Tag: Angry

  • ಅವಳ ಮೂಗಿನ ತುದಿ ಕೋಪ ನಂಗಿಷ್ಟ!

    ಅವಳ ಮೂಗಿನ ತುದಿ ಕೋಪ ನಂಗಿಷ್ಟ!

    ದೆಂತ ವಿಚಿತ್ರ! ಎಲ್ಲ್ರೂ ಪ್ರೀತ್ಸೋ ಹುಡುಗಿಯ ನಗು ಇಷ್ಟ.. ಅವಳ ಮುಂಗುರುಳು ಸರಿಸುವಾಗ ಆ ಕುಡಿ ನೋಟ ಇಷ್ಟ ಅಂತ ಬರೆದ್ರೆ ಇವನೇನು ಅವಳ ಕೋಪ ಇಷ್ಟ ಅಂತಾನೇ ಅಂತ ಆಶ್ಚರ್ಯನಾ?! ನಿಜ ನನಗೆ ಅವಳ ಕೋಪ ತುಂಬಾ ಇಷ್ಟ..! ಅದಕ್ಕೆ ಅವಳಿಗೆ ಆಗಾಗ ಬೇಕು ಅಂತಾನೇ ರೇಗಿಸಿ ಬೇಜಾರು ಮಾಡಿ ಸಿಟ್ಟು ಬರೋ ಹಾಗೇ ಮಾಡ್ತೀನಿ! ಆದ್ರೆ ನನಗೆ ಈ ಥರ ಕೋಪ ಬರಿಸೋ ಚಾನ್ಸ್‌ ತುಂಬಾ ಕಡಿಮೆನೇ ಸಿಕ್ಕಿದ್ದು.. ಯಾಕಂದ್ರೆ ಅವಳಿಗೆ ಕೋಪ ಮೂಗಿನ ಮೇಲೆ ಇರ್ತಿತ್ತು..!

    ಹೌದು ಕಣ್ರೀ..! ಎಲ್ಲಾ ಹುಡುಗಿಯರು ತಮ್ಮ ಮೂಗಿಗೆ ಮೂಗು ಬೊಟ್ಟಿಂದ ಅಲಂಕಾರ ಮಾಡ್ಕೊಂಡಿದ್ರೆ.. ಇವಳು ಕೋಪಾನೇ ಮೂಗಿನ ತುದಿಯಲ್ಲಿಟ್ಟುಕೊಂಡು ಅಲಂಕಾರ ಮಾಡ್ಕೊಂಡಿರ್ತಿದ್ಲು! ಅಷ್ಟು ಕೋಪಿಷ್ಟೇ.. ಕೋಪ ಮಾಡ್ಕೊಂಡಾಗೆಲ್ಲ ಅವಳು ಅಷ್ಟೇ ಮುದ್ದಾಗಿ ಸಹ ಕಾಣ್ತಿದ್ಲು… ಆಗೆಲ್ಲ ಅವಳು ರೇಡಿಯೋ ಆಗಿರೋಳು.. ನಾನು ಕೇಳುಗನಾಗಿ ಇರ್ತಿದ್ದೆ..! ಹೇಳಿದ್ದನ್ನೇ ನೂರು ಸಲ ಹೇಳಿ, ಕೊನೆಗೆ ಯಾಕೆ ಸಿಟ್ಟು ಮಾಡ್ಕೊಂಡಿದ್ದೆ ಅಂತ ಕೇಳಿದ್ರೆ ನನಗೆ ಗೊತ್ತಿಲ್ಲ.. ಮರೆತು ಹೋಯ್ತು ಅಂತ ನಗಾಡೋ ಅಷ್ಟು ಹೊತ್ತಿಗೆ ಈ ಕೋಪ ಕರಗಿದೆ ಅನ್ನೋದು ತಿಳಿತಾ ಇತ್ತು. ಇದನ್ನೂ ಓದಿ: ನೀ ʻಅಮೃತʼಧಾರೆ – ಬಾಡಿದ ಹೃದಯಕುಂಡದಲ್ಲಿ ಒಲವರಳಿಸಿದ ಮಳೆ!

    ಆದ್ರೆ ಮತ್ತೆ ಒಂದು ಮಾತು ಹೇಳೋಳು.. ಏನಂಥ ಗೊತ್ತಾ? ನನಗೆ ಯಾಕೆ ಕೋಪ ಬಂತು ಹೇಳು? ನಿನಗೆ ಗೊತ್ತಿಲ್ವಾ? ಆಹಾ.. ನನಗೆ ಸಿಟ್ಟು ಬಂದಿದ್ದು ಯಾಕೆ ಅಂತಯ ನೆನಪಿರಲ್ಲ ಅಲ್ವಾ? ಅಷ್ಟೊಂದು ಮರೆವಾ ನಿನಗೆ? ನನ್ನನ್ನೂ ಮರೆತು ಬಿಡ್ತೀಯ ಬಿಟ್ರೆ ಅಲ್ವಾ? ಹೀಗೆ ಪುಂಡ ಬೆಕ್ಕಿನ ಥರ ಪುಟ್ಟ ಪುಟ್ಟ ಜಗಳ ಅವಳದ್ದು..!

    ಹಾಗಂತ ಅದೆಲ್ಲ ತುಂಬಾ ಸೀರಿಯಸ್‌ ಆದ ವಿಚಾರಗಳೇನೂ ಅಲ್ಲ.. ಆ ಕೋಪಕ್ಕೆ ಕಾರಣಗಳು ಬೇಕಿರಲಿಲ್ಲ,,! ಯಾಕೆ ಸಿಟ್ಟು ಅಂತ ಕೇಳಿದ್ರೆ… ನನಗೆ ನಿನ್ನ ಹತ್ರ ಮಾತ್ರ ಕೋಪ ಮಾಡ್ಬೇಕು, ಸಣ್ಣ ಸಣ್ಣ ವಿಚಾರಕ್ಕೂ ಗಲಾಟೆ ಮಾಡ್ಬೇಕು ಅನ್ಸುತ್ತೆ ಕಣೋ..! ನನ್ನ ಸಿಟ್ಟು.. ನನ್ನ ಇಷ್ಟ..! ಸಿಟ್ಟು ಮಾಡ್ಕಳ್ಳೋಕು ನಾನು ನಿನ್ನ ಕೇಳ್ಬೇಕಾ..? ನಿನ್‌ ಹತ್ರ ಮಾತ್ರ ನಾನು ಚಿಕ್ಕವಳ ಥರ ಆಡ್ಬೇಕು.. ಹಠ ಮಾಡ್ಬೇಕು.. ಸಿಟ್ಟು ಮಾಡ್ಬೇಕು ಅನ್ಸುತ್ತೆ ಗೋಪಾಲ… ಯಾಕೆ ಅಂತ ನೀನೇ ಹೇಳು? ಅವಳ ಪ್ರಶ್ನೆಗೆ ನನಗೂ ಉತ್ತರ ಇರಲಿಲ್ಲ.. ಅದಕ್ಕೆ.. ಅಷ್ಟೇ ತಾನೇ, ನಿನಗೆ ಏನು ಅನ್ಸತ್ತೋ ಹಾಗೆ ಇರು ಪುಟ್ಟ ಅಂತ ಹೇಳ್ಬಿಡ್ತಿದ್ದೆ..! ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!

    ಒಮ್ಮೊಮ್ಮೆ ಅನ್ಸೋದು.. ಹೌದಲ್ವಾ ಅವಳು ಪ್ರೀತಿ ಆದ್ರೂ, ಕೋಪ ಆದ್ರೂ ಯಾರನ್ನ ಮಾಡ್ತಾಳೆ.. ನನ್ನ ಬಿಟ್ರೆ ಯಾರಿದಾರೆ ಅವಳಿಗೆ ಅಂತ ತುಂಬಾ ಸಲುಗೆ ಕೊಟ್ಟೆ.. ಅವಳು ಅಷ್ಟೇ ಮಗು ಅಮ್ಮನ ಹತ್ರ ಹಠ ಮಾಡಿದ ಹಾಗೆ ಹಠ ಮಾಡ್ಕೊಂಡು.. ನನ್ನನ್ನೇ ಪ್ರಪಂಚ ಅಂದ್ಕೊಂಡಿದ್ಲು… ಇದೆಲ್ಲ ಸುಮಾರು ಆರೇಳು ವರ್ಷಗಳ ಹಿಂದಿನ ಕತೆ.. ಮೊನ್ನೆ ಮೊನ್ನೆ ಮತ್ತೆ ಸಿಕ್ಕಿದ್ಲು. ದೂರಾಗಿ ಇಷ್ಟು ವರ್ಷ ಆದ್ಮೇಲೂ, ಅದೇ ಕೋಪ.. ಅದೇ ಕಣ್ಣು ಹಾಗೇ..! ಮತ್ತೆ ನಿನ್ನ ಹತ್ರ ಸಿಟ್ಟು ಮಾಡ್ಬೇಕು ಅನ್ನಿಸ್ತಿದೆ ಮಾಡ್ಲಾ? ಹ್ಞೂಂ ಅಂದೆ.. ಅವಳಿಗೆ ಅಳುನೇ ಬಂದು ಹೋಯ್ತು..!

