Tag: Animal Welfare

  • ಪ್ರಾಣಿ ರಕ್ಷಣೆಯಲ್ಲಿನ ಉತ್ಕೃಷ್ಟ ಸೇವೆಗೆ ಅನಂತ್ ಅಂಬಾನಿಯ `ವಂತಾರ’ಗೆ ರಾಷ್ಟ್ರೀಯ ಪ್ರಾಣಿ ಮಿತ್ರ ಪ್ರಶಸ್ತಿ

    ಪ್ರಾಣಿ ರಕ್ಷಣೆಯಲ್ಲಿನ ಉತ್ಕೃಷ್ಟ ಸೇವೆಗೆ ಅನಂತ್ ಅಂಬಾನಿಯ `ವಂತಾರ’ಗೆ ರಾಷ್ಟ್ರೀಯ ಪ್ರಾಣಿ ಮಿತ್ರ ಪ್ರಶಸ್ತಿ

    ಗಾಂಧೀನಗರ: ಅನಂತ್ ಅಂಬಾನಿ (Anant Ambani) ಅವರ `ವಂತಾರ’ (Vantara) ಸಂಸ್ಥೆಗೆ ಭಾರತ ಸರ್ಕಾರವು `ಕಾರ್ಪೊರೇಟ್’ ವಿಭಾಗದ ಅಡಿಯಲ್ಲಿ ಪ್ರಾಣಿ ರಕ್ಷಣೆಗೆ ದೇಶದ ಅತ್ಯುನ್ನತ ಗೌರವವಾದ ಪ್ರತಿಷ್ಠಿತ `ಪ್ರಾಣಿ ಮಿತ್ರ’ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿದೆ.

    ವಂತಾರ ಅಡಿಯಲ್ಲಿ ಆನೆಗಳ ರಕ್ಷಣೆ, ಚಿಕಿತ್ಸೆ ಮತ್ತು ಜೀವಿತಾವಧಿಯ ಆರೈಕೆಗೆ ಮೀಸಲಾಗಿರುವ ರಾಧೆ ಕೃಷ್ಣ ಟೆಂಪಲ್ ಎಲೆಫೆಂಟ್ ವೆಲ್ ಫೇರ್ ಟ್ರಸ್ಟ್ನ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.ಇದನ್ನೂ ಓದಿ: ಕಾರವಾರ| ಪ್ರೀತಿಸಿ ಮದುವೆಯಾಗಿದ್ದ ಮಗಳು-ಅಳಿಯನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನ

    ವಂತಾರದ ಅತ್ಯಾಧುನಿಕ ಆನೆ ಆರೈಕೆ ಕೇಂದ್ರದಲ್ಲಿ ರಕ್ಷಿಸಲಾದ 240ಕ್ಕೂ ಹೆಚ್ಚು ಆನೆಗಳಿಗೆ ಸರಪಳಿ-ಮುಕ್ತ, ಸುರಕ್ಷಿತ ಮತ್ತು ಸಮೃದ್ಧ ವಾತಾವರಣವನ್ನು ಒದಗಿಸುತ್ತದೆ. ಇದರಲ್ಲಿ ಸರ್ಕಸ್‌ಗಳಿಂದ 30 ಆನೆಗಳು, ಮರ ಕಡಿಯುವ ಉದ್ಯಮದಿಂದ 100ಕ್ಕೂ ಹೆಚ್ಚು ಆನೆಗಳು, ಸವಾರಿ ಹಾಗೂ ಬೀದಿ ಭಿಕ್ಷಾಟನೆಯಿಂದ ರಕ್ಷಿಸಲಾದ ಇತರ ಆನೆಗಳೂ ಸೇರಿವೆ. ಹಲವು ವರ್ಷಗಳ ಕಾಲ ನಿರ್ಲಕ್ಷ್ಯ ಮತ್ತು ದೌರ್ಜನ್ಯವನ್ನು ಸಹಿಸಿಕೊಂಡಂತಹ ಅನೇಕ ಆನೆಗಳು ಇಲ್ಲಿವೆ. ಆದರೆ ವಂತಾರದಲ್ಲಿ ಅವುಗಳಿಗೆ ವಿಶ್ವ ದರ್ಜೆಯ ಪಶುವೈದ್ಯಕೀಯ ಚಿಕಿತ್ಸೆ ಮತ್ತು ಸಹಾನುಭೂತಿಯ ಆರೈಕೆ ಸಿಗುತ್ತದೆ.

