Tag: Angelo Mathews

  • ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಏಂಜೆಲೊ ಮ್ಯಾಥ್ಯೂಸ್

    ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಏಂಜೆಲೊ ಮ್ಯಾಥ್ಯೂಸ್

    ಕೊಲಂಬೊ: ಶ್ರೀಲಂಕಾದ (Sri Lanka) ಕ್ರಿಕೆಟ್‌ ದಿಗ್ಗಜರಲ್ಲಿ ಒಬ್ಬರಾದ ಏಂಜಲೊ ಮ್ಯಾಥ್ಯೂಸ್‌ (Angelo Mathews) ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

    ಜೂನ್‌ 17ರಿಂದ 21ರ ವರೆಗೆ ಗಾಲೆ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯದ ಬಳಿಕ ಏಂಜೆಲೊ ಮ್ಯಾಥ್ಯೂಸ್ ಟೆಸ್ಟ್‌ ಕ್ರಿಕೆಟ್‌ಗೆ (Test Cricket) ಗುಡ್‌ಬೈ ಹೇಳಲಿದ್ದಾರೆ. ಈ ಕುರಿತು ತಮ್ಮ ಎಕ್ಸ್‌‌ ಖಾತೆಯಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಭಾರತ ಕೊಟ್ಟ ಏಟಿಗೆ ಡಿಆರ್‌ಎಸ್‌ ನಿಯಮವನ್ನೇ ಕೈಬಿಟ್ಟ ಪಿಎಸ್‌ಎಲ್‌!

    ಗಾಳೆ ಅಂಗಳದಲ್ಲಿ ನಡೆಯುವ ಟೆಸ್ಟ್‌ ಮ್ಯಾಥ್ಯೂಸ್‌ ಅವರ 119ನೇ ಟೆಸ್ಟ್‌ ಪಂದ್ಯವಾಗಿದೆ. 2009ರಲ್ಲಿ ಇದೇ ಗಾಲೆ ಕ್ರೀಡಾಂಗಣದಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮ್ಯಾಥ್ಯೂಸ್‌ ಅದೇ ಅಂಗಳದಲ್ಲಿ ತಮ್ಮ ಕೊನೆಯ ಟೆಸ್ಟ್‌ ಪಂದ್ಯವನ್ನಾಡಲಿದ್ದಾರೆ. ಇದನ್ನೂ ಓದಿ: IPL 2025 | ಮೋದಿ ಸ್ಟೇಡಿಯಂನಲ್ಲೇ ಫೈನಲ್‌ ಮ್ಯಾಚ್‌

    ನಾಯಕನಾಗಿ 34 ಟೆಸ್ಟ್‌ ಪಂದ್ಯಗಳನ್ನಾಡಿರುವ ಮಾಥ್ಯೂಸ್‌ ಲಂಕಾ ಪರ ಅತಿಹೆಚ್ಚು ಟೆಸ್ಟ್‌ ಋನ್‌ ಗಳಿಸಿರುವ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊದಲ ಎರಡು ಸ್ಥಾನಗಳಲ್ಲಿ ಕ್ರಮವಾಗಿ ಕುಮಾರ್‌ ಸಂಗಕ್ಕಾರ, ಮಹೇಲ ಜಯವರ್ದನೆ ಇದ್ದಾರೆ. ಸಂಗಕ್ಕಾರ 134 ಟೆಸ್ಟ್‌ ಪಂದ್ಯಗಳನ್ನಾಡಿದ್ದು 57.40 ಸರಾಸರಿಯಲ್ಲಿ 12,400 ರನ್‌ ಗಳಿಸಿದ್ದರೆ, ಜಯವರ್ದನೆ 149 ಪಂದ್ಯಗಳನ್ನಾಡಿದ್ದು 49.84 ಸರಾಸರಿಯಲ್ಲಿ 11,814 ರನ್‌ ಗಳಿಸಿದ್ದಾರೆ. 3ನೇ ಸ್ಥಾನದಲ್ಲಿರುವ ಮ್ಯಾಥ್ಯೂಸ್‌ ಕೊನೆಯ ಟೆಸ್ಟ್‌ ಪಂದ್ಯಕ್ಕೂ ಮುನ್ನ 118 ಪಂದ್ಯಗಳಲ್ಲಿ 44.62 ಸರಾಸರಿಯಲ್ಲಿ 8,167 ರನ್‌ ಗಳಿಸಿದ್ದಾರೆ. ಇದರಲ್ಲಿ 16 ಶತಕ ಮತ್ತು 45 ಅರ್ಧಶತಕಗಳೂ ಸೇರಿವೆ. ಅಲ್ಲದೇ ಅವರು ಟೆಸ್ಟ್‌ 33 ವಿಕೆಟ್ ಗಳನ್ನೂ ಕಬಳಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಭಾವು ಸಂದೇಶ ಹಂಚಿಕೊಂಡಿರುವ ಏಂಜಲೊ ಮ್ಯಾಥ್ಯೂಸ್‌, ನಾನು ಈ ಆಟಕ್ಕೆ ಕೃತಜ್ಞನಾಗಿದ್ದೇನೆ. ಜೊತೆಗೆ ವೃತ್ತಿಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ಸಾವಿರಾರು ಶ್ರೀಲಂಕಾ ಕ್ರಿಕೆಟ್ ಅಭಿಮಾನಿಗಳಿಗೆ ಕೃತಜ್ಞನಾಗಿದ್ದೇನೆ. ಈ ಟೆಸ್ಟ್ ತಂಡವು ಪ್ರತಿಭಾನ್ವಿತರ ತಂಡವಾಗಿದೆ ಎಂದು ನಾನು ನಂಬುತ್ತೇನೆ, ಇದರಲ್ಲಿ ಅನೇಕ ಭವಿಷ್ಯದ ಮತ್ತು ಪ್ರಸ್ತುತ ಶ್ರೇಷ್ಠರು ಆಟವಾಡುತ್ತಿದ್ದಾರೆ. ಮುಂದಿನ ಪೀಳಿಗೆಗೆ ಅವಕಾಶ ಕಲ್ಪಿಸಲು ಇದು ಉತ್ತಮ ಸಮಯವೆಂದು ಭಾವಿಸುತ್ತೇನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