    ಅವಳಿಗೆ ಅವತ್ತು ಯಾಕೆ ಅಳು ಬಂತೋ ಗೊತ್ತಿಲ್ಲ.. ಆದ್ರೆ.. ಇವತ್ತಿಗೂ ಅದೇ ಪ್ರೀತಿ ಅವಳ ಮನಸ್ಸಲ್ಲಿ ಇದೆ.. ಈ ‘ಸುರಗಿ’ ಮರದಿಂದ ಉದುರಿದ ಮೇಲೂ ವರ್ಷಾನೂಗಟ್ಟಲೇ ಅದರ ಘಮ ಉಳಿಯುವ ಹಾಗೆ..! ಹೌದು.. ಅದ್ಯಾವ ಕಾರಣಕ್ಕೆ ನಾವು ದೂರ ಆದ್ವಿ ಅಂತ ಗೊತ್ತಿಲ್ಲ. ಇಬ್ಬರ ಹೃದಯದಲ್ಲೂ ಇವತ್ತಿಗೂ ಅದೇ ಪ್ರೇಮದ ಘಮ ಇದೆ. ನನಗೆ ಅವಳ ಕೋಪದಲ್ಲಿ ಕಂಡಿದ್ದು ಪ್ರೇಮದ ಘಮ.. ಆ ಕೋಪ ಮತ್ತೆ ನನ್ನ ಮೇಲೆ ಪ್ರಯೋಗ ಮಾಡ್ಬೇಕು ಅವಳು. ಪುಟ್ಟ ಮಗು ತನ್ನ ಸಿಟ್ಟನ್ನ ತನ್ನ ಅಮ್ಮನ ಮೇಲೆ ತೋರಿಸೋ ಹಾಗೆ, ಅದನ್ನ ನಾನು ತಾಯಿಯಾಗಿ ಸಂಭ್ರಮಿಸಬೇಕು..!

    ಪ್ರೀತಿ ಅಂದ್ರೆ ಹೀಗೆ ಅಲ್ವಾ..? ನನಗೆ ಏನು ಬೇಕೋ ಅದನ್ನ ಹುಡುಕಿ ಸಂಭ್ರಮಿಸೋದಲ್ಲ. ನಮಗೆ ಸಿಕ್ಕ ಪ್ರೀತಿಯಲ್ಲಿ ಏನಿದಿಯೋ ಅದನ್ನೇ ಹೃದಯಕ್ಕೆ ಇಳಿಸಿಕೊಳ್ಳೋದು.. ಅದ್ಕೆ ಇರಬೇಕು ನನಗೆ ಅವಳ ಮುದ್ದು ಕೋಪ ಇಷ್ಟ ಆಗಿದ್ದು. ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?

    ಅವಳ ಕೋಪಕ್ಕೊಂದು ಮಾಧುರ್ಯ ಇತ್ತು. ಆ ಕೋಪದಲ್ಲಿ ಅವಳ ನಾಚಿಕೆ ಇತ್ತು. ಮಲ್ಲಿಗೆ ಕನಕಾಂಬರದ ಮಿಶ್ರಣದ ಬಣ್ಣ.. ಸುಗಂಧ ರಾಜನ ಘಮ ಎಲ್ಲವೂ ಇತ್ತು. ಅದೆಲ್ಲ ಮೀರಿದ ವಾತ್ಸಲ್ಯ ಇತ್ತು. ಒಮ್ಮೊಮ್ಮೆ ಅವಳು ಹೇಳ್ತಿದ್ಲು, ನಾನು ಕೋಪ ಮಾಡ್ಕೋತಿನಿ.. ನೀನು ನನ್ನ ಮುದ್ದು ಮುದ್ದು ಮಾತಾಡಿ ಸಮಾಧಾನ ಮಾಡ್ಬೇಕು ಅಂತ. ನಾನು ಸಮಾಧಾನ ಮಾಡ್ಬೇಕು ಅಂತಾನೇ ಕೋಪ ಮಾಡ್ಕೊಳ್ಳೋಳು..! ಅದೊಂಥರ ಕೋಪದ ಚೆಂದದ ಆಟ ಅವಳಿಗೆ..! ಆ ಕೋಪದ ಕೆಂಪು ಮೂಗಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.. ಇದನ್ನ ಓದಿ, ಆ ಸಂಭ್ರಮದಲ್ಲಿ ಚೂರಾದ್ರೂ ಅಳ್ಬೇಕು ಅಂತ ಇಷ್ಟೆಲ್ಲ ನೆನಪನ್ನ ಬರೆದೆ..!!

    – ಗೋಪಾಲಕೃಷ್ಣ

  • ಸದಾ ಕೋಪ ಮಾಡಿಕೊಳ್ಳಲು ಇದೇ ಕಾರಣವಂತೆ..

    ಸದಾ ಕೋಪ ಮಾಡಿಕೊಳ್ಳಲು ಇದೇ ಕಾರಣವಂತೆ..

    ಕೋಪ-ತಾಪ (Angry) ಮನುಷ್ಯನ ಸಹಜ ಗುಣ. ಕೆಲವರಿಗೆ ಮೂಗಿನ ತುದಿಯಲ್ಲೇ ಕೋಪವಿರುತ್ತೆ. ಸಣ್ಣಪುಟ್ಟ ವಿಷಯಗಳಿಗೆಲ್ಲಾ ಕೋಪ ಮಾಡಿಕೊಳ್ಳುವವರಿರುತ್ತಾರೆ.

    ಕೋಪವು ಅನೇಕ ಸಂದರ್ಭ ಮತ್ತು ಕಾರಣಗಳಿಂದ ಉಂಟಾಗಬಹುದು. ಕೆಲವೊಂದು ಆಘಾತಗಳು ನಿಮ್ಮ ಮನಸ್ಸನ್ನು ಪ್ರಚೋದಿಸಿ ಕೋಪಕ್ಕೆ ಕಾರಣವಾಗಬಹುದು. ಇಲ್ಲವೇ ಕೆಲವು ಸನ್ನಿವೇಶಗಳು ಕೋಪದಿಂದ ಪ್ರತಿಕ್ರಿಯಿಸುವಂತೆ ಮಾಡುತ್ತವೆ. ಕೆಲವೊಬ್ಬರು ಸದಾ ಕೋಪಗೊಳ್ಳುತ್ತಾರೆ. ಅದು ಯಾಕೆ ಗೊತ್ತಾ? ಇದನ್ನೂ ಓದಿ: ಎದೆನೋವು ಬಂದ್ರೆ ಗ್ಯಾಸ್ಟ್ರಿಕ್‌ ಅಂತಾ ನಿರ್ಲಕ್ಷಿಸಬೇಡಿ – ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವೈದ್ಯರು ಹೇಳೋದೇನು?

    ಒತ್ತಡದ ಪರಿಸ್ಥಿತಿ
    ಒತ್ತಡದ ಪರಿಸ್ಥಿತಿ ಕೋಪಕ್ಕೆ ಕಾರಣವಾಗುತ್ತದೆ. ಒತ್ತಡಗಳು ಮನಸ್ಸಿಗೆ ಕಿರಿಕಿರಿ ಎನಿಸುತ್ತದೆ. ಆಗ ಯಾರೇ ಆದರೂ ತಾಳ್ಮೆ ಕಳೆದುಕೊಂಡು ಕೋಪಗೊಳ್ಳುತ್ತಾರೆ.

    ಕುಟುಂಬದ ಹಿನ್ನೆಲೆ
    ಕೆಲವರಿಗೆ ಕೋಪವು ಪೂರ್ವಜರಿಂದ ಬಳುವಳಿಯಾಗಿ ಬರುತ್ತದೆ. ಮಕ್ಕಳ ಮೇಲೆ ಕೋಪಗೊಳ್ಳುವುದು, ಕೂಗಾಡುವುದು, ಶಿಕ್ಷಿಸುವ ಕೆಲಸವನ್ನು ಕೆಲ ಪೋಷಕರು ಮಾಡುತ್ತಾರೆ. ಇದೇ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಮುಂದೆ ಅವರು ದೊಡ್ಡವರಾದಾಗ ತಮ್ಮ ಪೋಷಕರ ಗುಣಗಳನ್ನೇ ಬೆಳೆಸಿಕೊಳ್ಳಬಹುದು. ಇವರು ಕೂಡ ತಮ್ಮ ಮಕ್ಕಳ ಮೇಲೆ ಸಣ್ಣಪುಟ್ಟ ವಿಷಯಗಳಿಗೆ ಕೋಪಗೊಳ್ಳಬಹುದು. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    ಆಘಾತಕಾರಿ ಸನ್ನಿವೇಶ
    ಕೆಲವೊಂದು ಆಘಾತಕಾರಿ ಸನ್ನಿವೇಶಗಳು ನಮ್ಮಲ್ಲಿ ಕೋಪವನ್ನುಂಟು ಮಾಡುತ್ತದೆ. ಅಹಿತಕರ ಸಂದರ್ಭದಲ್ಲಿ ಮನಸ್ಸಿನಲ್ಲಿ ಕೋಪ, ಹತಾಶೆ ಮನೋಭಾವ ಉಂಟು ಮಾಡುತ್ತದೆ.

    ನಿರೀಕ್ಷೆ ಇಟ್ಟುಕೊಳ್ಳುವುದು
    ನಿರೀಕ್ಷೆಗಳು ಕೆಲವೊಮ್ಮೆ ಹುಸಿಯಾಗಬಹುದು. ಅವಾಸ್ತವಿಕ ನಿರೀಕ್ಷೆಗಳು ನಿಮ್ಮ ನಿರಾಸೆಗೆ ಕಾರಣವಾಗಬಹುದು. ಆಗ ಕೋಪ-ತಾಪ ವ್ಯಕ್ತವಾಗುವುದು ಸಹಜ. ಇದನ್ನೂ ಓದಿ: ಪೋಷಕರ ನಡವಳಿಕೆಗಳು ಮಕ್ಕಳ ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತೆ ಗೊತ್ತಾ?

    ದುಃಖ
    ದುಃಖವನ್ನು ನಿಭಾಯಿಸುವುದು ಕಷ್ಟ. ಕಾರಣ, ಕಾರಣಾಂತರಗಳಿಂದ ಎಷ್ಟೋ ಸಲ ನೀವು ದುಃಖಕ್ಕೆ ಒಳಗಾಗಬಹುದು. ಒಂದು ವೇಳೆ ಆ ದುಃಖವು ಪರಿಹಾರವಾಗದೆ ಉಳಿದಾಗ, ಅದು ನಿಮಗೆ ನಿರಂತರ ಕೋಪವನ್ನು ಉಂಟುಮಾಡಬಹುದು.

