Tag: Anil Ravipudi

  • ‘ಭಗವಂತ ಕೇಸರಿ’ ನಿರ್ದೇಶಕನ ಸಿನಿಮಾಗೆ ಮೆಗಾಸ್ಟಾರ್ ಚಿರಂಜೀವಿ ಗ್ರೀನ್ ಸಿಗ್ನಲ್

    ‘ಭಗವಂತ ಕೇಸರಿ’ ನಿರ್ದೇಶಕನ ಸಿನಿಮಾಗೆ ಮೆಗಾಸ್ಟಾರ್ ಚಿರಂಜೀವಿ ಗ್ರೀನ್ ಸಿಗ್ನಲ್

    ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ (Vishwambhara) ಸಿನಿಮಾ ರಿಲೀಸ್‌ಗೂ ಮುನ್ನವೇ ಹೊಸ ಸಿನಿಮಾದ ಬಗ್ಗೆ ಬಿಗ್ ನ್ಯೂಸ್ ಸಿಕ್ಕಿದೆ. ‘ಭಗವಂತ ಕೇಸರಿ’ ಡೈರೆಕ್ಟರ್ ಅನಿಲ್ ರವಿಪುಡಿ (Anil Ravipudi) ಜೊತೆ ಸಿನಿಮಾ ಮಾಡಲು ಚಿರಂಜೀವಿ ಕೈಜೋಡಿಸಿದ್ದಾರೆ.

    ಸಿನಿಮಾ ಸಮಾರಂಭವೊಂದರಲ್ಲಿ ಮುಂದಿನ ಸಿನಿಮಾ ಬಗ್ಗೆ ಚಿರಂಜೀವಿ ಮಾತನಾಡಿ, ಅನಿಲ್ ರವಿಪುಡಿ ಜೊತೆ ಸಿನಿಮಾ ಮಾಡುತ್ತಿರೋದಾಗಿ ಅಧಿಕೃತವಾಗಿ ತಿಳಿಸಿದ್ದಾರೆ. ವಿಭಿನ್ನ ಕಥೆಯಲ್ಲಿ ಅವರು ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ಬಿಗ್‌ ಬಾಸ್‌’ ಖ್ಯಾತಿಯ ರಂಜಿತ್‌

    ಇತ್ತೀಚಿನ ದಿನಗಳಲ್ಲಿ ಚಿರಂಜೀವಿ ನಟಿಸುತ್ತಿರುವ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗುತ್ತಿದೆ. ಹಾಗಂತ ಫ್ಯಾನ್ಸ್‌ಗೆ ಅವರ ಮೇಲಿರುವ ಕ್ರೇಜ್ ಹಾಗೂ ಅವರಿಗಿರುವ ಬೇಡಿಕೆ ಕಮ್ಮಿಯಾಗಿಲ್ಲ. ಬಿಗ್ ಬಜೆಟ್ ಸಿನಿಮಾಗಳೇ ಅವರನ್ನು ಅರಸಿ ಬರುತ್ತಿವೆ. ಸದ್ಯ ಅವರು ಸ್ಟಾರ್ ನಿರ್ದೇಶಕ ಅನಿಲ್ ರವಿಪುಡಿ ಚಿತ್ರಕ್ಕೆ ಚಿರಂಜೀವಿ ಓಕೆ ಎಂದಿದ್ದಾರೆ.

    ಅಂದಹಾಗೆ, ಚಿರಂಜೀವಿ ನಟನೆಯ ಬಹುನಿರೀಕ್ಷಿತ ‘ವಿಶ್ವಂಭರ’ ಚಿತ್ರವು ಮೇ 9ರಂದು ರಿಲೀಸ್ ಆಗಲಿದೆ. ಸಿನಿಮಾದಲ್ಲಿ ತ್ರಿಷಾ ಕೃಷ್ಣನ್, ಮೀನಾಕ್ಷಿ, ಆಶಿಕಾ ರಂಗನಾಥ್, ರಾವ್ ರಮೇಶ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಇನ್ನೂ ಈ ಸಿನಿಮಾದ ಜೊತೆ ನಾನಿ ನಿರ್ಮಾಣದ ಸಿನಿಮಾ ಕೂಡ ಚಿರಂಜೀವಿ ಒಪ್ಪಿಕೊಂಡಿದ್ದಾರೆ.

