ಬೆಂಗಳೂರು ಗ್ರಾಮಾಂತರ: ಅತ್ತಿಬೆಲೆ ಸಮೀಪದ ಯಡವನಹಳ್ಳಿ ಬಳಿ ಇರುವ ವುಡ್ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದ್ದು, ಕೋಟ್ಯಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಶ್ರೀರಾಮ್ ವುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನಗಳ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದವು.
ಎಕರೆಗಟ್ಟಲೆ ಪ್ರದೇಶದಲ್ಲಿ ಕಾರ್ಖಾನೆ ಇದೆ. ಹೆದ್ದಾರಿಗೆ ಹೊಂದಿಕೊಂಡಿರುವ ಹಿನ್ನೆಲೆ ಆತಂಕ ಮೂಡಿಸಿದೆ. ಭಾರೀ ಪ್ರಮಾಣದಲ್ಲಿ ಬೆಂಕಿಯ ಕೆನ್ನಾಲಿಗೆ ಆವರಿಸಿತ್ತು. ಮೂರು ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ ನಡೆಸಲಾಯಿತು.
ಆಶೀರ್ವಾದ್ ಕಂಪನಿಯವರು ಹತ್ತು ಕಡೆಗಳಲ್ಲಿ ಬೆಂಕಿ ಆರಿಸಲು ಸಹಕರಿಸಿದರು. ಸಿಬ್ಬಂದಿಯು ಹತ್ತು ಪೈಪ್ ಮೂಲಕ ಪಕ್ಕದ ಕಂಪನಿಯ ಬೆಂಕಿ ಆರಿಸುತ್ತಿದ್ದಾರೆ. ಸದ್ಯ ಒಳಗಡೆ ಯಾರೂ ಇಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ಅಧಿಕೃತ ಮಾಹಿತಿ ಸಿಕ್ಕ ಬಳಿಕವಷ್ಟೇ ಸ್ಪಷ್ಟವಾಗಲಿದೆ.
ಹರ್ಷದ್ ಪಟೇಲ್ ಎಂವವರಿಗೆ ಸೇರಿದ ಕಾರ್ಖಾನೆ ಇದ್ದಾಗಿದ್ದು, ಸುಮಾರು ಐದು ಕೋಟಿಗೂ ಹೆಚ್ಚು ಬೆಲೆ ಬಾಳುವ ವುಡ್ ಬೆಂಕಿಗೆ ಆಹುತಿಯಾಗಿದೆ. ಆರಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳಿಂದ ಬೆಂಕಿ ಬೆಂಕಿ ನಂದಿಸುವ ಕಾರ್ಯ ನಡೆಯಿತು.
ಆನೇಕಲ್: ಆಕ್ಟಿವಾ ಬೈಕ್‌ಗೆ ಕ್ಯಾಂಟರ್ (Cantor) ಡಿಕ್ಕಿ ಹೊಡೆದಿದ್ದು, ನಿವೃತ್ತ ಪೊಲೀಸ್ ಅಧಿಕಾರಿ ಸಾವನ್ನಪ್ಪಿರುವ ಭೀಕರ ಘಟನೆ ಬೆಂಗಳೂರು ಹೊರವಲಯದ ಅತ್ತಿಬೆಲೆಯ (Attibele) ಟಿವಿಎಸ್ ಕ್ರಾಸ್ ಬಳಿ ನಡೆದಿದೆ.
ಟಿವಿಎಸ್ ಕ್ರಾಸ್ ಬಳಿ ಆಕ್ಟಿವಾ ಬೈಕ್‌ನಲ್ಲಿ ಪ್ರಕಾಶ್ ತೆರಳುತ್ತಿದ್ದರು. ಈ ವೇಳೆ ಧರ್ಮಪುರಿಯಿಂದ ಮಂಗಳೂರಿಗೆ ಹೊರಟಿದ್ದ ಕ್ಯಾಂಟರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟರ್‌ಗೆ ಸಿಲುಕಿ ಪ್ರಕಾಶ್ ದೇಹ ಛಿದ್ರ ಛಿದ್ರಗೊಂಡಿದೆ. ಅಪಘಾತ ಸಂಭವಿಸಿದ ಬಳಿಕ ಕ್ಯಾಂಟರ್ ಚಾಲಕ ದಿನೇಶ್ ಪಾರಾಗಲು ಯತ್ನಿಸಿದ್ದು, ಪೊಲೀಸರು ಚಾಲಕ ಹಾಗೂ ಕ್ಯಾಂಟರ್‌ನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ವರ್ಷದ ಹಸುಗೂಸನ್ನು ನೀರಿನ ಸಿಂಟೆಕ್ಸ್ ಟ್ಯಾಂಕ್‌ಗೆ ಎಸೆದು ಕೊಲೆ ಮಾಡಿರುವ ಅಮಾನವೀಯ ಘಟನೆ ಬೆಂಗಳೂರು (Bengaluru) ಹೊರವಲಯ ಆನೇಕಲ್ (Anekal) ತಾಲ್ಲೂಕಿನ ಇಗ್ಗಲೂರುನಲ್ಲಿ ನಡೆದಿದೆ.
