Tag: animal park

  • ‘ಅನಿಮಲ್ ಪಾರ್ಕ್’ ಸಿನಿಮಾ ಹೇಗಿರಲಿದೆ- ಪಾರ್ಟ್‌ 2 ಬಗ್ಗೆ ಸುಳಿವು ಕೊಟ್ಟ ನಿರ್ದೇಶಕ

    ‘ಅನಿಮಲ್ ಪಾರ್ಕ್’ ಸಿನಿಮಾ ಹೇಗಿರಲಿದೆ- ಪಾರ್ಟ್‌ 2 ಬಗ್ಗೆ ಸುಳಿವು ಕೊಟ್ಟ ನಿರ್ದೇಶಕ

    ಬಾಲಿವುಡ್ ನಟ ರಣ್‌ಬೀರ್ ಕಪೂರ್ (Ranbir Kapoor) ಮತ್ತು ರಶ್ಮಿಕಾ ಮಂದಣ್ಣಗೆ(Rashmika Mandanna) ‘ಅನಿಮಲ್’ (Animal Film) ಚಿತ್ರ ಬಿಗ್ ಬ್ರೇಕ್ ಕೊಟ್ಟಿತ್ತು. ಇದರ ಪಾರ್ಟ್ 2 ಯಾವಾಗ ಎಂದು ಕಾಯುತ್ತಿದ್ದ ಫ್ಯಾನ್ಸ್‌ಗೆ ಡೈರೆಕ್ಟರ್ ಬಿಗ್ ಅಪ್‌ಡೇಟ್‌ವೊಂದನ್ನು ನೀಡಿದ್ದಾರೆ. ಅನಿಮಲ್ ಪಾರ್ಕ್ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ ಸಂದೀಪ್ ರೆಡ್ಡಿ ವಂಗಾ. ಇದನ್ನೂ ಓದಿ:ಡಾ.ರಾಜ್‌ ಹುಟ್ಟುಹಬ್ಬ- ಸ್ಮಾರಕಕ್ಕೆ ಕುಟುಂಬಸ್ಥರಿಂದ ಪೂಜೆ

    ‘ಅನಿಮಲ್ ಪಾರ್ಕ್’ (Animal) ಸಿನಿಮಾದ ಕಥೆ ಸಿದ್ಧವಾಗಿದೆ. ಹಾಗಾದ್ರೆ ಶೂಟಿಂಗ್ ಯಾವಾಗ? ಚಿತ್ರ ಹೇಗಿರಲಿದೆ ಎಂಬುದನ್ನು ನಿರ್ದೇಶಕ ಸಂದೀಪ್ ಕಾರ್ಯಕ್ರಮವೊಂದರಲ್ಲಿ ಮಾಹಿತಿ ನೀಡಿದ್ದಾರೆ. ಈ ಹಿಂದಿನ ಅನಿಮಲ್ ಸಿನಿಮಾ ಹೋಲಿಸಿದರೆ ಪಾರ್ಟ್ 2 ಇನ್ನೂ ಹೆಚ್ಚು ವೈಲ್ಡ್ ಆಗಿರಲಿದೆ ಎಂದಿದ್ದಾರೆ. 2026ರಲ್ಲಿ ಶೂಟಿಂಗ್ ಆರಂಭವಾಗಲಿದೆ ಎಂದು ನಿರ್ದೇಶಕ ಮಾತನಾಡಿದ್ದಾರೆ.

    ಮುಂದಿನ ಭಾಗದಲ್ಲಿ ರಣ್‌ಬೀರ್ ಕಪೂರ್ ಪಾತ್ರದ ರಣವಿಜಯ್ ಮತ್ತು ಗೀತಾಂಜಲಿ ಪಾತ್ರಧಾರಿ ರಶ್ಮಿಕಾ ಸಂಬಂಧವನ್ನು ಪರೀಕ್ಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ರಣಬೀರ್ ಅಸಲಿ ಮತ್ತು ನಕಲಿ ಮಧ್ಯೆ ಭಾರೀ ಟ್ವಿಸ್ಟ್ ಇರಲಿದೆಯಂತೆ.

    ಮೊದಲ ಭಾಗದಲ್ಲಿ ಅನಿಲ್ ಕಪೂರ್ ಮತ್ತು ರಣ್‌ಬೀರ್ ಕಪೂರ್ ಅವರ ಅಪ್ಪ-ಮಗನ ಸಂಬಂಧವನ್ನು ಅದ್ಭುತವಾಗಿ ತೋರಿಸಿದ್ದರು. ರಶ್ಮಿಕಾ, ತೃಪ್ತಿ ದಿಮ್ರಿ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ರಣ್‌ಬೀರ್ ಮಾಸ್ ಆ್ಯಕ್ಷನ್‌ಗೆ ಫ್ಯಾನ್ಸ್‌ಗೆ ಫಿದಾ ಆಗಿದ್ದರು. ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು.

  • ಯಾವಾಗ ಬರಲಿದೆ ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್ ಪಾರ್ಕ್’ ಸಿನಿಮಾ?

    ಯಾವಾಗ ಬರಲಿದೆ ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್ ಪಾರ್ಕ್’ ಸಿನಿಮಾ?

    ಶ್ಮಿಕಾ ಮಂದಣ್ಣ (Rashmika Mandanna), ರಣ್‌ಬೀರ್ ಕಪೂರ್ ನಟನೆಯ ‘ಅನಿಮಲ್’ (Animal) ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಈ ಚಿತ್ರದ ಮುಂದುವರೆದ ಭಾಗಕ್ಕಾಗಿ ಅಭಿಮಾನಿಗಳು ಕೂಡ ಎದುರು ನೋಡ್ತಿದ್ದಾರೆ. ಇದೀಗ ಅನಿಮಲ್ ಪಾರ್ಕ್ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.

    ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್, ರಶ್ಮಿಕಾ, ತೃಪ್ತಿ ದಿಮ್ರಿ ಮೂವರು ಸಿಕ್ಕಾಪಟ್ಟೆ ಹೈಲೆಟ್ ಆಗಿದ್ದರು. ಅದರಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಅವರು ರಣ್‌ಬೀರ್ ಕಪೂರ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಈ ಮೂಲಕ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಂಡಿದ್ದರು.

    ಇದರ ಪಾರ್ಟ್ 2 ‘ಅನಿಮಲ್ ಪಾರ್ಕ್’ ಯಾವಾಗ ಬರಲಿದೆ ಎಂಬುದಕ್ಕೆ ಮಾಹಿತಿ ಸಿಕ್ಕಿದೆ. ಪ್ರಭಾಸ್ ನಟನೆಯ ಸ್ಪಿರಿಟ್ ಸಿನಿಮಾದ ಕೆಲಸ ಮುಗಿದ ಮೇಲೆ ರಿಲೀಸ್ ನಂತರ ಅನಿಮಲ್ ಪಾರ್ಕ್ ಚಿತ್ರವನ್ನು ಸಂದೀಪ್ ಕೈಗೆತ್ತಿಕೊಳ್ಳಲಿದ್ದಾರೆ. 2026ರಲ್ಲಿ ಈ ಸಿನಿಮಾ ಬೆಳ್ಳಿಪರದೆಯ ಮೇಲೆ ತೋರಿಸುವ ಪ್ಲ್ಯಾನ್ ಮಾಡಿದ್ದಾರೆ.

    ‘ಅನಿಮಲ್’ ಭಾಗ 2ರಲ್ಲಿ ರಣ್‌ಬೀರ್ ಕಪೂರ್ ಡಬಲ್ ಶೇಡ್‌ನಲ್ಲಿ ಕಾಣಿಸಿಕೊಂಡ್ರೆ, ರಶ್ಮಿಕಾ ಮಂದಣ್ಣ ಪಾತ್ರ ಮತ್ತಷ್ಟು ಹೈಲೆಟ್ ಆಗಲಿದೆ. ಇದರಲ್ಲಿ ಸೇಡಿನ ಕಥೆ, ಲವ್ ಮತ್ತು ರೊಮ್ಯಾನ್ಸ್ ತುಸು ಜಾಸ್ತಿಯೇ ಇರಲಿದೆ. ಫ್ಯಾನ್ಸ್‌ಗೆ ಒಂದು ವಿಭಿನ್ನ ಕಥೆಯನ್ನು ಸಂದೀಪ್ ತೋರಿಸೋದು ಗ್ಯಾರಂಟಿ.‌ ಇದನ್ನೂ ಓದಿ:ನಾನು ಮದುವೆಯಾಗಬೇಕು, ಮಕ್ಕಳು ಬೇಕು ಎಂದ ವಿಜಯ್ ದೇವರಕೊಂಡ

    ಸದ್ಯ ರಾಮಾಯಣ ಪಾರ್ಟ್ 1 & 2 ಆದ್ಮೇಲೆ 2026ರಲ್ಲಿ ಅನಿಮಲ್ ತಂಡವನ್ನು ರಣ್‌ಬೀರ್ ಸೇರಿಕೊಳ್ಳಲಿದ್ದಾರೆ. ರಶ್ಮಿಕಾ ಈಗಾಗಲೇ 5ಕ್ಕೂ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಇದಾದ ನಂತರ ಅನಿಮಲ್ 2ಗೆ ಸಾಥ್ ನೀಡಲಿದ್ದಾರೆ. ಒಟ್ನಲ್ಲಿ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • ಪ್ರಾಣಿ, ಪಕ್ಷಿಗಳ ಜೊತೆ ರಾಕಿಭಾಯ್ ಕುಟುಂಬ: ವಿಡಿಯೋ ಹಂಚಿಕೊಂಡ ಯಶ್

    ಪ್ರಾಣಿ, ಪಕ್ಷಿಗಳ ಜೊತೆ ರಾಕಿಭಾಯ್ ಕುಟುಂಬ: ವಿಡಿಯೋ ಹಂಚಿಕೊಂಡ ಯಶ್

    ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ತೆರೆಗೆ ಬಂದು ಎರಡು ತಿಂಗಳು ಕಳೆದಿದೆ. ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಈ ಚಿತ್ರದ ಸಕ್ಸಸ್ ಬಳಿಕ ರಾಕಿಭಾಯ್, ತಮ್ಮ ಕುಟುಂಬದ ಕಡೆ ಹೆಚ್ಚು ಗಮನ ಕೊಡ್ತಿದ್ದಾರೆ. ಇತ್ತೀಚೆಗಷ್ಟೇ ಕುಟುಂಬದ ಜೊತೆ ಅನಿಮಲ್ ಪಾರ್ಕ್‌ಗೆ ಭೇಟಿ ಕೊಟ್ಟಿದ್ದರು. ಇದರ ವಿಡಿಯೋ ಇದೀಗ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    `ಕೆಜಿಎಫ್’ ಯಶಸ್ಸಿನ ನಂತರ ಯಶ್ ಕುಟುಂಬಕ್ಕೆ ಸಮಯ ನೀಡ್ತಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್, ಮಕ್ಕಳಾದ ಐರಾ, ಯಥರ್ವ್, ರಾಧಿಕಾ ಸಹೋದರ ಗೌರಂಗ್, ಯಶ್ ಸಹೋದರಿ ನಂದನಿ ಕುಟುಂಬದವರೆಲ್ಲರೂ ಸೇರಿ ಇತ್ತೀಚೆಗಷ್ಟೇ ಕನಕಪುರ ರಸ್ತೆಯಲ್ಲಿರುವ ಅನಿಮಲ್ ಪಾರ್ಕ್‌ ತೆರಳಿದ್ದರು. ಇದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಯಾವುದೇ ಧರ್ಮದವರಿಗೆ ನೋಯಿಸುವ ಉದ್ದೇಶವಿಲ್ಲ – ಕ್ಷಮೆಯಾಚಿಸಿದ ಸಾಯಿ ಪಲ್ಲವಿ

     

    View this post on Instagram

     

    A post shared by Radhika Pandit (@iamradhikapandit)

    ಕೆಲ ದಿನಗಳ ಹಿಂದೆ ನಟಿ ರಾಧಿಕಾ ಕೂಡ ಗಿಳಿ ಜೊತೆಗಿನ ಫೋಟೋ ಹಂಚಿಕೊಂಡಿದ್ದರು. ಬೇರೆ ಬೇರೆ ಪ್ರಾಣಿ, ಪಕ್ಷಿಗಳ ಜೊತೆ ಯಶ್ ಕುಟುಂಬ ಸಂತಸದ ಸಮಯವನ್ನ ಕಳೆದಿದೆ. ಅನಿಮಲ್ ಪಾರ್ಕ್ ಅನ್ನು ಸಂಜೀವ ಎಂಬುವವರು ನಡೆಸುತ್ತಿದ್ದಾರೆ. ಈ ಕುರಿತು ಯಶ್ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

    ರಾಕಿಭಾಯ್ ನಟಿಸಿರುವ ಚಿತ್ರ ಹಿಟ್ ಆದಮೇಲೆ ಮುಂದೆ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಅಂತಾ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಯಶ್ ಮುಂದಿನ ನಡೆಗಾಗಿ ಮತ್ತು ಚಿತ್ರಗಳ ಅಧಿಕೃತ ಘೋಷಣೆಗಾಗಿ ಫ್ಯಾನ್ಸ್‌ ಕಾಯ್ತಿದ್ದಾರೆ.

    Live Tv