    ಮಾನಸಿಕ ಆರೋಗ್ಯ
    ಮಾನಸಿಕ ಆರೋಗ್ಯ ಸ್ಥಿತಿಯಿಂದ ಕೋಪ, ಹತಾಶೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಾನಸಿಕ ಆರೋಗ್ಯ ಸರಿಯಿಲ್ಲದಿದ್ದರೆ ಕೋಪ ನಿಭಾಯಿಸುವುದು ಕಷ್ಟ.

    Live Tv
    [brid partner=56869869 player=32851 video=960834 autoplay=true]

  • ನಿಮ್ಮನ್ನ ಬೈದು ನಮಗೆ ಬಿಪಿ ಬರುತ್ತೆ, ದನಕಾಯೋಕೆ ಹೋಗಿ – ಅಧಿಕಾರಿಗೆ ಜಿ.ಪಂ ಅಧ್ಯಕ್ಷ ಕ್ಲಾಸ್

    ನಿಮ್ಮನ್ನ ಬೈದು ನಮಗೆ ಬಿಪಿ ಬರುತ್ತೆ, ದನಕಾಯೋಕೆ ಹೋಗಿ – ಅಧಿಕಾರಿಗೆ ಜಿ.ಪಂ ಅಧ್ಯಕ್ಷ ಕ್ಲಾಸ್

    – ಕೆಲಸ ಮಾಡಕ್ಕೆ ಆಗಲ್ಲ ಅಂದ್ರೆ ಟ್ರಾನ್ಸ್ಫರ್ ಮಾಡಿಸಿಕೊಂಡು ಹೋಗಿ

    ಚಿಕ್ಕಬಳ್ಳಾಪುರ: “ಥೂ ನಿಮ್ಮನ್ನ ಬೈದು ನಮಗೆ ಬಿಪಿ ಬರುತ್ತೆ. ದನಕಾಯೋಕೆ ಹೋಗಿ, ಕೆಲಸ ಮಾಡಕೆ ಆಗಲ್ಲ ಅಂದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ” ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಜಿಲ್ಲಾ ಮಟ್ಟದ ಕ್ರೀಡಾ ಯುವಜನಸೇವಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕ್ರೀಡಾ ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ರುದ್ರಪ್ಪಗೆ ಜಿ.ಪ ಅಧ್ಯಕ್ಷ ಎಚ್.ವಿ ಮಂಜುನಾಥ್ ಹಾಗೂ ಜಿ.ಪ ಸದಸ್ಯರು ಸೇರಿದಂತೆ ಜಿ.ಪ ಸಿಇಓ ಸಹ ತರಟೆಗೆ ತೆಗೆದುಕೊಂಡರು.

    ನಿಮ್ಮ ಕೈಯಲ್ಲಿ ಕೆಲಸ ಮಾಡೋಕೆ ಆಗೋದಿಲ್ಲ ಅಂದರೆ ವರ್ಗಾವಣೆ ಮಾಡಿಕೊಂಡು ಹೊರಟು ಹೋಗಿ ಎಂದರು. ಬಳಿಕ ಅಧ್ಯಕ್ಷರು ಹಾಗೂ ಸದಸ್ಯರ ದೂರುಗಳಿಂದ ಎಚ್ಚೆತ್ತಾ ಜಿಲ್ಲಾ ಪಂಚಾಯತ್ ಸಿಇಓ ಗುರುದತ್ ಹೆಗಡೆ ಅವರು ರುದ್ರಪ್ಪರನ್ನ ಸೇವೆಯಿಂದ ವಿಮುಕ್ತಿಗೊಳಿಸಿ, ಬೇರೆಯವರನ್ನ ನಿಯೋಜಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದರು.

    ಚಿಂತಾಮಣಿ ನಗರದ ಕ್ರೀಡಾಂಗಣದಲ್ಲಿನ ಮಳಿಗೆಗೆಳ ಬಾಡಿಗೆ ಒಂದೂವರೆ ಕೋಟಿ ಬಾಕಿ ಇದ್ದು, ಎರಡು ವರ್ಷಗಳಿಂದ ಹಣ ವಸೂಲಿ ಮಾಡದೇ ರುದ್ರಪ್ಪ ಕರ್ತವ್ಯಲೋಪ ತೋರಿದ್ದಾರೆ. ಈ ಬಗ್ಗೆ ಕೇಳಿದರೆ ಕ್ಷೇತ್ರದ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಇದಕ್ಕೆ ತಡೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದು, ಇದರಿಂದ ಕೆರಳಿದ ಅಧ್ಯಕ್ಷರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಅಷ್ಟೇ ಅಲ್ಲದೆ ಕ್ರೀಡಾಂಗಣಗಳಲ್ಲಿನ ಶೌಚಾಲಯಗಳ ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿನ ಈಜುಕೊಳದ ನಿರ್ವಹಣೆ ಸಹ ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ಜಿ.ಪ ಸದಸ್ಯರು ರುದ್ರಪ್ಪ ವಿರುದ್ಧ ಕೆಂಡಾಮಂಡಲರಾದರು. ಈ ವೇಳೆ ರೋಸಿ ಹೋದ ಜಿ.ಪಂ ಅಧ್ಯಕ್ಷ ಮಂಜುನಾಥ್ ಅವರು ಪ್ರತಿ ಬಾರಿ ಸಭೆಯಲ್ಲೂ ಇದೇ ವಿಷಯ ಬಗ್ಗೆ ಚರ್ಚೆ ನಡೆಯುತ್ತದೆ. ಪದೇ ಪದೇ ಚರ್ಚೆ ಆಗುತ್ತಿದ್ದರೂ ನೀವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಯಾಗಲು ನಿಮಗೆ ಅರ್ಹತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಪ್ರೇಮಿ ಜೊತೆ ಮುನಿಸಿಕೊಂಡು ಮರವೇರಿದ ಪ್ರಿಯಕರ

    ಪ್ರೇಮಿ ಜೊತೆ ಮುನಿಸಿಕೊಂಡು ಮರವೇರಿದ ಪ್ರಿಯಕರ

    ಮೈಸೂರು: ಪ್ರೇಮಿ ಜೊತೆ ಸಿಟ್ಟಾದ ಪ್ರಿಯಕರನೊಬ್ಬ ಮರ ಏರಿ ಆತ್ಮಹತ್ಯೆ ಯತ್ನಿಸಿದ ಘಟನೆ ಮೈಸೂರಿನ ದೇವರಾಜ ಮೊಹಲ್ಲಾದಲ್ಲಿ ನಡೆದಿದೆ.

    ವಿನಯ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮರ ಏರಿದ ಪ್ರಿಯಕರ. ವಿನಯ್ ಮೂಲತಃ ಕಲಬುರಗಿ ಜಿಲ್ಲೆಯವನಾಗಿದ್ದು, ಕಲಬುರಗಿಯಿಂದ ಮೈಸೂರಿಗೆ ಬಂದಿದ್ದನು. ಬಳಿಕ ಮೈಸೂರಿನಲ್ಲಿ ಓದುತ್ತಿದ್ದ ಯುವತಿಯನ್ನು ಪ್ರೀತಿಸಿದ್ದಾನೆ. ಪ್ರೀತಿಯಲ್ಲಿ ಬಿರುಕು ಮೂಡಿದ ಕಾರಣ ಇಂದು ವಿನಯ್ ಮರವೇರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಈ ವಿಷಯ ತಿಳಿದ ದೇವರಾಜ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಬಳಿಕ ಪ್ರಿಯಕರ ವಿನಯ್ ಮನವೊಲಿಸಿ ಕೆಳಗೆ ಇಳಿಸಿದ್ದಾರೆ. ಸದ್ಯ ವಿನಯ್ ಹಾಗೂ ಆತನ ಪ್ರಿಯತಮೆಯನ್ನು ಪೊಲೀಸರು ದೇವರಾಜ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾರ್ವಜನಿಕ ಸಭೆಯಲ್ಲಿ ಸಿದ್ದರಾಮಯ್ಯ ರೌದ್ರಾವತಾರ – ಮಹಿಳೆಯ ಮೈಕ್ ಕಿತ್ತುಕೊಂಡು ಕೋಪ ಪ್ರದರ್ಶನ

    ಸಾರ್ವಜನಿಕ ಸಭೆಯಲ್ಲಿ ಸಿದ್ದರಾಮಯ್ಯ ರೌದ್ರಾವತಾರ – ಮಹಿಳೆಯ ಮೈಕ್ ಕಿತ್ತುಕೊಂಡು ಕೋಪ ಪ್ರದರ್ಶನ

    ಮೈಸೂರು: ಕ್ಷೇತ್ರದ ಶಾಸಕರು ಕೈಗೆ ಸಿಗುವುದಿಲ್ಲ ಎಂದು ಸಾರ್ವಜನಿಕ ಸಭೆಯಲ್ಲಿ ದೂರು ನೀಡಿದ್ದಕ್ಕೆ ಟೇಬಲ್ ಕುಟ್ಟಿದ ಮಹಿಳೆಯ ಮೈಕ್ ಕಿತ್ತುಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ರೌದ್ರಾವತಾರ ಪ್ರದರ್ಶಿಸಿದ್ದಾರೆ.

    ಜಿಲ್ಲೆಯ ವರುಣಾ ವಿಧಾನಸಭಾ ವ್ಯಾಪ್ತಿಯ ಗರ್ಗೇಶ್ವರಿ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ವೇಳೆ ಈ ಘಟನೆ ನಡೆದಿದೆ. ನಿಮ್ಮ ಮಗ ಎಂಎಲ್‍ಎ ಆಗಿದ್ದಾರೆ. ಆದ್ರೆ ಕ್ಷೇತ್ರದ ಜನರ ಕೈಗೆ ಸಿಗುತ್ತಿಲ್ಲ ಎಂದು ಶಾಸಕ ಯತೀಂದ್ರ ಅವರ ವಿರುದ್ಧ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಜಮಲಾರ್ ಟೇಬಲ್ ಕುಟ್ಟಿ ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಕೋಪಗೊಂಡ ಸಿದ್ದರಾಮಯ್ಯ ಎಲ್ಲರ ಎದುರೇ ಮಹಿಳೆ ಕೈಯಲ್ಲಿದ್ದ ಮೈಕನ್ನು ಕಿತ್ತುಕೊಂಡು ಸಿಡಿಮಿಡಿಗೊಂಡಿದ್ದಾರೆ.

    ನಿಮ್ಮ ಮಗ ಕೈಗೆ ಸಿಗಲ್ಲ ಎಂದು ದೂರು ಹೇಳಿದಕ್ಕೆ ಕೆಂಡಮಂಡಲರಾದ ಸಿದ್ದರಾಮಯ್ಯ, ಮಹಿಳೆಯನ್ನು ತರಾಟೆಗೆ ತೆಗೆದುಕೊಂಡು ಬಾಯಿ ಮುಚ್ಚಿಸಿದರು. ಅಷ್ಟೇ ಅಲ್ಲದೆ ಏನಮ್ಮ ನಾವು ದೇಶಕ್ಕೆ ಅನ್ಯಾಯ ಮಾಡಿರುವ ಥರ ಮಾತಾಡ್ತಿದ್ದೀಯಾ. ನನ್ನ ಮುಂದೆಯೇ ಟೆಬಲ್ ಕುಟ್ಟಿ ಮಾತನಾಡುತ್ತಿದ್ದಿಯಾ? ಕುತ್ಕೊಳಮ್ಮ ಸುಮ್ಮನೆ ಎಂದು ಕೊನೆಗೆ ಮಹಿಳೆ ಬಳಿ ಇದ್ದ ಮೈಕ್ ಕಿತ್ತುಕೊಂಡು ಕೋಪ ಪ್ರದರ್ಶಿಸಿದರು.

    https://www.youtube.com/watch?v=U55ame3QXpU

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಟಿ ದಾಳಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಪುನೀತ್ ರಾಜ್‍ಕುಮಾರ್ ಗರಂ

    ಐಟಿ ದಾಳಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಪುನೀತ್ ರಾಜ್‍ಕುಮಾರ್ ಗರಂ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಐಟಿ ದಾಳಿ ಮುಗಿದ ತಕ್ಷಣ ಮನೆಯಿಂದ ಹೊರ ಬಂದು ಅಭಿಮಾನಿಗಳನ್ನು ಮಾತನಾಡಿಸಿ ಹುಬ್ಬಳ್ಳಿಗೆ ತೆರಳಿದ್ದಾರೆ. ಈ ಮಧ್ಯೆ ಮಾಧ್ಯಮದವರು ಐಟಿ ದಾಳಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಗರಂ ಆಗಿದ್ದಾರೆ.

    ಪುನೀತ್ ಮನೆಯಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐಟಿ ದಾಳಿ ನಡೆದ ನಂತರ ನನ್ನ ಯಾವುದೇ ರಿಯಾಕ್ಷನ್ ಇಲ್ಲ. ನಾನು ನಾರ್ಮಲ್ ಆಗಿದ್ದೇನೆ ಅಂದರು. ಇದೇ ವೇಳೆ ಐಟಿ ಅಧಿಕಾರಿಗಳು ನಿಮ್ಮ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಸೋಮವಾರ ವಿಚಾರಣೆಗೆ ಕರೆದಿದ್ದಾರೆ ಎಂದು ಪ್ರಶ್ನಿಸಿದ್ದಕ್ಕೆ ಆ ವಿಷಯ ನಾನ್ಯಾಕೆ ನಿಮಗೆ ಹೇಳಬೇಕು. ಇದು ಐಟಿ ಅಧಿಕಾರಗಳ ಹಾಗೂ ನನ್ನ ನಡುವೆಯ ವಿಷಯ ಎಂದು ಗರಂ ಆದರು. ಇದನ್ನೂ ಓದಿ: ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ

    ಬಳಿಕ ಪುನೀತ್ ಐಟಿ ಅಧಿಕಾರಿಗಳು ಬಂದು ಅವರ ಕೆಲಸ ಏನು ಅದನ್ನು ಮಾಡಿದ್ದಾರೆ. ಅವರಿಗೆ ನಾವು ಸಹಕರಿಸಿದ್ದೇವೆ. ಐಟಿ ಅಧಿಕಾರಿಗಳು ತುಂಬಾ ಪ್ರೊಫೆಶನಲ್ ಆಗಿ ಕೆಲಸ ಮಾಡಿದ್ದಾರೆ. ಏನೂ ತೊಂದರೆ ಆಗಿಲ್ಲ ಎಂದು ನಗುತ್ತಾ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರೇಡ್ ಆಗ್ತಿದ್ದಾಗ ಸ್ವಲ್ಪ ಬೇಜಾರ್ ಆಗ್ತಿತ್ತು, ಇರಿಟೇಟ್ ಆದ್ರೂ ಸಹಕಾರ ನೀಡ್ಬೇಕಿತ್ತು- ಶಿವಣ್ಣ

    ಇಂದು ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಪುನೀತ್ ಅಭಿನಯದ `ನಟಸಾರ್ವಭೌಮ’ ಸಿನಿಮಾದ ಧ್ವನಿಸುರುಳಿ ಬಿಡುಗಡೆಯಾಗುತ್ತಿದೆ. ಪುನೀತ್ ಮನೆಯ ಐಟಿ ದಾಳಿ ಶುಕ್ರವಾರ ರಾತ್ರಿ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಇಂದು ಕಾರ್ಯಕ್ರಮಕ್ಕೆ ಹೋಗಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಪುನೀತ್ ಹುಬ್ಬಳ್ಳಿಗೆ ತೆರಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
  • ಆಂಡ್ರ್ಯೂ ವಿಷಯಕ್ಕೆ ಸ್ನೇಹಿತ ಶಶಿ ಮೇಲೆ ಕವಿತಾ ಗರಂ

    ಆಂಡ್ರ್ಯೂ ವಿಷಯಕ್ಕೆ ಸ್ನೇಹಿತ ಶಶಿ ಮೇಲೆ ಕವಿತಾ ಗರಂ

    ಬೆಂಗಳೂರು: ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-6ರಲ್ಲಿ ಕವಿತಾ ತಮ್ಮ ಸ್ನೇಹಿತ ಶಶಿ ಮೇಲೆ ಗರಂ ಆಗಿದ್ದಾರೆ.

    ಬಿಗ್ ಬಾಸ್ ಸ್ಪರ್ಧಿಗಳಿಗೆ ಈ ಬಾರಿ ‘ಬಿಗ್‍ಬಾಸ್ ನಗರ’ ಟಾಸ್ಕ್ ನೀಡಿದರು. ಈ ಟಾಸ್ಕ್ ನಲ್ಲಿ ಬಿಗ್ ಬಾಸ್ ಆಂಡ್ರ್ಯೂ ಹಾಗೂ ನಯನ ಅವರನ್ನು ನಿಯಮ ರೂಪಿಸುವ ಅಧಿಕಾರಿಯಾಗಿ ಮಾಡಿದರು. ನವೀನ್ ಹಾಗೂ ಅಕ್ಷತಾರನ್ನು ಆಟೋ ಚಾಲಕರಾಗಿ ಮಾಡಿ ಮನೆಯ ಉಳಿದ ಸದಸ್ಯರನ್ನು ನಾಗರಿಕರಾಗಿ ಮಾಡಿದರು.

    ಈ ಟಾಸ್ಕ್ ನಲ್ಲಿ ಅಡುಗೆ ವಿಷಯಕ್ಕಾಗಿ ಅಧಿಕಾರಿಗಳ ಹಾಗೂ ನಾಗರಿಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಂಡ್ರ್ಯೂ ತಮಗೆ ಇಷ್ಟ ಬಂದಂತೆ ನಿಯಮಗಳನ್ನು ರೂಪಿಸುತ್ತಿದ್ದರು. ಈ ನಿಯಮಗಳ ಬಗ್ಗೆ ಧ್ವನಿ ಎತ್ತದೆ ಆಂಡ್ರ್ಯೂ ಮಾತಿಗೆ ಒಪ್ಪಿಗೆ ನೀಡಿದ್ದು ಯಾಕೆ ಎಂದು ಪ್ರಶ್ನಿಸಿ ಕವಿತಾ ಶಶಿ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.

    ನಿಯಮ ರೂಪಿಸುವ ಅಧಿಕಾರಿಯಾಗಿದ್ದ ಆಂಡ್ರ್ಯೂ ತನಗೆ ಇಷ್ಟ ಬಂದಂತೆ ನಿಯಮಗಳನ್ನು ಬದಲಾಯಿಸುತ್ತಿದ್ದರು. ಹಾಗಾಗಿ ಕವಿತಾ, ಆಂಡ್ರ್ಯೂ ಮೇಲೆ ಕೋಪಗೊಂಡಿದ್ದರು. ಶಶಿ ಈ ನಿಯಮಗಳ ಬಗ್ಗೆ ಸರಿಯಾಗಿ ಮಾತನಾಡಿಲ್ಲ. ಶಶಿ ಸರಿಯಾಗಿ ಮಾತನಾಡಿದ್ದರೆ, ನಾನು ರಾತ್ರಿಯಿಡಿ ಜೈಲಲ್ಲಿ ಕಾಲ ಕಳೆಯುತ್ತಿರಲಿಲ್ಲ ಎಂದು ಶಶಿ ವಿರುದ್ಧ ಗರಂ ಆಗಿದ್ದಾರೆ.

    ಅಧಿಕಾರಿಗಳಿಗೆ ಅಧಿಕಾರ ಇರುವುದರಿಂದ ಅವರು ನಿಯಮಗಳನ್ನು ಬದಲಾಯಿಸುತ್ತಿದ್ದಾರೆ. ಅಡುಗೆ ಮಾಡುವ ವಿಚಾರದಲ್ಲಿ ಇಡೀ ತಂಡ ತೆಗೆದುಕೊಂಡ ನಿರ್ಧಾರ ಪರವಾಗಿ ನಾನು ನಿಂತೆ. ನಾನು ಯಾವುದೇ ಸ್ವಂತ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಶಶಿ, ಕವಿತಾಗೆ ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv