Tag: Anika

  • ಧನುಷ್‌ಗೆ ಜೋಡಿಯಾದ ‘ಬುಟ್ಟ ಬೊಮ್ಮ’ ಖ್ಯಾತಿಯ ಅನಿಕಾ

    ಧನುಷ್‌ಗೆ ಜೋಡಿಯಾದ ‘ಬುಟ್ಟ ಬೊಮ್ಮ’ ಖ್ಯಾತಿಯ ಅನಿಕಾ

    ಕಾಲಿವುಡ್ (Kollywood) ನಟ ಧನುಷ್ (Dhanush) ಅವರು ಐಶ್ವರ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಹೆಚ್ಚುಚ್ಚು ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸೌತ್, ಬಾಲಿವುಡ್, ಹಾಲಿವುಡ್ ಅಂತಾ ಧನುಷ್ ಬ್ಯುಸಿಯಿದ್ದಾರೆ. ಇತ್ತೀಚಿಗೆ ಧನುಷ್ ನಟನೆಯ ‘D 50’ ಸಿನಿಮಾ ಅನೌನ್ಸ್ ಆಗಿತ್ತು. ಈ ಬಹುನಿರೀಕ್ಷಿತ ಸಿನಿಮಾಗೆ ಧನುಷ್ ಜೊತೆ ರೊಮ್ಯಾನ್ಸ್ ಮಾಡಲು ನಾಯಕಿ ಫೈನಲ್ ಆಗಿದ್ದಾರೆ.

    ದಕ್ಷಿಣ ಭಾರತದ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ಧನುಷ್ ಇದೀಗ ರೊಮ್ಯಾಂಟಿಕ್ ಸಿನಿಮಾಗಳಿಗೆ ಗುಡ್ ಬೈ ಹೇಳಿ, ಆ್ಯಕ್ಷನ್ ಮತ್ತು ಥ್ರಿಲ್ಲರ್ ಸಸ್ಪೆನ್ಸ್ ಸಿನಿಮಾಗಳಿಗೆ ಪಾಮುಖ್ಯತೆ ನೀಡ್ತಿದ್ದಾರೆ. ಇತ್ತೀಚಿಗೆ ‘D 50’ ಸಿನಿಮಾದ ಪೋಸ್ಟರ್ ಲುಕ್‌ನಲ್ಲಿ ಮೊಟ್ಟೆ ಅವತಾರದಲ್ಲಿ ಧನುಷ್ ಪೋಸ್ ಕೊಟ್ಟಿದ್ದರು. ಈಗ ಈ ಸಿನಿಮಾಗೆ ನಾಯಕಿ ಸಿಕ್ಕಿದ್ದಾರೆ. ಇದನ್ನೂ ಓದಿ:ವೆಕೇಷನ್ ಮೂಡ್‌ನಲ್ಲಿ ಅಮೂಲ್ಯ ಫ್ಯಾಮಿಲಿ- ಗೋಲ್ಡನ್‌ ಕ್ವೀನ್‌ ಜೊತೆ ವೈಷ್ಣವಿ

    ‘ಬುಟ್ಟ ಬೊಮ್ಮ’ (Butta Bomma) ಚಿತ್ರದ ಮೂಲಕ ಪರಿಪೂರ್ಣ ನಾಯಕಿಯಾಗಿ ಟಾಲಿವುಡ್‌ನಲ್ಲಿ ಹೊರಹೊಮ್ಮಿದ ನಟಿ ಅನಿಖಾ ಸುರೇಂದ್ರನ್(Anikha Surendran), ಈ ಹಿಂದೆ ಯೆನೈ ಅರಿಂದಾಲ್ ಮತ್ತು ವಿಶ್ವಾಸಂ ಚಿತ್ರಗಳ ಪಾತ್ರಗಳಲ್ಲಿ ಅಭಿನಯಿಸುವ ಮುಖೇನ ಇದೀಗ ಸಿನಿಪ್ರಿಯರಿಗೆ ಮತ್ತಷ್ಟು ಚಿರಪರಿಚಿತರಾದರು. ಸದ್ಯ ದುಲ್ಕರ್ ಸಲ್ಮಾನ್ ಅವರ ‘ಕಿಂಗ್ ಆಫ್ ಕೋಥಾ’ದಲ್ಲಿ ಅಭಿನಯಿಸಿದ್ದು, ಈ ಚಿತ್ರ ಓಣಂ ಹಬ್ಬದಂದು ಬಿಡುಗಡೆಯಾಗಲು ಸಜ್ಜಾಗಿದೆ. ಇದನ್ನೂ ಓದಿ:ವೆಕೇಷನ್ ಮೂಡ್‌ನಲ್ಲಿ ಅಮೂಲ್ಯ ಫ್ಯಾಮಿಲಿ- ಗೋಲ್ಡನ್‌ ಕ್ವೀನ್‌ ಜೊತೆ ವೈಷ್ಣವಿ

    ಈಗ ಧನುಷ್‌ಗೆ ನಾಯಕಿಯಾಗುವ ಮೂಲಕ ಅನಿಕಾ, ಸಿನಿಮಾ ಬಗೆಗಿನ ನಿರೀಕ್ಷೆ ಹೆಚ್ಚಾಗಿದೆ. ಸಿನಿಮಾದಲ್ಲಿ ಅನಿಕಾ ಪಾತ್ರಕ್ಕೆ ಪ್ರಾಮುಖ್ಯತೆಯಿದೆ. ಭಿನ್ನ ಪಾತ್ರದ ಮೂಲಕ ನಟಿ ಅನಿಕಾ ತೆರೆಯ ಮೇಲೆ ಮಿಂಚಲಿದ್ದಾರೆ. ಧನುಷ್-ಅನಿಕಾ ಇಬ್ಬರ ಕಾಂಬೋ ಹೇಗೆ ಮೂಡಿ ಬರಲಿದೆ ಎಂಬುದರ ಬಗ್ಗೆ ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ. ಅನಿಕಾನೇ ನಾಯಕಿ ಎಂಬುದರ ಬಗ್ಗೆ ಸಿನಿಮಾತಂಡ ಯಾವುದೇ ಅಪ್‌ಡೇಟ್ ನೀಡಿಲ್ಲ. ಹೆಚ್ಚಿನ ಮಾಹಿತಿಗೆ ಮುಂದಿನ ದಿನಗಳವರೆಗೂ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್ – ಬಿಗ್‍ಬಾಸ್ ಸ್ಪರ್ಧಿ ಆದಂ ಪಾಷಾ ಎನ್‍ಸಿಬಿ ವಶಕ್ಕೆ

    ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್ – ಬಿಗ್‍ಬಾಸ್ ಸ್ಪರ್ಧಿ ಆದಂ ಪಾಷಾ ಎನ್‍ಸಿಬಿ ವಶಕ್ಕೆ

    – ಮುಳುವಾಯ್ತಾ ಅನಿಕಾ ಜೊತೆಗಿನ ನಂಟು?

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‍ಬಾಸ್ ಸ್ಪರ್ಧಿ ಆದಂ ಪಾಷಾ ಅವರನ್ನ ಎನ್‍ಸಿಬಿ (ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಬೆಂಗಳೂರು ವಿಭಾಗದ ಎನ್‍ಸಿಬಿ ಅಧಿಕಾರಿಗಳು ಆದಂ ಪಾಷಾ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಡ್ರಗ್ ಪೆಡ್ಲರ್ ಅನಿಕಾಳಿದಂದ ಆದಂ ಡ್ರಗ್ಸ್ ಖರೀದಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಆದಂ ಪಾಷಾಗೆ ಎನ್‍ಸಿಬಿ ಸಮನ್ಸ್ ನೀಡಿತ್ತು. ಈ ಹಿಂದೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಆದಂ ಪಾಷಾ, ಅನಿಕಾ ತಮಗೆ ಪರಿಚಯ ಎಂದು ಹೇಳಿಕೊಂಡಿದ್ದರು. ಆಗಸ್ಟ್ 19ರಂದು ಎನ್.ಸಿ.ಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದ ಅನಿಕಾ ಜೊತೆಗೆ ಆದಂ ಪಾಷಾಗೆ ಸಂಪರ್ಕವಿದ್ದು ಡ್ರಗ್ಸ್ ಖರೀದಿಸಿರುವ ಬಗ್ಗೆ ಪಕ್ಕಾ ಮಾಹಿತಿಗಳನ್ನ ಆಧರಿಸಿದ ಎನ್‍ಸಿಬಿ ಪಾಷಾರನ್ನ ವಶಕ್ಕೆ ಪಡೆದಿದೆ. ಇದನ್ನೂ ಓದಿ:  ಸ್ಯಾಂಡಲ್‍ವುಡ್ ಡ್ರಗ್ಸ್‌ಗೆ ಕೇರಳ ರಾಜಕೀಯ ನಂಟು

    ಅನಿಕಾ ಬಂಧನದ ಬಳಿಕ ಆದಂ ಪಾಷಾಗೆ ಅನಿಕಾ ಜೊತೆ ನಂಟಿದ್ದ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಈ ಬಗ್ಗೆ ಮಾತನಾಡಿದ್ದ ಪಾಷಾ ನನಗೆ ಅನಿಕಾ ಪರಿಚಯವಿರುವುದು ನಿಜ. ಆದ್ರೆ ಆಕೆ ಡ್ರಗ್ ಡೀಲರ್ ಎಂಬುದು ಗೊತ್ತಿರಲಿಲ್ಲ ಎಂದಿದ್ದರು. ಎನ್‍ಸಿಬಿ ಮುಂದೆ ಹಾಜಾರಾಗುವಂತೆ ಪಾಷಾಗೆ ನೋಟಿಸ್ ಸಹ ನೀಡಲಾಗಿತ್ತು. ಅದರಂತೆ ಇಂದು ಎನ್.ಸಿ.ಬಿ ಮುಂದೆ ಹಾಜರಾಗಿದ್ದ ಆದಂ ಪಾಷಾ ವಿಚಾರಣೆ ನಡೆಸಿದ ಅಧಿಕಾರಿಗಳು ಅಂತಿಮವಾಗಿ ಪಾಶಾರನ್ನ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಗ್ರಾಹಕರಲ್ಲಿ ನಟರಿಗಿಂತ ನಟಿಯರೇ ಹೆಚ್ಚು – ಬಂಧಿತ ಡೀಲರ್ ಬಿಚ್ಚಿಟ್ಟ ಸ್ಫೋಟಕ ಸತ್ಯ

    ಅನಿಕಾ ಜೊತೆ ಆದಂ ನಂಟು: ಒಂದು ವರ್ಷದ ಹಿಂದೆ ಕಮ್ಮನಹಳ್ಳಿಯ ಕ್ಲಬ್ ನಲ್ಲಿ ಅನಿಕಾ ಪರಿಚಯ ಆಗಿದ್ದಳು. ನಾನು ಡ್ಯಾನ್ಸರ್ ಆಗಿದ್ದರಿಂದ ಡ್ಯಾನ್ಸ್ ಕ್ಲಬ್ ಹೋದಾಗ ಅನಿಕಾ ಸಿಕ್ಕಿದ್ದಳು ಆಗಿನಿಂದ ಪರಿಚಯ ಆಗಿದ್ದಳು. ಆಫ್ರಿಕನ್ ಮ್ಯೂಸಿಕ್ ಕ್ಲಬ್‍ಗೆ ಹೋದಾಗ ನನಗೆ ಅನಿಕಾ ಪರಿಚಯವಾಗಿದ್ದಳು. ಆದರೆ ಅವಳು ಆಗ ನಿಜ ಹೆಸರು ಹೇಳಿರಲಿಲ್ಲ. ಅವಳ ಹೆಸರನ್ನು ನಿಕಿ ಎಂದು ಹೇಳಿದ್ದಳು. ಎಲ್ಲರೂ ಕ್ಲಬ್‍ಗೆ ಬರುವುದು ಮಾಮೂಲಿ ಆಗಿದ್ದರಿಂದ ನಾನು ತಲೆಕೆಡೆಸಿಕೊಳ್ಳಲಿಲ್ಲ. ನೀವು ಏನು ಮಾಡುತ್ತೀರಿ ಏನು ಎತ್ತ ಏನನ್ನೂ ಕೇಳಲಿಲ್ಲ ಎಂದು ಆದಂ ಹೇಳಿಕೊಂಡಿದ್ದರು. ಇದನ್ನೂ ಓದಿ:  ವಿದ್ಯಾರ್ಥಿನಿಯಾಗಿದ್ದಾಗಲೇ ಡ್ರಗ್ ಸಪ್ಲೈ – ಅಧಿಕಾರಿಗಳು ಬಂಧಿಸಿದಾಗಲೂ ನಶೆಯಲ್ಲಿದ್ದ ಅನಿಕಾ

    ಒಂದೊಂದು ಬಾರಿ ಕ್ಯಾಬ್‍ಗೂ ಹಣವಿಲ್ಲದಿದ್ದಾಗ ಅನಿಕಾ ನಮಗೆ ಹಣ ನೀಡಿ ಕಳುಹಿಸುತ್ತಿದ್ದಳು. ನಾನು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ನಾನು ಯಾವುದಕ್ಕೂ ಹೆದರಿಕೊಳ್ಳುವುದಿಲ್ಲ. ಸಿನಿಮಾ ಸೆಲೆಬ್ರಿಟಿಗಳ ಜೊತೆ ನನಗೆ ನಂಟಿಲ್ಲ. ಹಾಗಾಗಿ ಯಾರು ಅನಿಕಾ ಜೊತೆ ಬರುತ್ತಿದ್ದರು ಎಂಬುದು ಗೊತ್ತಿಲ್ಲ. ನಾನು ಕ್ಲಬ್ ನಲ್ಲಿ ಸಾಲ್ಸಾ ಡ್ಯಾನ್ಸ್ ಮಾಡಲು ಹೋಗುತ್ತಿದ್ದೆ ಎಂದು ತಿಳಿಸಿದ್ದರು.

    ಅವಳೊಂದಿಗೆ ಯಾರು ಇರುತ್ತಿದ್ದರು ಎಂದು ಸಹ ನಾನು ನೋಡಿಲ್ಲ. ಕ್ಲಬ್ ನಲ್ಲಿ ಡ್ಯಾನ್ಸ್ ಮಾಡಿ ಬರುತ್ತಿದ್ದೆ ಅಷ್ಟೆ. ನಾನ್ಯಾಕೆ ಬೇರೆಯವರನ್ನು ನೋಡಬೇಕು. ನಟಿ ನಯನ ಮನೆಯಲ್ಲಿ ಕೊನೆಯ ಸೆಲೆಬ್ರೆಟಿ ಪಾರ್ಟಿಯಾಗಿತ್ತು. ನಂತರ ಯಾವುದೇ ಪಾರ್ಟಿಗೆ ನಾನು ಹೋಗಿಲ್ಲ ಎಂದು ಹೇಳುವ ಮೂಲಕ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳನ್ನ ತಳ್ಳಿ ಹಾಕಿದ್ದರು.

    ಯಾರು ಈ ಲೇಡಿ ಡ್ರಗ್ ಡೀಲರ್ ಅನಿಕಾ?: ಅನಿಕಾ ಮೂರು ನಕಲಿ ನೇಮ್‍ಗಳನ್ನು ಇಟ್ಟುಕೊಂಡಿದ್ದಳು. ಅನಿಕಾ ಡಿ, ಅನಿ ಮತ್ತು ಬಿಮನಿ ಎಂಬ ಮೂರು ಹೆಸರಿನಿಂದ ಪರಿಚಯಿಸಿಕೊಂಡು ಡ್ರಗ್ ಡೀಲ್ ಮಾಡುತ್ತಿದ್ದಳು. ಈಕೆ ಸಾಮಾಜಿಕ ಜಾಲತಾಣದಲ್ಲಿ ಬಿಮನಿ ಎಂಬ ಹೆಸರು ಬಳಸುತ್ತಿದ್ದಳು ಎಂಬ ಮಾಹಿತಿ ಲಭಿಸಿದೆ. ಜೊತೆಗೆ ಈಕೆ ತಮಿಳುನಾಡಿನವಳಾಗಿದ್ದು, 24 ವರ್ಷ ವಯಸ್ಸಿನವಳಾಗಿದ್ದಾಳೆ.

    ಅನಿಕಾ ತಮಿಳುನಾಡಿನ ಸೇಲಂ ಸಮೀಪದ ಯರ್ಕಾಡ್ ಮೂಲದವಳು. ಅನಿಕಾ ತಂದೆ ದಿನೇಶ್‍ಗೆ ಮೂವರು ಮಕ್ಕಳಿದ್ದು, ಅನಿಕಾಳೇ ದೊಡ್ಡವಳು. ಅನಿಕಾಗೆ ಒಬ್ಬಳು ತಂಗಿ, ಒಬ್ಬ ತಮ್ಮ ಇದ್ದು ತಮಿಳುನಾಡಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅನಿಕಾ ಯರ್ಕಾಡ್‍ನ ಶೆವ್ರಾಯ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಹೋಟೆಲ್ ಮ್ಯಾನೇಜ್‍ಮೆಂಟ್ ಡಿಗ್ರಿಯ ಎರಡನೇ ವರ್ಷದಲ್ಲಿ ಫೇಲ್ ಆಗಿ ವಿದ್ಯಾಭ್ಯಾಸವನ್ನು ಬಿಟ್ಟಿದ್ದಾಳೆ ಎನ್ನಲಾಗಿದೆ.

    ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಅನಿಕಾ, ಕೆಲಸ ಸಿಗದೇ ಡ್ರಗ್ ಜಾಲ ಸೇರಿಕೊಂಡಳು. ನಗರದ ದೊಡ್ಡಗುಬ್ಬಿಯಲ್ಲಿ ಐಶ್ವರ್ಯ ನಿಲಯದಲ್ಲಿ ವಾಸವಾಗಿದ್ದು, ಇಲ್ಲಿಂದಲೇ ಡ್ರಗ್ ದಂಧೆ ನಡೆಸುತ್ತಿದ್ದಳು. ಮುಂಬೈನ ಡ್ರಗ್ ಪೆಡ್ಲರ್ ಕೊಟ್ಟ ಮಾಹಿತಿ ಮೇರೆಗೆ ಈಕೆ ಮನೆಯ ಮೇಲೆ ದಾಳಿ ಮಾಡಿದಾಗ, ಎಂಡಿಎಂಎ ಎಂಬ ಮಾದಕ ವಸ್ತು ಸಮೇತ ಸಿಕ್ಕಿಬಿದ್ದು ಅರೆಸ್ಟ್ ಆಗಿದ್ದಾಳೆ.

     

  • ಡ್ರಗ್ ಡೀಲರ್ ಅನಿಕಾಳಿಗಿವೆ ಮೂರು ನೇಮ್ – ಫುಲ್ ಡಿಟೇಲ್ಸ್ ಕಲೆಹಾಕಿದ ಎನ್‍ಸಿಬಿ

    ಡ್ರಗ್ ಡೀಲರ್ ಅನಿಕಾಳಿಗಿವೆ ಮೂರು ನೇಮ್ – ಫುಲ್ ಡಿಟೇಲ್ಸ್ ಕಲೆಹಾಕಿದ ಎನ್‍ಸಿಬಿ

    – ತಮಿಳುನಾಡು ಮೂಲದ ಅನಿಕಾ

    ಬೆಂಗಳೂರು: ಡ್ರಗ್ ಡೀಲರ್ ಅನಿಕಾ ಬಗ್ಗೆ ಎನ್‍ಸಿಬಿ ಅಧಿಕಾರಿಗಳು ಫುಲ್ ಡಿಟೇಲ್ಸ್ ಕಲೆಹಾಕಿದ್ದು, ಆಕೆ ತಮಿಳುನಾಡು ಮೂಲದವಳು ಎಂದು ತಿಳಿದು ಬಂದಿದೆ.

    ಕಳೆದ ಗುರುವಾರ ಎನ್‍ಸಿಬಿ ಅಧಿಕಾರಿಗಳು ಹೈಟೆಕ್ ಡ್ರಗ್ ದಂಧೆ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದರು. ಇವರು ದೊಡ್ಡ ಶ್ರೀಮಂತರು, ಸಿನಿಮಾ ನಟ-ನಟಿಯರಿಗೆ ಡ್ರಗ್ ಸಪ್ಲೇ ಮಾಡುತ್ತಿದ್ದರು ಎಂಬ ಮಾಹಿತಿ ಹೊರಬಂದಿತ್ತು. ಈಗ ಅದರಲ್ಲಿ ಬಂಧಿತಳಾದ ಲೇಡಿ ಕಿಂಗ್‍ಪಿನ್ ಅನಿಕಾಳ ಪೂರ್ತಿ ಮಾಹಿತಿಯನ್ನು ಎನ್‍ಸಿಬಿ ಅಧಿಕಾರಿಗಳು ಕಲೆಹಾಕಿದ್ದಾರೆ.

    ಲೇಡಿ ಡ್ರಗ್ ಡೀಲರ್ ನಿಜವಾದ ಹೆಸರು ಅನಿಕಾ, ಆದರೆ ಇವಳು ಮೂರು ನಕಲಿ ನೇಮ್‍ಗಳನ್ನು ಇಟ್ಟುಕೊಂಡಿದ್ದಳು. ಅನಿಕಾ ಡಿ, ಅನಿ ಮತ್ತು ಬಿಮನಿ ಎಂಬ ಮೂರು ಹೆಸರಿನಿಂದ ಪರಿಚಯಿಸಿಕೊಂಡು ಡ್ರಗ್ ಡೀಲ್ ಮಾಡುತ್ತಿದ್ದಳು. ಈಕೆ ಸಾಮಾಜಿಕ ಜಾಲತಾಣದಲ್ಲಿ ಬಿಮನಿ ಎಂಬ ಹೆಸರು ಬಳಸುತ್ತಿದ್ದಳು ಎಂಬ ಮಾಹಿತಿ ಲಭಿಸಿದೆ. ಜೊತೆಗೆ ಈಕೆ ತಮಿಳುನಾಡಿನವಳಾಗಿದ್ದು, 24 ವರ್ಷ ವಯಸ್ಸಿನವಳಾಗಿದ್ದಾಳೆ.

    ಅನಿಕಾ ತಮಿಳುನಾಡಿನ ಸೇಲಂ ಸಮೀಪದ ಯರ್ಕಾಡ್ ಮೂಲದವಳು. ಅನಿಕಾ ತಂದೆ ದಿನೇಶ್‍ಗೆ ಮೂವರು ಮಕ್ಕಳಿದ್ದು, ಅನಿಕಾಳೇ ದೊಡ್ಡವಳು. ಅನಿಕಾಗೆ ಒಬ್ಬಳು ತಂಗಿ, ಒಬ್ಬ ತಮ್ಮ ಇದ್ದು ತಮಿಳುನಾಡಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅನಿಕಾ ಯರ್ಕಾಡ್‍ನ ಶೆವ್ರಾಯ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಹೋಟೆಲ್ ಮ್ಯಾನೇಜ್‍ಮೆಂಟ್ ಡಿಗ್ರಿಯ ಎರಡನೇ ವರ್ಷದಲ್ಲಿ ಫೇಲ್ ಆಗಿ ವಿದ್ಯಾಭ್ಯಾಸವನ್ನು ಬಿಟ್ಟಿದ್ದಾಳೆ ಎನ್ನಲಾಗಿದೆ.

    ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಅನಿಕಾ, ಕೆಲಸ ಸಿಗದೇ ಡ್ರಗ್ ಜಾಲ ಸೇರಿಕೊಂಡಳು. ನಗರದ ದೊಡ್ಡಗುಬ್ಬಿಯಲ್ಲಿ ಐಶ್ವರ್ಯ ನಿಲಯದಲ್ಲಿ ವಾಸವಾಗಿದ್ದು, ಇಲ್ಲಿಂದಲೇ ಡ್ರಗ್ ದಂಧೆ ನಡೆಸುತ್ತಿದ್ದಳು. ಮುಂಬೈನ ಡ್ರಗ್ ಪೆಡ್ಲರ್ ಕೊಟ್ಟ ಮಾಹಿತಿ ಮೇರೆಗೆ ಈಕೆ ಮನೆಯ ಮೇಲೆ ದಾಳಿ ಮಾಡಿದಾಗ, ಎಂಡಿಎಂಎ ಎಂಬ ಮಾದಕ ವಸ್ತು ಸಮೇತ ಸಿಕ್ಕಿಬಿದ್ದು ಅರೆಸ್ಟ್ ಆಗಿದ್ದಾಳೆ.

  • ಡ್ರಗ್ ಡೀಲರ್ ಅನಿಕಾ ಜೊತೆ ನಂಟು ಇರೋದು ನಿಜ- ಆದಂ ಪಾಷಾ

    ಡ್ರಗ್ ಡೀಲರ್ ಅನಿಕಾ ಜೊತೆ ನಂಟು ಇರೋದು ನಿಜ- ಆದಂ ಪಾಷಾ

    ಬೆಂಗಳೂರು: ಡ್ರಗ್ ಡೀಲರ್ ಅನಿಕಾ ಜೊತೆ ಸಂಪರ್ಕ ಹೊಂದಿರುವುದು ನಿಜ ಎಂದು ಬಿಗ್ ಬಾಸ್ ಸ್ಪರ್ಧಿ ಆದಂ ಪಾಷಾ ಹೇಳಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ಒಂದು ವರ್ಷದ ಹಿಂದೆ ಕಮ್ಮನಹಳ್ಳಿಯ ಕ್ಲಬ್ ನಲ್ಲಿ ಅನಿಕಾ ಪರಿಚಯ ಆಗಿದ್ದಳು. ನಾನು ಡ್ಯಾನ್ಸರ್ ಆಗಿದ್ದರಿಂದ ಡ್ಯಾನ್ಸ್ ಕ್ಲಬ್ ಹೋದಾಗ ಅನಿಕಾ ಸಿಕ್ಕಿದ್ದಳು ಆಗಿನಿಂದ ಪರಿಚಯ ಆಗಿದ್ದಳು. ಆಫ್ರಿಕನ್ ಮ್ಯೂಸಿಕ್ ಕ್ಲಬ್‍ಗೆ ಹೋದಾಗ ನನಗೆ ಅನಿಕಾ ಪರಿಚಯವಾಗಿದ್ದಳು. ಆದರೆ ಅವಳು ಆಗ ನಿಜ ಹೆಸರು ಹೇಳಿರಲಿಲ್ಲ. ಅವಳ ಹೆಸರನ್ನು ನಿಕಿ ಎಂದು ಹೇಳಿದ್ದಳು. ಎಲ್ಲರೂ ಕ್ಲಬ್‍ಗೆ ಬರುವುದು ಮಾಮೂಲಿ ಆಗಿದ್ದರಿಂದ ನಾನು ತಲೆಕೆಡೆಸಿಕೊಳ್ಳಲಿಲ್ಲ. ನೀವು ಏನು ಮಾಡುತ್ತೀರಿ ಏನು ಎತ್ತ ಏನನ್ನೂ ಕೇಳಲಿಲ್ಲ ಎಂದು ತಿಳಿಸಿದ್ದಾರೆ.

    ಒಂದೊಂದು ಬಾರಿ ಕ್ಯಾಬ್‍ಗೂ ಹಣವಿಲ್ಲದಿದ್ದಾಗ ಅನಿಕಾ ನಮಗೆ ಹಣ ನೀಡಿ ಕಳುಹಿಸುತ್ತಿದ್ದಳು. ನಾನು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ನಾನು ಯಾವುದಕ್ಕೂ ಹೆದರಿಕೊಳ್ಳುವುದಿಲ್ಲ. ಸಿನಿಮಾ ಸೆಲೆಬ್ರಿಟಿಗಳ ಜೊತೆ ನನಗೆ ನಂಟಿಲ್ಲ. ಹಾಗಾಗಿ ಯಾರು ಅನಿಕಾ ಜೊತೆ ಬರುತ್ತಿದ್ದರು ಎಂಬುದು ಗೊತ್ತಿಲ್ಲ. ನಾನು ಕ್ಲಬ್ ನಲ್ಲಿ ಸಾಲ್ಸಾ ಡ್ಯಾನ್ಸ್ ಮಾಡಲು ಹೋಗುತ್ತಿದ್ದೆ ಎಂದು ತಿಳಿಸಿದ್ದಾರೆ.

    ಅವಳೊಂದಿಗೆ ಯಾರು ಇರುತ್ತಿದ್ದರು ಎಂದು ಸಹ ನಾನು ನೋಡಿಲ್ಲ. ಕ್ಲಬ್ ನಲ್ಲಿ ಡ್ಯಾನ್ಸ್ ಮಾಡಿ ಬರುತ್ತಿದ್ದೆ ಅಷ್ಟೆ. ನಾನ್ಯಾಕೆ ಬೇರೆಯವರನ್ನು ನೋಡಬೇಕು. ನಟಿ ನಯನ ಮನೆಯಲ್ಲಿ ಕೊನೆಯ ಸೆಲೆಬ್ರೆಟಿ ಪಾರ್ಟಿಯಾಗಿತ್ತು. ನಂತರ ಯಾವುದೇ ಪಾರ್ಟಿಗೆ ನಾನು ಹೋಗಿಲ್ಲ ಎಂದು ತಿಳಿಸಿದ್ದಾರೆ.

  • ವಿದ್ಯಾರ್ಥಿನಿಯಾಗಿದ್ದಾಗಲೇ ಡ್ರಗ್ ಸಪ್ಲೈ – ಅಧಿಕಾರಿಗಳು ಬಂಧಿಸಿದಾಗಲೂ ನಶೆಯಲ್ಲಿದ್ದ ಅನಿಕಾ

    ವಿದ್ಯಾರ್ಥಿನಿಯಾಗಿದ್ದಾಗಲೇ ಡ್ರಗ್ ಸಪ್ಲೈ – ಅಧಿಕಾರಿಗಳು ಬಂಧಿಸಿದಾಗಲೂ ನಶೆಯಲ್ಲಿದ್ದ ಅನಿಕಾ

    – ಬೆಂಗ್ಳೂರಿನಲ್ಲೇ ವಿದ್ಯಾಭ್ಯಾಸ, 6 ವರ್ಷದಿಂದ ಡ್ರಗ್ ಡೀಲರ್

    ಬೆಂಗಳೂರು: ಎನ್‍ಸಿಬಿ ಬಲೆಗೆ ಬಿದ್ದಿರುವ ಲೇಡಿ ಡ್ರಗ್ ಡೀಲರ್ ಅನಿಕಾ ಕಳೆದ ಆರು ವರ್ಷದಿಂದ ಈ ದಂಧೆ ನಡೆಸುತ್ತಿದ್ದಳು ಎಂಬ ಮಾಹಿತಿ ಹೊರಬಂದಿದೆ.

    ಗುರುವಾರ ಎನ್‍ಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಶ್ರೀಮಂತ ಜನರಿಗೆ ಮತ್ತು ಕನ್ನಡದ ನಟ-ನಟಿಯರಿಗೆ ಡ್ರಗ್ ವಿತರಣೆ ಮಾಡುತ್ತಿದ್ದ ಮೂವರು ಡ್ರಗ್ ಡೀಲರ್ ಗಳನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಕಿಂಗ್‍ಪಿನ್ ಆಗಿದ್ದ ಅನಿಕಾ, ವಿದ್ಯಾರ್ಥಿನಿಯಾಗಿದ್ದಾಗಲೇ ಡ್ರಗ್ ವಿತರಣೆ ಮಾಡುತ್ತಿದ್ದಳು ಎಂಬ ಭಯಾನಕ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ.

    ಅನಿಕಾ ಡ್ರಗ್ ವಿತರಣೆ ಮಾಡುತ್ತಿದ್ದುದಲ್ಲದೇ ಸ್ವತಃ ಡ್ರಗ್ ವ್ಯಸನಿಯಾಗಿದ್ದಳು. ಗುರುವಾರ ಅನಿಕಾಳನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದಾಗ ಆಕೆ ಡ್ರಗ್ ಸೇವನೆ ಮಾಡಿದ್ದಳು. ಆಕೆಯನ್ನು ಅಧಿಕಾರಿಗಳು ಕಚೇರಿಗೆ ಕರೆತಂದು 10 ಗಂಟೆಯ ನಂತರ ಆಕೆ ಮತ್ತಿನಿಂದ ಹೊರಬಂದ ಬಳಿಕ ತನಿಖೆ ಮಾಡಿದ್ದಾರೆ. ತನಿಖೆ ವೇಳೆ ತಾನೂ ಬೆಂಗಳೂರಿನಲ್ಲೇ ವ್ಯಾಸಂಗ ಮಾಡಿದ್ದು, ಕಾಲೇಜು ದಿನಗಳಿಂದಲೇ ಡ್ರಗ್ ವಿತರಿಸುತ್ತಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾಳೆ.

    ಸುಮಾರು ಆರು ವರ್ಷದಿಂದಲೂ ಅನಿಕಾ ಈ ಡ್ರಗ್ಸ್ ದಂಧೆ ಮಾಡುತ್ತಿರುವುದು ತಿಳಿದು ಬಂದಿದೆ. ಜೊತೆಗೆ ಆಕೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾಳೆ. ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು ಶ್ರೀಮಂತರು ಮತ್ತು ಸ್ಯಾಂಡಲ್‍ವುಡ್‍ನ ಖ್ಯಾತ ನಟ-ನಟಿಯರಿಗೂ ಡ್ರಗ್ಸ್ ಸಪ್ಲೇ ಮಾಡುತ್ತಿರುವ ಬಗ್ಗೆ ಅನಿಕಾ ತನಿಖೆ ವೇಳೆ ಬಾಯ್ಬಿಟ್ಟಿದ್ದಾಳೆ. ಸದ್ಯ ಎನ್‍ಸಿಬಿ ಅಧಿಕಾರಿಗಳಿಂದ ತನಿಖೆ ಮುಂದುವರೆದಿದೆ.

  • ಕಾರುಣ್ಯ ರಾಮ್, ಅನಿಕಾ, ಸಚಿನ್ ತ್ರಿಕೋನ ಪ್ರೇಮ ಕಥೆಗೆ ಟ್ವಿಸ್ಟ್

    ಕಾರುಣ್ಯ ರಾಮ್, ಅನಿಕಾ, ಸಚಿನ್ ತ್ರಿಕೋನ ಪ್ರೇಮ ಕಥೆಗೆ ಟ್ವಿಸ್ಟ್

    ಬೆಂಗಳೂರು: ನಟಿ ಕಾರುಣ್ಯ ರಾಮ್, ಕಿರುತೆರೆ ನಟಿ ಅನಿಕಾ ಮತ್ತು ಉದ್ಯಮಿ ಸಚಿನ್ ತ್ರಿಕೋನ ಪ್ರೇಮಕಥೆಗೆ ಹೊಸ ತಿರುವು ಸಿಕ್ಕಿದೆ.

    ಸಚಿನ್ ಮತ್ತು ಕಾರುಣ್ಯಾ ನಿಶ್ಚಿತಾರ್ಥ ಮುರಿದುಬಿದ್ದಿದೆ. ಸಚಿನ್ ಮತ್ತು ಕಾರುಣ್ಯಾಗೆ ಈ ಹಿಂದೆ ಮದುವೆಯಾಗಿದೆ ಎಂದು ಸುದ್ದಿಯಾಗುತ್ತಿದೆ. ಜೊತೆಗೆ ಈ ಕುರಿತಾದ ಸಾಕ್ಷಿ ಕಾರುಣ್ಯ ಬಳಿ ಇದ್ದು, ಅನಿಕಾ ಮನೆಯವರಿಗೆ ಸಾಕ್ಷಿ ಸಮೇತ ತೋರಿಸಿದ್ದಾರೆ. ಹೀಗಾಗಿ ಅನಿಕಾ ಮತ್ತು ಸಚಿನ್ ಮದುವೆ ಮುರಿದಿದೆ ಎಂದು ಸುದ್ದಿಯಾಗುತ್ತಿದೆ.

    ಒಂದು ತಿಂಗಳ ಹಿಂದೆ ಅನಿಕಾ ಮತ್ತು ಸಚಿನ್ ನಿಶ್ಚಿತಾರ್ಥವಾಗಿತ್ತು. ಮದುವೆ ಮುರಿಯೋಕೆ ನಟಿ ಕಾರುಣ್ಯ ರಾಮ್ ಪ್ರಯತ್ನಿಸುತ್ತಿದ್ದಾರೆ ಎಂದು ಅನಿಕಾ ಆರೋಪಿಸಿದ್ದರು. ಈ ಕುರಿತು ಕಾರುಣ್ಯ ಪ್ರತಿಕ್ರಿಯಿಸಿ, ನನಗೂ ಈ ವಿಷಯಕ್ಕೂ ಸಂಬಂಧವೇ ಇಲ್ಲ. ನಾನು, ಸಚಿನ್ ಒಳ್ಳೆಯ ಸ್ನೇಹಿತರಾಗಿದ್ದು, ಇಲ್ಲಿಗೆ ವಿಷಯ ಬಿಟ್ಟುಬಿಡೋದಾಗಿ ಹೇಳಿದ್ದರು.

    ಏನಿದು ಪ್ರಕರಣ: ಈ ಹಿಂದೆ ಅನಿಕಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಎರಡು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನನ್ನ ಮತ್ತು ಸಚಿನ್ ನಿಶ್ಚಿತಾರ್ಥ ನಡೆದಿತ್ತು. ಆದರೆ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ನಟಿ ಕಾರುಣ್ಯ, ಸಚಿನ್ ಹಾಗೂ ಅವರ ತಾಯಿಗೆ ಕಾಟ ಕೊಡುತ್ತಿದ್ದಾರೆ. ಆದರೆ ಈಗ ಎಂಗೇಜ್‍ಮೆಂಟ್ ಆದ ಮೇಲೆ ನನ್ನ ಜೊತೆ ಮಾತನಾಡದಂತೆ ಕಾರುಣ್ಯ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.

    ಅನಿಕಾ ಅವರ ಆರೋಪಕ್ಕೆ ಪ್ರತಿಕ್ರಯಿಸಿದ ಕಾರುಣ್ಯ, ನನಗೆ ಅನಿಕಾ ಯಾರು ಎನ್ನುವುದೇ ಪರಿಚಯವಿಲ್ಲ. ನನಗೆ ಸಚಿನ್ ಕೂಡ ಗೊತ್ತಿಲ್ಲ. ನಾನು ಸ್ನೇಹಿತರ ಜೊತೆ ರೆಸ್ಟೊರೆಂಟ್ ಗೆ ಹೋಗಿದ್ದೆ, ಅಲ್ಲಿ ಸಚಿನ್ ಇದ್ದರು. ಎಲ್ಲರ ಜೊತೆ ಇದ್ದಾಗ ಮಾತನಾಡಿದ್ದೀನಿ ಅಷ್ಟೆ ಎಂದು ಹೇಳಿದ್ದರು.

    ಬಹುಶಃ ಆ ಹುಡುಗಿ ಪಬ್ಲಿಸಿಟಿ ಪಡೆಯೋಕೆ ಇದೆಲ್ಲ ಮಾಡುತ್ತಿರಬಹುದು. ನನಗೆ ಮದುವೆಯಾಗೋಕೆ ಅವರೇ ಬೇಕಿಲ್ಲ. ಆ ಹುಡುಗಿಗೆ ಬಹುಶಃ ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಇದೆ ಅನ್ನಿಸುತ್ತಿದೆ. ಆಕೆಯನ್ನು ನಾನು ನೋಡೇ ಇಲ್ಲ. ನಾನು ಯಾರ ಕುಟುಂಬಕ್ಕೂ ತೊಂದರೆ ನೀಡಿಲ್ಲ. ನನ್ನಿಂದ ತೊಂದರೆ ಆದರೆ ಆ ಹುಡುಗ ಮಾತಾಡಬೇಕು. ಇವಳ್ಯಾಕೆ ಮಾತನಾಡುತ್ತಿದ್ದಾಳೆ? ನನಗೆ ಸಚಿನ್ ಪರಿಚಯವಿಲ್ಲ, ಅವರು ಪಬ್ಲಿಸಿಟಿಗೋಸ್ಕರ ಸುದ್ದಿ ಮಾಡುತ್ತಿರಬಹುದು ಎಂದು ನಟಿ ಕಾರುಣ್ಯ ರಾಮ್ ಹೇಳಿದ್ದರು.

    ಉದ್ಯಮಿ ಸಚಿನ್ ಯಾರೆಂಬುದು ನನಗೆ ಗೊತ್ತೇ ಇಲ್ಲ. ಯಾವುದೋ ಒಂದು ರೆಸ್ಟೊರೆಂಟ್ ಗೆ ಹೋದಾಗ ಅವನು ಪರಿಚಯವಾಗಿದ್ದ. ಅವನೊಂದಿಗೆ ಒಂದೇ ಒಂದು ಸಾರಿ ಮಾತನಾಡಿದ್ದೇನೆ. ಇಷ್ಟಕ್ಕೂ ಅವನು ವಯಸ್ಸಲ್ಲಿ ನನಗಿಂತ ದೊಡ್ಡವನು. ನನಗೆ ಈ ಅನಿಕಾ ಯಾರೆಂಬುದೇ ಗೊತ್ತಿಲ್ಲ. ಆಕೆ ಕಿರುತೆರೆಯ ನಟಿ ಅನ್ನೋದರ ಬಗ್ಗೆಯೂ ಮಾಹಿತಿ ಇಲ್ಲ. ನಾನು ಯಾರಿಗೂ ಫೋನ್ ಮಾಡಿಲ್ಲ, ಬೆದರಿಕೆಯೂ ಹಾಕಿಲ್ಲ. ನಾನೇನಾದ್ರೂ ಬೆದರಿಕೆ ಹಾಕಿದ್ದರೆ ಅವರ ಕುಟುಂಬದವರು ದೂರು ನೀಡಲಿ. ಆಮೇಲೆ ಪ್ರತಿಕ್ರಿಯೆ ನೀಡುತ್ತೇನೆ. ಸುಮ್ಮನೆ ನಾನ್ಯಾಕೆ ಪ್ರತಿಕ್ರಿಯೆ ಕೊಡಲಿ ಎಂದು ಪ್ರಶ್ನಿಸಿದ್ದರು.

  • ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಕುಮುದಾ ಬಾಳಲ್ಲಿ ನಟಿ ಕಾರುಣ್ಯ `ಕಿರಿಕ್’!

    ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಕುಮುದಾ ಬಾಳಲ್ಲಿ ನಟಿ ಕಾರುಣ್ಯ `ಕಿರಿಕ್’!

    ಬೆಂಗಳೂರು: ಧಾರಾವಾಹಿ ನಟಿ ಲಕ್ಷ್ಮಿ ಬಾರಮ್ಮ ಖ್ಯಾತಿಯ ಕುಮುದಾ ಅಲಿಯಾಸ್ ಅನಿಕಾ ಮದುವೆ ಮುರಿದು ಬೀಳಲು ಸ್ಯಾಂಡಲ್‍ವುಡ್ ನಟಿ ಕಾರುಣ್ಯ ರಾಮ್ ಕಾರಣ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

    10 ದಿನಗಳ ಹಿಂದೆ ಉದ್ಯಮಿ ಸಚಿನ್ ಎಂಬವರ ಜೊತೆ ನನ್ನ ನಿಶ್ಚಿತಾರ್ಥ ಆಗಿತ್ತು. ಆದರೆ ಈಗ ನಟಿ ಕಾರುಣ್ಯ ರಾಮ್ ನಿಂದಾಗಿ ಈ ನಿಶ್ಚಿತಾರ್ಥ ಬ್ರೇಕಪ್ ಆಗಿದೆ ಎಂದು ಅನಿಕಾ ಆರೋಪ ಮಾಡಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅನಿಕಾ, ಇದೆ ತಿಂಗಳು ಎರಡು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನನ್ನ ಮತ್ತು ಸಚಿನ್ ನಿಶ್ಚಿತಾರ್ಥ ನಡೆದಿತ್ತು. ಆದರೆ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ನಟಿ ಕಾರುಣ್ಯ ಸಚಿನ್ ಹಾಗೂ ಅವರ ತಾಯಿಗೆ ಕಾಟ ಕೊಡುತ್ತಿದ್ದಾರೆ. ಆದರೆ ಈಗ ಎಂಗೇಜ್ ಮೆಂಟ್ ಆದ ಮೇಲೆ ನನ್ನ ಜೊತೆ ಮಾತನಾಡದಂತೆ ಕಾರುಣ್ಯ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ನಟಿ ಅನಿಕಾ ಅವರ ಆರೋಪಕ್ಕೆ ಪ್ರತಿಕ್ರಯಿಸಿದ ನಟಿ ಕಾರುಣ್ಯ, ನನಗೆ ಅನಿಕಾ ಯಾರು ಎನ್ನುವುದೇ ಪರಿಚಯವೇ ಇಲ್ಲ. ನನಗೆ ಸಚಿನ್ ಕೂಡ ಗೊತ್ತಿಲ್ಲ. ನಾನು ಸ್ನೇಹಿತರ ಜೊತೆ ರೆಸ್ಟೋರೆಂಟ್ ಗೆ ಹೋಗಿದ್ದೆ ಅಲ್ಲಿ ಸಚಿನ್ ಇದ್ದರು. ಎಲ್ಲರ ಜೊತೆ ಇದ್ದಾಗ ಮಾತನಾಡಿದ್ದೀನಿ ಅಷ್ಟೆ ಎಂದು ಹೇಳಿದ್ದಾರೆ.

    ಬಹುಶಃ ಆ ಹುಡುಗಿ ಪಬ್ಲಿಸಿಟಿ ಪಡೆಯೋಕೆ ಇದೆಲ್ಲ ಮಾಡುತ್ತಿರಬಹುದು. ನನಗೆ ಮದುವೆಯಾಗೋಕೆ ಅವರೇ ಬೇಕಿಲ್ಲ. ಆ ಹುಡುಗಿಗೆ ಬಹುಶಃ ಇನ್‍ಫಿರಿಯಾರಿಟಿ ಕಾಂಪ್ಲೆಕ್ಸ್ ಇದೆ ಅನ್ನಿಸುತ್ತಿದೆ. ಆಕೆಯನ್ನು ನಾನು ನೋಡೇ ಇಲ್ಲ. ನಾನು ಯಾರ ಕುಟುಂಬಕ್ಕೂ ತೊಂದರೆ ನೀಡಿಲ್ಲ. ನನ್ನಿಂದ ತೊಂದರೆ ಆದರೆ ಆ ಹುಡುಗ ಮಾತಾಡಬೇಕು ಇವಳ್ಯಾಕೆ ಮಾತನಾಡುತ್ತಿದ್ದಾಳೆ? ನನಗೆ ಸಚಿನ್ ಪರಿಚಯವಿಲ್ಲ, ಅವರು ಪಬ್ಲಿಸಿಟಿಗೋಸ್ಕರ ಸುದ್ದಿ ಮಾಡುತ್ತಿರಬಹುದು ಎಂದು ನಟಿ ಕಾರುಣ್ಯ ರಾಮ್ ತಿಳಿಸಿದ್ದಾರೆ.

    ಉದ್ಯಮಿ ಸಚಿನ್ ಯಾರೆಂಬುದು ನನಗೆ ಗೊತ್ತೇ ಇಲ್ಲ. ಯಾವುದೋ ಒಂದು ರೆಸ್ಟೊರೆಂಟ್ ಗೆ ಹೋದಾಗ ಅವನು ಪರಿಚಯವಾಗಿದ್ದ. ಅವನೊಂದಿಗೆ ಒಂದೇ ಒಂದು ಸಾರಿ ಮಾತನಾಡಿದ್ದೇನೆ. ಇಷ್ಟಕ್ಕೂ ಅವನು ವಯಸ್ಸಲ್ಲಿ ನನಗಿಂತ ದೊಡ್ಡವನು. ನನಗೆ ಈ ಅನಿಕಾ ಯಾರೆಂಬುದೇ ಗೊತ್ತಿಲ್ಲ. ಆಕೆ ಕಿರುತೆರೆಯ ನಟಿ ಅನ್ನೋದರ ಬಗ್ಗೆಯೂ ಮಾಹಿತಿ ಇಲ್ಲ. ನಾನು ಯಾರಿಗೂ ಫೋನ್ ಮಾಡಿಲ್ಲ, ಬೆದರಿಕೆಯೂ ಹಾಕಿಲ್ಲ. ನಾನೇದರೂ ಬೆದರಿಕೆ ಹಾಕಿದ್ದರೆ ಅವರ ಕುಟುಂಬದವರು ದೂರು ನೀಡಲಿ. ಆಮೇಲೆ ಪ್ರತಿಕ್ರಿಯೆ ನೀಡುತ್ತೇನೆ. ಸುಮ್ ಸುಮ್ಮನೆ ನಾನ್ಯಾಕೆ ಪ್ರತಿಕ್ರಿಯೆ ಕೊಡಲಿ ಎಂದು ಪ್ರಶ್ನಿಸಿದ್ದಾರೆ.