Tag: anganwadi

  • ಯಲ್ಲಾಪುರ | ಅಂಗನವಾಡಿ ಬಳಿ ಮುರಿದುಬಿದ್ದ ಆಲದಮರ – ಗರ್ಭಿಣಿ ಸಾವು, 4 ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯ

    ಯಲ್ಲಾಪುರ | ಅಂಗನವಾಡಿ ಬಳಿ ಮುರಿದುಬಿದ್ದ ಆಲದಮರ – ಗರ್ಭಿಣಿ ಸಾವು, 4 ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯ

    ಕಾರವಾರ: ಅಂಗನವಾಡಿ (Anganwadi) ಬಳಿ ಬೃಹತ್ ಆಲದ ಮರವೊಂದು ಮುರಿದುಬಿದ್ದಿದ್ದು, ಗರ್ಭಿಣಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಯಲ್ಲಾಪುರ (Yellapur) ತಾಲೂಕಿನ ಕಿರವತ್ತಿಯಲ್ಲಿ (Kiravatti) ನಡೆದಿದೆ.

    ಮೃತಳನ್ನು ಸಾವಿತ್ರಿ ಬಾಬು ಖರಾತ್ (28) ಎಂದು ಗುರುತಿಸಲಾಗಿದೆ. ಆಕೆ 5 ತಿಂಗಳ ಗರ್ಭಿಣಿ ಆಗಿದ್ದಳು. ಘಟನೆಯಲ್ಲಿ ಸ್ವಾತಿ ಬಾಬು ಖರಾತ್ (17), ಘಾಟು ಲಕ್ಕು ಕೊಕರೆ (5), ಶ್ರಾವಣಿ ಬಾಬು ಖರಾತ್ (2), ಶಾಂಭವಿ ಬಾಬು ಖರಾತ್ (4) ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾನ್ವಿ ಬಾಬು ಕೊಕರೆ (5), ವಿನಯ ಲಕ್ಕು ಕೊಕರೆ (5) ಮತ್ತು ಅನುಶ್ರೀ ಮಾಂಬು ಕೊಕರೆ (5) ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಬೈಕ್‌ ಅಪಘಾತ – ರಸ್ತೆಗೆ ಬಿದ್ದ ಯುವತಿ ಮೇಲೆ ಹರಿದ ಬಸ್‌; 15 ದಿನದಲ್ಲಿ ಹಸೆಮಣೆ ಏರಬೇಕಾಗಿದ್ದವಳ ದುರಂತ ಅಂತ್ಯ

    ಅಂಗನವಾಡಿಯಿಂದ ಮನೆಗೆ ಮರಳುತ್ತಿದ್ದ ವೇಳೆ ದಾರಿಯಲ್ಲಿದ್ದ ಆಲದ ಮರ ದಿಢೀರ್ ಮುರಿದುಬಿದ್ದಿದೆ. ಇದರಿಂದ ಈ ಅನಾಹುತ ನಡೆದಿದೆ.

    ಗಾಯಳುಗಳನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಯಲ್ಲಾಪುರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಹರಿಯಾಣ | ಎಸಿ ಸ್ಫೋಟ – ಒಂದೇ ಕುಟುಂಬದ ಮೂವರ ದುರ್ಮರಣ, ಮತ್ತೊಬ್ಬನ ಸ್ಥಿತಿ ಗಂಭೀರ

  • Raichur| ಅಂಗನವಾಡಿ ಕೇಂದ್ರದ ಛಾವಣಿ ಮೇಲ್ಪದರ ಕುಸಿತ – ಶಿಕ್ಷಕಿಗೆ ಗಂಭೀರ ಗಾಯ

    Raichur| ಅಂಗನವಾಡಿ ಕೇಂದ್ರದ ಛಾವಣಿ ಮೇಲ್ಪದರ ಕುಸಿತ – ಶಿಕ್ಷಕಿಗೆ ಗಂಭೀರ ಗಾಯ

    ರಾಯಚೂರು: ಜಿಲ್ಲೆಯ ಅರಕೇರಾ (Arakera) ತಾಲೂಕಿನ ಆಲ್ದರ್ತಿ ಗ್ರಾಮದಲ್ಲಿ ಅಂಗನವಾಡಿ (Anganwadi) ಕೇಂದ್ರದ ಛಾವಣಿ ಮೇಲ್ಪದರ ಕುಸಿದು (Roof Collapse) ಅಂಗನವಾಡಿ ಶಿಕ್ಷಕಿಗೆ ಗಂಭೀರ ಗಾಯಗಳಾಗಿವೆ.

    ಅದೃಷ್ಟವಶಾತ್ ಮಕ್ಕಳಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಅಂಗನವಾಡಿ ಶಿಕ್ಷಕಿ ಮೇಲೆಯೇ ಕಟ್ಟಡದ ಸೀಲಿಂಗ್ ಕುಸಿದು ಬಿದ್ದಿದ್ದು, ಅಂಗನವಾಡಿ ಶಿಕ್ಷಕಿ ಮಹಾದೇವಮ್ಮಗೆ ಗಂಭೀರ ಗಾಯಗಳಾಗಿವೆ. ತಲೆ, ಕೈ, ಬೆನ್ನಿಗೆ ತೀವ್ರ ಪೆಟ್ಟುಗಳಾಗಿ ಶಿಕ್ಷಕಿ ಕುಸಿದು ಬಿದ್ದಿದ್ದಾರೆ. ಛಾವಣಿ ಮೇಲ್ಪದರ ಬಿದ್ದ ರಭಸಕ್ಕೆ ಶಿಕ್ಷಕಿ ಕುಳಿತಿದ್ದ ಕುರ್ಚಿ ಮುರಿದುಹೋಗಿದೆ. ಇದನ್ನೂ ಓದಿ: 25 ಲಕ್ಷ ವಂಚನೆ, ಸುಧಾಕರ್‌ ಹೆಸರು ಬರೆದಿಟ್ಟು ಚಾಲಕ ಸೂಸೈಡ್‌ – ಡೆತ್‌ನೋಟ್‌ನಲ್ಲಿ ಏನಿದೆ?

    ಕೂಡಲೇ ಸಹಾಯಕ್ಕೆ ಬಂದ ಗ್ರಾಮಸ್ಥರು ಗಾಯಗೊಂಡ ಶಿಕ್ಷಕಿಯನ್ನ ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಂಗನವಾಡಿ ಶಾಲೆಯಲ್ಲಿದ್ದ 20ಕ್ಕೂ ಹೆಚ್ಚು ಮಕ್ಕಳು ಅದೃಷ್ಟವಶಾತ್ ಪಾರಾಗಿದ್ದಾರೆ. ನಿರ್ಮಾಣವಾಗಿ 10 ವರ್ಷದಲ್ಲೇ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಇದನ್ನೂ ಓದಿ: ನಾಳೆ ಬೆಂಗ್ಳೂರಿಗೆ ರಾಹುಲ್ ಗಾಂಧಿ – ಹಲವೆಡೆ ಸಂಚಾರ ಬಂದ್, ಟ್ರಾಫಿಕ್ ತಪ್ಪಿಸೋಕೆ ಪರ್ಯಾಯ ವ್ಯವಸ್ಥೆ

  • ಅಣ್ಣ ಬುದ್ಧಿ  ಹೇಳಿದ್ದಕ್ಕೆ ಮಗುವನ್ನು ಬರ್ಬರವಾಗಿ ಕೊಂದ ಚಿಕ್ಕಪ್ಪ

    ಅಣ್ಣ ಬುದ್ಧಿ ಹೇಳಿದ್ದಕ್ಕೆ ಮಗುವನ್ನು ಬರ್ಬರವಾಗಿ ಕೊಂದ ಚಿಕ್ಕಪ್ಪ

    ಬಾಗಲಕೋಟೆ: ಅಂಗನವಾಡಿಗೆ (Anganwadi) ಹೊರಟಿದ್ದ ಮಗುವನ್ನು ಚಿಕ್ಕಪ್ಪನೇ ಎತ್ತಿಕೊಂಡು ಹೋಗಿ ಕತ್ತು ಸೀಳಿ ಕೊಲೆಗೈದ ಘಟನೆ ಹುನಗುಂದ (Hungund) ತಾಲೂಕಿನ ಬೆನಕನವಾರಿ ಗ್ರಾಮದಲ್ಲಿ ನಡೆದಿದೆ.

    ಹತ್ಯೆ ಆರೋಪಿಯನ್ನು ಭೀಮಪ್ಪ ಎಂದು ಗುರುತಿಸಲಾಗಿದೆ. ಈ ಹಿಂದೆ ಹೆಂಡತಿ (Wife) ಮೇಲೆ ಹಲ್ಲೆ ಮಾಡಬೇಡ ಎಂದು ಭೀಮಪ್ಪನಿಗೆ ಆತನ ಸಹೋದರ ಮಾರುತಿ ಬುದ್ಧಿ ಹೇಳಿದ್ದರು. ಇದರಿಂದ ದ್ವೇಷಕಾರುತ್ತಿದ್ದ ಭೀಮಪ್ಪ ಮಾರುತಿ ಅವರ ಪುತ್ರನನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

     

    ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ, ಮಗುವನ್ನು ಕರೆದೊಯ್ದು ಕೊಲೆಗೈದಿದ್ದಾನೆ. ಆತನಿಗೆ ಕಠಿಣ ಶಿಕ್ಷೆ ನೀಡಿ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಪುಟಾಣಿ ಮಗುವಿನ ಮೃತದೇಹ ಕಂಡು ಅಜ್ಜಿ ಪಾರ್ವತಿ ಕಣ್ಣೀರಿಟ್ಟಿದ್ದಾರೆ.

  • 3ರ ಬಾಲೆಯ ಕೆನ್ನೆಗೆ ಸೌಟ್‌ನಲ್ಲಿ ಬರೆ – ಅಂಗನವಾಡಿ ಸಿಬ್ಬಂದಿ ಅಮಾನತು

    3ರ ಬಾಲೆಯ ಕೆನ್ನೆಗೆ ಸೌಟ್‌ನಲ್ಲಿ ಬರೆ – ಅಂಗನವಾಡಿ ಸಿಬ್ಬಂದಿ ಅಮಾನತು

    ಬಾಗಲಕೋಟೆ: ಮೂರು ವರ್ಷದ ‌ಬಾಲಕಿಯ ಕೆನ್ನೆಗೆ ಬರೆ ಹಾಕಿದ್ದಕ್ಕೆ ಮುಧೋಳ (Mudhol) ತಾಲೂಕಿನ ಗುಲಗಾ ಜಂಬಗಿ ಗ್ರಾಮದ ಅಂಗನವಾಡಿ (Anganwadi) ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಅಮಾನತು ಮಾಡಲಾಗಿದೆ.

    ಅಂಗನವಾಡಿ ಸಹಾಯಕಿ ಶಾರವ್ವ ಪಂಚಗಾವಿ ಮತ್ತು ಕಾರ್ಯಕರ್ತೆ ಶೋಭಾ ಹೊಳೆಪ್ಪನವರ್ ಅವರನ್ನು ಮುಧೋಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಪುಟಾಣಿ ಮಗುವಿನ ಕೆನ್ನೆಯ ಮೇಲೆ ಶಾರವ್ವ ಪಂಚಗಾವಿ ಅಡುಗೆ ಮಾಡುವ ಸೌಟಿನಿಂದ ಕೆನ್ನೆಗೆ ಬರೆ ಎಳೆದಿದ್ದಳು. ಮನೆಗೆ ಬಂದ ಮಗಳ ಮುಖವನ್ನು ನೋಡಿ ಸಿಟ್ಟಾದ ತಂದೆ ಪ್ರದೀಪ್ ಬಾಗಲಿ ಅವ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರು. ಇದನ್ನೂ ಓದಿ: ಶೃಂಗೇರಿ ಅರಣ್ಯದಲ್ಲಿ ಹೂತಿಟ್ಟಿದ್ದ ಬಂದೂಕು, ಸಜೀವ ಗುಂಡುಗಳು ಪತ್ತೆ!

    ಈ ದೂರು ಆಧರಿಸಿ ಮುಧೋಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಗುಲಗಾ ಜಂಬಗಿ ಅಂಗನವಾಡಿ ಕೇಂದ್ರಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ವೇಳೆ ಬಾಲಕಿ ಕೆನ್ನೆಗೆ ಬರೆ ಎಳೆದಿದ್ದು ದೃಢಪಟ್ಟಿದೆ.

    ಕರ್ತವ್ಯ ನಿರ್ಲಕ್ಷ್ಯ ಎಸಗಿದ ಕಾರಣ ಅಂಗನವಾಡಿ ಸಹಾಯಕಿ ಶಾರವ್ವ ಪಂಚಗಾವಿ ಮತ್ತು ಕಾರ್ಯಕರ್ತೆ ಶೋಭಾ ಹೊಳೆಪ್ಪನವರ್ ಅವರನ್ನು ಅಮಾನತು ಮಾಡಲಾಗಿದೆ.

  • ಉಪ್ಪಿಟ್ಟು ಬದಲು ಬಿರಿಯಾನಿ, ಚಿಕನ್‌ ಫ್ರೈ ಕೊಡಿ: ಅಂಗನವಾಡಿ ಬಾಲಕನ ಮನವಿಗೆ ಸಚಿವರ ಒಪ್ಪಿಗೆ

    ಉಪ್ಪಿಟ್ಟು ಬದಲು ಬಿರಿಯಾನಿ, ಚಿಕನ್‌ ಫ್ರೈ ಕೊಡಿ: ಅಂಗನವಾಡಿ ಬಾಲಕನ ಮನವಿಗೆ ಸಚಿವರ ಒಪ್ಪಿಗೆ

    ತಿರುವನಂತಪುರಂ: ಅಂಗನವಾಡಿಯಲ್ಲಿ (Anganwadi) ಉಪ್ಪಿಟ್ಟು ಬದಲಿಗೆ ಬಿರಿಯಾನಿ ಮತ್ತು ಚಿಕನ್‌ ಫ್ರೈ (Biriyani & Chicken Fry) ನೀಡುವಂತೆ ಬಾಲಕ ಮಾಡಿದ ಮನವಿಗೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಒಪ್ಪಿಗೆ ಸೂಚಿಸಿದ್ದಾರೆ.

    ಊಟದ ಮೆನುವಿನಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ, ಚಿಕನ್‌ ಫ್ರೈ ನೀಡಬೇಕು ಎಂದು ಪುಟ್ಟ ಬಾಲಕ ಮನವಿ ಮಾಡಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ವೀಡಿಯೋಗೆ ಸಚಿವರು ಸ್ಪಂದಿಸಿದ್ದಾರೆ. ಅಂಗನವಾಡಿಗಳಲ್ಲಿನ ಆಹಾರ ಮೆನುವನ್ನು ಪರಿಶೀಲಿಸಲು ಮತ್ತು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಶಂಕು ಎಂಬ ಮಗು ಮುಗ್ಧ ರೀತಿಯಲ್ಲಿ ತನ್ನ ಅಂಗನವಾಡಿಯಲ್ಲಿ ರುಚಿಕರ ಊಟ ಬೇಕು ಎಂದು ಕೇಳಿ ಕೊಂಡಿದ್ದಾನೆ. ಜ.30 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವನ್ನು ಹರಿಬಿಡಲಾಗಿತ್ತು. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿರುವ ವೀಡಿಯೋ ಕೊನೆಗೆ ಸಚಿವರ ಗಮನಕ್ಕೆ ಬಂದಿದೆ.

    ಕೇರಳದಲ್ಲಿ ಅಂಗನವಾಡಿಗಳ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸಲು ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಪೋಷಣೆಗೆ ಪೂರಕವಾಗಿ ಊಟ ನೀಡಲಾಗುತ್ತಿದೆ. ಮೊಟ್ಟೆ ಮತ್ತು ಹಾಲನ್ನು ಸಹ ಸರ್ಕಾರ ನೀಡುತ್ತಿದೆ. ಮಕ್ಕಳು ಪೌಷ್ಟಿಕ ಆಹಾರದಿಂದ ಆರೋಗ್ಯದ ಪ್ರಯೋಜನ ಪಡೆಯಲು ಸಹಕಾರಿಯಾಗಿದೆ.

  • ರಾಜ್ಯದಲ್ಲಿ 3 ಸಾವಿರ ಹೊಸ ಅಂಗನವಾಡಿ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ- ಲಕ್ಷ್ಮಿ ಹೆಬ್ಬಾಳ್ಕರ್

    ರಾಜ್ಯದಲ್ಲಿ 3 ಸಾವಿರ ಹೊಸ ಅಂಗನವಾಡಿ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ- ಲಕ್ಷ್ಮಿ ಹೆಬ್ಬಾಳ್ಕರ್

    ಬೆಂಗಳೂರು/ಬೆಳಗಾವಿ: ರಾಜ್ಯದಲ್ಲಿ ಹೊಸದಾಗಿ 3988 ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಶಾಸಕ ಜವರಾಯೇಗೌಡ ಪರವಾಗಿ ತಿಪ್ಪೇಸ್ವಾಮಿ ಪ್ರಶ್ನೆ ಕೇಳಿದ್ರು. ಇದಕ್ಕೆ ಉತ್ತರ ನೀಡಿದ ಸಚಿವರು, ಹೊಸದಾಗಿ ಅಂಗನವಾಡಿ ಕೇಂದ್ರ ಪ್ರಾರಂಭಿಸಲು ಕೇಂದ್ರ ಸರ್ಕಾರದ ಅನುಮೋದನೆ ಅವಶ್ಯಕವಿರುತ್ತದೆ. ಹೀಗಾಗಿ ಕೇಂದ್ರಕ್ಕೆ ಮನವಿ ಮಾಡಿದ್ದು, ಕೇಂದ್ರ ಅನುಮತಿ ಕೊಟ್ಟ ಬಳಿಕ ಹೊಸ ಅಂಗನವಾಡಿ ಕೇಂದ್ರ ಪ್ರಾರಂಭ ಮಾಡೋದಾಗಿ‌ ತಿಳಿಸಿದರು. ಇದನ್ನೂ ಓದಿ: ದೇವದಾಸಿಯರಿಗೆ ಗೃಹಲಕ್ಷ್ಮಿ ಯೋಜನೆ ಅನ್ವಯ ಆಗುತ್ತೆ : ಲಕ್ಷ್ಮಿ ಹೆಬ್ಬಾಳ್ಕರ್

    ಅಂಗನವಾಡಿ ಕೇಂದ್ರದಲ್ಲಿ ಫಲಾನುಭವಿಗಳಿಗೆ ಪೂರೈಸಲಾಗುವ ಪೂರಕ ಪೌಷ್ಟಿಕ ಆಹಾರ ಯೋಜನೆಯಡಿ ಹಂಚಿಕೆ ಅನುದಾನದಲ್ಲಿ ಕೇಂದ್ರದ ಪಾಲು ಶೇ.20 ರಷ್ಟು ಇರುತ್ತದೆ. ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವಧನ ಪಾವತಿಯಲ್ಲಿ ಆಡಳಿತ ವೆಚ್ಚದಡಿ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ಪಾಲು ಶೇ.30 ರಷ್ಟಿರುತ್ತದೆ. ಸಬ್ಸಿಡಿ ದರದಲ್ಲಿ ಅಕ್ಕಿ ಮತ್ತು ಗೋಧಿಯನ್ನು ಸಹ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ. ಹಾಲಿ ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಅನುಮೋದಿತ 65,931 ಅಂಗನವಾಡಿ ಕೇಂದ್ರಗಳು ಹಾಗೂ ರಾಜ್ಯ ಸರ್ಕಾರದ ವತಿಯಿಂದ ಅನುದಾನಿತ 3,988 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಸದರಿ 3,988 ಅಂಗನವಾಡಿ ಕೇಂದ್ರಗಳಿಗೆ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.

    ರಾಜ್ಯದಲ್ಲಿ ಸ್ವಂತ ಕಟ್ಟಡವಿಲ್ಲದ ಅಂಗನವಾಡಿ ಕೇಂದ್ರಗಳಿಗೆ ಹೊಸದಾಗಿ ಕಟ್ಟಡ ನಿರ್ಮಿಸಲು ಕಳೆದ 2 ವರ್ಷಗಳಲ್ಲಿ ರೂ. 22,923 ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ. ಒಟ್ಟು 337 ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊoಡಿದೆ ಅಂತ ಉತ್ತರ ನೀಡಿದ್ರು‌. ಇದನ್ನೂ ಓದಿ: ಕೇರಳ ಮಾದರಿಯಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಗೌರವಧನ ಹೆಚ್ಚಳ ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ

  • ಬಾಗಲಕೋಟೆ| ಅಂಗನವಾಡಿಗಳಿಗೆ ಮೂರು ತಿಂಗಳಿನಿಂದ ಸರಬರಾಜು ಆಗುತ್ತಿಲ್ಲ ಆಹಾರ!

    ಬಾಗಲಕೋಟೆ| ಅಂಗನವಾಡಿಗಳಿಗೆ ಮೂರು ತಿಂಗಳಿನಿಂದ ಸರಬರಾಜು ಆಗುತ್ತಿಲ್ಲ ಆಹಾರ!

    ಬಾಗಲಕೋಟೆ: ಹುನಗುಂದ‌ (Hungund) ಹಾಗೂ ಇಳಕಲ್ (Ilkal) ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿಗಳಿಗೆ (Anganwadi) ಮೂರು ತಿಂಗಳಿನಿಂದ ಆಹಾರ (Food) ಸರಬರಾಜು ಆಗುತ್ತಿಲ್ಲ ಎಂಬ ಆರೋಪ ಬಂದಿದೆ.

    ಅಂಗನವಾಡಿ ‌ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಸಮರ್ಪಕ ಪೌಷ್ಟಿಕ ಆಹಾರ ಸಿಗುತ್ತಿಲ್ಲ ಎಂದು ಆ ತಾಲೂಕಿನ ಗರ್ಭಿಣಿಯರು ಆರೋಪ ಮಾಡಿದ್ದಾರೆ.

    ಹುನಗುಂದ, ಇಳಕಲ್ ತಾಲ್ಲೂಕಿನ ವ್ಯಾಪ್ತಿಯಲ್ಲಿ ಒಟ್ಟು 422 ಅಂಗನವಾಡಿ ಕೇಂದ್ರಗಳಿದ್ದು, ಈ ಅಂಗನವಾಡಿಗಳಿಗೆ ಜುಲೈ, ಆಗಸ್ಟ್‌, ಸೆಪ್ಟೆಂಬರ್ ತಿಂಗಳಿನಲ್ಲಿ ಸಮರ್ಪಕ ಆಹಾರ ಸಿಕ್ಕಿಲ್ಲ ಎಂದು ದೂರಿದ್ದಾರೆ. ದಾಸ್ತಾನು ಅಂಗನವಾಡಿಗಳಿಗೆ ವಿತರಣೆಯಾಗದೇ ಮೂರು ತಿಂಗಳಿನಿಂದ ರೇಷನ್ ಮಹಿಳಾ ಸಪ್ಲಿಮೆಂಟರಿ ನ್ಯೂಟ್ರಿಷನ್ ಪ್ರೊಡಕ್ಟ್‌ ಸೆಂಟರ್‌ನಲ್ಲೇ (MSPTC) ಉಳಿದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಹಾವೇರಿ| 3 ತಿಂಗಳಿನಿಂದ ಪಾವತಿಯಾಗಿಲ್ಲ ಅಂಗನವಾಡಿ ಟೀಚರ್‌ಗಳ ಸಂಬಳ

    ಎಂಎಸ್‌ಪಿಟಿಸಿಯಿಂದ ಎಲ್ಲಾ ಅಂಗನವಾಡಿಗೆ ರೇಷನ್ ಸಾಗಿಸಬೇಕಾಗಿತ್ತು. ಆದರೆ ದಾಸ್ತಾನು ಯಾವ ಕಾರಣಕ್ಕೆ ಹಂಚಿಕೆಯಾಗಿಲ್ಲ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಜನರ ಆರೋಪವನ್ನು ಗಮನಿಸಿದಾಗ ಇಲ್ಲಿ ಮಹಿಳಾ‌ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಎದ್ದು‌ಕಾಣುತ್ತಿದೆ.

    ಈ ವಿಚಾರದ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಓ ಶಶಿಧರ್ ಕುರೇರ್ ಅವರನ್ನು ಕೇಳಿದರೆ ಎಲ್ಲಾ ಅಂಗನವಾಡಿಗಳಿಗೆ ಎರಡು ತಿಂಗಳ ದಾಸ್ತಾನು ಸರಬರಾಜು ಮಾಡಲಾಗಿದೆ. ಆದರೆ ಈ ವಿಷಯ ಈಗ ನನ್ನ ಗಮನಕ್ಕೆ ಬಂದಿದ್ದು, ಈ ಕುರಿತು ಕೂಡಲೇ ಇಲಾಖೆ ಅಧಿಕಾರಿಗಳು ಹಾಗೂ ಆ ಭಾಗದ ಸಿಡಿಪಿಓ ಅವರಿಗೆ ವರದಿ ಕೇಳಿದ್ದೇನೆ. ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದರೆ ಅವರ ವಿರುದ್ದ ಖಂಡಿತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

     

  • ಹಾವೇರಿ| 3 ತಿಂಗಳಿನಿಂದ ಪಾವತಿಯಾಗಿಲ್ಲ ಅಂಗನವಾಡಿ ಟೀಚರ್‌ಗಳ ಸಂಬಳ

    ಹಾವೇರಿ| 3 ತಿಂಗಳಿನಿಂದ ಪಾವತಿಯಾಗಿಲ್ಲ ಅಂಗನವಾಡಿ ಟೀಚರ್‌ಗಳ ಸಂಬಳ

    – ಗೌರವ ಧನ, ಮೊಟ್ಟೆ ಬಾಕಿ ಪಾವತಿಸದಿದ್ದರೆ ಅಂಗನವಾಡಿ ಬಂದ್

    ಹಾವೇರಿ: ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ಅಂಗನವಾಡಿ (Anganwadi) ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ವೇತನವೇ ಪಾವತಿಯಾಗಿಲ್ಲ. ಸರ್ಕಾರ ಸುಮಾರು 1.30 ಕೋಟಿ ರೂ. ಮೊಟ್ಟೆ ಖರೀದಿ ಬಾಕಿ ಹಣ ಉಳಿಸಿಕೊಂಡಿದೆ. ಇತ್ತ ಮೊಟ್ಟೆ ಖರೀದಿ ಮಾಡಿದ ಬಾಕಿಯನ್ನೂ ಸರ್ಕಾರ ಕೊಡದೇ ಸತಾಯಿಸುತ್ತಿದೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಹೈರಾಣಾಗಿ ಹೋಗಿದ್ದಾರೆ.

    ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಕೊಡುವ ಅಲ್ಪ ವೇತನವೂ ಬಾರದೇ ಕಾರ್ಯಕರ್ತೆಯರು, ಸಹಾಯಕರು ಹೈರಾಣಾಗಿದ್ದಾರೆ. ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ವೃದ್ಧರ ಆರೈಕೆ ಮುಂತಾದವುಗಳ ನಿರ್ವಹಣೆಗೆ ಇದೇ ವೇತನ ನಂಬಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ವಿಳಂಬ ನೀತಿಯಿಂದ ನಲುಗಿ ಹೋಗಿದ್ದಾರೆ. ಹಾವೇರಿ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ಗೌರವ ಧನ, ಮೊಟ್ಟೆ ಬಾಕಿ ಪಾವತಿಸದಿದ್ದರೆ ಅಂಗನವಾಡಿ ಬಂದ್ ಎಚ್ಚರಿಕೆ ನೀಡಲಾಗಿದೆ. ಮಕ್ಕಳಿಗೆ ಮೊಟ್ಟೆ ವಿತರಣೆ ಸ್ಥಗಿತಗೊಳಿಸಬೇಕಾಗುತ್ತೆ ಎಂದು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಫೆಡರೇಶನ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಕೆಲವು ರಾಜಕೀಯ ಮುಖಂಡರು ಲೈನ್‌ನಲ್ಲಿ ನಿಲ್ಲುವ ಕಾಲ ಬರುತ್ತೆ – ಸಿಎಂ ವಿರುದ್ಧ ರೇವಣ್ಣ ಕಿಡಿ

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ (Lakshmi Hebbalkar) ಪತ್ರ ಬರೆದ ಎಐಟಿಯುಸಿ, ಅಂಗನವಾಡಿ ಬಂದ್‌ಗೆ ಎಚ್ಚರಿಕೆ ನೀಡಿದೆ. ಅ.5 ರಂದೇ ಪತ್ರ ಬರೆಯಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನವೂ ಇಲ್ಲ, ಮೊಟ್ಟೆ ಹಣ ಬಾಕಿನೂ ಪಾವತಿಸಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ 2 ತಿಂಗಳಿಂದ ಮೊಟ್ಟೆ ಹಣವನ್ನೇ ನೀಡಿಲ್ಲ. ಸರ್ಕಾರ ಅನುದಾನದ ಕೊರತೆ ಹಿನ್ನೆಲೆಯಲ್ಲಿ 2 ತಿಂಗಳಿಂದ ಮೊಟ್ಟೆ ಹಣ ನೀಡಲಿಲ್ಲ. ಸ್ವಂತ ಹಣದಲ್ಲಿ ಮೊಟ್ಟೆ ಖರೀದಿಸಿ ಮಕ್ಕಳು, ಗರ್ಭಿಣಿ ಬಾಣಂತಿಯರಿಗೆ ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ವಿನಯ್ ಕುಲಕರ್ಣಿ ವರ್ಚಸ್ಸಿಗೆ ಧಕ್ಕೆ ತರುವ ಹುನ್ನಾರ ನಡೆದಿದೆ: ಏಗನಗೌಡರ

    ಹಾವೇರಿ ಜಿಲ್ಲೆಯಲ್ಲಿ 1.55 ಲಕ್ಷ ಫಲಾನುಭವಿಗಳಿದ್ದಾರೆ. 3 ರಿಂದ 6 ವರ್ಷದ ಮಕ್ಕಳು, ಗರ್ಭಿಣಿ ಮಹಿಳೆಯರು, ಬಾಣಂತಿಯರು ಸೇರಿ 1.55 ಲಕ್ಷ ಫಲಾನುಭವಿಗಳಿದ್ದಾರೆ. ತಿಂಗಳಿಗೆ ಮೊಟ್ಟೆ ಖರೀದಿಸಲು ಸುಮಾರು 66 ಲಕ್ಷ ರೂ ಅನುದಾನ ಬೇಕು. ಈಗ 2 ತಿಂಗಳಿಂದ ಮೊಟ್ಟೆ ಬಾಕಿ ಬಂದೇ ಇಲ್ಲ. ಹಾವೇರಿ ಜಿಲ್ಲೆಯಲ್ಲೇ ಸುಮಾರು 1.30 ಕೋಟಿ ರೂ. ಮೌಲ್ಯದ ಮೊಟ್ಟೆ ಖರೀದಿ ಬಾಕಿ ನೀಡಬೇಕಿದೆ. ಸರ್ಕಾರ ಕೂಡಲೇ ಬಿಡಗಡೆ ಮಾಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: Valmiki Scam | ನಾಗೇಂದ್ರಗೆ ಬಿಗ್‌ ರಿಲೀಫ್‌ – ಜಾಮೀನು ಮಂಜೂರು

    ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರಿಗೆ ಗೌರವ ಧನವೂ ಸಿಗಲಿಲ್ಲ. ಹಾವೇರಿ ಜಿಲ್ಲೆಯಲ್ಲಿ 1921 ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. 1835 ಅಂಗನವಾಡಿ ಸಹಾಯಕರಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ 11,500 ರೂ. ಗೌರವ ಧನ ನೀಡಲಾಗ್ತಿದೆ. ಅಂಗನವಾಡಿ ಸಹಾಯಕಿಯರಿಗೆ ತಿಂಗಳಿಗೆ 5000 ರೂ. ಗೌರವ ಧನ ನೀಡಲಾಗುತ್ತಿದೆ. ಮೂರು ತಿಂಗಳ ಗೌರವ ಧನ ಬಾಕಿ ಇದೆ. ಸರ್ಕಾರದ ಗಮನಕ್ಕೆ ತರಲಾಗಿದೆ. ಕೂಡಲೇ ಒಂದು ವಾರದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಯ ಉಪನಿರ್ದೇಶಕರು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ದೆಹಲಿ ಸಿಎಂ ಅತಿಶಿ

  • ಕೊಪ್ಪಳದಲ್ಲಿ ಅಂಗನವಾಡಿ ಸೀಲಿಂಗ್ ಕುಸಿದು ನಾಲ್ಕು ಮಕ್ಕಳಿಗೆ ಗಾಯ

    ಕೊಪ್ಪಳದಲ್ಲಿ ಅಂಗನವಾಡಿ ಸೀಲಿಂಗ್ ಕುಸಿದು ನಾಲ್ಕು ಮಕ್ಕಳಿಗೆ ಗಾಯ

    ಕೊಪ್ಪಳ: ಅಂಗನವಾಡಿ (Anganwadi) ಕೇಂದ್ರದ ಸೀಲಿಂಗ್ (ಛಾವಣಿ) ಕುಸಿದು ಬಿದ್ದು ನಾಲ್ಕು ಮಕ್ಕಳು ಗಾಯಗೊಂಡಿರುವ ಘಟನೆ ಕೊಪ್ಪಳ (Koppala) ಜಿಲ್ಲೆಯ ಗಂಗಾವತಿಯ ಮಹೆಬೂಬ ನಗರದ 7ನೇ ವಾರ್ಡ್‌ನ  11ನೇ ಅಂಗನವಾಡಿ ಕೇಂದ್ರದಲ್ಲಿ ಇಂದು (ಸೋಮವಾರ) ಬೆಳಗ್ಗೆ ನಡೆದಿದೆ.

    ಘಟನೆಯಲ್ಲಿ ನಾಲ್ಕರಿಂದ ಐದು ವರ್ಷದೊಳಗಿನ ಅಮಾನ್ ಸೈಯದ್, ಮರ್ದಾನ್, ಮಾನ್ವಿತಾ, ಸುರಕ್ಷಾ ಎಂಬ ಮಕ್ಕಳು ಗಾಯಗೊಂಡಿದ್ದಾರೆ. ಗಾಯಾಳು ಮಕ್ಕಳನ್ನು ಸ್ಥಳೀಯರು ತಕ್ಷಣ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್‌ – ಮೊದಲ ಜಾಮೀನು ಮಂಜೂರು

    ಕಳೆದ ಮೂರು ದಿನಗಳ ರಜೆಯ ಬಳಿಕ ಇಂದು ಎಂದಿನಂತೆ ಅಂಗನವಾಡಿ ಕೇಂದ್ರ ಆರಂಭವಾಗಿದೆ. ಕೇಂದ್ರದ ಶಿಕ್ಷಕಿ ಹಸೀನಾ ಸುಮಾರು 20ಕ್ಕೂ ಹೆಚ್ಚು ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ ಪಾಠ ಮಾಡುತ್ತಿದ್ದರು. ಈ ವೇಳೆ ಕಟ್ಟಡದ ಸೀಲಿಂಗ್ ಕುಸಿದು ಬಿದ್ದಿದೆ. ಘಟನೆ ನಡೆದ ಸ್ಥಳಕ್ಕೆ ನಗರಸಭೆಯ ಅಧ್ಯಕ್ಷ ಮೌಲಸಾಬ್, ವಾರ್ಡ್ ಸದಸ್ಯ ಮನೋಹರಸ್ವಾಮಿ, ಸಿಡಿಪಿಒ ಜಯಶ್ರೀ ದೇಸಾಯಿ, ಸೂಪರ್‌ವೈಸರ್ ಚಂದ್ರಮ್ಮ ಸೇರಿದಂತೆ ನಗರಸಭೆ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ಇದ್ದಾಗ ಯಾಕೆ ಅರ್ಕಾವತಿ ರೀ ಡೂ ವರದಿಯನ್ನು ಮಂಡನೆ ಮಾಡಲಿಲ್ಲ?: ಸಿದ್ದರಾಮಯ್ಯ

  • ಮಕ್ಕಳ ತಟ್ಟೆಗೆ ಮೊಟ್ಟೆ ಹಾಕಿ, ಕಸಿದುಕೊಂಡ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಸಸ್ಪೆಂಡ್‌

    ಮಕ್ಕಳ ತಟ್ಟೆಗೆ ಮೊಟ್ಟೆ ಹಾಕಿ, ಕಸಿದುಕೊಂಡ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಸಸ್ಪೆಂಡ್‌

    ಕೊಪ್ಪಳ: ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು ಅನ್ನೋ ಕಾರಣಕ್ಕೆ ಸರ್ಕಾರ ಅಂಗನವಾಡಿ ಮಕ್ಕಳಿಗೆ (Anganwadi childrens) ನಿತ್ಯ ಉಪಾಹಾರದೊಂದಿಗೆ ಮೊಟ್ಟೆಯನ್ನು ನೀಡುತ್ತಿದೆ. ಆದ್ರೆ ಅಂಗನವಾಡಿ ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲೂ (Egg) ವಂಚನೆ ಎಸಗಿರುವ ಆರೋಪ ಕೊಪ್ಪಳ (Koppal) ಜಿಲ್ಲೆಯಲ್ಲಿ ಕೇಳಿಬಂದಿದೆ.

    ಅಂಗನವಾಡಿ ಮಕ್ಕಳಿಗೆ ಕೊಡುವ ಮೊಟ್ಟೆಯನ್ನು ವಾಪಸ್‌ ಕಸಿದುಕೊಂಡು ವಂಚನೆ ಎಸಗುತ್ತಿದ್ದ ಆರೋಪದ ಮೇಲೆ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ, ಸಹಾಯಕಿ ಶೈನಜಾಬೇಗಂ ಅವರನ್ನ ಅಮಾನತು ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ಘಟನೆ ನಡೆದಿದ್ದು, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಇಬ್ಬರನ್ನೂ ಅಮಾನತುಗೊಳಿಸಿ ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಶೀಘ್ರವೇ ಭಾರತದ ದೊಡ್ಡ ಸುದ್ದಿ: ಬ್ರೇಕಿಂಗ್‌ ನ್ಯೂಸ್‌ ಕೊಟ್ಟ ಹಿಂಡನ್‌ಬರ್ಗ್‌

    ವಿಡಿಯೋ ವೈರಲ್‌:
    ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ವಿತರಿಸುವ ಮೊಟ್ಟೆಯಲ್ಲಿ ಗೋಲ್ಮಾಲ್ ನಡೆದಿದೆ. ಕಾರ್ಯಕರ್ತೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಲೆತಗ್ಗಿಸುವಂತ ಕೆಲಸ ಮಾಡಿದ್ದಾರೆ. ಮಕ್ಕಳಿಗೆ ಮೊಟ್ಟೆ ಕೊಟ್ಟು ಫೋಟೋ ಕ್ಲಿಕ್ಕಿಸಿ, ಮಕ್ಕಳು ಬಾಯಿಗಿಡುವ ಮುನ್ನವೇ ಮೊಟ್ಟೆ ಕಸಿದುಕೊಂಡಿದ್ದಾರೆ. ಈ ಅಮಾನವೀಯ ಘಟನೆ ವೀಡಿಯೋದಲ್ಲಿ ಸೆರೆಯಾಗಿದೆ. ಈ ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಕರ್ತೆ, ಸಹಾಯಕಿಯನ್ನು ಅಮಾನತು ಮಾಡಲಾಗಿದೆ. ಇನ್ನು ಸ್ಥಳೀಯರು ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದ ವೀಡಿಯೋಗಾಗಿ ಮುಂದೆ ನೋಡಿ… ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ʻಗೃಹಲಕ್ಷ್ಮಿʼಯರಿಗೆ ಕೊಂಚ ನಿರಾಸೆ – ಎರಡ್ಮೂರು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ದುಡ್ಡು!