ಮನು ಮತ್ತು ಹರ್ಷಿತಾ ದಂಪತಿಗೆ ಆರೂವರೆ ತಿಂಗಳಿಗೆ ಸಿಜೇರಿಯನ್ ಮೂಲಕ ಮಗು ಜನಿಸಿತ್ತು. ಮಗುವಿಗೆ ಉಸಿರಾಟದ ತೊಂದರೆಯಿಂದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮಗು ಸಂಪೂರ್ಣ ಚೇತರಿಕೆ ಕಂಡ ಹಿನ್ನೆಲೆ ವಾರದ ಹಿಂದೆ ಮನೆಗೆ ಕರೆತರಲಾಗಿತ್ತು. ಆದರೆ ತಾಯಿ ಶೌಚಾಲಯಕ್ಕೆ ಹೋದಾಗ ಮಗು ಇದ್ದಕ್ಕಿದ್ದಂತೆ ಕಾಣೆಯಾಗಿದೆ. ಸೋಮವಾರ ಮಧ್ಯಾಹ್ನ 12:45ರ ಸುಮಾರಿಗೆ ಮಗು ನಾಪತ್ತೆಯಾಗಿದೆ. ಸುತ್ತಮುತ್ತ ಎಷ್ಟೇ ಹುಡುಕಾಡಿದರು ಮಗು ಪತ್ತೆಯಾಗಿರಲಿಲ್ಲ. ಇದನ್ನೂ ಓದಿ: ಹಾಸನದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕಾನ್ಸ್‌ಟೇಬಲ್ ಬರ್ಬರ ಹತ್ಯೆ
ಈ ಬಗ್ಗೆ ಸೂರ್ಯನಗರ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರ ಪರಿಶೀಲನೆ ವೇಳೆ ಮನೆಯ ಸಿಂಟೆಕ್ಸ್ ನೀರಿನ ಟ್ಯಾಂಕ್‌ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಮಗುವಿನ ಪೋಷಕರು ಅಂತರ್ಜಾತಿ ವಿವಾಹವಾಗಿದ್ದರು. ಅಂತರ್ಜಾತಿ ವಿವಾಹದ ವೈಷಮ್ಯಕ್ಕೆ ಮಗುವನ್ನು ಕೊಂದಿರುವ ಆರೋಪ ಮಾಡಲಾಗಿದೆ. ಈ ಬಗ್ಗೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿಗೆ ಪ್ರಧಾನಿ ಮೋದಿ ಖಂಡನೆ
ಆನೇಕಲ್: ಪಟ್ಟಣದಲ್ಲಿ ಮತ್ತೆ ಡಬಲ್ ಬ್ಯಾರಲ್ ಗನ್ ಸದ್ದು ಮಾಡಿದೆ. ಇಬ್ಬರ ಜಗಳ ಬಿಡಿಸಲು ಹೋದಾಗ ಮೂರನೆ ವ್ಯಕ್ತಿಗೆ ಗುಂಡೇಟು ತಗುಲಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ (Anekal) ತಾಲೂಕಿನ ಸಿಡಿ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.
ಸಂಪಂಗಿ ಗುಂಡೇಟು ತಿಂದ ವ್ಯಕ್ತಿಯಾಗಿದ್ದು, ಚಂದ್ರಶೇಖರ್ ಗನ್ ನಿಂದ ಗುಂಡು ಹಾರಿಸಿರುವ ಆರೋಪಿ. ಚಂದ್ರಶೇಖರ್ ಹಾಗೂ ಶ್ರೀನಿವಾಸ್ ಸಿಡಿ ಹೊಸಕೋಟೆ (Hosakote) ಗ್ರಾಮದ ಮುನಿರಾಜು ವೆಂಬು ಅವರ ಮಗನಾಗಿದ್ದು ತಂದೆ ಮಕ್ಕಳು ಇಬ್ಬರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಳ್ಳುತ್ತಿದ್ದರು. ಇದೇ ಸಮಯದಲ್ಲಿ ಹಲ್ಲೆ ಮಾಡುತ್ತಿದ್ದಾಗ ಬಿಡಿಸಲು ಮುನಿರಾಜು ಅವರ ಅಣ್ಣನಾದ ಸಂಪಂಗಿ ಹಾಗೂ ಪತ್ನಿ ಬಂದಿದ್ದಾರೆ.
ಬಂದು ಸಮಾಧಾನ ಮಾಡಲು ಬಂದಿದ್ದ ಚಂದ್ರಶೇಖರ್ ಸಂಪಂಗಿಯ ಮೇಲೆ ಫೈರಿಂಗ್ ಮಾಡಿದ್ದಾನೆ. ಸಂಪಂಗಿಯ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಆನೇಕಲ್‌ನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಲಾಗಿದೆ ಹೆಚ್ಚಿನ ಚಿಕಿತ್ಸೆಗಾಗಿ ಸಂಪಂಗಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದದ ಕಿಚ್ಚು – ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ
– ಅಳಿವಿನಂಚಲ್ಲಿರುವ ಬಿಳಿ ಹುಲಿ, ಕಾಡು ಬೆಕ್ಕು, ಮೊಸಳೆ ಆಮದು
ಆನೇಕಲ್: ಪ್ರಾಣಿ ವಿನಿಯಯ ಯೋಜನೆಯಡಿ (Animal Exchange) ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ (Bannerghatta Biological Park) ನೂತನ ಅಥಿತಿಗಳ ಆಗಮನವಾಗಿದೆ.
ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆಯಂತೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನ, ಸಂಜಯ್ ಗಾಂಧಿ ಜೈವಿಕ ಉದ್ಯಾನವನ, ಪಾಟ್ನಾ ಹಾಗೂ ಬಿಹಾರದ ನಡುವೆ ಪ್ರಾಣಿ ವಿನಿಮಯ ಯಶಸ್ವಿಯಾಗಿದೆ. ವಿನಿಮಯದ ಭಾಗವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಒಂದು ಗಂಡು ಜೀಬ್ರಾ ಮತ್ತು ಎರಡು ಗಂಡು ಥಮಿನ್ ಜಿಂಕೆಗಳನ್ನು ಪಾಟ್ನಾ ಮೃಗಾಲಯಕ್ಕೆ ಕಳುಹಿಸಲಾಗಿದೆ. ಇದರ ಪ್ರತಿಯಾಗಿ ಅಳಿವಿನಂಚಿನಲ್ಲಿರುವ ಘಾರಿಯಲ್ ಮೊಸಳೆ, ಬಿಳಿ ಹುಲಿ ಮತ್ತು ಕಾಡು ಬೆಕ್ಕನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ತರಲಾಗಿದ್ದು, ನೂತನ ಪ್ರಾಣಿಗಳ ಆಗಮನದಿಂದ ಉದ್ಯಾನವನದಲ್ಲಿ ಸಂತಸ ಮನೆ ಮಾಡಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ತಂದೆಯಿಂದಲೇ ಮಗನ ಭೀಕರ ಕೊಲೆ
ಬೆಂಗಳೂರಿನ ಹವಾಮಾನಕ್ಕೆ ಹೊಂದಿಕೊಳ್ಳಲು ಈ ಹೊಸ ಪ್ರಾಣಿಗಳನ್ನು ಕೆಲವು ದಿನಗಳವರೆಗೆ ಕ್ವಾರಂಟೈನ್ ಪ್ರದೇಶದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಮತ್ತು ನಿರಂತರ ವೀಕ್ಷಣೆಯಲ್ಲಿರಲು ಪ್ರತ್ಯೇಕ ಸಿಬ್ಬಂದಿಗಳನ್ನು ಕೂಡ ನೇಮಕ ಮಾಡಲಾಗಿದೆ. ಈ ಪ್ರಾಣಿ ವಿನಿಮಯವು ಮೃಗಾಲಯಗಳಲ್ಲಿನ ಪ್ರಾಣಿಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಹೆಚ್ಚಿಸಲು ಸಹಕಾರಿಯಾಗಿದ್ದು, ಪ್ರಾಣಿ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೂ ಪ್ರಾಣಿಗಳನ್ನು ಹತ್ತಿರದಿಂದ ವೀಕ್ಷಿಸಿ, ಹೊಸ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ಸಿಗಲಿದೆ. ಇದನ್ನೂ ಓದಿ: ಬೆಂಗಳೂರು| ಬೈಕ್‌ನಲ್ಲಿ ಬಂದು ಪೆಪ್ಪರ್ ಸ್ಪ್ರೇ ಹಾಕಿ ಯುವಕರ ಮೇಲೆ ಹಲ್ಲೆ
ಪ್ರಾಣಿ ವಿನಿಮಯ ಕಾರ್ಯಕ್ರಮಗಳು ಹೆಚ್ಚಾಗಿ ಆದಾಗ ಸಂರಕ್ಷಣೆ, ಶಿಕ್ಷಣ ಮತ್ತು ವಿಭಿನ್ನ ಪ್ರಾಣಿಗಳ ಜೀವನ ಶೈಲಿ ಸೇರಿದಂತೆ ಜನರಲ್ಲಿ ದೇಶದಾದ್ಯಂತ ಇರುವ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಲು ಭಾರತೀಯ ಪ್ರಾಣಿ ಸಂಗ್ರಹಾಲಯ ಈ ಮಹತ್ತರದ ಪ್ರಾಣಿ ವಿನಿಮಯ ಯೋಜನೆಯನ್ನು ಮಾಡಿದೆ. ಇದನ್ನೂ ಓದಿ: ಮಳೆ ಬೆನ್ನಲ್ಲೇ ತರಕಾರಿ ಬೆಲೆ ಏರಿಕೆ – ಗ್ರಾಹಕರು ಹೈರಾಣು, ಯಾವ ತರಕಾರಿಗೆ ಎಷ್ಟು ಬೆಲೆ?
ಆನೇಕಲ್: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ಮಹತ್ತರ ಬದಲಾವಣೆ ತರಲಾಗಿದ್ದು, ಗೃಹ ಇಲಾಖೆ ಸೂಚನೆಯೊಂದಿಗೆ ಜೈಲನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಆರೋಪಿ ದರ್ಶನ್‌ಗೆ ರಾಜಾತಿಥ್ಯ ನೀಡಿದ್ದ ವಿಚಾರವಾಗಿ ತನಿಖೆ ನಡೆದಿದ್ದು, ಇದೀಗ ಪರಪ್ಪನ ಅಗ್ರಹಾರ ಜೈಲನ್ನು ಮೂರು ವಿಭಾಗಗಳಾಗಿ ಮಾಡಲು ಮುಂದಾಗಿದ್ದಾರೆ.ಇದನ್ನೂ ಓದಿ: ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಟೀಂ ಇಂಡಿಯಾ ವೇಗಿ ಸಿರಾಜ್
ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿ ದರ್ಶನ್‌ಗೆ ರಾಜಾತಿಥ್ಯ ನೀಡಿದ್ದ ವಿಚಾರವಾಗಿ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಜೊತೆಗೆ ಆರೋಪಿಗಳನ್ನು ಕೂಡ ಬೇರೆ ಬೇರೆ ಕಡೆಗೆ ಸ್ಥಳಾಂತರಿಸಲಾಗಿತ್ತು. ಬಳಿಕ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹಾಗೂ ಆತನ ಗ್ಯಾಂಗ್‌ನ್ನು ಕೂಡ ಎತ್ತಂಗಡಿ ಮಾಡಿಸಲಾಗಿತ್ತು. ಈಗ ಸದ್ಯ ಜೈಲಿನಲ್ಲಿ 5150ಕ್ಕೂ ಹೆಚ್ಚು ಜನ ಕೈದಿಗಳು ಇದ್ದಾರೆ.
ಸದ್ಯ ಪರಪ್ಪನ ಅಗ್ರಹಾರ ಜೈಲನ್ನು ಮೂರು ವಿಭಾಗಗಳಾಗಿ ಮಾಡಲು ಮುಂದಾಗಿದ್ದು, ಜೈಲಿನ ಕ್ವಾರಂಟೈನ್ ವಿಭಾಗಕ್ಕೆ ಮಹಿಳಾ ಕೈದಿಗಳನ್ನು ಶಿಫ್ಟ್ ಮಾಡಲು ಮುಂದಾಗಿದ್ದು, 200ಕ್ಕೂ ಹೆಚ್ಚು ಜನ ಮಹಿಳಾ ಕೈದಿಗಳು ಶಿಫ್ಟ್ ಅಗಲಿದ್ದಾರೆ. ಮುಖ್ಯ ಜೈಲಿನ ಪಕ್ಕದಲ್ಲಿರುವ ಹೊಸದಾದ ಜೈಲಿಗೆ ಸಜಾಬಂಧಿಗಳು ಇರಲಿದ್ದು, ಮುಖ್ಯ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳು ಇರುವ ಸಾಧ್ಯತೆಯಿದೆ.
ಅಕ್ರಮದ ಅಡ್ಡೆಯಾಗಿದ್ದ ಪರಪ್ಪನ ಅಗ್ರಹಾರ ಜೈಲಿಗೆ ಹೊಂದಿಕೊಂಡಿರುವ ಕ್ವಾರಂಟೈನ್ ಜೈಲು ಕೊನೆಗೂ ಮಹಿಳಾ ಸೂಪರಿಟೆಂಡೆಂಟ್ ಜೊತೆಗೆ ಕೇವಲ ಮಹಿಳಾ ಕೈದಿಗಳಿಗೆ ಮಾತ್ರ ಸೀಮಿತವಾಗಲಿದೆ. ಪರಪ್ಪನ ಅಗ್ರಹಾರ ಮುಖ್ಯ ಜೈಲಿನಲ್ಲಿ 3400 ವಿಚಾರಣಾಧೀನ ಕೈದಿಗಳು ಮಾತ್ರ ಇರಲಿದ್ದಾರೆ. ಹೊಸದಾಗಿ ಸಿದ್ಧ ಆಗಿರುವ ಜೈಲಿನಲ್ಲಿ 1550 ಸಜಾ ಕೈದಿಗಳು ಶಿಫ್ಟ್ ಆಗಲಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಕೆ ಸೇರಿದಂತೆ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು. ಇದನ್ನೂ ಸಂಪೂರ್ಣವಾಗಿ ನಿಲ್ಲಿಸಲು ಮುಂದಿನ ಒಂದು ವಾರದೊಳಗಾಗಿ ಪ್ರತ್ಯೇಕ ಜೈಲಿನಲ್ಲಿ ಡಿಜಿ ಒಬ್ಬರನ್ನು ನೇಮಕ ಮಾಡಿ, ಪ್ರತ್ಯೇಕ ಮೂರು ಜನ ಸೂಪರಿಟೆಂಡೆಂಟ್ ಕೂಡ ನೇಮಕ ಆಗಲಿದ್ದಾರೆ ಎಂದು ಜೈಲು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.ಇದನ್ನೂ ಓದಿ: ಕೊನೆಯಲ್ಲಿ ಕೆಟ್ಟದ್ದು ಅಳಿದು ಹೋಗುತ್ತದೆ, ಒಳ್ಳೆತನಕ್ಕೆ ಜಯವಾಗುತ್ತದೆ: ವಿಜಯಲಕ್ಷ್ಮಿ
ಬೆಂಗಳೂರು: ಕಳೆದ ಮೂರು ವರ್ಷಗಳಿಂದಲೂ ಬೆಂಗಳೂರಿನ ಪೀಣ್ಯದಲ್ಲಿ (Peenya) ನಿಗೂಢವಾಗಿ ನೆಲೆಸಿದ್ದ ಪಾಕ್ ದಂಪತಿಯನ್ನು ಬಂಧಿಸಿರುವ ಬೆಂಗಳೂರು ಪೊಲೀಸರು ತನಿಖೆಯಲ್ಲಿ ಹಲವು ಸ್ಫೋಟಕ ಮಾಹಿತಿಗಳನ್ನು ಬಯಲಿಗೆಳೆದಿದ್ದಾರೆ.