    `Timed Out’ಗೆ ವಿಕೆಟ್‌ ಒಪ್ಪಿಸಿದ ಮೊದಲ ಆಟಗಾರ:
    ಏಕದಿನ ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಶ್ರೀಲಂಕಾದ ಕ್ರಿಕೆಟಿಗ ಏಂಜಲೋ ಮಾಥ್ಯೂಸ್ ಒಂದೇ ಒಂದು ಎಸೆತ ಎದುರಿಸದೇ ಟೈಮ್ಡ್‌ ಔಟ್‌ಗೆ (Timed Out) ಬಲಿಯಾದ ಘಟನೆ 2023ರಲ್ಲಿ ನಡೆದಿತ್ತು. ಇದನ್ನೂ ಓದಿ: ವಿಶ್ವಕಪ್‌ನಲ್ಲಿ `Timed Out’ ಟಾಕ್‌ ವಾರ್‌ ಜೋರು – ವೀಡಿಯೋ ಪ್ರೂಫ್‌ ಕೊಟ್ಟ ಮಾಥ್ಯೂಸ್

    ಬಾಂಗ್ಲಾ (Bangladesh) ವಿರುದ್ಧ ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಶ್ರೀಲಂಕಾ 24.2ನೇ ಓವರ್‌ನಲ್ಲಿ 135 ರನ್‌ಗಳಿಸಿದ್ದಾಗ ಸಮರವಿಕ್ರಮ ಔಟಾದರು. ಈ ವೇಳೆ ಏಂಜಲೊ ಮಾಥ್ಯೂಸ್ ಕ್ರೀಸ್‌ಗೆ ಬಂದರು. ಆದ್ರೆ ಬಾಲ್‌ ಎದುರಿಸಲು ಮುಂದಾದಾಗ ಹೆಲ್ಮೆಟ್‌ ಪಟ್ಟಿ ತುಂಡಾಗಿರುವುದು ಗೊತ್ತಾಯಿತು. ಹೀಗಾಗಿ ಬೇರೆ ಹೆಲ್ಮೆಟ್‌ ತರುವಂತೆ ಮಾಥ್ಯೂಸ್ ತಂಡಕ್ಕೆ ಸೂಚಿಸಿದರು. ಈ ಸಂದರ್ಭದಲ್ಲಿ ಬಾಂಗ್ಲಾ ನಾಯಕ ಶಕೀಬ್‌ ಅಲ್‌ ಹಸನ್‌ ಅಂಪೈರ್‌ ಜೊತೆ ಬ್ಯಾಟರ್‌ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿ ಟೈಮ್ಡ್‌ ಔಟ್‌ಗೆ ಮನವಿ ಮಾಡಿದರು. ಈ ಮನವಿಯನ್ನು ಅಂಪೈರ್‌ ಪುರಸ್ಕರಿಸಿದರು. ಈ ವೇಳೆ ಮ್ಯಾಥ್ಯೂಸ್‌ ಅವರು, ನನ್ನ ಹೆಲ್ಮೆಟ್‌ ಪಟ್ಟಿ ಮುರಿದು ಹೋಗಿದೆ. ಹೀಗಾಗಿ ಬೇರೆ ಹೆಲ್ಮೆಟ್‌ ತರುವಂತೆ ಹೇಳಿದ್ದೇನೆ ಎಂದು ಅಂಪೈರ್‌ಗೆ ಸಮಸ್ಯೆಯನ್ನು ವಿವರಿಸಿದರು. ಅಂಪೈರ್‌ ಮತ್ತು ಬಾಂಗ್ಲಾ ಆಟಗಾರರ ಜೊತೆಗೆ ಹೆಲ್ಮೆಟ್‌ ದೋಷದ ಬಗ್ಗೆ ಮನವರಿಕೆ ಮಾಡಿದರೂ ಶಕೀಬ್‌ ಮಾತ್ರ ತಮ್ಮ ಟೈಮ್ಡ್‌ ಔಟ್‌ ಮನವಿಯಿಂದ ಹಿಂದಕ್ಕೆ ಸರಿಯಲಿಲ್ಲ. ಕೊನೆಗೆ ಏಂಜಲೊ ಮಾಥ್ಯೂಸ್ ಬಾಂಗ್ಲಾ ವಿರುದ್ಧ ಗೊಣಗುತ್ತಲೇ ಪೆವಿಲಿಯನ್‌ಗೆ ಮರಳಿದರು. ಬೌಂಡರಿ ಗೆರೆ ದಾಟುತ್ತಿದ್ದಂತೆ ಹೆಲ್ಮೆಟ್‌ ಎಸೆದು ಸಿಟ್ಟು ಹೊರಹಾಕಿದರು.

  • ಕ್ರಿಕೆಟ್‌ ಆಡಬೇಕಂದ್ರೆ ಕೀಳು ಮನಸ್ಥಿತಿಯಿಂದ ಹೊರಬನ್ನಿ – ಶಕೀಬ್‌ ವಿರುದ್ಧ ಮಾಥ್ಯೂಸ್ ಕೆಂಡ

    ಕ್ರಿಕೆಟ್‌ ಆಡಬೇಕಂದ್ರೆ ಕೀಳು ಮನಸ್ಥಿತಿಯಿಂದ ಹೊರಬನ್ನಿ – ಶಕೀಬ್‌ ವಿರುದ್ಧ ಮಾಥ್ಯೂಸ್ ಕೆಂಡ

    ನವದೆಹಲಿ: ಶಕೀಬ್‌ ಅಲ್‌ ಹಸನ್‌ (Shakib Al Hasan) ಮತ್ತು ಬಾಂಗ್ಲಾದೇಶ ತಂಡ ಮಾಡಿದ್ದು ನಿಜಕ್ಕೂ ಅವಮಾನಕರ ಕೃತ್ಯ. ಅವರು ಕ್ರಿಕೆಟ್‌ ಆಡಬೇಕೆಂದು ಬಯಸಿದ್ರೆ. ಇಂತಹ ಕೀಳುಮಟ್ಟದ ಮನಸ್ಥಿತಿಯಿಂದ ಹೊರಬರಬೇಕು ಎಂದು ಏಂಜಲೋ ಮಾಥ್ಯೂಸ್ (Angelo Mathews) ಕಿಡಿ ಕಾರಿದ್ದಾರೆ.

    ಸೋಮವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ (Sri Lanka) ತಂಡವು ಸೋಲನುಭವಿಸಿದ ನಂತರ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದ ನಾಯಕ ಶಕೀಬ್‌ ಅಲ್‌ ಹಸನ್‌ ಅವರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಶಕೀಬ್‌ ಅಲ್‌ ಹಸನ್‌ ಮಾಡಿದ್ದು, ನಿಜಕ್ಕೂ ಅವಮಾನಕರ ಕೃತ್ಯ. ಅವರ ಸಾಮಾನ್ಯ ಜ್ಞಾನ ಎಲ್ಲಿ ಹೋಯ್ತು ಅನ್ನೋದು ನನಗೆ ಗೊತ್ತಾಗಲಿಲ್ಲ. ಅವರು ಕ್ರಿಕೆಟ್‌ ಆಡಬೇಕೆಂದು ಬಯಸಿದ್ರೆ. ಇಂತಹ ಕೀಳುಮಟ್ಟದ ಮನಸ್ಥಿತಿಯಿಂದ ಹೊರಬರಬೇಕು ಎಂದು ಜಾಡಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ನಲ್ಲಿ `Timed Out’ ಟಾಕ್‌ ವಾರ್‌ ಜೋರು – ವೀಡಿಯೋ ಪ್ರೂಫ್‌ ಕೊಟ್ಟ ಮಾಥ್ಯೂಸ್

    ಯಾವುದೇ ಒಬ್ಬ ಆಟಗಾರ ಔಟಾದ ಬಳಿಕ ಮುಂದಿನ ಆಟಗಾರ 2 ನಿಮಿಷದ ಒಳಗೆ ಕ್ರೀಸ್‌ನಲ್ಲಿ ಇರಬೇಕು ಏಂದು ಐಸಿಸಿ ನಿಯಮ ಹೇಳುತ್ತದೆ. ನಾನೂ ಕೂಡ 2 ನಿಮಿಷದಲ್ಲೇ ಕ್ರೀಸ್‌ನಲ್ಲಿ ಇದ್ದೆ. ಆದ್ರೆ ನನ್ನ ಹೆಲ್ಮೆಟ್‌ ಒಡೆದಿತ್ತು. ಬದಲಿ ಹೆಲ್ಮೆಟ್‌ ಪಡೆದ ನಂತರವೂ ಇನ್ನೂ 5ಕ್ಕೂ ಹೆಚ್ಚು ಸೆಕೆಂಡುಗಳನ್ನು ಹೊಂದಿದ್ದೆ. ಆದರೂ ಔಟ್‌ ನೀಡಿದ್ದು ಅಮಾನವೀಯ ಎಂದು ಕಿಡಿಕಾರಿದರಲ್ಲದೇ ನಾನು ಶಕೀಬ್‌ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ಆದ್ರೆ ಇಂತಹ ಘಟನೆಯ ನಂತರ ಅವರ ಮೇಲೆ ನನಗಿದ್ದ ಮನಸ್ಥಿತಿ ಬದಲಾಗಿದೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸೆಹ್ವಾಗ್ ಶತಕದ ವೇಳೆ ಲಂಕಾ ಕುತಂತ್ರ – ಇದೇನಾ ನಿಮ್ಮ ಕ್ರೀಡಾ ಸ್ಫೂರ್ತಿ?

    ಏನಿದು ವಿವಾದ..?
    ಬಾಂಗ್ಲಾ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ 24.2ನೇ ಓವರ್‌ನಲ್ಲಿ 135 ರನ್‌ಗಳಿಸಿದ್ದಾಗ ಸಮರವಿಕ್ರಮ ಔಟಾದರು. ಈ ವೇಳೆ ಏಂಜಲೋ ಮಾಥ್ಯೂಸ್ ಕ್ರೀಸ್‌ಗೆ ಬಂದರು. ಆದ್ರೆ ಬಾಲ್ ಎದುರಿಸಲು ಮುಂದಾದಾಗ ಹೆಲ್ಮೆಟ್ ಪಟ್ಟಿ ತುಂಡಾಗಿರುವುದು ಗೊತ್ತಾಯಿತು. ಹೀಗಾಗಿ ಬೇರೆ ಹೆಲ್ಮೆಟ್ ತರುವಂತೆ ಮಾಥ್ಯೂಸ್ ತಂಡಕ್ಕೆ ಸೂಚಿಸಿದರು. ಈ ಸಂದರ್ಭದಲ್ಲಿ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಅಂಪೈರ್ ಜೊತೆ ಬ್ಯಾಟರ್ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿ ಟೈಮ್ಡ್ ಔಟ್‌ಗೆ (Timed Out) ಮನವಿ ಮಾಡಿದರು. ಈ ಮನವಿಯನ್ನು ಅಂಪೈರ್ ಪುರಸ್ಕರಿಸಿದರು. ಈ ವೇಳೆ ಮ್ಯಾಥ್ಯೂಸ್ ಅವರು, ನನ್ನ ಹೆಲ್ಮೆಟ್ ಪಟ್ಟಿ ಮುರಿದು ಹೋಗಿದೆ. ಹೀಗಾಗಿ ಬೇರೆ ಹೆಲ್ಮೆಟ್ ತರುವಂತೆ ಹೇಳಿದ್ದೇನೆ ಎಂದು ಅಂಪೈರ್‌ಗೆ ಸಮಸ್ಯೆಯನ್ನು ವಿವರಿಸಿದರು. ಅಂಪೈರ್ ಮತ್ತು ಬಾಂಗ್ಲಾ ಆಟಗಾರರ ಜೊತೆಗೆ ಹೆಲ್ಮೆಟ್ ದೋಷದ ಬಗ್ಗೆ ಮನವರಿಕೆ ಮಾಡಿದರೂ ಶಕೀಬ್ ಮಾತ್ರ ತಮ್ಮ ಟೈಮ್ಡ್ ಔಟ್ ಮನವಿಯಿಂದ ಹಿಂದಕ್ಕೆ ಸರಿಯಲಿಲ್ಲ. ಕೊನೆಗೆ ಏಂಜಲೋ ಮಾಥ್ಯೂಸ್ ಬಾಂಗ್ಲಾ ವಿರುದ್ಧ ಗೊಣಗುತ್ತಲೇ ಪೆವಿಲಿಯನ್‌ಗೆ ಮರಳಿದರು. ಬೌಂಡರಿ ಗೆರೆ ದಾಟುತ್ತಿದ್ದಂತೆ ಹೆಲ್ಮೆಟ್ ಎಸೆದು ಸಿಟ್ಟು ಹೊರಹಾಕಿದರು.

