Tag: animal

  • ನನಗೆ ವಯಸ್ಸು 29 ಆಗ್ತಿದೆ: ಬರ್ತ್‌ಡೇ ಆಚರಿಸುವ ಸಂಭ್ರಮ ಹಂಚಿಕೊಂಡ ರಶ್ಮಿಕಾ ಮಂದಣ್ಣ

    ನನಗೆ ವಯಸ್ಸು 29 ಆಗ್ತಿದೆ: ಬರ್ತ್‌ಡೇ ಆಚರಿಸುವ ಸಂಭ್ರಮ ಹಂಚಿಕೊಂಡ ರಶ್ಮಿಕಾ ಮಂದಣ್ಣ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅನಿಮಲ್, ಪುಷ್ಪ 2, ಛಾವಾ ಈ 3 ಚಿತ್ರಗಳು ಬ್ಯಾಕ್ ಟು ಬ್ಯಾಕ್ ಸಕ್ಸಸ್ ಆದ ಖುಷಿಯಲ್ಲಿದ್ದಾರೆ. ಇದರ ನಡುವೆ ನಟಿಯ ಬರ್ತ್‌ಡೇ ಆಚರಣೆಗೆ ಕೌಂಟ್‌ಡೌನ್ ಶುರುವಾಗಿದೆ. ಹುಟ್ಟುಹಬ್ಬದ ಬಗ್ಗೆ ಉತ್ಸುಕರಾಗಿರೋ ನಟಿ, ಇದೀಗ ನನಗೆ 29 ವರ್ಷ ಆಗ್ತಿದೆ ಎಂದರೆ ನಂಬೋಕೆ ಆಗ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಗೋಲ್ಡ್ ರಾಣಿಗೆ ಮತ್ತೆ ಶಾಕ್ ಕೊಟ್ಟ ಪತಿ – ವಿಚ್ಛೇದನಕ್ಕೆ ಅರ್ಜಿ

    ನನ್ನ ಹುಟ್ಟುಹಬ್ಬದ ತಿಂಗಳು ಬಂದಿದೆ. ನಾನು ತುಂಬಾ ಎಕ್ಸೈಟ್ ಆಗಿದ್ದೇನೆ. ವಯಸ್ಸು ಆದಂತೆಲ್ಲ ನಿಮಗೆ ಹುಟ್ಟುಹಬ್ಬ ಆಚರಣೆ ಮಾಡುವ ಆಸಕ್ತಿ ಕಡಿಮೆ ಆಗುತ್ತದೆ ಎಂದು ಕೇಳಿದ್ದೇನೆ. ಆದರೆ ನನ್ನ ವಿಚಾರದಲ್ಲಿ ಹಾಗಾಗಿಲ್ಲ. ವಯಸ್ಸು ಜಾಸ್ತಿ ಆದಂತೆಲ್ಲ ನನಗೆ ಬರ್ತ್‌ಡೇ ಆಚರಣೆ ಮಾಡುವ ಉತ್ಸಾಹ ಜಾಸ್ತಿ ಆಗುತ್ತಿದೆ ಎಂದು ರಶ್ಮಿಕಾ ಮಂದಣ್ಣ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಏ.16ಕ್ಕೆ ಕಾದಿದೆ ಕಿಚ್ಚನಿಂದ ಬಿಗ್‌ ಸರ್ಪ್ರೈಸ್-‌ ಸುದೀಪ್‌ ಕಟ್ಟು ಮಸ್ತಾದ ಬಾಡಿ ನೋಡಿ ಫ್ಯಾನ್ಸ್‌ ಫಿದಾ

    ನಾನು ಈಗ 29ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ ಎಂದು ನಂಬೋಕೆ ಆಗುತ್ತಿಲ್ಲ. ಖುಷಿಯಾಗಿ, ಆರೋಗ್ಯಕರವಾಗಿ, ಸುರಕ್ಷಿತವಾಗಿ ಇನ್ನೊಂದು ವರ್ಷ ಕಳೆದಿದ್ದೇನೆ. ಇದನ್ನು ಆಚರಿಸುವ ಸಮಯ ಎಂದು ರಶ್ಮಿಕಾ ಮಂದಣ್ಣ ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಈಗಾಗಲೇ ನಟಿಗೆ ಬರ್ತ್‌ಡೇ (Birthday) ವಿಶ್ಸ್ ತಿಳಿಸಲು ಪ್ರಾರಂಭಿಸಿದ್ದಾರೆ.

    ಅಂದಹಾಗೆ, ಇದೇ ಏ.5ರಂದು ರಶ್ಮಿಕಾ ಮಂದಣ್ಣ 29ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಈಗಿನಿಂದಲೇ ಅಭಿಮಾನಿಗಳ ಕಡೆಯಿಂದ ನಟಿಯ ಬರ್ತ್‌ಡೇ ಸೆಲೆಬ್ರೇಶನ್‌ಗೆ ಜೋರಾಗಿ ತಯಾರಿ ನಡೆಯುತ್ತಿದೆ.

  • ‘ಅನಿಮಲ್‌ 2’ 2027ರಲ್ಲಿ ಶುರುವಾಗಲಿದೆ: ಗುಡ್‌ ನ್ಯೂಸ್‌ ಕೊಟ್ಟ ರಣ್‌ಬೀರ್ ಕಪೂರ್

    ‘ಅನಿಮಲ್‌ 2’ 2027ರಲ್ಲಿ ಶುರುವಾಗಲಿದೆ: ಗುಡ್‌ ನ್ಯೂಸ್‌ ಕೊಟ್ಟ ರಣ್‌ಬೀರ್ ಕಪೂರ್

    ಬಾಲಿವುಡ್ ನಟ ರಣ್‌ಬೀರ್ ಕಪೂರ್ ನಟನೆಯ ‘ಅನಿಮಲ್’ (Animal) ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸಕ್ಸಸ್ ಕಂಡಿದೆ. ಈ ಚಿತ್ರದ ಸೀಕ್ವೆಲ್ ಯಾವಾಗ ಎಂಬ ಅಭಿಮಾನಿಗಳ ಕಾತರಕ್ಕೆ ರಣ್‌ಬೀರ್ ಕಪೂರ್ (Ranbir Kapoor) ಗುಡ್ ನ್ಯೂಸ್ ಕೊಟ್ಟಿದ್ದಾರೆ. `ಅನಿಮಲ್ 2′ 2027ರಲ್ಲಿ ಶುರುವಾಗಲಿದೆ ಎಂದಿದ್ದಾರೆ.

    ಇತ್ತೀಚೆಗೆ ಆಗಮಿಸಿದ ಕಾರ್ಯಕ್ರಮವೊಂದರಲ್ಲಿ ರಣ್‌ಬೀರ್ ಮಾತನಾಡಿ, ‘ಅನಿಮಲ್ ಪಾರ್ಟ್ 2’ (Animal 2) 2027ರಲ್ಲಿ ರಿಲೀಸ್ ಆಗಲಿದೆ. ಈ ಚಿತ್ರವನ್ನು ನನಗೆ 3 ಭಾಗಗಳಲ್ಲಿ ಮಾಡಲು ಆಸೆಯಿದೆ. 2ನೇ ಪಾರ್ಟ್‌ಗೆ ‘ಅನಿಮಲ್ ಪಾರ್ಕ್’ ಎಂದು ಟೈಟಲ್ ಇಡಲಾಗಿದೆ. ಈ ಮೊದಲೇ ಈ ಬಗ್ಗೆ ಚರ್ಚಿಸಿದ್ದೇವು ಎಂದಿದ್ದಾರೆ.

    ಈ ಚಿತ್ರ ನನಗೆ ತುಂಬಾ ಖುಷಿ ಕೊಟ್ಟಿದೆ. ಒಂದೇ ಸಿನಿಮಾದಲ್ಲಿ ವಿಲನ್ ಮತ್ತು ಹೀರೋ ಎರಡು ಪಾತ್ರದಲ್ಲಿ ನಟಿಸುವ ಚಾನ್ಸ್ ದಕ್ಕಿದೆ ಎಂದು ಖುಷಿಯಿಂದ ರಣ್‌ಬೀರ್ ಮಾತನಾಡಿದ್ದಾರೆ. ಇದನ್ನೂ ಓದಿ:BBK 11: ಮತ್ತೆ ಬಿಗ್‌ ಬಾಸ್‌ಗೆ ತನಿಷಾ, ಪ್ರತಾಪ್‌, ಸಂತು ಪಂತು ಎಂಟ್ರಿ

    ಇನ್ನೂ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್ ಜೊತೆ ರಶ್ಮಿಕಾ ಮಂದಣ್ಣ (Rashmika Mandanna), ತೃಪ್ತಿ ದಿಮ್ರಿ, ಅನಿಲ್ ಕಪೂರ್, ಬಾಬಿ ಡಿಯೋಲ್ ಸೇರಿದಂತೆ ಅನೇಕರು ನಟಿಸಿದರು. ತಂದೆ ಮತ್ತು ಮಗನ ಬಾಂಧವ್ಯ ಮತ್ತು ಗೀತಾಂಜಲಿ (ರಶ್ಮಿಕಾ) ಮೇಲಿನ ರಣ್‌ಬೀರ್ ಪ್ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದರು.

    https://youtu.be/2Haq3NSydBU?si=dyuaMP2nPtQ0ol4x

  • ಮತ್ತೊಂದು ರೊಮ್ಯಾಂಟಿಕ್ ಸಿನಿಮಾ ಒಪ್ಪಿಕೊಂಡ ತೃಪ್ತಿ ದಿಮ್ರಿ

    ಮತ್ತೊಂದು ರೊಮ್ಯಾಂಟಿಕ್ ಸಿನಿಮಾ ಒಪ್ಪಿಕೊಂಡ ತೃಪ್ತಿ ದಿಮ್ರಿ

    ‘ಅನಿಮಲ್’ (Animal) ಖ್ಯಾತಿಯ ತೃಪ್ತಿ ದಿಮ್ರಿ (Tripti Dimri) ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮತ್ತೊಂದು ರೊಮ್ಯಾಂಟಿಕ್ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ಡ್ಯುಯೆಟ್ ಹಾಡಲು ನಟಿ ರೆಡಿಯಾಗಿದ್ದಾರೆ.

    ರಣ್‌ಬೀರ್ ಕಪೂರ್ ಜೊತೆ ಬೋಲ್ಡ್ ಪಾತ್ರದಲ್ಲಿ ನಟಿಸಿದ ಬಳಿಕ ತೃಪ್ತಿಗೆ ಹೆಚ್ಚೆಚ್ಚು ಹಾಟ್ & ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ವಿಕ್ಕಿ ಕೌಶಲ್ ಜೊತೆ ಗುಡ್ ನ್ಯೂಸ್ ಚಿತ್ರ, ರಾಜ್‌ಕುಮಾರ್ ರಾವ್ ಜೊತೆ ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಮೀಟೂ ಬಗ್ಗೆ ಹೊಸ ಬಾಂಬ್ ಸಿಡಿಸಿದ ಶ್ರದ್ಧಾ ಶ್ರೀನಾಥ್!

    ಈ ಬೆನ್ನಲ್ಲೇ, ಲವರ್ ಬಾಯ್ ಕಾರ್ತಿಕ್ ಆರ್ಯನ್ ಹೊಸ ಚಿತ್ರಕ್ಕೆ ತೃಪ್ತಿ ನಾಯಕಿಯಾಗಿದ್ದು, ಇದೇ ಸೆ.24ರಿಂದ ಚಿತ್ರೀಕರಣ ಶುರುವಾಗಲಿದೆ. ಮುಂಬೈನಲ್ಲಿ ನಡೆಯಲಿರುವ ಈ ಚಿತ್ರದ ಶೂಟಿಂಗ್‌ಗೆ ಕಾರ್ತಿಕ್ ಜೊತೆ ನಟಿ ಭಾಗಿಯಾಗಲಿದ್ದಾರೆ. ಈ ಚಿತ್ರವನ್ನು ಅನುರಾಗ್ ಬಸು ನಿರ್ದೇಶನ ಮಾಡಲಿದ್ದಾರೆ.

    ವಿಭಿನ್ನವಾಗಿರುವ ಲವ್ ಸ್ಟೋರಿ ಇದಾಗಿದ್ದು, ಎಂದೂ ಕಾಣಿಸಿಕೊಂಡಿದ ಡಿಫರೆಂಟ್ ರೋಲ್‌ಗೆ ತೃಪ್ತಿ ಜೀವ ತುಂಬಲಿದ್ದಾರೆ. ಇದೇ ಮೊದಲ ಬಾರಿಗೆ ಕಾರ್ತಿಕ್ ಮತ್ತು ತೃಪ್ತಿ ಜೊತೆಯಾಗುತ್ತಿರೋದ್ರಿಂದ ಸಿನಿಮಾ ಕುರಿತು ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ಲವ್ ಯೂ ಗೊಂಬೆ ಎಂದು ತಂಗಿಗೆ ಲವ್ಲಿ ನೋಟ್ ಬರೆದ ರಶ್ಮಿಕಾ ಮಂದಣ್ಣ

    ಲವ್ ಯೂ ಗೊಂಬೆ ಎಂದು ತಂಗಿಗೆ ಲವ್ಲಿ ನೋಟ್ ಬರೆದ ರಶ್ಮಿಕಾ ಮಂದಣ್ಣ

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ರಾಖಿ ಹಬ್ಬದಂದು ಮುದ್ದು ತಂಗಿಗೆ ಎಮೋಷನಲ್ ಆಗಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಐ ಲವ್ ಯೂ ನನ್ನ ಗೊಂಬೆ ಎಂದು ತಂಗಿ ಶಿಮೋನ್‌ಗೆ ಲವ್ಲಿ ನೋಟ್ ಬರೆದಿದ್ದಾರೆ. ಇದನ್ನೂ ಓದಿ:ಕೈಹಿಡಿಯದ ಅದೃಷ್ಟ- ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ ಚಿತ್ರ ಹೀನಾಯ ಸೋಲು

    ರಕ್ಷಾ ಬಂಧನದಂದು ತಂಗಿಗೆ ವಿಶೇಷವಾಗಿ ಶುಭಕೋರಿದ್ದಾರೆ. ಪುಟ್ಟ ತಂಗಿ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನೀನು ಕೂಡ ಮನಸ್ಸಿನಿಂದ ಒಳ್ಳೆಯ ಹುಡುಗಿಯಾಗಿ ಬೆಳೆಯುತ್ತೀಯಾ ಎಂದು ನಾನು ಭಾವಿಸುತ್ತೇನೆ. ಎಲ್ಲರೂ ಗೌರವಿಸುವ ವ್ಯಕ್ತಿಯಾಗುತ್ತೀಯಾ ಎಂದು ನಂಬಿದ್ದೇನೆ. ನೀನು ಜೀವನದಲ್ಲಿ ಹಲವಾರು ಯುದ್ಧಗಳನ್ನು ಮಾಡಬೇಕಿಲ್ಲ. ನನಗೆ ಎಷ್ಟು ಸಾಧ್ಯವೋ ಅಷ್ಟು ನಾನು ನಿನ್ನನ್ನು ರಕ್ಷಿಸಲು ಪ್ರಯತ್ನಿಸುತ್ತೇನೆ ಎಂದು ನಾನು ನಿನಗೆ ಭರವಸೆ ನೀಡುತ್ತೇನೆ ಎಂದು ಭಾವುಕವಾಗಿ ರಶ್ಮಿಕಾ ಬರೆದುಕೊಂಡಿದ್ದಾರೆ.

    ನೀನು ಈ ಜಗತ್ತಿನಲ್ಲಿ ಸುರಕ್ಷಿತವಾಗಿ ಮತ್ತು ಸಂತೋಷವಾಗಿರುತ್ತೀಯಾ ಎಂದು ನಾನು ಭಾವಿಸುತ್ತೇನೆ. ನಿಮ್ಮಂತಹ ಎಲ್ಲಾ ಚಿಕ್ಕ ಹುಡುಗಿಯರು ಕೂಡ ಇಲ್ಲಿ ಸಂತೋಷದಿಂದ ಸುರಕ್ಷಿತ ಸ್ಥಳವಾಗಿ ಬದುಕಬಹುದಾಗಿದೆ. ಐ ಲವ್ ಯೂ, ನನ್ನ ಗೊಂಬೆ ಎಂದು ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

    ಅಂದಹಾಗೆ, ರಶ್ಮಿಕಾರ ತಂಗಿಯ ಹೆಸರು ಶಿಮೋನ್ ಮಂದಣ್ಣ. ನಟಿಗಿಂತ 17 ವರ್ಷ ಚಿಕ್ಕವರು ಶಿಮೋನ್. ಆಗಾಗ ಮುದ್ದು ತಂಗಿಯ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

    ಇನ್ನೂ ‘ಪುಷ್ಪ 2’ (Pushap 2) ಮತ್ತು ‘ಛಾವಾ’ (Chhava) ಸಿನಿಮಾ ಇದೇ ಡಿ.6ಕ್ಕೆ ರಿಲೀಸ್ ಆಗಲಿದೆ. ಕುಬೇರ, ದಿ ಗರ್ಲ್‌ಫ್ರೆಂಡ್, ರೈನ್‌ಬೋ ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿವೆ. ಜ್ಯೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾಗೆ ಇವರೇ ನಾಯಕಿ ಎನ್ನಲಾಗುತ್ತಿದೆ. ಅಧಿಕೃತ ಅಪ್‌ಡೇಟ್‌ಗೆ ಕಾಯಬೇಕಿದೆ.

  • ಪ್ರಭಾಸ್‌ಗೆ ತ್ರಿಷಾ ನಾಯಕಿ- ‘ಅನಿಮಲ್’ ನಿರ್ದೇಶಕ ಆ್ಯಕ್ಷನ್ ಕಟ್

    ಪ್ರಭಾಸ್‌ಗೆ ತ್ರಿಷಾ ನಾಯಕಿ- ‘ಅನಿಮಲ್’ ನಿರ್ದೇಶಕ ಆ್ಯಕ್ಷನ್ ಕಟ್

    ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಯಶಸ್ಸಿನಲ್ಲಿರುವ ಪ್ರಭಾಸ್ ಇದೀಗ ‘ಸ್ಪಿರಿಟ್’ ಸಿನಿಮಾಗೆ ಸಿದ್ಧತೆ ನಡೆಸುತ್ತಿದ್ದಾರೆ. ಇದರ ನಡುವೆ ಈ ಸಿನಿಮಾ ಬಗ್ಗೆ ಲೇಟೆಸ್ಟ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಈ ಚಿತ್ರದಲ್ಲಿ ಡಾರ್ಲಿಂಗ್ ಪ್ರಭಾಸ್ ಜೊತೆ ತ್ರಿಷಾ ರೊಮ್ಯಾನ್ಸ್ ಮಾಡಲಿದ್ದಾರೆ. ಇದನ್ನೂ ಓದಿ:ಗೋವಾದಲ್ಲಿ ಕೊಡೆ ಹಿಡಿದು ನಿಂತ ‘ಬಿಗ್ ಬಾಸ್’ ಖ್ಯಾತಿಯ ಸೋನು

    ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟಿವ್ ಇರುವ ನಟಿ ತ್ರಿಷಾ (Trisha) ಇಂದಿಗೂ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ವಿಜಯ ದಳಪತಿ, ಮೆಗಾಸ್ಟಾರ್ ಚಿರಂಜೀವಿ, ಅಜಿತ್ ಕುಮಾರ್‌ಗೆ ಪ್ರಸ್ತುತ ನಾಯಕಿಯಾಗಿ ಸದ್ದು ಮಾಡುತ್ತಿರುವ ತ್ರಿಷಾ ಇದೀಗ ಪ್ರಭಾಸ್ (Prabhas) ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ.

    ತ್ರಿಷಾರನ್ನು ಈಗಾಗಲೇ ಅನಿಮಲ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಭೇಟಿಯಾಗಿ ಸಿನಿಮಾದ ಕಥೆ ಹೇಳಿದ್ದಾರೆ. ಸಿನಿಮಾ ಕುರಿತು ಮಾತುಕತೆಯಾಗಿದ್ದು, ಸದ್ಯದಲ್ಲೇ ಚಿತ್ರತಂಡ ಈ ಕುರಿತು ಘೋಷಣೆ ಮಾಡಬೇಕಿದೆ. ಸದ್ಯ ‘ಸ್ಪಿರಿಟ್’ ಸಿನಿಮಾದ ಪ್ರೀ ಪ್ರೋಡಕ್ಷನ್ ಕೆಲಸಗಳು ನಡೆಯುತ್ತಿದೆ.

    ಪ್ರಭಾಸ್ ಮತ್ತು ತ್ರಿಷಾ ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ದಿ ರಾಜಾ ಸಾಬ್ ಸಿನಿಮಾದ ಬಳಿಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಜೊತೆ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಪ್ರಭಾಸ್. ಸದ್ಯ ಈ ಚಿತ್ರದ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • ತಮಿಳು ನಟ ಧನುಷ್‌ಗೆ ಹಾಟ್ ಬೆಡಗಿ ತೃಪ್ತಿ ದಿಮ್ರಿ ನಾಯಕಿ

    ತಮಿಳು ನಟ ಧನುಷ್‌ಗೆ ಹಾಟ್ ಬೆಡಗಿ ತೃಪ್ತಿ ದಿಮ್ರಿ ನಾಯಕಿ

    ಬಾಲಿವುಡ್‌ನ ಹಾಟ್ ಬೆಡಗಿ ತೃಪ್ತಿ ದಿಮ್ರಿ (Tripti Dimri) ಈಗ ಹೊಸ ಚಿತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ. ತಮಿಳು ನಟ ಧನುಷ್ (Dhanush) ನಟಿಸಲಿರುವ ಬಾಲಿವುಡ್ ಚಿತ್ರದಲ್ಲಿ ‘ಅನಿಮಲ್’ (Animal) ಸುಂದರಿ ತೃಪ್ತಿ ಹೀರೋಯಿನ್ ಆಗಿದ್ದಾರೆ. ಇದನ್ನೂ ಓದಿ:ಅನಂತ್‌ ಅಂಬಾನಿ ಮದುವೆಯಲ್ಲಿ 160 ವರ್ಷದ ಹಿಂದಿನ ಸೀರೆಯುಟ್ಟು ಕಂಗೊಳಿಸಿದ ಆಲಿಯಾ ಭಟ್

    ‘ಅನಿಮಲ್’ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಜೊತೆ ತೃಪ್ತಿ ದಿಮ್ರಿ ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಿದ್ದರು. ಈ ಸಿನಿಮಾದ ಸಕ್ಸಸ್ ನಂತರ ಸೌತ್ ಮತ್ತು ಬಾಲಿವುಡ್‌ನಲ್ಲಿ ನಟಿಗೆ ಬೇಡಿಕೆ ಹೆಚ್ಚಾಗಿದೆ. ಈಗ ಮತ್ತೊಂದು ಬಂಪರ್ ಆಫರ್ ಅನ್ನು ನಟಿ ಗಿಟ್ಟಿಸಿಕೊಂಡಿದ್ದಾರೆ.

    ಆನಂದ್ ಎಲ್ ರೈ ನಿರ್ದೇಶನದ ಹೊಸ ಚಿತ್ರದಲ್ಲಿ ತಮಿಳು ನಟ ಧನುಷ್‌ಗೆ ತೃಪ್ತಿ ನಾಯಕಿಯಾಗ್ತಿದ್ದಾರೆ. ಇದೊಂದು ದುರಂತ ಪ್ರೇಮ ಕಥೆಯಾಗಿದ್ದು, ತೃಪ್ತಿ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಎಂದೂ ನಟಿಸಿರದ ವಿಭಿನ್ನ ಪಾತ್ರಕ್ಕೆ ನಟಿ ಜೀವ ತುಂಬಲಿದ್ದಾರೆ.

    ಇನ್ನೂ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ತೃಪ್ತಿ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆಗಿನ ಹೊಸ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ.

  • ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ಬಾಬಿ ಡಿಯೋಲ್

    ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ಬಾಬಿ ಡಿಯೋಲ್

    ತೆಲುಗಿನ ಸ್ಟಾರ್ ಜ್ಯೂ.ಎನ್‌ಟಿಆರ್ (Jr.Ntr) ಇದೀಗ ‘ಕೆಜಿಎಫ್’ (KGF) ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ (Prashanth Neel) ಜೊತೆ ಕೈಜೋಡಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಸಿನಿಮಾದ ಬಗ್ಗೆ ಈಗ ಲೇಟೆಸ್ಟ್ ಅಪ್‌ಡೇಟ್ ಸಿಕ್ಕಿದೆ. ‘ಡ್ರ್ಯಾಗನ್’ (Dragon Film) ಸಿನಿಮಾದಲ್ಲಿ ಬಾಬಿ ಡಿಯೋಲ್ ಖಳನಾಯಕನಾಗಿ ಅಬ್ಬರಿಸಲಿದ್ದಾರೆ.

    ‘ಅನಿಮಲ್’ (Animal) ಸಿನಿಮಾದಲ್ಲಿ ರಣ್‌ಬೀರ್ ಕಪೂರ್‌ಗೆ ಖಡಕ್ ವಿಲನ್ ಆಗಿ ನಟಿಸಿದ್ದರು. ಈ ಸಿನಿಮಾದ ಬಳಿಕ ಸ್ಟಾರ್ ಸಿನಿಮಾಗಳಿಗೆ ನಟಿಸಲು ಬಾಬಿ ಡಿಯೋಲ್‌ಗೆ ಬುಲಾವ್ ಬಂದಿದೆ. ಸದ್ಯ ಜ್ಯೂ.ಎನ್‌ಟಿಆರ್ ಮುಂದೆ ಬಾಬಿ ಡಿಯೋಲ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ಮದುವೆಯಾದರೆ ಖುಷಿಯಾಗಿರುತ್ತೇನೆ ಎಂಬ ಭರವಸೆಯಿಲ್ಲ: ‘ಮೊನಾಲಿಸಾ’ ನಟಿ

    ಚಿತ್ರದಲ್ಲಿ ಖಡಕ್ ವಿಲನ್ ಇದ್ರೆನೇ ಹೀರೋಗೆ ಬೆಲೆ. ಹಾಗಾಗಿ ಚಿತ್ರತಂಡ ಈಗಾಗಲೇ ಬಾಬಿ ಡಿಯೋಲ್‌ರನ್ನು ಸಂಪರ್ಕಿಸಿ ಕಥೆ ಕೂಡ ಹೇಳಿದೆಯಂತೆ. ಡೇಟ್ಸ್ ಕೂಡ ಹೊಂದಾಣಿಕೆ ಮಾಡಿ ಕೊಡಿ ಎಂದು ಕೂಡ ಕೇಳಲಾಗಿದೆ ಎನ್ನಲಾಗಿದೆ. ಆದರೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

    ಇನ್ನೂ ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್‌ಟಿಆರ್ ಸಿನಿಮಾ ಶೂಟಿಂಗ್ ಆಗಸ್ಟ್‌ನಿಂದ ಶುರುವಾಗಲಿದೆ. `ದೇವರ’ ಸಿನಿಮಾ ಕೆಲಸ ಮುಗಿಯುತ್ತಿದ್ದಂತೆ ಈ ಸಿನಿಮಾತಂಡದ ಜೊತೆ ಸೇರಿಕೊಳ್ಳಲಿದ್ದಾರೆ ತಾರಕ್.

  • ಗಂಡಸರನ್ನು ನಂಬಲು ಭಯವಾಗುತ್ತದೆ ಎಂದ ಅಭಿಮಾನಿಗೆ ರಶ್ಮಿಕಾ ಸಲಹೆ

    ಗಂಡಸರನ್ನು ನಂಬಲು ಭಯವಾಗುತ್ತದೆ ಎಂದ ಅಭಿಮಾನಿಗೆ ರಶ್ಮಿಕಾ ಸಲಹೆ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕಳೆದ ವರ್ಷ ನಟಿಸಿದ ‘ಅನಿಮಲ್’ (Animal) ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು. ಈ ಚಿತ್ರದ ರಣ್‌ಬೀರ್ (Ranbir Kapoor) ಮತ್ತು ರಶ್ಮಿಕಾ (Rashmika Mandanna) ಪಾತ್ರದ ಬಗ್ಗೆ ಪಾಸಿಟಿವ್ ಮತ್ತು ನೆಗೆಟಿವ್ ಕಾಮೆಂಟ್ ಎರಡು ಬಂದಿತ್ತು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹೀರೋ ರಣ್‌ವಿಜಯ್ ಅಕ್ರಮ ಸಂಬಂಧದ ಬಗ್ಗೆ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿ ಇಂತಹ ಗಂಡಸರನ್ನು ಕಂಡರೆ ಭಯವಾಗುತ್ತದೆ ಎಂದಿದ್ದಾರೆ. ಆ ಅಭಿಮಾನಿಗೆ ರಶ್ಮಿಕಾ ಸಲಹೆ ನೀಡಿದ್ದಾರೆ.

    ‘ಅನಿಮಲ್’ ಸಿನಿಮಾದಲ್ಲಿ ನಾಯಕ ರಣ್‌ವಿಜಯ್ ಸಿಂಗ್ ಪತ್ನಿ ಗೀತಾಂಜಲಿ ಆಗಿ ರಶ್ಮಿಕಾ ಮಿಂಚಿದ್ದರು. ಇನ್ನು ರಣ್‌ವಿಜಯ್ ಸಿಂಗ್ ಮದುವೆ ಬಳಿಕ ಜೊಯಾ ರಿಯಾಜ್ ಜೊತೆ ಅಕ್ರಮ ಸಂಬಂಧ ಕೂಡ ಇಟ್ಟುಕೊಂಡಿರುತ್ತಾರೆ. ಇದಕ್ಕೆ ಸಂಬಂಧಿಸಿ ವಿಡಿಯೋವೊಂದನ್ನು ನೆಟ್ಟಿಗರೊಬ್ಬರು ಹಂಚಿಕೊಂಡಿದ್ದು, ಒಬ್ಬ ಗಂಡಸನ್ನು ನಂಬುವುದಕ್ಕಿಂತ ಭಯಂಕರವಾದದ್ದು ಮತ್ತೊಂದಿಲ್ಲ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ:ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಸಿರಿ

    ಈ ಕಾಮೆಂಟ್ ರಶ್ಮಿಕಾ ಮಂದಣ್ಣ ಗಮನಕ್ಕೂ ಬಂದಿದ್ದರು, ನೀವು ಹೇಳಿದ್ದಕ್ಕೆ ಸಣ್ಣ ಕರೆಕ್ಷನ್. ಒಬ್ಬ ಅವಿವೇಕಿ ಗಂಡಸನ್ನು ನಂಬಲು ಭಯವಾಗಬೇಕು. ಆದರೆ ಇಲ್ಲಿ ಸಾಕಷ್ಟು ಜನ ಒಳ್ಳೆಯ ಗಂಡಸರು ಕೂಡ ಇದ್ದಾರೆ. ಅಂತಹವರನ್ನು ನಂಬಿದರೆ ಅದು ಬಹಳ ಸ್ಪೆಷಲ್ ಎಂದು ರಶ್ಮಿಕಾ ಸಲಹೆ ನೀಡಿದ್ದಾರೆ. ಸದ್ಯ ನಟಿಯ ಕಾಮೆಂಟ್ ವೈರಲ್ ಆಗುತ್ತಿದೆ.

    ಇನ್ನೂ ಪುಷ್ಪ 2, ಅನಿಮಲ್ ಪಾರ್ಕ್, ದಿ ಗರ್ಲ್‌ಫ್ರೆಂಡ್, ಚಾವಾ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ.

  • ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ‘ಅನಿಮಲ್’ ನಟಿ

    ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ‘ಅನಿಮಲ್’ ನಟಿ

    ‘ಅನಿಮಲ್’ (Animal) ಸಿನಿಮಾದ ಸಕ್ಸಸ್ ಬಳಿಕ ಬಾಲಿವುಡ್ ನಟಿ ತೃಪ್ತಿ ದಿಮ್ರಿಗೆ (Tripti Dimri) ಬೇಡಿಕೆ ಜಾಸ್ತಿಯಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ತೃಪ್ತಿ ಈಗ ಮುಂಬೈನಲ್ಲಿ ದುಬಾರಿ ಮನೆಯನ್ನು ಖರೀದಿಸಿದ್ದಾರೆ.

    ಮುಂಬೈನ ಬಾಂದ್ರಾ ವೆಸ್ಟ್ ಪ್ರದೇಶದ ಕಾರ್ಟರ್ ರಸ್ತೆಯಲ್ಲಿ ತೃಪ್ತಿ ದಿಮ್ರಿ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದಾರೆ. ಈ ದುಬಾರಿ ಬಂಗಲೆಯ ಬೆಲೆ 14 ಕೋಟಿ ರೂ. ಮೌಲ್ಯದಾಗಿದೆ. ಇದನ್ನೂ ಓದಿ:ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ರಜನಿಕಾಂತ್

    ಇದೀಗ ಮನೆಗೆ 70 ಲಕ್ಷ ರೂ. ಅಡ್ವಾನ್ಸ್ ಕೂಡ ಪಾವತಿಸಲಾಗಿದೆ. ಈ ಬಂಗಲೆಯನ್ನು ಒಟ್ಟು 2,226 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ತೃಪ್ತಿ ಈ ಬಂಗಲೆಯನ್ನು ಜೂನ್ 3ರಂದು ಖರೀದಿಸಿದ್ದಾರೆ. ಇದೀಗ ನೆಚ್ಚಿನ ನಟಿಯ ಸಕ್ಸಸ್ ನೋಡಿ ಅಭಿಮಾನಿಗಳು ಖುಷಿಪಡ್ತಿದ್ದಾರೆ.

    ಇನ್ನೂ ಕರಣ್ ಜೋಹರ್ ನಿರ್ಮಾಣದ ಹೊಸ ಸಿನಿಮಾ, ಕಾರ್ತಿಕ್ ಆರ್ಯನ್ ಜೊತೆ ಹೊಸ ಚಿತ್ರ, ಅನಿಮಲ್ 2, ಪುಷ್ಪ 2ನಲ್ಲಿ ಐಟಂ ಡ್ಯಾನ್ಸ್ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ತೃಪ್ತಿ ಕೈಯಲ್ಲಿವೆ.

  • Sikandar: ಸಲ್ಮಾನ್ ಚಿತ್ರದಲ್ಲಿ ನಟಿಸಲು ದುಬಾರಿ ಸಂಭಾವನೆ ಚಾರ್ಜ್ ಮಾಡಿದ ರಶ್ಮಿಕಾ ಮಂದಣ್ಣ

    Sikandar: ಸಲ್ಮಾನ್ ಚಿತ್ರದಲ್ಲಿ ನಟಿಸಲು ದುಬಾರಿ ಸಂಭಾವನೆ ಚಾರ್ಜ್ ಮಾಡಿದ ರಶ್ಮಿಕಾ ಮಂದಣ್ಣ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ (Rashmika Mandanna) ಅದೃಷ್ಟ ಖುಲಾಯಿಸಿದೆ. ಪುಷ್ಪ, ಅನಿಮಲ್ ಚಿತ್ರದ ಸಕ್ಸಸ್ ನಂತರ ರಶ್ಮಿಕಾಗೆ ಬಾಲಿವುಡ್ ಬಾಗಿಲು ತೆರೆದಿದೆ. ‘ಸಿಖಂದರ್’ (Sikandar) ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಡ್ಯುಯೇಟ್ ಹಾಡಲು ದುಬಾರಿಯನ್ನು ನಟಿ ಕೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ಸ್ವಪ್ನಮಂಟಪ: ಶೂಟಿಂಗ್ ಮುಗಿಸಿದ ಬರಗೂರು ರಾಮಚಂದ್ರಪ್ಪ

    ‘ಸಿಖಂದರ್’ ಸಿನಿಮಾ ಘೋಷಣೆಯ ನಂತರ ಸಲ್ಮಾನ್ ಖಾನ್‌ಗೆ 58 ವರ್ಷ, ರಶ್ಮಿಕಾಗೆ 28 ವರ್ಷ ಎಂದು ವಯಸ್ಸಿನ ಅಂತರದ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಈಗ ರಶ್ಮಿಕಾ ಸಂಭಾವನೆ ಕುರಿತು ಭಾರೀ ಚರ್ಚೆ ಶುರುವಾಗಿದೆ. ಬೇಡಿಕೆಯ ನಟಿಯಾಗಿರುವ ರಶ್ಮಿಕಾ ಈಗ ‘ಸಿಖಂದರ್’ ಚಿತ್ರಕ್ಕೆ 4 ಕೋಟಿ ರೂ. ಸಂಭಾವನೆ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.

    ತಮಿಳಿನ ಸೂಪರ್ ಹಿಟ್ ನಿರ್ದೇಶಕ ಮುರುಗದಾಸ್ ಜೊತೆ ಸಲ್ಮಾನ್ ಸಿನಿಮಾ ಮಾಡುವ ಬಗ್ಗೆ ಇತ್ತೀಚೆಗೆ ಅನೌನ್ಸ್ ಆಗಿತ್ತು. ‘ಸಿಖಂದರ್’ ಎಂಬ ಆ್ಯಕ್ಷನ್ ಕಥೆಗೆ ಸಲ್ಮಾನ್ ಖಾನ್ ಕೈಜೋಡಿಸಿದ್ದಾರೆ. ನಮ್ಮ ಸಿನಿಮಾಗೆ ರಶ್ಮಿಕಾನೇ ಸೂಕ್ತ ನಾಯಕಿ ಅಂತ ಶ್ರೀವಲ್ಲಿಗೆ ಮಣೆ ಹಾಕಿದ್ದಾರೆ.


    ಅಂದಹಾಗೆ, ಸಿನಿಮಾದ ಕಥೆ, ತಮ್ಮ ಪಾತ್ರಕ್ಕೆ ಕೊಟ್ಟಿರುವ ಪ್ರಾಮುಖ್ಯತೆ ನೋಡಿ ರಶ್ಮಿಕಾಗೂ ಇಷ್ಟವಾಗಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ನೀವೆಲ್ಲರೂ ನನ್ನ ಮುಂದಿನ ಚಿತ್ರದ ಬಗ್ಗೆ ಅಪ್‌ಡೇಟ್ ಅನ್ನು ಕೇಳುತ್ತಿದ್ರಿ. ಇದೀಗ ಸಿಖಂದರ್ ಚಿತ್ರತಂಡವನ್ನು ಸೇರಿಕೊಳ್ಳುತ್ತಿರುವ ಬಗ್ಗೆ ಖುಷಿಯಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ಸಂತಸ ವ್ಯಕ್ತಪಡಿಸಿದ್ದರು.