Tag: anekal

  • ನಿರ್ಮಾಣ ಹಂತದ ಕಟ್ಟಡ ಮೇಲಿಂದ ತಳ್ಳಿ ಪತ್ನಿಯ ಕೊಲೆಗೈದ ಭೂಪ

    ನಿರ್ಮಾಣ ಹಂತದ ಕಟ್ಟಡ ಮೇಲಿಂದ ತಳ್ಳಿ ಪತ್ನಿಯ ಕೊಲೆಗೈದ ಭೂಪ

    ಆನೇಕಲ್: ನಿರ್ಮಾಣ ಹಂತದ ಕಟ್ಟಡ ಮೇಲಿಂದ ಪತ್ನಿಯನ್ನ ದೂಡಿ ಕೊಲೆಗೈದಿರುವ ಘಟನೆ ಆನೇಕಲ್ (Anekal) ತಾಲೂಕಿನ ಸರ್ಜಾಪುರದ ತಿಗಳ ಚೌಡದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತಳನ್ನು ಮಂಜುಳಾ (40) ಹಾಗೂ ಪತಿಯನ್ನು ಮಂಜುನಾಥ್ (45) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ವಿವಿಗಳನ್ನು ಮುಚ್ಚುವುದರಿಂದ ಎಸ್ಸಿ-ಎಸ್ಟಿ, ಒಬಿಸಿ, ಮಹಿಳೆಯರಿಗೆ ಅನ್ಯಾಯವಾಗಲಿದೆ – ಬೊಮ್ಮಾಯಿ

    ಪತ್ನಿ ಮಾನಸಿಕ ಅಸ್ವಸ್ಥೆಯಾಗಿದ್ದ ಕಾರಣ ಪತಿ ಮಂಜುನಾಥ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಹೀಗಾಗಿ ಶನಿವಾರ ರಾತ್ರಿ ಹೆಂಡತಿಯನ್ನು ಭುಜದ ಮೇಲೆ ಎತ್ತಿಕೊಂಡು, ನಿರ್ಮಾಣ ಹಂತದ ಕಟ್ಟಡದ ಎರಡನೇ ಮಹಡಿಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಅಲ್ಲಿಂದ ಕೆಳಗೆ ದೂಡಿದ್ದಾನೆ. ಕೆಳಗೆ ಬೀಳುತ್ತಿದ್ದಂತೆ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ.

    ಕೆಳಗೆ ದೂಡಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಾಶ್ವತ ರಸ್ತೆಗಾಗಿ ವೈಟ್ ಟ್ಯಾಪಿಂಗ್ ಯೋಜನೆ: ಡಿಕೆಶಿ

     

     

  • ಆನೇಕಲ್ | ಸಿಲಿಂಡರ್ ಬ್ಲಾಸ್ಟ್ – ಸ್ಫೋಟದ ತೀವ್ರತೆಗೆ ಮನೆ ಛಾವಣಿಯೇ ಚಿಂದಿ

    ಆನೇಕಲ್ | ಸಿಲಿಂಡರ್ ಬ್ಲಾಸ್ಟ್ – ಸ್ಫೋಟದ ತೀವ್ರತೆಗೆ ಮನೆ ಛಾವಣಿಯೇ ಚಿಂದಿ

    ಆನೇಕಲ್: ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು (Cylinder Blast) ಓರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನೆರಳೂರು ಬಳಿ ನಡೆದಿದೆ.

    ನೆರಳೂರು ರಾಘವ ನಗರದ ಮುನಿರಾಜು ಬಡಾವಣೆಯ ದಿನೇಶ್ ದಾಸ್‌ಗೆ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ಆನಂದ್‌ ಸಿಂಗ್‌ ವಿರುದ್ಧ ಅಕ್ರಮ ಗಣಿಗಾರಿಕೆ ಕೇಸ್‌ – ಫೆ.24ಕ್ಕೆ ಅಂತಿಮ ತೀರ್ಪು ಪ್ರಕಟ

    ಮನೆಯಲ್ಲಿ ಗ್ಯಾಸ್ ಸೋರಿಕೆಯಿಂದ ಬೆಳಗ್ಗೆ 7 ಗಂಟೆ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆ ಛಾವಣಿಯೇ ಚಿಂದಿ ಚಿಂದಿಯಾಗಿದೆ. ಈ ವೇಳೆ ಮನೆಯಲ್ಲಿದ್ದ ದಿನೇಶ್ ದಾಸ್‌ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಚಿತ್ರದ ಪೋಸ್ಟರ್ ಔಟ್

    ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಅತ್ತಿಬೆಲೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಇದನ್ನೂ ಓದಿ: ರಾಜ್ಯಗಳು ಹೆಚ್ಚಿನ ತೆರಿಗೆ ಪಾಲು ಕೇಳೋದು ಸಣ್ಣತನ: ಪಿಯೂಷ್ ಗೋಯಲ್

  • ಶೀಲ ಶಂಕಿಸಿ ನಡುರಸ್ತೆಯಲ್ಲಿಯೇ 8 ಬಾರಿ ಚಾಕು – ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

    ಶೀಲ ಶಂಕಿಸಿ ನಡುರಸ್ತೆಯಲ್ಲಿಯೇ 8 ಬಾರಿ ಚಾಕು – ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

    ಆನೇಕಲ್: ಪತ್ನಿಯ ಶೀಲ ಶಂಕಿಸಿ ನಡುರಸ್ತೆಯಲ್ಲಿಯೇ ಪತಿ ಚಾಕು ಇರಿದು ಹತ್ಯೆಗೈದಿರುವ ಘಟನೆ ಆನೇಕಲ್ (Anekal) ತಾಲ್ಲೂಕಿನ ಹೆಬ್ಬಗೋಡಿಯ (Hebbagodi) ವಿನಾಯಕನಗರದಲ್ಲಿ (Vinayakanagar) ನಡೆದಿದೆ.

    ಮೃತಳನ್ನು ಹೆಬ್ಬಗೋಡಿಯ ತಿರುಪಾಳ್ಯ ನಿವಾಸಿ ಶ್ರೀಗಂಗಾ (29) ಹಾಗೂ ಆರೋಪಿಯನ್ನು ಮೋಹನ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕುಂಭಮೇಳದ ಮೊನಾಲಿಸಾ ಸಿನಿಮಾ ಆಫರ್‌ ಒಪ್ಪಿದ್ಹೇಗೆ?

    ಏಳು ವರ್ಷಗಳ ಹಿಂದೆ ಮೃತ ಶ್ರೀಗಂಗಾ ಹಾಗೂ ಮೋಹನ್ ರಾಜು ವಿವಾಹವಾಗಿದ್ದರು. ಜೊತೆಗೆ ಆರು ವರ್ಷದ ಮಗನಿದ್ದ. ಎರಡು ಮೂರು ವರ್ಷಗಳ ಹಿಂದೆ ಮೋಹನ್ ತನ್ನ ಸ್ನೇಹಿತನ ಜೊತೆಗೆ ಪತ್ನಿಯ ಶೀಲ ಶಂಕಿಸಿ ಗಲಾಟೆ ಮಾಡಿದ್ದ. ಈ ವೇಳೆ ಇಬ್ಬರ ನಡುವೆ ಜಗಳವಾಗಿತ್ತು. ಕಳೆದ 8 ತಿಂಗಳ ಹಿಂದೆ ಇಬ್ಬರು ಬೇರ್ಪಟ್ಟಿದ್ದರು.

    ಮಂಗಳವಾರ ರಾತ್ರಿ ಮೋಹನ್ ಮಗುವನ್ನು ನೋಡಲು ಪತ್ನಿಯ ಮನೆಗೆ ಬಂದಿದ್ದ. ಈ ವೇಳೆ ಇಬ್ಬರ ನಡುವೆ ಜಗಳವಾಗಿತ್ತು. ಬಳಿಕ ಬುಧವಾರ ಬೆಳಗ್ಗೆ ಮಗುವನ್ನು ಶಾಲೆಗೆ ಬಿಡಲು ಶ್ರೀಗಂಗಾ ಬೈಕ್‌ನಲ್ಲಿ ಬಂದಿದ್ದಳು. ಈ ವೇಳೆ ಕಾದು ಕುಳಿತಿದ್ದ ಮೋಹನ್ ಆಕೆಯ ಮೇಲೆ ಅಟ್ಯಾಕ್ ಮಾಡಿ, 7-8 ಬಾರಿ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿದ್ದಾನೆ.

    ಗಂಭೀರ ಗಾಯಗೊಂಡು ಕುಸಿದು ಬಿದ್ದಿದ್ದ ಶ್ರೀಗಂಗಾಳನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರ ಭೇಟಿ ನೀಡಿದ್ದು, ಆರೋಪಿ ಮೋಹನ್ ರಾಜ್‌ನನ್ನು ವಶಕ್ಕೆ ಪಡೆದಿದ್ದಾರೆ.

    ಈ ಕುರಿತು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ಮಾತನಾಡಿ, ಬೆಳಗ್ಗೆ ಹೆಬ್ಬಗೋಡಿ ವ್ಯಾಪ್ತಿಯ ಶಾಲೆಗೆ ಮಗುವನ್ನ ಬಿಡಲು ತಾಯಿ ಬಂದಾಗ ಈ ಘಟನೆ ನಡೆದಿದೆ. ಆಕೆಯ ಪತಿ ಶಾಲೆಯ ಕಂಪೌಂಡ್ ಬಳಿ ಬಂದು ಚಾಕುವಿನಿಂದ ಇರಿದಿದ್ದಾನೆ. ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಗಾಯಾಳು ಮೃತಪಟ್ಟಿದ್ದಾರೆ. ಹೆಬ್ಬಗೋಡಿ ಠಾಣೆಯಲ್ಲಿ ಕೊಲೆ ಕೇಸ್ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದೇವೆ. ಪತಿ ಹಾಗೂ ಆತನ ಸ್ನೇಹಿತ ಒಂದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಈ ಹಿಂದೆ ಪತಿಯ ಸ್ನೇಹಿತನನ್ನ ಮನೆಯಲ್ಲಿ ಇರಿಸಿಕೊಂಡಿದ್ದರು. ಈ ವೇಳೆ ಪತಿಯ ಸ್ನೇಹಿತ ಹಾಗೂ ಮೃತಳ ನಡುವೆ ಸಂಬಂಧ ಇದೆ ಎಂದು ಗಲಾಟೆ ನಡೆದಿದೆ. ನಂತರ ಪತಿ, ಪತ್ನಿ ದೂರವಾಗಿದ್ದರು. ಕಳೆದ ಕೆಲ ತಿಂಗಳಿನಿAದ ಮಗುವನ್ನು ನೋಡಿಲ್ಲವೆಂದು ಕೋಪಗೊಂಡು ಚಾಕು ಇರಿದು ಕೊಂದಿದ್ದಾನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಡಾಕ್ಟರ್ ಧನ್ಯತಾರನ್ನು ಮೊದಲು ಭೇಟಿಯಾಗಿದ್ದು ಎಲ್ಲಿ?- ಲವ್ ಸ್ಟೋರಿ ಬಿಚ್ಚಿಟ್ಟ ಡಾಲಿ

  • ಆನೇಕಲ್‌ನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ಕೊಲೆ ಆರೋಪಿ ಕಾಲಿಗೆ ಪೊಲೀಸರ ಗುಂಡೇಟು

    ಆನೇಕಲ್‌ನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ಕೊಲೆ ಆರೋಪಿ ಕಾಲಿಗೆ ಪೊಲೀಸರ ಗುಂಡೇಟು

    ಆನೇಕಲ್: ಬೆಂಗಳೂರು ಗ್ರಾಮಾಂತರ ಆನೇಕಲ್‌ನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಬಂದಿದೆ. ಪರಾರಿಯಾಗಲು ಯತ್ನಿಸಿದ ಕೊಲೆ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ.

    ಕೊಲೆ ಆರೋಪಿಯು ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿ, ಪರಾರಿಗೆ ಯತ್ನಿಸಿದ್ದಾನೆ. ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಉಪವಿಭಾಗದ ಸರ್ಜಾಪುರದಲ್ಲಿ ನಡೆದಿದೆ.

    ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

    ಜ.28ರಂದು ಮಾಜಿ ರೌಡಿಶೀಟರ್ ವೆಂಕಟೇಶ್ ಅಲಿಯಾಸ್ ವೆಂಕಿಯನ್ನು ಗುಬ್ಬಚ್ಚಿ ಸೀನಾ ಗ್ಯಾಂಗ್ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿತ್ತು.

    ದೊಮ್ಮಸಂದ್ರದ ಬಳಿ ಅವಿತು ಕುಳಿತಿದ್ದ ರೌಡಿಶೀಟರ್ ಗುಬ್ಬಚ್ಚಿ ಸೀನನನ್ನು ಪೊಲೀಸರು ಬಂಧಿಸಲು ಹೋಗಿದ್ದರು. ಇನ್ಸ್ಪೆಕ್ಟರ್ ನವೀನ್ ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಶರಣಾಗುವಂತೆ ತಿಳಿಸಿದ್ದರು. ಈ ವೇಳೆ ಸೀನಾ, ಪೊಲೀಸ್ ಪೇದೆ ಇರ್ಫಾನ್ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಇನ್ಸ್ಪೆಕ್ಟರ್ ನವೀನ್ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಫೈಯರ್ ಮಾಡಿ ಬಂಧಿಸಿದ್ದಾರೆ.

  • ಬೆಂಗಳೂರು ಬಯೋಇನ್ನೊವೇಟಿವ್ ಸೆಂಟರ್‌ನಲ್ಲಿ ಅಗ್ನಿ ಅವಘಡ

    ಬೆಂಗಳೂರು ಬಯೋಇನ್ನೊವೇಟಿವ್ ಸೆಂಟರ್‌ನಲ್ಲಿ ಅಗ್ನಿ ಅವಘಡ

    ಆನೇಕಲ್: ಬೆಂಗಳೂರು (Bengaluru) ಹೊರವಲಯದ ಆನೇಕಲ್‌ನ (Anekal) ಎಲೆಕ್ಟ್ರಾನಿಕ್ ಸಿಟಿಯ (Electronic City) ಮೊದಲನೇ ಹಂತದಲ್ಲಿರುವ ಬಯೋಇನ್ನೊವೇಟಿವ್ ಸೆಂಟರ್‌ನಲ್ಲಿ(Bio Innovative Centre) ಅಗ್ನಿ ಅವಘಡ ಸಂಭವಿಸಿದೆ.ಇದನ್ನೂ ಓದಿ: ಮಹಾಕುಂಭಮೇಳ: ಸಂಕ್ರಾಂತಿಯಂದು ಸಂಗಮದಲ್ಲಿ ‘ಅಮೃತ ಸ್ನಾನ’ ಮಾಡಿದ 1 ಕೋಟಿ ಭಕ್ತರು

    ಮಂಗಳವಾರ ಬೆಳಗ್ಗೆ 4:40ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಬಯೋಇನ್ನೋವೇಟಿವ್ ರಿಸರ್ಚ್ ಸೆಂಟರ್ ಜಿ+2 ಕಟ್ಟಡದ 2ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಉದ್ಯೋಗಿಗಳು ಹೊರಗೆ ಓಡಿ ಬಂದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಎಲ್ಲಾ ಹೀರೋಗೂ ಒಂದು ಟೈಮ್‌ಲೈನ್‌ ಇರುತ್ತದೆ: ರಿಟೈರ್‌ಮೆಂಟ್‌ ಬಗ್ಗೆ ಸುದೀಪ್‌ ಮಾತು

  • ಕಿತ್ತಗಾನಹಳ್ಳಿ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಓರ್ವ ಚಿಕಿತ್ಸೆ ಫಲಿಸದೇ ಸಾವು

    ಕಿತ್ತಗಾನಹಳ್ಳಿ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಓರ್ವ ಚಿಕಿತ್ಸೆ ಫಲಿಸದೇ ಸಾವು

    ಆನೇಕಲ್: ಇಲ್ಲಿನ ಕಿತ್ತಗಾನಹಳ್ಳಿಯಲ್ಲಿ (Kittaganahalli) ನಡೆದಿದ್ದ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಗೊಂಡಿದ್ದ ಓರ್ವ ವ್ಯಕ್ತಿ ಇಂದು (ಜ.10) ಸಾವನ್ನಪ್ಪಿದ್ದಾನೆ.

    ಮೃತ ವ್ಯಕ್ತಿಯನ್ನು ತಮಿಳುನಾಡು ಮೂಲದ ವಿಷ್ಣು ಜಯರಾಜ್(30) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತೆ ಶಂಕುತಲಾ ನಟರಾಜ್ ಪುತ್ರ ಆತ್ಮಹತ್ಯೆ

    ಸಿಲಿಂಡರ್ ಸ್ಫೋಟದ ವೇಳೆ ಮನೆಯಲ್ಲಿ ವಾಸವಾಗಿದ್ದ ಇಬ್ಬರು ಗಾಯಗೊಂಡಿದ್ದರು. ಇಬ್ಬರ ಪೈಕಿ ಓರ್ವ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ. ಗಾಯಾಳುಗಳಿಗೆ ನಾರಾಯಣ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವಿಷ್ಣು ದೇಹದ ಬಹುತೇಕ ಭಾಗಗಳಿಗೆ ಗಾಯವಾಗಿ, ಚಿಂತಾಜನಕ ಸ್ಥಿತಿಯಲ್ಲಿದ್ದ. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

    ಘಟನೆ ಏನು?
    ಜ.06 ರಂದು ಬೊಮ್ಮಸಂದ್ರ (Bommasandra) ಸಮೀಪದ ಕಿತ್ತಗಾನ ಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟಗೊಂಡಿತ್ತು. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಟ್ಟಡದ ಒಂದು ಮಹಡಿ ಸಂಪೂರ್ಣ ಛಿದ್ರವಾಗಿತ್ತು. ಜಯನಗರ ಮೂಲದ ಸುನಿಲ್ ಎಂಬವರಿಗೆ ಸೇರಿದ್ದ ಕಟ್ಟಡದಲ್ಲಿ ಇಬ್ಬರು ವಾಸವಾಗಿದ್ದರು. ಕೆಲಸಕ್ಕೆ ಹೋಗಲು ಒಬ್ಬರು ಸ್ನಾನ ಮಾಡುತ್ತಿದ್ದರಂತೆ. ಇದೇ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಇನ್ನೋರ್ವ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಎರಡನೇ ಅಂತಸ್ತಿನಿಂದ ಕೆಳಗೆ ಬಿದ್ದಿದ್ದ. ಸ್ಫೋಟದ ತೀವ್ರತೆಗೆ ಕಟ್ಟಡದ ಹಾಲೋ ಬ್ಲಾಕ್‌ಗಳು ಹಾರಿಹೋಗಿದ್ದವು. ಜೊತೆಗೆ ಬಿಲ್ಡಿಂಗ್ ನಾಲ್ಕು ಪಿಲ್ಲರ್‌ಗಳು ಕೂಡ ಛಿದ್ರಗೊಂಡಿದ್ದವು. ಇದರ ಪರಿಣಾಮ ನಾಲ್ಕು ಬಿಲ್ಡಿಂಗ್, 3 ಕಾರು, 6 ದ್ವಿಚಕ್ರ ವಾಹನಗಳು ಹಾನಿಗೊಳಗಾಗಿದ್ದವು.ಇದನ್ನೂ ಓದಿ: ವೈಕುಂಠ ಏಕಾದಶಿ- ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‌ಕುಮಾರ್

     

  • ಆನೇಕಲ್‌ನಲ್ಲಿ ಸಿಲಿಂಡರ್ ಸ್ಫೋಟ – ತೀವ್ರತೆಗೆ ಕಟ್ಟಡದ ಒಂದು ಮಹಡಿ ಸಂಪೂರ್ಣ ಛಿದ್ರ

    ಆನೇಕಲ್‌ನಲ್ಲಿ ಸಿಲಿಂಡರ್ ಸ್ಫೋಟ – ತೀವ್ರತೆಗೆ ಕಟ್ಟಡದ ಒಂದು ಮಹಡಿ ಸಂಪೂರ್ಣ ಛಿದ್ರ

    – ನಾಲ್ಕು ಬಿಲ್ಡಿಂಗ್, 3 ಕಾರು, 6 ದ್ವಿಚಕ್ರವಾಹನಗಳಿಗೆ ಹಾನಿ

    ಆನೇಕಲ್: ಸಿಲಿಂಡರ್ ಸ್ಫೋಟಗೊಂಡ (Cylinder Blast) ಪರಿಣಾಮ ಕಟ್ಟಡದ ಒಂದು ಮಹಡಿ ಸಂಪೂರ್ಣ ಛಿದ್ರವಾಗಿರುವ ಘಟನೆ ಬೊಮ್ಮಸಂದ್ರ (Bommasandra) ಸಮೀಪದ ಕಿತ್ತಗಾನ ಹಳ್ಳಿಯಲ್ಲಿ ನಡೆದಿದೆ.

    ಗಾಯಾಳುಗಳನ್ನು ಕೇರಳ ಮೂಲದ ವಿಶ್ವ ಹಾಗೂ ತಮಿಳುನಾಡು ಮೂಲದ ಸುನಿಲ್ ಜಾದವ್ ಎಂದು ಗುರುತಿಸಲಾಗಿದ್ದು, ನಾರಾಯಣ ಹೃದಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿದ್ದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ಯಶ್ ಫ್ಯಾನ್ಸ್‌ಗೆ ಸರ್ಪ್ರೈಸ್- ‘ಟಾಕ್ಸಿಕ್’ ಟೀಮ್‌ನಿಂದ ಸಿಕ್ತು ಸಿಹಿ ಸುದ್ದಿ

    ಇಂದು (ಜ.06 ) 8:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಜಯನಗರ ಮೂಲದ ಸುನಿಲ್ ಎಂಬುವವರಿಗೆ ಸೇರಿದ್ದ ಕಟ್ಟಡದಲ್ಲಿ ಇಬ್ಬರು ವಾಸವಾಗಿದ್ದರು. ಕೆಲಸಕ್ಕೆ ಹೋಗಲು ಒಬ್ಬರು ಸ್ನಾನ ಮಾಡುತ್ತಿದ್ದರಂತೆ. ಇದೇ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಇನ್ನೋರ್ವ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಎರಡನೇ ಅಂತಸ್ತಿನಿಂದ ಕೆಳಗೆ ಬಿದ್ದಿದ್ದಾನೆ. ಸ್ಫೋಟದ ತೀವ್ರತೆಗೆ ಕಟ್ಟಡದ ಹಾಲೋ ಬ್ಲಾಕ್‌ಗಳು ಹಾರಿಹೋಗಿವೆ. ಬಿಲ್ಡಿಂಗ್ ನಾಲ್ಕು ಪಿಲ್ಲರ್‌ಗಳು ಕೂಡ ಛಿದ್ರಗೊಂಡಿವೆ. ಇದರ ಪರಿಣಾಮ ನಾಲ್ಕು ಬಿಲ್ಡಿಂಗ್, 3 ಕಾರು, 6 ದ್ವಿಚಕ್ರವಾಹನಗಳು ಹಾನಿಗೊಳಗಾಗಿವೆ.

    ಸದ್ಯ ಗಾಯಾಳುಗಳನ್ನ ಸ್ಥಳೀಯ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ಬೆಳಗ್ಗೆ ಲೈಟ್ ಹಾಕಿದಾಗ ಸ್ಫೋಟ ಆಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, 15ಕ್ಕೂ ಹೆಚ್ಚು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸೂರ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: 2 ಬಡಾವಣೆ ವಿಸ್ತರಣೆಗೆ ಮುಂದಾಗುತ್ತಿದ್ದಂತೆ ಅಕ್ರಮ ಕಟ್ಟಡ ಕಟ್ಟಲು ಆರಂಭಿಸಿದ ಭೂ ಮಾಲೀಕರು

  • ಆನೇಕಲ್‌| ತಾಯಿ ಕೊಂದು ಬಳಿಕ ಮಗನೂ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಬೆಂಗಳೂರು/ಅನೇಕಲ್: ತಾಯಿಯನ್ನು ಕೊಂದು ಬಳಿಕ ಮಗನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಸೂರ್ಯಸಿಟಿ ಸಮೀಪದ ಹಳೆ ಚಂದಾಪುರದಲ್ಲಿ ನಡೆದಿದೆ.

    ಮಹಾಲಕ್ಷ್ಮಿ (41) ಕೊಲೆಯಾದ ಮಹಿಳೆ. ರಮೇಶ್ (21) ತಾಯಿಯನ್ನ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಮಗ. ಚಿತ್ರದುರ್ಗ ಮೂಲದ ಚಳ್ಳಕೆರೆಯ ಚಿಕ್ಕಹಳ್ಳಿ ಕುಟುಂಬ, ಕಳೆದ ಕೆಲ ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಬಂದಿದ್ದರು. ಇದನ್ನೂ ಓದಿ: ಕೋಲಾರ | ಮದುವೆ ಮಾಡ್ಕೊಡಿ ಎಂದಿದ್ದಕ್ಕೆ ವಿವಾಹಿತನನ್ನು ಅಟ್ಟಾಡಿಸಿ ಕೊಂದ ಪ್ರೇಯಸಿ ಮನೆಯವ್ರು!

    ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಗ ಕುಡಿದು ಬಂದು ಆಗಾಗ್ಗೆ ಗಲಾಟೆ ಮಾಡುತ್ತಿದ್ದ. ನಿನ್ನೆ ರಾತ್ರಿಯೂ ಕುಡಿದು ಬಂದು ತಾಯಿ ಮಹಾಲಕ್ಷ್ಮಿ ಜೊತೆ ಗಲಾಟೆ ಮಾಡಿದ್ದ. ಗಲಾಟೆ ವಿಕೋಪಕ್ಕೆ ತಿರುಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೊಬೈಲ್ ಚಾರ್ಜಿಂಗ್ ವೈರ್‌ನಿಂದ ಕುತ್ತಿಗೆಗೆ ಬಿಗಿದು ತಾಯಿ ಹತ್ಯೆ ಮಾಡಿದ್ದಾನೆ.

    ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರ ಮತ್ತು ಬೆಂಗಳೂರು ಗ್ರಾಮಾಂತರ ಎಎಸ್‌ಪಿ ನಾಗೇಶ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಅತ್ತಿಬೆಲೆ ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಕೇರಳ | ಮಹಿಳೆ, ಅವಳಿ ಮಕ್ಕಳ ಕೊಲೆ ಕೇಸ್ – 19 ವರ್ಷಗಳ ಬಳಿಕ ಇಬ್ಬರು ಮಾಜಿ ಸೈನಿಕರು ಅರೆಸ್ಟ್!

  • ಬೊಮ್ಮಸಂದ್ರದಲ್ಲಿ ಭಾರೀ ಅಗ್ನಿ ಅವಘಡ – ಹೊತ್ತಿ ಉರಿದ ಬಟ್ಟೆ ಕಾರ್ಖಾನೆ

    ಬೊಮ್ಮಸಂದ್ರದಲ್ಲಿ ಭಾರೀ ಅಗ್ನಿ ಅವಘಡ – ಹೊತ್ತಿ ಉರಿದ ಬಟ್ಟೆ ಕಾರ್ಖಾನೆ

    ಆನೇಕಲ್: ಇಲ್ಲಿನ ಬೊಮ್ಮಸಂದ್ರದಲ್ಲಿ (Bommasandra) ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಬಟ್ಟೆ ಕಾರ್ಖಾನೆ ಹೊತ್ತಿ ಉರಿದಿದೆ.ಇದನ್ನೂ ಓದಿ: ಹೊಸ ವರ್ಷಕ್ಕೆ ಶಾಕ್‌ – ಜ.5 ರಿಂದ ಬಸ್‌ ಪ್ರಯಾಣ ದರ ಏರಿಕೆ

    ಅಗ್ನಿ ದುರಂತದ (Fire Accident) ಹಿನ್ನೆಲೆ ಇಡೀ ಕೈಗಾರಿಕಾ ಪ್ರದೇಶ ಹೊಗೆಯಿಂದ ಆವರಿಸಿದ್ದು, ಅಕ್ಕಪಕ್ಕದಲ್ಲಿಯೂ ಬೆಂಕಿ ಆವರಿಸುತ್ತಿದೆ. ಹೀಗಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

    ಕಾರ್ಖಾನೆಯಲ್ಲಿ ಬೆಂಕಿ ಆವರಿಸಿರುವ ಪರಿಣಾಮ ಒಳಗೆ ಇರುವ ಯಂತ್ರಗಳು ಸ್ಫೋಟಗೊಳ್ಳುತ್ತಿವೆ. ಕಾರ್ಖಾನೆಯೊಳಗೆ ಯಾರಾದರೂ ಕಾರ್ಮಿಕರು ಇದ್ದಾರಾ ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ಜೊತೆಗೆ ಸುತ್ತಮುತ್ತಲಿರುವ ಕಂಪನಿಗಳಿಗೆ ಹಾಗೂ ಹೋಟೆಲ್‌ಗಳಿಗೆ ಆತಂಕ ಸೃಷ್ಟಿಯಾಗಿದೆ.ಇದನ್ನೂ ಓದಿ: ಸೈಬರ್‌ ಕ್ರೈಂ ಪೇದೆಗೆ ಹನಿಟ್ರ್ಯಾಪ್‌ – ಪತ್ನಿ ಆತ್ಮಹತ್ಯೆಗೆ ಯತ್ನ

     

  • ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು, ಮತ್ತೊಬ್ಬನ ಕಾಲು ಕಟ್

    ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು, ಮತ್ತೊಬ್ಬನ ಕಾಲು ಕಟ್

    ಆನೇಕಲ್: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ (Two Bike Head-on collision) ವ್ಯಕ್ತಿ ಒಬ್ಬ ಸ್ಥಳದಲ್ಲಿ ಸಾವನ್ನಪ್ಪಿರುವಂತಹ ಘಟನೆ ಶನಿವಾರ ತಡರಾತ್ರಿ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಜಿಗಣಿ ಲಿಂಕ್ ರಸ್ತೆಯಲ್ಲಿ ನಡೆದಿದೆ.

    ಭದ್ರಾವತಿ ಮೂಲದ ಶಶಾಂಕ್ (20) ಮೃತ ಬೈಕ್ ಸವಾರನಾಗಿದ್ದು ರಿನಿತ್ (22) ಎಂಬ ವ್ಯಕ್ತಿಗೆ ಕಾಲು ಕಟ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಬೆಂಗಳೂರಿನ ಹೊಂಗಸಂದ್ರ ನಿವಾಸಿಯಾಗಿರುವ ರಿನಿತ್ ನಿನ್ನೆ ಕೆಲಸ ಮುಗಿಸಿ ವಾಪಸ್ ಆಗುತ್ತಿದ್ದಾಗ ಎಂಟಿಆರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಶಾಂಕ್ ಬೈಕ್ ನಲ್ಲಿ ಮುಖಾಮುಖಿ ಡಿಕ್ಕಿಯಾಗಿದ್ದಾರೆ. ಇದರಿಂದ ಶಶಾಂಕ್ ಸ್ಥಳದಲ್ಲೇ ಸಾವನ್ನಪ್ಪಿದ್ದು ರಿನಿತ್‌ಗೆ ಕಾಲು ಕಟ್ ಆಗಿದೆ. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಇನ್ನೆರಡು ದಿನ ಬಾಕಿ – ಬೆಂಗಳೂರಲ್ಲಿ ಸಿದ್ಧತೆ ಹೇಗಿದೆ?

    ಸದ್ಯ ರಿನೀತ್ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌ಇದನ್ನೂ ಓದಿ: ಕ್ರೀಡೆಗೆ ರಾಜಕಾರಣಿಗಳು ಅಪಾಯಕಾರಿ, ಕ್ರಿಕೆಟ್ ಆಟವನ್ನ ರಾಜಕಾರಣಿಗಳಿಂದ ದೂರವಿಡಿ – ಡಿಕೆಶಿ