    ಟೈಮ್ಡ್ ಔಟ್ ನಿಯಮ ಏನು ಹೇಳುತ್ತದೆ?
    ವಿಕೆಟ್ ಪತನದ ನಂತರ ಅಥವಾ ಬ್ಯಾಟರ್ ನಿವೃತ್ತಿ ಹೊಂದಿದ ಬಳಿಕ 2 ನಿಮಿಷದ ಒಳಗಡೆ ಮುಂದಿನ ಎಸೆತವನ್ನು ಎದುರಿಸಬೇಕು. ಈ ಅವಧಿಯಲ್ಲಿ ಚೆಂಡು ಸ್ವೀಕರಿಸದೇ ಇದ್ದರೇ ಫೀಲ್ಡಿಂಗ್ ನಡೆಸುವ ತಂಡದ ನಾಯಕ ಟೈಮ್ಡ್ ಔಟ್‌ಗೆ ಮನವಿ ಮಾಡಬಹುದು. ಅಂಪೈರ್ ನೇರವಾಗಿ ಔಟ್ ನೀಡಲು ಬರುವುದಿಲ್ಲ. ಬೌಲಿಂಗ್ ನಡೆಸುವ ತಂಡದ ನಾಯಕ ಮನವಿ ಮಾಡಿದ್ರೆ ಮಾತ್ರ ಟೈಮ್ಡ್ ಔಟ್ ನೀಡಬಹುದು. ಬ್ಯಾಟರ್ ಟೈಮ್ಡ್ ಔಟಾದರೆ ಬೌಲರ್‌ಗೆ ವಿಕೆಟ್ ಸಿಗುವುದಿಲ್ಲ. ಇದನ್ನೂ ಓದಿ: ಒಂದು ಎಸೆತ ಎದುರಿಸದೇ ಏಂಜಲೋ ಮಾಥ್ಯೂಸ್ ಔಟ್‌ – ಏನಿದು ಟೈಮ್ಡ್‌ ಔಟ್‌ ನಿಯಮ?

  • ವಿಶ್ವಕಪ್‌ನಲ್ಲಿ `Timed Out’ ಟಾಕ್‌ ವಾರ್‌ ಜೋರು – ವೀಡಿಯೋ ಪ್ರೂಫ್‌ ಕೊಟ್ಟ ಮಾಥ್ಯೂಸ್

    ವಿಶ್ವಕಪ್‌ನಲ್ಲಿ `Timed Out’ ಟಾಕ್‌ ವಾರ್‌ ಜೋರು – ವೀಡಿಯೋ ಪ್ರೂಫ್‌ ಕೊಟ್ಟ ಮಾಥ್ಯೂಸ್

    ನವದೆಹಲಿ: ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶ್ರೀಲಂಕಾದ ಕ್ರಿಕೆಟಿಗ ಏಂಜಲೋ ಮಾಥ್ಯೂಸ್ (Angelo Mathews) ಒಂದೇ ಒಂದು ಎಸೆತ ಎದುರಿಸದೇ ಟೈಮ್ಡ್‌ ಔಟ್‌ಗೆ (Timed Out) ಬಲಿಯಾದ ಘಟನೆ ಬಳಿಕ ಟಾಕ್‌ ವಾರ್‌ ಶುರುವಾಗಿದೆ. ಈ ನಡುವೆ ಮಾಥ್ಯೂಸ್ ತಾವು ಕ್ರೀಸ್‌ಗೆ ಬಂದ ಸಮಯವನ್ನೂ ವೀಡಿಯೋ ಫ್ರೂಫ್‌ ಸಮೇತ ಹಂಚಿಕೊಂಡಿದ್ದಾರೆ.

    ಬಾಂಗ್ಲಾ (Bangladesh) ವಿರುದ್ಧ ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಶ್ರೀಲಂಕಾ 24.2ನೇ ಓವರ್‌ನಲ್ಲಿ 135 ರನ್‌ಗಳಿಸಿದ್ದಾಗ ಸದೀರ ಸಮರವಿಕ್ರಮ ಔಟಾದರು. ಈ ವೇಳೆ ಮಾಥ್ಯೂಸ್ ತಾವು 2 ನಿಮಿಷದ ಒಳಗೆಯೇ ಕ್ರೀಗೆ ಬಂದಿರುವುದಾಗಿ ವೀಡಿಯೋ ಸಾಕ್ಷಿಯೊಂದನ್ನ ತಮ್ಮ ಸೋಶಿಯಲ್‌ ಮೀಡಿಯಾ (Social Media) X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಇಲ್ಲಿ 4ನೇ ಅಂಪೈರ್‌ ಇಲ್ಲಿ ತಪ್ಪಾಗಿದೆ. ಹೆಲ್ಮೆಟ್‌ ನೀಡಿದ ನಂತರವೂ ನಾನು ಇನ್ನೂ 5 ಸೆಕೆಂಡ್‌ ಮುಂಚಿತವಾಗಿಯೇ ಕ್ರೀಸ್‌ಗೆ ಬಂದಿದ್ದೇನೆ. ರೆಕಾರ್ಡ್‌ ಆಗಿರುವ ವೀಡಿಯೋ ಸಾಕ್ಷಿಯೇ ಇದನ್ನು ತೋರಿಸುತ್ತದೆ. 4ನೇ ಅಂಪೈರ್‌ ದಯವಿಟ್ಟು ಇದನ್ನು ಸರಿಪಡಿಸಬಹುದೇ? ನನ್ನ ಪ್ರಕಾರ ಹೆಲ್ಮೆಟ್‌ ಸುರಕ್ಷತೆ ಅತಿ ಮುಖ್ಯವಾದದ್ದು. ನಾನು ಹೆಲ್ಮೆಟ್‌ ಇಲ್ಲದೇ ಬೌಲರ್‌ ಅನ್ನು ಎದುರಿಸಲು ಸಾಧ್ಯವಾಗಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

    ಇನ್ನೂ ಶ್ರೀಲಂಕಾದ ಮಾಜಿ ಕ್ರಿಕೆಟಿಗ ರಸ್ಸೆಲ್ ಅರ್ನಾಲ್ಡ್, ಐಸಿಸಿ ಆಟದ ಪರಿಸ್ಥಿತಿಗಳನ್ನು ಹೈಲೈಟ್‌ ಮಾಡಿದಾಗ, ಮುಂದಿನ ಬ್ಯಾಟರ್‌ 2 ನಿಮಿಷಗಳಲ್ಲಿ ಕ್ರೀಸ್‌ಗೆ ಬಂದು ಬೌಲರ್‌ ಎದುರಿಸಲು ಸಿದ್ಧವಾಗಬೇಕು ಎಂದು ಐಸಿಸಿ ನಿಯಮವನ್ನು ನೆನಪಿಸಿದ್ದಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿರುವ ಮಾಥ್ಯೂಸ್ ಹೌದು, ನಾನು ಹೆಲ್ಮೆಟ್‌ ಇಲ್ಲದೇ ಬೌಲಿಂಗ್‌ ಎದುರಿಸಲು ಸಾಧ್ಯವಾಗಿರಲಿಲ್ಲ. ಆದ್ರೆ 2 ನಿಮಿಷಗಳಲ್ಲೇ ನಾನು ಮತ್ತೆ ಕ್ರೀಸ್‌ನಲ್ಲಿ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಒಂದು ಎಸೆತ ಎದುರಿಸದೇ ಏಂಜಲೋ ಮಾಥ್ಯೂಸ್ ಔಟ್‌ – ಏನಿದು ಟೈಮ್ಡ್‌ ಔಟ್‌ ನಿಯಮ?

    ಏನಿದು ವಿವಾದ..?
    ಬಾಂಗ್ಲಾ (Bangladesh) ವಿರುದ್ಧ ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಶ್ರೀಲಂಕಾ 24.2ನೇ ಓವರ್‌ನಲ್ಲಿ 135 ರನ್‌ಗಳಿಸಿದ್ದಾಗ ಸಮರವಿಕ್ರಮ ಔಟಾದರು. ಈ ವೇಳೆ ಏಂಜಲೋ ಮಾಥ್ಯೂಸ್ ಕ್ರೀಸ್‌ಗೆ ಬಂದರು. ಆದ್ರೆ ಬಾಲ್‌ ಎದುರಿಸಲು ಮುಂದಾದಾಗ ಹೆಲ್ಮೆಟ್‌ ಪಟ್ಟಿ ತುಂಡಾಗಿರುವುದು ಗೊತ್ತಾಯಿತು. ಹೀಗಾಗಿ ಬೇರೆ ಹೆಲ್ಮೆಟ್‌ ತರುವಂತೆ ಮಾಥ್ಯೂಸ್ ತಂಡಕ್ಕೆ ಸೂಚಿಸಿದರು. ಈ ಸಂದರ್ಭದಲ್ಲಿ ಬಾಂಗ್ಲಾ ನಾಯಕ ಶಕೀಬ್‌ ಅಲ್‌ ಹಸನ್‌ ಅಂಪೈರ್‌ ಜೊತೆ ಬ್ಯಾಟರ್‌ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿ ಟೈಮ್ಡ್‌ ಔಟ್‌ಗೆ ಮನವಿ ಮಾಡಿದರು. ಈ ಮನವಿಯನ್ನು ಅಂಪೈರ್‌ ಪುರಸ್ಕರಿಸಿದರು. ಈ ವೇಳೆ ಮ್ಯಾಥ್ಯೂಸ್‌ ಅವರು, ನನ್ನ ಹೆಲ್ಮೆಟ್‌ ಪಟ್ಟಿ ಮುರಿದು ಹೋಗಿದೆ. ಹೀಗಾಗಿ ಬೇರೆ ಹೆಲ್ಮೆಟ್‌ ತರುವಂತೆ ಹೇಳಿದ್ದೇನೆ ಎಂದು ಅಂಪೈರ್‌ಗೆ ಸಮಸ್ಯೆಯನ್ನು ವಿವರಿಸಿದರು. ಅಂಪೈರ್‌ ಮತ್ತು ಬಾಂಗ್ಲಾ ಆಟಗಾರರ ಜೊತೆಗೆ ಹೆಲ್ಮೆಟ್‌ ದೋಷದ ಬಗ್ಗೆ ಮನವರಿಕೆ ಮಾಡಿದರೂ ಶಕೀಬ್‌ ಮಾತ್ರ ತಮ್ಮ ಟೈಮ್ಡ್‌ ಔಟ್‌ ಮನವಿಯಿಂದ ಹಿಂದಕ್ಕೆ ಸರಿಯಲಿಲ್ಲ. ಕೊನೆಗೆ ಏಂಜಲೋ ಮಾಥ್ಯೂಸ್ ಬಾಂಗ್ಲಾ ವಿರುದ್ಧ ಗೊಣಗುತ್ತಲೇ ಪೆವಿಲಿಯನ್‌ಗೆ ಮರಳಿದರು. ಬೌಂಡರಿ ಗೆರೆ ದಾಟುತ್ತಿದ್ದಂತೆ ಹೆಲ್ಮೆಟ್‌ ಎಸೆದು ಸಿಟ್ಟು ಹೊರಹಾಕಿದರು.

    ಟೈಮ್ಡ್‌ ಔಟ್‌ ನಿಯಮ ಏನು ಹೇಳುತ್ತದೆ?
    ವಿಕೆಟ್‌ ಪತನದ ನಂತರ ಅಥವಾ ಬ್ಯಾಟರ್‌ ನಿವೃತ್ತಿ ಹೊಂದಿದ ಬಳಿಕ 2 ನಿಮಿಷದ ಒಳಗಡೆ ಮುಂದಿನ ಎಸೆತವನ್ನು ಎದುರಿಸಬೇಕು. ಈ ಅವಧಿಯಲ್ಲಿ ಚೆಂಡು ಸ್ವೀಕರಿಸದೇ ಇದ್ದರೇ ಫೀಲ್ಡಿಂಗ್‌ ನಡೆಸುವ ತಂಡದ ನಾಯಕ ಟೈಮ್ಡ್‌ ಔಟ್‌ಗೆ ಮನವಿ ಮಾಡಬಹುದು. ಅಂಪೈರ್‌ ನೇರವಾಗಿ ಔಟ್‌ ನೀಡಲು ಬರುವುದಿಲ್ಲ. ಬೌಲಿಂಗ್‌ ನಡೆಸುವ ತಂಡದ ನಾಯಕ ಮನವಿ ಮಾಡಿದ್ರೆ ಮಾತ್ರ ಟೈಮ್ಡ್‌ ಔಟ್‌ ನೀಡಬಹುದು. ಬ್ಯಾಟರ್‌ ಟೈಮ್ಡ್‌ ಔಟಾದರೆ ಬೌಲರ್‌ಗೆ ವಿಕೆಟ್‌ ಸಿಗುವುದಿಲ್ಲ. ಇದನ್ನೂ ಓದಿ: ಬಾಂಗ್ಲಾಗೆ 3 ವಿಕೆಟ್‌ ಜಯ – ಟೈಮ್ಡ್‌ ಔಟಾಗಿದ್ದಕ್ಕೆ ಶಕೀಬ್‌ ವಿರುದ್ಧ ಸೇಡು ತೀರಿಸಿಕೊಂಡ ಮ್ಯಾಥ್ಯೂಸ್‌

  • ಸೆಹ್ವಾಗ್ ಶತಕದ ವೇಳೆ ಲಂಕಾ ಕುತಂತ್ರ – ಇದೇನಾ ನಿಮ್ಮ ಕ್ರೀಡಾ ಸ್ಫೂರ್ತಿ?

    ಸೆಹ್ವಾಗ್ ಶತಕದ ವೇಳೆ ಲಂಕಾ ಕುತಂತ್ರ – ಇದೇನಾ ನಿಮ್ಮ ಕ್ರೀಡಾ ಸ್ಫೂರ್ತಿ?

    ಬೆಂಗಳೂರು: ಶ್ರೀಲಂಕಾದ ಏಂಜಲೋ ಮಾಥ್ಯೂಸ್ (Angelo Mathews) ಮತ್ತು ಬಾಂಗ್ಲಾದೇಶ ಶಕಿಬ್ ಉಲ್ ಹಸನ್ (Shakib Al Hasan) ಕಿತ್ತಾಟದ ಮಧ್ಯೆ ವೀರೇಂದ್ರ ಸೆಹ್ವಾಗ್ ಸುದ್ದಿಯಾಗುತ್ತಿದ್ದಾರೆ.

    ದೆಹಲಿಯಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಏಂಜಲೋ ಮಾಥ್ಯೂಸ್ ಒಂದು ಎಸೆತ ಎದುರಿಸದೇ ಟೈಮ್ಡ್ ಔಟ್‌ಗೆ (timed out) ಬಲಿಯಾಗಿದ್ದರು. ಈ ಮೂಲಕ ಟೈಮ್ಡ್ ಔಟ್‌ಗೆ ಬಲಿಯಾದ ವಿಶ್ವದ ಮೊದಲ ಬ್ಯಾಟರ್ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದಾರೆ.

    ಟೈಮ್ಡ್ ಔಟ್ ಮನವಿ ಮಾಡಿದ್ದಕ್ಕೆ ಶಕಿಬ್ ಉಲ್ ಹಸನ್ ಸೇರಿದಂತೆ ಬಾಂಗ್ಲಾ (Bangladesh) ತಂಡದ ಕ್ರೀಡಾ ಸ್ಪೂರ್ತಿಯ ಬಗ್ಗೆ ಹಲವು ಮಂದಿ ಪ್ರಶ್ನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತ ಕ್ರಿಕೆಟ್ (Team India) ಅಭಿಮಾನಿಗಳು 2010 ಪಂದ್ಯದಲ್ಲಿ ಸೆಹ್ವಾಗ್ (Virender sehwag) ಅವರ ಉದಾಹರಣೆ ನೀಡಿ ಶ್ರೀಲಂಕಾ ತಂಡದ ಕ್ರೀಡಾ ಸ್ಪೂರ್ತಿಯ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ.

    2010ರಲ್ಲಿ ಏನಾಗಿತ್ತು?
    ಶ್ರೀಲಂಕಾ, ಭಾರತ, ನ್ಯೂಜಿಲೆಂಡ್ ಮಧ್ಯೆ ಶ್ರೀಲಂಕಾದಲ್ಲಿ ತ್ರಿಕೋನ ಏಕದಿನ ಸರಣಿ ಆಯೋಜನೆಗೊಂಡಿತ್ತು. ಸರಣಿಯ ಮೂರನೇ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ್ದ ಶ್ರೀಲಂಕಾ 170 ರನ್‌ಗಳಿಗೆ ಆಲೌಟ್ ಆಗಿತ್ತು.  ಇದನ್ನೂ ಓದಿ: ಬಾಂಗ್ಲಾಗೆ 3 ವಿಕೆಟ್‌ ಜಯ – ಟೈಮ್ಡ್‌ ಔಟಾಗಿದ್ದಕ್ಕೆ ಶಕೀಬ್‌ ವಿರುದ್ಧ ಸೇಡು ತೀರಿಸಿಕೊಂಡ ಮ್ಯಾಥ್ಯೂಸ್‌

    ಸುಲಭದ ಸವಾಲನ್ನು ಬೆನ್ನಟ್ಟಿದ ಭಾರತ 34 ಓವರ್‌ಗಳಲ್ಲಿ 166 ರನ್‌ಗಳಿಸಿತ್ತು. ಸೆಹ್ವಾಗ್ 99 ರನ್‌ಗಳಿಸಿದ್ದರೆ ಧೋನಿ 23 ರನ್‌ಗಳಿಸಿ ಕ್ರೀಸ್‌ನಲ್ಲಿದ್ದರು. ಭಾರತದ ಗೆಲುವಿಗೆ ಕೇವಲ 5 ರನ್ ಬೇಕಿತ್ತು.

    ರಂದೀವ್ 35ನೇ ಓವರ್ ಎಸೆಯಲು ಬಂದಾಗ ಸೆಹ್ವಾಗ್ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತವನ್ನು ಸೆಹ್ವಾಗ್ ಬ್ಯಾಟಿನಿಂದ ತಡೆಯಲು ಯತ್ನಿಸಿದರು. ಆದರೆ ಬಾಲ್ ಬ್ಯಾಟಿಗೆ ಸಿಗಲಿಲ್ಲ. ಈ ಚೆಂಡನ್ನು ನಾಯಕನಾಗಿದ್ದ ಕುಮಾರ ಸಂಗಕ್ಕಾರ ಸಹ ಹಿಡಿಯದ ಕಾರಣ ಬೌಂಡರಿಗೆ ಹೋಗಿತ್ತು. ಬೈ ಮೂಲಕ ಇತರೇ 4 ರನ್ ಸೇರ್ಪಡೆಯಾದ ಕಾರಣ ಸ್ಕೋರ್ ಸಮವಾಗಿತ್ತು. ಹೀಗಿದ್ದರೂ ಸೆಹ್ವಾಗ್ 1 ರನ್ ಗಳಿಸಿ ಶತಕ ಹೊಡೆಯಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ನಂತರ ಎರಡು ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. 4ನೇ ಎಸೆತವನ್ನು ಸೆಹ್ವಾಗ್ ಲಾಂಗ್ ಅಫ್‌ನಲ್ಲಿ ಸಿಕ್ಸರ್‌ಗೆ ಅಟ್ಟಿದ್ದರು.

    ಸೆಹ್ವಾಗ್ ಸಿಕ್ಸ್ ಸಿಡಿಸಿದ್ದರೂ ಶತಕ ಪೂರ್ಣಗೊಂಡಿರಲಿಲ್ಲ. ಯಾಕೆಂದರೆ ರಂದೀವ್ ನೋಬಾಲ್ ಎಸೆದಿದ್ದರು. ನೋಬಾಲ್‌ನಲ್ಲಿ ಗೇಮ್ ಕೊನೆಯಾದರೆ ಕೇವಲ ಒಂದು ರನ್ ಸಿಗುತ್ತದೆ ಹೊರತು ಬ್ಯಾಟರ್ ಖಾತೆಗೆ ಆ ರನ್ ಸೇರ್ಪಡೆಯಾಗುವುದಿಲ್ಲ. ಐಸಿಸಿಯ ಈ ನಿಯಮದಿಂದಾಗಿ ಸೆಹ್ವಾಗ್ ಶತಕ ಪೂರ್ಣಗೊಂಡಿರಲಿಲ್ಲ.

    ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಪ್ರತಿಕ್ರಿಯಿಸಿದ ಸೆಹ್ವಾಗ್, ಒಬ್ಬ ಬ್ಯಾಟ್ಸ್‌ಮನ್‌ 99 ರನ್‌ ಗಳಿಸಿದ್ದಾಗ ಮತ್ತು ಸ್ಕೋರ್‌ಗಳು ಸಮವಾಗಿದ್ದಾಗ ಬೌಲರ್‌ಗಳು ನೋ-ಬಾಲ್‌ಗಳು ಮತ್ತು ವೈಡ್‌ಗಳನ್ನು ಎಸೆಯುವುದು ಸಾಮಾನ್ಯ ಎಂದು ಹೇಳಿ ಲಂಕಾ ತಂಡದ ಕ್ರೀಡಾ ಸ್ಫೂರ್ತಿಯ ಬಗ್ಗೆ ಮಾತನಾಡಿದ್ದರು.

     

    ಈ ವಿಚಾರವನ್ನು ಮುಂದಿಟ್ಟುಕೊಂಡು ಟೀಂ ಇಂಡಿಯಾ ಅಭಿಮಾನಿಗಳು ಈಗ ಶ್ರೀಲಂಕಾ ತಂಡವನ್ನು ಪ್ರಶ್ನಿಸುತ್ತಿದ್ದಾರೆ. ಈಗ ನೀವು ಬಾಂಗ್ಲಾ ತಂಡದ ಕ್ರೀಡಾ ಸ್ಪೂರ್ತಿಯ ಬಗ್ಗೆ ಮಾತನಾಡುತ್ತಿದ್ದೀರಿ. ಆದರೆ ಅಂದು ಕುಮಾರ ಸಂಗಕ್ಕಾರ ಹಿಡಿಯಬಹುದಾದ ಚೆಂಡನ್ನು ಹಿಡಿಯದ ಕಾರಣ ಅದು ಬೌಂಡರಿಗೆ ಹೋಗಿತ್ತು. ಕೊನೆಗೆ ರಂದೀವ್ ಉದ್ದೇಶಪೂರ್ವಕವಾಗಿ ನೋಬಾಲ್ ಎಸೆದು ಸೆಹ್ವಾಗ್ ಶತಕವನ್ನು ತಡೆದಿದದ್ದು ಸರಿಯೇ ಎಂದು ಖಾರವಾಗಿ ಪ್ರಶ್ನಿಸಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  • ಒಂದು ಎಸೆತ ಎದುರಿಸದೇ ಏಂಜಲೋ ಮಾಥ್ಯೂಸ್ ಔಟ್‌ – ಏನಿದು ಟೈಮ್ಡ್‌ ಔಟ್‌ ನಿಯಮ?

    ಒಂದು ಎಸೆತ ಎದುರಿಸದೇ ಏಂಜಲೋ ಮಾಥ್ಯೂಸ್ ಔಟ್‌ – ಏನಿದು ಟೈಮ್ಡ್‌ ಔಟ್‌ ನಿಯಮ?

    ನವದೆಹಲಿ: ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ಶ್ರೀಲಂಕಾದ (Sri Lanka) ಏಂಜಲೋ ಮಾಥ್ಯೂಸ್ (Angelo Mathews) ಒಂದು ಎಸೆತ ಎದುರಿಸದೇ ಟೈಮ್ಡ್‌ ಔಟ್‌ಗೆ (timed out) ಬಲಿಯಾದ ವಿಶ್ವದ ಮೊದಲ ಬ್ಯಾಟರ್‌ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದಾರೆ.

    ಬಾಂಗ್ಲಾ (Bangladesh) ವಿರುದ್ಧ ಟಾಸ್‌ ಸೋತು ಬ್ಯಾಟ್‌ ಆರಂಭಿಸಿದ ಶ್ರೀಲಂಕಾ 24.2ನೇ ಓವರ್‌ನಲ್ಲಿ 135 ರನ್‌ಗಳಿಸಿದ್ದಾಗ ಸಮರವಿಕ್ರಮ ಔಟಾದರು. ಈ ವೇಳೆ  ಏಂಜಲೋ ಮಾಥ್ಯೂಸ್ ಕ್ರೀಸ್‌ಗೆ ಆಗಮಿಸಿದರು. ಕ್ರೀಸ್‌ಗೆ ಆಗಮಿಸಿ ಬಾಲ್‌ ಎದುರಿಸಲು ಬ್ಯಾಟ್‌ ಹಿಡಿದಾಗ ಹೆಲ್ಮೆಟ್‌ ಪಟ್ಟಿ ತುಂಡಾಗಿರುವುದು ಗೊತ್ತಾಯಿತು. ಹೀಗಾಗಿ ಬೇರೆ ಹೆಲ್ಮೆಟ್‌ ತರುವಂತೆ ಮಾಥ್ಯೂಸ್ ತಂಡಕ್ಕೆ ಸೂಚಿಸಿದರು.

    https://twitter.com/aankjain/status/1721480014154096809

    ಈ ಸಂದರ್ಭದಲ್ಲಿ ಬಾಂಗ್ಲಾ ನಾಯಕ ಶಕೀಬ್‌ ಉಲ್‌ ಹಸನ್‌ ಅಂಪೈರ್‌ ಜೊತೆ ಬ್ಯಾಟರ್‌ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿ ಟೈಮ್ಡ್‌ ಔಟ್‌ಗೆ ಮನವಿ ಮಾಡಿದರು. ಈ ಮನವಿಯನ್ನು ಅಂಪೈರ್‌ ಪುರಸ್ಕರಿಸಿದರು. ಈ ವೇಳೆ ಮ್ಯಾಥ್ಯೂಸ್‌ ಅವರು, ನನ್ನ ಹೆಲ್ಮೆಟ್‌ ಪಟ್ಟಿ ಮುರಿದು ಹೋಗಿದೆ. ಹೀಗಾಗಿ ಬೇರೆ ಹೆಲ್ಮೆಟ್‌ ತರುವಂತೆ ಹೇಳಿದ್ದೇನೆ ಎಂದು ಅಂಪೈರ್‌ಗೆ ಸಮಸ್ಯೆಯನ್ನು ವಿವರಿಸಿದರು.
    ಇದನ್ನೂ ಓದಿ: ಭಾರತದ ವಿರುದ್ಧ ಹೀನಾಯ ಸೋಲು – ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನೇ ವಜಾಗೊಳಿಸಿದ ಸಚಿವ

    ಅಂಪೈರ್‌ ಮತ್ತು ಬಾಂಗ್ಲಾ ಆಟಗಾರರ ಜೊತೆ ಹೆಲ್ಮೆಟ್‌ ದೋಷದ ಬಗ್ಗೆ ಮನವರಿಕೆ ಮಾಡಿದರೂ ಶಕೀಬ್‌ ಮಾತ್ರ ತಮ್ಮ ಟೈಮ್ಡ್‌ ಔಟ್‌ ಮನವಿಯಿಂದ ಹಿಂದಕ್ಕೆ ಸರಿಯಲಿಲ್ಲ. ಕೊನೆಗೆ ಏಂಜಲೋ ಮಾಥ್ಯೂಸ್ ಬಾಂಗ್ಲಾ ವಿರುದ್ಧ ಗೊಣಗುತ್ತಲೇ ಪೆವಿಲಿಯನ್‌ ಕಡೆಗೆ ಹೆಜ್ಜೆ ಹಾಕಿದರು. ಬೌಂಡರಿ ಗೆರೆ ದಾಟುತ್ತಿದ್ದಂತೆ ಹೆಲ್ಮೆಟ್‌ ಎಸೆದು ಸಿಟ್ಟು ಹೊರಹಾಕಿದರು.

     

    View this post on Instagram

     

    A post shared by ICC (@icc)

    ನಿಯಮ ಏನು ಹೇಳುತ್ತದೆ?
    ವಿಕೆಟ್‌ ಪತನದ ನಂತರ ಅಥವಾ ಬ್ಯಾಟರ್‌ ನಿವೃತ್ತಿ ಹೊಂದಿದ ಬಳಿಕ 2 ನಿಮಿಷದ ಒಳಗಡೆ ಮುಂದಿನ ಎಸೆತವನ್ನು ಎದುರಿಸಬೇಕು. ಈ ಅವಧಿಯಲ್ಲಿ ಚೆಂಡು ಸ್ವೀಕರಿಸದೇ ಇದ್ದರೆ ಫೀಲ್ಡಿಂಗ್‌ ನಡೆಸುವ ತಂಡ ಟೈಮ್ಡ್‌ ಔಟ್‌ಗೆ ಮನವಿ ಮಾಡಬಹುದು. ಅಂಪೈರ್‌ ನೇರವಾಗಿ ಔಟ್‌ ನೀಡಲು ಬರುವುದಿಲ್ಲ.  ಬೌಲಿಂಗ್‌ ನಡೆಸುವ ತಂಡದ ನಾಯಕ ಮನವಿ ಮಾಡಿದರೆ ಮಾತ್ರ ಟೈಮ್ಡ್‌ ಔಟ್‌ ನೀಡಬಹುದು.

    ವಿಕೆಟ್‌ ಸಿಗುತ್ತಾ?
    ಬ್ಯಾಟರ್‌ ಟೈಮ್ಡ್‌ ಔಟಾದರೆ ಬೌಲರ್‌ಗೆ ವಿಕೆಟ್‌ ಸಿಗುವುದಿಲ್ಲ.

    ಮನವಿ ಮಾಡುವುದು ಸರಿಯೇ?
    ಏಕದಿನ, ಟೆಸ್ಟ್‌, ಟಿ20 ಪಂದ್ಯಗಳಿಗೆ ಸಮಯ ನಿಗದಿಯಾಗಿರುತ್ತದೆ. ಒಂದು ವೇಳೆ ಸಮಯ ಮೀರಿಯೂ ಬೌಲಿಂಗ್‌ ಮಾಡಿದರೆ ನಾಯಕನಿಗೆ ದಂಡ ವಿಧಿಸಲಾಗುತ್ತದೆ. ಏಕದಿನ ಕ್ರಿಕೆಟ್‌ನಲ್ಲಿ ಬೌಲಿಂಗ್‌ ತಂಡ 50 ಓವರ್‌ಗಳನ್ನು 3 ಗಂಟೆ 50 ನಿಮಿಷದಲ್ಲಿ ಎಸೆಯಬೇಕಾಗುತ್ತದೆ. ಟಿ20ಯಲ್ಲಿ ಬೌಲಿಂಗ್‌ ತಂಡ 20 ಓವರ್‌ಗಳನ್ನು 1 ಗಂಟೆ 25 ನಿಮಿಷದಲ್ಲಿ 20 ಓವರ್‌ ಎಸೆಯಬೇಕಾಗುತ್ತದೆ. ಈ ಕಾರಣಕ್ಕೆ ಬ್ಯಾಟರ್‌ಗಳು  ಸಮಯ ತೆಗೆದುಕೊಂಡರೆ ಬೌಲಿಂಗ್‌ ನಡೆಸುವ ತಂಡ ಅಂಪೈರ್‌ ಜೊತೆ ಟೈಮ್ಡ್‌ ಔಟ್‌ ಮನವಿ ಮಾಡಲು ಅವಕಾಶ ಸಿಗುತ್ತದೆ.