Tag: anekal

  • ಬೆಂಗಳೂರು: ಬಿಜೆಪಿ ಮುಖಂಡನನ್ನು ಬರ್ಬರವಾಗಿ ಕೊಚ್ಚಿ ಕೊಂದ ದುಷ್ಕರ್ಮಿಗಳು

    ಬೆಂಗಳೂರು: ಬಿಜೆಪಿ ಮುಖಂಡನನ್ನು ಬರ್ಬರವಾಗಿ ಕೊಚ್ಚಿ ಕೊಂದ ದುಷ್ಕರ್ಮಿಗಳು

    ಬೆಂಗಳೂರು: ಬಿಜೆಪಿ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರೋ ಘಟನೆ ಹೊಸೂರು ಮುಖ್ಯ ರಸ್ತೆಯ ಬಿಟಿಎಲ್ ಕಾಲೇಜು ಮುಂಭಾಗದಲ್ಲಿ ನಡೆದಿದೆ.

    35 ವರ್ಷದ ವಾಸು ಕೊಲೆಯಾದ ಬಿಜೆಪಿ ಮುಖಂಡ. ಇಂದು ಬೆಳಗಿನ ಜಾವ ಸುಮಾರು 5 ಗಂಟೆ ವೇಳೆಯಲ್ಲಿ ಈ ಘಟನೆ ನಡೆದಿದೆ. ವಾಸು ಬೊಮ್ಮಸಂದ್ರ ಪುರಸಭೆಯ ಬಿಜೆಪಿಯ ಸದಸ್ಯರಾಗಿದ್ದರು. ರಾಜಕೀಯ ವೈಷಮ್ಯದಿಂದ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

    ವಾಸು ಬೊಮ್ಮಸಂದ್ರ ಪುರಸಭೆಯ ಅಧ್ಯಕ್ಷ ಸ್ಥಾನದ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದರು. ಇನ್ನು ವಾಸು ರಾಜಕೀಯವಾಗಿ ಬೆಳಯತೊಡಗಿದ್ದು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಪತ್ನಿಯನ್ನು ಗೆಲ್ಲಿಸಿದ್ದರು. ವಾಸು ರಾಜಕೀಯವಾಗಿ ಪ್ರಬಲ ಮುಖಂಡರಾಗಿ ಗುರುತಿಸಿಕೊಂಡಿದ್ದರು.

    ಇಂದು ಬೆಳಗಿನ ಜಾವ ವಾಸು ಅವರಿಗೆ ಒಂದು ಫೋನ್ ಕಾಲ್ ಬಂದಿತ್ತು. ಕಾಲ್ ಬಂದ ನಂತರ ತಮ್ಮ ಇನ್ನೋವಾ ಕಾರು ತೆಗೆದುಕೊಂಡು ಬಿಟಿಎಲ್ ಕಾಲೇಜು ಮುಂಭಾಗದ ಪಾರ್ಕಿಂಗ್ ಜಾಗದಲ್ಲಿ ನಿಂತಿದ್ದಾಗ ಕೊಲೆ ನಡೆದಿದೆ.

    ಸ್ಥಳಕ್ಕೆ ಬೆಂಗಳೂರು ಗ್ರಾಮಂತರ ಎಸ್‍ಪಿ ಅಮಿತ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇತ್ತ ವಾಸು ಸಾವಿನ ಸುದ್ದಿ ತಿಳಿದ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಆಗಮಿಸುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

     

  • ನಾಲ್ಕು ಕಾಲಿನ ಮಗುವಿನ ಆಪರೇಷನ್ ಸಕ್ಸಸ್ – ವೈದ್ಯಲೋಕದ ಅಚ್ಚರಿ ಮೆಟ್ಟಿನಿಂತ ನಾರಾಯಣ ಡಾಕ್ಟರ್ಸ್

    – ವೈದ್ಯರಿಗೆ ಹೆತ್ತವರ ಕೃತಜ್ಞತೆ

    ಬೆಂಗಳೂರು: ವೈದ್ಯಲೋಕಕ್ಕೆ ಅಚ್ಚರಿ ಎಂಬಂತೆ ಕಳೆದ ತಿಂಗಳ 21ರಂದು ರಾಯಚೂರಿನಲ್ಲಿ ಜನಿಸಿದ್ದ ನಾಲ್ಕು ಕಾಲಿನ ಮಗುವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಬೆಂಗಳೂರಿನ ನಾರಾಯಣ ಹೆಲ್ತ್‍ಸಿಟಿ ವೈದ್ಯರು ಯಶಸ್ವಿಯಾಗಿದ್ದಾರೆ. ರಾಯಚೂರಿನ ಪುಲದಿನ್ನಿ ಗ್ರಾಮದ ಲಲಿತಾ-ಚೆನ್ನಬಸಪ್ಪ ದಂಪತಿಗೆ ಈ ಮಗು ಜನಿಸಿದ್ದು ಕಳೆದ ತಿಂಗಳ 24 ರಂದು ನಾರಾಯಣ ಹೆಲ್ತ್‍ಸಿಟಿಗೆ ದಾಖಲಿಸಲಾಗಿತ್ತು.

    ಪ್ರಕರಣವನ್ನ ವೈದ್ಯರಾದ ಡಾ. ಜೋಸೆಪ್ ಹಾಗೂ ಡಾ. ಅಕ್ರೂನ್ ಡಿ ಕ್ರೂಸ್ ಸವಾಲಾಗಿ ಸ್ವೀಕರಿಸಿದ್ರು. ಹೊಟ್ಟೆ ಭಾಗದ ಮೇಲೆ ಬೆಳೆದಿದ್ದ ಹೆಚ್ಚುವರಿ 2 ಕಾಲನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದಿದ್ದು ಮಗು ಆರೋಗ್ಯವಾಗಿದೆ. ಶಸ್ತ್ರ ಚಿಕಿತ್ಸೆಯ ಮಗುವಿನ ಹೊಟ್ಟೆಯ ಮೇಲೆ ಸ್ವಲ್ಪ ಗಾಯದ ಕಲೆಯಿದ್ದು, ಸದ್ಯ ಮಗು ಐಸಿಯುವಿನಲ್ಲಿದೆ. ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಪೋಷಕರಿಗೆ ನೀಡಲಾಗುವುದು ಅಂತ ಹಿರಿಯ ವೈದ್ಯ ಡಾ. ಸಂಜಯ್ ರಾವ್ ಹೇಳಿದ್ದಾರೆ.

    ಇನ್ನು, ಲಲಿತಾ-ಚನ್ನಬಸಪ್ಪ ದಂಪತಿ ಮೊಗದಲ್ಲಿ ಸಂತಸ ಮೂಡಿದ್ದು, ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹುಟ್ಟುತ್ತಲೇ ನಾಲ್ಕು ಕಾಲುಗಳ ಹೊಂದಿ ವಿಚಿತ್ರವಾಗಿದ್ದ ಗಂಡು ಮಗು ಇನ್ನು ಮುಂದೆ ಎಲ್ಲರಂತೆ ಬದುಕಲಿದೆ.