    998 ಎಕರೆಗಳಷ್ಟು ವಿಶೇಷವಾಗಿ ರೂಪಿಸಲಾದ ಕಾಡಿನಲ್ಲಿ ಮುಕ್ತವಾಗಿ ಸುತ್ತಾಡಲು, ಸಾಮಾಜಿಕವಾಗಿ ಮತ್ತು ನೈಸರ್ಗಿಕ ನಡವಳಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಕೇಂದ್ರದಲ್ಲಿ ಆನೆಗಳಿಗೆ ಅನುವು ಮಾಡಿಕೊಡುತ್ತದೆ. ಅಲ್ಲಿ ಅವು ಮೇವು ಹುಡುಕಿಕೊಳ್ಳಬಹುದು, ಮಣ್ಣು ಮತ್ತು ಧೂಳಿನ ಸ್ನಾನ ಮಾಡಬಹುದು ಹಾಗೂ ನೈಸರ್ಗಿಕ ಕೊಳಗಳಲ್ಲಿಯೂ ಸ್ನಾನ ಮಾಡಬಹುದು.

    ನವದೆಹಲಿಯ ವಿಜ್ಞಾನ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ವಂತಾರದ ಸಿಇಒ ವಿವಾನ್ ಕರಣಿ ಅವರು ಈ ಗೌರವವನ್ನು ಸ್ವೀಕರಿಸಿದರು.

    ಗೌರವ ಸ್ವೀಕರಿಸಿ ಮಾತನಾಡಿದ ಅವರು, ಈ ಪ್ರಶಸ್ತಿಯು ಭಾರತದ ಪ್ರಾಣಿಗಳನ್ನು ರಕ್ಷಿಸಲು ಮತ್ತು ಅವುಗಳನ್ನು ನೋಡಿಕೊಳ್ಳಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಸಂಖ್ಯಾತ ವ್ಯಕ್ತಿಗಳಿಗೆ ಗೌರವವಾಗಿದೆ. ವಂತಾರದಲ್ಲಿ ಪ್ರಾಣಿಗಳಿಗೆ ಸೇವೆ ಸಲ್ಲಿಸುವುದು ಕೇವಲ ಕರ್ತವ್ಯವಲ್ಲ – ಇದು ನಮ್ಮ ಧರ್ಮ ಮತ್ತು ಸೇವೆ, ಸಹಾನುಭೂತಿ ಮತ್ತು ಜವಾಬ್ದಾರಿಯಲ್ಲಿ ಆಳವಾಗಿ ಬೇರೂರಿರುವಂಥ ಬದ್ಧತೆಯಾಗಿದೆ. ಪ್ರಾಣಿ ರಕ್ಷಣೆಯ ಮಾನದಂಡಗಳನ್ನು ಹೆಚ್ಚಿಸುವ, ಪರಿಣಾಮಕಾರಿ ಉಪಕ್ರಮಗಳನ್ನು ನಡೆಸುವ ಮತ್ತು ಮುಂದಿನ ಪೀಳಿಗೆಗೆ ಭಾರತದ ಶ್ರೀಮಂತ ಜೀವವೈವಿಧ್ಯತೆಯನ್ನು ರಕ್ಷಿಸುವ ನಮ್ಮ ಧ್ಯೇಯದಲ್ಲಿ ನಾವು ಸದಾ ತೊಡಗಿಸಿಕೊಂಡಿದ್ದೇವೆ ಎಂದರು.

    ಕಳೆದ ಐದು ವರ್ಷಗಳಿಂದ ಪ್ರಾಣಿಗಳ ಕಲ್ಯಾಣಕ್ಕೆ ನೀಡಿದ ನಿರಂತರ ಕೊಡುಗೆಗಾಗಿ ನಿಗಮಗಳು, ಸಾರ್ವಜನಿಕ ಉದ್ದಿಮೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಸಹಕಾರಿ ಸಂಸ್ಥೆಗಳಿಗೆ ಕಾರ್ಪೊರೇಟ್ ವಿಭಾಗದಲ್ಲಿ ಪ್ರಾಣಿ ಮಿತ್ರ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದರಲ್ಲಿ ಪ್ರಾಣಿ ಕಲ್ಯಾಣ ಉಪಕ್ರಮಗಳಿಗೆ ಮೀಸಲಾಗಿರುವ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯೂ ಸೇರಿದೆ.ಇದನ್ನೂ ಓದಿ: ಉಂಡ ಮನೆಗೆ ಕನ್ನ – ಪರಿಚಯಸ್ಥ ಮಹಿಳೆಯಿಂದಲೇ ವೃದ್ಧೆ ಮನೆಯಲ್ಲಿ ಚಿನ್ನ ಕಳವು

     

  • ಬೀದಿ ಹೆಣ್ಣುನಾಯಿಯ ಮೇಲೆ ಅತ್ಯಾಚಾರ – ವಿಕೃತಕಾಮಿ ವಿರುದ್ಧ ಕೇಸ್

    ಬೀದಿ ಹೆಣ್ಣುನಾಯಿಯ ಮೇಲೆ ಅತ್ಯಾಚಾರ – ವಿಕೃತಕಾಮಿ ವಿರುದ್ಧ ಕೇಸ್

    ನವದೆಹಲಿ: ವಿಕೃತಕಾಮಿಯೊಬ್ಬ ಬೀದಿ ಹೆಣ್ಣು ನಾಯಿಯನ್ನು (Female Dog) ಎಳೆದೊಯ್ದು ಅತ್ಯಾಚಾರ ಎಸಗಿ ವಿಕೃತಿ ಮೆರೆದಿರುವ ಅಮಾನವೀಯ ಘಟನೆ ದೆಹಲಿಯ (Delhi) ಇಂದರ್ ಪುರಿಯಲ್ಲಿ (Inder Puri) ನಡೆದಿದೆ.

    ಯುವಕನೊಬ್ಬ ಹೆಣ್ಣುನಾಯಿಯ ಮೇಲೆ ಅತ್ಯಾಚಾರ ಎಸಗುತ್ತಿರುವ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಕೇಸ್‌- ಮೋಸ್ಟ್‌ ವಾಂಟೆಡ್‌ ಪಿಎಫ್‌ಐ ಸದಸ್ಯ ಅರೆಸ್ಟ್‌

    ಕಾಮುಕ ಯುವಕನನ್ನ ದೆಹಲಿ ನಿವಾಸಿ ಸತೀಶ್ ಎಂದು ಗುರುತಿಸಲಾಗಿದೆ. ಈತ ಇಂದರ್‌ಪುರಿಯ ಬಿಬ್ಲಾಕ್ ನಂ.333 ರಲ್ಲಿ ವಾಸವಾಗಿದ್ದಾನೆ. ಕೆಲ ದಿನಗಳ ಹಿಂದೆ ನಾಯಿಯ ಮೇಲೆ ಅತ್ಯಾಚಾರ ಎಸಗಿದ್ದು, ಇದೀಗ ವೀಡಿಯೋ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಡೋಲು ಬಡಿಯುತ್ತ ಪಬ್ ಮೇಲೆ ದಾಳಿ- ಸಂಘಟನೆ ಕಾರ್ಯಕರ್ತರು ವಶಕ್ಕೆ

    ಈ ಸಂಬಂಧ ಇಂದರ್ ಪುರಿ ಪೊಲೀಸರು ಐಪಿಸಿ (IPC) ಸೆಕ್ಷನ್ 377 (ಅನೈಸರ್ಗಿಕ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪತ್ತೆಗಾಗಿ ಶೋಧ ಆರಂಭಿಸಿದ್ದು, ನಾಯಿ ಆರೈಕೆಗಾಗಿ ಪ್ರಾಣಿ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.