Tag: Angola

  • 300 ವರ್ಷಗಳ ನಂತ್ರ ಅಂಗೋಲಾದಲ್ಲಿ ಪಿಂಕ್ ಡೈಮಂಡ್ ಪತ್ತೆ!

    300 ವರ್ಷಗಳ ನಂತ್ರ ಅಂಗೋಲಾದಲ್ಲಿ ಪಿಂಕ್ ಡೈಮಂಡ್ ಪತ್ತೆ!

    ಲುವಾಂಡಾ: ಅಂಗೋಲಾದಲ್ಲಿ ಗಣಿಗಾರಿಕೆ ಮಾಡುತ್ತಿದ್ದ ವೇಳೆ ಅಪರೂಪದ ಪ್ಯೂರ್ ಪಿಂಕ್ ಬಣ್ಣದ ವಜ್ರವೊಂದು ಪತ್ತೆಯಾಗಿದೆ. ಈ ಬೆಲೆಬಾಳುವ ವಜ್ರ 300 ವರ್ಷಗಳಲ್ಲಿಯೇ ಕಂಡು ಬಂದ ಅತಿದೊಡ್ಡ ವಜ್ರವಾಗಿದೆ.

    170 ಕ್ಯಾರೆಟ್ ತೂಕದ ಪಿಂಕ್ ವಜ್ರವನ್ನು ದಿ ಲುಲೋ ರೋಸ್ ಎಂದು ಕರೆಯಲಾಗುತ್ತದೆ. ಇದು ಅಂಗೋಲಾದ ಲುಲೋ ಮೈನ್ಸ್‍ನಲ್ಲಿ ಪತ್ತೆಯಾಗಿದ್ದು, ದೇಶದ ಈಶಾನ್ಯ ಭಾಗದಲ್ಲಿ ಹೆಚ್ಚು ವಜ್ರ ದೊರೆಯುತ್ತದೆ ಎಂದು ತಿಳಿದುಬಂದಿದೆ. ಅಲ್ಲದೇ ಇದುವರೆಗೂ ದೊರೆತ ಅತಿದೊಡ್ಡ ಪಿಂಕ್ ಬಣ್ಣದ ವಜ್ರಗಳ ಪಟ್ಟಿಯಲ್ಲಿ ಇದು ಸಹ ಸ್ಥಾನ ಪಡೆಯುತ್ತದೆ ಎಂದು ಲ್ಯೂಕಾಪಾ ವಜ್ರದ ಕಂಪನಿ ಹೂಡಿಕೆದಾರು ತಿಳಿಸಿದ್ದಾರೆ.

    ಟೈಪ್ IIa ಎಂಬ ಈ ವಜ್ರ ನೈಸರ್ಗಿಕ ಕಲ್ಲುಗಳಲ್ಲಿ ದೊರೆಯುವ ಅಪರೂಪದ ಹಾಗೂ ಅತಿ ಶುದ್ಧವಾದ ವಜ್ರವಾಗಿದ್ದು, ಈ ವಜ್ರ ದೊರೆತಿರುವುದನ್ನು ಅಂಗೋಲಾ ಸರ್ಕಾರ ಸಹ ಸ್ವಾಗತಿಸಿದ್ದು, ಈ ಗಣಿಗಾರಿಕೆಯಲ್ಲಿ ಅಲ್ಲಿನ ಸರ್ಕಾರ ಸಹ ಪಾಲುದಾರರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸರ್ಕಾರಕ್ಕೆ ಜನೋತ್ಸವದ ಬದಲು ಜನಾಕ್ರೋಶದ ದರ್ಶನವಾಗಿದೆ – ಕಾರ್ಯಕ್ರಮ ರದ್ದುಗೊಳಿಸಿದ್ದು ಮೃತನ ಮೇಲಿನ ಗೌರವದಿಂದಲ್ಲ: ಕಾಂಗ್ರೆಸ್

    ಈ ಗುಲಾಬಿ ವಜ್ರದಿಂದ  ವಿಶ್ವದಲ್ಲೇ  ವಜ್ರದ ಉದ್ಯಮದಲ್ಲಿ ಅಂಗೋಲಾ ಪ್ರಮುಖ ದೇಶವಾಗಿ ಹೊರಹೊಮ್ಮಿದೆ. ಆಟಗಾರನಾಗಿ ಪ್ರದರ್ಶಿಸುವುದನ್ನು ಮುಂದುವರೆಸಿದೆ. ಬಹುಶಃ ಈ ವಜ್ರವನ್ನು ಅಂತರರಾಷ್ಟ್ರೀಯ ಟೆಂಡರ್‌ನಲ್ಲಿ ಅಚ್ಚರಿ ಪಡುವಂತಹ ಬೆಲೆಗೆ ಮಾರಾಟ ಮಾಡಬಹುದು. ದಿ ಲುಲೋ ರೋಸ್‍ನ ನಿಜವಾದ ಮೌಲ್ಯವನ್ನು ಅರಿತುಕೊಳ್ಳಲು ವಜ್ರವನ್ನು ಕತ್ತರಿಸಿ ಪಾಲಿಶ್ ಮಾಡಬೇಕಾಗಿದೆ. ಅಲ್ಲದೇ ಈ ಪ್ರಕ್ರಿಯೆಯಲ್ಲಿ ಬೆಲೆಬಾಳುವ ಸ್ಟೋನ್ ತನ್ನ ತೂಕದ 50 ಪ್ರತಿಶತವನ್ನು ಕಳೆದುಕೊಳ್ಳುತ್ತದೆ ಅಂತ ಹೇಳಲಾಗುತ್ತಿದೆ ಎಂದು ಅಂಗೋಲಾದ ಖನಿಜ ಸಂಪನ್ಮೂಲ ಸಚಿವ ಡೈಮಂಟಿನೋ ಅಜೆವೆಡೊ ಹೇಳಿದ್ದಾರೆ.

    2017 ರಲ್ಲಿ ಹಾಂಗ್ ಕಾಂಗ್‍ನಲ್ಲಿ ನಡೆದ ಹರಾಜಿನಲ್ಲಿ 59.6 ಕ್ಯಾರೆಟ್ ಪಿಂಕ್ ಸ್ಟಾರ್ ಅನ್ನು 71. 2 ಮಿಲಿಯನ್ ಅಮೆರಿಕ ಡಾಲರ್‌ಗೆ ಮಾರಾಟ ಮಾಡಲಾಗಿತು. ಇದು ಇಲ್ಲಿಯವರೆಗೂ ಮಾರಾಟವಾದ ಅತ್ಯಂತ ದುಬಾರಿ ವಜ್ರವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಮೀಸಲಾತಿ ಪ್ರಕಟಿಸಿ, ಬಿಬಿಎಂಪಿ ಚುನಾವಣೆ ನಡೆಸಿ – ಸುಪ್ರೀಂ ಕೋರ್ಟ್

    Live Tv
    [brid partner=56869869 player=32851 video=960834 autoplay=true]