  • ‘ಪೆಂಟಗನ್’ ಟ್ರೈಲರ್ ಮೆಚ್ಚಿಕೊಂಡ ಟಾಪ್ ಸೆಲೆಬ್ರಿಟಿಸ್

    ‘ಪೆಂಟಗನ್’ ಟ್ರೈಲರ್ ಮೆಚ್ಚಿಕೊಂಡ ಟಾಪ್ ಸೆಲೆಬ್ರಿಟಿಸ್

    ನಿರ್ದೇಶಕ ಗುರು ದೇಶಪಾಂಡೆ (Guru Deshpande) ಪ್ರಧಾನ ನೇತೃತ್ವದಲ್ಲಿ ಮೂಡಿ ಬಂದಿರುವ ಪೆಂಟಗನ್ (Pentagon) ಸಿನಿಮಾ ಟ್ರೈಲರ್ (Trailer) ರಿಲೀಸ್ ಆಗಿದ್ದು, ದಕ್ಷಿಣ ಭಾರತದ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಟ್ರೈಲರ್ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಟ್ರೈಲರ್ ಲಿಂಕ್ ಅನ್ನು ಸೋಷಿಯಲ್ ಮೀಡಿಯಾಗಳಲ್ಲೂ ಹಂಚಿಕೊಂಡಿದ್ದಾರೆ. ಅದರಲ್ಲೂ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ (Rishabh Shetty), ತೆಲುಗಿನ ಖ್ಯಾತ ನಿರ್ದೇಶಕ ಅನಿಲ್ ರವಿಪುಡಿ (Anil Ravipudi), ನಿರ್ದೇಶಕರಾದ ತರುಣ್ ಸುಧೀರ್, ಶಶಾಂಕ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

    ಐದು ಜನ ನಿರ್ದೇಶಕರು, ಐದು ಕಥೆಗಳು, ಐದು ಜನ ಬರಹಗಾರರು, ಐದು ಹೀರೋಗಳು ಹೀಗೆ ಐದೈದು ವಿಷಯಗಳನ್ನು ಪೆಂಟಗನ್ ಚಿತ್ರದಲ್ಲಿ ಹೇಳಲು ಹೊರಟಿದೆ ಚಿತ್ರತಂಡ. ಎಲ್ಲ ವಯಸ್ಸಿನವರಿಗೂ ಇಷ್ಟವಾಗುವಂತಹ ಕಥೆಗಳನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲಾಗಿದೆ ಎಂದಿದ್ದಾರೆ ಗುರು ದೇಶಪಾಂಡೆ.

    ಪ್ರತಿಭಾವಂತ ನಿರ್ದೇಶಕರುಗಳಾದ ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಹಾಗೂ ಮತ್ತೊಂದು ಕಥೆಗೆ ಗುರು ದೇಶಪಾಂಡೆ ಅವರೇ ನಿರ್ದೇಶನ ಮಾಡಿದ್ದಾರೆ. ಪ್ರಕಾಶ್ ಬೆಳವಾಡಿ, ಕಿಶೋರ್ (Kishore), ರವಿಶಂಕರ್ ಸೇರಿದಂತೆ ಹೆಸರಾಂತ ನಟರೇ ತಾರಾ ಬಳಗದಲ್ಲಿ ಇದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಜನರ ಗಮನ ಸೆಳೆದಿವೆ.

    ಇದು ಪ್ರಯೋಗಾತ್ಮಕ ಸಿನಿಮಾವಲ್ಲ, ಪಕ್ಕಾ ಕಮರ್ಷಿಯಲ್ ಚಿತ್ರ. ನೋಡುಗನಿಗೆ ಏನೆಲ್ಲ ಬೇಕಿದೆಯೋ ಎಲ್ಲವನ್ನೂ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಹೊಸ ಆಲೋಚನೆಯ ನಿರ್ದೇಶಕರು, ಬರಹಗಾರರು ಮತ್ತು ಹೊಸ ಕಲಾವಿದರು ಕೂಡ ಸಿನಿಮಾದ ಭಾಗವಾಗಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ಈ ಸಿನಿಮಾ ಹೊಸ ಅನುಭವನ್ನು ನೀಡಲಿದೆ ಎನ್ನುತ್ತಾರೆ ಗುರು ದೇಶಪಾಂಡೆ.

