Tag: anil ravi pudi

  • ಸಕ್ಸಸ್‌ಫುಲ್ ನಿರ್ದೇಶಕನಿಗೆ ಸ್ಕ್ರಿಪ್ಟ್ ಬದಲಿಸಲು ಬಾಲಯ್ಯ ಸೂಚನೆ

    ಸಕ್ಸಸ್‌ಫುಲ್ ನಿರ್ದೇಶಕನಿಗೆ ಸ್ಕ್ರಿಪ್ಟ್ ಬದಲಿಸಲು ಬಾಲಯ್ಯ ಸೂಚನೆ

    ಟಾಲಿವುಡ್‌ನ ಲೆಜೆಂಡ್ ನಂದಮೂರಿ ಬಾಲಕೃಷ್ಣ ʻಅಖಂಡʼ ಸೂಪರ್ ಸಕ್ಸಸ್ ನಂತರ ಸಾಕಷ್ಟು ಆಫರ್‌ಗಳು ಅರಸಿ ಬರುತ್ತಿವೆ. ಇದೀಗ ತೆಲುಗು ಚಿತ್ರರಂಗದ ಹಿಟ್ ನಿರ್ದೇಶಕ ಅನಿಲ್ ರವಿಪುಡಿ ಬಾಲಯ್ಯ ಅವರ 107ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಆದರೆ ಈಗ ತಮ್ಮ ಮುಂಬರುವ ಚಿತ್ರಕ್ಕೆ ಸ್ಕ್ರಿಪ್ಟ್ ಬದಲಿಸಲು ಹೇಳಿದ್ದಾರೆ.‌

    `ಅಖಂಡ’ ಸಿನಿಮಾ ಬಾಲಯ್ಯ ಅವರ ಕೆರಿಯರ್‌ಗೆ ಬಿಗ್ ಬ್ರೇಕ್ ಕೊಟ್ಟ ಚಿತ್ರವಾಗಿದ್ದು, ಈಗ ಈ ಚಿತ್ರದ ಸಕ್ಸಸ್ ನಂತರ ಸಾಕಷ್ಟು ಸಿನಿಮಾಗಳಿಗೆ ಬಾಲಯ್ಯ ಅವರೇ ಬೇಕು ಅಂತಾ ಆಫರ್‌ಗಳು ಅರಸಿ ಬರುತ್ತಿವೆ. ಕಥೆಯ ಆಯ್ಕೆಯಲ್ಲೂ ಸಖತ್ ಚ್ಯೂಸಿಯಾಗಿರುವ ಬಾಲಯ್ಯ ಈಗ ತಮ್ಮ ಮುಂಬರುವ ಚಿತ್ರದ ನಿರ್ದೇಶಕ ಅನಿಲ್ ರವಿಪುಡಿ ಅವರಿಗೆ ಕಥೆಯಲ್ಲಿ ಬದಲಾವಣೆ ಮಾಡುವಂತೆ ಹೇಳಿದ್ದಾರೆ.

    ಬಾಲಯ್ಯ ಮತ್ತು ಅನಿಲ್ ರವಿಪುಡಿ ಕಾಂಬಿನೇಷನ್‌ನಲ್ಲಿ ಹೊಸ ಚಿತ್ರ ಬರುತ್ತಿದ್ದು, ಇವರಿಬ್ಬರ ಕಾಂಬಿನೇಷನ್ ಬಗ್ಗೆ ಟಾಲಿವುಡ್‌ನಲ್ಲಿ ಈಗಾಗಲೇ ಟಾಕ್ ಶುರುವಾಗಿದೆ. ಅನಿಲ್ ರವಿಪುಡಿ ನಿರ್ದೇಶಿಸಿದ ಕಳೆದ ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ಈ ಕಾರಣಕ್ಕೆ ಈ ಕಾಂಬಿನೇಷನ್ ಬಗ್ಗೆ ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ. ಇಷ್ಟರ ಮಧ್ಯೆ ಅನಿಲ್‌ಗೆ ಬಾಲಕೃಷ್ಣ ಸ್ಕ್ರಿಪ್ಟ್ ಬದಲಾಯಿಸುವಂತೆ ಸೂಚನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ

    ಇತ್ತೀಚೆಗೆ ಬಾಲಯ್ಯ `ಎಫ್ 3′ ಸಿನಿಮಾ ಸ್ಪೆಷಲ್ ಶೋಗೆ ಹೋಗಿದ್ದರು. ಈ ವೇಳೆ ಸಿನಿಮಾ ನೋಡಿ ಅನಿಲ್ ರವಿಪುಡಿಗೆ ಸ್ಕ್ರಿಪ್ಟ್ ಚೇಂಜ್ ಮಾಡಿ ಎಂದಿದ್ದಾರಂತೆ. ನಿರ್ದೇಶಕ ಅನಿಲ್ ಕಾಮಿಡಿ ಸೆನ್ಸ್‌ಗೆ ಮರುಳಾಗಿರುವ ಬಾಲಯ್ಯ ಹಾಸ್ಯ ಸಿನಿಮಾ ಮಾಡೋಣ ಎಂದಿದ್ದಾರಂತೆ. ಲೆಜೆಂಡ್ ಆಕ್ಟರ್ ಬಾಲಯ್ಯ ಕೂಡ ಕಾಮಿಡಿ ಚಿತ್ರ ಮಾಡಲು ಮನಸ್ಸು ಮಾಡಿದ್ದಾರೆ. ಹೊಸ ಬಗೆಯ ಪಾತ್ರದಲ್ಲಿ ಕಾಣಿಕೊಳ್ಳಲು ನಟ ಬಾಲಯ್ಯ ಸಜ್ಜಾಗಿದ್ದಾರೆ.