Tag: Anil Chikkamadu

  • ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಸಹೋದರಿ JDS ಸೇರ್ಪಡೆ

    ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಸಹೋದರಿ JDS ಸೇರ್ಪಡೆ

    ಮೈಸೂರು: ಹೆಚ್.ಡಿ ಕೋಟೆ ತಾಲೂಕಿನ ಕಾಂಗ್ರೆಸ್ (Congress) ಶಾಸಕ ಅನಿಲ್ ಚಿಕ್ಕಮಾದು (Anil Chikkamadu) ಅವರ ತಂಗಿ ರಂಜಿತಾ ಎಸ್‌. ಚಿಕ್ಕಮಾದು  (Ranjita S Chikkamadu) ಇಂದು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ.

    ಬೆಂಗಳೂರಿನ ಜೆಡಿಎಸ್ (JDS) ಕಚೇರಿಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಇದನ್ನೂ ಓದಿ: ನಕಲಿ ಡಾಕ್ಟರ್ ಎಡವಟ್ಟು – ಜ್ವರ ಎಂದು ಹೋದ ಮಹಿಳೆ ಕಾಲಿಗೆ ಗಂಡಾಂತರ

    ರಂಜಿತಾ ಮಾಜಿ ಶಾಸಕ ದಿವಂಗತ ಚಿಕ್ಕಮಾದು ಅವರ ಪುತ್ರಿ. ಚಿಕ್ಕಮಾದು ಅವರು ಈ ಹಿಂದೆ ಜೆಡಿಎಸ್‌ನಲ್ಲಿದ್ದರು. ನಂತರ ಪುತ್ರ ಅನಿಲ್ ಚಿಕ್ಕಮಾದು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾದರು. ಆದರೀಗ ಅಣ್ಣ ಕಾಂಗ್ರೆಸ್‌ನಲ್ಲಿದ್ದರೆ ತಂಗಿ ರಂಜಿತಾ ಅಭಿಮುಖವಾಗಿ ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಕಾಮುಕ ಶಿಕ್ಷಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಧರ್ಮದೇಟು

    ಕೆಲ ದಿನಗಳ ಹಿಂದೆಯಷ್ಟೇ ಹುಣಸೂರು ಶಾಸಕ ಹೆಚ್.ಪಿ ಮಂಜುನಾಥ್ (HP Manjunath) ಅವರೊಂದಿಗೆ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಂಜಿತಾ ಇದೀಗ ಜಿ.ಟಿ.ದೇವೇಗೌಡ ಅವರ ಪುತ್ರ ಜಿ.ಡಿ ಹರೀಶ್‌ಗೌಡ (GD Harish Gowda) ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಬೆಂಬಲ ಹರೀಶ್‌ಗೌಡ ಅವರಿಗೆ ಎಂದು ಘೋಷಣೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮನೆ ಎಂದ್ಮೇಲೆ ಸಣ್ಣಪುಟ್ಟ ವ್ಯತ್ಯಾಸ ಇದ್ದೆ ಇರುತ್ತೆ: ಅನಿಲ್ ಚಿಕ್ಕಮಾದು

    ಮನೆ ಎಂದ್ಮೇಲೆ ಸಣ್ಣಪುಟ್ಟ ವ್ಯತ್ಯಾಸ ಇದ್ದೆ ಇರುತ್ತೆ: ಅನಿಲ್ ಚಿಕ್ಕಮಾದು

    ಮೈಸೂರು: ಒಂದು ಮನೆ ಎಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸ ಇದ್ದೇ ಇರುತ್ತದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಹೆಸರು ರಾಜೀನಾಮೆಯಲ್ಲಿ ಏಕೆ ಬಂತು ಗೊತ್ತಿಲ್ಲ. ನನಗೆ ಕೆಲವು ಬಾರಿ ಆಶ್ಚರ್ಯವಾಗುತ್ತದೆ. ನಾನು ಮೊನ್ನೆಯಿಂದ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕಂದಾಯ ಸಭೆ ನಡೆಸಿದೆ. ಮಾಧ್ಯಮದಲ್ಲೂ ನನ್ನ ರಾಜೀನಾಮೆ ಬಗ್ಗೆ ತೋರಿಸುತ್ತಿದ್ದಾರೆ. ನಾನು ರಾಜೀನಾಮೆ ನೀಡುವುದಿಲ್ಲ ಎಂದು ಈಗಾಗಲೇ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದೇನೆ. ಕ್ಷೇತ್ರದ ಮತದಾರರು ನನ್ನ ಮೇಲೆ ನಂಬಿಕೆಯಿಟ್ಟು ಆಶೀರ್ವಾದ ಮಾಡಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಂಡು ನಾನು ಕ್ಷೇತ್ರದಲ್ಲಿ ಇದ್ದು ಕೆಲಸ ಮಾಡುತ್ತೇನೆ ಎಂದರು.

    ಅವರವರ ವೈಯಕ್ತಿಕ ವಿಚಾರವಾಗಿ ರಾಜೀನಾಮೆ ಕೊಟ್ಟಿರಬಹುದು. ಕೆಲವರು ಬಿಟ್ಟರೆ ಸಿದ್ದರಾಮಯ್ಯ ಆಪ್ತರು ರಾಜೀನಾಮೆ ನೀಡಿಲ್ಲ. ಒಂದೂವರೆ ವರ್ಷದಿಂದ ನನಗೆ ಯಾವುದೇ ಬಿಜೆಪಿ ನಾಯಕರು ಸಂಪರ್ಕಿಸಿಲ್ಲ. ಮನೆ ಎಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸ ಬಂದೆ ಬರುತ್ತೆ. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಆಗಿರಬಹುದು, ಕಾಂಗ್ರೆಸ್ ಆಗಿರಬಹುದು 5 ವರ್ಷ ಸುಭದ್ರವಾಗಿ ಸರ್ಕಾರ ನಡೆಸುತ್ತೇವೆ ಎಂದು ತೀರ್ಮಾನಕ್ಕೆ ಬಂದಿದ್ದರು. ಏನೇ ಸಮಸ್ಯೆ ಇದ್ದರೂ ಹಿರಿಯ ನಾಯಕರ ಜೊತೆ ಮಾತನಾಡಬಹುದಿತ್ತು ಎಂದರು.

    ಕ್ಷೇತ್ರದ ಜನತೆ ಒಂದೊಂದು ನಂಬಿಕೆಯಿಟ್ಟು, ನಮ್ಮ ತಂದೆ ಮಾಡಿದ ಕೆಲಸ, ನಮ್ಮ ಎಂಪಿ ಮಾಡಿದ ಕೆಲಸ ಕಾರ್ಯ ಮೆಚ್ಚಿ ವಿಧಾನಸೌಧ ಮಟ್ಟಿಲೇರುವುದ್ದೇನೆ. ಹೆಚ್.ಡಿ ಕೋಟೆ ಜನತೆ ನನ್ನ ಮೇಲೆ ಭರವಸೆ ಇಟ್ಟುಕೊಂಡು ಒಂದು ಹೋರಾಟದ ಮೂಲಕ ಗೆಲ್ಲಿಸಿದ್ದಾರೆ. ಇಂದಿನ ರಾಜಕಾರಣದಲ್ಲಿ ಒಂದೊಂದು ಮತ ಕೂಡ ಬಹಳ ಮುಖ್ಯವಾದದ್ದು, ನಾವು ಅವರಿಗೂ ಎಂದಿಗೂ ಋಣಿಯಾಗಿರಬೇಕು. ನಾನು ಬಿಜೆಪಿಗೆ ಹೋಗದೇ ಕಾಂಗ್ರೆಸ್‍ನಲ್ಲಿಯೇ ಇದ್ದು ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುತ್ತೇನೆ ಎಂದು ಹೇಳಿದರು.

    ಬಿಜೆಪಿ ಅವರು ಇದುವರೆಗೂ ಕರೆ ಮಾಡಿಲ್ಲ. ಅವರು ಕರೆ ಮಾಡಿದರೆ, ನಾವು ಪಕ್ಷದಿಂದ ಗೆದ್ದಿದ್ದೇವೆ. ಪಕ್ಷದಲ್ಲಿಯೇ ಇರುತ್ತೇನೆ ಎಂದು ಹೇಳುವುದಾಗಿ ಅವರು ತಿಳಿಸಿದರು.