2014ರಲ್ಲಿ ಭಾರತಕ್ಕೆ ಎಂಟ್ರಿಯಾಗಿದ್ದ ಈ ದಂಪತಿ, 2019 ರಲ್ಲಿ ಬೆಂಗಳೂರಿಗೆ ಬಂದಿದ್ದರು. ಹೆಸರು ಬದಲಿಸಿಕೊಂಡು, ನಕಲಿ ಆಧಾರ್ ಕಾರ್ಡ್ ಸಹ ಮಾಡಿಸಿಕೊಂಡಿದ್ದರು. ಅಂದಿನಿಂದ ಮನೆಯಲ್ಲಿ ಧರ್ಮ ಪ್ರಚಾರ ಮತ್ತು ಧಾರ್ಮಿಕ ಪ್ರಚೋದಕರಾಗಿ ಕೆಲಸ ಮಾಡುತ್ತಿದ್ದರು. ಯೂಟ್ಯೂಬ್‌ನಲ್ಲಿ ಪ್ರಚಾರ ಕಾರ್ಯ ನಡೆಸುತ್ತಾ ಇದ್ದರು. ಖರ್ಚು ವೆಚ್ಚಕ್ಕೆ ಸಂಸ್ಥೆಯೊಂದರಿಂದ ಹಣಕಾಸು ನೆರವು ಬರುತ್ತಿತ್ತು ಎಂಬೆಲ್ಲಾ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರವಾಸಿಗರ ಮಿನಿ ಬಸ್ ಏರಿದ ಚಿರತೆ
ಬೆಂಗಳೂರು: ಅಸ್ಸಾಂ ಎನ್‌ಐಎ ಅಧಿಕಾರಿಗಳಿಂದ ಬೆಂಗಳೂರು ಗ್ರಾಮಾಂತರದ ಜಿಗಣಿಯಲ್ಲಿ ಬಂಧಿತನಾಗಿದ್ದ ಉಲ್ಫಾ ಉಗ್ರನಿಂದ ಸ್ಫೋಟಕ ರಹಸ್ಯವೊಂದು ಬಯಲಾಗಿದೆ. ಶಂಕಿತ ಉಗ್ರನ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿರುವ ಎನ್‌ಐಎ (NIA) ಅಧಿಕಾರಿಗಳು ಮಂಗಳವಾರ ಅಸ್ಸಾಂನ (Assam) ಉತ್ತರ ಲಖೀಂಪುರದಲ್ಲಿ ಜೀವಂತ ಐಇಡಿಗಳನ್ನ (ಸುಧಾರಿತ ಸ್ಫೋಟಕ ಸಾಧನ) ವಶಕ್ಕೆ ಪಡೆದಿದ್ದಾರೆ.
ಎನ್‌ಐಎ ಅಧಿಕಾರಿಗಳ ವಿಚಾರಣೆ ವೇಳೆ ಶಂಕಿತ (Suspected Terrorist) ಉಗ್ರ ಗಿರಿಸ್ ಬೋರಾ ಅಲಿಯಾಸ್ ಗೌತಮ್, ಅಸ್ಸಾಂನಲ್ಲಿ ಐಇಡಿ ಇಟ್ಟ ಸ್ಫೋಟಕ ವಿಚಾರ ಬಾಯ್ಬಿಟ್ಟಿದ್ದಾನೆ. ಅಲ್ಲದೇ ಉಲ್ಫಾ(I) ಸಂಘಟನೆಯ ನಾಯಕರು ಹೇಳಿದಂತೆ ಐಇಡಿಗಳನ್ನ ಇಟ್ಟಿದ್ದೆ. ಆಗಸ್ಟ್ 15ರಂದು ಸ್ಫೋಟಿಸಲು ಸಂಜು ರೂಪಿಸಲಾಗಿತ್ತು ಎಂದೂ ಸಹ ಒಪ್ಪಿಕೊಂಡಿದ್ದಾನೆ. ಶಂಕಿತ ಉಗ್ರನ ಮಾಹಿತಿ ಮೇರೆಗೆ ತನಿಖೆ ನಡೆಸಿದ ಎನ್‌ಐಎ ಅಧಿಕಾರಿಗಳು ಲಖೀಂಪುರ ಜಿಲ್ಲೆಯಲ್ಲಿ ಇಟ್ಟಿದ್ದ ಕೆಲವು ಜೀವಂತ ಐಇಡಿಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ತನಿಖೆಯನ್ನೂ ಮುಂದುವರಿಸಿದ್ದಾರೆ. ಇದನ್ನೂ ಓದಿ: ರಸ್ತೆ, ರೈಲು ಹಳಿಗಳನ್ನು ಅತಿಕ್ರಮಿಸುವ ಯಾವುದೇ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕು: ಸುಪ್ರೀಂ
ನಾಲ್ವರು ಪಾಕ್ ಪ್ರಜೆಗಳು ಅರೆಸ್ಟ್; ತನಿಖೆ ತೀವ್ರ
ಪಾಕಿಸ್ತಾನಿ ನ್ಯಾಷನಲಾಟಿ ಗುಮಾನಿ ಮೇಲೆ ನಾಲ್ವರು ಪಾಕ್ ಪ್ರಜೆಗಳು ಅರೆಸ್ಟ್ ಪ್ರಕರಣದ ತನಿಖೆ ದಿನ ಕಳೆದಂತೆ ತೀವ್ರಗೊಳ್ಳುತ್ತಿದೆ. IB, NIA ಮತ್ತು ಆನೇಕಲ್ ಉಪವಿಭಾಗದ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್ ಹಿತೇಂದ್ರ ಭೇಟಿ ನೀಡಿ ತನಿಖೆ ಬಗ್ಗೆ ಚರ್ಚೆ ನಡೆಸಿದ್ದು, ಒಂದಷ್ಟು ಸಲಹೆ ಸೂಚನೆ ನೀಡಿದೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‌ರ ವಿರುದ್ಧ ಅವಹೇಳನಕಾರಿ ಹೇಳಿಕೆ – ಧಾರ್ಮಿಕ ಮುಖಂಡ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ 67 FIR
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ರಶೀದ್ ಆಲಿ ಸಿದ್ಧಕಿ ಕುಟುಂಬದ ತನಿಖೆ ಮುಂದುವರಿದಿದೆ. IB, NIA ಮತ್ತು ಆನೇಕಲ್ ಉಪವಿಭಾಗದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ಹಿನ್ನೆಲೆ ಭಾರತಕ್ಕೆ ಅಕ್ರಮವಾಗಿ ಎಂಟ್ರಿ ಕೊಟ್ಟ ಉದ್ದೇಶ ಮತ್ತು ಭಾಗ ದಾಖಲೆಗಳ ಸೃಷ್ಟಿ ಬಗ್ಗೆ ತನಿಖೆಯನ್ನು ಕೇಂದ್ರಿಕರಿಸಲಾಗಿದೆ. ಆರೋಪಿಗಳು ಮೆಹದಿ ಫೌಂಡೇಷನ್ ನ ಪರ್ವೇಜ್ ಭಾರತಕ್ಕೆ ಬರುವಂತೆ ಹೇಳಿ ದಾಖಲೆಗಳು ಸೇರಿದಂತೆ ಅಗತ್ಯ ಸೌಲಭ್ಯ ವ್ಯವಸ್ಥೆ ಕಲ್ಲಿಸಿದನು. ಯೂನಸ್ ಅಲ್ಗೋರ್ ಧರ್ಮ ಗುರುಗಳ ಪ್ರವಚನ ಪ್ರಚಾರಕ್ಕೆ ಹಣ ನೀಡುತ್ತಿದ್ದರು. ಜೀವನಕ್ಕಾಗಿ ಬಿರಿಯಾನಿ ಹೊಟೇಲ್ ವ್ಯವಹಾರ ಮಾಡುತ್ತಿದ್ದೆವು ಎನ್ನುತ್ತಿದ್ದಾರೆ. ಆದ್ರೆ ಆರೋಪಿಗಳ ಹೇಳಿಕೆ ನಂಬಲು ಸಾಧ್ಯವಿಲ್ಲ ಎಂಬ ವಿಚಾರಗಳು ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾಗಿದೆ. ಇದನ್ನೂ ಓದಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ದರ ಏರಿಕೆ ಬಿಸಿ – ಇಂದಿನಿಂದಲೇ ಹೊಸ ದರ ಅನ್ವಯ
ಬಂಧಿತ ಪಾಕ್ ಪ್ರಜೆಗಳಾದ ರಶೀದ್ ಅಲಿ ಸಿದ್ಧಕಿ ಮತ್ತು ಆತನ ಪತ್ನಿ ಆಯೇಷಾ ಹನೀಫ್‌ಳನ್ನು IB ಮತ್ತು NIA ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಬಾಂಗ್ಲಾದೇಶ ದೇಶದ ಗಲಭೆಯಲ್ಲಿ ಜೈಲಿನಿಂದ ಪರಾರಿಯಾದ ಖೈದಿಗಳ ಸಂಪರ್ಕ. ಪಾಕಿಸ್ತಾನಿ ಉಗ್ರ ಸಂಘಟನೆಗಳ ಲಿಂಕ್ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಆರೋಪಿಗಳ ವಾಸವಿದ್ದ ಮನೆಯಲ್ಲಿ ಮೊಬೈಲ್, ಲ್ಯಾಪ್‌ಟಾಪ್, ಕೆಲ ಎಲೆಕ್ಟ್ರಾನಿಕ್ ವಸ್ತುಗಳು ದೊರೆತ್ತಿದ್ದು, ಅವುಗಳನ್ನು FSLಗೆ ರವಾನಿಸಲಾಗಿದೆ. ಧರ್ಮ ಪ್ರಚಾರದ ಜೊತೆ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಉದ್ದೇಶದ ಬಗ್ಗೆ ಯಾವುದೇ ಪುರಾವೆ ಇಲ್ಲಿಯವರೆಗೆ ಸಿಕ್ಕಿಲ್ಲ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಬಂಧಿತ ಮೊಹಮ್ಮದ್ ಹನೀಫ್ ಮಗಳಾದ ಫಾತಿಮಾ ಪತಿ ಅಲ್ತಾಫ್ ದಾವಣಗೆರೆ ಮೂಲದವನಾಗಿದ್ದು, ಚೆನ್ನೈನಲ್ಲಿ ಬಂಧಿಸಲಾಗಿದೆ. ಚೆನ್ನೈ NIA ಅಧಿಕಾರಿಗಳ ಜೊತೆಯು ಸಂಪರ್ಕದಲ್ಲಿದ್ದು, ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಎಡಿಜಿಪಿ ಅರ್. ಹಿತೇಂದ್ರ ತಿಳಿಸಿದ್ದಾರೆ.
ಪಾಕ್ ಪ್ರಜೆಗಳ ಬಂಧನದ ಪ್ರಕರಣದ ಜಾಡು ಮುಂಬೈ ಮತ್ತು ದೆಹಲಿವರೆಗೆ ವ್ಯಾಪಿಸಿದ್ದು, ಬಂಧಿತರ ಜೊತೆ ನೂರಕ್ಕೂ ಅಧಿಕ ಮಂದಿ ನಿರಂತರ ಸಂಪರ್ಕದಲ್ಲಿರುವುದು ತನಿಖೆ ವೇಳೆ ಪತ್ತೆಯಾಗಿದ್ದು, ಅವರೆಲ್ಲರೂ ಪಾಕಿಸ್ತಾನ ಮೂಲದವರ ಎಂಬುದು ಪೊಲೀಸರ ತನಿಖೆಯಿಂದ ದೃಢವಾಗಬೇಕಿದೆ.
ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾದ ಪರಿಣಾಮ ಪಾಕಿಸ್ತಾನ ಬಿಟ್ಟು, ಬಾಂಗ್ಲಾದೇಶಕ್ಕೆ (Bangladesh) ಪರಾರಿಯಾಗಿ ಢಾಕಾದ ಯುವತಿಯನ್ನು ವಿವಾಹವಾಗಿದ್ದನು. ಬಳಿಕ ಅಲ್ಲಿಯೂ ಇರಲು ಸಾಧ್ಯವಾಗದೇ 2014ರಲ್ಲಿ ಪತ್ನಿ ಜೊತೆ ಅಕ್ರಮವಾಗಿ ದೆಹಲಿಗೆ ಬಂದಿದ್ದ. ಸ್ಥಳೀಯ ವ್ಯಕ್ತಿಯ ನೆರವಿನಿಂದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ಅಲ್ಲಿಂದ ನೇಪಾಳಕ್ಕೆ ತೆರಳಿದ್ದ. ಅಲ್ಲಿ ಮೆಹದಿ ಎಂಬ ಫೌಂಡೇಷನ್ ಸೇರಿಕೊಂಡಿದ್ದ. ಅಲ್ಲಿ ಎಮ್.ಎಫ್.ಐ ಧರ್ಮಗುರುಗಳ ಜೊತೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ. ಆ ವೇಳೆ ನೇಪಾಳದಿಂದ ಬೆಂಗಳೂರಿಗೆ ಹೋಗುವಂತೆ ಯೂನಸ್ ಅಲ್ಗೋರ್ ಎಂಬ ಧರ್ಮಗುರುಗಳು ಸೂಚನೆ ನೀಡಿದ್ದ.
ಸೂಚನೆಯಂತೆ ರಶೀದ್ ಅಲಿ ಸಿದ್ಧಿಕಿ 2018ರಲ್ಲಿ ಬೆಂಗಳೂರಿಗೆ ಬಂದಿದ್ದ ಬಳಿಕ ವಾಸಿಮ್ ಮತ್ತು ಅಲ್ತಾಫ್ ಪರಿಚಯವಾಗಿತ್ತು. ಅಲ್ತಾಫ್ ಫಂಡ್ ಸೇರಿ ಎಲ್ಲಾ ವ್ಯವಸ್ಥೆಯನ್ನು ನೋಡಿಕೊಂಡಿದ್ದನು. ಅದಾದ ಬಳಿಕ ವಾಸಿಮ್ ಮತ್ತು ಅಲ್ತಾಫ್ ಇಬ್ಬರು ರಶೀದ್ ಅಲಿ ಸಿದ್ಧಿಕಿ ಜೊತೆ ಸೇರಿ ಸಂಘಟನೆಗೆ ಸೇರಿಕೊಂಡಿದ್ದರು. ಇವರ ಸಹಕಾರ ಪಡೆದು ಜಿಗಣಿಗೆ ಶಿಫ್ಟ್ ಆಗಿದ್ದ. ಜಿಗಣಿಯಲ್ಲಿ ಮನೆಮಾಡಿಕೊಂಡು ಬಿರಿಯಾನಿ ತಯಾರು ಮಾಡಿ ಆನ್ಲೈನ್ ಪುಡ್ ಡೆಲಿವರಿ ವ್ಯಾಪಾರ ಮಾಡುತ್ತಿದ್ದ.ಇದನ್ನೂ ಓದಿ: Kolara | ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ್ದ ವಾಯುಪಡೆ ಹೆಲಿಕಾಪ್ಟರ್ ಸುರಕ್ಷಿತವಾಗಿ ಟೇಕಾಫ್
ಜಿಗಣಿಯಲ್ಲಿ ಅಪಾರ್ಟ್ಮೆಂಟ್‌ನಲ್ಲಿ (Jigani Apartment) ಬಾಂಗ್ಲಾ ಪತ್ನಿ ಸೇರಿದಂತೆ ಇಬ್ಬರು ಮಕ್ಕಳ ಜೊತೆ ಕುಟುಂಬ ಸಮೇತ ವಾಸವಿದ್ದ. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಸಂಗ್ರಹಿಸಿ, ರಾತ್ರಿ ಕಾರ್ಯಾಚರಣೆ ನಡೆಸಿ 4 ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಪೊಲೀಸರು ಆತನ ಮನೆಯಲ್ಲಿದ್ದ ಲ್ಯಾಪ್ ಟಾಪ್, ಟಿವಿ, ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಲ್ಯಾಪ್‌ಟಾಪ್‌ನಲ್ಲಿನ ಡೇಟಾ ಪರಿಶೀಲನೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಉಳಿದಂತೆ ಮನೆಯಲ್ಲಿ ಇನ್ನುಳಿದ ವಸ್ತುಗಳನ್ನು ಪರಿಶೀಲಿಸುತ್ತಿದ್ದಾರೆ.
ಶಂಕರ್ ಶರ್ಮಾ ಹೆಸರಿನಲ್ಲಿ ರಶೀದ್ ಅಲಿ ಸಿದ್ಧಿಕಿಯ ದಾಖಲೆಗಳು ಪತ್ತೆಯಾಗಿದ್ದು, ಭಾರತೀಯ ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪಾಕ್ ಪ್ರಜೆ ಅರೆಸ್ಟ್ ಹಿನ್ನೆಲೆ ಬೆಂಗಳೂರು ಕೇಂದ್ರ ವಲಯ ಐಜಿಪಿ ಲಾಬೂರಾಮ್ (IGP Labhu Ram) ಹಾಗೂ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಕೆಎಸ್ ನಾಗರಾಜ್ ಭೇಟಿ ನೀಡಿದ್ದಾರೆ. ಎಸ್ಪಿ ನಾಗರಾಜ್ ಜಿಗಣಿ ಇನ್ಸ್ಪೆಕ್ಟರ್ ಮಂಜುನಾಥ್ ಬಳಿ ಮಾಹಿತಿ ಸಂಗ್ರಹಿಸುತ್ತಿದ್ದು, ಡಿವೈಎಸ್ಪಿ ಮೋಹನ್ ಕುಮಾರ್ ಠಾಣೆಯಲ್ಲಿ ಮೊಕ್ಕಾಂ ಹೂಡಿದ್ದಾರೆ.ಇದನ್ನೂ ಓದಿ: ಕುಂಟು ನೆಪ ಹೇಳಿ ಕರ್ನಾಟಕ ಐಪಿಎಸ್ ಕೇಡರ್‌ನಲ್ಲಿ ವಿಲೀನ: ಚಂದ್ರಶೇಖರ್ ಅಮಾನತಿಗೆ ಜೆಡಿಎಸ್ ದೂರು
ಸದ್ಯ ಈ ಪ್ರಕರಣ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನೇಕಲ್: ಎರಡು ಟಿಪ್ಪರ್ ಲಾರಿಗಳು (Lorry) ಹಾಗೂ ಕಾರಿನ (Car) ನಡುವೆ ಸರಣಿ ಅಪಘಾತ (Accident) ಸಂಭವಿಸಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ಹೊಸಕೋಟೆ ಕೋಲಾರ ಹೆದ್ದಾರಿಯ ಗೊಟ್ಟಿಪುರ ಗೇಟ್ ಬಳಿ ನಡೆದಿದೆ.
ಇಂದು ಮುಂಜಾನೆ ಸಮಯದಲ್ಲಿ ಈ ಘಟನೆ ನಡೆದಿದ್ದು, ಎರಡು ಲಾರಿಗಳ ನಡುವೆ ಸಿಲುಕಿ ಕಾರು ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರಿಗೂ ಸಹ ಗಂಭೀರ ಗಾಯಗಳಾಗಿದೆ. ಇನ್ನು ಗಾಯಾಳುಗಳನ್ನು ಹೊಸಕೋಟೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಹಿನ್ನೆಲೆ ಹೊಸಕೋಟೆ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದನ್ನೂ ಓದಿ: ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲಿಸ್ತೀನ್ ಧ್ವಜ ಪ್ರದರ್ಶನ – 8 ಜನರ ವಿರುದ್ಧ ಕೇಸ್