Tag: animal

  • ಗಾಸಿಪ್‌ಗೆಲ್ಲಾ ಬ್ರೇಕ್, ‘ಅನಿಮಲ್’ ಸಕ್ಸಸ್ ಬಗ್ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

    ಗಾಸಿಪ್‌ಗೆಲ್ಲಾ ಬ್ರೇಕ್, ‘ಅನಿಮಲ್’ ಸಕ್ಸಸ್ ಬಗ್ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

    ‘ಪುಷ್ಪ’ (Pushpa) ಬೆಡಗಿ ರಶ್ಮಿಕಾ ಮಂದಣ್ಣಗೆ (Rashmika Mandanna) ‘ಅನಿಮಲ್’ (Animal)  ಚಿತ್ರದ ಸಕ್ಸಸ್‌ನಿಂದ ಕೆರಿಯರ್‌ಗೆ ಬಿಗ್ ಬ್ರೇಕ್ ಕೊಟ್ಟಿದೆ. ಈ ಚಿತ್ರದ ಸಕ್ಸಸ್ ನಂತರ ಅನಿಮಲ್ ತಂಡದ ಜೊತೆ ರಶ್ಮಿಕಾ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಚಿತ್ರತಂಡದಿಂದ ನಟಿ ಅಂತರ ಕಾಯ್ದುಕೊಂಡಿದ್ದಾರೆ ಎಂದೆಲ್ಲಾ ನೆಗೆಟಿವ್‌ ಸುದ್ದಿ ಹಬ್ಬಿತ್ತು. ಇದಕ್ಕೆಲ್ಲಾ ಸ್ವತಃ ನಟಿ ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ.

    ಸಿನಿಮಾ ಸಕ್ಸಸ್ ಯಶಸ್ಸನ್ನು ಸಂಭ್ರಮಿಸುತ್ತಿಲ್ಲ ಮಾತುಗಳು ಕೇಳಿ ಬಂದ ಬೆನ್ನಲ್ಲೇ ರಶ್ಮಿಕಾ ಪ್ರತಿಕ್ರಿಯಿಸಿ, ಪ್ರೀತಿ, ಕಾಳಜಿ ಇರುವವರೇ ಹೀಗೆ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ತಿಳಿದಿದೆ. ನಾವು ಹಿಟ್ ಸಿನಿಮಾವನ್ನು ನೀಡಿದ್ದೇವೆ. ನಮ್ಮ ಚಿತ್ರವನ್ನು ಜನ ಎಂಜಾಯ್ ಮಾಡಿದ್ದಾರೆ. ಚಿತ್ರದ ಸಕ್ಸಸ್ ಎಂಜಾಯ್ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬೇಕೆಂದು ಬಯಸಿದ್ದೆ. ಆದರೆ ನನ್ನ ಚಿತ್ರ ಬಿಡುಗಡೆಯ ಮರುದಿನವೇ ನಾನು ಇನ್ನೊಂದು ಸಿನಿಮಾದ ಶೂಟಿಂಗ್ ಸೆಟ್‌ಗೆ ಹೋಗಬೇಕಾಯ್ತು ಎಂದಿದ್ದಾರೆ.

    ಚಿತ್ರದ ಪ್ರಚಾರ ಕಾರ್ಯದಲ್ಲಿ ಮತ್ತು ಸಕ್ಸಸ್ ಸಂಭ್ರಮದಲ್ಲಿ ಹಾಜರಿ ಹಾಕಲು ಸಾಧ್ಯವಾಗಲಿಲ್ಲ. ನಾನು ಕೆಲಸಕ್ಕಾಗಿ ಈ ರಾತ್ರಿಯ ಪ್ರಯಾಣಗಳನ್ನು ಮಾಡಲೇಬೇಕಾಗಿದೆ. ಬೇರೇ ಬೇರೇ ಸಿನಿಮಾಗಳಲ್ಲಿ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದೇನೆ. ಅಲ್ಲದೆ ನನ್ನ ಸಿನಿಮಾಗಳ ಲುಕ್‌ಗಳನ್ನು ನಾನು ರಿವೀಲ್ ಮಾಡಲು ಆಗುವುದಿಲ್ಲ. ನಾನು ಸಂದರ್ಶನಗಳಲ್ಲಿ ಭಾಗಿ ಆಗದೇ ಇರುವುದಕ್ಕೆ ಇದು ಕೂಡ ಮುಖ್ಯ ಕಾರಣ ರಶ್ಮಿಕಾ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ಉಮಾಪತಿಗೆ ಠಕ್ಕರ್ ಕೊಡಲು ಮುಂದಾದ ಡಿಬಾಸ್ ಫ್ಯಾನ್ಸ್

    ಮುಂದೆ ಈ ರೀತಿಯ ಸಮಸ್ಯೆ ಬರದೇ ಇರುವ ಹಾಗೇ ನನ್ನ ತಂಡದ ಜೊತೆ ಸೇರಿ ಯೋಜನೆ ರೂಪಿಸುತ್ತೇನೆ ಎಂದಿದ್ದಾರೆ. ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಇಲ್ಲದ ಮಾತ್ರಕ್ಕೆ ಸಕ್ಸಸ್ ಖುಷಿಯನ್ನು ಅನುಭವಿಸುತ್ತಿಲ್ಲ ಎಂದರ್ಥವಲ್ಲ. ನಮಗಿಂತಲೂ ನಮ್ಮ ಕೆಲಸ ಹೆಚ್ಚು ಮಾತನಾಡಬೇಕು ಎಂಬುದು ನನ್ನ ನಂಬಿಕೆ. ಅಭಿಮಾನಿಗಳ ಸಂದೇಶಗಳು ನನಗೆ ತಲುಪುತ್ತಿದೆ. ಫ್ಯಾನ್ಸ್‌ ಪ್ರೀತಿ ನೋಡಿ ನಾನು ಖುಷಿ ಪಡುತ್ತಿದ್ದೇನೆ ಎಂದಿದ್ದಾರೆ.

    ಅಂದಹಾಗೆ ತಮ್ಮ ಪೋಸ್ಟ್‌ನಲ್ಲಿ ‘ಅನಿಮಲ್’ ಸಿನಿಮಾದ ಹೆಸರನ್ನು ಕಲಾವಿದರ ಹೆಸರನ್ನು ಸಹ ರಶ್ಮಿಕಾ ತೆಗೆದುಕೊಂಡಿಲ್ಲ ಎಂಬುದು ಗಮನಿಸಬೇಕಾದ ಅಂಶ. ಸಿನಿಮಾ ಗೆದ್ದಿರೋದು ನನಗೆ ನಿಜಕ್ಕೂ ಖುಷಿಯಿದೆ. ಆದರೆ ಸಕ್ಸಸ್ ಪಾರ್ಟಿಯಲ್ಲಿ ಯಾಕೆ ಭಾಗಿಯಾಗಿಲ್ಲ ಎಂಬುದರ ಬಗ್ಗೆ ನಟಿ ಉತ್ತರ ನೀಡಿದ್ದಾರೆ. ಈ ಮೂಲಕ ಗಾಸಿಪ್‌ಗೆ ನಟಿ ಫುಲ್ ಸ್ಟಾಪ್ ಹಾಕಿದ್ದಾರೆ.

    ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಚಿತ್ರವು ಡಿ.1ರಂದು ರಿಲೀಸ್ ಆಗಿತ್ತು.ರಣ್‌ಬೀರ್‌ಗೆ (Ranbir Kapoor)  ನಾಯಕಿಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ್ದರು. ಸೆಕೆಂಡ್ ಲೀಡ್ ಆಗಿ ತೃಪ್ತಿ ದಿಮ್ರಿ (Tripti Dimri) ನಟಿಸಿದ್ದರು. ಈಗ ಅನಿಮಲ್ ಪಾರ್ಟ್ 2ಗೆ ತಯಾರಿ ನಡೆಯುತ್ತಿದೆ.

  • ನಟಿ ರಶ್ಮಿಕಾ ಸಂಚರಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ

    ನಟಿ ರಶ್ಮಿಕಾ ಸಂಚರಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಸಂಚರಿಸುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶ ಮಾಡಿದ್ದು, ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಘಟನೆ ನಟಿ ಸೇರಿದಂತೆ ಸಹ ಪ್ರಯಾಣಿಕರಿಗೂ ಬೆಚ್ಚಿ ಬೀಳಿಸಿತ್ತು. ಸದ್ಯ ರಶ್ಮಿಕಾ ಸೇಫ್ ಆಗಿದ್ದಾರೆ.

    ಬಾಲಿವುಡ್ ನಟಿ ಶ್ರದ್ಧಾ ದಾಸ್ (Shraddha Das) ಜೊತೆ ರಶ್ಮಿಕಾ ವಿಮಾನದಲ್ಲಿ ಕುಳಿತಿರುವ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಆತಂಕದ ಕ್ಷಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಅನುಭವವನ್ನು ಹಂಚಿಕೊಂಡ ಅವರು, ಇಂದು ಸಾವಿನಿಂದ ತಪ್ಪಿಸಿಕೊಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.

    ಫೆ.17ರಂದು ರಶ್ಮಿಕಾ ಸಂಚರಿಸುತ್ತಿದ್ದ ವಿಮಾನವು ಮುಂಬೈಯಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿತ್ತು. ಮುಂಬೈ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಹೊತ್ತಿನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ 30 ನಿಮಿಷಗಳ ನಂತರ ವಿಮಾನ ಮತ್ತೆ ಮುಂಬೈಗೆ ಮರಳಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.‌ ಇದನ್ನೂ ಓದಿ:ಹುಲಿ ಉಗುರು ಪೆಂಡೆಂಟ್‌ ವಿಚಾರವಾಗಿ ವರ್ತೂರುಗೆ ಕುಟುಕಿದ ಜಗ್ಗೇಶ್‌

    ಸದ್ಯ ‘ಪುಷ್ಪ’ ನಟಿ ಸೇಫ್ ಆಗಿರುವ ಸುದ್ದಿ ಕೇಳಿ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮನೆಗೆ ಸುರಕ್ಷಿತವಾಗಿ ಕಿರಿಕ್ ಪಾರ್ಟಿ ನಟಿ ಮರಳಿದ್ದಾರೆ.

    ರಶ್ಮಿಕಾ ಮಂದಣ್ಣ ಅವರು ಪುಷ್ಪ 2(Pushpa 2), ಅನಿಮಲ್ ಪಾರ್ಕ್, ರೈನ್‌ಬೋ, ಚಾವಾ, ಗರ್ಲ್‌ಫ್ರೆಂಡ್ ಸೇರಿದಂತೆ ಹಲವು ಸಿನಿಮಾಗಳಿವೆ.

  • ಸಂಭಾವನೆ ಬಗ್ಗೆ ಮಾತನಾಡಿದವರಿಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

    ಸಂಭಾವನೆ ಬಗ್ಗೆ ಮಾತನಾಡಿದವರಿಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

    ಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ (Animal) ಚಿತ್ರದ ಸಕ್ಸಸ್ ನಂತರ ಕೊಡಗಿನ ಕುವರಿಗೆ ಡಿಮ್ಯಾಂಡ್ ಜಾಸ್ತಿ ಆಗಿದೆ. ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಶ್ಮಿಕಾ, ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತು ನಟಿ ಪ್ರತಿಕ್ರಿಯೆ ನೀಡಿದ್ದಾರೆ.‌ ಇದನ್ನೂ ಓದಿ:‘ಮಾರಿಗೋಲ್ಡ್’ ಹಿಂದೆ ಬಿದ್ದ ಸಂಗೀತಾ ಶೃಂಗೇರಿ: ಮಜವಾಗಿದೆ ಟೀಸರ್

    ರಣ್‌ಬೀರ್, ರಶ್ಮಿಕಾ, ತೃಪ್ತಿ ದಿಮ್ರಿ ಮೂವರ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ‘ಅನಿಮಲ್’ ಸಿನಿಮಾ ಸೂಪರ್‌ ಹಿಟ್‌ ಆಗಿದೆ. 900 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಅನಿಮಲ್ ಪಾರ್ಟ್ 2ಗೂ ತಯಾರಿ ಮಾಡ್ತಿದ್ದಾರೆ. ಇದನ್ನೂ ಓದಿ:ವಿನೋದ್ ಪ್ರಭಾಕರ್ ನಟನೆಯ 25ನೇ ಚಿತ್ರಕ್ಕೆ ಚೈತನ್ಯ ಡೈರೆಕ್ಟರ್

    ಸದ್ಯ ರಶ್ಮಿಕಾ ಮಂದಣ್ಣ ಕೈಯಲ್ಲಿ 6ಕ್ಕೂ ಹೆಚ್ಚು ಸಿನಿಮಾಗಳಿವೆ. ಒಂದು ಚಿತ್ರಕ್ಕೆ 2-3 ಕೋಟಿ ರೂ. ಚಾರ್ಜ್ ಮಾಡುತ್ತಿದ್ದ ನಟಿ ಈಗ 4 ರಿಂದ 5 ಕೋಟಿ ರೂ.ವರೆಗೆ ಹೆಚ್ಚಳ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಈ ಸುದ್ದಿ ರಶ್ಮಿಕಾ ಗಮನಕ್ಕೂ ಬಂದಿದ್ದು, ಇದೆಲ್ಲವನ್ನೂ ನೋಡಿದ ನಂತರ ನಾನು ಅದನ್ನು ನಿಜವಾಗಿಯೂ ಪರಿಗಣಿಸಬೇಕು ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ನಿರ್ಮಾಪಕರು ಕೇಳಿದರೆ, ಆಗ ನಾನು ಹೇಳುತ್ತೇನೆ ಕೆಲ ಮಾಧ್ಯಮಗಳು ಇದನ್ನು ಹೇಳುತ್ತಿವೆ ಸರ್. ನಾನು ಅವರ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಯೋಚಿಸಿದ್ದೇನೆ. ನಾನೇನು ಮಾಡಲಿ? ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ರಿಯಾಕ್ಟ್ ಮಾಡಿದ್ದಾರೆ. ಈ ಮೂಲಕ 4ರಿಂದ 5 ಕೋಟಿ ರೂ. ಕೊಟ್ಟರೆ ಸಿನಿಮಾ ಮಾಡ್ತೀನಿ ಎಂಬ ಅರ್ಥದಲ್ಲಿ ನಟಿ ಮಾತನಾಡಿದ್ದಾರೆ.

    ಇದೀಗ ರಶ್ಮಿಕಾ ಮಂದಣ್ಣ ಕೈಯಲ್ಲಿ ಪುಷ್ಪ 2, ಅನಿಮಲ್ 2, ರೈನ್‌ಬೋ, ಗರ್ಲ್‌ಫ್ರೆಂಡ್, ಚಾವಾ, ಸೇರಿದಂತೆ ಹಲವು ಸಿನಿಮಾಗಳಿವೆ.

  • ‘ಅನಿಮಲ್’ ನಿರ್ದೇಶಕನ ಸಿನಿಮಾ ಆಫರ್‌ಗೆ ನೋ ಎಂದ ಕಂಗನಾ

    ‘ಅನಿಮಲ್’ ನಿರ್ದೇಶಕನ ಸಿನಿಮಾ ಆಫರ್‌ಗೆ ನೋ ಎಂದ ಕಂಗನಾ

    ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ‘ಅರ್ಜುನ್ ರೆಡ್ಡಿ’, ಇತ್ತೀಚಿನ ‘ಅನಿಮಲ್’ (Animal) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದೆ. 900 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ಸಂದೀಪ್ ನಿರ್ದೇಶನದ ವೈಖರಿ ನೋಡಿ ನಮ್ಮಗೂ ಅವರ ಸಿನಿಮಾದಲ್ಲಿ ನಟಿಸಲು ಚಾನ್ಸ್ ಸಿಗಲಿ ಎಂದು ಕೆಲವು ನಟ-ನಟಿಯರು ಕಾಯ್ತಿದ್ದಾರೆ. ಇದರ ನಡುವೆ ಸಂದೀಪ್ ಕಡೆಯಿಂದ ಸಿಕ್ಕ ಆಫರ್‌ನ್ನು ಕಂಗನಾ ರಣಾವತ್ (Kangana Ranaut) ರಿಜೆಕ್ಟ್ ಮಾಡಿದ್ದಾರೆ.

    ಇತ್ತೀಚೆಗೆ ‘ಅನಿಮಲ್’ ಚಿತ್ರವನ್ನು ನೋಡಿದ ಬಳಿಕ ಕಂಗನಾ ಅವರು ತಮ್ಮ ಅನಿಸಿಕೆ ತಿಳಿಸಿದ್ದರು. ಈ ಸಿನಿಮಾ ಸ್ತ್ರಿ ವಿರೋಧಿಯಾಗಿದೆ ಎಂದು ಅವರು ಹೇಳಿದ್ದರು. ಕಂಗನಾ ಹೇಳಿಕೆಯನ್ನು ಸಂದೀಪ್ ಅವರು ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ. ಕಂಗನಾ ಅವರ ಪ್ರತಿಭೆಯ ಬಗ್ಗೆ ಸಂದೀಪ್‌ಗೆ ಅಭಿಮಾನ ಇದೆ. ಇದನ್ನೂ ಓದಿ:‘ರಿಚರ್ಡ್ ಆಂಟನಿ’ ಕುರಿತು ಅಪ್ ಡೇಟ್ ನೀಡಿದ ರಕ್ಷಿತ್ ಶೆಟ್ಟಿ

    ಅವಕಾಶ ಸಿಕ್ಕರೆ, ಪಾತ್ರಕ್ಕೆ ಕಂಗನಾ ಸೂಕ್ತ ಎನಿಸಿದರೆ ಅವರ ಬಳಿ ಹೋಗಿ ಕಥೆ ಹೇಳುತ್ತೇನೆ. ‘ಕ್ವೀನ್’ ಮತ್ತು ಇತರೆ ಸಿನಿಮಾಗಳಲ್ಲಿ ಅವರ ನಟನೆಯನ್ನು ನಾನು ಇಷ್ಟಪಟ್ಟಿದ್ದೇನೆ. ನನ್ನ ಚಿತ್ರದ ಬಗ್ಗೆ ಅವರು ನೆಗೆಟಿವ್ ಕಾಮೆಂಟ್ ಮಾಡಿದ್ದರೂ ನನಗೆ ಕೋಪ ಬರುವುದಿಲ್ಲ. ಒಟ್ಟಿನಲ್ಲಿ ಅವರ ಪರ್ಫಾರ್ಮೆನ್ಸ್ ನನಗೆ ನಿಜಕ್ಕೂ ಇಷ್ಟವಾಗಿದೆ ಎಂದು ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ.

    ಅನಿಸಿಕೆ ಮತ್ತು ಟೀಕೆ ಎರಡು ಬೇರೆ ಬೇರೆ ಆಗಿರುತ್ತವೆ. ಎಲ್ಲ ಬಗೆಯ ಕಲೆ ಕೂಡ ವಿಮರ್ಶೆಗೆ ಮತ್ತು ಚರ್ಚೆಗೆ ಒಳಪಡಬೇಕು. ಅದು ಸಹಜವಾದ ವಿಷಯ. ಸಂದೀಪ್ ಅವರು ನನ್ನ ವಿಮರ್ಶೆಗೆ ಗೌರವ ನೀಡಿದ್ದು ನೋಡಿದರೆ ತಿಳಿಯುತ್ತದೆ. ಅವರು ಕೇವಲ ಗಂಡಸುತನದ ಸಿನಿಮಾ ಮಾಡುವುದಷ್ಟೇ ಅಲ್ಲ, ಅವರ ಆ್ಯಟಿಟ್ಯೂಡ್ ಕೂಡ ಹಾಗೆಯೇ ಇದೆ. ಧನ್ಯವಾದಗಳು ಸರ್. ಆದರೆ ನೀವು ನನಗೆ ಯಾವುದೇ ಪಾತ್ರ ನೀಡಬೇಡಿ. ನೀಡಿದರೆ ನಿಮ್ಮ ಆಲ್ಫಾ ಮೇಲ್ ಪಾತ್ರಗಳು ಸ್ತ್ರಿವಾದಿ ಆಗಿಬಿಡುತ್ತವೆ. ಆಗ ನಿಮ್ಮ ಸಿನಿಮಾಗಳು ಸೋಲುತ್ತವೆ. ನೀವು ಉತ್ತಮ ಸಿನಿಮಾ ಮಾಡುವವರು. ಇಂಡಸ್ಟ್ರಿಗೆ ನಿಮ್ಮ ಅಗತ್ಯ ಇದೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ.

    ಸಂದೀಪ್ ರೆಡ್ಡಿ ವಂಗಾ ‘ಅನಿಮಲ್’ ಪಾರ್ಟ್ 2 ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. ಅನಿಮಲ್ ಚಿತ್ರದಂತೆ ಪಾರ್ಟ್ 2 ಕೂಡ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಶುರುವಾಗಲಿದೆ.

  • ಬಾಯ್‌ಫ್ರೆಂಡ್ ಬರ್ತ್‌ಡೇಗೆ ತೃಪ್ತಿ ದಿಮ್ರಿ ಸ್ವೀಟ್ ವಿಶ್

    ಬಾಯ್‌ಫ್ರೆಂಡ್ ಬರ್ತ್‌ಡೇಗೆ ತೃಪ್ತಿ ದಿಮ್ರಿ ಸ್ವೀಟ್ ವಿಶ್

    ‘ಅನಿಮಲ್’ (Animal) ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ತೃಪ್ತಿ ದಿಮ್ರಿಗೆ (Tripti Dimri) ಬಾಲಿವುಡ್‌ನಲ್ಲಿ ಭಾರೀ ಅವಕಾಶಗಳು ಹರಿದು ಬರುತ್ತಿವೆ. ರಣ್‌ಬೀರ್ (Ranbir Kapoor) ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡ ಮೇಲೆ ತೃಪ್ತಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಇದರ ನಡುವೆ ಬಾಯ್‌ಫ್ರೆಂಡ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ನಟಿ ವಿಶ್ ಮಾಡಿದ್ದಾರೆ.

    ನಟಿ ತೃಪ್ತಿ ಎಂಗೇಜ್ ಆಗಿದ್ದಾರೆ. ಹೋಟೆಲ್ ಉದ್ಯಮಿ ಸ್ಯಾಮ್ ಮರ್ಚೆಂಟ್ (Sam Merchant) ಜೊತೆ ಹಲವು ವರ್ಷಗಳಿಂದ ಸ್ನೇಹ ಹೊಂದಿದ್ದಾರೆ. ಇತ್ತೀಚೆಗೆ ಗೆಳೆಯ ಸ್ಯಾಮ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಶುಭಕೋರಿದ್ದಾರೆ.

    ಕಳೆದ ವರ್ಷ ಆಪ್ತರ ಮದುವೆಯಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಇಬ್ಬರು ಡೇಟಿಂಗ್ ಮಾಡುತ್ತಿರೋದರ ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಇದಕ್ಕೂ ಮುನ್ನ ಅನುಷ್ಕಾ ಶರ್ಮಾ (Anushka Sharma) ಸಹೋದರ ಕರ್ಣೇಶ್ ಶರ್ಮಾ ಜೊತೆ ನಟಿ ಡೇಟಿಂಗ್ ಮಾಡುತ್ತಿದ್ದರು. ಕೆಲ ಮನಸ್ತಾಪಗಳಿಂದ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು.

    ‘ಅನಿಮಲ್’ (Animal) ಸಕ್ಸಸ್ ನಂತರ ತೃಪ್ತಿಗೆ ಬಾಲಿವುಡ್ ಸಿನಿಮಾಗಳ ಜೊತೆಗೆ ತೆಲುಗಿನಲ್ಲಿಯೂ ಅವಕಾಶಗಳು ಹರಿದುಬರುತ್ತಿದೆ.

  • ‘ಹೃದಯಂ’ ನಟಿ ಕಲ್ಯಾಣಿ ಮೀಟ್ಸ್ ರಶ್ಮಿಕಾ ಮಂದಣ್ಣ- ಮ್ಯಾಟರ್ ಏನು?

    ‘ಹೃದಯಂ’ ನಟಿ ಕಲ್ಯಾಣಿ ಮೀಟ್ಸ್ ರಶ್ಮಿಕಾ ಮಂದಣ್ಣ- ಮ್ಯಾಟರ್ ಏನು?

    ಣ್ಣದ ಲೋಕದಲ್ಲಿ ಒಬ್ಬ ನಟಿಯನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಸ್ಟಾರ್ ನಟಿಯರು ಒಬ್ಬರಿಗೊಬ್ಬರು ಫ್ರೆಂಡ್ಸ್ ಆಗೋದು ಇನ್ನೂ ದೂರದ ಮಾತು. ಹೀಗಿರುವಾಗ ನಟಿ ಕಲ್ಯಾಣಿ (Kalyani Priyadarshan) ಅವರನ್ನು ರಶ್ಮಿಕಾ ಮಂದಣ್ಣ (Rashmika Mandanna) ಭೇಟಿಯಾಗಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಮುಂಬೈ ವಿಮಾನ ನಿಲ್ದಾಣದಲ್ಲಿ ಕಲ್ಯಾಣಿ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಕೈ ಕೈ ಹಿಡಿದು ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಈ ಕುರಿತ ಫೋಟೋ, ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಪ್ರಜ್ವಲ್ ದೇವರಾಜ್‌ಗೆ ಅಮೂಲ್ಯ ನಾಯಕಿ- ಯಾವ ಸಿನಿಮಾ?

    ಕಲ್ಯಾಣಿ (Actress Kalyani) ಜೊತೆಗಿನ ಚೆಂದದ ಫೋಟೋ ಹಂಚಿಕೊಂಡು ನನ್ನ ಕಡೆಯಿಂದ ಬರೀ ಪ್ರೀತಿ, ಮತ್ತೆ ಸಿಗೋಣ ಎಂದು ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ದೊಡ್ಮನೆಯ ಹೀರೋ, ಹೀರೋಯಿನ್, ವಿಲನ್ ಇವರೇ ಎಂದ ತುಕಾಲಿ

    ವಿಮಾನ ನಿಲ್ದಾಣಕ್ಕೆ ಬರುವ ಮುಂಚೆಯೇ ಇಬ್ಬರೂ ಕೆಲ ಕಾಲ ಸಮಯ ಕಳೆದಿದ್ದಾರೆ. ಆದರೂ ಇಬ್ಬರ ಒಡನಾಟ ನೋಡಿ ಪರವಾಗಿಲ್ವೇ ಸ್ಟಾರ್ ನಟಿಯರು ಅಹಂ ಬಿಟ್ಟು ಒಟ್ಟಾಗುತ್ತಿದ್ದಾರಲ್ಲ ಎಂದು ಫ್ಯಾನ್ಸ್ ಖುಷಿಪಡುತ್ತಿದ್ದಾರೆ.

    ಇನ್ನೂ ರಶ್ಮಿಕಾ ‘ಅನಿಮಲ್’ (Animal) ಸಕ್ಸಸ್ ನಂತರ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಕಲ್ಯಾಣಿ, ಸೌತ್ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ.

  • ಡಿಲಿಟೆಡ್ ದೃಶ್ಯ ಸೇರಿಸಿ: ‘ಅನಿಮಲ್’ ನಿರ್ದೇಶಕನಿಗೆ ಬೇಡಿಕೆ ಇಟ್ಟ ಫ್ಯಾನ್ಸ್

    ಡಿಲಿಟೆಡ್ ದೃಶ್ಯ ಸೇರಿಸಿ: ‘ಅನಿಮಲ್’ ನಿರ್ದೇಶಕನಿಗೆ ಬೇಡಿಕೆ ಇಟ್ಟ ಫ್ಯಾನ್ಸ್

    ಬಾಕ್ಸ್ ಆಫೀಸಿನಲ್ಲಿ ಕೊಳ್ಳೆ ಹೊಡೆದಿದ್ದ ಅನಿಮಲ್ ಸಿನಿಮಾ ಇದೀಗ ಒಟಿಟಿಯಲ್ಲಿ ರಿಲೀಸ್ ಆಗಿದೆ. ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿದವರೂ ಮತ್ತೆ ಒಟಿಟಿಯಲ್ಲಿ ಚಿತ್ರ ವೀಕ್ಷಿಸುತ್ತಿದ್ದಾರೆ. ಜೊತೆಗೆ ನಿರಾಸೆಯನ್ನೂ ಅವರು ವ್ಯಕ್ತ ಪಡಿಸುತ್ತಿದ್ದಾರೆ. ಜೊತೆಗೆ ವಿಚಿತ್ರ ಬೇಡಿಕೆಯೊಂದನ್ನು ಅವರು ಇಟ್ಟಿದ್ದಾರೆ.

    ಕುಟುಂಬ ಸಮೇತ ನೋಡಲು ಬಾರದಂತಹ ದೃಶ್ಯಗಳು ಈ ಸಿನಿಮಾದಲ್ಲಿದ್ದವು. ಅವುಗಳನ್ನು ಸೆನ್ಸಾರ್ ಮಂಡಳಿಯು ತೆಗೆಸಿ ಹಾಕಿ, ಎ ಪ್ರಮಾಣ ಪತ್ರವನ್ನು ನೀಡಿತ್ತು. ಸೆನ್ಸಾರ್ ತೆಗೆಸಿದ ವಿಡಿಯೋವನ್ನು ಒಟಿಟಿಯಲ್ಲಿ ಹಾಕಬಹುದಿತ್ತು. ಆದರೆ, ಅವರು ಹಾಕಿಲ್ಲ. ಹಾಗಾಗಿ ಡಿಲಿಟೆಡ್ ದೃಶ್ಯಗಳನ್ನು ಸೇರಿಸಿ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಆಗ್ರಹಿಸಿದ್ದಾರೆ. ಇದಕ್ಕೆ ಚಿತ್ರತಂಡ ಸಮ್ಮತಿಯನ್ನೂ ಸೂಚಿಸಿದೆ.

    ಕಳೆದ ಡಿಸೆಂಬರ್ ನಲ್ಲಿ ಅನಿಮಲ್ ಸಿನಿಮಾ ರಿಲೀಸ್ ಆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಇದೀಗ ಅನಿಮಲ್ ಸಿನಿಮಾ ಒಟಿಟಿಯಲ್ಲೂ (OTT) ಲಭ್ಯವಿದೆ. ಗಣರಾಜ್ಯೋತ್ಸವದ ದಿನದಿಂದ ಈ ಚಿತ್ರವನ್ನು ಒಟಿಟಿಯಲ್ಲಿ ಜನರು ವೀಕ್ಷಿಸುತ್ತಿದ್ದಾರೆ. ಈ ನಡುವೆ ಅನಿಮಲ್ ಚಿತ್ರತಂಡ ಮತ್ತೊಂದು ಹೊಸ ಸುದ್ದಿ ಬಂದಿದ್ದು, ಈ ಸಿನಿಮಾದ ಮುಂದಿನ ಭಾಗ ಕೂಡ ಬರಲಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ಟೈಮ್ ಇನ್ನೂ ಈ ಕುರಿತು ಮಾಹಿತಿ ನೀಡದೇ ಇದ್ದರೂ, ಪಾರ್ಟ್ 2 (Part 2) ಹಾಗೂ ಆ ಭಾಗದಲ್ಲಿ ಇನ್ನೂ ರಕ್ತಸಿಕ್ತ ಅಧ್ಯಾಯ ಇರಲಿದೆ ಎಂದು ಚರ್ಚೆ ನಡೆಯುತ್ತಿದೆ.

    ಸಿನಿಮಾ ರಿಲೀಸ್ ಆದ ಒಂದೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿತ್ತು. ಜೊತೆಗೆ ರಿಲೀಸ್ ದಿನದಿಂದ ಬಾಕ್ಸ್ ಆಫೀಸ್ (Box Office) ಕಲೆಕ್ಷನ್ ಏರುತ್ತಲೇ ಇದೆ. ಮೂರು ದಿನದ ಒಟ್ಟು ಕಲೆಕ್ಷನ್ ಮುನ್ನೂರು ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿತ್ತು. ಈ ಮೂಲಕ ಜವಾನ್ ನಂತರ ಬಾಲಿವುಡ್ ನ ಮತ್ತೊಂದು ಚಿತ್ರ ಕೋಟಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡಿತ್ತು.

    ಸಂದೀಪ್ ರೆಡ್ಡಿ ವಂಗ ನಿರ್ದೇಶನದ  ಹಾಗೂ ರಣ್ ಬೀರ್ ಕಪೂರ್ (Ranbir Kapoor) , ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna),  ಪ್ರಮುಖಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಅನಿಮಲ್ (Animal) ಡಿಸೆಂಬರ್ 1 ರಂದು ತೆರೆಗೆ ಬಂದಿದೆ. ಚಿತ್ರಕ್ಕೆ ಸೆನ್ಸಾರ್ (Censor) ಮಂಡಳಿಯು ‘ಎ’ ಪ್ರಮಾಣ ಪತ್ರ ನೀಡಿದ್ದರೂ, ಜೊತೆಗೆ ರಶ್ಮಿಕಾ ಮತ್ತು ರಣಬೀರ್ ಜೋಡಿಯ ಹಸಿಬಿಸಿ ದೃಶ್ಯಗಳನ್ನು ಸಿನಿಮಾ ಒಳಗೊಂಡಿದ್ದರೂ ಪ್ರೇಕ್ಷಕನಿಗೆ ಚಿತ್ರ ಹಿಡಿಸಿದೆ.

     

    ಈ ಚಿತ್ರದ ಬಗ್ಗೆ ಚಿತ್ರತಂಡಕ್ಕೆ ಸಾಕಷ್ಟು ನಿರೀಕ್ಷೆ ಇತ್ತು. ನಟ ರಣಬೀರ್ ಕಪೂರ್ ಸಿನಿಮಾದ ಬಗ್ಗೆ ಮಾತನಾಡುತ್ತಾ, ‘ಇದು ವಿಭಿನ್ನವಾದ ಸಿನಿಮಾ. ತಂದೆ – ಮಗನ ಬಾಂಧವ್ಯದ ಜೊತೆ ಜೊತೆಗೆ ಹಿಂಸೆ ಮತ್ತು ಕ್ರೌರ್ಯಕ್ಕೆ ಒತ್ತು ನೀಡಿದ್ದಾರೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ. ಸೆಂಟೆಮೆಂಟ್ ಅಥವಾ ಹಿಂಸೆಗೆ ಎಷ್ಟು ಪ್ರಾಧಾನ್ಯತೆ ನೀಡಲಾಗಿದೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು. ಹಿರಿಯ ನಟರಾದ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಅವರ ಜೊತೆ ನಟನೆ ಮಾಡಿದ್ದು ಒಳ್ಳೆಯ ಅನುಭವ. ಜೊತೆಗೆ ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಜೀವ  ತುಂಬಿದ್ದಾರೆ’ ಎಂದಿದ್ದರು.

  • ಗಣರಾಜ್ಯೋತ್ಸವಕ್ಕೆ ಒಟಿಟಿಯಲ್ಲಿ ರಶ್ಮಿಕಾ ನಟನೆಯ ಅನಿಮಲ್

    ಗಣರಾಜ್ಯೋತ್ಸವಕ್ಕೆ ಒಟಿಟಿಯಲ್ಲಿ ರಶ್ಮಿಕಾ ನಟನೆಯ ಅನಿಮಲ್

    ಣ್ ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ‘ಅನಿಮಲ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿದೆ. ಕಳೆದ ಡಿಸೆಂಬರ್ ನಲ್ಲಿ ರಿಲೀಸ್ ಆಗಿದ್ದ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಇದೀಗ ಅನಿಮಲ್ ಸಿನಿಮಾ ಒಟಿಟಿಯಲ್ಲಿ (OTT)ಬರಲು ರೆಡಿಯಾಗಿದೆ. ಗಣರಾಜ್ಯೋತ್ಸವದ ದಿನದಂದೇ ಈ ಚಿತ್ರವನ್ನು ಒಟಿಟಿಯಲ್ಲಿ ನೋಡಬಹುದಾಗಿದೆ.

    ಈ ನಡುವೆ ಅನಿಮಲ್ ಚಿತ್ರತಂಡದೊಂದು ಮತ್ತೊಂದು ಹೊಸ ಸುದ್ದಿ ಬಂದಿದ್ದು, ಈ ಸಿನಿಮಾದ ಮುಂದಿನ ಭಾಗ ಕೂಡ ಬರಲಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ಟೈಮ್ ಇನ್ನೂ ಈ ಕುರಿತು ಮಾಹಿತಿ ನೀಡದೇ ಇದ್ದರೂ, ಪಾರ್ಟ್ 2 (Part 2) ಹಾಗೂ ಆ ಭಾಗದಲ್ಲಿ ಇನ್ನೂ ರಕ್ತಸಿಕ್ತ ಅಧ್ಯಾಯ ಇರಲಿದೆ ಎಂದು ಚರ್ಚೆ ನಡೆಯುತ್ತಿದೆ.

    ಸಿನಿಮಾ ರಿಲೀಸ್ ಆದ ಒಂದೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿತ್ತು. ಜೊತೆಗೆ ರಿಲೀಸ್ ದಿನದಿಂದ ಬಾಕ್ಸ್ ಆಫೀಸ್ (Box Office) ಕಲೆಕ್ಷನ್ ಏರುತ್ತಲೇ ಇದೆ. ಮೂರು ದಿನದ ಒಟ್ಟು ಕಲೆಕ್ಷನ್ ಮುನ್ನೂರು ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿತ್ತು. ಈ ಮೂಲಕ ಜವಾನ್ ನಂತರ ಬಾಲಿವುಡ್ ನ ಮತ್ತೊಂದು ಚಿತ್ರ ಕೋಟಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡಿತ್ತು.

    ಸಂದೀಪ್ ರೆಡ್ಡಿ ವಂಗ ನಿರ್ದೇಶನದ  ಹಾಗೂ ರಣ್ ಬೀರ್ ಕಪೂರ್ (Ranbir Kapoor) , ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna),  ಪ್ರಮುಖಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಅನಿಮಲ್ (Animal) ಡಿಸೆಂಬರ್ 1 ರಂದು ತೆರೆಗೆ ಬಂದಿದೆ. ಚಿತ್ರಕ್ಕೆ ಸೆನ್ಸಾರ್ (Censor) ಮಂಡಳಿಯು ‘ಎ’ ಪ್ರಮಾಣ ಪತ್ರ ನೀಡಿದ್ದರೂ, ಜೊತೆಗೆ ರಶ್ಮಿಕಾ ಮತ್ತು ರಣಬೀರ್ ಜೋಡಿಯ ಹಸಿಬಿಸಿ ದೃಶ್ಯಗಳನ್ನು ಸಿನಿಮಾ ಒಳಗೊಂಡಿದ್ದರೂ ಪ್ರೇಕ್ಷಕನಿಗೆ ಚಿತ್ರ ಹಿಡಿಸಿದೆ.

    ಈ ಚಿತ್ರದ ಬಗ್ಗೆ ಚಿತ್ರತಂಡಕ್ಕೆ ಸಾಕಷ್ಟು ನಿರೀಕ್ಷೆ ಇತ್ತು. ನಟ ರಣಬೀರ್ ಕಪೂರ್ ಸಿನಿಮಾದ ಬಗ್ಗೆ ಮಾತನಾಡುತ್ತಾ, ‘ಇದು ವಿಭಿನ್ನವಾದ ಸಿನಿಮಾ. ತಂದೆ – ಮಗನ ಬಾಂಧವ್ಯದ ಜೊತೆ ಜೊತೆಗೆ ಹಿಂಸೆ ಮತ್ತು ಕ್ರೌರ್ಯಕ್ಕೆ ಒತ್ತು ನೀಡಿದ್ದಾರೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ. ಸೆಂಟೆಮೆಂಟ್ ಅಥವಾ ಹಿಂಸೆಗೆ ಎಷ್ಟು ಪ್ರಾಧಾನ್ಯತೆ ನೀಡಲಾಗಿದೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು. ಹಿರಿಯ ನಟರಾದ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಅವರ ಜೊತೆ ನಟನೆ ಮಾಡಿದ್ದು ಒಳ್ಳೆಯ ಅನುಭವ. ಜೊತೆಗೆ ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಜೀವ  ತುಂಬಿದ್ದಾರೆ’ ಎಂದಿದ್ದರು.

  • ‘ಅನಿಮಲ್’ ಸಕ್ಸಸ್, ಆಶಿಕಿ 3 ಚಿತ್ರಕ್ಕೆ ತೃಪ್ತಿ ದಿಮ್ರಿ ಹೀರೋಯಿನ್

    ‘ಅನಿಮಲ್’ ಸಕ್ಸಸ್, ಆಶಿಕಿ 3 ಚಿತ್ರಕ್ಕೆ ತೃಪ್ತಿ ದಿಮ್ರಿ ಹೀರೋಯಿನ್

    ಬಾಲಿವುಡ್ ಅಂಗಳದಲ್ಲಿ ಸದ್ಯ ಸೆನ್ಸೇಷನಲ್ ಕ್ರಿಯೇಟ್ ಮಾಡಿರೋ ‘ಅನಿಮಲ್’ (Animal) ಸಿನಿಮಾ 500 ಕೋಟಿ ರೂಪಾಯಿಗಿಂತ ಅಧಿಕ ಕಲೆಕ್ಷನ್ ಮಾಡಿದೆ. ಸಿನಿಮಾ ಅಷ್ಟೇ ಅಲ್ಲ, ಚಿತ್ರದಲ್ಲಿ ನಟಿಸಿದ ನಟಿ ತೃಪ್ತಿ ದಿಮ್ರಿ (Tripti Dimri) ಕೂಡ ಕ್ಲಿಕ್ ಆಗಿದ್ದಾರೆ. ಇದರ ನಡುವೆ ಹೊಸ ಸಿನಿಮಾಗೆ ನಾಯಕಿಯಾಗಿ ಸೆಲೆಕ್ಟ್ ಆಗುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

    ಇದೀಗ ಕಾರ್ತಿಕ್ ಆರ್ಯನ್ (Karthik Aryan) ಮುಂದಿನ ಚಿತ್ರಕ್ಕೆ ತೃಪ್ತಿ ದಿಮ್ರಿ ನಾಯಕಿಯಾಗಿದ್ದಾರೆ. ಆಶಿಕಿ ಪಾರ್ಟ್ 1 ಮತ್ತು 2 ಸಂಚಲನ ಸೃಷ್ಟಿಸಿತ್ತು. ಈಗ ಆಶಿಕಿ-3 ಚಿತ್ರಕ್ಕೆ ಚಾಲನೆ ನೀಡಲು ಪ್ರತಿಷ್ಟಿತ ನಿರ್ಮಾಣ ಸಂಸ್ಥೆಯೊಂದು ಮುಂದಾಗಿದೆ. ಕಾರ್ತಿಕ್ ಆರ್ಯನ್- ತೃಪ್ತಿ ಜೋಡಿಯಾಗಿ ನಟಿಸಲು ಫೈನಲ್ ಆಗಿದೆ. 2024ರ ಜನವರಿಯಿಂದ ಶೂಟಿಂಗ್ ಶುರುವಾಗಲಿದೆ.

    ಮೊದಲ ಬಾರಿಗೆ ಕಾರ್ತಿಕ್ ಜೊತೆ ತೃಪ್ತಿ ನಟಿಸುತ್ತಿರೋ ಕಾರಣ ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇಬ್ಬರ ಜೋಡಿ ಪ್ರೇಕ್ಷಕರಿಗೆ ಅದೆಷ್ಟರ ಮಟ್ಟಿಗೆ ಮೋಡಿ ಮಾಡಬಹುದು ಎಂದು ಕಾತರದಿಂದ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇದನ್ನೂ ಓದಿ:ದರ್ಶನ್ ಸಿನಿಮಾದಲ್ಲಿ ತೆಲುಗು ನಟ ಚಿರಂಜೀವಿ

    ರಣ್‌ಬೀರ್ ಕಪೂರ್ (Ranbir Kapoor) ಜೊತೆ ತೃಪ್ತಿ ರೊಮ್ಯಾನ್ಸ್ ಮಾಡಿದ ಮೇಲೆ ನಟಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ರಶ್ಮಿಕಾ ಮಂದಣ್ಣಗಿಂತ (Rashmika Mandanna) ತೃಪ್ತಿ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಾಲಿವುಡ್ ಸಿನಿಮಾಗಳಿಗೆ ನಟಿಸಲು ತೃಪ್ತಿಗೆ ಬೇಡಿಕೆ ಸೃಷ್ಟಿಯಾಗಿದೆ.

  • ‘ಅನಿಮಲ್’ ಸಕ್ಸಸ್ ಬೆನ್ನಲ್ಲೇ ನಿರ್ದೇಶಕ ಸಂದೀಪ್‌ಗೆ ಪರಿಣಿತಿ ಚೋಪ್ರಾ ಕ್ಷಮೆಯಾಚಿಸಿದ್ದೇಕೆ?

    ‘ಅನಿಮಲ್’ ಸಕ್ಸಸ್ ಬೆನ್ನಲ್ಲೇ ನಿರ್ದೇಶಕ ಸಂದೀಪ್‌ಗೆ ಪರಿಣಿತಿ ಚೋಪ್ರಾ ಕ್ಷಮೆಯಾಚಿಸಿದ್ದೇಕೆ?

    ಣ್‌ಬೀರ್ ಕಪೂರ್- ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ ಸೂಪರ್ ಹಿಟ್ ಆಗಿದೆ. ರಣ್‌ಬೀರ್ ಜೋಡಿಯಾಗಿ ಕಾಣಿಸ್ಕೊಂಡ ರಶ್ಮಿಕಾ ಬಾಲಿವುಡ್‌ನಲ್ಲಿ ಭದ್ರವಾಗಿ ನೆಲೆಯೂರುವ ಪರ್ಫಾಮೆನ್ಸ್ ನೀಡಿದ್ದಾರೆ. ಇದನ್ನೆಲ್ಲಾ ದೂರದಿಂದ ನೋಡುತ್ತಿದ್ದ ಪರಿಣಿತಿ ಚೋಪ್ರಾ ಇದೀಗ ತಮ್ಮ ತಪ್ಪಿನ ಅರಿವಾಗಿದೆ. ನಿರ್ದೇಶಕ ಸಂದೀಪ್ ರೆಡ್ಡಿ (Sandeep Reddy Vanga) ವಂಗಾಗೆ ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ.

    ಅನಿಮಲ್ (Animal) ಸಿನಿಮಾ ರಿಲೀಸ್ ಆದ್ಮೇಲೆ ರಶ್ಮಿಕಾ ನಟಿಸಿದ ಗೀತಾಂಜಲಿ ಪಾತ್ರದ ವಿಚಾರ ಚರ್ಚೆಯಲ್ಲಿತ್ತು. ಇಲ್ಲಿ ರಶ್ಮಿಕಾ ಮಾಡಿರುವ ಪಾತ್ರಕ್ಕೆ ಮೊದಲು ಕರೆ ಹೋಗಿದ್ದು ಪರಿಣಿತಿ ಚೋಪ್ರಾಗೆ ಅನ್ನೋದು ಅಸಲಿ ವಿಷಯ. ಇದನ್ನ ಸಂದರ್ಶನವೊಂದರಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕೂಡ ಹೇಳಿದ್ದರು. ಅನಿಮಲ್ ಸಕ್ಸಸ್ ಬಳಿಕ ಪರಿಣಿತಿ (Parineethi Chopra) ಸಂದೀಪ್‌ಗೆ ಸಾಧ್ಯವಾದರೆ ಕ್ಷಮಿಸಿಬಿಡಿ ಎಂದು ಸಂದೇಶ ಕಳಿಸಿದ್ದಾರೆ.

    ‘ಅನಿಮಲ್’ನಲ್ಲಿ ರಶ್ಮಿಕಾ ಮಾಡಿರುವ ಗೀತಾಂಜಲಿ ಪಾತ್ರಕ್ಕೆ ಭರ್ಜರಿ ಮೆಚ್ಚುಗೆ ಬಂದಿದೆ. ಬಾಲಿವುಡ್‌ನಲ್ಲಿ ಎರಡು ಚಿತ್ರ ಮಾಡಿ ಬ್ರೇಕ್‌ಗಾಗಿ ಕಾಯುತ್ತಿದ್ದ ರಶ್ಮಿಕಾಗೆ ಅನಿಮಲ್ ಭದ್ರ ನೆಲೆ ಕೊಡುವ ಭರವಸೆ ಮೂಡಿಸಿದೆ. ಇದೆಲ್ಲವನ್ನೂ ದೂರದಿಂದಲೇ ನೋಡುತ್ತಿದ್ದ ಪರಿಣಿತಿಗೆ ಈಗ ಮನವರಿಕೆ ಆದಂತಿದೆ. ಇದನ್ನೂ ಓದಿ:ಡಬಲ್ ಎಲಿಮಿನೇಷನ್- ಬಿಗ್ ಬಾಸ್‌ನಿಂದ ಅವಿನಾಶ್ ಶೆಟ್ಟಿ ಔಟ್

    ಸಂದೀಪ್ ರೆಡ್ಡಿ ವಂಗಾಗೆ ಸಂದೇಶ ಕಳುಹಿಸಿದ ಪರಿಣಿತಿ ಚೋಪ್ರಾ, ಸಾಧ್ಯವಾದರೆ ಕ್ಷಮಿಸಿಬಿಡಿ. ಪಾತ್ರ ಬೇಡವೆಂದು ಒಪ್ಪಿಕೊಳ್ಳದೇ ಇರಲಿಲ್ಲ. ಕೆಲವೊಂದು ಪಾತ್ರ ಕೆಲವರಿಗೆ ಹೊಂದಿಕೆಯಾಗೋದಿಲ್ಲ. ಸಿನಿಮಾಗಿಂತ ಮುಖ್ಯವಾದದ್ದು ನನಗೆ ಬೇರೇನೂ ಇಲ್ಲ ಎಂದಿದ್ದಾರೆ. ಅದೇನೇ ಆದ್ರೂ ರಶ್ಮಿಕಾಗೆ ಈಗ ಬಾಲಿವುಡ್‌ನಲ್ಲಿ ಅದೃಷ್ಟ ಖುಲಾಯಿಸಿದೆ.