ, ರಾಮಸ್ವಾಮಿ, ಸುನಂದಾ ಮುಂತಾದವರ ದೊಡ್ಡ ತಾರಾಗಣವಿದೆ.

     

    ಹರಿಸಂತು ಪ್ರಧಾನ ನಿರ್ದೇಶನದ ʻಸೂರ್ಯವಂಶʼ ತನ್ವಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ. ಸಂಚಿಕೆ ನಿರ್ದೇಶನ: ಪ್ರಕಾಶ್ ಮುಚ್ಚಳಗುಡ್ಡ, ಛಾಯಾಗ್ರಹಣ: ಶಿವರಾಜು ಎಂ.ಆರ್ ಅವರದು.   ʻಸೂರ್ಯವಂಶʼ ಧಾರಾವಾಹಿ ಮಾರ್ಚ್ 11 ರಿಂದ ಸೋಮ-ಶನಿವಾರ ರಾತ್ರಿ 8 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  • ಸಂಪೂರ್ಣ ಶೂಟಿಂಗ್ ಮುಗಿಸಿದ ಅನಿರುದ್ಧ್ ಜತ್ಕರ್

    ಸಂಪೂರ್ಣ ಶೂಟಿಂಗ್ ಮುಗಿಸಿದ ಅನಿರುದ್ಧ್ ಜತ್ಕರ್

    ಕಿರುತೆರೆಯಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ನಟ ಅನಿರುದ್ಧ್  (Aniruddha Jatkar) ನಾಯಕರಾಗಿ ನಟಿಸಿರುವ, ‘ರಾಘು’ ಚಿತ್ರದ ಖ್ಯಾತಿಯ ಎಂ.ಆನಂದರಾಜ್ ನಿರ್ದೇಶನದ ‘chef ಚಿದಂಬರ’ (Chef Chidambara) ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ನೀಡಿದರು.

    ನಮ್ಮ ಚಿತ್ರದ ಚಿತ್ರೀಕರಣ ಆಗಸ್ಟ್ 10ರಂದು ಆರಂಭವಾಗಿತ್ತು. ಅಕ್ಟೋಬರ್ 10ರಂದು ಮುಕ್ತಾಯವಾಗಿದೆ ಎಂದು ಮಾತು ಪ್ರಾರಂಭಿಸಿದ ನಿರ್ದೇಶಕ ಆನಂದರಾಜ್, ನಮ್ಮ ಚಿತ್ರಕ್ಕೆ ಒಟ್ಟು 29 ದಿನಗಳ ಕಾಲ ಬೆಂಗಳೂರು, ಮಂಗಳೂರು, ತುಮಕೂರು, ದೇವರಾಯನದುರ್ಗ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಡಾರ್ಕ್ ಹ್ಯೂಮರ್ ಜಾನರ್ ನ ಚಿತ್ರ. ಅನಿರುದ್ದ್ ಅವರು ಶೆಫ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿಧಿ ಸುಬ್ಬಯ್ಯ ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೆಚೆಲ್ ಡೇವಿಡ್ ಅವರ ಪಾತ್ರ ಕೂಡ ವಿಭಿನ್ನವಾಗಿದೆ. ಶರತ್ ಲೋಹಿತಾಶ್ವ, ಶಿವಮಣಿ, ಶ್ರೀಧರ್, ಮಾಹಂತೇಶ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

    ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರತಂಡದ ಸಹಕಾರದಿಂದ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭವಾಗಲಿದೆ ಎಂದು ತಿಳಿಸಿದರು. ನಾನು ಯಾವತ್ತಿಗೂ ಅಡುಗೆಮನೆ ಕಡೆ ಹೋದವನಲ್ಲ. ಈ ಚಿತ್ರದಲ್ಲಿ ಮೊದಲ ಬಾರಿಗೆ ಶೆಫ್ ಪಾತ್ರ ನಿರ್ವಹಿಸಿದ್ದೇನೆ. ತರಬೇತಿ ಪಡೆದು ಈ ಪಾತ್ರ ನಿರ್ವಹಣೆ ಮಾಡಿದ್ದೇನೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾದರೂ, ನಿರ್ದೇಶಕರು ಕಥೆಯನ್ನು ಹಾಸ್ಯದ ಮೂಲಕ ಹೇಳಿದ್ದಾರೆ.  ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ ಎಂದರು ನಾಯಕ ಅನಿರುದ್ಧ್ ಜತಕರ್.

    ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎನ್ನುತ್ತಾರೆ ನಾಯಕಿ ನಿಧಿ ಸುಬ್ಬಯ್ಯ (Nidhi Subbaiah). ಅನು ಎಂಬುದು ನನ್ನ ಪಾತ್ರದ ಹೆಸರು. ನನ್ನ ಪಾತ್ರ ಹಾಗೂ ಕಥೆ ಎರಡೂ ಚೆನ್ನಾಗಿದೆ ಎಂದರು ನಾಯಕಿ ರೆಚೆಲ್ ಡೇವಿಡ್. ನಿರ್ಮಾಪಕಿ ರೂಪ ಡಿ.ಎನ್, ಛಾಯಾಗ್ರಾಹಕ ಉದಯ್ ಲೀಲಾ, ಚಿತ್ರದಲ್ಲಿ ‌ನಟಿಸಿರುವ ಮಹಾಂತೇಶ್, ಸೌಂಡ್ ಇಂಜಿನಿಯರ್ ಬಿ.ಆರ್ ನವೀನ್ ಕುಮಾರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಚಿತ್ರಕ್ಕೆ ನಿರ್ದೇಶಕರೆ ಕಥೆ ರಚಿಸಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಆಶಿಕ್ ಹುಸಗುಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ ಅವರ ನೃತ್ಯ ನಿರ್ದೇಶನ “chef ಚಿದಂಬರ” ಚಿತ್ರಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Breaking News: ಅನಿರುದ್ಧ ಬ್ಯಾನ್ ಪ್ರಕರಣ ಸುಖಾಂತ್ಯ – ಕೈ ಕುಲುಕಿ ಅನುಮತಿ

    Breaking News: ಅನಿರುದ್ಧ ಬ್ಯಾನ್ ಪ್ರಕರಣ ಸುಖಾಂತ್ಯ – ಕೈ ಕುಲುಕಿ ಅನುಮತಿ

    ಜೊತೆ ಜೊತೆಯಲಿ (Jothe Jotheyali) ಧಾರಾವಾಹಿಯಲ್ಲಿ ಅನಿರುದ್ಧ ಅಸಹಕಾರ ತೋರಿದರು ಮತ್ತು ಧಾರಾವಾಹಿ ತಂಡಕ್ಕೆ ನಷ್ಟವನ್ನುಂಟು ಮಾಡಿದರು ಅನ್ನುವ ಕಾರಣಕ್ಕಾಗಿ ಕನ್ನಡ ಕಿರುತೆರೆ ನಿರ್ಮಾಪಕರ ಸಂಘವು ಅನಿರುದ್ಧ (Aniruddha) ಅವರಿಗೆ ಅಲಿಖಿತ ಬ್ಯಾನ್ ಘೋಷಣೆ ಮಾಡಿತ್ತು. ಇಂದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಭೆ ಮಾಡಿ, ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

    ಸಭೆಯಲ್ಲಿ ಹಿರಿಯ ನಿರ್ದೇಶಕರಾದ ಲಿಂಗದೇವರು, ಶೇಷಾದ್ರಿ ಹಾಗೂ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ ಶಿವಕುಮಾರ್, ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಸೇರಿದಂತೆ ಹಲವರು ಹಾಜರಿದ್ದರು. ಅನಿರುದ್ಧ ಮತ್ತು ನಿರ್ಮಾಪಕರ ಸಂಘದ ಅಹವಾಲನ್ನು ಕೇಳಿಸಿಕೊಂಡು, ಹೇರಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ. ಇದನ್ನೂ ಓದಿ: Breaking News- ಅನಿರುದ್ಧ ಬ್ಯಾನ್ ವಿಚಾರ: ಫಿಲ್ಮ್ ಚೇಂಬರ್ ಗೆ ಬಾರದಿರಲು ನಿರ್ಮಾಪಕರ ಸಂಘ ನಿರ್ಧಾರ

