Tag: animal

  • ಅಶ್ಲೀಲ ಪದ ಬಳಸಿದ ಫೋಟೋಗ್ರಾಫರ್- ಶಾಕ್ ಆದ ರಣ್‌ಬೀರ್ ಕಪೂರ್

    ಅಶ್ಲೀಲ ಪದ ಬಳಸಿದ ಫೋಟೋಗ್ರಾಫರ್- ಶಾಕ್ ಆದ ರಣ್‌ಬೀರ್ ಕಪೂರ್

    ಬಾಲಿವುಡ್ ನಟ ರಣ್‌ಬೀರ್ ಕಪೂರ್ (Ranbir Kapoor) ಸದ್ಯ ‘ರಾಮಾಯಣ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಭರಣ ಮಳಿಗೆಯೊಂದಕ್ಕೆ ನಟ ಚಾಲನೆ ನೀಡಿದ್ದಾರೆ. ಈ ವೇಳೆ, ರಣ್‌ಬೀರ್ ವೇದಿಕೆ ಮೇಲಿದ್ದಾಗ ಫೋಟೋಗ್ರಾಫರ್ ಅಶ್ಲೀಲ ಪದ ಬಳಸಿ ಮಾತನಾಡಿದ್ದು, ಕೇಳಿ ಶಾಕ್ ಆಗಿದ್ದಾರೆ.

    ರಣ್‌ಬೀರ್ ವೇದಿಕೆಗೆ ಎಂಟ್ರಿ ಕೊಟ್ಟಾಗ ಬೇಗನೆ ಫೋಟೋ ಕ್ಲಿಕ್ಕಿಸಬೇಕೆಂಬ ತವಕ. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದ ನಿಮಿತ್ತ ಫೋಟೋಗ್ರಾಫರ್‌ಗೆ ಸರಿಯಾದ ಫೋಟೋ ಸಿಗದ ಕಾರಣ ಸಿಟ್ಟಾಗಿದ್ದಾರೆ. ಈ ವೇಳೆ, ಕೆಟ್ಟ ಪದ ಬಳಸಿ ಮಾತನಾಡಿದ್ದಾರೆ. ಆ ಪದ ಬಳಕೆ ಮಾಡಿದ್ದು, ರಣ್‌ಬೀರ್ ಅವರಿಗೇನಾ ಅಥವಾ ಸೇರಿದ್ದ ಜನರಿಗೇನಾ? ಎಂದು ಸ್ಪಷ್ಟನೆ ಸಿಕ್ಕಿಲ್ಲ. ಒಟ್ನಲ್ಲಿ ಫೋಟೋಗ್ರಾಫರ್ ವರ್ತನೆ ರಣ್‌ಬೀರ್‌ಗೆ ಕೋಪ ತರಿಸಿದೆ.

    ರಣ್‌ಬೀರ್ ಕೂಡ ತಾಳ್ಮೆ ಕಳೆದುಕೊಂಡಿಲ್ಲ. ಖಡಕ್ ಆಗಿ ಲುಕ್ ಕೊಟ್ಟು ವೇದಿಕೆಯಿಂದ ಹೊರನಡೆದಿದ್ದಾರೆ. ವೈರಲ್‌ ಆಗಿರುವ ವಿಡಿಯೋ ನೋಡಿ ಫೋಟೋಗ್ರಾಫರ್ ವರ್ತನೆಗೆ ಫ್ಯಾನ್ಸ್ ಗರಂ ಆಗಿದ್ದಾರೆ. ಎಲ್ಲಿ ಹೇಗಿರಬೇಕು ಎಂಬ ಸೌಜನ್ಯವಿಲ್ಲ ಎಂದು ಖಡಕ್ ಆಗಿ ಪಾಪರಾಜಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಕೈಯಲ್ಲಿ ಗನ್ ಹಿಡಿದು ರಕ್ತಸಿಕ್ತ ಅವತಾರದಲ್ಲಿ ಸಮಂತಾ

    ರಾಮಾಯಣ, ಅನಿಮಲ್ ಪಾರ್ಕ್, ಬ್ರಹ್ಮಾಸ್ತ್ರ 2, ಲವ್ & ವಾರ್ ಸೇರಿದಂತೆ ಹಲವು ಸಿನಿಮಾಗಳು ರಣ್‌ಬೀರ್ ಕೈಯಲ್ಲಿವೆ.

