Tag: ANF

  • ಒಂದೇ ಎನ್‌ಕೌಂಟರ್‌ಗೆ ಕಾಫಿನಾಡ ಕಾಡು ಬಿಟ್ರಾ ನಕ್ಸಲರು? – ಎರಡೇ ತಿಂಗಳಿಗೆ ಕೇರಳಕ್ಕೆ ಎಸ್ಕೇಪ್?

    ಒಂದೇ ಎನ್‌ಕೌಂಟರ್‌ಗೆ ಕಾಫಿನಾಡ ಕಾಡು ಬಿಟ್ರಾ ನಕ್ಸಲರು? – ಎರಡೇ ತಿಂಗಳಿಗೆ ಕೇರಳಕ್ಕೆ ಎಸ್ಕೇಪ್?

    ಚಿಕ್ಕಮಗಳೂರು: ಕೇರಳದಲ್ಲಿ (Kerala) ಉಳಿಯೋದು ಕಷ್ಟ ಎಂದು ಕಾಫಿನಾಡಿಗೆ ಬಂದಿದ್ದ ಕೆಂಪು ಉಗ್ರರು ಒಂದೇ ಒಂದು ಎನ್‌ಕೌಂಟರ್‌ಗೆ ಮತ್ತೆ ಕೇರಳ ಸೇರಿಕೊಂಡಿರುವ ಅನುಮಾನ ಮೂಡಿದೆ.

    ಕಾಫಿನಾಡು-ಕೃಷ್ಣನಗರಿಯಲ್ಲಿ ನಕ್ಸಲರ ಹೆಜ್ಜೆಗುರುತು ಸಿಕ್ಕ 15-20 ದಿನದಲ್ಲೇ ನಕ್ಸಲ್ ನಾಯಕ ವಿಕ್ರಂಗೌಡ (Vikram Gowda) ಎಎನ್‌ಎಫ್ (ANF) ಗುಂಡಿಗೆ ಕಾಡಲ್ಲೇ ಹತನಾದ. ಕಾಫಿನಾಡ ಕಾಡಲ್ಲಿ ಕಣ್ಮರೆಯಾದ ಮುಂಡಗಾರು ಲತಾ ಆ್ಯಂಡ್ ಟೀಂ ಪತ್ತೆಯೇ ಇಲ್ಲ. ಇತ್ತ ಕಾಡಲ್ಲಿ ಓಡಿಹೋದ ವಿಕ್ರಂಗೌಡನ ಜೊತೆಗಿದ್ದ ಸಹಚರರ ಸುಳಿವೂ ಇಲ್ಲ. ಹಾಗಾದರೇ ನಕ್ಸಲರು ಜೀವಭಯದಲ್ಲಿ ಮತ್ತೆ ಕೇರಳ ಸೇರಿಕೊಂಡರಾ ಎಂಬ ಅನುಮಾನ ಬಲವಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಪಾಕ್ ಪ್ರಜೆಗಳ ಬಂಧನ ಕೇಸ್‌ – 1,350ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

    ಕಾಫಿನಾಡಲ್ಲಿ ಕಳೆದೊಂದು ದಶಕದಿಂದ ನಕ್ಸಲರ ಹೆಜ್ಜೆ ಗುರುತುಗಳೇ ಇರಲಿಲ್ಲ. ದಶಕಗಳ ಬಳಿಕ ಕೆಂಪು ಉಗ್ರರು ಕಾಫಿನಾಡು ಕಾಡಲ್ಲಿ ಓಡಾಡಿದ್ದರು. ಎರಡೇ ತಿಂಗಳಿಗೆ ಮತ್ತೆ ಇಲ್ಲದಂತಾಗಿರೋದು ನಿಜಕ್ಕೂ ಆಶ್ಚರ್ಯ. ಆದರೆ ದಶಕದಿಂದ ನಕ್ಸಲರು ಇಲ್ಲದ ಕಾರಣ ಕಾರ್ಕಳದ ಎಎನ್‌ಎಫ್ ಕ್ಯಾಂಪನ್ನು ಮಡಿಕೇರಿಗೆ ವರ್ಗಾಯಿಸೋ ಮಾತುಗಳು ಕೇಳಿ ಬಂದಿದ್ದವು. ಆದರೆ ಹಿಟ್‌ಲಿಸ್ಟ್ ನಕ್ಸಲರು ಸಿಗದ ಕಾರಣ ಆ ಪ್ರಸ್ತಾವನೆ ಹಾಗೇ ಉಳಿದಿತ್ತು. ಒಂದೂವರೆ ತಿಂಗಳ ಹಿಂದೆ ಕೇರಳದಿಂದ ಬಂದ ನಕ್ಸಲರು 2 ತಂಡ ಮಾಡಿಕೊಂಡು ಉಡುಪಿ-ಚಿಕ್ಕಮಗಳೂರು ಸೇರಿದ್ದರು. ಮುಂಡಗಾರು ಲತಾ ಕಾಡಲ್ಲಿ ಕಾಣೆಯಾದ ಬೆನ್ನಲ್ಲೇ ವಿಕ್ರಂಗೌಡ ಉಡುಪಿಯಲ್ಲಿ ಎನ್‌ಕೌಂಟರ್ ಆದ. ಅದಾದ ಬಳಿಕ ಎಎನ್‌ಎಫ್ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಾಡಲ್ಲಿ ಕೂಂಬಿಂಗ್ ಚುರುಕುಗೊಳಿಸಿದರು. ಆದರೆ ಮುಂಡಗಾರು ಲತಾ ಟೀಂ ಹಾಗೂ ಕಾಡಲ್ಲಿ ಓಡಿಹೋದ ವಿಕ್ರಂಗೌಡನ ಸಹಚರರ ಸುದ್ದಿಯೇ ಇಲ್ಲದಂತಾಗಿರೋದು ಜೀವ ಭಯದಿಂದ ನಕ್ಸಲರು ಮತ್ತೆ ಕೇರಳ ಕಾಡು ಸೇರಿಕೊಂಡಿರಬಹುದಾ ಎಂಬ ಪ್ರಶ್ನೆ ಮೂಡಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರ | ಬಸ್ ಪಲ್ಟಿ – 12 ಮಂದಿ ಸಾವು, 30 ಜನರಿಗೆ ಗಾಯ

    ಈ ರೀತಿಯ ಜಿಜ್ಞಾಸೆಯೊಂದು ನಕ್ಸಲರನ್ನು ಕಾಡತೊಡಗಿದೆ. ಏಕೆಂದರೆ 10 ವರ್ಷಗಳ ಬಳಿಕ ಕರ್ನಾಟಕಕ್ಕೆ ಬಂದ ಎರಡೇ ತಿಂಗಳಿಗೆ ಅತ್ತ ಉಡುಪಿ-ಇತ್ತ ಚಿಕ್ಕಮಗಳೂರಲ್ಲಿ ಪೊಲೀಸರು ನಕ್ಸಲರ ಬೆನ್ನು ಬಿದ್ದಿದ್ದಾರೆ. ಅಂದರೆ ಅಲ್ಲಿಗೆ ಮಲೆನಾಡಿಗರೇ ಬೆಂಬಲ ಇಲ್ಲ ಎಂದೇ ಅರ್ಥ. ಹಾಗಾಗಿಯೇ ಅವರು ಬಂದ ಒಂದೂವರೆ ತಿಂಗಳಿಗೆ ಒಂದು ಎನ್‌ಕೌಂಟರ್ ಆಗಿದೆ. ವಿಕ್ರಂಗೌಡ ಎನ್‌ಕೌಂಟರ್ ಆದ ಬೆನ್ನಲ್ಲಿ ಮತ್ತೆ ನಕ್ಸಲರ ವದಂತಿಗಳೇ ಇಲ್ಲದಂತಾಗಿದೆ. ಹಾಗಾಗಿ ಎನ್‌ಕೌಂಟರ್ ಬಳಿಕ ನೋ ಸರೆಂಡರ್ ಎಂದು ಎಎನ್‌ಎಫ್ ಕೂಂಬಿಂಗ್ ಕಂಡು ನಕ್ಸಲರು ಜೀವ ಭಯದಲ್ಲಿ ಮತ್ತೆ ಕೇರಳದತ್ತ ಹೆಜ್ಜೆ ಹಾಕಿರಬಹುದು ಎಂಬ ಅನುಮಾನ ಬಲವಾಗಿವೆ. ಇದನ್ನೂ ಓದಿ: ಪಕ್ಕದ ಮನೆಗೆ ಕನ್ನ ಹಾಕಿ ಪೊಲೀಸರ ಅತಿಥಿಯಾದ ಬೆಂಗ್ಳೂರು ನೆಂಟ!

    ಒಟ್ಟಾರೆ, 2002ರಿಂದ 2013-14ರವರೆಗೆ ನಿರಂತರವಾಗಿದ್ದ ನಕ್ಸಲ್ ಚಟುವಟಿಕೆ 2014ರ ಬಳಿಕ ಸಂಪೂರ್ಣ ನಿಂತೇ ಹೋಗಿತ್ತು. ನಕ್ಸಲರೆಲ್ಲಾ ಕೇರಳ ಸೇರಿಕೊಂಡಿದ್ದರು. ಆದರೆ 2024ರಲ್ಲಿ ಕರ್ನಾಟಕಕ್ಕೆ ಬಂದ ಒಂದೂವರೆ-ಎರಡು ತಿಂಗಳಲ್ಲೇ ಒಂದು ಎನ್‌ಕೌಂಟರ್ ನಕ್ಸಲರ ನಿದ್ದೆಗೆಡಿಸಿ, ಜೀವಭಯ ತರಿಸಿದಂತೆ ಕಾಣುತ್ತಿದೆ. ಹಾಗಾಗಿ ಮತ್ತೆ ಕೇರಳದತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ನಾನು ಸಚಿವ ಸ್ಥಾನದ ಆಕಾಂಕ್ಷಿ : ಶಾಸಕ ರಾಜು ಕಾಗೆ

  • ವಿಕ್ರಮ್‌ ಗೌಡ ಎನ್‌ಕೌಂಟರ್‌ ಬಳಿಕ ಕೊಡಗಿನಲ್ಲಿ – ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ತೀವ್ರ

    ವಿಕ್ರಮ್‌ ಗೌಡ ಎನ್‌ಕೌಂಟರ್‌ ಬಳಿಕ ಕೊಡಗಿನಲ್ಲಿ – ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ತೀವ್ರ

    – 2012ರಿಂದ 2024ರ ವರೆಗೆ ಕೊಡಗು ಜಿಲ್ಲೆಯಲ್ಲಿ ನಕ್ಸಲರ ಹೆಜ್ಜೆ ಗುರುತು ಹೇಗಿದೆ?

    ಮಡಿಕೇರಿ: ನಕ್ಸಲ್‌ ನಾಯಕ ವಿಕ್ರಮ್‌ ಗೌಡ (Vikram Gowda) ಎನ್‌ಕೌಂಟರ್‌ ಬಳಿಕ ಆತನ ಸಹಚರರು ದಿಕ್ಕಾಪಾಲಾಗಿ ಓಡಿದ್ದರು ಎನ್ನಲಾಗಿತ್ತು. ಈ ಹಿನ್ನೆಲೆ ತಪ್ಪಿಸಿಕೊಂಡ ನಕ್ಸಲರ ಗುಂಪು ಕೊಡಗು ಜಿಲ್ಲೆಯನ್ನು ಪ್ರವೇಶಿಲಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ನಕ್ಸಲ್‌ ನಿಗ್ರಹ ದಳ (ANF) ಕೊಡಗು ಜಿಲ್ಲೆಯ ಗಡಿಭಾಗ ಸೇರಿದಂತೆ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಕೊಂಬಿಂಗ್‌ ಕಾರ್ಯಾಚರಣೆ ನಡೆಸುತ್ತಿದೆ. ಕೊಡಗು ಪೊಲೀಸರು ಇದಕ್ಕೆ ಕೈಜೋಡಿಸಿದ್ದಾರೆ.

    ಕೊಡಗು (Kodagu) ಜಿಲ್ಲೆಯ ಗಡಿ ಭಾಗವಾದ ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ನಾಕಾಬಂಧಿ ಹಾಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ವಾಹನಗಳನ್ನೂ ತಪಾಸಣೆ ನಡೆಸುತ್ತಿದ್ದಾರೆ. ಜೊತೆಗೆ ನಕ್ಸಲರು ಹಿಂದೆ ಓಡಾಟ ನಡೆಸಿದ್ದ ಸ್ಥಳಗಳಲ್ಲಿಯೂ ಕೊಂಬಿಂಗ್‌ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಸರಣಿ ಅಪಘಾತ – ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

    ಕೊಡಗು ಜಿಲ್ಲೆಯಲ್ಲಿ ನಕ್ಸಲರ ಹೆಜ್ಜೆ ಗುರುತುಗಳು:
    * 2012 ಅಕ್ಟೋಬರ್‌ 29ರ ಸಂಜೆ 5 ಗಂಟೆ ಸುಮಾರಿಗೆ ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದ ಪಳಂಗಪ್ಪ ಎಂಬುವವರ ಮನೆಗೆ ಭೇಟಿ ನೀಡಿದ ವಿಕ್ರಮ್ ಗೌಡ, ಆಪ್ತ ಮಹೇಶ್ ಜಾನ್ ಮನೆಯಿಂದ ದವಸ ಧಾನ್ಯ ತೆಗೆದುಕೊಂಡು ಹೋಗಿದ್ದ.

    * 2013ರ ಫೆಬ್ರವರಿ 13ರಂದು ಸಂಜೆ 4 ಗಂಟೆ ಸುಮಾರಿಗೆ ಭಾಗಮಂಡಲ ಬಳಿಕ ಚೇರಂಗಾಲ ಗ್ರಾಮದ ಪ್ರಭಾಕರನ್ ಎಸ್ಟೇಟ್ ಹೌಸ್‌ಗೆ ವಿಕ್ರಮ್‌ ಗೌಡ ಭೇಟಿ ನೀಡಿದ್ದ. ಸಹಚರರಾದ ಸುಂದರಿ, ಪ್ರವೀಣ್, ರೂಪೇಶ್ ಜೊತೆಗಿದ್ದರು.

    * 2013ರ ಫೆಬ್ರವರಿ 14ರಂದು ಸಂಜೆ 6 ಗಂಟೆ ಸುಮಾರಿಗೆ ವಿರಾಜಪೇಟೆ ಗ್ರಾಮಾಂತರ ವ್ಯಾಪ್ತಿಯ ಕಾಡಿನಲ್ಲಿ ರೂಪೇಶ್, ಕೃಷ್ಣ ಮೂರ್ತಿ, ರವೀಂದ್ರ ತಂಡ ಕಾಣಿಸಿಕೊಂಡಿತ್ತು.

    * 2013ರ ಮಾರ್ಚ್‌ 12ರಂದು ಸಂಜೆ 4:30ರ ಸುಮಾರಿಗೆ ಪೋನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಗ್ರಾಮದಲ್ಲಿ ರೂಪೇಶ್, ಕೃಷ್ಣ ಮೂರ್ತಿ, ರವೀಂದ್ರ ಕಾಣಿಸಿಕೊಂಡಿದ್ರು.

    * 2013ರ ಮಾರ್ಚ್‌ 14ರಂದು ಸಂಜೆ 6:30 ಸುಮಾರಿಗೆ ಶ್ರೀಮಂಗಲ ಕಾಡಿನಲ್ಲಿ ರೂಪೇಶ್, ಕೃಷ್ಣ ಮೂರ್ತಿ, ರವೀಂದ್ರ ಓಡಾಟ.

    * 2014ರ ಮಾರ್ಚ್‌ 3ರಂದು ರಾತ್ರಿ 11:30ರ ಸುಮಾರಿಗೆ ಕೇರಳ ಗಡಿಭಾಗವಾದ ಕುಟ್ಟ ಚೆಕ್‌ಪೋಸ್ಟ್‌ ಬಳಿ ನಕ್ಸಲರ ಓಡಾಟ.

    * 2018ರ ಫೆಬ್ರವರಿ 2ರಂದು ಸಂಜೆ 7:30ರ ಸುಮಾರಿಗೆ ಮಡಿಕೇರಿ ತಾಲೂಕಿನ ಕೋಯನಾಡು ಗ್ರಾಮದಲ್ಲಿ ವಿಕ್ರಮ್ ಗೌಡ ಸೇರಿದಂತೆ ಕೆಲ ಸಹಚರರು ಬಂದು ಹೋಗಿದ್ರು. ಇದೇ ವೇಳೆ ದವಸ, ಧಾನ್ಯ ಸಂಗ್ರಹಿಸಿದ್ದರು ಎನ್ನಲಾಗಿತ್ತು.

    * 2018ರ ಫೆಬ್ರವರಿ 19ರ ಸುಮಾರಿಗೆ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ನಾಲಾಡಿ ಗ್ರಾಮಕ್ಕೆ ವಿಕ್ರಮ್ ಗೌಡ ತಂಡ ಭೇಟಿ ನೀಡಿತ್ತು.

    * 2024ರ ಮಾರ್ಚ್‌ 16ರಂದು ಸಂಜೆ 6:30ರ ಸುಮಾರಿಗೆ ಕೊಡಗು ದಕ್ಷಿಣ ಕನ್ನಡ ಗಡಿಭಾಗವಾದ ಕುಜಿಮಲೆಗೆ ನಕ್ಸಲ್ ತಂಡ ಭೇಟಿ. ಇದನ್ನೂ ಓದಿ: ಶುಕ್ರವಾರದಿಂದ ಭಾರತ-ಆಸೀಸ್‌ ನಡುವೆ ಹೈವೋಲ್ಟೇಜ್‌ ಟೆಸ್ಟ್‌ ಸರಣಿ – ಕ್ಯಾಪ್ಟನ್‌ ಬುಮ್ರಾ ಏನ್‌ ಹೇಳಿದ್ರು?

  • ವಿಕ್ರಂ ಗೌಡನದ್ದು ಫೇಕ್ ಎನ್‌ಕೌಂಟರ್‌ – ಸಿಎಂ, ಗೃಹ ಸಚಿವರ ವಿರುದ್ಧ ಮಾಜಿ ನಕ್ಸಲ್ ಕಿಡಿ

    ವಿಕ್ರಂ ಗೌಡನದ್ದು ಫೇಕ್ ಎನ್‌ಕೌಂಟರ್‌ – ಸಿಎಂ, ಗೃಹ ಸಚಿವರ ವಿರುದ್ಧ ಮಾಜಿ ನಕ್ಸಲ್ ಕಿಡಿ

    – ಪೊಲೀಸರ ಕಥೆ ಗೊತ್ತಿರೋರು ಎನ್‌ಕೌಂಟರ್‌ ಅಂತ ಒಪ್ಪಲ್ಲ

    ಚಿಕ್ಕಮಗಳೂರು: ನಕ್ಸಲ್ ನಾಯಕ ವಿಕ್ರಂ ಗೌಡನ (Vikram Gowda) ಹತ್ಯೆ ತೀವ್ರ ಖಂಡನೀಯ, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಎನ್‌ಕೌಂಟರ್‌ ಸಮರ್ಥಿಸಿಕೊಂಡಿರುವುದು ದುರಾದೃಷ್ಟಕರ ಎಂದು ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ (Nilaguli Padmanab) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಚಿಕ್ಕಮಗಳೂರು (Chikkamagaluru) ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಕ್ರಂ ಗೌಡನ ಹತ್ಯೆ ಅತ್ಯಂತ ಖಂಡನೀಯ, ಯಾರೂ ಒಪ್ಪುವಂತದ್ದಲ್ಲ. ಸತ್ಯವನ್ನು ತಿಳಿದುಕೊಳ್ಳದೆ ಒಮ್ಮುಖ ವರದಿ ನೋಡಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಹತ್ಯೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಯಾರೂ ಒಪ್ಪುವುದಿಲ್ಲ. ಪೊಲೀಸರ ಎನ್‌ಕೌಂಟರ್‌ (Police Encounter) ಕಥೆ ಗೊತ್ತಿರೋರು ಯಾರೂ ಇದನ್ನ ಎನ್‌ಕೌಂಟರ್‌ ಅಂತ ಒಪ್ಪಿಕೊಳ್ಳುವುದಿಲ್ಲ. ಇದನ್ನ ಪ್ರಜಾತಂತ್ರವಾದಿಯೂ ಒಪ್ಪುವ ವಿಚಾರವೇ ಅಲ್ಲ. ಹತ್ಯೆ ಕಪೋಲ ಕಲ್ಪಿತವಾಗಿ ಸೃಷ್ಟಿ ಮಾಡಿರುವ ಎನ್‌ಕೌಂಟರ್‌. ಎಲ್ಲೋ ಹಿಡಿದು ಹಿಂಸೆ ನೀಡಿ ಸಾಯಿಸಿ ಕೊನೆಗೆ ಉಡುಪಿಯ ಪೀತಬೈಲಿಗೆ ತಂದು ಮೃತದೇಹ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

    ಹತ್ಯೆ ಮಾಡಿ ಎಂದು ಸಂವಿಧಾನ ಹೇಳಿಲ್ಲ:
    ಹತ್ಯೆಯ ಬಗ್ಗೆ ಮಾಧ್ಯಮದವರಿಗೂ ತಿಳಿಯದಂತೆ ಯಾರಿಗೂ ಮುಖ ತೋರಿಸದೆ, ಎಲ್ಲಾ ವಿಚಾರವನ್ನು ವಂಚಿಸಿದ್ದಾರೆ. ಆರೋಪಿಯನ್ನು ಕೊಲೆ ಮಾಡಿ ಎಂದು ಸಂವಿಧಾನ (Constitution) ಕೂಡ ಹೇಳಿಲ್ಲ. ವಿಕ್ರಂ ಗೌಡನ ಎನ್‌ಕೌಂಟರ್‌ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: Naxal Encounter| 3 ರಾಜ್ಯಕ್ಕೆ ಬೇಕಾಗಿದ್ದ ಮೋಸ್ಟ್‌ ವಾಟೆಂಡ್‌ ನಕ್ಸಲ್‌ ನಾಯಕ ವಿಕ್ರಂ ಗೌಡ ಯಾರು?

    ಸರ್ಕಾರದಿಂದ ಏನೂ ಪ್ರಯೋಜನ ಇಲ್ಲ:
    ಇನ್ನೂ ಸರ್ಕಾರ ನಕ್ಸಲರಿಗೆ (Naxal) ಮುಖ್ಯವಾಹಿನಿಗೆ ಬನ್ನಿ ಅನ್ನುತ್ತೆ. ಬಂದರೆ ಸರ್ಕಾರದಿಂದ ಏನೂ ಪ್ರಯೋಜನ ಇಲ್ಲ. ಕನ್ಯಾಕುಮಾರಿ ಮುಖ್ಯ ವಾಹಿನಿಗೆ ಬಂದು 8 ವರ್ಷವಾಯ್ತು. ನಾನು ಅತೀ ಕಷ್ಟದಲ್ಲಿದ್ದೇನೆ. ಮನೆ ಕೊಡಲಿಲ್ಲ, ನನ್ನ ಗುಡಿಸಲಿಗೆ ಕರೆಂಟ್ ಕೊಡ್ಲಿಲ್ಲ. ಕೇಸ್‌ಗಳು ಹಾಗೆಯೇ ಇವೆ. ವಾರಕ್ಕೆ ಮೂರು-ನಾಲ್ಕು ದಿನ‌ ಕೋರ್ಟ್‌ಗೆ ಅಲೆಯುತ್ತಿದ್ದೇನೆ. ಕನ್ಯಾಕುಮಾರಿ ಏಳೂವರೆ ವರ್ಷಗಳಿಂದ ಜೈಲಿನಲ್ಲಿದ್ದಾರೆ. ಇದು ಮುಖ್ಯವಾಹಿನಿನಾ? ಜೈಲಿನಲ್ಲಿರೋದು ಮುಖ್ಯವಾಹಿನಿಯಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಕ್ರಂ ಗೌಡ ನಕ್ಸಲ್ ತಂಡ ಸೇರಿದ್ದು ಹೇಗೆ? ಮನೆ ಮನೆಗೆ ಹೇಗೆ ಬರುತ್ತಿದ್ದರು? – ಸ್ಥಳೀಯರು ಬಿಚ್ಚಿಟ್ಟ ಸತ್ಯ ಓದಿ

  • ಕೂಡಲೇ ಶರಣಾಗಿ ಇಲ್ದಿದ್ರೆ ಕಾರ್ಯಾಚರಣೆ ಮಾಡ್ತೇವೆ- ಕಾಡಲ್ಲಿ ಅವಿತಿರುವ ನಕ್ಸಲರಿಗೆ ಪ್ರಣಬ್ ಮೊಹಂತಿ ಎಚ್ಚರಿಕೆ

    ಕೂಡಲೇ ಶರಣಾಗಿ ಇಲ್ದಿದ್ರೆ ಕಾರ್ಯಾಚರಣೆ ಮಾಡ್ತೇವೆ- ಕಾಡಲ್ಲಿ ಅವಿತಿರುವ ನಕ್ಸಲರಿಗೆ ಪ್ರಣಬ್ ಮೊಹಂತಿ ಎಚ್ಚರಿಕೆ

    ಉಡುಪಿ: ಶರಣಾಗತಿಯೊಂದೇ ನಿಮಗಿರುವ ಒಂದೇ ಒಂದು ದಾರಿ ಎಂಬ ಸಂದೇಶವನ್ನು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ (DGP Pranab Mohanty)  ಅವರು ಕಾಡಿನಲ್ಲಿ ಅವಿತಿರುವ ನಕ್ಸಲರಿಗೆ ರವಾನಿಸಿದ್ದಾರೆ.

    ಎನ್‌ಕೌಂಟರ್ ಸ್ಥಳಕ್ಕೆ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಭೇಟಿ ನೀಡಿ, ಘಟನೆ ಬಗ್ಗೆ ಪೂರ್ಣ ಮಾಹಿತಿ ಪಡೆದರು. ಶರಣಾಗತಿಯೊಂದೇ ನಿಮಗಿರುವ ಒಂದೇ ಒಂದು ದಾರಿ. ಶರಣಾಗದಿದ್ದರೆ ಕಾರ್ಯಾಚರಣೆ ಹೊರತು ನಮಗೆ ಬೇರೆ ದಾರಿಯಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: Uttar Pradesh| ಟ್ರಕ್‌ಗೆ ಹಿಂಬದಿಯಿಂದ ಡಬಲ್ ಡೆಕ್ಕರ್ ಬಸ್ ಡಿಕ್ಕಿ – ಐವರು ಸಾವು, 15 ಮಂದಿಗೆ ಗಾಯ

    ಡಿಜಿಪಿ ಭೇಟಿ ಬೆನ್ನಲ್ಲೇ ಕೂಂಬಿಂಗ್ ಚುರುಕುಗೊಂಡಿದೆ. ಪೀತಬೈಲ್, ಕಬ್ಬಿನಾಲೆ ಬಚ್ಚಪ್ಪು ಪರಿಸರದಲ್ಲಿ ಓಡಾಟ ನಡೆಸಿ ಎಎನ್‌ಎಫ್ ಕ್ಯಾಂಪ್‌ಗೆ ಭೇಟಿಕೊಟ್ಟು ಕೆಲ ಸೂಚನೆ ನೀಡಿರುವ ನೀಡಿದ್ದಾರೆ.

    ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡ (Vikram Gowda) ಎನ್‌ಕೌಂಟರ್ ಪ್ರಕರಣಣಕ್ಕೆ ಸಂಬಂಧಿಸಿದಂತೆ ಕಬ್ಬಿನಾಲೆ ಅರಣ್ಯ ಪ್ರದೇಶ ವ್ಯಾಪ್ತಿಯ ಪೀತಬೈಲು ಘಟನಾ ಸ್ಥಳದಲ್ಲಿ ದಾಖಲೆ ಸಂಗ್ರಹ ಮಾಡುವ ಸಲುವಾಗಿ ಎಎನ್‌ಎಫ್ ಬೆಂಗಳೂರಿನಿಂದ ತಜ್ಞ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್) ಅಧಿಕಾರಿಗಳನ್ನು ಕರೆಸಿಕೊಂಡಿದೆ. ಇದನ್ನೂ ಓದಿ: ಕರ್ನಾಟಕ ಉಪಚುನಾವಣೆ | ಮೈತ್ರಿ ಕೂಟಕ್ಕೆ ಮುನ್ನಡೆ, ಕಾಂಗ್ರೆಸ್‌ಗೆ ಬಿಗ್ ಶಾಕ್!

    ಪೀತಬೈಲು ಘಟನಾ ಸ್ಥಳದಲ್ಲಿರುವ ಎಲ್ಲಾ ಮಹತ್ವದ ದಾಖಲೆಗಳನ್ನು ಎಫ್‌ಎಸ್‌ಎಲ್ ತಂಡ ಪರಿಶೀಲಿಸುತ್ತಿದೆ. ಎನ್‌ಕೌಂಟರ್ ಪ್ರಕರಣದಲ್ಲಿ ಖಚಿತ ದಾಖಲೆ ಸಂಗ್ರಹ ಮತ್ತು ಸಾಕ್ಷ್ಯಾಧಾರ ಹೋಲಿಕೆಗಾಗಿ ಎರಡು ಬಾರಿ ಎಫ್‌ಎಸ್‌ಎಲ್ (FSL) ತಂಡದಿಂದ ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: PUBLiC TV Impact| ಸರ್ಕಾರಕ್ಕೆ ರೇಷನ್ ಕಾರ್ಡ್ ಪರಿಷ್ಕರಣೆ ವರದಿ ಸಲ್ಲಿಕೆ: ರದ್ದಿಗೆ ಮಾನದಂಡ ಏನು?

  • ವಿಕ್ರಂಗೌಡ ಹತ್ಯೆ | ನಕ್ಸಲ್ ಚಟುವಟಿಕೆ ನಿಗ್ರಹಿಸಲು ಎನ್‌ಕೌಂಟರ್: ಸಿದ್ದರಾಮಯ್ಯ

    ವಿಕ್ರಂಗೌಡ ಹತ್ಯೆ | ನಕ್ಸಲ್ ಚಟುವಟಿಕೆ ನಿಗ್ರಹಿಸಲು ಎನ್‌ಕೌಂಟರ್: ಸಿದ್ದರಾಮಯ್ಯ

    ಬೆಂಗಳೂರು: ವಿಕ್ರಂಗೌಡ (Vikram Gowda) ಹಲವು ನಕ್ಸಲ್ (Naxal)  ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ನಕ್ಸಲ್ ಚಟುವಟಿಕೆಯನ್ನು ನಿಗ್ರಹಿಸಲು ಆತನನ್ನು ಎನ್‌ಕೌಂಟರ್ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

    ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ನಕ್ಸಲ್ ವಿಕ್ರಂಗೌಡ ಎನ್‌ಕೌಂಟರ್‌ನಲ್ಲಿ ಹತನಾಗಿರುವ ಬಗ್ಗೆ ಪ್ರಗತಿಪರ ಚಿಂತಕರು ಅನುಮಾನಗಳನ್ನು ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಕ್ರಂಗೌಡಗೆ ಶರಣಾಗುವಂತೆ ಆದೇಶ ನೀಡಲಾಗಿತ್ತು. ಆದರೆ ಶರಣಾಗಿರಲಿಲ್ಲ ಹೀಗಾಗಿ ಎನ್‌ಕೌಂಟರ್ ಮಾಡಲಾಗಿದೆ ಎಂದು ಸಮರ್ಥನೆ ನೀಡಿದ್ದಾರೆ.

    ವಿಕ್ರಂಗೌಡನನ್ನು ಹಿಡಿದವರಿಗೆ ಕೇರಳ ಸರ್ಕಾರ 25 ಲಕ್ಷ ರೂ. ಹಾಗೂ ಕರ್ನಾಟಕ ಸರ್ಕಾರ 5 ಲಕ್ಷ ಬಹುಮಾನವನ್ನು ಘೋಷಿಸಿತ್ತು ಎಂದು ಇದೇ ವೇಳೆ ತಿಳಿಸಿದ್ದಾರೆ.

    ಉಡುಪಿಯ ಹೆಬ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ (Kabbinale Forest) ನಕ್ಸಲ್‌ ನಿಗ್ರಹ ದಳ (ANF) ಮತ್ತು ನಕ್ಸಲರ ಮಧ್ಯೆ ಸೋಮವಾರ ಸಂಜೆ ಗುಂಡಿನ ಕಾಳಗ ನಡೆದಿತ್ತು. ಈ ವೇಳೆ ನಕ್ಸಲ್‌ ವಿಕ್ರಂಗೌಡನನ್ನು (Vikram Gowda) ಎನ್‌ಕೌಂಟರ್‌ (Encounter) ಮಾಡಿ ಹತ್ಯೆ ಮಾಡಲಾಗಿತ್ತು.

  • ದಿನಸಿಗೆಂದು ಬಂದಿದ್ದ ವಿಕ್ರಂಗೌಡ ಉಡೀಸ್ – ಎನ್‌ಕೌಂಟರ್‌ಗೂ ಮುನ್ನ ಪೊಲೀಸರಿಂದ ಮನೆಯವರ ಶಿಫ್ಟ್

    ದಿನಸಿಗೆಂದು ಬಂದಿದ್ದ ವಿಕ್ರಂಗೌಡ ಉಡೀಸ್ – ಎನ್‌ಕೌಂಟರ್‌ಗೂ ಮುನ್ನ ಪೊಲೀಸರಿಂದ ಮನೆಯವರ ಶಿಫ್ಟ್

    – ಮರಣೋತ್ತರ ಪರೀಕ್ಷೆ ಬಳಿಕ ಇಂದು ಮೃತದೇಹ ಹಸ್ತಾಂತರ

    ಉಡುಪಿ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಡೆದ ರಣರೋಚಕ ಕಾರ್ಯಚರಣೆಯಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂಗೌಡ (Vikram Gowda) ಹತನಾಗಿದ್ದಾನೆ. ಈ ರೋಚಕ ಕಾರ್ಯಾಚರಣೆಗೆ ಪೊಲೀಸರು ಸುಮಾರು ಒಂದು ತಿಂಗಳ ಹೋಂವರ್ಕ್ ಮಾಡಿದ್ದರು. ಕಂಪ್ಲೀಟ್ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ನಿಗ್ರಹದಳ, ಆತ ಬರುವ ಮೊದಲೇ ಮನೆಯನ್ನು ಹೊಕ್ಕಿ ಕುಳಿತಿತ್ತು.

    ಸೋಮವಾರ ರಾತ್ರಿ ಉಡುಪಿ (Udupi) ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆ (Kabbinale) ಪೇಟೆಯಿಂದ ಸುಮಾರು 10 ಕಿ.ಮೀ ದೂರದ ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳ ಗಡಿಯಾಗಿರುವ ಪೀತಬೈಲು ದಟ್ಟ ಕಾಡಂಚಿನಲ್ಲಿ ಈ ಕಾರ್ಯಾಚರಣೆ ನಡೆದಿದೆ. ನಕ್ಸಲ್ ಹಾಗೂ ಪೊಲೀಸರ ನಡುವಿನ ಗುಂಡಿನ ಚಕಮಕಿಯಲ್ಲಿ 61 ಪ್ರಕರಣಗಳಲ್ಲಿ ಬೇಕಾಗಿದ್ದ ನಕ್ಸಲ್ ನಾಯಕ ವಿಕ್ರಂಗೌಡನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಈತನ ತಲೆಗೆ ಕರ್ನಾಟಕ ಸರ್ಕಾರ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಇದನ್ನೂ ಓದಿ: ನಕ್ಸಲ್ ನಾಯಕ ವಿಕ್ರಂ ಗೌಡ ಮೃತದೇಹ ಮಣಿಪಾಲಕ್ಕೆ – ಕೆಎಂಸಿಯ ಫೊರೆನ್ಸಿಕ್ ಮೆಡಿಸಿನ್‌ನಲ್ಲಿ ಮರಣೋತ್ತರ ಪರೀಕ್ಷೆ

    ಹೆಬ್ರಿ ತಾಲೂಕು ಬಚ್ಚಪ್ಪು ಪೀತಬೈಲ್‌ನಲ್ಲಿ ನಾರಾಯಣ, ಜಯಂತ, ಸುಧಾಕರ ಎಂಬವರ ಮನೆಯಿದೆ. ನವೆಂಬರ್ 11ರಂದು ಬಂದು ರೇಷನ್ ತೆಗೆದಿರಿಸುವಂತೆ ನಕ್ಸಲ್ ಟೀಂ ತಾಕೀತು ಮಾಡಿತ್ತು. ರೇಷನ್ ಪಡೆಯಲು ಸೋಮವಾರ ಬರುವುದಾಗಿ ನಕ್ಸಲ್ ಟೀಂ ತಿಳಿಸಿತ್ತು. ವಾರದ ಹಿಂದೆಯೂ ಪೀತಬೈಲು ಮಲೆಕುಡಿಯರಿಂದ ಅಕ್ಕಿ, ಬೇಳೆ ಸಂಗ್ರಹಿಸಿತ್ತು ಎಂಬ ಮಾಹಿತಿ ದೊರೆತಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಎಎನ್‌ಎಫ್ ಯೋಧರು ಆ ಮನೆಯವರನ್ನು ತೆರವುಗೊಳಿಸಿ ಆ ಪ್ರದೇಶದಲ್ಲಿ ಕಾದು ಕುಳಿತಿದ್ದರು. ವಿಕ್ರಂಗೌಡ ಮತ್ತು ತಂಡ ಮನೆಯ ಅಂಗಳಕ್ಕೆ ಬರುತ್ತಿದ್ದಂತೆ ಪೊಲೀಸರು ಶರಣಾಗುವಂತೆ ಕೇಳಿದ್ದಾರೆ. ಪೊಲೀಸರನ್ನು ಕಂಡು ವಿಕ್ರಂ ಬಂದೂಕು ತೆಗೆದಿದ್ದಾನೆ. ಈ ವೇಳೆ ವಿಕ್ರಂ ತಂಡ ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ವಿಕ್ರಂಗೌಡನ ಎದೆಗೆ 3 ಗುಂಡುಗಳು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ತಂಡದ ಸದಸ್ಯರು ಕತ್ತಲಲ್ಲಿ ಕಾಡಿನೊಳಗೆ ಪರಾರಿಯಾಗಿದ್ದಾರೆ. ಮಂಗಳವಾರ ಇಡೀ ರಾತ್ರಿ ಕೂಂಬಿಂಗ್ ನಡೆಸಿದರೂ ತಪ್ಪಿಸಿಕೊಂಡ ನಕ್ಸಲರ ಸುಳಿವು ಪತ್ತೆಯಾಗಿಲ್ಲ. ಇದನ್ನೂ ಓದಿ: ಮೋದಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡ್ಲಿ, ನಾನೇ ನಿಂತು ಜಾಗ ಕೊಡಿಸ್ತೀನಿ: ಡಿಕೆಶಿ

    ಸುಮಾರು 20 ಗಂಟೆಗಳ ಪೊಲೀಸರ ಮಹಜರು ಪ್ರಕ್ರಿಯೆ ಮತ್ತಿತರ ದಾಖಲೆಗಳ ಸಂಗ್ರಹದ ಬಳಿಕ ವಿಕ್ರಂಗೌಡ ಮೃತ ದೇಹವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಯಿತು. ನ್ಯಾಯಾಧೀಶರ ಸಮ್ಮುಖದಲ್ಲಿ ಮಹಜರು ನಡೆಸಿ, ಕುಟುಂಬಕ್ಕೆ ಇಂದು ಮೃತದೇಹ ಹಸ್ತಾಂತರ ಆಗಲಿದೆ. ಘಟನಾ ಸ್ಥಳಕ್ಕೆ ಬೆಂಗಳೂರಿನಿಂದ ಎಫ್‌ಎಸ್‌ಎಲ್ ತಂಡ ಬಂದು ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡಲಿದೆ. ಮರಣೋತ್ತರ ಪರೀಕ್ಷೆ ನಡೆದ ನಂತರ ಪ್ರಕರಣದ ಖಚಿತ ಮಾಹಿತಿಗಳು ಲಭ್ಯವಾಗಲಿದೆ. ಇದನ್ನೂ ಓದಿ: MUDA Scam| ನೋಟಿಸ್‌ ಇಲ್ಲದೇ ರಾತ್ರಿ ದಿಢೀರ್‌ ಲೋಕಾ ಎಸ್‌ಪಿ ಕಚೇರಿಗೆ ಭೇಟಿ ಕೊಟ್ಟ ಸಿಎಂ ಬಾಮೈದ!

  • ಉಡುಪಿಯ ಕಬ್ಬಿನಾಲೆಯಲ್ಲಿ ಎನ್‌ಕೌಂಟರ್‌ – ನಕ್ಸಲ್‌ ನಾಯಕ ವಿಕ್ರಂ ಗೌಡ ಹತ್ಯೆ

    ಉಡುಪಿಯ ಕಬ್ಬಿನಾಲೆಯಲ್ಲಿ ಎನ್‌ಕೌಂಟರ್‌ – ನಕ್ಸಲ್‌ ನಾಯಕ ವಿಕ್ರಂ ಗೌಡ ಹತ್ಯೆ

    ಉಡುಪಿ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದ್ದು, ಹೆಬ್ರಿ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ (Kabbinale Forest) ನಕ್ಸಲ್‌ ಕಾರ್ಯಕರ್ತ ವಿಕ್ರಂ ಗೌಡನನ್ನು (Vikram Gowda) ಎನ್‌ಕೌಂಟರ್‌ (Encounter) ಮಾಡಿ ಹತ್ಯೆ ಮಾಡಲಾಗಿದೆ.

    ನಕ್ಸಲ್‌ ನಿಗ್ರಹ ದಳ (ANF) ಮತ್ತು ನಕ್ಸಲರ (Naxal) ಮಧ್ಯೆ  ಸೋಮವಾರ ಸಂಜೆ ಗುಂಡಿನ ಕಾಳಗ ನಡೆದಿದೆ. ಈ ಘಟನೆಯಲ್ಲಿ ಓರ್ವ ಹತನಾಗಿದ್ದಾನೆ ಎಂಬ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

    ಕಳೆದ 15 ದಿನಗಳಿಂದ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡದ ಅರಣ್ಯ ಭಾಗದಲ್ಲಿ ಎಎನ್‌ಎಫ್‌ ಕೂಂಬಿಂಗ್ ನಡೆಸುತ್ತಿದೆ. ಸೋಮವಾರ ರಾತ್ರಿ ಐದು ಮಂದಿ ಇದ್ದ ನಕ್ಸಲರ ತಂಡ ಗ್ರಾಮಕ್ಕೆ ದಿನಸಿ ಸಾಮಗ್ರಿ ಖರೀದಿಗೆಂದು ಬಂದಿದ್ದಾಗ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿದೆ. ಅಷ್ಟರಲ್ಲಿ ನಕ್ಸಲರು ಎಎನ್‌ಎಫ್‌ ಮೇಲೆ ದಾಳಿ ನಡೆಸಿದ್ದಾರೆ. ದಾಳಿ-ಪ್ರತಿದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಉಳಿದವರು ಪರಾರಿಯಾಗಿದ್ದು ಶೋಧ ಕಾರ್ಯ ನಡೆಯುತ್ತಿದೆ.

    ಕೆಲ ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲ ಮನೆಗಳಿಗೆ ನಕ್ಸಲರು ಭೇಟಿ ನೀಡಿದ್ದರು. ಕೊಪ್ಪ ತಾಲೂಕಿನ ಯಡಗುಂದ ಗ್ರಾಮಕ್ಕೆ ನಕ್ಸಲರು ಭೇಟಿ ನೀಡಿ, ಅರಣ್ಯ ಒತ್ತುವರಿ ಮತ್ತು ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಚರ್ಚಿಸಿದ್ದರು.

    ಲೋಕಸಭಾ ಚುನಾವಣೆ (Lok Sabha Election) ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ (Kadaba) ಮನೆಗೆ ನಕ್ಸಲರು ಬಂದಿದ್ದ ಶಂಕೆ ವ್ಯಕ್ತವಾಗಿತ್ತು. ಕೊಂಬಾರು ಗ್ರಾಮದ ಚೆರು ಗ್ರಾಮದ ಮನೆಗೆ ತಡರಾತ್ರಿ ಬಂದ 6 ಮಂದಿ ಎರಡು ಗಂಟೆಗಳ ಕಾಲ ಇದ್ದು ಮನೆಯಲ್ಲಿ ಊಟ ಮಾಡಿ ದಿನಸಿ ಸಾಮಾಗ್ರಿಗಳನ್ನು ಪಡೆದ ಮಾಹಿತಿ ಲಭ್ಯವಾಗಿತ್ತು. ಈ ವಿಚಾರ ತಿಳಿದ ಬೆನ್ನಲ್ಲೇ ನಕ್ಸಲ್‌ ನಿಗ್ರಹ ದಳಮನೆಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿತ್ತು.

  • ನಕ್ಸಲ್ ಪೀಡಿತ ಪ್ರದೇಶದಲ್ಲಿ ಎಎನ್‍ಎಫ್ ಅಧಿಕಾರಿಗಳಿಂದ ಹೆಲ್ತ್ ಕ್ಯಾಂಪ್

    ನಕ್ಸಲ್ ಪೀಡಿತ ಪ್ರದೇಶದಲ್ಲಿ ಎಎನ್‍ಎಫ್ ಅಧಿಕಾರಿಗಳಿಂದ ಹೆಲ್ತ್ ಕ್ಯಾಂಪ್

    ಉಡುಪಿ: ನಕ್ಸಲ್ ಪೀಡಿತ ಪ್ರದೇಶದಲ್ಲಿ ಬಂದೂಕು ಹಿಡಿದು ಸದಾ ಗಸ್ತು ತಿರುಗೋದು ಎಎನ್‍ಎಫ್ ಕರ್ತವ್ಯ. ಆ್ಯಂಟಿ ನಕ್ಸಲ್ ಫೋರ್ಸ್ ಸಿಬ್ಬಂದಿ ಕರ್ತವ್ಯಕ್ಕೆ ಹೊರತಾಗಿ ಸಾರ್ವಜನಿಕರು ಮೆಚ್ಚುವ ಕಾರ್ಯ ಮಾಡಿದ್ದಾರೆ.

    ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ನಕ್ಸಲ್ ಪೀಡಿತ ಪ್ರದೇಶದ ಜನರ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದಾರೆ. ನಕ್ಸಲ್ ಪೀಡಿತ ಪ್ರದೇಶ ಕಬ್ಬಿನಾಲೆಯಲ್ಲಿ ಹೆಲ್ತ್ ಕ್ಯಾಂಪ್ ಮಾಡಿ, ಹೆಬ್ರಿ ತಾಲೂಕಿಗೆ ಒಳಪಡುವ ನಕ್ಸಲ್ ಪೀಡಿತ ಎಲ್ಲಾ ಗ್ರಾಮಗಳ ಜನರನ್ನು ಕರೆಸಿ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ.

    ತೀರಾ ಗ್ರಾಮೀಣ ಪ್ರದೇಶದ ಜನರನ್ನು ಎಎನ್‍ಎಫ್ ಅಧಿಕಾರಿಗಳು ತಮ್ಮದೇ ಜೀಪಿನಲ್ಲಿ ಕರೆದುಕೊಂಡು ಬಂದು ತಪಾಸಣೆಗೆ ಒಳಪಡಿಸಿದ್ದಾರೆ. ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆಗಳಿಗೆ ಅಲ್ಲೇ ಔಷಧಿ ಕೊಡಿಸಿದ್ದಾರೆ. ಮುಂಗಾರು ಮಳೆ ಆರಂಭದಲ್ಲಿ ಜ್ವರ, ಚರ್ಮರೋಗ ಗ್ರಾಮಸ್ಥರಿಗೆ ಆವರಿಸುವುದರಿಂದ ಈ ಹೆಲ್ತ್ ಕ್ಯಾಂಪ್ ಬಹಳ ಮಹತ್ವ ಪಡೆದಿದೆ. ಜನಕ್ಕೂ ಈ ಹೆಲ್ತ್ ಕ್ಯಾಂಪ್ ಬಹಳ ಉಪಯೋಗವಾಗಿದೆ.

  • ಚೆಕ್ ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬ್ – ಚಿಕ್ಕಮಗ್ಳೂರು, ಉಡುಪಿಯಲ್ಲಿ ಹೈ ಅಲರ್ಟ್

    ಚೆಕ್ ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬ್ – ಚಿಕ್ಕಮಗ್ಳೂರು, ಉಡುಪಿಯಲ್ಲಿ ಹೈ ಅಲರ್ಟ್

    ಚಿಕ್ಕಮಗಳೂರು: ಕುದುರೆಮುಖದ ಬಸರೀಕಲ್ ಚೆಕ್ ಪೋಸ್ಟ್ ಪೆಟ್ರೋಲ್ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ತೀವ್ರಗೊಂಡಿದ್ದು, ಚಿಕ್ಕಮಗಳೂರು – ಉಡುಪಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

    ದಾಳಿ ಹಿಂದೆ ನಕ್ಸಲ್ ಬೆಂಬಲಿಗರ ಕೃತ್ಯದ ಶಂಕೆ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳ (ಎಎನ್‍ಎಫ್) ದಿಂದ ಈ ಕೂಂಬಿಂಗ್ ಕಾರ್ಯ ಚುರುಕುಗೊಂಡಿದೆ. ಕೇರಳದ ನಕ್ಸಲರು ಮಲೆನಾಡಲ್ಲಿ ಸಕ್ರಿಯವಾಗಿರುವ ಶಂಕೆ ವ್ಯಕ್ತವಾಗಿದ್ದು, ಹೀಗಾಗಿ ಚಿಕ್ಕಮಗಳೂರು- ಉಡುಪಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದೆ.

    ಬಸರೀಕಲ್, ಸಂಸೆ ಮೆಣಸಿನಹಾಡ್ಯ, ಗುಳ್ಯ ಸೇರಿದಂತೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ, ಸಮಸ್ಯೆಗಳ ಬಗ್ಗೆ ಗ್ರಾಮಸ್ಥರೊಂದಿಗೆ ಎಎನ್‍ಎಫ್ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.

    ಭಾನುವಾರ ಏನಾಯ್ತು..?
    ಕಚೇರಿಯ ಮೇಲೆ ಭಾನುವಾರ ಬೆಳಗ್ಗಿನ ಜಾವ 3.30ಕ್ಕೆ ಅರಣ್ಯ ಇಲಾಖೆಯ ದಾಳಿ ಮಾಡಿದ್ದರಿಂದ ಕತ್ತಲಿನಲ್ಲಿ ದುಷ್ಕರ್ಮಿಗಳು ಕಾಣಲಿಲ್ಲ. ಸುಮಾರು 6 ಪೆಟ್ರೋಲ್ ಬಾಂಬ್ ಗಳನ್ನು ದುಷ್ಕರ್ಮಿಗಳು ಕಚೇರಿಯ ಮೇಲೆ ಎಸೆದಿದ್ದಾರೆ. ಪರಿಣಾಮ ಕೆಲ ಪೆಟ್ರೋಲ್ ಬಾಂಬ್‍ಗಳು ಕಚೇರಿಯ ಕಿಟಕಿಗೆ ತಗುಲಿದ್ದು, ಅಲ್ಲಿದ್ದ ರಿಜಿಸ್ಟರ್ ಪುಸ್ತಕಕ್ಕೆ ಬೆಂಕಿ ತಗುಲಿತ್ತು. ಅದೃಷ್ಟವಶಾತ್ ಈ ವೇಳೆ ಎಲ್ಲ ಸಿಬ್ಬಂದಿ ಕಚೇರಿಯ ಒಳಗೆ ಇದ್ದಿದ್ದರಿಂದ ಯಾವುದೇ ಸಾವು, ನೋವು ಸಂಭವಿಸಿರಲಿಲ್ಲ.

    ದುಷ್ಕರ್ಮಿಗಳು ಖಾಲಿ ಬಾಟಲಿಗೆ ಮರಳು ಹಾಗೂ ಸೀಮೆಎಣ್ಣೆ ತುಂಬಿ ಬೆಂಕಿ ಹಚ್ಚಿ ಎಸೆದಿದ್ದಾರೆ. ಬಾಟಲ್‍ಗಳು ಒಡೆದಿದ್ದು, ಒಟ್ಟು ಆರು ಪೆಟ್ರೋಲ್ ಬಾಂಬ್ ಎಸೆದಿರುವುದು ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ ಯೋಜಿತವಾಗಿ, ಚೆಕ್‍ಪೋಸ್ಟ್ ಕಚೇರಿಯ ಸಮೀಪದ ಮರದ ಕೆಳಗೆ ನಿಂತು ಕೃತ್ಯವನ್ನು ಎಸಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷ!

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷ!

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷವಾಗಿದ್ದು, ಶಂಕಿತರನ್ನು ಬಂಧಿಸಲು ನಕ್ಸಲ್ ನಿಗ್ರಹ ದಳ (ಎಎನ್‍ಎಫ್) ಕೂಂಬಿಂಗ್ ಕಾರ್ಯಾಚರಣೆ ನಡೆಸಿದೆ.

    ಜಿಲ್ಲೆಯ ಸುಳ್ಯ, ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಶಂಕಿತ ನಕ್ಸಲರು ಇರುವ ಮಾಹಿತಿ ಲಭ್ಯವಾಗಿದ್ದು, ಎಎನ್ಎಫ್ ಸುಪರಿಟೆಂಡೆಂಟ್ ಪೊಲೀಸ್ ಲಕ್ಷ್ಮಿ ಪ್ರಸಾದ್ ನೇತೃತ್ವದಲ್ಲಿ 32 ಜನ ಸಿಬ್ಬಂದಿ ತಂಡ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ.

    ಶುಕ್ರವಾರ ತಡರಾತ್ರಿ ಬಂದೂಕುಧಾರಿ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷನಿದ್ದ ಶಂಕಿತ ನಕ್ಸಲರ ಗುಂಪೊಂದು ಸುಳ್ಯ ತಾಲೂಕಿನ ಮಡಪ್ಪಾಡಿ ಕಾಣಿಸಿಕೊಂಡಿತ್ತು. ಶಂಕಿತ ನಕ್ಸಲರು ಸುಳ್ಯ ಎಪಿಎಂಸಿ ಮಾಜಿ ಅಧ್ಯಕ್ಷ ಹಾಡಿಕಲ್ ಜಯರಾಮ್ ಗೌಡಗೆ ಸೇರಿದ್ದ ಮಡಪ್ಪಾಡಿ ರಬ್ಬರ್ ಕಾರ್ಮಿಕರ ಶೆಡ್ ಗೆ ನುಗ್ಗಿ ಅಲ್ಲಿಯೇ ಊಟ ಮಾಡಿ ಹೋಗಿದ್ದಾರೆ ಎನ್ನಲಾಗಿದೆ.