    ಅನಿರುದ್ಧ ಅವರು ಸೂರ್ಯವಂಶ ಧಾರಾವಾಹಿಯಲ್ಲಿ ನಾಯಕರಾಗಿ ನಟಿಸುವುದಕ್ಕೂ ಆಕ್ಷೇಪಣೆ ವ್ಯಕ್ತಪಡಿಸಲಾಗಿತ್ತು. ಹಾಗಾಗಿ ಸಮಸ್ಯೆ ಮತ್ತಷ್ಟು ಜಟಿಲಗೊಂಡಿತ್ತು. ಇದೀಗ ಆ ಧಾರಾವಾಹಿಯಲ್ಲೂ ನಟಿಸಲು ಅನಿರುದ್ಧ ಅವರಿಗೆ ಅವಕಾಶ ಸಿಕ್ಕಿದೆ. ಎಸ್.ನಾರಾಯಣ್ ನಿರ್ದೇಶನದಲ್ಲಿ ಈ ಧಾರಾವಾಹಿ ಯಾವುದೇ ಅಡೆತಡೆ ಇಲ್ಲದೇ ಮೂಡಿ ಬರಲಿದೆ.

    ಅನಿರುದ್ಧ ಅವರಿಗೆ ಸಭೆಯಲ್ಲಿ ಹಲವು ಸಲಹೆಗಳನ್ನೂ ನೀಡಲಾಗಿದ್ದು, ನಿರ್ಮಾಪಕರ ಹಿತದೃಷ್ಟಿಯನ್ನೂ ಕಾಪಾಡುವಂತೆ ತಿಳಿಸಲಾಗಿದೆ. ಮುಂದೆ ಹೀಗೆ ಆಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಈ ಮೂಲಕ ಎಲ್ಲ ಸಮಸ್ಯೆಗಳಿಗೂ ಸಭೆಯಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ಇದನ್ನೂ ಓದಿ: ‘ಕಾಂತಾರ 2’ ಸಿನಿಮಾ ಮಾಡಲು ಪಂಜುರ್ಲಿ ದೈವದಿಂದ ಸಿಕ್ತು ಅನುಮತಿ

    Live Tv
    [brid partner=56869869 player=32851 video=960834 autoplay=true]

  • Breaking News- ಅನಿರುದ್ಧ ಬ್ಯಾನ್ ವಿಚಾರ: ಫಿಲ್ಮ್ ಚೇಂಬರ್ ಗೆ ಬಾರದಿರಲು ನಿರ್ಮಾಪಕರ ಸಂಘ ನಿರ್ಧಾರ

    Breaking News- ಅನಿರುದ್ಧ ಬ್ಯಾನ್ ವಿಚಾರ: ಫಿಲ್ಮ್ ಚೇಂಬರ್ ಗೆ ಬಾರದಿರಲು ನಿರ್ಮಾಪಕರ ಸಂಘ ನಿರ್ಧಾರ

    ಕಿರುತೆರೆ ನಿರ್ಮಾಪಕರ ಸಂಘವು ನಟ  ಅನಿರುದ್ಧ ಮೇಲೆ ತಗೆದುಕೊಂಡು ಕ್ರಮದ ಕುರಿತಾಗಿ ಇಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಅನಿರುದ್ಧ, ನಿರ್ದೇಶಕ ಎಸ್.ನಾರಾಯಣ್ ಹಾಗೂ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಹಾಗೂ ಪದಾಧಿಕಾರಿಗಳು ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈ ಸಭೆಯಲ್ಲಿ ತಾವು ಭಾಗಿ ಆಗುತ್ತಿಲ್ಲವೆಂದು ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಡಿಜಿಟಲ್ ನೊಂದಿಗೆ ಮಾತನಾಡಿದ ಭಾಸ್ಕರ್, ‘ಇದು ಕಿರುತೆರೆಗೆ ಸಂಬಂಧಿಸಿದ ವಿಚಾರ. ವಾಣಿಜ್ಯ ಮಂಡಳಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಈ ಸಮಸ್ಯೆ ಬಗೆಹರಿಯಬೇಕಾಗಿದ್ದು ನಮ್ಮಲ್ಲೇ. ಹಾಗಾಗಿ ವಾಣಿಜ್ಯ ಮಂಡಳಿಗೆ ಹೋಗದಿರಲು ನಿರ್ಧರಿಸಿದ್ದೇವೆ. ಚಿತ್ರೋದ್ಯಮದ ಮಾತೃಸಂಸ್ಥೆಯ ಅಧ್ಯಕ್ಷರಾದ ಭಾ.ಮಾ ಹರೀಶ್ ಅವರು ನಮಗೆ ಕರೆ ಮಾಡಿದ್ದರು. ಜೊತೆಗೆ ಅನಿರುದ್ಧ ಬರುತ್ತಾರೆ ಅಂದರು. ಅನಿರುದ್ಧ ಬರುತ್ತಾರೆ ಅಂದರೆ, ನಾವು ಬರುವುದಿಲ್ಲ ಎಂದು ಹೇಳಿದ್ದೇವೆ’ ಎಂದರು.

    ಇಂದು ಸಂಜೆ ನಿರ್ಮಾಪಕರ ಸಂಘದಲ್ಲೇ ಮತ್ತೊಂದು ಸಭೆ ನಡೆಯಲಿದ್ದು, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು ಹಾಗೂ ಹಿರಿಯ ನಿರ್ದೇಶಕರು ಈ ವಿಷಯದ ಕುರಿತು ಚರ್ಚಿಸಿ ಒಂದು ತೀರ್ಮಾನಕ್ಕೆ ಬರುವುದಾಗಿಯೂ ಭಾಸ್ಕರ್ ತಿಳಿಸಿದ್ದಾರೆ. ಸಭೆಯಲ್ಲಿ ಬಿ.ಸುರೇಶ್, ಶೇಷಾದ್ರಿ, ಎಸ್.ವಿ. ಶಿವಕುಮಾರ್, ರವಿಕಿರಣ್, ರವಿ ಗರಣಿ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.

    ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ನ ಒಂದು ಅಂಗ ಸಂಸ್ಥೆಯಾಗಿರುವ ಕಿರುತೆರೆ ನಿರ್ಮಾಪಕರ ಸಂಘವು ಯಾವುದೇ ಕಾರಣಕ್ಕೂ ಅನಿರುದ್ಧ ಅವರ ಮಾತನ್ನು ಒಪ್ಪುತ್ತಿಲ್ಲ. ಎರಡು ವರ್ಷಗಳ ಕಾಲ ಯಾವುದೇ ನಿರ್ಮಾಪಕರು ಅನಿರುದ್ಧ ಅವರಿಗೆ ಅವಕಾಶ ಕೊಡುವುದು ಬೇಡ ಎಂದು ಹೊರಡಿಸಿರುವ ಆದೇಶವನ್ನು ವಾಪಸ್ಸು ಪಡೆಯುತ್ತಿಲ್ಲ. ಸಂಧಾನಕ್ಕೂ ಸಿದ್ಧರಾಗಿಲ್ಲ. ಹಾಗಾಗಿ ಅನಿರುದ್ಧ ವಾಣಿಜ್ಯ ಮಂಡಳಿಯ ಕದ ತಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅನಿರುದ್ಧ ಬ್ಯಾನ್ ವಿಚಾರ: ಮಧ್ಯಾಹ್ನ 3 ಗಂಟೆಗೆ ಮಹತ್ವದ ಸಭೆ

    ಅನಿರುದ್ಧ ಬ್ಯಾನ್ ವಿಚಾರ: ಮಧ್ಯಾಹ್ನ 3 ಗಂಟೆಗೆ ಮಹತ್ವದ ಸಭೆ

    ನ್ನಡ ಕಿರುತೆರೆ ನಿರ್ಮಾಪಕರ ಸಂಘವು ನಟ ಅನಿರುದ್ಧ ಅವರ ವಿರುದ್ಧ ಹೊರಡಿಸಿರುವ ಅಲಿಖಿತ ಬ್ಯಾನ್ ವಿಚಾರ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚರ್ಚೆಯಾಗಲಿದೆ. ಮಧ್ಯಾಹ್ನ 3 ಗಂಟೆಗೆ ನಿರ್ಮಾಪಕರ ಸಂಘ ಮತ್ತು ವಾಣಿಜ್ಯ ಮಂಡಳಿಯು ಜಂಟಿಯಾಗಿ ಅನಿರುದ್ಧ ಜೊತೆ ಮಾತನಾಡಲಿದೆ. ಈ ಸಂದರ್ಭದಲ್ಲಿ ಅನಿರುದ್ಧ ಮೇಲಿನ ನಿಷೇಧವನ್ನು ಹಿಂದಕ್ಕೆ ಪಡೆಯುತ್ತಾರಾ? ಅಥವಾ ಮುಂದುವರೆಸುತ್ತಾರಾ ಎನ್ನುವುದನ್ನು ಕಾದು ನೋಡಬೇಕು. ಮಧ್ಯಾಹ್ನದ ನಂತರ ಅನಿರುದ್ಧ ಭವಿಷ್ಯ ನಿರ್ಧಾರವಾಗಲಿದೆ.

    ಜೊತೆ ಜೊತೆಯಲಿ ಧಾರಾವಾಹಿ ವಿಚಾರವಾಗಿ ಅನಿರುದ‍್ಧ ಅವರ ಮೇಲೆ ಗುರುತರ ಆರೋಪಗಳನ್ನು ಮಾಡಲಾಗಿತ್ತು. ಆ ಆರೋಪಗಳನ್ನು ಅನಿರುದ್ಧ ನಿರಾಕರಿಸಿದರೂ, ನಿರ್ಮಾಪಕರ ಸಂಘವು ಅನಿರುದ್ಧ ಮೇಲೆ ನಿಷೇಧ ಹೇರಿತ್ತು. ಇದೀಗ ಅನಿರುದ್ಧ ಅವರು ಸೂರ್ಯವಂಶ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಈ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಅವರನ್ನು ಈ ಧಾರಾವಾಹಿಯಿಂದಲೂ ಕೈ ಬಿಡುವಂತೆ ಒತ್ತಡ ಹೇರಲಾಗುತ್ತಿದೆ. ಇದನ್ನೂ ಓದಿ:  ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್

    ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್, ‘ಗಲಾಟೆ ಆಗಿದ್ದು ಕಿರುತೆರೆ ನಿರ್ಮಾಪಕರ ಸಂಘಕ್ಕೂ ಮತ್ತು ಅನಿರುದ್ಧ ಅವರಿಗೂ ನಿಜ. ಆದರೆ, ಅನಿರುದ್ಧ ಅವರು ವಾಣಿಜ್ಯ ಮಂಡಳಿಯ ಸದಸ್ಯರು ಮತ್ತು ಈ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿರುವ ಎಸ್.ನಾರಾಯಣ್ ಅವರು ಸಿನಿಮಾ ರಂಗದವರು. ಅದಕ್ಕೂ ಹೆಚ್ಚಾಗಿ ಈ ವಿಷಯವನ್ನು ಸೌಹಾರ್ದಯುತವಾಗಿ ಮುಗಿಸಿಕೊಡಿ ಎಂದು ಅನಿರುದ್ಧ ಮಂಡಳಿಗೆ ಪತ್ರ ಬರೆದಿದ್ದಾರೆ. ಹಾಗಾಗಿ ಕರೆಯಿಸಿಕೊಂಡು ಮಾತನಾಡಲಿದ್ದೇವೆ’ ಅಂದರು.

    ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ನ ಒಂದು ಅಂಗ ಸಂಸ್ಥೆಯಾಗಿರುವ ಕಿರುತೆರೆ ನಿರ್ಮಾಪಕರ ಸಂಘವು ಯಾವುದೇ ಕಾರಣಕ್ಕೂ ಅನಿರುದ್ಧ ಅವರ ಮಾತನ್ನು ಒಪ್ಪುತ್ತಿಲ್ಲ. ಎರಡು ವರ್ಷಗಳ ಕಾಲ ಯಾವುದೇ ನಿರ್ಮಾಪಕರು ಅನಿರುದ್ಧ ಅವರಿಗೆ ಅವಕಾಶ ಕೊಡುವುದು ಬೇಡ ಎಂದು ಹೊರಡಿಸಿರುವ ಆದೇಶವನ್ನು ವಾಪಸ್ಸು ಪಡೆಯುತ್ತಿಲ್ಲ. ಸಂಧಾನಕ್ಕೂ ಸಿದ್ಧರಾಗಿಲ್ಲ. ಹಾಗಾಗಿ ಅನಿರುದ್ಧ ವಾಣಿಜ್ಯ ಮಂಡಳಿಯ ಕದ ತಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]