Tag: Anganawadi

  • ಅಂಗನವಾಡಿ ಕಾರ್ಯಕರ್ತೆ ನೇಮಕ ವಿಚಾರದಲ್ಲಿ ಗಲಾಟೆ – ಕೇಂದ್ರಕ್ಕೆ ಸ್ಥಳೀಯರಿಂದಲೇ ಬೀಗ

    ಅಂಗನವಾಡಿ ಕಾರ್ಯಕರ್ತೆ ನೇಮಕ ವಿಚಾರದಲ್ಲಿ ಗಲಾಟೆ – ಕೇಂದ್ರಕ್ಕೆ ಸ್ಥಳೀಯರಿಂದಲೇ ಬೀಗ

    – 8 ದಿನವಾದ್ರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶ

    ಗದಗ: ಅಂಗನವಾಡಿ (Anganawadi) ಕಾರ್ಯಕರ್ತೆ ನೇಮಕ ವಿಚಾರದಲ್ಲಿ ಅಧಿಕಾರಿಗಳು ಮಲತಾಯಿ ಧೋರಣೆ ಮಾಡಿದ್ದಾರೆಂದು ಆರೋಪಿಸಿ ಕೇಂದ್ರಕ್ಕೆ ಬೀಗ ಜಡಿದ ಘಟನೆ ಜಿಲ್ಲೆಯ ಶಿರಹಟ್ಟಿಯ ಖಾನಾಪೂರದಲ್ಲಿ ನಡೆದಿದೆ.

    ಶಿರಹಟ್ಟಿ ಪಟ್ಟಣದ ವಾರ್ಡ್ ನಂಬರ್ 1 ರ ಖಾನಾಪುರ ಅಂಗನವಾಡಿ ಕೇಂದ್ರಕ್ಕೆ 8 ದಿನಗಳಿಂದ ಸ್ಥಳಿಯರು ಬೀಗ ಜಡಿದಿದ್ದಾರೆ. ಇದರಿಂದ ಸುಮಾರು 40 ಕ್ಕೂ ಅಧಿಕ ಮಕ್ಕಳು, ಬಾಣಂತಿಯರು, ಗರ್ಭಿಣಿಯರು ಪರದಾಡುವಂತಾಗಿದೆ.  8 ದಿನಗಳಾದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗೆ ಹೋಗಬಾರದವ್ವ ಅಂತ ಮಹಿಳೆಯರು ಮಾತಾಡ್ಕೊಳ್ತಿದ್ದಾರೆ – ಆರ್‌. ಅಶೋಕ್‌

    ಬೀಗ ಹಾಕಿದ್ದು ಯಾಕೆ?
    ಕಳೆದ 2 ವರ್ಷದಿಂದ ಈ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆ ಖಾಲಿ ಇತ್ತು. ಎರಡು ವರ್ಷದ ನಂತರ ಬೇರೆ ಗ್ರಾಮದ ಸಹಾಯಕಿಯನ್ನು ಪದೋನ್ನತಿ ನೀಡಿ ಕಾರ್ಯಕರ್ತೆಯಂದು ನೇಮಕ ಮಾಡಲಾಗಿದೆ. ಈ ನೇಮಕಾತಿಗೆ ಸ್ಥಳಿಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳಿಯ ಖಾನಾಪೂರ ನಿವಾಸಿ ಬಿಟ್ಟು ಬೇರೆ ಗ್ರಾಮದ ಕಾರ್ಯಕರ್ತೆ ನೇಮಕ ಮಾಡಿ ಮಲತಾಯಿ ಧೋರಣೆ ಮಾಡಲಾಗಿದೆ. ಪಟ್ಟಭದ್ರ ಹಿತಾಸಕ್ತಿಗಳ ಒತ್ತಡ, ಆಮಿಷಕ್ಕೆ ಅಧಿಕಾರಿಗಳು ಒಳಗಾಗಿ ಬೇರೆ ಗ್ರಾಮದವರನ್ನು ನೇಮಕ ಮಾಡಲಾಗಿದೆ ಎಂದು ಜನರು ದೂರಿದ್ದಾರೆ.

    ಸಾಕಷ್ಟು ಜನ ಸ್ಥಳಿಯ ಮಹಿಳೆಯರು ಅರ್ಜಿ ಹಾಕಿದ್ದಾರೆ. ಅದರಲ್ಲಿ ಯಾರಾದರೊಬ್ಬರನ್ನು ನೇಮಕ ಮಾಡಿಕೊಳ್ಳಬೇಕು. ಬೇರೆ ಗ್ರಾಮದ ಕಾರ್ಯಕರ್ತೆ ಬೇಡ ಅಂತ ಪಟ್ಟು ಹಿಡಿದಿದ್ದಾರೆ. ಹೀಗೆ ಮುಂದುವರಿದರೆ ಜಿಲ್ಲಾ ಶಿಶು ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಸ್ಥಳಿಯರು ಎಚ್ಚರಿಕೆ ನೀಡಿದ್ದಾರೆ.

     

  • ಶಿರಸಿಯ ಗೌರಿ ನಾಯ್ಕ್‌ಗೆ ಬಾವಿ ತೋಡಲು ಅನುಮತಿ

    ಶಿರಸಿಯ ಗೌರಿ ನಾಯ್ಕ್‌ಗೆ ಬಾವಿ ತೋಡಲು ಅನುಮತಿ

    ಕಾರವಾರ: ಅಂಗನವಾಡಿ ಮಕ್ಕಳಿಗೆ ಕುಡಿಯುವ ನೀರಿಗಾಗಿ ಶಿರಸಿಯ ಗೌರಿ ನಾಯ್ಕ್ (Gauri Naik) ನಡೆಸಿದ ಹೋರಾಟಕ್ಕೆ ಸರ್ಕಾರ ಕಡೆಗೂ ಮಣಿದಿದೆ.

    ಭಾರೀ ಟೀಕೆ, ಆಕ್ರೋಶ, ಪ್ರತಿಭಟನೆಗಳ ನಂತ್ರ ಗೌರಿ ನಾಯ್ಕ್ ಅವರಿಗೆ ಬಾವಿ ತೋಡುವುದನ್ನು ಮುಂದುವರಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿದೆ. ಇಂದು ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegde) ಸ್ಥಳಕ್ಕೆ ಭೇಟಿ ನೀಡಿದ್ರು. ಡಿಸಿಗೆ ಕರೆ ಮಾಡಿ ಕ್ಲಾಸ್ ತಗೊಂಡ್ರು. ಬಾವಿ ತೋಡಲು ಅನುಮತಿ ನೀಡಬೇಕು ಎಂದು ತಾಕೀತು ಮಾಡಿದರು.

    ಕೂಡಲೇ ಇದಕ್ಕೆ ಗಂಗೂಬಾಯಿ ಮಾನಕರ್ ಸ್ಪಂದಿಸಿ, ಬಾವಿ ತೋಡುವುದನ್ನು ಮುಂದುವರಿಸಲು ಗೌರಿ ನಾಯ್ಕ್ ಅವರಿಗೆ ಪರ್ಮಿಷನ್ ಕೊಟ್ಟರು. ಬಾವಿಯಲ್ಲಿ ನೀರು ಬಂದ ನಂತ್ರ ಬಾವಿಗೆ ‘ಗೌರಿ ಬಾವಿ’ ಎಂದು ಹೆಸರಿಡುವ ಭರವಸೆಯನ್ನು ಕೂಡ ಸಂಸದರು ನೀಡಿದ್ರು. ಇದಕ್ಕೆ ಗೌರಿ ನಾಯ್ಕ್ ಸಂತಸ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಗುರುವಾರ ಮುದ್ದಹನುಮೇಗೌಡ ಕಾಂಗ್ರೆಸ್‌ಗೆ ಸೇರ್ಪಡೆ

    ಗೌರಿ ನಾಯ್ಕ್ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶ ನಗರದಲ್ಲಿ ಏಕಾಂಗಿಯಾಗಿ ಬಾವಿ ತೋಡ್ತಿದ್ದಾರೆ. ಆದ್ರೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಇದಕ್ಕೆ ಅಡ್ಡಿಪಡಿಸಲು ನೋಡಿತ್ತು. ಜನವರಿ 30 ರಿಂದ ಗೌರಿಯವರು ಪೆಬ್ರವರಿ 18ರ ವರೆಗೂ 30 ಅಡಿಗೂ ಹೆಚ್ಚು ಆಳ ಏಕಾಂಗಿಯಾಗಿ ಬಾವಿ ತೋಡಿದ್ದಾರೆ.

  • ಕಟ್ಟಡವೇ ಇಲ್ಲದೇ ಶೆಡ್‍ನಲ್ಲಿ ಪುಟ್ಟಮಕ್ಕಳಿಗೆ ಪಾಠ

    ಕಟ್ಟಡವೇ ಇಲ್ಲದೇ ಶೆಡ್‍ನಲ್ಲಿ ಪುಟ್ಟಮಕ್ಕಳಿಗೆ ಪಾಠ

    ಕಾರವಾರ: ರಾಜ್ಯ ಸರ್ಕಾರ ಅಂಗನವಾಡಿಗಳನ್ನು (Anganawadi) ನಿರ್ಲಕ್ಷಿಸುತ್ತಾ ಬಂದಿದ್ದು ಕಟ್ಟಡದ ಬಾಡಿಗೆಯಿಂದ ಹಿಡಿದು ಕಾರ್ಯಕರ್ತರ ಸೀರೆಗೂ ಹಣ ನೀಡಲು ವಿಳಂಬ ಮಾಡಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಿಳೇಗೋಡದಲ್ಲಿ ಇರುವ ಅಂಗನವಾಡಿ ಕಟ್ಟಡವು ಶಿಥಿಲಾವಸ್ಥೆ ತಲುಪಿದ್ದು, ಬಾಡಿಗೆ ಕಟ್ಟಡಕ್ಕೆ ಹಣವಿಲ್ಲದೇ ಉತ್ತಮ ಕಟ್ಟಡವೂ ಸಿಗದೇ ತಗಡಿನ ಶೆಡ್ ನಿರ್ಮಿಸಿ ಅಲ್ಲಿಯೇ ನಡೆಸಲಾಗುತ್ತಿದೆ.

    ಇಲ್ಲಿನ ಶಾಲೆಯೊಂದರ ಆಡದ ಮೈದಾನದ ಮಣ್ಣಿನ ನೆಲದಲ್ಲಿ ತಗಡಿನ ಶೆಡ್ ಹಾಕಲಾಗಿದ್ದು, ಇಲ್ಲಿಯೇ 25 ಜನ ಮಕ್ಕಳು ಇರಬೇಕಾಗಿದ್ದು ಬಿಸಿಲ ಝಳಕ್ಕೆ ಮಣ್ಣಿನ ನೆಲದಲ್ಲಿ ಚಿಕ್ಕ ಮಕ್ಕಳು ನರಕ ಯಾತನೆಯಲ್ಲೇ ಪಾಠ ಕೇಳುವಂತಾಗಿದೆ. ಆದರೆ ಈ ಕುರಿತು ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆ ಮಾತ್ರ ದಿವ್ಯ ನಿರ್ಲಕ್ಷ್ಯ ತೋರಿದೆ. ಇದನ್ನೂ ಓದಿ: ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಟ್ಟರೇ ತಪ್ಪೇನಿದೆ – ನಾಗೇಂದ್ರ ಪ್ರಶ್ನೆ

    ಜಿಲ್ಲೆಯಲ್ಲಿ 2687 ಅಂಗನವಾಡಿಗಳಿವೆ, 2102 ಅಂಗನವಾಡಿಗೆ ಸ್ವಂತ ಕಟ್ಟಡಗಳಿವೆ, 81 ಕಟ್ಟಡಗಳು ಅಪೂರ್ಣ ಕಾಮಗಾರಿಯಲ್ಲಿದೆ, 45 ಕಟ್ಟಡಗಳು ಮಂಜೂರಾಗಿದೆ. 62 ಕಟ್ಟಡಗಳು ಶಿಥಿಲಗೊಂಡು ಬೇರೆಕಡೆ ಸ್ಥಳಾಂತರಗೊಂಡಿದೆ. ಇನ್ನು ಬಾಡಿಗೆ ನೀಡದೇ 15ಕ್ಕೂ ಹೆಚ್ಚು ಅಂಗನವಾಡಿ ಇದ್ದು, ಈ ಅಂಗನವಾಡಿಗಳಿಗೆ ಕಾರ್ಯಕರ್ತೆಯರೇ ಬಾಡಿಗೆ ಹಣ ನೀಡುತ್ತಿದ್ದಾರೆ.

  • 4 ತಿಂಗಳಿಂದ ಗ್ಯಾಸ್ ಬಿಲ್‌, ಮೊಟ್ಟೆ ಹಣವೂ ಇಲ್ಲ- ಅಂಗನವಾಡಿ ಕಾರ್ಯಕರ್ತೆಯರ ಗೋಳು ಕೇಳೋರಿಲ್ಲ

    4 ತಿಂಗಳಿಂದ ಗ್ಯಾಸ್ ಬಿಲ್‌, ಮೊಟ್ಟೆ ಹಣವೂ ಇಲ್ಲ- ಅಂಗನವಾಡಿ ಕಾರ್ಯಕರ್ತೆಯರ ಗೋಳು ಕೇಳೋರಿಲ್ಲ

    ಬೆಂಗಳೂರು: ಅಂಗನವಾಡಿಯಲ್ಲಿ (Anganawadi) ಮಕ್ಕಳಿಗೆ ಗರ್ಭಿಣಿಯರಿಗೆ ಕೊಡುವ ಮೊಟ್ಟೆಗೂ ಕುತ್ತು ಬಂದಿದೆ. ಈ ಹಿಂದೆ ಕಳಪೆ ಮೊಟ್ಟೆ ಸಪ್ಲೈ ಮಾಡಿ ಸುದ್ದಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈಗ ಬೆಂಗಳೂರಿನ ಅಂಗನವಾಡಿಗಳಿಗೆ ಮೊಟ್ಟೆ, ಗ್ಯಾಸ್ (Egg, Gas Bill) ಖರೀದಿ ದುಡ್ಡು ಕೊಡದೇ ಸತಾಯಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    ಮಕ್ಕಳ ಗರ್ಭಿಣಿಯರ ಅಪೌಷ್ಠಿಕತೆ ನೀಗಿಸೋಕೆ ಅಂಗನವಾಡಿಗಳಲ್ಲಿ ಮೊಟ್ಟೆ ಕೊಡುತ್ತಾರೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ನೇರವಾಗಿ ಸರ್ಕಾರ ಮೊಟ್ಟೆ ಸಪ್ಲೈ ಮಾಡಲ್ಲ. ಬದಲಾಗಿ ಅಂಗನವಾಡಿ ಕಾರ್ಯಕರ್ತೆಯರು ಖರೀದಿ ಮಾಡುತ್ತಾರೆ. ಸರ್ಕಾರ ಇದರ ದುಡ್ಡನ್ನು ಅಕೌಂಟ್ ಗೆ ಹಾಕುತ್ತೆ. ಆದರೆ ಈಗ ಕಳೆದ 3-4 ತಿಂಗಳಿಂದ ಮೊಟ್ಟೆ ದುಡ್ಡನ್ನು ಸರ್ಕಾರ ಕೊಡುತ್ತಿಲ್ಲ. ಅಷ್ಟೇ ಅಲ್ಲ ಗ್ಯಾಸ್ ದುಡ್ಡನ್ನು ಕೂಡ ಬಿಡುಗಡೆ ಮಾಡಿಲ್ಲ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ಪರದಾಟ ಪಡುವ ಪರಿಸ್ಥಿತಿನಿರ್ಮಾಣವಾಗಿದೆ.

    ಬೆಂಗಳೂರಿನಲ್ಲಿ ಸದ್ಯ 2,800 ಕ್ಕೂ ಹೆಚ್ಚು ಅಂಗನವಾಡಿಗಳು ಇದೆ. ಕಳೆದ ಮೂರು ನಾಲ್ಕು ತಿಂಗಳಿಂದ ಮೊಟ್ಟೆ ದುಡ್ಡು ಗ್ಯಾಸ್ ಸಿಲಿಂಡರ್ ಹಣ ಕೊಡದೇ ಸರ್ಕಾರ ಸತಾಯಿಸುತ್ತಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ತಾವೇ ತಮ್ಮ ಸಂಬಳದ ದುಡ್ಡನ್ನು ಮೊಟ್ಟೆಗಾಗಿ ಕೊಡುತ್ತಿದ್ದಾರೆ. ಇದನ್ನೂ ಓದಿ: ಸಿಎಂ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ – ಡಿಕೆಶಿ ಸೇರಿ 14 ಸಚಿವರು ಭಾಗಿ

    ತಲಾ ಒಬ್ಬೊಬ್ಬ ಗರ್ಭಿಣಿಗೂ ತಿಂಗಳಿಗೆ 25 ಮೊಟ್ಟೆಯನ್ನು ಅಂಗನವಾಡಿಯಲ್ಲಿ ನೀಡಬೇಕು. 3-6 ವರ್ಷದ ಮಕ್ಕಳಿಗೆ ತಿಂಗಳಿಗೆ 8 ಮೊಟ್ಟೆಯನ್ನು ಕೊಡಬೇಕು. ಅಪೌಷ್ಠಿಕತೆ ಇರುವ ಮಕ್ಕಳಿಗೆ ಒಟ್ಟು 12 ಮೊಟ್ಟೆಯನ್ನು ಕೊಡಬೇಕು. ಒಂದೊಂದು ಅಂಗನವಾಡಿಯಲ್ಲಿ 20, 30 , 40 ಜನ ಮಕ್ಕಳು, ದಿನಕ್ಕೆ 10 ಜನ ಗರ್ಭಿಣಿಯರು ಆಹಾರ ಸೇವನೆ ಮಾಡುತ್ತಾರೆ. ಮೊಟ್ಟೆ ಖರ್ಚು ನಾಲ್ಕರಿಂದ ಐದು ಸಾವಿರ ಒಂದೊಂದು ಅಂಗನವಾಡಿಗಳಿಗೆ ಬರುತ್ತಿದೆ. ಸರ್ಕಾರ ಈ ದುಡ್ಡನ್ನು ಬಿಡುಗಡೆ ಮಾಡುತ್ತಿಲ್ಲ ಅನ್ನೋದು ಅಂಗನವಾಡಿ ಕಾರ್ಯಕರ್ತೆಯರ ಆರೋಪವಾಗಿದೆ.

    ಮೊಟ್ಟೆ ಖರೀದಿ ಜೊತೆಗೆ ಗ್ಯಾಸ್ ಖರೀದಿಯನ್ನು ಕೂಡ ಸ್ವಂತ ದುಡ್ಡಿನಲ್ಲಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದುಡಿದ ಸಂಬಳವೆಲ್ಲ ಇದಕ್ಕೆ ಖರ್ಚಾಗುತ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜನವಸತಿ ಪ್ರದೇಶದಲ್ಲೇ ಅಕ್ರಮ ಗಣಿಗಾರಿಕೆ- ಕಟ್ಟಡಗಳು ಬಿರುಕು, ಬೆಚ್ಚಿದ ಅಂಗನವಾಡಿ ಮಕ್ಕಳು

    ಜನವಸತಿ ಪ್ರದೇಶದಲ್ಲೇ ಅಕ್ರಮ ಗಣಿಗಾರಿಕೆ- ಕಟ್ಟಡಗಳು ಬಿರುಕು, ಬೆಚ್ಚಿದ ಅಂಗನವಾಡಿ ಮಕ್ಕಳು

    – ಗಣಿಗಾರಿಕೆ ನಿಲ್ಲಿಸದಿದ್ರೆ ಉಗ್ರ ಹೋರಾಟದ ಎಚ್ಚರಿಕೆ

    ಮಂಗಳೂರು: ಕಪ್ಪು ಕಲ್ಲು ಗಣಿಗಾರಿಕೆ ನಿರ್ಜನ ಪ್ರದೇಶದಲ್ಲಿ ಅನುಮತಿ ಪಡೆದು ನಡೆಸುವುದು ಸಾಮಾನ್ಯ. ಆದರೆ ಈ ಊರಿನಲ್ಲಿ ಜನ ವಸತಿ ಪ್ರದೇಶದಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ (Illegal Mining) ಆರ್ಭಟಿಸುತ್ತಿದೆ. ಕಟ್ಟಡಗಳು ಬಿರುಕು ಬಿಟ್ಟು, ಸ್ಫೋಟದ ಸದ್ದಿಗೆ ಅಂಗನವಾಡಿಯ ಪುಣಾಣಿ ಮಕ್ಕಳು ಬೆದರುತ್ತಿದ್ದಾರೆ. ಈ ಬಗ್ಗೆ ಜನ ಪ್ರತಿನಿಧಿಗಳಿಗೆ ದೂರು ನೀಡಿದ್ರೂ ಅಧಿಕಾರಿಗಳು ದಾಳಿ ನಡೆಸಿದ್ರೂ ಗಣಿಗಾರಿಕೆ ಮಾತ್ರ ಶಾಶ್ವತವಾಗಿ ಮುಚ್ಚುತ್ತಿಲ್ಲ.

    ಅಕ್ರಮ ಕಲ್ಲುಗಾರಿಕೆಯಿಂದ ಈ ಊರೇ ನಲುಗಿ ಹೋಗಿದೆ. ಮನೆ, ಮಸೀದಿ ಅಂಗನವಾಡಿ ಬಿರುಕು ಬಿಟ್ಟಿದೆ. ಗಣಿಗಾರಿಕೆ ಸ್ಫೋಟದಿಂದ ಪುಟ್ಟ ಮಕ್ಕಳು ಭಯಪಡುವಂತಾಗಿದೆ. ಮಂಗಳೂರು (Mangaluru) ಹೊರ ವಲಯದ ನೀರು ಮಾರ್ಗ (Neeru Marga) ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿತ್‍ಪಾದೆಯಲ್ಲಿ ಜನವಸತಿ ಪ್ರದೇಶದಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ ಆರ್ಭಟಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಬಿತ್‍ಪಾದೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿದೆ. ಹತ್ತು ಮೀಟರ್ ದೂರದಲ್ಲೇ ಅಂಗನವಾಡಿ ಇದ್ದು, ಪುಟ್ಟ ಕಂದಮ್ಮಗಳು ಬೆದರುತ್ತಿದ್ದಾರೆ.

    ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಊರವರು ಜನಪ್ರತಿನಿಧಿಗಳಿಗೆ ದೂರು ನೀಡಿದಾಗ ತಾತ್ಕಾಲಿಕವಾಗಿ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತ ಮಾಡುತ್ತಾರೆ.. ಊರವರ ಕೋಪ ತಣ್ಣಗಾದಾಗ ಮತ್ತೆ ಗಣಿಗಾರಿಕೆ ಶುರುವಾಗುತ್ತೆ. ಇದನ್ನೂ ಓದಿ: ಅಣ್ಣನ ಪತ್ನಿ, ಮಕ್ಕಳಿಬ್ಬರನ್ನು ಕೊಂದು ಆರೋಪಿ ಎಸ್ಕೇಪ್!

    ಅಕ್ರಮ ಕಲ್ಲು ಗಣಿಗಾರಿಕೆಯಿಂದ ಊರವರು ರೋಸಿ ಹೋಗಿದ್ದಾರೆ.. ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡುವ ಬದಲು ಶಾಶ್ವತ ತಡೆಗೆ ಆಗ್ರಹಿಸಿದ್ದಾರೆ. ಶಾಶ್ವತವಾಗಿ ಗಣಿಗಾರಿಕೆ ನಿಲ್ಲಿಸದೇ ಇದ್ರೆ ದೊಡ್ಡ ಹೋರಾಟ ನಡೆಸುದಾಗಿ ಎಚ್ಚರಿಕೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಗರ ಪ್ರದೇಶಗಳಲ್ಲಿ ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಗುರುತಿಸಿ: ಹೆಬ್ಬಾಳ್ಕರ್ ಸೂಚನೆ

    ನಗರ ಪ್ರದೇಶಗಳಲ್ಲಿ ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಗುರುತಿಸಿ: ಹೆಬ್ಬಾಳ್ಕರ್ ಸೂಚನೆ

    ಬೆಂಗಳೂರು: ನಗರ ಪ್ರದೇಶಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಅಗತ್ಯ ನಿವೇಶನಗಳನ್ನು ಗುರುತಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒ ಗಳಿಗೆ ಸೂಚಿಸಿದರು.

    ವಿಧಾನಸೌಧದ (Vidhanasoudha) ಸಭಾಂಗಣ ಕೊಠಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ನಿವೇಶನದ ಕೊರತೆ ಇದೆ. ಸರ್ಕಾರಿ ಪ್ರಾಥಮಿಕ ಶಾಲೆಗಳು, ಸರ್ಕಾರದ ಸಮುದಾಯ ಭವನಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ಅನುಮತಿ ನೀಡಬೇಕೆಂದು ಸಚಿವರು ಮುಖ್ಯಮಂತ್ರಿ ಬಳಿ ಮನವಿ ಮಾಡಿದರು. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳನ್ನು ಶೀಘ್ರದಲ್ಲೇ ತುಂಬಲಾಗುವುದು ಎಂದಿದ್ದಾರೆ. ಇದನ್ನೂ ಓದಿ: Nipah virus ಭೀತಿ: ಗುಂಡ್ಲುಪೇಟೆ ಮೂಲೆಹೊಳೆ ಚೆಕ್‍ಪೋಸ್ಟ್‌ನಲ್ಲಿ ಅಲರ್ಟ್

    ಇದೇ ವೇಳೆ ಮೈಸೂರಿನಲ್ಲಿ ಆಗಸ್ಟ್ 30 ರಂದು ನಡೆದ ‘ಗೃಹಲಕ್ಷ್ಮಿ’ ಯೋಜನೆಯ ಸೌಲಭ್ಯಗಳ ವಿತರಣೆ ಸಮಾರಂಭದ ಯಶಸ್ಸಿಗೆ ಸಹಕರಿಸಿದ ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕರು ಹಾಗೂ ಅಧಿಕಾರಿಗಳಿಗೆ ಸಭೆಯಲ್ಲಿ ಧನ್ಯವಾದ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ಹೊಸ ದಾಖಲೆ: ಸಚಿವ ಸಿ.ಸಿ.ಪಾಟೀಲ್

    ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ಹೊಸ ದಾಖಲೆ: ಸಚಿವ ಸಿ.ಸಿ.ಪಾಟೀಲ್

    ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಸುಸಜ್ಜಿತ ಶಾಲಾ ಕಟ್ಟಡಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಅಂಗನವಾಡಿ ಕಟ್ಟಡಗಳ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗಿದ್ದು, ಈ ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.

    ಇಂದು ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಮತ್ತು ಸುರಕ್ಷತೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯು ಈ ಕಟ್ಟಡಗಳನ್ನು ನಿರ್ಮಿಸುವ ಜವಾಬ್ಧಾರಿ ವಹಿಸಿಕೊಂಡಿದೆ. ಶಿಕ್ಷಣ ಇಲಾಖೆಯ ಸಹಯೋಗದಲ್ಲಿ 756 ಕೋಟಿ ರೂ. ವೆಚ್ಚದಲ್ಲಿ ರಾಜ್ಯಾದ್ಯಂತ 3,423 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕಟ್ಟಡಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಈ ಪೈಕಿ ಈಗಾಗಲೇ 2,684 ಕಟ್ಟಡಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಉಳಿದ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ. ಈ ಯೋಜನೆಯನ್ನು ನಬಾರ್ಡ್‌ನ ಆರ್‌ಐಡಿಎಫ್‌-25 ಅನ್ವಯ ಜಾರಿಗೊಳಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ರೆಸಿಡೆನ್ಷಿಯಲ್‌ ಶಾಲೆಗಳಿಗೆ ನಾಳೆ ಪ್ರತ್ಯೇಕ ಮಾರ್ಗಸೂಚಿ: ಸಚಿವ ಬಿ.ಸಿ.ನಾಗೇಶ್‌

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ 137 ಕೋಟಿ ರೂ. ವೆಚ್ಚದಲ್ಲಿ ಒಟ್ಟು 842 ಸುಸಜ್ಜಿತ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸುವ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗಿದ್ದು, ಈ ಪೈಕಿ 525 ಕೇಂದ್ರಗಳ ನಿರ್ಮಾಣ ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಉಳಿದವುಗಳನ್ನು ಮುಂದಿನ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಮಕ್ಕಳನ್ನು ಶಾಲೆಗಳತ್ತ ಆಕರ್ಷಿಸಿ ಹೊಸ ಶೈಕ್ಷಣಿಕ ಕ್ರಾಂತಿಗೆ ಅವಕಾಶವಾಗುವ ನಿಟ್ಟಿನಲ್ಲಿ ಈ ಯೋಜನೆಯು ತುಂಬಾ ಸಹಕಾರಿಯಾಗಲಿದೆ ಎಂದು ಸಚಿವರು ಆಶಾವಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂತಹ ಕೆಟ್ಟ, ದುರಾಡಳಿತ, ಭ್ರಷ್ಟಾಚಾರದ ಸರ್ಕಾರವನ್ನು ಇದುವರೆಗೂ ನಾನು ನೋಡಿರಲಿಲ್ಲ: ಸಿದ್ದರಾಮಯ್ಯ

  • ಅಂಗನವಾಡಿ ತೆರೆಯಲು ಸಿದ್ಧತೆ – ಮಾರ್ಗಸೂಚಿ ಬಿಡುಗಡೆ

    ಅಂಗನವಾಡಿ ತೆರೆಯಲು ಸಿದ್ಧತೆ – ಮಾರ್ಗಸೂಚಿ ಬಿಡುಗಡೆ

    ಬೆಂಗಳೂರು: ಶಾಲೆಗೆ ತೆರೆಯುವ ಮುನ್ನ ಅಂಗನವಾಡಿ ತೆರೆಯಲು ಸಿದ್ಧತೆ ನಡೆಸಬೇಕಾಗಿದೆ. ಅಂಗನವಾಡಿ ತೆರೆದು ಪಾಠ ಮಾಡಲು ಸೂಚನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿದೆ. ಶಾಲೆ ಆರಂಭವಾಗದೇ ಅಂಗನವಾಡಿ ಆರಂಭಕ್ಕೆ ಪೋಷಕರ ಅಸಮಾಧಾನ ಹೊರಹಾಕಿದ್ದಾರೆ. ಅಂಗನವಾಡಿ ಸಿಬ್ಬಂದಿ ಸಹ ಪೋಷಕರ ಮನವೊಲಿಸಲು ಪ್ರಯತ್ನ ಮಾಡುತ್ತಿದರೂ ಪ್ರಯೋಜನ ಮಾತ್ರ ಶೂನ್ಯವಾಗಿದೆ. ಅಂಗನವಾಡಿ ಕೇಂದ್ರ ಆರಂಭಿಸಲು ಮಾರ್ಗಸೂಚಿ ಬಿಡುಗಡೆಯಾಗಿದೆ.

    ಮಾರ್ಗಸೂಚಿಗಳು:
    1. ಅಂಗನವಾಡಿ ಕೇಂದ್ರಗಳ ಸ್ಯಾನಿಟೈಜರ್.
    2. ಕೋವಿಡ್ ಆರ್ ಟಿ ಪಿಸಿಆರ್ ಟೆಸ್ಟ್  ಗೆ ಸಿಬ್ಬಂದಿ ಕಡ್ಡಾಯ ಒಳಪಡಬೇಕು. ನೆಗೆಟಿವ್ ರಿಪೋರ್ಟ್ ಪಡೆದಿರಬೇಕು.
    3. ಅಂಗನವಾಡಿ ಕೇಂದ್ರ ಶುಚಿತ್ವ ಕಾಪಾಡಬೇಕು.
    4. ಅಂಗನವಾಡಿ ಕೇಂದ್ರ ಪಾಕೋಪಕರಣ ಶುಚಿಗೊಳಿಸುವುದು.
    5. ಶೌಚಾಲಯ ಸ್ವಚ್ಛಗೊಳಿಸಬೇಕು.
    6. ಅಂಗನವಾಡಿ ಕೇಂದ್ರದ ಸಹಾಯಕಿ ಮತ್ತು ಕಾರ್ಯಕರ್ತೆ ಹಾಜರಿರಬೇಕು.
    7. 3 ರಿಂದ 6 ವರ್ಷದ ಮಕ್ಕಳಿಗೆ ಬೆಳಗ್ಗೆ 9 ರಿಂದ 12:30 ತರಗತಿ ನಡೆಸಬೇಕು.
    8. ಅಂಗನವಾಡಿ ಬರುವ ಮಕ್ಕಳ ಪೋಷಕರಿಂದ ಒಪ್ಪಿಗೆ ಪತ್ರ ಪಡೆಯಬೇಕು.
    9. ಮಕ್ಕಳು ಕೈ ತೊಳೆಯಲು ಸಾಬೂನಿನ ವ್ಯವಸ್ಥೆ ಮಾಡಿಸಬೇಕು.
    10. ಮಕ್ಕಳ ಅಂಗನವಾಡಿಗೆ ಬಂದಾಗ, ಹೋಗುವಾಗ ಕೈ ತೊಳೆಯುವುದು ಕಡ್ಡಾಯ.
    11. ಎಲ್ಲ ಮಕ್ಕಳಿಗೆ ಮಾಸ್ಕ್ ಕಡ್ಡಾಯ.
    12. ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.
    13. ಜ್ವರ, ನೆಗಡಿ, ಕೆಮ್ಮು ಲಕ್ಷಣ ಕಂಡು ಬಂದ ಮಕ್ಕಳ ಶಾಲೆಗೆ ಕಳುಹಿಸದೇ ಇರುವುದು.
    14. ಮಕ್ಕಳಿಗೆ ಪೌಷ್ಟಿಕ ಆಹಾರ ಮನೆಗೆ ಕಳುಹಿಸುವುದು.
    15. ಕಂಟೈನ್‍ಮೆಂಟ್ ಹೊರಗಿರುವ ಅಂಗನವಾಡಿ ಮಾತ್ರ ಪ್ರಾರಂಭ ಮಾಡುವುದು.

    ಈ ಸಂಬಂಧ ಮಾತನಾಡಿದ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್, ಅಂಗನವಾಡಿ ಸಹಾಯಕರಿಗೆ ಸಿಬ್ಬಂದಿಗೆ ಆರ್ ಟಿ-ಪಿಸಿಆರ್ ಕಡ್ಡಾಯ ಮಾಡಲಾಗಿದೆ. ಇದಕ್ಕೆಲ್ಲ ಸಹಕಾರ ಕೊಡಲು ನಾವು ಸಿದ್ಧ ಎಂದು ಹೇಳಿದ್ದಾರೆ.

  • ಮನೆಯಲ್ಲಿ ಮಲಗಿದ್ದ ಹುಡ್ಗಿ ಕಿಡ್ನಾಪ್- ಅಂಗನವಾಡಿಯಲ್ಲಿ ಐವರಿಂದ ಗ್ಯಾಂಗ್‍ರೇಪ್

    ಮನೆಯಲ್ಲಿ ಮಲಗಿದ್ದ ಹುಡ್ಗಿ ಕಿಡ್ನಾಪ್- ಅಂಗನವಾಡಿಯಲ್ಲಿ ಐವರಿಂದ ಗ್ಯಾಂಗ್‍ರೇಪ್

    – ಕೃತ್ಯದಲ್ಲಿ ಅಪ್ರಾಪ್ತನೂ ಭಾಗಿ
    – ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕೆ ಸಂತ್ರಸ್ತೆ ಮೇಲೆ ಹಲ್ಲೆ

    ಚಂಡೀಗಢ: ಮನೆಯಲ್ಲಿ ಮಲಗಿದ್ದ ಹುಡುಗಿಯನ್ನು ಅಪಹರಿಸಿಕೊಂಡು ಅಂಗನವಾಡಿಯಲ್ಲಿ ಐವರು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಹರಿಯಾಣದಲ್ಲಿ ನಡೆದಿದೆ.

    ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಸಂತ್ರಸ್ತೆಯನ್ನು ಆಕೆಯ ಮನೆಯಿಂದಲೇ ಎತ್ತಿಕೊಂಡು ಹೋಗಿ ಸಮೀಪದಲ್ಲಿದ್ದ ಅಂಗನವಾಡಿಯಲ್ಲಿ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

    ಏನಿದು ಪ್ರಕರಣ?
    ಹರಿಯಾಣದ ಯಮುನಾ ನಗರದಲ್ಲಿರುವ ತನ್ನ ಮನೆಯಲ್ಲಿ ಸಂತ್ರಸ್ತೆ ಮಲಗಿದ್ದಳು. ಆಗ ಐವರು ಆರೋಪಿಗಳು ಆಕೆಯನ್ನು ಮನೆಯಿಂದಲೇ ಎತ್ತಿಕೊಂಡು ಲಾಕ್ ಆಗಿದ್ದ ಅಂಗನವಾಡಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಯ ಮೇಲೆ ಐವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಸಂತ್ರಸ್ತೆ ಆರೋಪಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಮಾಡಿದ್ದಾಳೆ. ಆಗ ಆರೋಪಿಗಳು ಸಂತ್ರಸ್ತೆಯ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಸಂತ್ರಸ್ತೆ ತುಂಬಾ ಗಾಯಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಹೀನಾ ಕೃತ್ಯದಲ್ಲಿ ಅಪ್ರಾಪ್ತನೂ ಸಹ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಕೊನೆಗೆ ಸಂತ್ರಸ್ತೆ ಹೇಗೋ ಆರೋಪಿಗಳಿಂದ ತಪ್ಪಿಸಿಕೊಂಡು ಮನೆಗೆ ಹೋಗಿದ್ದಾಳೆ. ಅಲ್ಲಿ ತನ್ನ ಕುಟುಂಬದವರಿಗೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ತಕ್ಷಣ ಕುಟುಂಬದವರು ಸಂತ್ರಸ್ತೆಯೊಂದಿಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

    ಪೊಲೀಸರು ತಕ್ಷಣ ಕ್ರಮಕೈಗೊಂಡು ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂತ್ರಸ್ತೆ ಮತ್ತು ಕುಟುಂಬವರ ಹೇಳಿಕೆಯ ಆಧಾರದ ಮೇಲೆ ಆರೋಪಿಗಳ ವಿರುದ್ಧ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆ ಪ್ರಕರಣವನ್ನು ದಾಖಲಿಸಲಾಗಿದೆ. ಸದ್ಯಕ್ಕೆ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಕಾಯುತ್ತಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಸಂತ್ರಸ್ತೆ ಐವರು ಆರೋಪಿಗಳ ಗುರುತನ್ನು ಸಹ ತಿಳಿಸಿದ್ದು, ಆ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತನಿಖಾಧಿಕಾರಿ ನಿರ್ಮಲ್ ಸಿಂಗ್ ತಿಳಿಸಿದ್ದಾರೆ.

  • ಅಂಗನವಾಡಿಯಲ್ಲಿ ಅವಧಿ ಮೀರಿದ ಫುಡ್ – ಏನಾಗಲ್ಲ ಮಕ್ಕಳು ತಿಂತಾರೆ ಅಂದ ಟೀಚರಮ್ಮ

    ಅಂಗನವಾಡಿಯಲ್ಲಿ ಅವಧಿ ಮೀರಿದ ಫುಡ್ – ಏನಾಗಲ್ಲ ಮಕ್ಕಳು ತಿಂತಾರೆ ಅಂದ ಟೀಚರಮ್ಮ

    ಬೆಂಗಳೂರು: ಸಿದ್ದಗಂಗಾ ಮಠಕ್ಕೆ ದಾಸೋಹ ರೇಷನ್ ನೀಡುವುದನ್ನು ಸರ್ಕಾರ ನಿಲ್ಲಿಸಿದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದ್ರೆ ಇತ್ತ ಪುಟಾಣಿ ಕಂದಮ್ಮಗಳಿಗೆ ಅವಧಿ ಮೀರಿದ ಆಹಾರವನ್ನು ನೀಡಿ ಪಬ್ಲಿಕ್ ಟಿವಿ ಕ್ಯಾಮೆರಾ ಕಣ್ಣಿಗೆ ಅಂಗನವಾಡಿ ಶಿಕ್ಷಕಿಯೊಬ್ಬರು ಸಿಕ್ಕಿಬಿದ್ದಿದ್ದಾರೆ.

    ಅಂಗನವಾಡಿಯಲ್ಲಿ ಪುಟಾಣಿ ಮಕ್ಕಳಿಗೆ ನೀಡುವ ಆಹಾರದ ಅವಧಿ ಮುಗಿದಿದ್ದರೂ ಮಹಾಲಕ್ಷ್ಮಿ ಲೇಔಟ್‍ನ ಅಂಗನವಾಡಿಯಲ್ಲಿ ಶಿಕ್ಷಕಿ ಅವನ್ನು ಮಕ್ಕಳಿಗೆ ಹಂಚಿದ್ದಾರೆ. ಇದು ಅವಧಿ ಮೀರಿದೆ ಅಂತಾ ಪೋಷಕರು ವಾಪಸ್ ಅಂಗನವಾಡಿಗೆ ಕೊಟ್ಟು, ಪ್ರಶ್ನಿಸಿದರೆ, “ಅಯ್ಯೋ ಇದೇ ನಮ್ಗೆ ಸರ್ಕಾರದಿಂದ ಬರೋದು, ಏನು ಆಗಲ್ಲ ತಿನ್ನಿಸಿ ಮಕ್ಕಳು ತಿಂತಾರೆ” ಅಂದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

    ಈ ಸುದ್ದಿ ತಿಳಿದಾಗ ಪಬ್ಲಿಕ್ ಟಿವಿ ಅಂಗನವಾಡಿಗೆ ಹೋಗಿ ನೋಡೊದಾಗ, ಬೆಳಕೇ ಇಲ್ಲದ ಕೋಣೆಯಲ್ಲಿ ಮಕ್ಕಳು ಆಟವಾಡುತ್ತಿರುವುದು, ಸರ್ಕಾರದಿಂದ ಈ ತಿಂಗಳ ಆಹಾರ ಬಂದಿದ್ದರೂ ಅದನ್ನು ವಿತರಣೆ ಮಾಡದೇ ಇರುವುದು ಬೆಳಕಿಗೆ ಬಂದಿದೆ. ಮಕ್ಕಳು ತಿಂತರೆ ಇದನ್ನೇ ಕೊಡಿ ಎಂದು ಅವಧಿ ಮೀರಿದ ಆಹಾರ ಕೊಟ್ಟು ಮೊದಲು ಪೋಷಕರ ಜೊತೆ ವಾಗ್ವಾದ ನಡೆಸಿದ್ದ ಶಿಕ್ಷಕಿ, ಕ್ಯಾಮೆರಾ ಕಂಡೊಡನೆ ಇಲ್ಲ ಗೊತ್ತಾಗದೇ ತಪ್ಪಾಗಿದೆ, ಬೇರೆ ಕೊಡ್ತೀವಿ ಎಂದು ಡೈಲಾಗ್ ಹೇಳಿದ್ದಾರೆ.

    ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವ ಮಾತಿಗೆ ಈ ಪ್ರಕರಣ ಒಂದು ರೀತಿ ಉದಾಹರಣೆಯಾಗಿದೆ. ಪುಟಾಣಿ ಮಕ್ಕಳು ಈ ರೀತಿ ಅವಧಿಮೀರಿದ ಆಹಾರ ಸೇವಿಸಿದರೆ ಅವರ ಆರೋಗ್ಯದ ಗತಿ ಏನು? ಹೀಗೆ ನಿರ್ಲಕ್ಷ್ಯ ಮೆರೆಯುವ ಸಿಬ್ಬಂದಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ.