Tag: anekal

  • 11 ವರ್ಷದ ಬಾಲಕಿಯ ಮೇಲೆ 65ರ ವೃದ್ಧನಿಂದ ಅತ್ಯಾಚಾರಕ್ಕೆ ಯತ್ನ

    11 ವರ್ಷದ ಬಾಲಕಿಯ ಮೇಲೆ 65ರ ವೃದ್ಧನಿಂದ ಅತ್ಯಾಚಾರಕ್ಕೆ ಯತ್ನ

    ಬೆಂಗಳೂರು: 11 ವರ್ಷದ ಬಾಲಕಿಯ ಮೇಲೆ 65 ವರ್ಷದ ವೃದ್ಧನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನವೀಯ ಘಟನೆ ನಗರದ ಹೊರವಲಯದ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    65 ವರ್ಷದ ನಾಗಪ್ಪ ಎಂಬಾತನೇ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ ವೃದ್ಧ. ಎರಡು ದಿನಗಳ ಹಿಂದೆ ನಾಗಪ್ಪ ತನ್ನ ಪಕ್ಕದ ಮನೆಯ ಬಾಲಕಿಗೆ ಇಟ್ಟಿಗೆಗಳನ್ನು ಎತ್ತಲು ಸಹಾಯ ಮಾಡುವಂತೆ ನಟಿಸಿ ಶೌಚಾಲಯದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಈ ವೇಳೆ ಭಯಬೀತಳಾದ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಕೂಡಲೇ ನೆರೆಹೊರೆಯವರು ಬಾಲಕಿಯನ್ನು ರಕ್ಷಿಸಿದ್ದಾರೆ. ಗ್ರಾಮದಲ್ಲಿ 2 ದಿನಗಳ ಕಾಲ ರಾಜಿ-ಪಂಚಾಯ್ತಿ ನಡೆಸಲಾಗಿದೆ. ಪಂಚಾಯ್ತಿ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಬಾಲಕಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ನಾಗಪ್ಪನ ವಿರುದ್ಧ ದೂರು ದಾಖಲಿಸಿದ್ದಾರೆ.

    ಇದೀಗ ಪೊಲೀಸರು ಆರೋಪಿ ನಾಗಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಾಗಪ್ಪನ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ನಾಗಪ್ಪನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

  • ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಮರ ಬಿದ್ದು ಕಾಲು ಮುರಿತ!

    ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಮರ ಬಿದ್ದು ಕಾಲು ಮುರಿತ!

    ಬೆಂಗಳೂರು: ಇಡೀ ಶಾಲಾ ಮಕ್ಕಳು 71ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ತಲ್ಲಿನರಾಗಿದ್ದರು. ಇದೇ ವೇಳೆ ಮರದ ಕೆಳಗೆ ಆಟವಾಡುತ್ತಿದ್ದಾಗ ಇದ್ದಕ್ಕಿದಂತೆ ಮರ ಬೀಳುವ ಶಬ್ದ ಕೇಳಿಸಿದೆ. ಕೂಡಲೇ ವಿದ್ಯಾರ್ಥಿಗಳು ಓಡಿದ್ದರೂ, ನಾಲ್ವರು ಮಕ್ಕಳು ಮರದಡಿ ಸಿಲುಕಿದ ದಾರುಣ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ಹೊಸೂರು ಮುಖ್ಯರಸ್ತೆಯ ಬೇರೆಟೇನ ಅಗ್ರಹಾರದ ಸರ್ಕಾರಿ ಶಾಲಾ ಆವರಣದಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಿಂದ ಈ ವೇಳೆ ಲಕ್ಷ್ಮೀಕಾಂತ್ ಮತ್ತು ರಾಕೇಶ್ ಎಂಬ ಇಬ್ಬರು ವಿದ್ಯಾರ್ಥಿಗಳ ಕಾಲು ಮುರಿದಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸ್ಮಾರಕ ಶಾಲೆಯಲ್ಲಿ ಇಂದು ಬೆಳಗ್ಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಸಿದ್ಧತೆ ನಡೆಸುತ್ತಿದ್ದ ವೇಳೆ ಶಾಲಾ ಆವರಣದಲ್ಲಿನ ಮರ ಉರುಳಿ ವಿದ್ಯಾರ್ಥಿಗಳ ಮೇಲೆ ಬಿದ್ದಿದೆ. ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳು ಸಹೋದರರಾಗಿದ್ದಾರೆ. ವಿಷಯ ತಿಳಿದು ಶಾಸಕ ಎಂ. ಕೃಷ್ಣಪ್ಪ, ಸ್ಥಳೀಯ ಪಾಲಿಕೆ ಸದಸ್ಯ ಶಾಂತಬಾಬು ಮತ್ತು ಮಾಜಿ ಪಾಲಿಕೆ ಸದಸ್ಯೆ ಶ್ರೀನಿವಾಸರೆಡ್ಡಿ, ಬೆಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧೀಕಾರಿ ರಮೇಶ್ ಆಸ್ಪತ್ರೆಗೆ ಭೇಟಿ ನೀಡಿ ಶಸ್ತ್ರ ಚಿಕಿತ್ಸೆಗೆ ಬೇಕಾದ ನೆರವು ನೀಡುವ ಭರವಸೆ ನೀಡಿದ್ದಾರೆ. ಈ ನಡುವೆ ಸ್ಥಳೀಯ ಜನಪ್ರತಿನಿಧಿಗಳು ಸಹೋದರರ ನೆರೆವಿಗೆ ಆಗಮಿಸಿದ್ದಾರೆ.

     

  • ಕೆಲಸಕ್ಕೆ ತೆರಳುವಾಗ ಖಾಸಗಿ ಬಸ್ ತಲೆ ಮೇಲೆ ಹರಿದು ಬೈಕ್ ಸವಾರ ಸಾವು

    ಕೆಲಸಕ್ಕೆ ತೆರಳುವಾಗ ಖಾಸಗಿ ಬಸ್ ತಲೆ ಮೇಲೆ ಹರಿದು ಬೈಕ್ ಸವಾರ ಸಾವು

    ಬೆಂಗಳೂರು: ಕೆಲಸಕ್ಕೆ ತೆರಳುತ್ತಿದ್ದ ಬೈಕ್ ಸವಾರನಿಗೆ ಹಿಂದಿನಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವಿನಪ್ಪಿರುವ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ಆನೇಕಲ್ ನ ಹೆಬ್ಬಗೋಡಿಯ ಹೊಸೂರು ಮುಖ್ಯರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಬೈಕ್ ಸವಾರನನ್ನು ರಾಮಮೂರ್ತಿ ನಗರದ ನಿವಾಸಿ ವಿಜಯ್ ಬಾಬು(35) ಎಂದು ಗುರುತಿಸಲಾಗಿದೆ.

    ವಿಜಯ್ ಬೊಮ್ಮಸಂದ್ರದ ಖಾಸಗಿ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇಂದು ಬೆಳಿಗ್ಗೆ ಕಾರ್ಖಾನೆಗೆ ಬೈಕ್ ನಲ್ಲಿ ಕೆಲಸಕ್ಕೆ ತೆರಳುವಾಗ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಆಯತಪ್ಪಿ ವಿಜಯ್ ಕೆಳಗೆ ಬಿದ್ದಿದ್ದಾರೆ. ಈ ವೇಳೇ ಬಸ್ ನ ಚಕ್ರ ವಿಜಯ್ ತಲೆ ಮೇಲೆ ಹರಿದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳದಲ್ಲಿದ್ದವರು ವಿಜಯ್ ಅವರನ್ನ ಆಸ್ಪತ್ರೆಗೆ ಕೊಂಡೊಯ್ದರಾದ್ರೂ ವಿಜಯ್ ಬದುಕುಳಿಯಲಿಲ್ಲ.

    ಘಟನೆ ಬಳಿಕ ಬಸ್ ಚಾಲಕ ಪರಾರಿಯಾಗಿದ್ದಾನೆ. ಹೆಬ್ಬಗೊಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸ್ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.

     

  • ನೇಣು ಬಿಗಿದುಕೊಂಡು ತಾಯಿ-ಮಗಳು ಆತ್ಮಹತ್ಯೆ

    ನೇಣು ಬಿಗಿದುಕೊಂಡು ತಾಯಿ-ಮಗಳು ಆತ್ಮಹತ್ಯೆ

    ಬೆಂಗಳೂರು: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿ ಮಗಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಸಿಂಧೂ (34), ದೀಪ್ತಿ (17) ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗಳು. ಆನೇಕಲ್ ತಾಲೂಕಿನ ಅತ್ತಿಬೆಲೆ ಗ್ರಾಮದ ಕುಮಾರ್ ಲೇಔಟ್ ನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ.

    ಸಿಂಧೂ ಗಂಡ ರಾಜಶೇಖರ ರೆಡ್ಡಿ ದಕ್ಷಿಣ ಆಫ್ರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಎರಡು ಮೂರು ತಿಂಗಳಿಗೊಮ್ಮೆ ರಾಜಶೇಖರ್ ರೆಡ್ಡಿ ಊರಿಗೆ ಬಂದು ಹೆಂಡತಿ ಹಾಗೂ ಮಗಳನ್ನು ನೋಡಿಕೊಂಡು ಹೋಗುತ್ತಿದ್ದರು. ಇದರಿಂದ ಸಿಂಧೂ ಖಿನ್ನತೆಗೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

    ಆರು ತಿಂಗಳ ಹಿಂದೆಯಷ್ಟೇ ಅತ್ತಿಬೆಲೆಯ ಕುಮಾರ್ ಲೇಔಟ್ ಗೆ ಶಿಫ್ಟ್ ಆಗಿದ್ದ ತಾಯಿ ಮಗಳು ಗುರುವಾರ ರಾತ್ರಿ ಮನೆಯ ಸೀಲಿಂಗ್ ನಲ್ಲಿದ್ದ ಕಬ್ಬಿಣದ ಹುಕ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿಂಧೂ ತಾಯಿ ಶಾಂತಮ್ಮ ಸಿಂಧೂ ಮೊಬೈಲ್ ಗೆ ಕರೆ ಮಾಡಿದರೂ ಸ್ವಿಕರಿಸದಿದ್ದರಿಂದ ಅನುಮಾನಗೊಂಡು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸದ್ಯ ತಾಯಿ-ಮಗಳ ಶವಗಳನ್ನು ನಗರದ ವಿಕ್ಟೋರಿಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಾರ್ಟಿ ವೇಳೆ ಕಿರಿಕ್ ಮಾಡಿದ್ದಕ್ಕೆ ಚಾಕು ಇರಿದು ಕೊಂದೇ ಬಿಟ್ಟ

    ಪಾರ್ಟಿ ವೇಳೆ ಕಿರಿಕ್ ಮಾಡಿದ್ದಕ್ಕೆ ಚಾಕು ಇರಿದು ಕೊಂದೇ ಬಿಟ್ಟ

    ಬೆಂಗಳೂರು: ಪಾರ್ಟಿ ಮಾಡುವಾಗ ಕಿರಿಕ್ ಮಾಡಿದ್ದಕ್ಕೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಅನೇಕಲ್ ತಾಲೂಕಿನ ತಟ್ನಹಳ್ಳಿಯ ಕೆರೆಯ ಬಳಿ ಬುಧವಾರ ರಾತ್ರಿ ನಡೆದಿದೆ.

    ಮನೋಜ್ ಕೊಲೆಯಾದ ಯುವಕ

    ಅನೇಕಲ್ ತಾಲೂಕಿನ ಅವಡದೆನಹಳ್ಳಿಯ 24 ವರ್ಷದ ಮನೋಜ್ ಕೊಲೆಯಾದ ಯುವಕ. ಯಶವಂತ್ ಎಂಬಾತನ ಚಾಕು ಇರಿದ ಆರೋಪಿ. ಯಶವಂತ್ ಮತ್ತು ಮನೋಜ್ ನಡುವೆ ಈ ಹಿಂದೆಯೂ ಗಲಾಟೆಗಳು ನಡೆದಿದ್ದವು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರೂ ಜಗಳ ಮಾಡಿಕೊಂಡಿದ್ದು ಪರಸ್ಪರ ಒಬ್ಬರಿಗೊಬ್ಬರು ಚಾಕು ಇರಿದುಕೊಂಡಿದ್ದಾರೆ.

    ಯಶವಂತ್

    ಕೆರೆ ಬಳಿ ನಡೆದಿದ್ದೇನು?: ಯಶಂವಂತ್ ತನ್ನ ಸ್ನೇಹಿತರೊಂದಿಗೆ ಕೆರೆಯಲ್ಲಿ ಪಾರ್ಟಿ ಮಾಡುವ ವೇಳೆ ಮನೋಜ್ ಹಾಗೂ ಆತನ ಕೆಲ ಸ್ನೇಹಿತರು ಕೆರೆಗೆ ಬಂದು ಕಿರಿಕ್ ಮಾಡಿದ್ದಾರೆ. ಈ ವೇಳೆ ಇಬ್ಬರ ಜಗಳ ತಾರಕಕ್ಕೇರಿದ್ದು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಈ ವೇಳೆ ಮನೋಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇನ್ನೂ ಗಲಾಟೆಯಲ್ಲಿ ಗಾಯಗೊಂಡ ಯಶವಂತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸಾವನ್ನಪ್ಪಿರುವ ಮನೋಜ್ ಈ ಹಿಂದೆ ಯಶವಂತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜೈಲು ಸೇರಿದ್ದನು. ಇತ್ತೀಚಿಗಷ್ಟೇ ಜಾಮೀನು ಪಡೆದಕೊಂಡು ಜೈಲಿನಿಂದ ಹೊರ ಬಂದಿದ್ದನು. ಮನೋಜ್ ಆನೇಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಿಕೊಂಡಿದ್ದನು ಎಂದು ಹೇಳಲಾಗುತ್ತಿದೆ.

    ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

     

  • ಬನ್ನೇರುಘಟ್ಟದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಆನೆ ದಾಳಿಗೆ ವ್ಯಕ್ತಿ ಬಲಿ!

    ಬನ್ನೇರುಘಟ್ಟದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಆನೆ ದಾಳಿಗೆ ವ್ಯಕ್ತಿ ಬಲಿ!

    ಬೆಂಗಳೂರು: ಆನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ವ್ಯಕ್ತಿಯೋರ್ವ ಆನೆ ದಾಳಿಗೆ ಬಲಿಯಾಗಿರುವ ದಾರುಣ ಘಟನೆ ಬನ್ನೇರುಘಟ್ಟ ಸಫಾರಿಯ ಸೀಗೆಕಟ್ಟೆಯಲ್ಲಿ ನಡೆದಿದೆ.

    ಮಂಗಳವಾರ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಗೆ ರಜೆ ಇದ್ದು, ಸೂಕ್ತ ಭದ್ರತೆ ಇಲ್ಲದ ಕಾರಣ ಬೆಂಗಳೂರಿನ ಗಿರಿನಗರ ನಿವಾಸಿ ಅಭಿಲಾಷ್ ನಿನ್ನೆ ಸಂಜೆ ಸ್ನೇಹಿತರ ಜೊತೆ ಬನ್ನೇರುಘಟ್ಟಕ್ಕೆ ಹಕ್ಕಿಪಿಕ್ಕಿ ಕಾಲೋನಿ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ಸಫಾರಿಯೊಳಕ್ಕೆ ಪ್ರವೇಶಿಸಿದ್ದಾರೆ.

    ಅಭಿಲಾಷ್ ಗೆ ಆನೆಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅಭ್ಯಾಸವಿದೆ. ಈ ಹಿಂದೆ ಮದಗಜಗಳಾದ ರೌಡಿ ರಂಗ ಮತ್ತು ಐರಾವತನನ್ನು ಪಳಗಿಸಲು ಕ್ರಾಲ್ ನಲ್ಲಿ ಇಟ್ಟಿದ್ದಾಗಲೂ ಬಂದು ಸೆಲ್ಫಿ ತೆಗೆದುಕೊಂಡು ಹೋಗಿದ್ದರಂತೆ. ಆದರೆ ಈ ಬಾರಿ ರಜೆಯ ದಿನ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಬಂದು ಸಫಾರಿಯಲ್ಲಿದ್ದ ಸುಂದರ ಎಂಬ ಆನೆ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಆನೆ ದಾಳಿ ಮಾಡಿದೆ. ಈ ವೇಳೆ ತಪ್ಪಿಸಿಕೊಳ್ಳಲಾಗದೇ ಅಭಿಲಾಷ್ ಸ್ಥಳದಲ್ಲೆ ಬಲಿಯಾಗಿದ್ದಾರೆ ಎನ್ನಲಾಗಿದೆ.

    ಹಕ್ಕಿಪಿಕ್ಕಿ ಕಾಲೋನಿಯಿಂದ ಆನೆಗಳಿದ್ದ ಸ್ಥಳಕ್ಕೆ 4 ಕಿಲೋ ಮೀಟರ್ ನಡೆದೇ ಬರಬೇಕು. ಇಷ್ಟು ದೂರದವರೆಗೆ ಭದ್ರತಾ ಸಿಬ್ಬಂದಿ ಇರಲಿಲ್ಲವೇ? ಇಲ್ಲವೇ ಭದ್ರತಾ ಸಿಬ್ಬಂದಿಯೇ ಒಳಗೆ ಬಿಟ್ಟರೇ? ಎಂಬ ಅನುಮಾನಗಳು ಮೂಡುತ್ತಿವೆ. ಅಭಿಲಾಷ್ ಜೊತೆ ಇನ್ನೂ ಮೂವರು ಸ್ನೇಹಿತರಿದ್ದರೆಂದು ಕೆಲವರು ಹೇಳುತ್ತಾರೆ. ಅವರೆಲ್ಲಾ ಎಲ್ಲಿಗೆ ಹೋದರು? ಯಾಕೆ ಈ ವಿಷಯ ಪೊಲೀಸರ ಗಮನಕ್ಕಾಗಲೀ ಅಥವಾ ಅಭಿಲಾಷ್ ಮನೆಯವರಿಗು ವಿಷಯ ತಿಳಿಸದೇ ಪರಾರಿಯಾಗಿದ್ದಾರೆಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

    ಘಟನೆಯ ವಿಷಯ ತಿಳಿದ ಪಾರ್ಕ್ ನ ಅಧಿಕಾರಿಗಳು ಸೀಗೆಕಟ್ಟೆ ಪೊಲೀಸರಿಗೆ ವಿಷಯ ತಿಳಿಸಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದರು. ನಂತರ ವಿಷಯ ತಿಳಿದು ಬಂದ ಅಭಿಲಾಷ್ ನ ಸಂಬಂಧಿಕರು ಇಂದು ಬೆಳಗ್ಗೆ ಹಕ್ಕಿಪಿಕ್ಕಿ ಕಾಲೋನಿ ಬಳಿಯಿದ್ದ ಅಭಿಲಾಷ್ ನ ದ್ವಿಚಕ್ರ ವಾಹನ ಗುರುತಿಸಿದ್ದಾರೆ. ಬಳಿಕ ಪಾರ್ಕ್ ನ ಅಧಿಕಾರಿಗಳ ಭದ್ರತಾ ಲೋಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹಲವು ಅನುಮಾನಗಳ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ವಿಡಿಯೋ: ಎಲ್ಲರೆದುರೇ ಮಹಿಳೆಯಿಂದ ವಕೀಲನಿಗೆ ಚಪ್ಪಲಿಯಲ್ಲಿ ಹೊಡೆತ

    ವಿಡಿಯೋ: ಎಲ್ಲರೆದುರೇ ಮಹಿಳೆಯಿಂದ ವಕೀಲನಿಗೆ ಚಪ್ಪಲಿಯಲ್ಲಿ ಹೊಡೆತ

    ಬೆಂಗಳೂರು: ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ ವಕೀಲನಿಗೆ ಮಹಿಳೆ ಚಪ್ಪಲಿಯಿಂದ ಹೊಡೆದ ಘಟನೆ ಬೆಂಗಳೂರು ಹೊರವಲಯದ ಹೊಸಕೋಟೆಯಲ್ಲಿ ನಡೆದಿದೆ.

    ಜಯಮಾಲಾ ತನ್ನ ಸಂಬಂಧಿಯೊಬ್ಬರ ಕೇಸನ್ನು ಕೋರ್ಟ್ ನಲ್ಲಿ ವಾದಿಸುವಂತೆ ವಕೀಲ ರಾಮಾಂಜಿನಪ್ಪಗೆ ಹಣ ನೀಡಿದ್ರು. ಆದ್ರೆ ಈ ಕೇಸಿನ ಸಂಬಂಧ ವಿರೋಧಿ ಬಳಿಯೂ ಹಣ ಪಡೆದಿದ್ದ ವಿಚಾರ ತಿಳಿದು ಜಯಮಾಲಾ ಇಂದು ವಕೀಲ ರಾಮಾಂಜಿನಪ್ಪಾ ಮನೆಗೆ ಬಳಿ ತೆರಳಿದ್ರು.

    ಈ ಸಂದರ್ಭದಲ್ಲಿ ರಾಮಾಂಜಿನಪ್ಪ ಜಯಮಾಲಾ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಜಯಮಾಲಾ ಸಾರ್ವಜನಿಕವಾಗಿ ವಕೀಲನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.  ಈ ಘಟನೆಯನ್ನು ಸ್ಥಳದಲ್ಲಿದ್ದವರೊಬ್ಬರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಈ ಘಟನೆ ಸಂಬಂಧ ತಿರುಮಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಾಯಾಳು ಜಯಮಾಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

    https://www.youtube.com/watch?v=4wak_8eztaM&feature=youtu.be

  • ಬೈಕ್‍ಗೆ ಲಾರಿ ಡಿಕ್ಕಿ- ಕೆಲಸಕ್ಕೆ ಹೋಗ್ತಿದ್ದ ಸವಾರ ಸ್ಥಳದಲ್ಲೇ ಸಾವು

    ಬೈಕ್‍ಗೆ ಲಾರಿ ಡಿಕ್ಕಿ- ಕೆಲಸಕ್ಕೆ ಹೋಗ್ತಿದ್ದ ಸವಾರ ಸ್ಥಳದಲ್ಲೇ ಸಾವು

    ಬೆಂಗಳೂರು: ಬೈಕ್‍ಗೆ ಲಾರಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ನಡೆದಿದೆ.

    ಮೃತರನ್ನು ವಿನಯ್ ಕುಮಾರ್ (36) ಎಂದು ಗುರುತಿಸಲಾಗಿದ್ದು, ಇವರು ಮೂಲತಃ ಹಾವೇರಿ ಜಿಲ್ಲೆಯವರು ಎಂದು ತಿಳಿದುಬಂದಿದೆ. ಅತ್ತಿಬೆಲೆಯಲ್ಲಿ ನೆಲೆಸಿದ್ದ ವಿನಯ್ ಕುಮಾರ್ ಬೈಕ್‍ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

    ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ನಿನ್ನೆ ಕೊಲೆ ಮಾಡಿದ್ದವನ ಕಾಲಿಗೆ ಇಂದು ಬಿತ್ತು ಗುಂಡೇಟು

    ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ನಿನ್ನೆ ಕೊಲೆ ಮಾಡಿದ್ದವನ ಕಾಲಿಗೆ ಇಂದು ಬಿತ್ತು ಗುಂಡೇಟು

    ಬೆಂಗಳೂರು: ಪೊಲೀಸರ ಮೇಲೆ ಅರೋಪಿ ಹಲ್ಲೆಗೆ ಯತ್ನಿಸಿದ್ದರಿಂದ ಅರೋಪಿ ಕಾಲಿಗೆ ಗುಂಡು ಹಾರಿಸಿರುವ ಘಟನೆ ಇಂದು ಮುಂಜಾನೆ ನಗರದ ಹೊರವಲಯ ಬನ್ನೇರುಘಟ್ಟ ಸಮೀಪದ ಸಕಲವಾರ ರಸ್ತೆಯ ಟಿಲಿಪ್ಸ್ ರೆಸಾರ್ಟ್ ಬಳಿ ಘಟನೆ ನಡೆದಿದೆ.

    ಮಂಜುನಾಥ್ ಪೊಲೀಸರಿಂದ ಗುಂಡೇಟು ತಿಂದ ಆರೋಪಿ. ಶನಿವಾರ ಹಾಡು ಹಗಲೇ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಸಮೀಪದ ತಿರುಮಲ ಪೆಟ್ರೋಲ್ ಬಂಕ್ ಬಳಿ ಚಿಂತಲ ಮಡಿವಾಳ ನಿವಾಸಿ 26 ವರ್ಷದ ಮುನಿರಾಜು ಎಂಬಾತನನ್ನು ಅದೇ ಗ್ರಾಮದ ನಿವಾಸಿ ಮಂಜುನಾಥ್ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು.

    ಇಂದು ಪೊಲೀಸರು ಮಂಜುನಾಥನನ್ನು ಹಿಡಿಯಲು ಮುಂದಾದ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದನು. ಈ ಸಂದರ್ಭದಲ್ಲಿ ಪೊಲೀಸರು ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ. ಇದೀಗ ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಒಂದೇ ತಿಂಗಳ ಅವಧಿಯಲ್ಲಿ ಪೊಲೀಸರಿಂದ ನಡೆದ 2 ನೇ ಶೂಟೌಟ್ ಇದಾಗಿದೆ. ಇದೇ 1ನೇ ತಾರೀಖು ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದ ಬಿಜೆಪಿಯ ಮುಖಂಡ ಹರೀಶ್‍ನನ್ನು ಕೊಲೆ ಮಾಡಿದ್ದ ರಾಜ ಅಲಿಯಾಸ್ ರಾಜೇಶ್‍ನನ್ನು ಶೂಟೌಟ್ ಮಾಡಿದ್ದ ಪೊಲೀಸರು ಇದೀಗ ಇಂದು ಮತ್ತೊಂದು ಪ್ರಕರಣ ಕೊಲೆ ಆರೋಪಿ ಮಂಜ ಅಲಿಯಾಸ್ ಮೆಂಟಲ್ ಮಂಜುನಾಥನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

     

  • ಬಿಜೆಪಿ ಮುಖಂಡನ ಹತ್ಯೆ- ಶರಣಾಗದ ಆರೋಪಿ ಕಾಲಿಗೆ ಗುಂಡಿಟ್ಟು ಬಂಧನ, ಆಸ್ಪತ್ರೆಗೆ ದಾಖಲು

    ಬಿಜೆಪಿ ಮುಖಂಡನ ಹತ್ಯೆ- ಶರಣಾಗದ ಆರೋಪಿ ಕಾಲಿಗೆ ಗುಂಡಿಟ್ಟು ಬಂಧನ, ಆಸ್ಪತ್ರೆಗೆ ದಾಖಲು

    ಬೆಂಗಳೂರು: ನಗರದ ಆನೇಕಲ್ ಬಿಜೆಪಿ ಮುಖಂಡ ಹರೀಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಾಜು ಅಲಿಯಾಸ್ ರಾಜೇಶ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಆನೇಕಲ್ ತಾಲೂಕು ಬಿಜೆಪಿಯ ಎಸ್‍ಸಿ-ಎಸ್‍ಟಿ ಘಟಕದ ಉಪಾಧ್ಯಕ್ಷ ಹರೀಶ್‍ರನ್ನು ಗುರುವಾರ ತಡರಾತ್ರಿ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿ 9.15ರ ಸುಮಾರಿನಲ್ಲಿ ರಾಜೇಶ್ ನನ್ನು ಪೊಲೀಸರು ಮುತ್ಯಾಲಮಡುವಿನ ಚೆಕ್ ಪೋಸ್ಟ್ ಬಳಿ ಸುತ್ತುವರಿದು ಶರಣಾಗತಿಯಾಗುವಂತೆ ಡಿವೈಎಸ್‍ಪಿ ಎಸ್‍ಕೆ ಉಮೇಶ್ ತಂಡ ಸೂಚಿಸಿತು. ಆದರೆ ರಾಜೇಶ್ ಶರಣಾಗತಿಗೆ ನಿರಾಕರಿಸಿ ಬಂಧಿಸಲು ಬಂದಿದ್ದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದ.

    ಪಿಎಸ್‍ಐ ಹೇಮಂತ್ ಕುತ್ತಿಗೆಗೆ ಚೈನ್ ಹಾಕಿ ಬಿಗಿಯತೊಡಗಿದ. ಇದರಿಂದ ಒಂದು ಕ್ಷಣ ಗಾಬರಿಯಾದ ಪೊಲೀಸರು ಮತ್ತೊಮ್ಮೆ ಶರಣಾಗುವಂತೆ ಎಚ್ಚರಿಸಿದ್ರು. ಯಾವುದಕ್ಕೂ ಬಗ್ಗದಿದ್ದಾಗ ಡಿವೈಎಸ್‍ಪಿ ಉಮೇಶ್ ಗಾಳಿಯಲ್ಲಿ ಗುಂಡು ಹಾರಿಸಿದರು. ಆಗಲೂ ಬಗ್ಗದಿದ್ದಾಗ ರಾಜೇಶ್ ನ ಬಲಗಾಲಿಗೆ ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ್ದಾರೆ.