  • ಮಂಜಗುಣಿಯ ಮಹಾದೇವಗೆ ಒಲಿದ ಗಂಗೆ – ಏಕಾಂಗಿಯಾಗಿ ಕಲ್ಲಕುಟ್ಟಿ ನೀರು ತರಿಸಿದ ಆಧುನಿಕ ಭಗೀರಥ

    ಮಂಜಗುಣಿಯ ಮಹಾದೇವಗೆ ಒಲಿದ ಗಂಗೆ – ಏಕಾಂಗಿಯಾಗಿ ಕಲ್ಲಕುಟ್ಟಿ ನೀರು ತರಿಸಿದ ಆಧುನಿಕ ಭಗೀರಥ

    ಕಾರವಾರ: ಲಾಕ್‍ಡೌನ್ ಇರುವುದರಿಂದ ಬಹಳಷ್ಟು ಜನರು ಮನೆಯಲ್ಲೇ ಇದ್ದು ಸಮ್ಮನೆ ಕಾಲ ಹರಣ ಮಾಡುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಮಂಜುಗುಣಿಯ ಕೂಲಿ ಕಾರ್ಮಿಕ ಏಕಾಂಗಿಯಾಗಿ ಬಾವಿ ತೋಡಿ ಊರಿನ ಕುಡಿಯುವ ನೀರಿನ ದಾಹ ನೀಗಿಸಿದ್ದಾರೆ.

    ಗುದ್ದಲಿ ಹಿಡಿದು ಕಲ್ಲಿನ ನೆಲ ಅಗೆಯುತ್ತಿರುವ ವ್ಯಕ್ತಿ ಹೆಸರು ಮಹಾದೇವ ಮಂಕಾಳುನಾಯ್ಕ್. ಅಂಕೋಲದ ಮಂಜಗುಣಿ ಊರಿನ ನಿವಾಸಿ. ಪ್ರತಿ ವರ್ಷ ಬೇಸಿಗೆ ಬಂತೆಂದರೆ ಈ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ. ಗ್ರಾಮಪಂಚಾಯ್ತಿಯಿಂದ ಇರುವ ಒಂದು ಬಾವಿಯಲ್ಲಿ ಅರವತ್ತಕ್ಕೂ ಹೆಚ್ಚು ಮನೆಯಿರುವ ಜನರು ನೀರು ತರಬೇಕು. ಜೂನ್ ತಿಂಗಳು ಬರುವುದರೊಳಗೆ ಇದ್ದ ಒಂದು ಬಾವಿ ಅಂತರ್ಜಲ ಇಳಿದು ಕುಡಿಯುವುದಕ್ಕೆ ಗ್ರಾಮಪಂಚಾಯ್ತಿಯಿಂದ ವಾರಕ್ಕೆ ಒಂದು ಬಾರಿ ಬರುವ ನೀರೇ ಗತಿ.

    ಗ್ರಾಮದಲ್ಲಿ ಕೆಲವರ ಮನೆಯಲ್ಲಿ ಬಾವಿ ಇದ್ದರೂ ಹೆಚ್ಚು ನೀರು ಇರದ ಕಾರಣ ಹಾಗೂ ಪಕ್ಕದಲ್ಲೇ ಸಮುದ್ರ ಇರುವುದರಿಂದ ಬಿರು ಬೇಸಿಗೆಯಲ್ಲಿ ತಳ ಹಿಡಿದ ನೀರು ಉಪ್ಪು ನೀರಾಗಿ ಪರಿವರ್ತಿತವಾಗುತ್ತದೆ. ಹೀಗಾಗಿ ಊರ ಮಂದಿಯಲ್ಲಾ ಖಾಲಿ ಕೊಡ ಹಿಡಿದು ಟ್ಯಾಂಕರ್ ಬರುವ ದಾರಿಯನ್ನು ಕಾಯುವುದೇ ದಿನದ ಕೆಲಸವಾಗುತಿತ್ತು. ಮಹಾದೇವ ಮಂಕಾಳುನಾಯ್ಕ್ ರವರು ಪ್ರತಿ ದಿನ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಇದೇ ಜೀವನದ ಆಧಾರ ಕೂಡ. ಹೀಗಿರುವಾಗ ಲಕ್ಷಾಂತರ ರೂಪಾಯಿ ಸುರಿದು ಬಾವಿ ತೋಡಿಸಲು ಸಾಧ್ಯವೇ? ಹೀಗೆ ಅಂದುಕೊಂಡಿದ್ದ ಇವರಿಗೆ ಕಳೆದ ವರ್ಷದ ಲಾಕ್‍ಡೌನ್ ಕೂಲಿ ಕೆಲಸವಿಲ್ಲದೇ ಮನೆಯಲ್ಲೇ ಕೂರುವಂತೆ ಮಾಡಿತು.

    ಹೀಗೆ ಮನೆಯಲ್ಲಿದ್ದ ಇವರು ಪತ್ನಿ ಹಾಗೂ ಊರಿನ ಮಹಿಳೆಯರು ನೀರು ತರಲು ಪಡುವ ಕಷ್ಟವನ್ನು ನೋಡಿ ತಾವೇ ಒಂದು ಬಾವಿ ತೋಡಿದರೆ ಹೇಗೆ ಎಂದು ಯೋಚಿಸಿ ಕಾರ್ಯಪ್ರವೃತ್ತರಾದರು. ಅದಕ್ಕಾಗಿ ತಮ್ಮ ಮನೆಯ ಹಿತ್ತಲನ್ನು ಆಯ್ಕೆ ಮಾಡಿಕೊಂಡರು. ಆದರೆ ಬಾವಿ ತೋಡುವುದು ಸುಲಭದ ಕೆಲಸವಾಗಿರಲಿಲ್ಲ. ಹಿತ್ತಲ ಜಾಗ ಕಲ್ಲಿನ ಅರೆಯಿಂದ ಆವೃತವಾಗಿತ್ತು. ಆದರೂ ಛಲ ಬಿಡದ ಇವರು ಗುದ್ದಲಿ, ಪಿಕಾಸಿ ಹಿಡಿದು ಕಲ್ಲಿನ ಅರೆಯನ್ನು ಅಗೆಯತೊಡಗಿದರು. ಸರಿ ಸುಮಾರು ಎಂಟು ತಿಂಗಳ ಪ್ರಯತ್ನ 32 ಅಡಿಗಳ ಆಳದ ಬಾವಿ ನಿರ್ಮಾಣವಾಯಿತು. ಆದರೆ ಅಲ್ಪ ಜಲಬಂದರೂ ಬಳಸಲು ಹೆಚ್ಚು ಅನುಕೂಲವಾಗಿರಲಿಲ್ಲ. ಇನ್ನು ಅಷ್ಟರಲ್ಲಾಗಲೇ ಲಾಕ್‍ಡೌನ್ ಸಹ ಸಡಿಲಿಕೆ ಆದ್ದರಿಂದ ಹೊಟ್ಟೆ ಪಾಡಿಗಾಗಿ ಕೂಲಿಗೆ ಹೊರಟರು.

    ಕೊರೊನಾ ಎರಡನೇ ಅಲೆ ಬಂದಿದ್ದರಿಂದ ಮತ್ತೆ ಲಾಕ್‍ಡೌನ್ ಆಗಿದ್ದರಿಂದ ಮತ್ತೆ ಬಾವಿ ತೋಡಲು ಪ್ರಾರಂಭಿಸಿದರು. ಈ ಬಾರಿ ಅವರ ಅದೃಷ್ಟ ಕುಲಾಯಿಸಿತ್ತು. ಕಡು ಕಲ್ಲನ್ನ ಕಷ್ಟಪಟ್ಟು ಕೊರೆದ ಇವರಿಗೆ ನಾಲ್ಕು ಅಡಿ ಹೋಗುತಿದ್ದಂತೆ ಬರಪೋರ ಅಂತರಗಂಗೆ ಚಿಮ್ಮಿ ಬರತೊಡಗಿದಳು. ಇವರ ಭಗೀರಥ ಪ್ರಯತ್ನಕ್ಕೆ ನಾಲ್ಕು ಅಡಿ ಕಲ್ಲನ್ನು ಕೊರೆದ ಫಲವಾಗಿ ಹತ್ತು ಅಡಿ ಜಲ ಮೇಲೆದ್ದು ಬಂದಿತ್ತು. ಇವರ ಶ್ರಮಕ್ಕೆ ಕುಟುಂಬ ಸಹ ಖುಷಿ ಪಟ್ಟು ತಮ್ಮ ನೀರಿನ ಸಮಸ್ಯೆ ನೀಗಿತು ಎಂದು ನಿಟ್ಟುಸಿರು ಬಿಡುವಂತಾಯಿತು. ಜೊತೆಗೆ ಊರಿನ ಜನರ ಖಾಲಿ ಕೊಡ ಸಹ ಬಾವಿಯ ಮುಂದೆ ಸರತಿ ಸಾಲು ನಿಲ್ಲುತ್ತಿದ್ದು ಜನರಿಗೆ ಮಹಾದೇವ ಮಂಕಾಳುನಾಯ್ಕ ಜಲಾಮೃತವನ್ನು ತುಂಬಿ ಕೊಡುತಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ಸಮಯ ಸದುಪಯೋಗ-25 ಅಡಿ ಬಾವಿ ತೋಡಿದ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ

    ಇನ್ನು ಊರಿನ ಜನರು ಕೂಡ ಇವರ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದು ತನ್ನ ಸ್ವಂತಕ್ಕಲ್ಲದೇ ಊರಿನವರಿಗೂ ನೀರು ಕೊಡುತ್ತಿರುವ ಈ ಆಧುನಿಕ ಭಗೀರಥನಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜೀವಜಲ ಬೇಕಾದ್ರೆ ಜೀವವನ್ನೇ ಒತ್ತೆ ಇಡಬೇಕು- ಎದೆಮಟ್ಟದ ಹಳ್ಳ ದಾಟಲು ಮಹಿಳೆಯರ ಪರದಾಟ

  • ಮನೆಗೆ ನುಗ್ಗಿ ಚಿರತೆ ಕಿತಾಪತಿ – ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

    ಮನೆಗೆ ನುಗ್ಗಿ ಚಿರತೆ ಕಿತಾಪತಿ – ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

    – ಚಿರತೆ ನೋಡಿ ಭಯ ಬಿದ್ದ ಹಳ್ಳಿಗರು

    ಕಾರವಾರ: ಮನೆಯೊಂದಕ್ಕೆ ಚಿರತೆ ನುಗ್ಗಿ ಕಿತಾಪತಿ ಮಾಡಿ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿರತೆಗಳಿಗೇನೂ ಕಮ್ಮಿ ಇಲ್ಲ. ಆಹಾರದ ಕೊರತೆಯಿಂದ ಚಿರತೆಗಳು ನಾಡಿಗೆ ನುಗ್ಗುವುದು ಸಾಮಾನ್ಯವಾಗಿದೆ. ಹೀಗಾಗಿ ರಾತ್ರಿ ವೇಳೆ ಚಿರತೆಗಳು ಊರಿನತ್ತ ಮುಖ ಮಾಡುತ್ತಿವೆ. ಆಹಾರ ಅರಸಿ ಕಾಡಿನಿಂದ ಅಂಕೋಲ ತಾಲೂಕಿನ ಕೊಂಡಳ್ಳಿ ಗ್ರಾಮದ ರಮಾನಂದ ಎಂಬವರ ಮನೆಗೆ ಇಂದು ಬೆಳಗಿನ ಜಾವ ನುಗ್ಗಿದ್ದ ಚಿರಿತೆ ಮನೆಯ ಬಳಿ ಇದ್ದ ನಾಯಿ ಹಿಡಿಯುವ ಪ್ರಯತ್ನ ಮಾಡಿದೆ.

    ಆದರೆ ನಾಯಿ ಚಿರತೆ ಬಾಯಿಯಿಂದ ತಪ್ಪಿಸಿಕೊಂಡು ಓಡಿಹೋಗಿದೆ. ಇನ್ನೇನು ಆಹಾರ ಮಿಸ್ ಆಯ್ತು ಅನ್ನುವಷ್ಟರಲ್ಲಿ, ಮನೆಯಲ್ಲಿ ಕೋಳಿಗಳಿದ್ದ ಗೂಡು ಕಾಣಿಸಿದ್ದು ಗೂಡಿನ ಒಳಕ್ಕೆ ಬಾಯಿ ಹಾಕಿ ಕೋಳಿ ಹಿಡಿದು ಚಿರತೆ ಕಾಡಿಗೆ ಮರಳಿದೆ.

    ಇತ್ತ ಮನೆಯವರು ಬೆಳಗ್ಗೆ ಗೂಡಿನಲ್ಲಿ ಕೋಳಿ ಇಲ್ಲದ್ದನ್ನು ಗಮನಿಸಿ ಯಾರೋ ಕಳ್ಳರು ಕದ್ದು ಹೋಗಿರಬೇಕು ಎಂದು ಮನೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಗಮನಿಸಿದ್ದಾರೆ. ಆಗ ಕೋಳಿ ಕಳ್ಳತನ ಮಾಡಿದ್ದು ಯಾರು ಎಂದು ನೋಡಿ ಹೌಹಾರಿದ್ದಾರೆ. ಸಿ.ಸಿ ಟಿವಿಯಲ್ಲಿ ಸೆರೆಯಾದ ಈ ವೀಡಿಯೋ ಊರಿನ ಜನರಲ್ಲಿ ಭಯ ಮೂಡಿಸಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಅಂಕೋಲದಲ್ಲಿ ಹತ್ತನೇ ಶತಮಾನದ ತಾಮ್ರ ಶಾಸನ ಪತ್ತೆ

    ಅಂಕೋಲದಲ್ಲಿ ಹತ್ತನೇ ಶತಮಾನದ ತಾಮ್ರ ಶಾಸನ ಪತ್ತೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕುಂಬಾರಕೇರಿಯಲ್ಲಿ ಕದಂಬೇಶ್ವರ ದೇವಾಲಯದ ಮರುನಿರ್ಮಾಣ ಕಾರ್ಯಕ್ಕಾಗಿ ಭೂಮಿ ಅಗೆಯುವ ವೇಳೆ 5 ಸೆಂ.ಮೀ ಹಾಗೂ 20 ಸೆಂ.ಮೀ ಉದ್ದಳತೆಯ ಜೊತೆಗೆ 15 ಸೆಂ.ಮೀ ಮತ್ತು 10 ಸೆಂ.ಮೀ ಉದ್ದಳತೆಯ ಎರಡು ತಾಮ್ರ ಶಾಸನಗಳು ಪತ್ತೆಯಾಗಿದೆ.

    ಈ ಸಂಬಂಧ ದೇವಸ್ಥಾನದ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ವಿಠ್ಠಲರಾವ್ ವರ್ಣೇಕರ್ ಮಾಹಿತಿ ನೀಡಿದ್ದು, ಹೆಚ್ಚಿನ ಸಂಶೋಧನೆ ನಡೆಸಲು ಜಿಲ್ಲೆಯ ಇತಿಹಾಸ ತಜ್ಞ ಶ್ಯಾಮಸುಂದರ್ ಮುಂದಾಗಿದ್ದಾರೆ. ಈ ಶಾಸನವು ಕಲ್ಯಾಣ ಚಾಲುಕ್ಯರ ತ್ರೈಳೋಕ್ಯಮಲ್ಲನ ಆಡಳಿತ ಕಾಲದ್ದಾಗಿದ್ದು ಹತ್ತನೇ ಶತಮಾನದ್ದಾಗಿದೆ.

    ಶಾಸನದಲ್ಲೇನಿದೆ?
    ಸ್ವಸ್ತಿ ಸಮಸ್ತ ಭುವನಾಶ್ರಯ ಪ್ರತೂವೀವಲ್ಲಭ ಮಹಾರಾಜಾಧಿರಾಜ ಸತ್ಯಾಶ್ರಯ
    ಕುಳತಿಳಕ ಪರಮಭಟ್ಟಾರಕ ಚಾಳುಕ್ಯಾಭರಣ

    ಶ್ರೀಮತ್ರೈಲೋಕ್ಯಮಲ್ಲ ದೇವರ ರಾಜ್ಯದಲ್ಲಿ ಶಕವರ್ಷ 897ನೇಯ ಯುವ ಸಂವತ್ಸರದ ಭಾದ್ರಪದ ಮಾಸದ ಅಮವಾಸ್ಯೆ ಆದಿತ್ಯವಾರದಂದು ಸಂಭವಿಸಿದ ಸೂರ್ಯ ಗ್ರಹಣದ ಸಂದರ್ಭದಲ್ಲಿ ಶ್ರೀಮದ್ ಕಲಿಯರಸ ಪ್ಪಿರಿಯ ಭೂತಯ್ಯಗಡಂಬನು ಕದಂಬೇಶ್ವರ ದೇವಾಲಯ ನಿರ್ಮಾಣ ಮಾಡಿ, ಸಿವರಾಸಿ ಜೀಯರ ಪಾದಗಳಿಗೆ ನಮಿಸಿ, ಕಣ್ನಸೆ, ಬಡ್ಡಗಿವಾಳ್ಯ, ಸತ್ಯಾವಾಳು, ನಂದಾದೀವಿಗೆ, ಸೋಡಗ್ರ್ಗೆ ಇತ್ಯಾದಿ ನಿತ್ಯ ದೇವಸ್ವಂ ಕಾರ್ಯಗಳಿಗಾಗಿ ಹರದರಕೇರಿಯಿಂದ ಹತ್ತು ಗದ್ಯಾಣ ಮತ್ತು ತೆಂಕಣ ಕೇರಿಯಿಂದ ಐದು ಗದ್ಯಾಣ(ಹಣ)ವನ್ನು ದಾನವಾಗಿ ನೀಡಲಾಯಿತು.

    ಈ ಧರ್ಮವನ್ನು ಹಾಳು ಮಾಡಿದವರು ಕುರುಕ್ಷೇತ್ರದಲ್ಲಿ, ವಾರಣಾಸಿಯಲ್ಲಿ ಸಾವಿರ ಗೋವುಗಳನ್ನು ಕೊಂದಂತಹ ಪಾಪಕ್ಕೆ ಗುರಿಯಾಗುತ್ತಾರೆ ಎಂಬ ಶಾಪಾಶಯದ ನುಡಿಗಳಿವೆ.

    ಶಾಸನದ ಪ್ರಾಮುಖ್ಯತೆ:
    ಪ್ರಸ್ತುತ ಶಾಸನಗಳು 10ನೇ ಶತಮಾನದ ಕೊನೆಯಲ್ಲಿ ಅಂಕೋಲೆಯು ನೇರವಾಗಿ ಕಲ್ಯಾಣ ಚಾಲುಕ್ಯರ ಆಡಳಿತಕ್ಕೆ ಒಳಪಟ್ಟಿತ್ತು ಎಂಬ ವಿಷಯವನ್ನು ತಿಳಿಸುತ್ತದೆ. ಶಾಸನದಲ್ಲಿ ಯಾವುದೇ ಮಾಂಡಳೀಕ ಅರಸನ ಉಲ್ಲೇಖವಿಲ್ಲ. ದೇವಾಲಯವನ್ನು ಕಟ್ಟಿಸಿದ ಭೂತಯ್ಯಗಡಂಬ ತ್ರೈಲೋಕ್ಯಮಲ್ಲನ ಯಾವುದೋ ಒಬ್ಬ ಅಧಿಕಾರಿಯಾಗಿರಬೇಕು. ಈ ಶಾಸನವು ಶಕವರ್ಷ 897 ಅಂದರೆ ಕ್ರಿ.ಶ. 975ನೇ ಇಸವಿಯಲ್ಲಿ ನಿರ್ಮಾಣವಾಗಿರುವುದು ತಿಳಿಸುವುದರಿಂದ ಇಂದಿಗೆ ಸರಿಯಾಗಿ 1046 ವರ್ಷಗಳ ಹಿಂದೆ ಕದಂಬೇಶ್ವರ ದೇವಾಲಯ ಶ್ರೀಮದ್ ಕಲಿಯರಸ ಪ್ಪಿರಿಯ ಭೂತಯ್ಯಗಡಂಬನಿಂದ ನಿರ್ಮಾಣವಾಯಿತೆಂದು ಸ್ಪಷ್ಟವಾಗಿ ಹೇಳುತ್ತದೆ.

    ಅಂತೆಯೇ ತೆಂಕಣಕೇರಿಯನ್ನು ಉಲ್ಲೇಖಿಸಿರುವುದರಿಂದ ಅದರ ಪ್ರಾಚೀನತೆಯೂ 1046 ವರ್ಷಗಳಷ್ಟು ಹಿಂದಕ್ಕೆ ಒಯ್ಯುತ್ತದೆ. ಶಾಸನದಲ್ಲಿ ಉಲ್ಲೇಖಿತ ತ್ರೈಲೋಕ್ಯಮಲ್ಲನು ಕಲ್ಯಾಣ ಚಾಳುಕ್ಯರ ಎರಡನೇ ತೈಲಪನಾಗಿದ್ದು ಈತನು ಕ್ರಿ.ಶ.973 ರಿಂದ 979ರ ವರೆಗೆ ಆಳ್ವಿಕೆ ನಡೆಸಿದ್ದಾನೆ. ಈತನ ಅವಧಿಯಲ್ಲಿ ಅಧಿಕಾರಿಯಾಗಿದ್ದ ಭೂತಯ್ಯ ಗಡಂಬ ಕದಂಬ ವಂಶಸ್ಥನಾಗಿರಬೇಕು ಎಂದು ಊಹಿಸಲಾಗಿದೆ.

    ಭೂತಯ್ಯ+ಕದಂಬ=ಭೂತಯ್ಯಗಡಂಬ. ಆದ್ದರಿಂದಲೇ ಆತ ಕಟ್ಟಿಸಿದ ದೇವಾಲಯ ಕದಂಬೇಶ್ವರ ದೇವಾಲಯವೆಂದು ಖ್ಯಾತಿಯಾಗಿದೆ. ಅಲ್ಲದೆ ಶಾಸನವು ಸಿವರಾಸಿ ಜೀಯನನ್ನು ಉಲ್ಲೇಖಿಸುವುದರಿಂದ ಆ ಸಮಯದಲ್ಲಿ ಈ ಪ್ರದೇಶದಲ್ಲಿ ಕಾಳಾಮುಖ ಯತಿಗಳ ಪ್ರಾಬಲ್ಯವಿರುವುದರ ಕುರಿತು ಬೆಳಕು ಚೆಲ್ಲುತ್ತದೆ. ಶಾಸನದಲ್ಲಿ ಬರುವ ತೆಂಕಣಕೇರಿಯು ಇಂದಿನ ತೆಂಕಣ ಕೇರಿಯೆಂದು ಗುರುತಿಸಿದರೆ ಶಾಸನ ಹೇಳುವ ‘ತಳವಟ್ಟೆ ಧಮ್ಮಗೇರಿ ಹರದರಕೇರಿ’ಯನ್ನು ತಳವೃತ್ತಿಯಾ ಧಾರಿತ ವ್ಯಾಪಾರಿಗಳ ಕೇರಿ ಎಂದು ಭಾವಿಸಿದಾಗ ಅದನ್ನು ಇಂದಿನ ಕುಂಬಾರಕೇರಿ ಎಂದು ಗುರುತಿಸಬಹುದು ಎಂದು ಶ್ಯಾಮಸುಂದರ ಗೌಡ ವಿವರಿಸಿದ್ದಾರೆ.