Tag: anger

  • ಬಾಲಿವುಡ್ ಸ್ಟಾರ್ ಜೋಡಿಯ ಮನೆ ನುಗ್ಗಿ ಹೊಡಿತೀನಿ : ಕಂಗನಾ ರಣಾವತ್ ಗರಂ

    ಬಾಲಿವುಡ್ ಸ್ಟಾರ್ ಜೋಡಿಯ ಮನೆ ನುಗ್ಗಿ ಹೊಡಿತೀನಿ : ಕಂಗನಾ ರಣಾವತ್ ಗರಂ

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಕಳೆದ ಒಂದು ವಾರದಿಂದ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾರೆ. ತಮ್ಮ ಮೇಲೆ ಬೇಹುಗಾರಿಕೆ ಮಾಡಲಾಗುತ್ತಿದೆ ಎನ್ನುವುದರಿಂದ ಹಿಡಿದು ತಾವೊಬ್ಬ ಹುಚ್ಚಿ, ಏನು ಬೇಕಾದರೂ ಮಾಡುವುದಕ್ಕೆ ರೆಡಿ, ಮನೆಗೆ ನುಗ್ಗಿ ಹೊಡಿತೀನಿ ಎನ್ನುವವರೆಗೆ ತಾಳ್ಮೆ ಕಳೆದುಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಎನ್ನುವುದು ಅವರ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆಯಾಗಿದೆ.

    ಬಾಲಿವುಡ್ ಜೋಡಿಯೊಂದು ತಮಗೆ ವಿಪರೀತ ಕಿರುಕುಳ ನೀಡುತ್ತಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಆ ಜೋಡಿಯ ಬಗ್ಗೆ ಕಿಡಿಕಾರಿದ್ದಾರೆ. ನೀವು ಹೀಗೆಯೇ ಮುಂದುವರೆದರೆ, ನಿಮ್ಮ ಮನೆಗೆ ನುಗ್ಗಿ ಹೊಡೆಯುತ್ತೇನೆ ಎಂದು ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ, ಆ ಜೋಡಿ ಯಾರು ಎನ್ನುವುದನ್ನು ಅವರು ತಿಳಿಸಿಲ್ಲ. ಆ ಜೋಡಿಗೂ ಇವರಿಗೆ ಇಷ್ಟೊಂದು ದ್ವೇಷ ಯಾಕೆ ಎನ್ನುವುದನ್ನೂ ಅವರು ಹೇಳಿಕೊಂಡಿಲ್ಲ. ಇದನ್ನೂ ಓದಿ: ರಾಖಿ ಸಾವಂತ್ ಪತಿ, ಮೈಸೂರು ಹುಡುಗ ಆದಿಲ್ ಪೊಲೀಸ್ ವಶಕ್ಕೆ

    ಮೊನ್ನೆಯಷ್ಟೇ ಎಮರ್ಜನ್ಸಿ ಚಿತ್ರಕ್ಕಾಗಿ ಇಡೀ ಆಸ್ತಿಯನ್ನು ಅಡವಿಟ್ಟಿದ್ದೇನೆ ಎಂದು ಕಂಗನಾ ಬರೆದುಕೊಂಡಿದ್ದರು. ತನ್ನೆಲ್ಲ ಆಸ್ತಿಯನ್ನು ಈ ಚಿತ್ರಕ್ಕಾಗಿ ಮುಡುಪಿಟ್ಟ ವಿಚಾರವನ್ನು ಭಾವುಕರಾಗಿಯೇ ಅವರು ಹಂಚಿಕೊಂಡಿದ್ದಾರೆ. ಈ ಕಾರಣದಿಂದಾಗಿ ಏನಾದರೂ ಅವರು ಡಿಪ್ರೆಷನ್ ಗೆ ಹೋಗಿದ್ದಾರಾ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ನಿರ್ದೇಶನ, ನಟನೆ ಜೊತೆ ನಿರ್ಮಾಣಕ್ಕೂ ಅವರು ಇಳಿದಿರುವುದರಿಂದ ಕಂಗನಾ ಆರೋಗ್ಯದಲ್ಲಿ ಏರುಪೇರು ಆಗಿರಬಹುದಾ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟ್ರೋಲ್ ಪೇಜ್ ಗಳಿಗೆ ನೀರಿಳಿಸಿದ ರಶ್ಮಿಕಾ ಮಂದಣ್ಣ: ರಾತ್ರೋರಾತ್ರಿ ಆದ ಸ್ಟಾರ್ ನಾನಲ್ಲ ಎಂದ ನಟಿ

    ಟ್ರೋಲ್ ಪೇಜ್ ಗಳಿಗೆ ನೀರಿಳಿಸಿದ ರಶ್ಮಿಕಾ ಮಂದಣ್ಣ: ರಾತ್ರೋರಾತ್ರಿ ಆದ ಸ್ಟಾರ್ ನಾನಲ್ಲ ಎಂದ ನಟಿ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೂ ಟ್ರೋಲ್ ಪೇಜ್ ಗಳಿಗೂ ಒಂದು ರೀತಿಯಲ್ಲಿ ಹಾಲು ಹಣ್ಣು ಸಂಬಂಧ. ರಶ್ಮಿಕಾ ಏನೇ ಮಾಡಿದರೂ ಟ್ರೋಲ್ ಆಗುತ್ತಲೇ ಇರುತ್ತಾರೆ. ಹಾಗಾಗಿಯೇ ಅವರು ಆಗಾಗ್ಗೆ ಟ್ರೋಪ್ ಪೇಜ್ ಗಳ ವಿರುದ್ಧ ಗರಂ ಆಗುತ್ತಲೇ ಇರುತ್ತಾರೆ.  ಇತ್ತೀಚೆಗಷ್ಟೇ ಅವರ ಸಾಧನೆಯ ಕುರಿತು ಅನುಮಾನ ವ್ಯಕ್ತ ಪಡಿಸುವಂತಹ ಘಟನೆಗಳು ನಡೆದಿವೆ. ಅದನ್ನೂ ಕೂಡ ಕೆಲವರು ಟ್ರೋಲ್ ಮಾಡಿದ್ದಾರೆ. ಹಾಗಾಗಿ ರಶ್ಮಿಕಾ ಅಪ್ ಸೆಟ್ ಆಗಿದ್ದಾರೆ.

    RASHMIKA

    ರಶ್ಮಿಕಾ ಮಂದಣ್ಣ ಕೂಡ ಎಲ್ಲ ಕಲಾವಿದರಂತೆಯೇ ಸ್ಟ್ರಗಲ್ ಮಾಡಿ ಬಂದಿದ್ದಾಳೆ. ನಾನು ರಾತ್ರೋರಾತ್ರಿ ಸ್ಟಾರ್ ಆಗಿರುವಂತಹ ನಟಿಯಲ್ಲ. ಹಲವು ಭಾಷೆಗಳಲ್ಲಿ ನಟಿಸಿದ್ದೇನೆ. ಅನೇಕ ನಟರ ಜೊತೆ ಕೆಲಸ ಮಾಡಿದ್ದೇನೆ. ಪ್ರತಿ ಸಿನಿಮಾದಲ್ಲೂ ಕಷ್ಟಪಟ್ಟಿದ್ದೇನೆ. ಈ ಯಶಸ್ಸಿನಲ್ಲಿ ನನ್ನ ಕಷ್ಟದ ಪಾಲೂ ಇದೆ ಎನ್ನುವ ಅರ್ಥದಲ್ಲಿ ಅವರು ಮಾತನಾಡಿದ್ದಾರೆ. ಈ ಮೂಲಕ ನಾನೂ ಕೂಡ ಕಷ್ಟಪಟ್ಟೇ ಮೇಲಕ್ಕೆ ಬಂದಿದ್ದು ಎಂದು ಸಂದೇಶವನ್ನು ರವಾನಿಸಿದ್ದಾರೆ. ಇದನ್ನೂ ಓದಿ:Bigg Boss: `ನಾನು ಪ್ರೀತಿಯಲ್ಲಿ ಕೊಲ್ತೀನಿ’ ಎಂದು ಸಾನ್ಯ ಅಯ್ಯರ್ ಹೇಳಿದ್ಯಾರಿಗೆ?

    ಕನ್ನಡ ಸಿನಿಮಾ ರಂಗದಿಂದ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ರಶ್ಮಿಕಾ, ಆನಂತರ ತೆಲುಗು ಮತ್ತು ತಮಿಳು ಚಿತ್ರಗಳನ್ನು ಒಪ್ಪಿಕೊಂಡರು. ನಟಿಸಿದ ಬಹುತೇಕ ಚಿತ್ರಗಳು ಹಿಟ್ ಆದವು. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತಮಿಳು ಹಾಗೂ ತೆಲುಗಿನಲ್ಲೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡರು. ಹೀಗಾಗಿ ಅವರನ್ನು ಬಾಲಿವುಡ್ ಕೂಡ ಕೈ ಬೀಸಿ ಕರೆಯಿತು. ಅಲ್ಲಿಯೂ ಕೂಡ ರಶ್ಮಿಕಾ ತಮ್ಮ ಛಾಪನ್ನು ಒತ್ತುತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ ಕಂಗನಾ ರಣಾವತ್ : ಸೋತವರ ಲಿಸ್ಟ್ ಹಾಕಿ ಕಿಡಿಕಿಡಿ

    ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ ಕಂಗನಾ ರಣಾವತ್ : ಸೋತವರ ಲಿಸ್ಟ್ ಹಾಕಿ ಕಿಡಿಕಿಡಿ

    ಬಾಲಿವುಡ್ ನಟಿ ಕಂಗನಾ ರಣಾವತ್ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾರೆ. ಇವರ ನಟನೆಯ ಧಾಕಡ್ ಸಿನಿಮಾ ಮಕಾಡೆ ಮಲಗಿಕೊಂಡ ದಿನದಿಂದ ಇವರ ಮೇಲೆ ಮುಗಿಬಿದ್ದವರನ್ನು ಮೊದಲ ಬಾರಿಗೆ ತರಾಟೆಗೆ ತಗೆದುಕೊಂಡಿದ್ದಾರೆ. ಈ ವಿಷಯದಲ್ಲಿ ತಮ್ಮನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ, ತಮ್ಮೊಂದಿಗೆ ಸೋತ ಚಿತ್ರಗಳ ಯಾದಿಯನ್ನೇ ಅವರು ರಿಲೀಸ್ ಮಾಡಿದ್ದಾರೆ.

    ಕಂಗನಾ ರಣಾವತ್ ನಟನೆಯ ಧಾಕಡ್ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಬಾಕ್ಸ್ ಆಫೀಸಿನಲ್ಲಿ ಅದು ಭಾರೀ ಸದ್ದು ಮಾಡಲಿದೆ ಎಂದು ಹೇಳಲಾಗಿತ್ತು. ಅಲ್ಲದೇ, ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ ಎಂದು ಸ್ವತಃ ಸಿನಿಮಾ ತಂಡವೇ ಹೇಳಿಕೊಂಡಿತ್ತು. ಆದರೆ, ಈ ಯಾವ ಮ್ಯಾಜಿಕ್ ಕೂಡ ನಡೆಯಲಿಲ್ಲ. ಮೊದಲ ದಿನವೇ ಸಿನಿಮಾ ಸೋಲೊಪ್ಪಿಕೊಂಡಿತ್ತು. ಕಂಗನಾ ರಣಾವತ್ ಗೆ ಕೊಟ್ಟ ಸಂಭಾವನೆಯಷ್ಟು ದುಡ್ಡು ಬರಲಿಲ್ಲ ಎನ್ನುವ ಸತ್ಯ ಹೊರ ಬಿತ್ತು. ಇದೆಲ್ಲವನ್ನೂ ಗಮನಿಸಿದ ಕಂಗನಾ ಸೋಲಿನ ಬಗ್ಗೆ ಮಾತನಾಡುವವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ:ತಮಿಳು ಕಿರುತೆರೆಯತ್ತ `ಪಾರು’ ಖ್ಯಾತಿಯ ಮೋಕ್ಷಿತಾ ಪೈ

    ಬಾಲಿವುಡ್ ನಲ್ಲಿ ಕೇವಲ ಧಾಕಡ್ ಸಿನಿಮಾ ಮಾತ್ರ ಸೋತಿಲ್ಲ. ಇನ್ನೂ ಹಲವು ಚಿತ್ರಗಳು ಸೋತಿವೆ. ಆದರೂ, ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಕೇವಲ ನನ್ನ ಸಿನಿಮಾಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ನನ್ನನ್ನಷ್ಟೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹಲವಾರು ಸಿನಿಮಾಗಳ ಪೋಸ್ಟರ್ ಮತ್ತು ಬಂದಿರುವ ಸುದ್ದಿಗಳನ್ನು ಹಂಚಿಕೊಂಡಿದ್ದಾರೆ. ಇಷ್ಟೊಂದು ವೈಯಕ್ತಿಕ ದ್ವೇಷ ಯಾಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿಎಂ ಮೇಲೆ ಉತ್ತರ ಕರ್ನಾಟಕ ನಿಂಬೆ ರೈತರು ಗರಂ!

    ಸಿಎಂ ಮೇಲೆ ಉತ್ತರ ಕರ್ನಾಟಕ ನಿಂಬೆ ರೈತರು ಗರಂ!

    ವಿಜಯಪುರ: ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನ ಮಾಡಿದ್ದರೂ ಅವರ ಮೇಲೆ ಮತ್ತೆ ಉತ್ತರ ಕರ್ನಾಟಕದ ರೈತರು ಗರಂ ಆಗಿದ್ದಾರೆ.

    ನಿಂಬೆನಾಡು ವಿಜಯಪುರದ ಜನ ಬರದ ನಡುವೆಯೂ ಹೇಗೋ ಸಾಲಸೂಲ ಮಾಡಿ ನಿಂಬೆ ಬೆಳೆದಿದ್ದರು. ಆದರೆ ನೀರಿನ ಕೊರತೆಯಿಂದಾಗಿ ಕೈಗೆ ಬಂದ ಬೆಳೆ ಒಣಗಿ ಹೋಗುತ್ತಿದ್ದು ರೈತರು ಕಂಗೆಟ್ಟಿದ್ದಾರೆ. ಇದನ್ನೂ ಓದಿ: ಇಂಡಿ ನಿಂಬೆಗೆ ಜಿಐ ಮಾನ್ಯತೆ ಪಡೆಯಲು ಸದ್ದಿಲ್ಲದೆ ನಡೆಯುತ್ತಿದೆ ಸಿದ್ಧತೆ

    ಬೇರೆ ದಾರಿ ಇಲ್ಲದೆ ರೈತರು ಇದೀಗ ಸಾಲಮಾಡಿ ದುಡ್ಡು ಕೊಟ್ಟು ನೀರು ಕೊಂಡುಕೊಂಡು ಜಮೀನುಗಳಿಗೆ ನೀರುಣಿಸುತ್ತಿದ್ದಾರೆ. ಇನ್ನು ಕಾಲುವೆಗಳಿದ್ದರೂ ಅದರಲ್ಲಿ ನೀರಿಲ್ಲ. ಅಲ್ಲದೇ ಜಿಲ್ಲೆಯ ನಿಂಬೆ ಪ್ರದೇಶವಾದ ಇಂಡಿ ತಾಲೂಕು ಬರಪೀಡಿತ ಅಂತ ಘೋಷಣೆಯಾಗಿದ್ದರೂ ಈವರೆಗೆ ಅಲ್ಲಿನ ರೈತರಿಗೆ ಪರಿಹಾರ ಬಂದಿಲ್ಲ.

    ಕೇಂದ್ರ ಬರ ಅಧ್ಯಯನ ತಂಡ ಸೇರಿದಂತೆ ರಾಜ್ಯ ಬರ ಅಧ್ಯಯನ ತಂಡ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರು ಸರ್ಕಾರ ರೈತರ ಕಣ್ಣೊರೆಸಲು ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಮ್ಮ ತಲೆ ಮೇಲೆ ಮಣ್ಣು ಹಾಕ್ಕೊಂಡು ಈಗ ಸಮಾಜದ ಮೇಲೆ ಹಾಕ್ತಿದ್ದಾರೆ: ವಿಶ್ವನಾಥ್ ವಿರುದ್ಧ ಕಾಗಿನೆಲೆ ಶ್ರೀ ಗರಂ

    ತಮ್ಮ ತಲೆ ಮೇಲೆ ಮಣ್ಣು ಹಾಕ್ಕೊಂಡು ಈಗ ಸಮಾಜದ ಮೇಲೆ ಹಾಕ್ತಿದ್ದಾರೆ: ವಿಶ್ವನಾಥ್ ವಿರುದ್ಧ ಕಾಗಿನೆಲೆ ಶ್ರೀ ಗರಂ

    ದಾವಣಗೆರೆ: ಶಾಸಕ ವಿಶ್ವನಾಥ್ ತಮ್ಮ ತಲೆ ಮೇಲೆ ಮಣ್ಣು ಹಾಕಿಕೊಂಡು ಸಮಾಜದ ಹಾಗೂ ಮಠದ ಮೇಲೆ ಹಾಕುತ್ತಿರುವುದು ಸೂಕ್ತವಲ್ಲ ಎಂದು ಹರಿಹರ ತಾಲೂಕಿನ ಬೆಳ್ಳೋಡಿಯ ಕಾಗಿನೆಲೆ ಸ್ವಾಮೀಜಿ ಕಿಡಿಕಾರಿದ್ದಾರೆ.

    ಶಾಸಕ ವಿಶ್ವನಾಥ್ ಹೇಳಿಕೆ ಖಂಡಿಸಿ, ಮಾಧ್ಯಮಗಳ ಜೊತೆಗೆ ಮಾತನಾಡಿದ ಶ್ರೀಗಳು, ನಮ್ಮ ಸಮಾಜದ ನಾಯಕರಾಗಿರುವ ವಿಶ್ವನಾಥ್ ಅವರು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಈ ರೀತಿ ಹೇಳಿಕೆ ಮಾಡಿದ್ದಾರೆ. ಆದರೆ ನಾನು ಕುರುಬ ಸಮಾಜದ ಪರ ಇದ್ದೇನೆ. ಯಾರೇ ಬಂದರೂ ನಮಗಾಗುವ ಶೋಷಣೆ ವಿರುದ್ಧ ಧ್ವನಿ ಎತ್ತುವುದನ್ನು ನಿಲ್ಲಿಸುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು. ಇದನ್ನು ಓದಿ:  ನನಗೆ ಅನ್ಯಾಯವಾದಾಗ ಎಲ್ಲಿ ಹೋಗಿದ್ರಿ – ಕಾಗಿನೆಲೆ ಶ್ರೀಗಳ ವಿರುದ್ಧ ವಿಶ್ವನಾಥ್ ಗರಂ

    ರಾಜಕೀಯದಲ್ಲಿ ನಾನು ಮೂಗು ತೂರಿಸಿಲ್ಲ. ಆದರೆ ವಿಶ್ವನಾಥ್ ಅವರು ಈ ಹಿಂದೆ ಜೆಡಿಎಸ್ ವರಿಷ್ಠ ದೇವೇಗೌಡ ಅವರನ್ನು ಘಟ ಸರ್ಪ ಹಾಗೂ ಸಿದ್ದರಾಮಯ್ಯ ಅವನ್ನು ಕಪ್ಪೆ ಎಂದು ವ್ಯಂಗ್ಯವಾಡಿದ್ದರು. ಈಗ ಅವರಿಂದ ಅಧಿಕಾರ ಪಡೆಯಲು ಮುಂದಾಗುತ್ತಿದ್ದಾರೆ ಎಂದು ಕಾಲೆಳೆದರು.

    ರಾಜಕೀಯ ವಲಯದಲ್ಲಿ ವಿಶ್ವನಾಥ್ ಅವರ ಕೆಲವು ನಡವಳಿಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೇಸರ ತಂದಿದೆ. ಆದರೂ ನಾವು ಸಿದ್ದರಾಮಯ್ಯ ಅವರನ್ನು ಒಪ್ಪಿಸಲು ಮುಂದಾಗಿದ್ದೇವು, ಪ್ರಯತ್ನ ವಿಫಲವಾಯಿತು. ಅನೇಕ ಬಾರಿ ವಿಶ್ವನಾಥ್ ಅವರು ನನ್ನ ಬಳಿ ತಮ್ಮ ನೋವು ಹಂಚಿಕೊಂಡಿದ್ದಾರೆ. ಈಗ ಅದನ್ನು ಮರೆತು ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಕುರುಬ ಸಮುದಾಯ ಹಾಗೂ ನನ್ನ ವಿರುದ್ಧ ಮಾತನಾಡಿದರೆ ಅವರಿಗೆ ಒಳ್ಳೆಯದು ಆಗುತ್ತದೆ ಎನ್ನುವುದಾದರೆ ನನ್ನ ಅಡ್ಡಿ ಇಲ್ಲ ಎಂದು ಟಾಂಗ್ ನೀಡಿದರು.