  • ನಂದಮುರಿ ಬಾಲಕೃಷ್ಣ ನಟನೆಯ NBK108ನೇ ಚಿತ್ರಕ್ಕೆ ಚಾಲನೆ

    ನಂದಮುರಿ ಬಾಲಕೃಷ್ಣ ನಟನೆಯ NBK108ನೇ ಚಿತ್ರಕ್ಕೆ ಚಾಲನೆ

    ಗಾಡ್ ಆಫ್ ಮಾಸ್ ಎಂದೇ ಕರೆಸಿಕೊಳ್ಳೋ ತೆಲುಗು ನಟ ನಂದಮುರಿ ಬಾಲಕೃಷ್ಣ 108ನೇ ಸಿನಿಮಾ ಇಂದು ಅದ್ದೂರಿಯಾಗಿ ಸೆಟ್ಟೇರಿದೆ. ಬಾಲಕೃಷ್ಣ 108ನೇ ಚಿತ್ರಕ್ಕೆ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಇಬ್ಬರ ಕ್ರೇಜಿ ಕಾಂಬಿನೇಶನ್ ನಲ್ಲಿ  ಮೂಡಿ ಬರ್ತಿರುವ ಪ್ಯಾನ್ ಇಂಡಿಯಾ ಚಿತ್ರಕ್ಕೆ ಶೈನ್ ಸ್ಕ್ರೀನ್ಸ್ ಬ್ಯಾನರ್ ನಡಿ ಸಾಹು ಗರಪಟಿ ಮತ್ತು ಹರೀಶ್ ಪೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.

    NBK108ನೇ ಚಿತ್ರಕ್ಕೆ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಕ್ಲ್ಯಾಪ್ ಮಾಡಿದ್ದು, ನಿರ್ಮಾಪಕ ದಿಲ್ ರಾಜು ಕ್ಯಾಮೆರಾ ಚಾಲನೆ, ಲೆಜೆಂಡರಿ ನಿರ್ದೇಶಕ ಕೆ.ರಾಘವೇಂದ್ರ ರಾವ್ ಮುಹೂರ್ತ ಸೀನ್ ಗೆ ಆಕ್ಷನ್ ಕಟ್ ಹೇಳುವ ಮೂಲಕ ಅದ್ದೂರಿಯಾಗಿ ಚಾಲನೆ ನೀಡಲಾಯಿತು.    ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್

    ಬಾಲಕೃಷ್ಣ ಅಭಿನಯದ 108ನೇ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿ ಈ ಚಿತ್ರ ಮೂಡಿ ಬರ್ತಿದೆ. ಸದ್ಯದಲ್ಲೇ ಟೈಟಲ್ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. ಇಂದಿನಿಂದಲೇ ಚಿತ್ರೀಕರಣ ಆರಂಭವಾಗಲಿದ್ದು, ಆಕ್ಷನ್ ಸೀನ್ ನೊಂದಿಗೆ ಚಿತ್ರೀಕರಣ ಆರಂಭವಾಗಲಿದೆ. ಆಕ್ಷನ್ ಸೀನ್ ಸೆರೆ ಹಿಡಿಯಲೆಂದೇ ರಾಜೀವನ್ ಅವರ ನೇತೃತ್ವದಲ್ಲಿ ದೊಡ್ಡ ಸೆಟ್ ಗಳನ್ನು ನಿರ್ಮಾಣ ಮಾಡಲಾಗಿದ್ದು, ಖ್ಯಾತ ಸಾಹಸ ನಿರ್ದೇಶಕ ವಿ. ವೆಂಕಟ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

    ಆಕ್ಷನ್ ಹಾಗೂ ಮಾಸ್ ಎಲಿಮೆಂಟ್ ಒಳಗೊಂಡ ಈ ಚಿತ್ರಕ್ಕೆ ಬಾಲಕೃಷ್ಣ ಅವರ ಮಾಸ್ ಇಮೇಜ್, ಸ್ಟಾರ್ ಡಂ ಎಲ್ಲವನ್ನು ಗಮನದಲ್ಲಿಟ್ಟುಕೊಂಡೇ ಅನಿಲ್ ರವಿಪುಡಿ ಪವರ್ ಫುಲ್ ಕಥೆ ಹೆಣೆದಿದ್ದಾರೆ. ಚಿತ್ರದಲ್ಲಿ ಕನ್ನಡದ ನಟಿ ಶ್ರೀಲೀಲಾ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಎಸ್. ತಮನ್ ಸಂಗೀತ ನಿರ್ದೇಶನವಿದೆ.  ಬಾಲಕೃಷ್ಣ, ಅನಿಲ್ ರವಿಪುಡಿ, ಎಸ್. ತಮನ್ ಈ ಮೂರು ಕಾಂಬಿನೇಶನ್ ಒಂದಾಗಿರೋ ಈ ಚಿತ್ರದ ಮೇಲೆ ಬಾಲಯ್ಯ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿ.ರಾಮ್ ಪ್ರಸಾದ್ ಕ್ಯಾಮೆರಾ ನಿರ್ದೇಶನ, ತಮ್ಮಿ ರಾಜು ಸಂಕಲನ ಚಿತ್ರಕ್ಕಿದೆ. ಸದ್ಯದಲೇ ಸಿನಿಮಾ ಟೈಟಲ್, ತಾರಾಬಳಗ ಎಲ್ಲದರ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

    Live Tv
    [brid partner=56869869 player=32851 video=960834 autoplay=true]