Tag: anganavadi workers

  • ಸಲ್ಮಾನ್ ಖಾನ್ ತನ್ನ 20 ಬಾಡಿಗಾರ್ಡ್‍ಗಳನ್ನ ಒಮ್ಮೆಲೆ ಕೆಲಸದಿಂದ ತೆಗೆದಿದ್ದರ ಹಿಂದಿನ ಕಾರಣ ಇಲ್ಲಿದೆ

    ಸಲ್ಮಾನ್ ಖಾನ್ ತನ್ನ 20 ಬಾಡಿಗಾರ್ಡ್‍ಗಳನ್ನ ಒಮ್ಮೆಲೆ ಕೆಲಸದಿಂದ ತೆಗೆದಿದ್ದರ ಹಿಂದಿನ ಕಾರಣ ಇಲ್ಲಿದೆ

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ತನ್ನ ಕೆಲವು ಬಾಡಿಗಾರ್ಡ್‍ಗಳನ್ನ ಕೆಲಸದಿಂದ ಕಿತ್ತು ಹಾಕಿದ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ನಟ ಸಲ್ಮಾನ್ ಎಲ್ಲಿದ್ದಾರೆ ಎಂಬ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದ ಕಾರಣ ಅವರನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಹೇಳಲಾಗಿತ್ತು. ಆದ್ರೆ ಇದರ ಹಿಂದಿನ ನಿಜವಾದ ಕಾರಣ ಈಗ ಬಯಲಾಗಿದೆ.

    ಕೆಲಸದಿಂದ ತೆಗೆಯಲಾದ ಸೆಕ್ಯೂರಿಟಿ ಗಾರ್ಡ್‍ವೊಬ್ಬರು ಪತ್ರಿಕೆಯೊಂದಿಗೆ ಮಾತನಾಡಿ ಸತ್ಯಾಂಶವನ್ನ ಬಿಚ್ಚಿಟ್ಟಿದ್ದಾರೆ. ಸಲ್ಮಾನ್ ಖಾನ್ ತುಂಬಾ ಮೂಡಿ. ಇತ್ತೀಚೆಗೆ ಅವರು ಕೋಪದಲ್ಲಿ ಒಬ್ಬರಲ್ಲ, 20 ಗಾರ್ಡ್‍ಗಳನ್ನು ಕಾರಣವಿಲ್ಲದೆ ಕೆಲಸದಿಂದ ತೆಗೆದರು ಎಂದು ಹೇಳಿದ್ದಾರೆ.

    ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರ ವೇಳೆ, ಸಲ್ಮಾನ್ ಖಾನ್ ಅವರ ಮುಂಬೈ ಅತಿಥಿಗಳ ಭದ್ರತೆಗೆ ಹಲವು ಗಾರ್ಡ್‍ಗಳನ್ನ ನಿಯೋಜಿಸಲಾಗಿತ್ತು. ಅವರಲ್ಲಿ ಒಬ್ಬ ಅತಿಥಿ ತನಗೆ ಸರಿಯಾಗಿ ಸ್ವಾಗತ ಮಾಡಲಿಲ್ಲ ಎಂದು ಗಾರ್ಡ್‍ವೊಬ್ಬನ ಜೊತೆ ವಾದಕ್ಕಿಳಿದರು. ಈ ವೇಳೆ ಗಾರ್ಡ್, ನಾನು ಸೆಕ್ಯೂರಿಟಿ ಗಾರ್ಡ್ ಆಗಿ ನನ್ನ ಕರ್ತವ್ಯವನ್ನ ಸರಿಯಾಗಿ ಮಾಡಿದ್ದೇನೆ ಎಂದಾಗ ಆ ಅತಿಥಿ ಕೋಪಗೊಂಡು ಕೆನ್ನೆಗೆ ಬಾರಿಸಿದ್ರು. ಗಾರ್ಡ್ ಕೂಡ ತಿರುಗಿಸಿ ಅವರ ಕೆನ್ನೆಗೆ ಬಾರಿಸಿದ ಎಂದು ಹೇಳಿದ್ದಾರೆ.

    ಈ ಘಟನೆಯ ಮರುದಿನ ನಿರೀಕ್ಷೆಯಂತೆ ಸಲ್ಮಾನ್ ಖಾನ್ ಎಲ್ಲಾ ಬಾಡಿಗಾರ್ಡ್‍ಗಳನ್ನ ಕರೆಸಿದ್ರು. ಒಂದೇ ಬಾರಿಗೆ ಎಲ್ಲಾ 20 ಬಾಡಿಗಾರ್ಡ್‍ಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದ್ರು ಎಂದಿದ್ದಾರೆ.

    ಕೆಲಸದಿಂದ ತೆಗೆಯಲ್ಪಟ್ಟ ಮತ್ತೊಬ್ಬ ಸೆಕ್ಯೂರಿಟಿ ಗಾರ್ಡ್ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದು, ಹೌದು, ಇದು ನಿಜ. ತಪ್ಪು ಮಾಡಿದ ಗಾರ್ಡ್‍ನನ್ನು ಬೇಕಾದ್ರೆ ತೆಗೆಯಲಿ. ಆದ್ರೆ ಅವನಿಂದ ಬೇರೆ ಎಲ್ಲರೂ ಯಾಕೆ ಕೆಲಸ ಕಳೆದುಕೊಳ್ಬೇಕು ಎಂದು ನಮ್ಮಲ್ಲಿ ಒಬ್ಬರು ಭಾಯ್‍ಗೆ ಹೇಳುವ ಧೈರ್ಯ ತೋರಿದ್ದಕ್ಕೆ ಅವರು “ನೀನು ಜಾಸ್ತಿ ಮಾತಾಡ್ತಿದ್ದೀಯಾ” ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

  • ಕೇಂದ್ರದ ಅನುದಾನದ ಬಳಕೆ ಹೇಗೆ ಆಗಿದೆ ಅನ್ನೋದನ್ನು ಮೊದ್ಲು ತಿಳಿಸಲಿ: ಸಿಎಂಗೆ ಬಿಎಸ್‍ವೈ ತಿರುಗೇಟು

    ಕೇಂದ್ರದ ಅನುದಾನದ ಬಳಕೆ ಹೇಗೆ ಆಗಿದೆ ಅನ್ನೋದನ್ನು ಮೊದ್ಲು ತಿಳಿಸಲಿ: ಸಿಎಂಗೆ ಬಿಎಸ್‍ವೈ ತಿರುಗೇಟು

    ಮೈಸೂರು: ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಯ ಬಗ್ಗೆ ರಾಜ್ಯ ಸರ್ಕಾರ ಕೇಂದ್ರವನ್ನು ಬೊಟ್ಟು ಮಾಡುತ್ತಿರುವುದು ಸರಿಯಲ್ಲ. ಈ ಕುರಿತು ಮಂಗಳವಾರ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಲಿಶಾವಾದ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:  ಅಂಗನವಾಡಿ ನೌಕರರಿಂದ ಆಹೋರಾತ್ರಿ ಧರಣಿ – ಬೀದಿಯಲ್ಲೇ ಮಕ್ಕಳ ನಿದ್ದೆ

    ಈ ಬಗ್ಗೆ ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‍ವೈ ಮೊದಲು 14ನೇ ಹಣಕಾಸು ಆಯೋಗದಿಂದ ಕೇಂದ್ರ ಸರ್ಕಾರ ನೀಡಿರುವ ಹಣವನ್ನು ರಾಜ್ಯ ಸರ್ಕಾರ ಯಾವ ಉದ್ದೇಶಕ್ಕೆ ಬಳಸಿಕೊಂಡಿದೆ ಎಂಬುದನ್ನು ತಿಳಿಸಲಿ. ಕೇಂದ್ರ ಸರ್ಕಾರ ನೀಡುವ ಹಣವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ. ಬಳಿಕ ಸಮಸ್ಯೆ ಎದುರಾದಾಗ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ ಅಂತಾ ಸಿಎಂ ಆರೋಪಕ್ಕೆ ತಿರುಗೇಟು ನೀಡಿದರು.

    ಇದನ್ನೂ ಓದಿ: ಅಂಗನವಾಡಿ ನೌಕರರ ಧರಣಿ: ಸಾವಿರಾರು ಮಹಿಳೆಯರಿಗೆ ಒಂದೇ ಶೌಚಾಲಯ

    ಸಮಸ್ಯೆಗೆ ರಾಜ್ಯ ಸರ್ಕಾರವೇ ಕಾರಣ: ಅಂಗನವಾಡಿ ಕಾರ್ಯಕರ್ತೆಯರ ಈಗಿನ ಸಮಸ್ಯೆಗೆ ರಾಜ್ಯ ಸರ್ಕಾರವೇ ಕಾರಣ. ಕೇಂದ್ರದಿಂದ ರಾಜ್ಯಕ್ಕೆ ನೀಡುತ್ತಿರುವ ಹಣ ದುರುಪಯೋಗವಾಗುತ್ತಿದೆ. ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಗಳಿಗೆ ಬಳಕೆ ಮಾಡುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರನ್ನು ರಾಜ್ಯ ಸರ್ಕಾರ ಬೇರೆ ಬೇರೆ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರವೇ ಹಣ ನೀಡಬೇಕು ಅಂತಾ ಸಂಸದೆ ಶೋಭಾಕರಂದ್ಲಾಜೆ ಆಗ್ರಹಿಸಿದರು.

    ಇದನ್ನೂ ಓದಿ:  ಅಂಗನವಾಡಿ ನೌಕರರ ಪ್ರತಿಭಟನೆಗೆ ಬೆಚ್ಚಿದ ಬೆಂಗಳೂರು – ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್

    ಸರ್ಕಾರ ಹೇಳಿದ್ದೇನು?: ಮಂಗಳವಾರ ವಿಧಾನಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಬಗ್ಗೆ ಚರ್ಚೆ ನಡೆದಿತ್ತು. ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಮತ್ತು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಅನುದಾನವನ್ನು ಕಡಿತಗೊಳಿಸಿದ್ದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಹೇಳಿದ್ದರು.

    ಇದನ್ನೂ ಓದಿ: ಅಂಗನವಾಡಿ ನೌಕರರ ಧರಣಿ- ಹೆಚ್‍ಡಿಕೆ ಭೇಟಿ, ನೊಂದ ಮಹಿಳೆಯರಿಗೆ ಸಾಂತ್ವನ

    ಉಮಾಶ್ರೀ ಮಾತನಾಡಿ, ಯುಪಿಎ ಸರ್ಕಾರ ಇದ್ದಾಗ ಕೇಂದ್ರ ಸರ್ಕಾರ ಶೇ.90ರಷ್ಟು, ರಾಜ್ಯ ಸರ್ಕಾರ ಶೇ.10 ಗೌರವ ಧನ ಕೊಡುತಿತ್ತು. ಆದರೆ ಕೇಂದ್ರ ಸರ್ಕಾರ ಈಗ ಶೇ. 60, ರಾಜ್ಯ ಸರ್ಕಾರ ಶೇ.40 ರಷ್ಟು ಅನುದಾನ ನೀಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ 5,200 ರೂ. ಸಹಾಯಧನ ಕೊಡ್ತಿದ್ರೆ, ಕೇಂದ್ರ ಸರ್ಕಾರದ ಪಾಲು 1,800 ರೂ. ಮಾತ್ರ. ಇದರಿಂದಾಗಿ ಒಟ್ಟು 7000 ರೂ ಸಂಬಳ ಸಿಗುತ್ತಿದೆ ಎಂದು ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

    ಇದನ್ನೂ ಓದಿ: ಹೆಚ್‍ಡಿಕೆ ಆಯ್ತು ಈಗ ಶೆಟ್ಟರ್ ಆಶ್ವಾಸನೆ – ಸದನದಲ್ಲೂ ಶುರುವಾಯ್ತು ಅಂಗನವಾಡಿ ಕೂಗು

    ಸಿಎಂ ಸಿದ್ದರಾಮಯ್ಯ ಮಾತನಾಡಿ, ಇಂದಿರಾಗಾಂಧಿ ಕಾಲದಲ್ಲಿ ಗೌರವ ಧನ ಕೊಡಲು ಆರಂಭವಾಗಿದ್ದು, ಅಂದಿನಿಂದಲೂ ಕೇಂದ್ರ ಸರ್ಕಾರ ಶೇ.90 ರಷ್ಟು ಗೌರವಧನ ನೀಡುತ್ತಿದೆ. ಆದರೆ ಕೇಂದ್ರ ಸರ್ಕಾರ ಪಾಲು ಕಡಿತಗೊಳಿಸಿದ ಕಾರಣ ರಾಜ್ಯ ಸರ್ಕಾರಕ್ಕೆ ಹೊರೆಯಾಗಿದೆ. ಪ್ರತಿ ವರ್ಷ ನಾವು 500 ರೂ ಹೆಚ್ಚಳ ಮಾಡಿದ್ದೇವೆ. ಆದ್ರೆ 2016-17ರಲ್ಲಿ ಹೆಚ್ಚಳ ಮಾಡಿಲ್ಲ, ಅದು ಕೇಂದ್ರ ಸರ್ಕಾರದ ಕ್ರಮದಿಂದ ಆಗಿಲ್ಲ. ಬರೀ ಮಾತನಾಡಬಹುದು, ಕಾಳಜಿ ತೋರಿಸಬಹುದು.ಆದ್ರೆ ಕೇಂದ್ರ ಸರ್ಕಾರ ಪಾಲು ಕಡಿಮೆ ಮಾಡಿದ್ದು ಯಾಕೆ? ಇದು ಮಹಿಳಾ ಪರ ಕಾಳಜಿನಾ ಎಂದು ಪ್ರಶ್ನಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಇದನ್ನೂ ಓದಿ: ಸತತ 2ನೇ ದಿನವೂ ಅಂಗನವಾಡಿ ನೌಕರರ ಅಹೋರಾತ್ರಿ ಧರಣಿ

    ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ 7 ಸಾವಿರ ಸಂಬಳ: ಯಾರ ಪಾಲು ಎಷ್ಟು? ಬೇರೆ ರಾಜ್ಯದಲ್ಲಿ ಎಷ್ಟಿದೆ?

  • ಹೆಚ್‍ಡಿಕೆ ಆಯ್ತು ಈಗ ಶೆಟ್ಟರ್ ಆಶ್ವಾಸನೆ – ಸದನದಲ್ಲೂ ಶುರುವಾಯ್ತು ಅಂಗನವಾಡಿ ಕೂಗು

    ಹೆಚ್‍ಡಿಕೆ ಆಯ್ತು ಈಗ ಶೆಟ್ಟರ್ ಆಶ್ವಾಸನೆ – ಸದನದಲ್ಲೂ ಶುರುವಾಯ್ತು ಅಂಗನವಾಡಿ ಕೂಗು

    ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬಳಿಕ ಈಗ ಬಿಜೆಪಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅಂಗನವಾಡಿ ಕಾರ್ಯಕರ್ತೆಯರು ಅಹೋರಾತ್ರಿಯಿಂದ ಧರಣಿ ನಡೆಸುತ್ತಿರೋ ಫ್ರೀಡಂಪಾರ್ಕ್‍ಗೆ ಭೇಟಿ ನೀಡಿದ್ದಾರೆ.

    ಈ ವೇಳೆ 10 ಸಾವಿರ ಸಂಬಳ ನೀಡೋವರೆಗೂ ಜಾಗ ಬಿಟ್ಟು ಕದಲಲ್ಲ ಅಂತ ಅಂಗನವಾಡಿ ಕಾರ್ಯಕರ್ತೆಯರು ಶೆಟ್ಟರ್ ಮುಂದೆಯೂ ಆಕ್ರೋಶ ವ್ಯಕ್ತಪಡಿಸಿದ್ರು. ಸದನ ನಡೆಸೋಕೆ ಬಿಡಬೇಡಿ, ನಮ್ಮ ಸಮಸ್ಯೆ ಮೊದ್ಲು ಬಗೆಹರಿಸಿ ಅಂತ ಒತ್ತಡ ಹಾಕಿದ್ರು. ಆದ್ರೆ ಶೆಟ್ಟರ್ ಈ ಕುರಿತು ನಾವು ಕೇಂದ್ರದಿಂದ ನೆರವು ಕೊಡಿಸೋ ಪ್ರಯತ್ನ ಮಾಡ್ತೀವಿ. ನಮ್ಮ ಸರ್ಕಾರ ಬಂದ್ರೆ ನಿಮ್ಮ ಸಮಸ್ಯೆ ಬಗೆಹರಿಸ್ತೀವಿ ಅಂತ ಅಂದ್ರು.

    ಸದಸನದಲ್ಲೂ ಪ್ರಸ್ತಾಪ: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಬಗ್ಗೆ ಇಂದು ಸದನದಲ್ಲಿ ಬಿಜಿಪಿ ಪ್ರಸ್ತಾಪಿಸಿದ್ದು, ನಿಯಮ 69 ರಡಿ ಚರ್ಚೆಗೆ ಅವಕಾಶ ಮಾಡಿಕೊಡಲಾಗಿದೆ. 10 ಸಾವಿರ ಜನ ರಸ್ತೆಯ ಮೇಲೆ ಇದ್ದಾರೆ. ಅವರ ಕಷ್ಟ ಕೇಳಬೇಕು ಅಂತಾ ಆಗ್ರಹಿಸಲಾಯಿತು. ಈ ವೇಳೆ ಪ್ರಶ್ನೋತ್ತರ ಬಳಿಕ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ಭರವಸೆ ನೀಡಿದ್ರು.

    ಇದನ್ನೂ ಓದಿ: ಅಂಗನವಾಡಿ ನೌಕರರಿಂದ ಆಹೋರಾತ್ರಿ ಧರಣಿ – ಬೀದಿಯಲ್ಲೇ ಮಕ್ಕಳ ನಿದ್ದೆ

    ಇದನ್ನೂ ಓದಿ: ಅಂಗನವಾಡಿ ನೌಕರರ ಧರಣಿ: ಸಾವಿರಾರು ಮಹಿಳೆಯರಿಗೆ ಒಂದೇ ಶೌಚಾಲಯ

    ಇದನ್ನೂ ಓದಿ: ಅಂಗನವಾಡಿ ನೌಕರರ ಪ್ರತಿಭಟನೆಗೆ ಬೆಚ್ಚಿದ ಬೆಂಗಳೂರು – ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್

    ಇದನ್ನೂ ಓದಿ: ಅಂಗನವಾಡಿ ನೌಕರರ ಧರಣಿ- ಹೆಚ್‍ಡಿಕೆ ಭೇಟಿ, ನೊಂದ ಮಹಿಳೆಯರಿಗೆ ಸಾಂತ್ವನ