Tag: anekal

  • ಯುಗಾದಿಯಂದೇ ರೌಡಿಶೀಟರ್ ಬರ್ಬರ ಹತ್ಯೆ – ರೌಡಿಸಂ ಬಿಟ್ಟು ಊರು ಸೇರಿದ್ದ ನೇಪಾಳಿ ಮಂಜ!

    ಯುಗಾದಿಯಂದೇ ರೌಡಿಶೀಟರ್ ಬರ್ಬರ ಹತ್ಯೆ – ರೌಡಿಸಂ ಬಿಟ್ಟು ಊರು ಸೇರಿದ್ದ ನೇಪಾಳಿ ಮಂಜ!

    ಆನೇಕಲ್: ಬೆಂಗಳೂರು (Bengaluru) ಹೊರವಲಯ ಆನೇಕಲ್ (Anekal) ತಾಲೂಕಿನ ಗೊಲ್ಲಹಳ್ಳಿ ಬಳಿ ಯುಗಾದಿ (Ugadi) ಹಬ್ಬದ ದಿನವೇ ರೌಡಿಶೀಟರ್ ಒಬ್ಬನ ಬರ್ಬರ ಹತ್ಯೆಯಾಗಿದೆ.

    ಹತ್ಯೆಯಾದ ರೌಡಿಶೀಟರ್‌ನನ್ನು ಮಂಜ ಅಲಿಯಾಸ್ ನೇಪಾಳಿ ಮಂಜ ಎಂದು ಗುರುತಿಸಲಾಗಿದೆ. ಹಬ್ಬದ ದಿನ ಎಣ್ಣೆ ಪಾರ್ಟಿಗೆ ಹೋಗಿದ್ದ ವೇಳೆ, ಎರಡು ಬೈಕ್‍ನಲ್ಲಿ ಬಂದ ಹಂತಕರ ಪಡೆ ಕ್ಷಣಮಾತ್ರದಲ್ಲಿ ಆತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದೆ. ಲಾಂಗು ಮಚ್ಚುಗಳಿಂದ ತಲೆ, ಹೊಟ್ಟೆ, ಎದೆ ಕೈಗಳು ಹೀಗೆ ಸಿಕ್ಕ ಸಿಕ್ಕ ಕಡೆ ಹಲ್ಲೆ ನಡೆಸಿ ದುಷ್ಕರ್ಮಿಗಳು ಕೊಲೆಗೈದಿದ್ದಾರೆ. ಹಳೇ ದ್ವೇಷದ ಹಿನ್ನೆಲೆ ಹೆಬ್ಬಗೋಡಿ ರೌಡಿಶೀಟರ್ ಜಗ್ಗ ಅಲಿಯಾಸ್ ಜಗದೀಶ್ ಮತ್ತವನ ಗ್ಯಾಂಗ್ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಹಾಸನ | ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿ – ಮಹಿಳೆ ಸಾವು, ಮೂವರಿಗೆ ಗಾಯ

    ಕೊಲೆಯಾದ ನೇಪಾಳಿ ಮಂಜ ರೌಡಿಸಂ ಸಹವಾಸ ಬೇಡ ಎಂದು ಇತ್ತೀಚೆಗೆ ಕುಟುಂಬ ಸಮೇತ ದೂರದ ಕುಣಿಗಲ್‍ಗೆ ಶಿಫ್ಟ್ ಆಗಿದ್ದ. ಯುಗಾದಿ ಹಬ್ಬ ಹಿನ್ನೆಲೆ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡಲು ಊರಿಗೆ ಬಂದಿದ್ದು, ರಾತ್ರಿ 10:45 ರ ಸುಮಾರಿಗೆ ಕೊಲೆ ನಡೆದಿದೆ. ಪರಿಚಿತರಿಂದಲೇ ಕೊಲೆಯಾಗಿರುವ ಶಂಕೆ ಇದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬಾ ತಿಳಿಸಿದ್ದಾರೆ.

    ಎರಡು ಕೊಲೆ ಸೇರಿದಂತೆ ಕೊಲೆ ಯತ್ನ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಮೃತ ನೇಪಾಳಿ ಮಂಜ ಪ್ರಮುಖ ಆರೋಪಿಯಾಗಿದ್ದ. ಎರಡು ಬಾರಿ ಗೂಂಡಾ ಕಾಯ್ದೆ ಅಡಿ ಆತನನ್ನು ಬಂಧಿಸಲಾಗಿತ್ತು. ಕಳೆದ ಚುನಾವಣೆ ವೇಳೆ ಗಡಿಪಾರು ಕೂಡ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ, ಶ್ವಾನದಳ, ಸೋಕೋ ಟೀಮ್ ಭೇಟಿ ನೀಡಿದೆ. ಈಗಾಗಲೇ ಆರೋಪಿಗಳ ಸುಳಿವು ಸಿಕ್ಕಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದ ಮುನ್ನಾ ದಿನ ಹಾಸ್ಟೆಲ್‌ನ 5ನೇ ಮಹಡಿಯಿಂದ ಹಾರಿ IIIT ವಿದ್ಯಾರ್ಥಿ ಆತ್ಮಹತ್ಯೆ

  • ಪತ್ನಿ ತುಂಡರಿಸಿ ಸೂಟ್‍ಕೇಸ್‍ಗೆ ತುಂಬಿ, ಪುಣೆಯಲ್ಲಿ ವಿಷ ಸೇವಿಸಿದ್ದ ಹಂತಕ!

    ಪತ್ನಿ ತುಂಡರಿಸಿ ಸೂಟ್‍ಕೇಸ್‍ಗೆ ತುಂಬಿ, ಪುಣೆಯಲ್ಲಿ ವಿಷ ಸೇವಿಸಿದ್ದ ಹಂತಕ!

    ಮುಂಬೈ: ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ನಿಯನ್ನು ತುಂಡು ಮಾಡಿ ಸೂಟ್‍ಕೇಸ್‍ಗೆ ತುಂಬಿದ್ದ ಆರೋಪಿ ರಾಕೇಶ್ ಬಂಧನವಾಗಿದ್ದು, ಆತ ವಿಷ ಸೇವಿಸಿದ್ದಾನೆ ಎಂದು ತಿಳಿದು ಬಂದಿದೆ.

    ಆರೋಪಿ ರಾಕೇಶ್ ವಿಷ ಕುಡಿದು ಪುಣೆಯ ಶಿರ್ವಾಲ್ ಪೊಲೀಸ್ ಠಾಣೆ ಬಳಿ ಅಸ್ವಸ್ಥನಾಗಿ ಬಿದ್ದಿದ್ದ. ಬಳಿಕ ಪೊಲೀಸರು ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇದರಿಂದಾಗಿ ಆರೋಪಿಯನ್ನ ಇಂದು (ಶುಕ್ರವಾರ) ಬೆಂಗಳೂರಿಗೆ ಕರೆದುಕೊಂಡು ಬರುವುದು ಅನುಮಾನವಾಗಿದೆ. ಪುಣೆ ಪೊಲೀಸರು ಆರೋಪಿಯ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಆನೇಕಲ್‌ | ಪತ್ನಿ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದ ಟೆಕ್ಕಿ ಪತಿ – ಮಹಾರಾಷ್ಟ್ರದಲ್ಲಿ ಹಂತಕ ಅರೆಸ್ಟ್

    ಬುಧವಾರ ರಾತ್ರಿ ಕೆಲಸದ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಈ ವೇಳೆ ಪತಿ ಮೇಲೆ ಹತ್ಯೆಯಾದ ಗೌರಿ ಚಾಕು ಎಸೆದಿದ್ದಳು. ಅದೇ ಚಾಕುವಿನಿಂದ ಪತ್ನಿಯ ಹತ್ಯೆ ಮಾಡಿ ಹೊಟ್ಟೆ, ಕತ್ತು ಕತ್ತರಿಸಿ ಸೂಟ್ ಕೇಸ್‍ಗೆ ತುಂಬಿದ್ದ. ಕೂಡಲೇ ಪತ್ನಿಯ ಮೊಬೈಲ್ ಸ್ವಿಚ್ ಆಫ್ ಮಾಡಿ, ಮನೆಯಲ್ಲಿ ಊಟ ಮಾಡಿದ್ದ. ಬಳಿಕ ರಾತ್ರಿ 11 ಗಂಟೆಗೆ ಕಾರಿನಲ್ಲಿ ಮೃತದೇಹ ಸಾಗಿಸುವ ಪ್ಲ್ಯಾನ್ ಮಾಡಿದ್ದ. ಆದರೆ ಅದು ಸಕ್ಸಸ್ ಆಗೋದಿಲ್ಲ. ಬಳಿಕ ಬಾತ್ ರೂಮ್‍ನಲ್ಲಿ ಮೃತದೇಹ ಇಟ್ಟು ರಾಕೇಶ್ ಪರಾರಿಯಾಗಿದ್ದ. ಇದನ್ನೂ ಓದಿ: ಆನೇಕಲ್‌| ಪತ್ನಿ ದೇಹ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ ಪಾಪಿ ಪತಿ

    ಹತ್ಯೆಯಾದ 16 ಗಂಟೆಗಳ ಬಳಿಕ ಆರೋಪಿಯೇ ಪಕ್ಕದ ಮನೆಯ ಬಾಡಿಗೆದಾರನಿಗೆ ಕರೆ ಮಾಡಿ, ವಿಚಾರ ಹೇಳಿದ್ದ. ನಂತರ ಮೃತಳ ಕುಟುಂಬಸ್ಥರಿಗೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದ. ಬಳಿಕ ಮನೆಯ ಮಾಲೀಕರಿಗೆ ಮಾಹಿತಿ ದೊರೆತಿದ್ದು, ಪೊಲೀಸರಿಗೆ ಮಾಹಿತಿ ನಿಡಲಾಗಿತ್ತು.

    ರಾಕೇಶ್ ಹತ್ಯೆ ಮಾಡಿ ಪರಾರಿಯಾಗಿದ್ದ ಬಗ್ಗೆ ಸಿಡಿಆರ್ ಆಧರಿಸಿ ಹುಳಿಮಾವು ಪೊಲೀಸರು ಪುಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿ ಪತ್ತೆಯಾದ ವಿಚಾರ ತಿಳಿಯುತ್ತಿದ್ದಂತೆ ಹುಳಿಮಾವು ಪೊಲೀಸರ ತಂಡ ಪುಣೆಗೆ ತೆರಳಿದೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ – ಗಂಡನ ಹಿಂಸೆ ತಾಳಲಾರದೆ ತವರು ಸೇರಿದ್ದ ಪತ್ನಿ

  • ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು ದುರಂತ – ಕೆಳಹಂತದ 4 ಅಧಿಕಾರಿಗಳು ಅಮಾನತು

    ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು ದುರಂತ – ಕೆಳಹಂತದ 4 ಅಧಿಕಾರಿಗಳು ಅಮಾನತು

    ಬೆಂಗಳೂರು: ರಾಜಧಾನಿಯಲ್ಲೇ ಅತಿ ದೊಡ್ಡ ಜಾತ್ರೆಯೆಂದು ಪ್ರಸಿದ್ಧಿ ಪಡೆದಿದ್ದ ಹುಸ್ಕೂರು ಮದ್ದೂರಮ್ಮ ಜಾತ್ರೆಯ (Huskur Madduramma Fair) ಕುರ್ಜು(ತೇರು) ನೆಲಕ್ಕೆ ಉರುಳಿ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿತ್ತು. ಘಟನೆಯ ಒಂದು ವಾರದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಕೆಳಹಂತದ 4 ಅಧಿಕಾರಿಗಳನ್ನು ಅಮಾನತು ಮಾಡಿದೆ.

    ಬೆಂಗಳೂರು ಹೊರವಲಯದ (Bengaluru Rural) ಆನೇಕಲ್ (Anekal) ತಾಲೂಕಿನ ಹುಸ್ಕೂರು ಜಾತ್ರೆ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಜಾತ್ರೆಯಾಗಿದೆ. ಸುತ್ತಮುತ್ತಲ ಊರುಗಳಿಂದ ಸುಮಾರು ಹತ್ತಕ್ಕೂ ಹೆಚ್ಚು ತೇರುಗಳನ್ನು ಎಳೆದು ತಂದು ಜಾತ್ರೆ ನಡೆಸುತ್ತಿದ್ದರು. ಮಾ. 22ರ ಶನಿವಾರದಂದು ರಾಯಸಂದ್ರ ಹಾಗೂ ದೊಡ್ಡ ನಾಗಮಂಗಲ ಕುರ್ಜುಗಳು ನೆಲಕ್ಕೆ ಉರುಳಿದ್ದವು. ಇದೇ ಸಮಯದಲ್ಲಿ ರಾಯಸಂದ್ರ ಕುರ್ಜಿನ ಕೆಳಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದು, 8ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿದ್ದರು. ಇದನ್ನೂ ಓದಿ: ಧರೆಗುರುಳಿದ ಮದ್ದೂರಮ್ಮ ಜಾತ್ರೆಯ ತೇರು – ಕುರ್ಜು ಕೆಳಗೆ ಸಿಲುಕಿ ಓರ್ವ ಸಾವು

    ಈ ವಿಚಾರವಾಗಿ ಆನೇಕಲ್‌ನ ತಾಲೂಕು ಆಡಳಿತ ಸಹ ಕಣ್ಣು ಮುಚ್ಚಿಕೊಂಡು ಕುಳಿತಿತ್ತು. ಇದೀಗ ಎಚ್ಚೆತ್ತುಕೊಂಡ ಜಿಲ್ಲಾಡಳಿತ 4 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. ಕೂಡಲೇ ಸಂಬಂಧಪಟ್ಟ ಇನ್ಸ್‌ಪೆಕ್ಟರ್‌, ಸಬ್ ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ಅವರಿಗೆ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ಧರೆಗುರುಳಿದ ಮದ್ದೂರಮ್ಮ ಜಾತ್ರೆಯ ತೇರು – ಗಾಯಗೊಂಡಿದ್ದ ಯುವತಿ ಸಾವು

    ತೇರು 80 ಅಡಿಗೂ ಮೀರಿ ಕಟ್ಟಬಾರದು ಎಂದು ಆದೇಶವಿದ್ದರೂ ಸಹ 150 ಅಡಿಗೂ ಎತ್ತರದ ತೇರು ನಿರ್ಮಿಸಿ ಎಳೆದು ತರಲಾಗಿತ್ತು. ಈ ಅವಘಡದಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎಂದ ಜಿಲ್ಲಾಧಿಕಾರಿಗಳು ಕಂದಾಯ ಅಧಿಕಾರಿಗಳಾದ ಆರ್.ಐ.ಪ್ರಶಾಂತ್ ಹಾಗೂ ಗ್ರಾಮ ಆಡಳಿತ ಅಧಿಕಾರಿ ಕಾರ್ತಿಕ್‌ರನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಕೆನಡಾ ಚುನಾವಣೆ| ಮೋದಿಯನ್ನು ಭೇಟಿಯಾಗಿದ್ದಕ್ಕೆ ಚಂದ್ರ ಆರ್ಯಗೆ ಟಿಕೆಟ್‌ ಮಿಸ್‌

    ಆನೇಕಲ್ ಶಾಸಕರು, ಸಂಸದರು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಸ್ಥಳೀಯರ ಒಳ ಪ್ರತಿಷ್ಠೆಯಿಂದ ಇದೀಗ ಎರಡು ಜೀವಗಳು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ 8 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಆನೇಕಲ್‌| ಪತ್ನಿ ದೇಹ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ ಪಾಪಿ ಪತಿ

    ಆನೇಕಲ್‌| ಪತ್ನಿ ದೇಹ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ ಪಾಪಿ ಪತಿ

    ಬೆಂಗಳೂರು ಗ್ರಾಮಾಂತರ: ಪತ್ನಿ ದೇಹ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿ ಪತಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹುಳಿಮಾವು ಸಮೀಪದ ದೊಡ್ಡ ಕಮ್ಮನಹಳ್ಳಿಯಲ್ಲಿ ನಡೆದಿದೆ.

    ಮಹಾರಾಷ್ಟ್ರ ಮೂಲದ ರಾಕೇಶ್ ಕೃತ್ಯ ಎಸಗಿರುವ ಆರೋಪಿ. ಗೌರಿ ಅನಿಲ್ ಸಾಂಬೆಕರ್ ಮೃತ ಪತ್ನಿ. ಮಹಾರಾಷ್ಟ್ರದಲ್ಲಿರುವ ಪತ್ನಿ ಪೋಷಕರಿಗೆ ಪೋನ್ ಕರೆ ಮಾಡಿ ಆರೋಪಿ ರಾಕೇಶ್‌ ಸಾವಿನ ಸುದ್ದಿ ತಿಳಿಸಿದ್ದಾನೆ.

    ಪ್ರಕರಣ ಸಂಬಂಧ ಮಹಾರಾಷ್ಟ್ರ ಪೊಲೀಸರಿಂದ ಹುಳಿಮಾವು ಪೋಲಿಸರಿಗೆ ಮಾಹಿತಿ ಸಿಕ್ಕಿದೆ. ಮಾಹಿತಿ ಆಧರಿಸಿ ಹುಳಿಮಾವು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿದ್ದಾರೆ.

    ಖಾಸಗಿ ಕಂಪನಿಯಲ್ಲಿ ದಂಪತಿ ಕೆಲಸ ಮಾಡಿಕೊಂಡಿದ್ದರು. ವರ್ಕ್ ಫ್ರಂ ಹೋಂ ಹಿನ್ನೆಲೆ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ದೊಡ್ಡಕಮ್ಮನಹಳ್ಳಿ ಮನೆಗೆ ಬಂದು ವಾಸವಿದ್ದರು. ಪತ್ನಿಯನ್ನು ಕೊಲೆ ಮಾಡಿ ನಂತರ ಸ್ನೇಹಿತನಿಗೆ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿ ಹೇಳಿದ್ದ.

    ಪತಿ ರಾಕೇಶ್ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಹುಳಿಮಾವು ಪೊಲೀಸರಿಂದ ರಾಕೇಶ್‌ಗಾಗಿ ಹುಡುಕಾಟ ನಡೆದಿದೆ.

  • ಧರೆಗುರುಳಿದ ಮದ್ದೂರಮ್ಮ ಜಾತ್ರೆಯ ತೇರು – ಗಾಯಗೊಂಡಿದ್ದ ಯುವತಿ ಸಾವು

    ಧರೆಗುರುಳಿದ ಮದ್ದೂರಮ್ಮ ಜಾತ್ರೆಯ ತೇರು – ಗಾಯಗೊಂಡಿದ್ದ ಯುವತಿ ಸಾವು

    ಆನೇಕಲ್‌: ಬೆಂಗಳೂರು ಗ್ರಾಮಾಂತರದ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ (Madduramma Jathre) ಕುರ್ಜುಗಳು (ತೇರು) ಧರೆಗುರುಳಿದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಇಂದು ಸಾವನ್ನಪ್ಪಿದ್ದಾರೆ.

    ಕುರ್ಜು ಕೆಳಗೆ ಸಿಲುಕಿ ನಿನ್ನೆ 28ರ ಯುವಕ ಲೋಹಿತ್‌ ದಾರುಣ ಸಾವನ್ನಪ್ಪಿದ್ದರು, ಇಂದು ಜ್ಯೋತಿ ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೊಬ್ಬ ಯುವಕ ರಾಕೇಶ್‌ ಸದ್ಯ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಜಾತ್ರೆಗೆ ಗ್ರಾಮಗಳಿಂದ 150ಕ್ಕೂ ಹೆಚ್ಚು ಅಡಿ ಎತ್ತರದ ಕುರ್ಜುಗಳು ಆಗಮಿಸಿದ್ದವು. ತೇರು ಎಳೆದು ತರುವ ಸಂದರ್ಭದಲ್ಲಿ ಶನಿವಾರ ಅವಘಡ ಸಂಭವಿಸಿತ್ತು. ಇದನ್ನೂ ಓದಿ: ಅಲಹಾಬಾದ್ ಹೈಕೋರ್ಟ್ ಕಸದ ಬುಟ್ಟಿನಾ? – ನ್ಯಾ.ಯಶವಂತ್ ವರ್ಮಾ ವರ್ಗಾಯಿಸಿದ್ದಕ್ಕೆ ಬಾರ್ ಕೌನ್ಸಿಲ್ ಗರಂ

    ಮದ್ದೂರಮ್ಮ ಜಾತ್ರೆಗೆ 200 ವರ್ಷಗಳ ಇತಿಹಾಸವಿದೆ. ಟ್ರ್ಯಾಕ್ಟರ್ ಹಾಗೂ ನೂರಾರು ಎತ್ತುಗಳ‌‌ ಮೂಲಕ ಎಳೆದು ತರುವ ಹೆಸರಾಂತ ಜಾತ್ರೆ‌ ಇದು. ಪ್ರತಿಷ್ಟೆಗೆ ಅತೀ ಎತ್ತರ ತೇರು ಕಟ್ಟಿ ಎಳೆದು ತರುವ ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸುತ್ತಿದ್ದರು. ಗಾಳಿ ಸಹಿತ ಮಳೆಯಿಂದಾಗಿ ಆಯತಪ್ಪಿ ತೇರು ಬಿದ್ದಿದೆ.

    ತೇರಿನಲ್ಲಿ ಇದ್ದ ಹಲವರಿಗೆ ಗಾಯಗಳಾಗಿವೆ. ಕಳೆದ ವರ್ಷ ಹೀಲಲಿಗೆ ತೇರು ಬಿದ್ದಿತ್ತು. ಇಂದು ಗಾಳಿ‌ ಮಳೆ ಹೆಚ್ಚಾಗಿ‌ ಸುರಿದ ಹಿನ್ನೆಲೆ ಅವಘಡ ಸಂಭವಿಸಿದೆ. ಜಾತ್ರೆಮಯ ಸಂಭ್ರಮದ ದಿನ ಸೂತಕದ ಛಾಯೆ ಆವರಿಸಿದೆ. ಇದನ್ನೂ ಓದಿ: ಜಡ್ಜ್ ಮನೆಯಲ್ಲಿ ಹಣ ಸಿಕ್ಕಿಲ್ಲ ಎಂದು ಹೇಳೇ ಇಲ್ಲ, ನನ್ನ ಹೆಸರು ಯಾಕೆ ಉಲ್ಲೇಖಿಸಿದ್ದಾರೆ ಗೊತ್ತಿಲ್ಲ ಎಂದ ಅಗ್ನಿಶಾಮಕ ದಳದ ಮುಖ್ಯಸ್ಥ

  • ಧರೆಗುರುಳಿದ ಮದ್ದೂರಮ್ಮ ಜಾತ್ರೆಯ ತೇರು – ಕುರ್ಜು ಕೆಳಗೆ ಸಿಲುಕಿ ಓರ್ವ ಸಾವು

    ಧರೆಗುರುಳಿದ ಮದ್ದೂರಮ್ಮ ಜಾತ್ರೆಯ ತೇರು – ಕುರ್ಜು ಕೆಳಗೆ ಸಿಲುಕಿ ಓರ್ವ ಸಾವು

    – 150 ಅಡಿಗೂ ಹೆಚ್ಚು ಎತ್ತರವಿದ್ದ ತೇರು

    ಬೆಂಗಳೂರು ಗ್ರಾಮಾಂತರ: ಮದ್ದೂರಮ್ಮ ಜಾತ್ರೆಯಲ್ಲಿ ಕುರ್ಜುಗಳು (ತೇರು) ಧರೆಗುರುಳಿದ ಘಟನೆ ಆನೇಕಲ್‌ ತಾಲೂಕಿನಲ್ಲಿ ನಡೆದಿದೆ. ಕುರ್ಜು ಕೆಳಗೆ ಸಿಲುಕಿ ಓರ್ವ ದಾರುಣ ಸಾವನ್ನಪ್ಪಿದ್ದಾರೆ.

    ಆನೇಕಲ್ ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯಲ್ಲಿ ಈ ದುರ್ಘಟನೆ ನಡೆದಿದೆ. ಜಾತ್ರೆಗೆ ಗ್ರಾಮಗಳಿಂದ 150 ಕ್ಕೂ ಹೆಚ್ಚು ಅಡಿ ಎತ್ತರದ ಕುರ್ಜುಗಳು ಆಗಮಿಸಿದ್ದವು. ತೇರು ಎಳೆದು ತರುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ.

    ಮದ್ದೂರಮ್ಮ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಟ್ರ್ಯಾಕ್ಟರ್ ಹಾಗೂ ನೂರಾರು ಎತ್ತುಗಳ‌‌ ಮೂಲಕ ಎಳೆದು ತರುವ ಹೆಸರಾಂತ ಜಾತ್ರೆ‌ ಇದು. ಪ್ರತಿಷ್ಟೆಗೆ ಅತೀ ಎತ್ತರ ತೇರು ಕಟ್ಟಿ ಎಳೆದು ತರುವ ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸುತ್ತಿದ್ದರು. ಗಾಳಿ ಸಹಿತ ಮಳೆಯಿಂದಾಗಿ ಆಯತಪ್ಪಿ ತೇರು ಬಿದ್ದಿದೆ.

    ತೇರಿನಲ್ಲಿ ಇದ್ದ ಹಲವರಿಗೆ ಗಾಯಗಳಾಗಿವೆ. ಕಳೆದ ವರ್ಷ ಹೀಲಲಿಗೆ ತೇರು ಬಿದ್ದಿತ್ತು. ಇಂದು ಗಾಳಿ‌ ಮಳೆ ಹೆಚ್ಚಾಗಿ‌ ಸುರಿದ ಹಿನ್ನೆಲೆ ಅವಘಡ ಸಂಭವಿಸಿದೆ. ಜಾತ್ರೆಮಯ ಸಂಭ್ರಮದ ದಿನ ಸೂತಕದ ಛಾಯೆ ಆವರಿಸಿದೆ.

  • ಅನೈತಿಕ ಸಂಬಂಧ ಶಂಕೆ; ಮೊದಲನೇ ಪತ್ನಿ ಕೊಂದ ಪತಿ

    ಅನೈತಿಕ ಸಂಬಂಧ ಶಂಕೆ; ಮೊದಲನೇ ಪತ್ನಿ ಕೊಂದ ಪತಿ

    – ಇಬ್ಬರು ಹುಡುಗಿಯರನ್ನು ಪ್ರೀತಿಸಿ ಒಂದೇ ಬಾರಿ ಮದುವೆಯಾಗಿದ್ದ ಆರೋಪಿ

    ಬೆಂಗಳೂರು: ಇಬ್ಬರು ಹುಡುಗಿಯರನ್ನು ಪ್ರೀತಿಸಿ ಒಪ್ಪಿಸಿ ಮದುವೆಯಾಗಿದ್ದ. ಮೊದಲ ಹೆಂಡತಿಗೆ ಅನೈತಿಕ ಸಂಬಂಧ ಶಂಕೆ ವಿಚಾರವಾಗಿ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿದೆ.

    ಆನೇಕಲ್ ತಾಲೂಕಿನ ರಾಚಮಾರನ ಹಳ್ಳಿ ಗ್ರಾಮದ ನಿವಾಸಿ ಬಾಬು, ಕಳೆದ 9 ವರ್ಷಗಳ ಹಿಂದೆ ಇಬ್ಬರು ಹುಡುಗಿಯರನ್ನು ಪ್ರೀತಿಸಿ ಇಬ್ಬರಿಗೂ ಒಂದೇ ಮಂಟಪದಲ್ಲಿ ತಾಳಿ ಕಟ್ಟಿದ್ದ. ಮೊದಲ ಪತ್ನಿಗೆ ಎರಡು ಮಕ್ಕಳು ಹಾಗೂ ಎರಡನೇ ಪತ್ನಿಗೂ ಎರಡು ಮಕ್ಕಳು ಇದ್ದರು. ಮೊದಲನೇ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆ ಮೇಲೆ ಆಗಾಗ ಜಗಳವಾಗುತ್ತಿತ್ತು. ಕಳೆದ ಭಾನುವಾರವೂ ಇದೇ ರೀತಿ ಜಗಳವಾಗಿದ್ದು, ಈ ವೇಳೆ ಹೆಂಡತಿಗೆ ಬಾಬು ಹೊಡೆದಿದ್ದಾನೆ. ಅನಂತರ ಸೋಮವಾರ ಬೆಳಗ್ಗೆ ಆಕೆಯನ್ನು ಎಬ್ಬಿಸಿ ಆಕೆಗೆ ಅಂಬಲಿ ಕುಡಿಸಿ ಮಲಗಿಸಿದ್ದಾನೆ. ಅವನ ಹೊಡೆತದ ನೋವು ತಡೆದುಕೊಳ್ಳಲಾಗದೆ ನಿನ್ನೆ ಸಾವನ್ನಪ್ಪಿದ್ದಾಳೆ.

    ರಾತ್ರಿ ಇಡೀ ಆಕೆಯ ಮೃತದೇಹದ ಜೊತೆ ಕಾಲ ಕಳೆದ ಗಂಡ ಇಂದು ಪೊಲೀಸರಿಗೆ ಶರಣಾಗಿದ್ದಾನೆ. ಮೃತ ಮಹಿಳೆ ಮೂಲತಃ ಮೈಸೂರಿನವಳಾಗಿದ್ದು, 9 ವರ್ಷದ ಹಿಂದೆ ಬಾಬುವನ್ನು ಪ್ರೀತಿಸಿ ಮದುವೆಯಾಗಿದ್ದಳು. ಅಲ್ಲದೇ, ಇದೇ ಜ.25 ರಂದು ಆಕೆ ಬೇರೊಬ್ಬರೊಂದಿಗೆ ಓಡಿ ಹೋಗಿದ್ದಳು. ಅನಂತರ ಮಾ.3 ರಂದು ಪೊಲೀಸರು ಆಕೆಯ ಜೊತೆ ಮಾತನಾಡಿ ಮತ್ತೆ ವಾಪಸ್ ಕರೆತರಲಾಗಿತ್ತು ಎಂಬ ಮಾಹಿತಿ ಸಹ ಲಭ್ಯವಾಗಿದೆ. ವಾಪಸ್ ಬಂದಾಗಿನಿಂದ ಗಂಡ ಹೆಂಡ್ತಿ ನಡುವೆ ಆಗಾಗ ಸಣ್ಣ ಸಣ್ಣ ಜಗಳಗಳು ನಡೆಯುತ್ತಿತ್ತು ಎಂಬುದು ಕುಟುಂಬಸ್ಥರ ಮಾತಾಗಿದೆ.

    ಅತ್ತಿಬೆಲೆ ಪೊಲೀಸರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆನೇಕಲ್ ಉಪ ವಿಭಾಗ ಡಿವೈಎಸ್ಪಿ ಮೋಹನ್ ಹಾಗೂ ಅಡಿಷನಲ್ ಎಸ್‌ಪಿ ನಾಗೇಶ್ ಕುಮಾರ್ ಸಹ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಕ್ಸ್ಫರ್ಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

  • ಕಸಕ್ಕೆ ಹಚ್ಚಿದ ಬೆಂಕಿ ಕೆನ್ನಾಲಿಗೆಗೆ ಕಾರು ಸುಟ್ಟು ಭಸ್ಮ

    ಕಸಕ್ಕೆ ಹಚ್ಚಿದ ಬೆಂಕಿ ಕೆನ್ನಾಲಿಗೆಗೆ ಕಾರು ಸುಟ್ಟು ಭಸ್ಮ

    ಆನೇಕಲ್: ಕಸಕ್ಕೆ ಹಚ್ಚಿದ ಬೆಂಕಿಯಿಂದಾಗಿ ಪಕ್ಕದಲ್ಲಿದ್ದ ಕಾರಿಗೆ ಕಿಡಿ ತಗುಲಿ, ಸಂಪೂರ್ಣ ಕರಕಲಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ (Anekal) ತಾಲೂಕಿನ ಚಂದಾಪುರದಲ್ಲಿ (Chandapura) ನಡೆದಿದೆ.

    ವಿಘ್ನೇಶ್ ಎಂಬವರಿಗೆ ಸೇರಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.ಇದನ್ನೂ ಓದಿ: ಬಿಸಿಸಿಐ, ದುಬೈ ಕಾನ್ಸುಲೇಟ್‌ನಿಂದ ಸಮುದಾಯ ಜಾಗೃತಿ ಕಾರ್ಯಕ್ರಮ: ಕಾನ್ಸುಲ್ ಜನರಲ್ ಸತೀಶ್ ಶಿವನ್ ಸಲಹೆ

    ವಿಘ್ನೇಶ್ ಹಾಗೂ ಗೌರಿಶಂಕರ್ ಇಬ್ಬರು ಗೆಳೆಯರು. ಶನಿವಾರ ಬೆಳಗ್ಗೆ ಗೌರಿಶಂಕರ್ ಇದೇ ಕಾರಿನಲ್ಲಿ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು. ಬಳಿಕ ಗೌರಿಶಂಕರ್ ತಮ್ಮ ಸ್ನೇಹಿತರೊಂದಿಗೆ ಸುತ್ತಾಡಿ, ರಾತ್ರಿ 12 ಗಂಟೆ ಸುಮಾರಿಗೆ ಚಂದಾಪುರದ ಕೀರ್ತಿ ಲೇಔಟ್ ಸಮೀಪದಲ್ಲಿ ಸ್ನೇಹಿತನೊಬ್ಬನ ಪಿಜಿ ಬಳಿ ಕಾರು ನಿಲ್ಲಿಸಿದ್ದರು.

    ನಸುಕಿನ ಜಾವ 3 ಗಂಟೆ ವೇಳೆಗೆ ಕಾರಿನ ಪಕ್ಕದಲ್ಲಿದ್ದ ಕಸದ ರಾಶಿಗೆ ಯಾರೋ ಬೆಂಕಿ ಹಚ್ಚಿದ್ದಾರೆ. ಇದರಿಂದ ಬೆಂಕಿಯ ಕಿಡಿ ಪಕ್ಕದಲ್ಲಿದ್ದ ಕಾರಿಗೆ ವ್ಯಾಪಿಸಿ, ಕಾರು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಸುಟ್ಟುಹೋದ ಕಾರಿನ ಪಕ್ಕದಲ್ಲಿ ಮತ್ತೊಂದು ಕಾರು, ದ್ವಿಚಕ್ರ ವಾಹನವಿದ್ದು, ಅದೃಷ್ಟವಶಾತ್ ಯಾವುದೇ ವಾಹನಗಳಿಗೆ ಹಾನಿಯಾಗಿಲ್ಲ. ಸದ್ಯ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ರೇಸ್‌ ವೇಳೆ ಮತ್ತೊಂದು ಕಾರಿಗೆ ಡಿಕ್ಕಿ – ಎರಡು ಪಲ್ಟಿಯಾಗಿ ನಿಂತ ನಟ ಅಜಿತ್‌ ಕಾರು

     

  • ಇಬ್ಬರು ಯುವಕರ ಅನುಮಾನಾಸ್ಪದ ಸಾವು – ಡ್ರಗ್ಸ್‌ ಓವರ್ ಡೋಸ್‌ ಶಂಕೆ

    ಇಬ್ಬರು ಯುವಕರ ಅನುಮಾನಾಸ್ಪದ ಸಾವು – ಡ್ರಗ್ಸ್‌ ಓವರ್ ಡೋಸ್‌ ಶಂಕೆ

    ಬೆಂಗಳೂರು: ನಗರದ (Bengaluru) ಹೊರವಲಯ ಆನೇಕಲ್‍ನಲ್ಲಿ (Anekal) ಇಬ್ಬರು ಯುವಕರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಡ್ರಗ್ಸ್‌ ಓವರ್ ಡೋಸ್‌ನಿಂದ ಮೃತಪಟ್ಟಿರುವ ಅನುಮಾನ ವ್ಯಕ್ತವಾಗಿದೆ.

    ಮೃತರನ್ನು ಸೂರ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಯಾರಂಡಹಳ್ಳಿ ಸಮೀಪ ವಾಸವಿದ್ದ ಅಸ್ಸಾಂ ಮೂಲದ ದಿವಾನ್ ಅಫ್ರೀದಿ ಅಲಿ ಹಾಗೂ ಅಶ್ರಫ್ ಅಲಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕಾರು ಹತ್ತುವಾಗ ಎಡವಿದ ಡಿಸಿಎಂ ಡಿಕೆಶಿ

    ಯಾರಂಡಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರು ವಾಸವಿದ್ದರು. ಇಬ್ಬರು ಸಿರಿಂಜ್ ಮೂಲಕ ಡ್ರಗ್ಸ್ ಇಂಜೆಕ್ಟ್‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಓರ್ವ ಮಲಗಿದ್ದಲ್ಲೇ ಕೊನೆಯುಸಿರೆಳೆದಿದ್ದರೆ, ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

    ಸ್ಥಳಕ್ಕೆ ಅಡಿಷನಲ್ ಎಸ್‍ಪಿ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬುದ್ಧಿವಾದ ಹೇಳಿದ್ದಕ್ಕೆ ಚಾಕು ಇರಿದು ತಂದೆಯನ್ನೇ ಕೊಲೆಗೈದ ಮಗ