Tag: Angel Falls

  • ಏಂಜಲ್ ಫಾಲ್ಸ್ ಸಾಧನೆಗೆ ಅಡ್ಡಿಯಾಯ್ತು ಜ್ಯೋತಿರಾಜ್ ತೂಕ

    ಏಂಜಲ್ ಫಾಲ್ಸ್ ಸಾಧನೆಗೆ ಅಡ್ಡಿಯಾಯ್ತು ಜ್ಯೋತಿರಾಜ್ ತೂಕ

    ಚಿತ್ರದುರ್ಗ: ಕನಸು, ಕೊನೆಯ ದಿನ ಎಂಬ ಮಾತುಗಳ ಮೂಲಕ ಬಾರಿ ಸುದ್ದಿ ಮಾಡಿದ್ದ ಜ್ಯೋತಿರಾಜ್ ಫೆಬ್ರವರಿ 26, 27ರಂದು ಅಮೆರಿಕದ ಅತಿ ಎತ್ತರ ಏಂಜಲ್ ಫಾಲ್ಸ್ ಹತ್ತಿ ಅಪ್ರತಿಮ ಸಾಧನೆ ಮಾಡುವ ತವಕದಲ್ಲಿದ್ದರು. ಆದರೆ ಜ್ಯೋತಿರಾಜ್ ಅವರು ಏಂಜಲ್ ಫಾಲ್ಸ್ ಹತ್ತಲಿಲ್ಲ.

    ಜ್ಯೋತಿರಾಜ್ ಅತಿ ಎತ್ತರದ ಫಾಲ್ಸ್ ಹತ್ತುತ್ತಿರುವುದನ್ನು ಕೇಳಿ ಚಿತ್ರದುರ್ಗದ ಜನರಲ್ಲದೇ ದೇಶದ ವಿವಿಧೆಡೆಯಲ್ಲಿರುವ ಅವರ ಅಭಿಮಾನಿಗಳು ಅವರಿಗೆ ಹಲವು ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಶುಭ ಕೋರಿದರು. ಅಲ್ಲದೆ ಕೆಲವರು ಈಗಾಗಲೇ ಕೋತಿರಾಜ್ ಏಂಜಲ್ ಫಾಲ್ಸ್ ಏರಿ ಅಪ್ರತಿಮ ಸಾಧನೆಗೈದಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ವಾಟ್ಸಪ್, ಫೇಸ್‍ಬುಕ್‍ಗಳಲ್ಲಿ ಹಾಕಿ ಭರ್ಜರಿ ಚರ್ಚೆಗೆ ಆಸ್ಪದವಾಗಿತ್ತು. ಇದನ್ನೂ ಓದಿ: ಫೆಬ್ರವರಿ 26, 27 ನನ್ನ ಕೊನೆಯ ದಿನ – ಅಪಾಯಕಾರಿ ಸಾಹಸಕ್ಕೆ ಮುಂದಾದ ಕೋತಿರಾಜ್

    ಕಳೆದ ಒಂದೆರಡು ದಿನಗಳಿಂದ ಕೋತಿರಾಜ್ ಜೋಗ್ ಫಾಲ್ಸ್ ಏರುತ್ತಿರುವ ವಿಡಿಯೋ ಹಾಗೂ ಫೋಟೋವನ್ನು ಪೋಸ್ಟ್ ಮಾಡಿ, ಅಮೆರಿಕದಲ್ಲಿರುವ ಏಂಜೆಲ್ ಫಾಲ್ಸ್ ಅನ್ನು ಇಂದು ಮತ್ತು ನಾಳೆ ಸ್ಪೈಡರ್ ವ್ಯಾನ್ ಏರಲಿದ್ದಾರೆ ಎಂಬ ಗಾಳಿ ಸುದ್ದಿ ಸಹ ಹರಡಿಸಿ ಜನರಲ್ಲಿ ಅಚ್ಚರಿ ಮೂಡಿಸುವ ಮೂಲಕ ಫೇಕ್ ಮಾಹಿತಿ ನೀಡಿದ್ದರು. ಆದರೆ ಅದೆಲ್ಲಾ ಸುಳ್ಳು ವದಂತಿಗಳೆಂದು ಜ್ಯೋತಿರಾಜ್ ಅವರ ಆಪ್ತ ಸ್ನೇಹಿತ ಬಸವರಾಜ್ ಸ್ಪಷ್ಟನೆ ನೀಡಿದ್ದಾರೆ.

    ಜ್ಯೋತಿರಾಜ್ ಅವರ ಸ್ನೇಹಿತ ಬಸವರಾಜ್ ಜೊತೆಗಿದ್ದಾರೆ. ಸದ್ಯ ಕೋತಿರಾಜ್ ತನ್ನ ದೇಹದ ತೂಕ 85 ಕೆಜಿ ಇದೆ. ಹೀಗಾಗಿ ಜ್ಯೋತಿರಾಜ್ ಅತಿ ಎತ್ತರದ ಏಂಜಲ್ ಫಾಲ್ಸ್ ಏರಲು ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಉತ್ತರಕನ್ನಡದಲ್ಲಿ ಆಯುರ್ವೇದಿಕ್ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ ಅವರು ಹೇಳಿದ ಫೆ. 26 ಹಾಗೂ 27ರಂದು ಆ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ವಾಪಸ್‍ ಬಂದು ಮಾಧ್ಯಮದೊಂದಿಗೆ ಸುದ್ದಿಗೋಷ್ಠಿ ನಡೆಸಿ ಏಪ್ರಿಲಿನಲ್ಲಿ ಈ ಸಾಧನೆಗೆ ತೆರಳಲಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದ ವೈರಲ್ ಸುದ್ದಿಗೆ ಬ್ರೇಕ್ ಬೀಳಬೇಕೆಂಬುದು ಜ್ಯೋತಿರಾಜ್ ಅವರ ಅಭಿಮಾನಿಗಳ ಕಳಕಳಿ ಮನವಿ.

  • ಫೆಬ್ರವರಿ 26, 27 ನನ್ನ ಕೊನೆಯ ದಿನ – ಅಪಾಯಕಾರಿ ಸಾಹಸಕ್ಕೆ ಮುಂದಾದ ಕೋತಿರಾಜ್

    ಫೆಬ್ರವರಿ 26, 27 ನನ್ನ ಕೊನೆಯ ದಿನ – ಅಪಾಯಕಾರಿ ಸಾಹಸಕ್ಕೆ ಮುಂದಾದ ಕೋತಿರಾಜ್

    ಬೆಂಗಳೂರು: ಕರ್ನಾಟಕದ ಜನರ ಮನಸ್ಸು ಗೆದ್ದಿರುವ ಹಾಗೂ ಚಿತ್ರದುರ್ಗ ಕೋಟೆಯಲ್ಲಿ ಕೋತಿಯಂತೆ ಲೀಲಾಜಾಲವಾಗಿ ಬಂಡೆಗಳನ್ನು ಏರುತ್ತಿದ್ದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅಪಾಯಕಾರಿ ಸಾಹಸಕ್ಕೆ ಮುಂದಾಗಿದ್ದಾರೆ. ಅದು ಮುಂದಿನ ವರ್ಷ ಫೆಬ್ರವರಿ 26-27 ನನ್ನ ಕೊನೆಯ ದಿನ ಎಂದು ಹೇಳಿ ಭಾವುಕರಾಗಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲದ ಖಾಸಗಿ ಶಾಲೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜ್ಯೋತಿರಾಜ್ ಸರ್ಕಾರದಿಂದ ಚಿತ್ರದುರ್ಗದ ಅಭಿವೃದ್ಧಿಗೆ ಯಾವುದೇ ಪ್ರಯೋಜನಗಳು ಆಗಿಲ್ಲ. ಆದ್ದರಿಂದ ನಾನು ಮುಂಬರುವ ಫೆಬ್ರವರಿಯ 26 ಮತ್ತು 27 ರಂದು ಜಗತ್ತಿನ ಅತಿ ಎತ್ತರದ ಅಮೆರಿಕದ 3,221 ಅಡಿ ಎತ್ತರದ ಏಂಜಲ್ ಫಾಲ್ಸ್ ಏರುತ್ತಿದ್ದು, ಅದರಲ್ಲಿ ಬರುವ ಹಣವನ್ನು ಕೋಟೆಯ ಅಭಿವೃದ್ಧಿಗೆ ಹಾಗೂ ನನ್ನ ಶಿಷ್ಯರ ಜೀವನೋಪಾಯಕ್ಕೆ ಬಳಕೆ ಮಾಡುವುದಾಗಿ ತಿಳಿಸಿದರು.

    ಆ ದಿನ ನಾನು ಬದುಕುವುದು ಬಹಳ ಕಷ್ಟ ಹಾಗಾಗಿ ನಾನೊಂದು ವೇಳೆ ಸತ್ತರೆ, ಕನ್ನಡಿಗರೆಲ್ಲಾ ಒಂದು ಹಿಡಿ ಮಣ್ಣು ಹಾಕಿ. ಕಾರಣ ನಾನು ಸಂಪಾದನೆ ಮಾಡಿರುವುದು ಕನ್ನಡಿಗರ ಪ್ರೀತಿ ಮಾತ್ರ ಅಲ್ಲದೆ ಬೇರೇನೂ ಅಲ್ಲ. ಕನ್ನಡ ನಾಡಿಗಾಗಿ ಮಹಾನ್ ಸಾಧನೆ ಮಾಡಲು ಹೊರಟಿರುವೆ. ನನ್ನನ್ನು ಹರಸಿ ಆಶೀರ್ವದಿಸಿ ಎಂದು ಭಾವುಕರಾಗಿ ಕೋತಿರಾಜ್ ತಮ್ಮ ಮನದಾಳ ಮಾತನ್ನು ಹಂಚಿಕೊಂಡಿದ್ದಾರೆ.

    ನೆಲಮಂಗಲದ ಖಾಸಗಿ ಶಾಲೆಯ ಪುಟಾಣಿ ಮಕ್ಕಳು ಚಿತ್ರದುರ್ಗದ ಕೋಟೆಯ ಗತವೈಭವವನ್ನು ತೋರುವ ಒನಕೆ ಓಬವ್ವಳ ಕಿಂಡಿ, ಬಂಧೀಖಾನೆ, ಏಳು ಸುತ್ತಿನ ಕೋಟೆ ದೇವಾಲಯಗಳನ್ನು ತದ್ರೂಪವನ್ನು ನೋಡಿ ಇನ್ನಷ್ಟು ಭಾವುಕರಾಗಿ ಮಕ್ಕಳ ಜೊತೆ ತಮ್ಮ ಅನುಭವವನ್ನು ಜ್ಯೋತಿರಾಜ್ ಹಂಚಿಕೊಂಡರು.