Tag: Aniruddh

  • ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ

    ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ

    ಕಿರುತೆರೆಯ ಮುದ್ದಾದ ಜೋಡಿ ಅನಿರುದ್ಧ್ (Aniruddha Jatkar) ಮತ್ತು ಅನು ಸಿರಿಮನೆ (Anu Sirimane) ಮತ್ತೆ ಒಂದಾಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. `ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮೂಲಕ ಮನೆ ಮಾತಾದ ಈ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

    ಟಿವಿ ಲೋಕದ ಸಕ್ಸಸ್‌ಫುಲ್ `ಜೊತೆ ಜೊತೆಯಲಿ’ ಸೀರಿಯಲ್‌ನಿಂದ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಹೊರಬಂದ ಮೇಲೆ ಮತ್ತೆ ಆರ್ಯ ಮತ್ತು ಅನು ಜೊತೆಯಾಗಿ ಈ ಮೂಲಕ ತಮ್ಮ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅನಿರುದ್ಧ್ ಮಾಡ್ತಿದ್ದ ಪಾತ್ರವನ್ನ ಇದೀಗ ಹರೀಶ್ ರಾಜ್(Harish Raj) ನಿಭಾಯಿಸುತ್ತಿದ್ದಾರೆ. ಅನಿರುದ್ಧ್ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್‌ನ ತೆರೆಯ ಮೇಲೆ ಮಿಸ್ ಮಾಡಿಕೊಳ್ತಿರುವ ಫ್ಯಾನ್ಸ್‌ಗೆ ಈ ಜೋಡಿಯ ನಯಾ ಫೋಟೋ ನೋಡಿ ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಬ್ರೇಕಪ್ ಮಾಡಿಕೊಂಡ ರಾಕೇಶ್ – ಅಮೂಲ್ಯ

    ಅನಿರುದ್ಧ್ ಮತ್ತು ಭಾರತಿ ವಿಷ್ಣುವರ್ಧನ್ (Bharathi Vishnuvardhan) ಅವರ ಹೊಸ ಮನೆಯ ಗೃಹ ಪ್ರವೇಶಕ್ಕೆ (House Warming) ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ (Megha Shetty) ಸಾಕ್ಷಿಯಾಗಿದ್ದಾರೆ. ಅನಿರುದ್ಧ್ ಅವರ ಹೊಸ ಮನೆಯ ಸಂಭ್ರಮಕ್ಕೆ ಮೇಘಾ ಕೂಡ ಸಾಕ್ಷಿಯಾಗಿದ್ದು, ತಾವು ಕೂಡ ಅವರ ಕುಟುಂಬದಲ್ಲಿ ಒಬ್ಬರಾಗಿ ಒಳ್ಳೆಯ ಸಮಯವನ್ನ ಕಳೆದಿದ್ದಾರೆ. ಆರ್ಯ ಮನೆಯ ಗೃಹಪ್ರವೇಶದ ಸಂಭ್ರಮದ ಫೋಟೋವನ್ನು ನಟಿ ಅನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಆರ್ಯ ಮತ್ತು ಜೋಡಿ ಹೊಸ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಬಹುದಿನಗಳ ನಂತರ ಒಟ್ಟಿಗೆ ಕಾಣಿಸಿಕೊಳ್ಳುವುದರ ಮೂಲಕ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಬಿಗ್ ಬಾಸ್’ ಸೀಸನ್ 9ಕ್ಕೆ ಪ್ರವೇಶಿಸುವ ಸ್ಪರ್ಧಿಗಳು ಇವರೇ ನೋಡಿ

    `ಬಿಗ್ ಬಾಸ್’ ಸೀಸನ್ 9ಕ್ಕೆ ಪ್ರವೇಶಿಸುವ ಸ್ಪರ್ಧಿಗಳು ಇವರೇ ನೋಡಿ

    ಕಿರುತೆರೆಯ ಬಿಗ್ ಶೋ ಬಿಗ್ ಬಾಸ್‌ಗೆ ಕೌಂಟ್ ಡೌನ್ ಶುರುವಾಗಿದೆ. ಇದೇ ಸೆಪ್ಟೆಂಬರ್ 24ಕ್ಕೆ ಶುರುವಾಗಲಿದೆ. ಪ್ರತಿ ದಿನ ಟಿವಿ ಪರದೆಯಲ್ಲಿ ರಂಜಿಸಲು ಬಿಗ್ ಬಾಸ್ ಬರುತ್ತಿದೆ. ಈ ಸೀಸನ್ 9ಕ್ಕೆ ಯಾರೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಈ ಕುರಿತ ಡಿಟೈಲ್ಸ್ ಇಲ್ಲಿದೆ.

    ಬಿಗ್ ಬಾಸ್ ಓಟಿಟಿ ಮುಗಿದು, ಸೀಸನ್ 9ಕ್ಕೆ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ. ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಸ್ಪರ್ಧಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ. ಓಟಿಟಿಯಲ್ಲಿ ಗಮನ ಸೆಳೆದ ದಿ ಬೆಸ್ಟ್ ಸ್ಪರ್ಧಿಗಳಾದ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ ಈ ನಾಲ್ಕು ಜನ ಟಿವಿ ಬಿಗ್ ಬಾಸ್‌ಗೆ ಬರೋದು ಪಕ್ಕಾ.

    ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸಿರುವ ನಟಿ ಪ್ರೇಮ ಅವರು ಟಿವಿ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರರಂಗದಲ್ಲಿ ಅಂತರ ಕಾಯ್ದುಕೊಂಡಿರುವ ನಟಿ ಸೀಸನ್ 9ರಲ್ಲಿ ಬರಲಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಬರ್ತ್‌ಡೇ ಸಾಂಗ್ ಹೇಳುವ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಕಾಫಿನಾಡು ಚಂದು ಬಿಗ್ ಬಾಸ್‌ಗೆ ಬರಬೇಕು ಎಂಬುದು ಅಭಿಮಾನಿಗಳ ಆಶಯ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    `ಕಮಲಿ’ ಸೀರಿಯಲ್ ಖ್ಯಾತಿಯ ಅಮೂಲ್ಯ ಗೌಡ ಮತ್ತು ʻಮುದ್ದುಮಣಿಗಳುʼ ಖ್ಯಾತಿಯ ಸಮೀಕ್ಷಾ ಕೂಡ ಈ ಶೋನಲ್ಲಿ ಭಾಗವಹಿಸಲಿದ್ದಾರೆ.

    ʻಗಿಚ್ಚಿ ಗಿಲಿಗಿಲಿʼ ಖ್ಯಾತಿಯ ಪ್ರಿಯಾಂಕ ಕಾಮತ್ ಕೂಡ ಟಿವಿ ಸೀಸನ್ ಬಿಗ್ ಬಾಸ್ 9ರಲ್ಲಿ ಬರಲಿದ್ದಾರೆ. ಇವರ ಜೊತೆ ದಿವ್ಯ ವಸಂತ ಕೂಡ ಇರಲಿದ್ದಾರೆ.

    ಮಜಾ ಭಾರತ ಶೋ ಮೂಲಕ ಮೋಡಿ ಮಾಡಿರುವ ಚಂದ್ರಪ್ರಭ ಮತ್ತು ರಾಘವೇಂದ್ರ ಅವರು ಕೂಡ ತಮ್ಮ ಕಾಮಿಡಿ ಮೂಲಕ ದೊಡ್ಮನೆಯಲ್ಲಿ ರಂಜಿಸಲಿದ್ದಾರೆ. ಸರಿಗಮಪ ಶೋನ ಗಾಯಕಿ ಆಶಾ ಭಟ್ ಕೂಡ ಇರಲಿದ್ದಾರೆ. ಸೆಪ್ಟೆಂಬರ್‌ 24ರಂದು ಸಂಜೆ 6ಕ್ಕೆ ಗ್ರ್ಯಾಂಡ್‌ ಲಾಂಚ್‌ನಲ್ಲಿ ಸ್ಪರ್ಧಿಗಳ ಪಟ್ಟಿ ಅಧಿಕೃತವಾಗಿ ತಿಳಿಯಲಿದೆ.

    Live Tv
    [brid partner=56869869 player=32851 video=960834 autoplay=true]

  • ದಯಮಾಡಿ ಮಂಗಳಮುಖಿಯರಿಗೆ ಗೌರವಾನ್ವಿತ ಉದ್ಯೋಗ ಕಲ್ಪಿಸಿ: ಅನಿರುದ್ಧ್

    ದಯಮಾಡಿ ಮಂಗಳಮುಖಿಯರಿಗೆ ಗೌರವಾನ್ವಿತ ಉದ್ಯೋಗ ಕಲ್ಪಿಸಿ: ಅನಿರುದ್ಧ್

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸ್ವಚ್ಛತೆಗೆ ಹೆಚ್ಚು ಮಹತ್ವ ಕೊಡುತ್ತಿರುವ ನಟ ಅನಿರುದ್ಧ್ ಇದೀಗ ಮಂಗಳಮುಖಿಯರ ಪರ ದನಿ ಎತ್ತಿದ್ದಾರೆ.

    ಈ ಸಂಬಂಧ ಇನ್‍ಸ್ಟಾದಲ್ಲಿ ಬರೆದುಕೊಂಡಿರುವ ಅವರು, ನಮ್ಮ ಸರ್ಕಾರ, ಸಂಸ್ಥೆ ಹಾಗೂ ಉದ್ಯಮಿಗಳಲ್ಲಿ ಕಳಕಳಿಯ ಮನವಿ. ದಯವಿಟ್ಟು ಎಲ್ಲಾ ಮಂಗಳಮುಖಿಯರಿಗೂ ಗೌರವಾನ್ವಿತ ಉದ್ಯಮ ಕಲ್ಪಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಮಂಗಳಮುಖಿಯರಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂದು ನಟ ಅನಿರುದ್ಧ್ ಸರ್ಕಾರ ಮತ್ತು ಉದ್ಯಮಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ. ಎಲ್ಲಾ ಮಂಗಳಮುಖಿಯರಿಗೂ ಗೌರವಾನ್ವಿತ ಉದ್ಯಮ ಕಲ್ಪಿಸಿಕೊಡಿ ಎಂದು ನಟ ಕೇಳಿಕೊಂಡಿದ್ದಾರೆ.

    ಈಗಾಗಲೇ ಅನಿರುದ್ಧ್ ಅವರು ಸ್ವಚ್ಛತೆ ಇಲ್ಲದ ಪ್ರದೇಶಗಳ ಫೋಟೋಗಳನ್ನು ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಬಿಬಿಎಂಪಿ ಗಮನಕ್ಕೆ ಂತರುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಆ ಪ್ರದೇಶಗಳನ್ನು ಶುಚಿಗೊಳಿಸುವಂತೆ ಮನವಿ ಮಾಡುತ್ತಾ ಬರುತ್ತಿದ್ದಾರೆ. ಜೊತೆಗೆ ಇದೀಗ ಸಮಾಜದಲ್ಲಿ ಕಡೆಗಣಿಸಲ್ಪಟ್ಟಿರುವ, ಅವಕಾಶ ವಂಚಿತ ಮಂಗಳಮುಖಿಯರಿಗೆ ಜೀವನ ಕಲ್ಪಿಸಿಕೊಡಲು ಮನವಿ ಮಾಡಿದ್ದಾರೆ.

    ಸದ್ಯ ನಟನ ಈ ಮನವಿಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಮತ್ತು ಬೆಂಬಲ ವ್ಯಕ್ತವಾಗುತ್ತಿದೆ.

     

    View this post on Instagram

     

    A post shared by Aniruddha Jatkar (@aniruddhajatkar)

  • ಅಂಬಿಗೊಂದು ನ್ಯಾಯ, ವಿಷ್ಣುವಿಗೊಂದು ನ್ಯಾಯವೇ – ಮತ್ತೆ ಸಿಡಿದ ಅನಿರುದ್ಧ್

    ಅಂಬಿಗೊಂದು ನ್ಯಾಯ, ವಿಷ್ಣುವಿಗೊಂದು ನ್ಯಾಯವೇ – ಮತ್ತೆ ಸಿಡಿದ ಅನಿರುದ್ಧ್

    ಬೆಂಗಳೂರು: ಅಪ್ಪಾಜಿ ಶಾರೀರಕವಾಗಿ ದೂರವಾಗಿ ಒಂಭತ್ತು ವರ್ಷಗಳು ಕಳೆದಿವೆ. ಇದೂವರೆಗೆ ಸ್ಮಾರಕ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಬೆಂಗಳೂರಲ್ಲಿ ಸಿನಿಮಾ ಮತ್ತು ಟಿಲಿವಿಷನ್ ಸಂಸ್ಥೆಯ ಶಾಖೆ ತೆರೆಯಬೇಕು ಎಂದು ಮತ್ತೊಮ್ಮೆ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಆಗ್ರಹಿಸಿದ್ದಾರೆ.

    ಶುಕ್ರವಾರ ನಡೆದ ಸಭೆಯಲ್ಲಿ ಮೈಸೂರಿನಲ್ಲಿ ಅಂಬರೀಶ್ ಅವರ ಹೆಸರಲ್ಲಿ ಫಿಲ್ಮ್ ಸಿಟಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಪ್ಪಿಗೆ ಸೂಚಿಸಿದ್ದಾರೆ. ಆದ್ರೆ ಅಪ್ಪಾಜಿ ಹೆಸರಲ್ಲಿ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಕೇವಲ ಬೇರೆ ಇಬ್ಬರ ನಾಯಕರ ಹೆಸರನ್ನು ತೆಗೆದುಕೊಳ್ಳುತ್ತಾರೆ. ಹಾಗಾದ್ರೆ ಅಪ್ಪಾಜಿ ಕನ್ನಡ ಚಲನಚಿತ್ರಕ್ಕೆ ಸೇವೆ ಸಲ್ಲಿಸಿಲ್ಲವೇ ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಕಳೆದ 9 ವರ್ಷಗಳಿಂದ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದೇವೆ. ಎರಡು ದಿನದ ಹಿಂದೆ ನಾನು ಆವೇಷಭರಿತನಾಗಿ ಮಾತಾಡಿದಾಗ ಮಾನ್ಯ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದರು. ಸ್ಪಷ್ಟನೆ ನೀಡಿ ಟ್ವೀಟ್ ಸಹ ಮಾಡಿದರು. ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅಂಬಿ ಅಂಕಲ್ ಹೆಸರಲ್ಲಿ ಫಿಲ್ಮ್ ಸಿಟಿ ಮತ್ತು ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುತ್ತಿದೆ ಎಂದು ಘೋಷಣೆ ಮಾಡಿದ್ದಾರೆ. ಈ ಉತ್ಸಾಹದ ಕೆಲಸ ಅಪ್ಪಾಜಿ ಹೆಸರಲ್ಲಿ ಮಾತ್ರ ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿ ಅಸಮಾಧಾನವನ್ನು ಹೊರ ಹಾಕಿದರು.

    ಸಿಎಂ ಫಿಲ್ಮ್ ಸಿಟಿ, ವಿಶ್ವವಿದ್ಯಾಲಯ ಮಾತುಕತೆಗಳು ನಡೆಯುತ್ತಿವೆ. ಕನ್ನಡ ಚಿತ್ರರಂಗದಲ್ಲಿ ಮೂವರು ನಾಯಕರು ಹೆಸರು ಒಟ್ಟಿಗೆ ತೆಗೆದುಕೊಳ್ಳುತ್ತಾರೆ. ಆದ್ರೆ ಸ್ಮಾರಕ ವಿಚಾರದಲ್ಲಿ ಅಪ್ಪಾಜಿ ಅವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv 

  • ಸ್ಮಾರಕ ಸಂಘರ್ಷ: ಇಂದು ಸಿಎಂಗೆ ಅನಿರುದ್ಧ್ ಮನವಿ ಪತ್ರ

    ಸ್ಮಾರಕ ಸಂಘರ್ಷ: ಇಂದು ಸಿಎಂಗೆ ಅನಿರುದ್ಧ್ ಮನವಿ ಪತ್ರ

    – ವಿಷ್ಣು ಕುಟುಂಬಸ್ಥರ ಜೊತೆ ನಿರ್ಮಾಪಕರಿಂದ ಚರ್ಚೆ

    ಬೆಂಗಳೂರು: ರಾಜ್ಯದಲ್ಲಿ ಅಂಬಿ ಸಾವಿನ ಬಳಿಕ ವಿಷ್ಣು ಸ್ಮಾರಕದ ಚರ್ಚೆಯೆದ್ದಿದೆ. ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ಆಗಬೇಕೆಂದು ಭಾರತಿ ಪಟ್ಟುಹಿಡಿದಿದ್ದಾರೆ. ಆದ್ರೆ ಇದೆಲ್ಲದರ ನಡುವೆ ಇಂದು ಸಿಎಂಗೆ ಅನಿರುದ್ಧ್ ಪತ್ರ ಬರೆಯಲಿದ್ದಾರೆ. ಅತ್ತ ನಿರ್ಮಾಪಕ ಸಂಘ ಇಂದು ವಿಷ್ಣು ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಲಿದೆ.

    ಕನ್ನಡ ಚಿತ್ರರಂಗದ ಮೂರು ಮಾಣಿಕ್ಯಗಳಾದ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಇತಿಹಾಸದ ಪುಟ ಸೇರಿದ್ದಾರೆ. ಈ ಮೂವರು ಕಲಾರತ್ನಗಳು ಬದುಕಿದ್ದಾಗ ಎಂದೂ ವಿವಾದವನ್ನ ಮೈಮೇಲೆ ಎಳೆದುಕೊಂಡವರಲ್ಲ. ಸಾಹಸಸಿಂಹ ವಿಷ್ಣುವರ್ಧನ್ ಅವರಂತೂ ವಿವಾದದಿಂದ ದೂರವೇ ಉಳಿದವರು. ವಿಷ್ಣು ಅಗಲಿ 10 ವರ್ಷಗಳಾಗಿದ್ದು, ಸ್ಮಾರಕ ನಿರ್ಮಾಣವಾಗಿಲ್ಲ. ರಾಜ್-ಅಂಬಿ ಅವರಂತೆ ವಿಷ್ಣು ಅವರ ಸ್ಮಾರಕವನ್ನೂ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಬೇಕು ಅನ್ನೋ ಚರ್ಚೆ ಜೋರಾಗಿದೆ. ಇದನ್ನೂ ಓದಿ: ನಿಮಗೆ ಏನು ಅನ್ನಿಸುತ್ತೆ ಹಾಗೆಯೇ ಮಾಡಿ: ಭಾರತಿ ವಿಷ್ಣುವರ್ಧನ್

    ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ಬೇಡ. ಅಭಿಮಾನ್ ಸ್ಟುಡಿಯೋ ಅಥವಾ ಮೈಸೂರಲ್ಲೇ ಮಾಡಿ. ಈ ಬಗ್ಗೆ ಡಿಸೆಂಬರ್ 30ರೊಳಗೆ ಸರ್ಕಾರ ಒಂದು ತೀರ್ಮಾನಕ್ಕೆ ಬರಬೇಕು ಅಂತ ಭಾರತಿ ವಿಷ್ಣುವರ್ಧನ್ ಎಚ್ಚರಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ವೇದಿಕೆಯಲ್ಲಿ ಮಾತನಾಡಿದ ಅನಿರುದ್ಧ್, ಸ್ಮಾರಕ ನಿರ್ಮಾಣದ ಬಗ್ಗೆ ಸಿಎಂ ಕುಮಾರಸ್ವಾಮಿಗೆ ಮನವಿ ಪತ್ರ ಕೊಡ್ತೀವಿ ಅಂದ್ರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಾಪಕ ಮುನಿರತ್ನ, ಇಂದು ಮಧ್ಯಾಹ್ನ 2 ಗಂಟೆಗೆ ವಿಷ್ಣು ಕುಟುಂಬಸ್ಥರನ್ನು ಭೇಟಿ ಮಾಡಿ ಚರ್ಚಿಸ್ತೇನೆ ಎಂದರು.

    ವಿಷ್ಣುವರ್ಧನ್ ಅವರ ಸಮಾಧಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೊದಲ್ಲಿ ಮಾಡಲಾಗಿದೆ. ಇಲ್ಲೇ ಸ್ಮಾರಕ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಆದರೆ, ಈ ಸ್ಟುಡಿಯೊ ಜಾಗ ಇದೀಗ ವ್ಯಾಜ್ಯದಲ್ಲಿರುವುದೇ ಸ್ಮಾರಕ ನಿರ್ಮಾಣದ ಹಿನ್ನಡೆಗೆ ಕಾರಣವಾಗಿದೆ. ಒಟ್ಟಿನಲ್ಲಿ ಇಂದು ವಿಷ್ಣು ಸ್ಮಾರಕ ನಿರ್ಮಾಣದ ವಿಚಾರದಲ್ಲಿ ಕುಟುಂಬಸ್ಥರು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

    https://www.youtube.com/watch?v=-hY6Ux0McaA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ಕುಮಾರಸ್ವಾಮಿ ಕೆಂಡಾಮಂಡಲ -ಅನಿರುದ್ಧ್ ಖಡಕ್ ಉತ್ತರ

    ಸಿಎಂ ಕುಮಾರಸ್ವಾಮಿ ಕೆಂಡಾಮಂಡಲ -ಅನಿರುದ್ಧ್ ಖಡಕ್ ಉತ್ತರ

    ಬೆಂಗಳೂರು: ಪದ ಬಳಕೆ ಮಾಡುವಾಗ ಪದಗಳ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ಕಲಾವಿದರು ಮಾಡಿದ ಕೆಲಸಕ್ಕೆ ಸರ್ಕಾರ ಗೌರವ ಕೊಟ್ಟಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ದಿವಂಗತ ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ್ ವಿರುದ್ಧ ಕಿಡಿಕಾರಿದ್ದರು. ಈಗ ಸಿಎಂ ಮಾತಿಗೆ ಅನಿರುದ್ಧ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ಅನಿರುದ್ಧ, ನನಗೆ ವೈಯಕ್ತಿಕವಾಗಿ ಸಿಎಂ ಕುಮಾರಸ್ವಾಮಿ ಮೇಲೆ ತುಂಬಾ ಆತ್ಮೀಯತೆ ಇದೆ. ಅವರ ಮೇಲೆ, ಅವರ ಕುಟುಂಬದ ಮೇಲೆ ಸಾಕಷ್ಟು ಗೌರವವಿದೆ. ಅಂದು ಅಪ್ಪಾಜಿ ಮೃತಪಟ್ಟಿದ್ದಾಗ ಬಂದು ಎಲ್ಲಿ ಮಾಡಬೇಕು ಎಂದುಕೊಂಡಿದ್ದೀರ ಅಂತ ಕೇಳಿದ್ದರು. ಅದಕ್ಕೆ ನಾನು ನೇರವಾಗಿ ಬನಶಂಕರಿನಲ್ಲೇ ಅಂತ್ಯಸಂಸ್ಕಾರ ಮಾಡಬೇಕು ಎಂದು ಕೊಂಡಿದ್ದೇನೆ ಅಂತ ಹೇಳಿದ್ದೆ. ವಿಷ್ಣುವರ್ಧನ್ ದೊಡ್ಡ ಕಲಾವಿದರು, ಅವರಿಗಾಗಿ ವಿಶೇಷ ಜಾಗ ಆಗಬೇಕು ಅಂತ ಅಪ್ಪಾಜಿ ಅವರು ಅಂದರೆ ದೇವೇಗೌಡರು ಹೇಳಿದ್ದಾರೆ ಅಂತ ತಿಳಿಸಿದ್ದರೆಂದು ಅನಿರುದ್ಧ್ ಹೇಳಿದರು.

    ಅದರಂತಯೇ ಸ್ಮಾರಕಕ್ಕೆ  2004ರಲ್ಲಿ ಕೇಸ್ ಹಾಕಿರುವ ಜಾಗವನ್ನು ಕೊಟ್ಟಿದ್ದರು. ಆದರೆ ಇಂದಿಗೂ ಸ್ಮಾರಕ ಆಗಿಲ್ಲ. ಒಂಬತ್ತು ವರ್ಷದ ತಾಳ್ಮೆ, ಶ್ರಮ ಇದೆ. ನಾಲ್ಕು ಗಂಟೆಗಳು ನಾನು ಅಮ್ಮ ಕಾದು ಕುಳಿತ್ತಿದ್ದವು. ಆದರೆ ಬ್ಯುಸಿ ಎಂದು ಪ್ರತಿಕ್ರಿಯಿಸಿಲಿಲ್ಲ. ಮಾರನೇ ದಿನ, ಒಂದುವಾರ, 10 ದಿನಗಳ ಬಳಿಕ ಕರೆಸಿ ಮಾತನಾಡಿದ್ದರು. ಆದರೂ ಇದುವರೆಗೂ ಮಾತನಾಡಿಲ್ಲ ಎಂದು ಬೇಸರಿಂದ ಅನಿರುದ್ಧ ಹೇಳಿದ್ದಾರೆ.

    ನಾವು 5 ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇವೆ. ತುಂಬಾ ಕಚೇರಿ, ಅಧಿಕಾರಿಗಳ ಮನೆಗೆ ಅಲೆದಾಡಿದ್ದೇವೆ. ಏನು ಪ್ರಯೋಜವಾಗಿಲ್ಲ. ಅವರೇ ಸ್ಮಾರಕ ಮಾಡಬೇಕು ಎಂದು ಹೇಳಿ 11 ಕೋಟಿ ರೂ. ಹಣವನ್ನು ನೀಡಿದ್ದರು. ಇದುವರೆಗೂ ಸ್ಮಾರಕ ಆಗಿಲ್ಲ. ಸರ್ಕಾರ ಕೊಟ್ಟಿರುವ ಮಾತನ್ನ ನಡೆಸಿಕೊಡಲಿ ಇದನ್ನು ನಾನು ಕೈ ಮುಗಿದು, ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿಕೊಂಡರು.


    ಅಭಿಮಾನಿಗಳು ಪ್ರತಿದಿನ ಕರೆ ಮಾಡಿ ಸರ್ ಪ್ರತಿಭಟನೆ ಮಾಡೋಣ, ಸ್ಮಾರಕ ಇನ್ನು ಮಾಡಿಲ್ಲ ಅಂತ ಹೇಳುತ್ತಾರೆ. ನಾನು ಬೇಡ ಅಪ್ಪಾಜಿ ಅವರು ಶಾಂತಿಯಿಂದ ಇರಬೇಕೆಂದು ಇಷ್ಟ ಪಡುತ್ತಾರೆ. ಆದ್ದರಿಂದ ನಾವು ಗಲಾಟೆ ಮಾಡುವುದು ಬೇಡ ಎಂದು ಸಮಾಧಾನ ಮಾಡುತ್ತಿದ್ದೇನೆ. ಮನಷ್ಯನಿಗೆ ತಾಳ್ಮೆ ಅಂತ ಇರುತ್ತೆ. ತಾಳ್ಮೆ ಕಳೆದುಕೊಂಡಾಗ ಈ ರೀತಿಯಾಗಿ ಮಾತನಾಡುತ್ತಾನೆ. ನಾನು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿಲ್ಲ. ಸರ್ಕಾರದ ಬಗ್ಗೆ ಮಾತನಾಡಿದ್ದೇವೆ. ಕ್ಷಮಿಸಿ ಅದನ್ನು ಅವರು ತಪ್ಪಾಗಿ ತಿಳಿದುಕೊಂಡಿದ್ದಾರೆ ಅಂತ ಅನಿರುದ್ಧ್ ಖಡಕ್ ಉತ್ತರ ಕೊಟ್ಟಿದ್ದಾರೆ.

    ನಾನು ಮಾನ, ಮರ್ಯಾದೇ, ಗೌರವ ಈ ಮಾತನ್ನು ಸರ್ಕಾರದ ಬಗ್ಗೆ ಹೇಳಿದ್ದೇನೆ. ಕುಮಾರಸ್ವಾಮಿ ಬಗ್ಗೆ ಹೇಳಿಲ್ಲ. ಸ್ಮಾರಕದ ಮುಂದಾಳತ್ವವನ್ನು ಸಿಎಂ ವಹಿಸಿಕೊಳ್ಳಬೇಕು. ನಾವು ಅದರ ಬಗ್ಗೆ ಗಮನ ಕೊಡುತ್ತಿದ್ದೇವೆ ಎಂದು ಸುಮ್ಮನೆ ಕುಳಿತಿಕೊಂಡರೆ ಕೆಲಸ ಆಗದು. ರೈತರನ್ನು, ನಮ್ಮನ್ನು ಕರೆಸಿ ಮಾತನಾಡಬೇಕು. ನಾವು ಹೋದಾಗ ಸರ್ಕಾರ, ಸರ್ಕಾರಿ ಅಧಿಕಾರಿಗಳು ತುಂಬಾ ಗೌರವ, ಭರವಸೆ ಕೊಡುತ್ತಾರೆ. ಆದರೆ ಸ್ಮಾರಕದ ಕೆಲಸ ಏನು ನಡೆಯುತ್ತಿಲ್ಲ ಎಂದು ಗರಂ ಆಗಿ ಮಾತನಾಡಿದ್ದಾರೆ.

    ಬ್ರಹ್ಮ, ವಿಷ್ಣು, ಮಹೇಶ್ವರ ಮೂವರು ಒಂದೇ ಕಡೆ ಇರುವುದಿಲ್ಲ. ಸರ್ಕಾರ ಸ್ಮಾರಕ ಮಾಡಿದರು ನಾನು ಖಂಡಿತ ಒಪ್ಪಲ್ಲ. ಸುಮಾರು 5 ಜಾಗವನ್ನು ತೋರಿಸಿದರು. ನಾವು ಏನು ಮಾತನಾಡದೇ ಒಪ್ಪಿಕೊಂಡಿದ್ದೇವು. ಆದರೆ ಸ್ಮಾರಕ ನಿರ್ಮಾಣದ ಕೆಲಸ ಪ್ರಾರಂಭಿಸುವ ಮೊದಲೇ ಏನೋ ಸಮಸ್ಯೆಯಾಗಿ ಕ್ಯಾನ್ಸಲ್ ಆಗುತ್ತಿತ್ತು. ಈಗ ಮೈಸೂರಿನಲ್ಲಿ ತೋರಿಸಿರುವ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡುತ್ತಿದ್ದೇವೆ. ಆದರೆ ಅಲ್ಲಿಗೂ ರೈತರು ಬಂದು ಕೇಸ್ ಹಾಕಿದ್ದಾರೆ. ಆದ್ದರಿಂದ ಕೆಲಸ ನಿಂತು ಹೋಗಿದೆ. ಹೀಗಾಗಿ ಈ ಬಗ್ಗೆ ವಿಚಾರಣೆ ಮಾಡಿ ಬೇಗ ಕೆಲಸ ಮುಂದುವರಿಸುವಂತೆ ಮಾಡಿಕೊಡಿ ಎಂದು ಕಳಕಳಿಯಿಂದ ಅನಿರುದ್ಧ್ ಕೇಳಿಕೊಂಡರು.

    ಒಂಬತ್ತು ವರ್ಷಗಳಾದರೂ ಸ್ಮಾರಕ ನಿರ್ಮಾಣವಾಗಿಲ್ಲ. ಅಮ್ಮ ಎಷ್ಟು ದಿನ ಕಣ್ಣೀರು ಹಾಕಿದ್ದಾರೆ ಅಂತ ನನಗೆ ಗೊತ್ತು. ಸರ್ಕಾರ ಒಂದು ಕೆಲಸವನ್ನು ಮಾಡಿಕೊಡುತ್ತೇನೆ ಎಂದು ಗಡುವು ಕೊಟ್ಟಿರುತ್ತದೆ. ಆ ಗಡುವಿನಲ್ಲೇ ಕೆಲಸ ಮಾಡಿಕೊಡಬೇಕು. ವಿಷ್ಣು ಅಭಿಮಾನಿಗಳು ಸಿಂಹಗಳಿದಂತೆ ಅವರನ್ನು ಬಡಿದು ಎಬ್ಬಿಸಬೇಡಿ. ಆದ್ದರಿಂದ ಮುಂದಿನ ತಿಂಗಳ ಡಿಸೆಂಬರ್ 30ರವಗೆ ವಿಷ್ಣು ಸ್ಮಾರಕದ ಕೆಲಸ ಶುರುವಾಗಬೇಕು ಎಂದು ನಾನು ಪ್ರೀತಿಯಿಂದ ಗಡುವು ಕೊಡುತ್ತಿದ್ದೇನೆ ಎಂದು ಅನಿರುದ್ಧ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ್ಣುವರ್ಧನ್ ಅಳಿಯ ಅನಿರುದ್ಧ್ ವಿರುದ್ಧ ಸಿಎಂ ಕೆಂಡಾಮಂಡಲ

    ವಿಷ್ಣುವರ್ಧನ್ ಅಳಿಯ ಅನಿರುದ್ಧ್ ವಿರುದ್ಧ ಸಿಎಂ ಕೆಂಡಾಮಂಡಲ

    ಹಾಸನ: ನಟ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ವಿರುದ್ಧ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.

    ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸ್ಮಾರಕ ನಿರ್ಮಾಣ ಮಾಡಲಿ ಅಂತಾ ಅನಿರುದ್ಧ್ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ. ಪದ ಬಳಕೆ ಮಾಡುವಾಗ ಪದಗಳ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ಕಲಾವಿದರು ಮಾಡಿದ ಕೆಲಸಕ್ಕೆ ಸರ್ಕಾರ ಗೌರವ ಕೊಟ್ಟಿದ್ದೇವೆ ಎಂದು ಸಿಎಂ ಕಿಡಿಕಾರಿದರು.

    ವಿಷ್ಣುವರ್ಧನ್ ಅವರು ನಿಧನರಾದಾಗ ನಾನು ಸಿಎಂ ಆಗಿರಲಿಲ್ಲ. ನಿಧನದ ಸುದ್ದಿ ತಿಳಿದಾಗ ನಾನು ಅವರ ಮನೆಗೆ ಹೋಗಿ ದರ್ಶನ ಪಡೆದಿದ್ದೇನೆ. ಆ ವೇಳೆ ಭಾರತಿ ವಿಷ್ಣುವರ್ಧನ್ ಮತ್ತು ನಟ ಶಿವರಾಂ ಅವರಲ್ಲಿ ಅಂತ್ಯಕ್ರಿಯೆ ಸಿದ್ಧತೆ ಬಗ್ಗೆ ಕೇಳಿದ್ದೇನೆ. ಅಂದು ಅವರು ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದರು. ವಿಷ್ಣುವರ್ಧನ್ ಓರ್ವ ದೊಡ್ಡ ಕಲಾವಿದರಾಗಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಿದ್ರೆ ತಪ್ಪಾಗುತ್ತದೆ. ಅಂದು ಅಂಬರೀಶ್ ಅವರ ಜೊತೆ ಮಾತನಾಡಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಬೇಡ ಅಂತಾ ಹೇಳಿ ಸರ್ಕಾರಕ್ಕೆ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದೆ. ಆದ್ರೆ ಇಂದು ವಿಷ್ಣುವರ್ಧನ್ ಅಳಿಯ ಉಡಾಫೆ ಮುಖ್ಯಮಂತ್ರಿ ಎಂಬ ಹೇಳಿಕೆ ನೀಡಿರುವುದು ನನಗೆ ನೋವು ತಂದಿದೆ ಅಂತ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ದೇಶದಲ್ಲಿ ಎಷ್ಟೋ ರಾಜಕಾರಣಿಗಳು ವಿಧಿವಶರಾದಾಗ ಈ ರೀತಿಯಲ್ಲಿ ಅಂತ್ಯಕ್ರಿಯೆ ನಡೆಸಿಲ್ಲ. ಕಲಾವಿದರಿಗೆ ನೀಡಿದ ಗೌರವದಷ್ಟು ಯಾವ ರಾಜಕಾರಣಿಗಳಿಗೂ ನೀಡಿಲ್ಲ. ಕೃತಜ್ಞತೆ ಇಲ್ಲದೆ ಮಾತನಾಡಿದರೆ ಏನು ಮಾಡೋದು. ಅಂಬಿ ಮತ್ತು ವಿಷ್ಣು ಜೊತೆ ನಾನೂ ಕೂಡ ಹತ್ತಿರದ ವ್ಯಕ್ತಿ. ನಾನೂ ಕೂಡ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದೇನೆ. ರಾಜ್‍ಕುಮಾರ್ ಅವರನ್ನು ಹತ್ತಿರದಿಂದ ಕಂಡಿದ್ದೇನೆ ಎಂದು ಹೇಳಿ ಅನಿರುದ್ಧ್ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv