Tag: Animation

  • ಒಟಿಟಿಯಲ್ಲಿ ‘ಕಲ್ಕಿ 2898 AD’ ಚಿತ್ರದ B & B ಅನಿಮೇಷನ್ ಸಿರೀಸ್

    ಒಟಿಟಿಯಲ್ಲಿ ‘ಕಲ್ಕಿ 2898 AD’ ಚಿತ್ರದ B & B ಅನಿಮೇಷನ್ ಸಿರೀಸ್

    2024 ರ ಭಾರತೀಯ ಮಹಾಕಾವ್ಯ ವೈಜ್ಞಾನಿಕ ಕಾಲ್ಪನಿಕ ಸಾಹಸ ಚಲನಚಿತ್ರ ಹಾಗೂ ‘ಪ್ಯಾನ್‍ ಇಂಡಿಯಾ ಸೂಪರ್ ಸ್ಟಾರ್’ ಪ್ರಭಾಸ್‍ ಅಭಿನಯದ ‘ಕಲ್ಕಿ 2898 AD’ (Kalki) ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ. ಈವರೆಗೂ ಯಾರು ಮಾಡಿರದ ವಿನೂತನ ಪ್ರಯೋಗಕ್ಕೆ ಈ ಚಿತ್ರತಂಡ ಮುಂದಾಗಿದೆ‌.  ಪ್ರಭಾಸ್ (Prabhas) ಈ ಚಿತ್ರದಲ್ಲಿ ಭೈರವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭೈರವನ ನಂಬಿಕಸ್ಥ ಗೆಳೆಯನಾಗಿ ಬುಜ್ಜಿ(ವಿಶೇಷ ಕಾರ್)ಪಾತ್ರವಿದೆ‌. ಈ ಎರಡು ಪಾತ್ರಗಳನಿಟ್ಟುಕೊಂಡು ಚಿತ್ರತಂಡ “B&B” ಎಂಬ ಹದಿನೈದು ಹದಿನೈದು ನಿಮಿಷಗಳ ಎರಡು ಅನಿಮೇಷನ್‌ ಸಿರೀಸ್ ಬಿಡುಗಡೆ ಮಾಡಿದೆ.

    ದೇಶದ ಪ್ರಮುಖ ನಗರಗಳ ಚಿತ್ರಮಂದಿರಗಳಲ್ಲಿ ಈ ಅನಿಮೇಷನ್‌ ಸಿರೀಸ್ ಏಕಕಾಲಕ್ಕೆ ಬಿಡುಗಡೆಯಾಗಿದೆ‌. ಈ ಎರಡು ಭಾಗಗಳು ಮೇ 31 ರಿಂದ ಅಮೇಜಾನ್ ಪ್ರೈಮ್ ನಲ್ಲಿ ನೋಡಲು ಲಭ್ಯವಿದೆ. ಈ ಅನಿಮೇಷನ್‌ ಸೀರಿಸ್ ನಲ್ಲಿರುವ ಭೈರವ ಹಾಗೂ ಬುಜ್ಜಿಯ ಜುಗಲ್ ಬಂದಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದು ಚಿತ್ರದ ಪ್ರಚಾರಕಷ್ಟೇ ಮಾಡಿರುವ ಅನಿಮೇಷನ್‌ ಸಿರೀಸ್. ಚಿತ್ರದ ಕಥೆಯೆ ಬೇರೆ. ಇದೇ ಬೇರೆ  ಎಂದು ನಿರ್ದೇಶಕ ನಾಗ್ ಅಶ್ವಿನ್ ತಿಳಿಸಿದ್ದಾರೆ.

    ಕಳೆದ ಅರ್ಧ ಶತಕದಿಂದ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ವೈಜಯಂತಿ ಮೂವೀಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದ್ದು, ಹೆಸರಾಂತ ಕೆ.ವಿ.ಎನ್ ಪ್ರೊಡಕ್ಷನ್ಸ್ ಈ ಚಿತ್ರದ ವಿತರಣೆ ಮಾಡುತ್ತಿದೆ. ಬೆಂಗಳೂರಿನಲ್ಲೂ “ಕಲ್ಕಿ 2898 AD” ಚಿತ್ರದ ಅನಿಮೇಷನ್‌ ಸಿರೀಸ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೆ.ವಿ.ಎನ್ ಪ್ರೊಡಕ್ಷನ್ ನ ಸುಪ್ರೀತ್ ಅವರು ಈ ಅನಿಮೇಷನ್‌ ಸಿರೀಸ್ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದೆ‌‌. ಎರಡು ಭಾಗಗಳಲ್ಲಿ ಇಂಗ್ಲೀಷ್ ಹಾಗೂ ತೆಲುಗು ಭಾಷೆಗಳಲ್ಲಿ ಮೂಡಿಬಂದಿರುವ ಈ ಅನಿಮೇಷನ್‌ ಸಿರೀಸ್ ಅನ್ನು ಅಮೇಜಾನ್ ಪ್ರೈಮ್ ನಲ್ಲಿ ವೀಕ್ಷಿಸಬಹುದು ಎಂದರು.

    ಈ ವರ್ಷದ ಬಹು ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ.  ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

  • ವಿಮಾನಯಾನ, ಮಾಧ್ಯಮ, ಎನಿಮೇಷನ್, ವಿಮಾ ಕ್ಷೇತ್ರಗಳಲ್ಲಿ ಎಫ್‍ಡಿಐಗೆ ಪ್ರೋತ್ಸಾಹ

    ವಿಮಾನಯಾನ, ಮಾಧ್ಯಮ, ಎನಿಮೇಷನ್, ವಿಮಾ ಕ್ಷೇತ್ರಗಳಲ್ಲಿ ಎಫ್‍ಡಿಐಗೆ ಪ್ರೋತ್ಸಾಹ

    ನವದೆಹಲಿ: ವಿಮಾನಯಾನ, ಮಾಧ್ಯಮ, ಎನಿಮೇಷನ್, ವಿಮಾ ಕ್ಷೇತ್ರಗಳಲ್ಲಿ ವಿದೇಶಿ ಬಂಡಾವಣ ಹೂಡಿಕೆಗೆ ಪ್ರೋತ್ಸಾಹ ನೀಡಲಾಗುವುದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಮುಖ್ಯಾಂಶಗಳು:
    * ಪ್ರಧಾನಮಂತ್ರಿ ಕರ್ಮಯೋಗಿ ಮಾನ್‍ಧನ್ ಯೋಜನೆ ಅಡಿಯಲ್ಲಿ 1.5 ಕೋಟಿ ರೂ.ಗಿಂತ ಕಡಿಮೆ ವ್ಯವಹಾರ ಹೊಂದಿರುವ ಸಣ್ಣ ವ್ಯಾಪಾರಸ್ಥರಿಗೆ ಪೆನ್ಷನ್ (ಪಿಂಚಣಿ) ಲಾಭ ಸಿಗಲಿದೆ.
    * ಸಣ್ಣ ಮಳಿಗೆದಾರರಿಗೆ ಕೇವಲ 59 ನಿಮಿಷದಲ್ಲಿ ಸಾಲ ಸಿಗಲಿದೆ. 3 ಕೋಟಿಗೂ ಅಧಿಕ ಸಣ್ಣಮಳಿಗೆದಾರರು ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ.

    * ಮಧ್ಯವರ್ತಿ ವಿಮಾ ಸಂಸ್ಥೆಗಳಲ್ಲಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆ(ಎಫ್‍ಡಿಐ)ಗೆ ಅವಕಾಶ
    * ಚಿಲ್ಲರೆ ವ್ಯಾಪಾರಕ್ಕೆ ಪ್ರೋತ್ಸಾಹ ಮತ್ತು ಸಿಂಗಲ್ ಬ್ರ್ಯಾಂಡ್ ರಿಟೇಲ್ ವ್ಯವಹಾರದಲ್ಲಿ ಸುಲಭ ಹೊಡಿಕೆಗೆ ಅವಕಾಶ
    * ಸ್ಟ್ಯಾಂಡ್ ಆಪ್ ಇಂಡಿಯಾ ಯೋಜನೆಯಡಿ ಮಹಿಳೆಯರು ಮತ್ತು ಎಸ್‍ಸಿ, ಎಸ್‍ಟಿ ಉದ್ಯಮಿಗಳಿಗೆ ಸಹಾಯ

    * ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮದಾರರ ಸಾಲದ ಮೇಲೆ ಶೇ.2 ರಷ್ಟು ವಿನಾಯ್ತಿ. ಇದಕ್ಕಾಗಿ 350 ಕೋಟಿ ರೂಪಾಯಿ ಮೀಸಲು

    * ಶೇರು ಮಾರುಕಟ್ಟೆಯ ಲಿಸ್ಟೆಡ್ ಕಂಪನಿಗಳ ಸರ್ಕಾರಿ ಶೇರುದಾರರ ಸಂಖ್ಯೆ ಶೇ.25 ರಿಂದ ಶೇ.35ಕ್ಕೆ ಹೆಚ್ಚಿಸುವ ಪ್ರಸ್ತಾವ
    * ಸರ್ಕಾರಿ-ಖಾಸಗಿ ಸಹಭಾಗಿತ್ವದ ಪಿಪಿಪಿ (Public-Private Partnership) ಮೂಲಕ ರೈಲ್ವೇ ಇಲಾಖೆಯಲ್ಲಿ ಹೂಡಿಕೆ ಪ್ರಮಾಣವನ್ನು ಹೆಚ್ಚಳ ಮಾಡುವುದು. ಬಂಡವಾಳ ಹೂಡಿಕೆ ಬಳಿಕ ರೈಲ್ವೇ ಟ್ರ್ಯಾಕ್, ಮೂಲಭೂತ ಸೌಲಭ್ಯ ನೀಡುವುದು. ಇವುಗಳ ಜೊತೆಯಲ್ಲಿ ಪ್ರಯಾಣಿಕರ ಸರಕು ಸಾಗಣೆ (Passenger Freight Service) ಸೇವೆ ಆರಂಭಿಸುವುದು.

    * ಸ್ಟಾರ್ಟ್ ಅಪ್ ಯೋಜನೆಯ ಮಾಹಿತಿ ನೀಡಲು ವಿಶೇಷವಾಗಿ ಟಿವಿ ಚಾನೆಲ್ ಆರಂಭಿಸಲಾಗುವುದು. ಯುವ ಸಮುದಾಯ ಮತ್ತು ಉದ್ದಿಮೆದಾರರ ಸ್ಫೂರ್ತಿದಾಯಕ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಆರಂಭಿಸುವುದು.
    * ಭಾರತದಲ್ಲಿರುವ ಸೃಜನಶೀಲತೆ ಕೈಗಾರಿಕೆ ಮತ್ತು ಉದ್ಯಮದಾರರನ್ನು ಕೆಲಸವನ್ನು ಪ್ರೋತ್ಸಾಹಿಸಿ ಅವರನ್ನು ಅರ್ಥವ್ಯವಸ್ಥೆ ವ್ಯಾಪ್ತಿಗೆ ತರುವುದು. ನಮ್ಮ ಸೃಜನಶೀಲ ಕಲೆಯ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಕಲ್ಪಿಸುವುದು.
    * ಸ್ಟಾರ್ಟ್‍ಅಪ್ ಯೋಜನೆಯಡಿಯಲ್ಲಿ ಹೂಡಿಕೆ ಮೊತ್ತದ ಮೇಲೆ ತೆರಿಗೆ ವಿನಾಯ್ತಿ ನೀಡುವುದು.

    * 250 ಕೋಟಿ ರೂ. ವ್ಯವಹಾರ(turn over)ವನ್ನು ಹೊಂದಿರುವ ಕಾರ್ಪೋರೇಟ್ ಕಂಪನಿಗಳ ಮೇಲಿನ ಶೇ.25ರಷ್ಟಿದ್ದು, ಯಾವುದೇ ಬದಲಾವಣೆಗಳಿಲ್ಲ. 400 ಕೋಟಿ ರೂ. ವ್ಯವಹಾರವನ್ನು ಹೊಂದಿರುವ ಕಂಪನಿಗಳು ಸಹ ಶೇ.25 ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ. ಅಂದ್ರೆ ಶೇ.99.3ರಷ್ಟು ಕಂಪನಿಗಳು ಶೇ.25 ಕಾರ್ಪೋರೇಟ್ ಟ್ಯಾಕ್ಸ್ ವ್ಯಾಪ್ತಿಯಲ್ಲಿ ಒಳಪಡಲಿವೆ. ಕೇವಲ ಶೇ.0.7 ಕಂಪನಿಗಳು ಮಾತ್ರ ಶೇ.25ರ ಟ್ಯಾಕ್ಸ್ ವ್ಯಾಪ್ತಿಯಿಂದ ಹೊರ ಇರಲಿವೆ.