  • ‘ಅನಿಮಲ್ ಪಾರ್ಕ್’ ಸಿನಿಮಾ ಹೇಗಿರಲಿದೆ- ಪಾರ್ಟ್‌ 2 ಬಗ್ಗೆ ಸುಳಿವು ಕೊಟ್ಟ ನಿರ್ದೇಶಕ

    ‘ಅನಿಮಲ್ ಪಾರ್ಕ್’ ಸಿನಿಮಾ ಹೇಗಿರಲಿದೆ- ಪಾರ್ಟ್‌ 2 ಬಗ್ಗೆ ಸುಳಿವು ಕೊಟ್ಟ ನಿರ್ದೇಶಕ

    ಬಾಲಿವುಡ್ ನಟ ರಣ್‌ಬೀರ್ ಕಪೂರ್ (Ranbir Kapoor) ಮತ್ತು ರಶ್ಮಿಕಾ ಮಂದಣ್ಣಗೆ(Rashmika Mandanna) ‘ಅನಿಮಲ್’ (Animal Film) ಚಿತ್ರ ಬಿಗ್ ಬ್ರೇಕ್ ಕೊಟ್ಟಿತ್ತು. ಇದರ ಪಾರ್ಟ್ 2 ಯಾವಾಗ ಎಂದು ಕಾಯುತ್ತಿದ್ದ ಫ್ಯಾನ್ಸ್‌ಗೆ ಡೈರೆಕ್ಟರ್ ಬಿಗ್ ಅಪ್‌ಡೇಟ್‌ವೊಂದನ್ನು ನೀಡಿದ್ದಾರೆ. ಅನಿಮಲ್ ಪಾರ್ಕ್ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ ಸಂದೀಪ್ ರೆಡ್ಡಿ ವಂಗಾ. ಇದನ್ನೂ ಓದಿ:ಡಾ.ರಾಜ್‌ ಹುಟ್ಟುಹಬ್ಬ- ಸ್ಮಾರಕಕ್ಕೆ ಕುಟುಂಬಸ್ಥರಿಂದ ಪೂಜೆ

    ‘ಅನಿಮಲ್ ಪಾರ್ಕ್’ (Animal) ಸಿನಿಮಾದ ಕಥೆ ಸಿದ್ಧವಾಗಿದೆ. ಹಾಗಾದ್ರೆ ಶೂಟಿಂಗ್ ಯಾವಾಗ? ಚಿತ್ರ ಹೇಗಿರಲಿದೆ ಎಂಬುದನ್ನು ನಿರ್ದೇಶಕ ಸಂದೀಪ್ ಕಾರ್ಯಕ್ರಮವೊಂದರಲ್ಲಿ ಮಾಹಿತಿ ನೀಡಿದ್ದಾರೆ. ಈ ಹಿಂದಿನ ಅನಿಮಲ್ ಸಿನಿಮಾ ಹೋಲಿಸಿದರೆ ಪಾರ್ಟ್ 2 ಇನ್ನೂ ಹೆಚ್ಚು ವೈಲ್ಡ್ ಆಗಿರಲಿದೆ ಎಂದಿದ್ದಾರೆ. 2026ರಲ್ಲಿ ಶೂಟಿಂಗ್ ಆರಂಭವಾಗಲಿದೆ ಎಂದು ನಿರ್ದೇಶಕ ಮಾತನಾಡಿದ್ದಾರೆ.

    ಮುಂದಿನ ಭಾಗದಲ್ಲಿ ರಣ್‌ಬೀರ್ ಕಪೂರ್ ಪಾತ್ರದ ರಣವಿಜಯ್ ಮತ್ತು ಗೀತಾಂಜಲಿ ಪಾತ್ರಧಾರಿ ರಶ್ಮಿಕಾ ಸಂಬಂಧವನ್ನು ಪರೀಕ್ಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ರಣಬೀರ್ ಅಸಲಿ ಮತ್ತು ನಕಲಿ ಮಧ್ಯೆ ಭಾರೀ ಟ್ವಿಸ್ಟ್ ಇರಲಿದೆಯಂತೆ.

    ಮೊದಲ ಭಾಗದಲ್ಲಿ ಅನಿಲ್ ಕಪೂರ್ ಮತ್ತು ರಣ್‌ಬೀರ್ ಕಪೂರ್ ಅವರ ಅಪ್ಪ-ಮಗನ ಸಂಬಂಧವನ್ನು ಅದ್ಭುತವಾಗಿ ತೋರಿಸಿದ್ದರು. ರಶ್ಮಿಕಾ, ತೃಪ್ತಿ ದಿಮ್ರಿ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ರಣ್‌ಬೀರ್ ಮಾಸ್ ಆ್ಯಕ್ಷನ್‌ಗೆ ಫ್ಯಾನ್ಸ್‌ಗೆ ಫಿದಾ ಆಗಿದ್ದರು. ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು.

  • ಜಪಾನ್ ಸುತ್ತಾಟದ ವಿಶೇಷ ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

    ಜಪಾನ್ ಸುತ್ತಾಟದ ವಿಶೇಷ ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗೆ ಜಪಾನ್‌ಗೆ ಹೋಗಿ ಬಂದಿದ್ದಾರೆ. ಅನಿಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಹೇಳಿಕೊಂಡಿದ್ದರು. ಇದೀಗ ಜಪಾನ್ ಸುತ್ತಾಟ ಮತ್ತು ತುಂಟಾಟದ ವಿಡಿಯೋ ತುಣುಕನ್ನು ಹರಿಬಿಟ್ಟಿದ್ದಾರೆ. ಇದನ್ನೂ ಓದಿ:ಸದ್ದಿಲ್ಲದೇ 2ನೇ ಚಿತ್ರದ ಶೂಟಿಂಗ್‌ ಮುಗಿಸಿದ ಆಮೀರ್ ಖಾನ್ ಪುತ್ರ

    ರಶ್ಮಿಕಾ ಈಗ ಬರೀ ಇಂಡಿಯಾದ ಹುಡುಗಿಯಾಗಿ ಉಳಿದಿಲ್ಲ. ಪುಷ್ಪ ಹಾಗೂ ‘ಅನಿಮಲ್’ (Animal) ಸಿನಿಮಾ ಬಂದ ಮೇಲಂತೂ ಆ ಹುಡುಗಿ ಎಲ್ಲಿಗೋ ಹೋಗಿ ಮುಟ್ಟಿದ್ದಾರೆ. ಬಾಲಿವುಡ್‌ನಲ್ಲಿ ಬೆಳಗುತ್ತಿರುವ ರಶ್ಮಿಕಾ ಈಗ ಜಪಾನ್‌ಗೆ ಹೋಗಿದ್ದ ವಿಡಿಯೋ ತುಣುಕನ್ನು ಕೊಂಚ ಹೆಚ್ಚಾಗಿಯೇ ಹಂಚಿಕೊಂಡಿದ್ದಾರೆ. ಈ ಹಿಂದೆ ಜಪಾನ್‌ಗೆ ಹೋಗೋದು ನನ್ನ ಬಾಲ್ಯದ ಕನಸು ಎಂದು ನಟಿ ಹೇಳಿದ್ದರು. ಹಾಗಾಗಿ ಜಪಾನ್ ಸ್ಥಳದ ವಿಶೇಷ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ.

    ಒಬ್ಬ ನಟಿ ಎಂಥ ಹೋಟೆಲ್‌ನಲ್ಲಿ ಇರುತ್ತಾರೆ. ಏನೇನು ತಿನ್ನುತ್ತಾರೆ. ಜನರ ಜೊತೆ ಹೇಗೆ ಬೆರೆಯುತ್ತಾರೆ. ಇತ್ಯಾದಿ ವಿಷಯ ಅಷ್ಟು ಸುಲಭವಾಗಿ ಯಾರಿಗೂ ಕಾಣಿಸಲ್ಲ. ಅದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ ಸಾನ್ವಿ. ಸ್ನೇಹಿತೆಯರ ಹೋಗಿದ್ದು. ಸೆಲ್ಫಿ ತೆಗೆಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಎಲ್ಲವೂ ಅಭಿಮಾನಿಗಳಿಗೆ ತೆರೆಹಿಂದಿನ ಝಲಕ್ ತೋರಿಸಿದ್ದಾರೆ.


    ಪುಷ್ಪ 2, ಅನಿಮಲ್ ಪಾರ್ಕ್, ಚಾವಾ, ರೈನ್‌ಬೋ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ.

  • ಶೂಟಿಂಗ್ ಮುಗಿಯುತ್ತಿದ್ದಂತೆ ಬಾಯ್‌ಫ್ರೆಂಡ್ ಜೊತೆ ಗೋವಾಗೆ ತೃಪ್ತಿ ದಿಮ್ರಿ ಜೂಟ್

    ಶೂಟಿಂಗ್ ಮುಗಿಯುತ್ತಿದ್ದಂತೆ ಬಾಯ್‌ಫ್ರೆಂಡ್ ಜೊತೆ ಗೋವಾಗೆ ತೃಪ್ತಿ ದಿಮ್ರಿ ಜೂಟ್

    ‘ಅನಿಮಲ್’ ಬ್ಯೂಟಿ ತೃಪ್ತಿ ದಿಮ್ರಿ (Tripti Dimri) ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಹೊಸ ಪ್ರಾಜೆಕ್ಡ್‌ಗೆ ಬ್ರೇಕ್ ಸಿಕ್ಕ ಬೆನ್ನಲ್ಲೇ ಬಾಯ್‌ಫ್ರೆಂಡ್ ಜೊತೆ ಗೋವಾಗೆ ಹಾರಿದ್ದಾರೆ. ಗೋವಾದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

    ‘ಭೂಲ್ ಭುಲೈಯಾ 3’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್‌ಗೆ ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಇತ್ತ ಶೂಟಿಂಗ್‌ಗೆ ಬ್ರೇಕ್ ಬೀಳುತ್ತಿದ್ದಂತೆ ಬಾಯ್‌ಫ್ರೆಂಡ್ ಸ್ಯಾಮ್ ಮರ್ಚೆಂಟ್ ಜೊತೆ ಗೋವಾದಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.

    ಬಾಯ್‌ಫ್ರೆಂಡ್ ಜೊತೆ ಇರುವ ಫೋಟೋ ನಟಿ ಶೇರ್ ಮಾಡದೇ ಇದ್ದರೂ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಫೋಟೋ ಒಂದೇ ಆಗಿದೆ. ಇಬ್ಬರ ಡೇಟಿಂಗ್ ಬಗ್ಗೆ ಫ್ಯಾನ್ಸ್‌ಗೆ ಪುಷ್ಠಿ ಸಿಕ್ಕಂತೆ ಆಗಿದೆ.

    ಇದಷ್ಟೇ ಅಲ್ಲ, ಕೆಲದಿನಗಳ ಹಿಂದೆ ಬಾಯ್‌ಫ್ರೆಂಡ್ ಜೊತೆ ಹೋಳಿ ಹಬ್ಬವನ್ನು ನಟಿ ಸಂಭ್ರಮದಿಂದ ಆಚರಿಸಿದ್ದರು. ಇಬ್ಬರ ಹೋಳಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಇದನ್ನೂ ಓದಿ:‘ಆಡುಜೀವಿತಂ’ ಬಾಕ್ಸ್ ಆಫೀಸಿನಲ್ಲೂ ಅಚ್ಚರಿಯ ಗಳಿಕೆ

    ರಣ್‌ಬೀರ್ ಕಪೂರ್ (Ranbir Kapoor) ಜೊತೆ ‘ಅನಿಮಲ್’ (Animal) ಸಿನಿಮಾದಲ್ಲಿ ನಟಿಸಿದ ಮೇಲೆ ತೃಪ್ತಿ ದಿಮ್ರಿಗೆ ಬೇಡಿಕೆ ಜಾಸ್ತಿ ಆಗಿದೆ. ರಶ್ಮಿಕಾ ಮಂದಣ್ಣಗೆ (Rashmika Mandanna) ಠಕ್ಕರ್ ಕೊಟ್ಟು ತೃಪ್ತಿ ಮಿಂಚಿದ್ದಾರೆ. ಹೊಸ ಸಿನಿಮಾ ಆಫರ್ಸ್‌ ನಟಿ ಗಿಟ್ಟಿಸಿಕೊಳ್ತಿದ್ದಾರೆ.

  • ಯಾವಾಗ ಬರಲಿದೆ ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್ ಪಾರ್ಕ್’ ಸಿನಿಮಾ?

    ಯಾವಾಗ ಬರಲಿದೆ ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್ ಪಾರ್ಕ್’ ಸಿನಿಮಾ?

    ಶ್ಮಿಕಾ ಮಂದಣ್ಣ (Rashmika Mandanna), ರಣ್‌ಬೀರ್ ಕಪೂರ್ ನಟನೆಯ ‘ಅನಿಮಲ್’ (Animal) ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಈ ಚಿತ್ರದ ಮುಂದುವರೆದ ಭಾಗಕ್ಕಾಗಿ ಅಭಿಮಾನಿಗಳು ಕೂಡ ಎದುರು ನೋಡ್ತಿದ್ದಾರೆ. ಇದೀಗ ಅನಿಮಲ್ ಪಾರ್ಕ್ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.

    ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್, ರಶ್ಮಿಕಾ, ತೃಪ್ತಿ ದಿಮ್ರಿ ಮೂವರು ಸಿಕ್ಕಾಪಟ್ಟೆ ಹೈಲೆಟ್ ಆಗಿದ್ದರು. ಅದರಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಅವರು ರಣ್‌ಬೀರ್ ಕಪೂರ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಈ ಮೂಲಕ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಂಡಿದ್ದರು.

    ಇದರ ಪಾರ್ಟ್ 2 ‘ಅನಿಮಲ್ ಪಾರ್ಕ್’ ಯಾವಾಗ ಬರಲಿದೆ ಎಂಬುದಕ್ಕೆ ಮಾಹಿತಿ ಸಿಕ್ಕಿದೆ. ಪ್ರಭಾಸ್ ನಟನೆಯ ಸ್ಪಿರಿಟ್ ಸಿನಿಮಾದ ಕೆಲಸ ಮುಗಿದ ಮೇಲೆ ರಿಲೀಸ್ ನಂತರ ಅನಿಮಲ್ ಪಾರ್ಕ್ ಚಿತ್ರವನ್ನು ಸಂದೀಪ್ ಕೈಗೆತ್ತಿಕೊಳ್ಳಲಿದ್ದಾರೆ. 2026ರಲ್ಲಿ ಈ ಸಿನಿಮಾ ಬೆಳ್ಳಿಪರದೆಯ ಮೇಲೆ ತೋರಿಸುವ ಪ್ಲ್ಯಾನ್ ಮಾಡಿದ್ದಾರೆ.

    ‘ಅನಿಮಲ್’ ಭಾಗ 2ರಲ್ಲಿ ರಣ್‌ಬೀರ್ ಕಪೂರ್ ಡಬಲ್ ಶೇಡ್‌ನಲ್ಲಿ ಕಾಣಿಸಿಕೊಂಡ್ರೆ, ರಶ್ಮಿಕಾ ಮಂದಣ್ಣ ಪಾತ್ರ ಮತ್ತಷ್ಟು ಹೈಲೆಟ್ ಆಗಲಿದೆ. ಇದರಲ್ಲಿ ಸೇಡಿನ ಕಥೆ, ಲವ್ ಮತ್ತು ರೊಮ್ಯಾನ್ಸ್ ತುಸು ಜಾಸ್ತಿಯೇ ಇರಲಿದೆ. ಫ್ಯಾನ್ಸ್‌ಗೆ ಒಂದು ವಿಭಿನ್ನ ಕಥೆಯನ್ನು ಸಂದೀಪ್ ತೋರಿಸೋದು ಗ್ಯಾರಂಟಿ.‌ ಇದನ್ನೂ ಓದಿ:ನಾನು ಮದುವೆಯಾಗಬೇಕು, ಮಕ್ಕಳು ಬೇಕು ಎಂದ ವಿಜಯ್ ದೇವರಕೊಂಡ

    ಸದ್ಯ ರಾಮಾಯಣ ಪಾರ್ಟ್ 1 & 2 ಆದ್ಮೇಲೆ 2026ರಲ್ಲಿ ಅನಿಮಲ್ ತಂಡವನ್ನು ರಣ್‌ಬೀರ್ ಸೇರಿಕೊಳ್ಳಲಿದ್ದಾರೆ. ರಶ್ಮಿಕಾ ಈಗಾಗಲೇ 5ಕ್ಕೂ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಇದಾದ ನಂತರ ಅನಿಮಲ್ 2ಗೆ ಸಾಥ್ ನೀಡಲಿದ್ದಾರೆ. ಒಟ್ನಲ್ಲಿ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • ಬಾಯ್‌ಫ್ರೆಂಡ್ ಜೊತೆ ಹೋಳಿ ಹಬ್ಬ ಆಚರಿಸಿದ ‘ಅನಿಮಲ್‌’ ನಟಿ

    ಬಾಯ್‌ಫ್ರೆಂಡ್ ಜೊತೆ ಹೋಳಿ ಹಬ್ಬ ಆಚರಿಸಿದ ‘ಅನಿಮಲ್‌’ ನಟಿ

    ‘ಅನಿಮಲ್’ (Animal) ಸಿನಿಮಾದ ಸಕ್ಸಸ್ ಬಳಿಕ ತೃಪ್ತಿ ದಿಮ್ರಿಗೆ ಬಾಲಿವುಡ್, ತೆಲುಗು ಚಿತ್ರರಂಗದಿಂದ ಬೇಡಿಕೆ ಜಾಸ್ತಿಯಾಗಿದೆ. ಸದ್ಯ ಶೂಟಿಂಗ್‌ಗೆ ಬ್ರೇಕ್ ಹಾಕಿ ಬಾಯ್‌ಫ್ರೆಂಡ್ ಜೊತೆ ಹೋಳಿ ಸೆಲೆಬ್ರೇಟ್ ಮಾಡಿದ್ದಾರೆ. ಹೋಳಿ ಸಂಭ್ರಮದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ.

    ಮುಂಬೈನಲ್ಲಿ ಬಾಯ್‌ಫ್ರೆಂಡ್ ಜೊತೆ ಬಣ್ಣದಲ್ಲಿ ಆಟ ಆಡಿ ಹಬ್ಬ ಮಾಡಿ ಖುಷಿಪಟ್ಟಿದ್ದಾರೆ. ಪಡ್ಡೆಹುಡುಗರ ನೆಚ್ಚಿನ ನಟಿ ತೃಪ್ತಿ ದಿಮ್ರಿ ಹೋಳಿ ಸೆಲೆಬ್ರೇಶನ್‌ ಫೋಟೋಗಳನ್ನು ಫ್ಯಾನ್ಸ್‌ ದಂಗಾಗಿದ್ದಾರೆ. ಗಂಡ್‌ ಹೈಕ್ಳ ಕ್ರಶ್‌ ತೃಪ್ತಿ ಎಂಗೇಜ್‌ ಆದ್ರಾ? ಮ್ಯಾಟರ್‌ ಎಂದು ಅಧಿಕೃತ ಮಾಹಿತಿ ಸಿಗದೇ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಇದನ್ನೂ ಓದಿ:ಮಲಯಾಳಂ ಚಿತ್ರದ ಶೂಟಿಂಗ್ ಬಗ್ಗೆ ಅಪ್‌ಡೇಟ್ ಹಂಚಿಕೊಂಡ ‘ದಿಯಾ’ ಹೀರೋ

    ಅನುಷ್ಕಾ ಶರ್ಮಾ (Anushka Sharma) ಸಹೋದರ ಕರ್ಣೇಶ್ ಜೊತೆ ಬ್ರೇಕಪ್ ಆದ್ಮೇಲೆ ಉದ್ಯಮಿ ಸ್ಯಾಮ್ ಮರ್ಚೆಂಟ್ (Sam Merchant) ಜೊತೆ ಎಂಗೇಜ್ ಆಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಟಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಆಗಾಗ ಸ್ಯಾಮ್ ಜೊತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ. ಸದ್ಯ ಹೋಳಿ ಫೋಟೋಸ್ ಗಾಸಿಪ್ ಮಂದಿಯ ಬಾಯಿಗೆ ಆಹಾರವಾಗಿದೆ.

    ಸದ್ಯ ‘ಬ್ಯಾಡ್ ನ್ಯೂಸ್’ (Bad Newz) ಸಿನಿಮಾದ ಮೂಲಕ ತೃಪ್ತಿ ದಿಮ್ರಿ ಗಮನ ಸೆಳೆಯುತ್ತಿದ್ದಾರೆ. ವಿಕ್ಕಿ ಕೌಶಲ್- ಆ್ಯಮಿ ಜೊತೆ ಸಖತ್ ಬೋಲ್ಡ್ ಆಗಿ ನಟಿಸಿದ್ದಾರೆ. ಜುಲೈ 20ಕ್ಕೆ ರಿಲೀಸ್ ಆಗುತ್ತಿದೆ.

  • ಇಬ್ಬರು ನಟರ ಜೊತೆ ‘ಅನಿಮಲ್‌’ ನಟಿ ತೃಪ್ತಿ ದಿಮ್ರಿ ರೊಮ್ಯಾನ್ಸ್

    ಇಬ್ಬರು ನಟರ ಜೊತೆ ‘ಅನಿಮಲ್‌’ ನಟಿ ತೃಪ್ತಿ ದಿಮ್ರಿ ರೊಮ್ಯಾನ್ಸ್

    ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣಗೆ (Rashmika Mandanna) ಠಕ್ಕರ್ ಕೊಟ್ಟು ‘ಅನಿಮಲ್’ (Animal) ಸಿನಿಮಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ತೃಪ್ತಿ ದಿಮ್ರಿ (Tripti Dimri) ಈಗ ಇಬ್ಬರು ಸ್ಟಾರ್ ನಟರ ಜೊತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

    ರಣ್‌ಬೀರ್ ಕಪೂರ್ (Ranbir Kapoor) ಜೊತೆ ರೊಮ್ಯಾನ್ಸ್ ಮಾಡಿದ್ಮೇಲೆ ತೃಪ್ತಿ ಲಕ್ ಬದಲಾಗಿದೆ. ಬಾಲಿವುಡ್‌ನಲ್ಲಿ ನಟಿಗೆ ರೆಡ್ ಕಾರ್ಪೆಟ್ ಹಾಕಿ ವೆಲ್‌ಕಮ್ ಮಾಡುತ್ತಿದ್ದಾರೆ. ಆಫರ್ ಮೇಲೆ ಆಫರ್ ತೃಪ್ತಿ ಕಡೆ ಅರಸಿ ಬರುತ್ತಿದೆ. ಇದನ್ನೂ ಓದಿ:‘ಓ ಮೈ ಲಿಲ್ಲಿ’ ಎಂದು ಅನುಪಮಾ ಜೊತೆ ಸಿದ್ದು ಡ್ಯುಯೇಟ್

    ವಿಕ್ಕಿ ಕೌಶಲ್, ಆಮಿ ವಿರ್ಕ್ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ‘ಬ್ಯಾಡ್ ನ್ಯೂಸ್’ (Bad Newz) ಎಂಬ ಸಿನಿಮಾದಲ್ಲಿ ಇಬ್ಬರ ಜೊತೆ ತೃಪ್ತಿ ರೊಮ್ಯಾನ್ಸ್ ಮಾಡಲಿದ್ದಾರೆ. ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ತೃಪ್ತಿ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇಬ್ಬರ ನಟರ ಇಷ್ಟೋಂದು ಬೋಲ್ಡ್ ಆಗಿ ಕಾಣಿಕೊಳ್ತಾರಾ ಎಂದು ಪ್ರಶ್ನೆಗಳ ಸರಿಮಳೆಯನ್ನೇ ಹರಿಸಿದ್ದಾರೆ.

    ‘ಬ್ಯಾಡ್ ನ್ಯೂಸ್’ (Bad Newz) ಚಿತ್ರಕ್ಕೆ ಕರಣ್ ಜೋಹರ್ (Karan Johar) ನಿರ್ಮಾಣ ಮಾಡಿದ್ದಾರೆ. ವಿಕ್ಕಿ ಕೌಶಲ್, ಆಮಿಗೆ ತೃಪ್ತಿ ಹೀರೋಯಿನ್ ಆಗಿದ್ದಾರೆ. ಇದೊಂದು ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದೆ. ಸಿನಿಮಾ ಇದೇ ಜುಲೈ 19ಕ್ಕೆ ರಿಲೀಸ್ ಆಗಲಿದೆ.

    ತೃಪ್ತಿ ಸದ್ಯ ಕಾರ್ತಿಕ್ ಆರ್ಯನ್ ಜೊತೆಗಿನ ಸಿನಿಮಾ ಮತ್ತು ಕೆಲವು ತೆಲುಗು ಪ್ರಾಜೆಕ್ಟ್‌ಗಳನ್ನು ನಟಿ ಒಪ್ಪಿಕೊಂಡಿದ್ದಾರೆ.

  • ಆಸ್ಟ್ರೇಲಿಯಾದಲ್ಲಿರೋ ರಶ್ಮಿಕಾ ಮಂದಣ್ಣಗೆ VD ಹೆಸರು ಹೇಳಿ ಕಾಲೆಳೆದ ನೆಟ್ಟಿಗರು

    ಆಸ್ಟ್ರೇಲಿಯಾದಲ್ಲಿರೋ ರಶ್ಮಿಕಾ ಮಂದಣ್ಣಗೆ VD ಹೆಸರು ಹೇಳಿ ಕಾಲೆಳೆದ ನೆಟ್ಟಿಗರು

    ಪ್ಯಾನ್ ಇಂಡಿಯಾ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇದೀಗ ಬಹುಭಾಷಾ ನಾಯಕಿಯಾಗಿ ಗಮನ ಸೆಳೆಯುತ್ತಿದ್ದಾರೆ. ಬ್ಯುಸಿ ಶೆಡ್ಯೂಲ್ ನಡುವೆ ಇತ್ತೀಚೆಗೆ ಜಪನ್‌ಗೆ ಹೋಗಿ ಬಂದಿದ್ದ ರಶ್ಮಿಕಾ ಇದೀಗ ಆಸ್ಟ್ರೇಲಿಯಾದಲ್ಲಿ ಬೀಡು ಬಿಟ್ಟಿದ್ದಾರೆ.‌ ಇದನ್ನೂ ಓದಿ:ನನಗೆ ಮತ್ತೊಂದು ಮದುವೆಗೆ ಅವಕಾಶವಿದೆ: ರಾಖಿ ಬಾಯ್ ಫ್ರೆಂಡ್ ಆದಿಲ್ ಮಾತು

    ಸೌತ್-ಬಾಲಿವುಡ್‌ನಲ್ಲಿ ಸದ್ಯ ರಶ್ಮಿಕಾ ಮಂದಣ್ಣ ಅವರದ್ದೇ ಹವಾ. ಕೈತುಂಬಾ ಸಿನಿಮಾಗಳು ಕೈಯಲಿಟ್ಟುಕೊಂಡು ತಮ್ಮ ನಟನೆಯ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದ್ದಾರೆ. ಕೆಲದಿನಗಳ ಹಿಂದೆ ಜಪಾನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ವಿತರಿಸುವ ಮೂಲಕ ನಟಿ ಸುದ್ದಿಯಾಗಿದ್ದರು. ಈಗ ಆಸ್ಟ್ರೇಲಿಯಾ ಅಂಗಳಕ್ಕೆ ಕನ್ನಡತಿ ಕಾಲಿಟ್ಟಿದ್ದಾರೆ.

    ಆಸ್ಟ್ರೇಲಿಯಾಗೆ ಎಂಟ್ರಿ ಕೊಡ್ತಿದ್ದಂತೆ ಗೊಂಬೆ ಹಿಡ್ಕೊಂಡು ನಟಿ ಪೋಸ್ ನೀಡಿದ್ದಾರೆ. ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ನಟಿ ಫೋಟೋವನ್ನು ಶೇರ್ ಮಾಡ್ತಿದ್ದಂತೆ ಗೊಂಬೆ ಹಿಡ್ಕೊಂಡು ಆಟ ಆಡೋ ವಯಸ್ಸಾ ಇದು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ವಿಜಯ್ ದೇವರಕೊಂಡ (Vijay Devarakonda) ಎಲ್ಲಿ ಎಂದು ರಶ್ಮಿಕಾಗೆ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.

    ಯಾವ ವಿಚಾರಕ್ಕೆ ರಶ್ಮಿಕಾ ಆಸ್ಟ್ರೇಲಿಯಾಗೆ ಹೋಗಿದ್ದಾರೆ ಎಂದು ರಿವೀಲ್ ಆಗಿಲ್ಲ. ಸಿನಿಮಾ ಶೂಟಿಂಗ್ ಅಥವಾ ವೆಕೇಷನ್ ಎಂಬುದರ ಬಗ್ಗೆ ಮಾಹಿತಿ ಇಲ್ಲ.

    ಸದ್ಯ ಪುಷ್ಪ 2 (Pushpa 2), ಅನಿಮಲ್ 2, ಗರ್ಲ್‌ಫ್ರೆಂಡ್, ರೈನ್‌ಬೋ, ಚಾವಾ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ. ಇತ್ತೀಚೆಗೆ ಕನ್ನಡ ಸಿನಿಮಾದಲ್ಲಿ ನಟಿಸೋದಾಗಿ ಕೂಡ ನಟಿ ಸಿಹಿಸುದ್ದಿ ಕೊಟ್ಟಿದ್ದಾರೆ. ಸದ್ಯದಲ್ಲೇ ಅಧಿಕೃತ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

  • ವಿಜಯ್ ದೇವರಕೊಂಡ ಜೊತೆಗಿನ ಸಿನಿಮಾ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದಿಷ್ಟು

    ವಿಜಯ್ ದೇವರಕೊಂಡ ಜೊತೆಗಿನ ಸಿನಿಮಾ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದಿಷ್ಟು

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ (Rashmika Mandanna) ಬಾಲಿವುಡ್‌ನಲ್ಲಿ ಬೇಡಿಕೆಯಿದೆ. ಅದರಲ್ಲೂ ಸೌತ್‌ ಸಿನಿಮಾಗಳಲ್ಲಿ ರಶ್ಮಿಕಾಗೆ ಫ್ಯಾನ್ಸ್‌ ಬೇಸ್‌ ತುಸು ಜಾಸ್ತಿಯೇ ಇದೆ. ವಿಜಯ್‌- ರಶ್ಮಿಕಾ ಜೋಡಿಯ ಸಿನಿಮಾ ಅಂದರೆ ಹುಚ್ಚೆದ್ದು ನೋಡ್ತಾರೆ. ಇದೀಗ ವಿಜಯ್ ದೇವರಕೊಂಡ (Vijay Devarakonda) ಜೊತೆ ಮತ್ತೆ ರಶ್ಮಿಕಾ ಸಿನಿಮಾ ಮಾಡ್ತಾರಾ ಎಂದು ಸಂದರ್ಶನವೊಂದರಲ್ಲಿ ಕೇಳಲಾಗಿದೆ. ಈ ಕುರಿತು ನಟಿ ಪ್ರತಿಕ್ರಿಯೆ ನೀಡಿದ್ದಾರೆ.

    ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಸಿನಿಮಾ ಮಾಡ್ತಾರೆ ಎಂದು ಗಾಸಿಪ್ ಹಬ್ಬಿತ್ತು. ಹಾಗಾಗಿ ಇದೇ ಪ್ರಶ್ನೆ ಅವರಿಗೆ ಎದುರಾಗಿದೆ. ಅದಕ್ಕೆ ಪ್ರತಿಕ್ರಿಯಿಸಿ, ಒಳ್ಳೆಯ ಸ್ಕ್ರೀಪ್ಟ್ ಸಿಕ್ಕರೆ ಖಂಡಿತವಾಗಿಯೂ ಜೊತೆಯಾಗಿ ಕೆಲಸ ಮಾಡುತ್ತೇವೆ. ನಾನು, ವಿಜಯ್ ಒಳ್ಳೆಯ ಕಥೆಯ ಹುಡುಕಾಟದಲ್ಲಿದ್ದೇವೆ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ತಂದೆಯಾದ ಸಂಭ್ರಮದಲ್ಲಿ ಶರ್ವಾನಂದ್

    ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಎರಡು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈ ಚಿತ್ರದ ಮೂಲಕ ರಶ್ಮಿಕಾ- ವಿಜಯ್ ಜೋಡಿಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಇದ್ದಾರೆ. ಹಾಗಾಗಿ ಈ ಜೋಡಿ ಮತ್ತೆ ಜೊತೆಯಾದ್ರೆ ಚೆನ್ನಾಗಿರುತ್ತೆ ಅಲ್ವಾ ಎಂದು ಫ್ಯಾನ್ಸ್ ಕೂಡ ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.

    ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಚೆನ್ನಾಗಿದೆ. ರಿಯಲ್ ಲೈಫ್‌ನಲ್ಲಿಯೂ ಇಬ್ಬರ ಲವ್ ಬಗ್ಗೆ ಗುಸು ಗುಸು ಸುದ್ದಿ ಇದೆ. ಇಬ್ಬರೂ ಡೇಟ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಜೊತೆಗೆ ರಿಲೇಶನ್‌ಶಿಪ್ ಬಗ್ಗೆ ಮಾಹಿತಿ ಸಿಗುತ್ತಾ ಕಾದುನೋಡಬೇಕಿದೆ.

  • ರಶ್ಮಿಕಾ ಮಂದಣ್ಣ ಜಪಾನ್‌ಗೆ ಹೋಗಿದ್ದು ಪುಷ್ಪ 2ಗಾಗಿ ಅಲ್ಲ- ಮತ್ಯಾಕೆ?

    ರಶ್ಮಿಕಾ ಮಂದಣ್ಣ ಜಪಾನ್‌ಗೆ ಹೋಗಿದ್ದು ಪುಷ್ಪ 2ಗಾಗಿ ಅಲ್ಲ- ಮತ್ಯಾಕೆ?

    ನ್ನಡದ ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಈಗ ಭಾರೀ ಬೇಡಿಕೆಯಿದೆ. ಸೌತ್ ಮತ್ತು ಬಾಲಿವುಡ್‌ನಲ್ಲಿ ಕಿರಿಕ್ ಬ್ಯೂಟಿಗೆ ಭಾರೀ ಬೇಡಿಕೆಯಿದೆ. ಸದ್ಯ ನಟಿ ಜಪಾನ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಆದರೆ ‘ಪುಷ್ಪ 2’ ಚಿತ್ರದ ಶೂಟಿಂಗ್‌ಗಾಗಿ (Pushpa 2) ಅಲ್ಲ. ಹಾಗಾದ್ರೆ ಮತ್ಯಾಕೆ ಅಲ್ಲಿದ್ದಾರೆ. ಇಲ್ಲಿದೆ ಮಾಹಿತಿ.

    ರಶ್ಮಿಕಾ ಮಂದಣ್ಣ ನ್ಯಾಶನಲ್ ಕ್ರಶ್ ಆಗಿದ್ದರು. ಈಗ ಇಂಟರ್‌ನ್ಯಾಶನಲ್ ಕ್ರಶ್ ಆಗಿದ್ದಾರೆ. ಅದಕ್ಕೆ ಸಾಕ್ಷಿ ಸಿಕ್ಕಿದೆ. ದೂರದ ಟೋಕಿಯೋ ನಗರಕ್ಕೆ ರಶ್ಮಿಕಾ ಹಾರಿದ್ದಾರೆ. ಇದ್ದ ಬದ್ದ ಕೆಲಸವನ್ನು ಬಿಟ್ಟು ರಶ್ಮಿಕಾ ಅಲ್ಲಿಗೆ ಹೋಗಿದ್ದಕ್ಕೆ ಕಾರಣ ಅಲ್ಲಿ ನಡೆಯುತ್ತಿರುವ ಫಿಲ್ಮ್ ಫೆಸ್ಟಿವಲ್. ಕ್ರಂಚ್ ರೋಲ್ ಅನಿಮೆ ಅವಾರ್ಡ್ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದಾರೆ. ಇಂಡಿಯಾದಿಂದ ಅಲ್ಲಿಗೆ ಹೋಗಿರುವ ಏಕೈಕ ಸ್ಟಾರ್ ರಶ್ಮಿಕಾ ಮಂದಣ್ಣ. ಇದನ್ನೂ ಓದಿ:ಅಂಬಾನಿ ಮಗನ ಪ್ರೀ-ವೆಡ್ಡಿಂಗ್‌ನಲ್ಲಿ ಬಾಯ್‌ಫ್ರೆಂಡ್ ಜೊತೆ ಶ್ರದ್ಧಾ ಕಪೂರ್

    6-7 ವರ್ಷದ ಹಿಂದೆ ಇಲ್ಲಿದ್ದ ಹುಡುಗಿ ಇದು. ‘ಕಿರಿಕ್ ಪಾರ್ಟಿ’ (Kirik Party) ಕೊಟ್ಟ ಹಿಟ್ ಇದೆಯಲ್ಲ. ಅದು ಇಂದು ಆಕೆಯನ್ನು ಎಲ್ಲಿಗೋ ಹೋಗಿ ಮುಟ್ಟಿಸಿದೆ. ಟಾಲಿವುಡ್‌ನಲ್ಲಿ ಹವಾ ಎಬ್ಬಿಸಿ ಈಗ ಬಾಲಿವುಡ್‌ನಲ್ಲಿ ಬೆರಗು ಮೂಡಿಸುತ್ತಿದ್ದಾರೆ. ಈಗ ನೋಡಿ ಬಿರುಗಾಳಿ ಅಲ್ಲಿ ಎಬ್ಬಿಸುತ್ತಿದ್ದಾರೆ.

    ಪುಷ್ಪ 2, ರೈನ್‌ಬೋ, ಗರ್ಲ್‌ಫ್ರೆಂಡ್, ಅನಿಮಲ್ 2, ಧನುಷ್ (Dhanush) ಜೊತೆಗಿನ ಹೊಸ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿದೆ.