Tag: anekal

  • ಸ್ವಚ್ಛತಾ ಆಂದೋಲನಕ್ಕೆ ನಟಿ ಶುಭ ಪೂಂಜಾ ಚಾಲನೆ

    ಸ್ವಚ್ಛತಾ ಆಂದೋಲನಕ್ಕೆ ನಟಿ ಶುಭ ಪೂಂಜಾ ಚಾಲನೆ

    ಬೆಂಗಳೂರು: ಕರ್ನಾಟಕ-ತಮಿಳುನಾಡಿನ ಗಡಿ ಅತ್ತಿಬೆಲೆಯಲ್ಲಿ ರಾಷ್ಟ್ರೀಯ ಸ್ವಚ್ಛತಾ ಆಂದೋಲನಕ್ಕೆ ಸ್ಯಾಂಡಲ್ ವುಡ್ ನಟಿ ಶುಭ ಪೂಂಜಾ ಇಂದು ಚಾಲನೆ ನೀಡಿದ್ದಾರೆ.

    ಸ್ವಚ್ಛತಾ ರಾಯಭಾರಿಯಾಗಿರೋ ನಟಿ ಅತ್ತಿಬೆಲೆ ಪೊಲೀಸರ ನೇತೃತ್ವದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ರು. ಬಳಿಕ ಅತ್ತಿಬೆಲೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ರು.

    ಅತ್ತಿಬೆಲೆ ಪುರಸಭೆ ಜಯಕರ್ನಾಟಕ ಸಂಘಟನೆ, ಅತ್ತಿಬೆಲೆ ಪೊಲೀಸ್ ಪುರಸಭೆ ಸದಸ್ಯರು ಹಾಗು ಶಾಲಾ ಮಕ್ಕಳು ಸ್ವಚ್ಛತಾ ಜಾಥಾದಲ್ಲಿ ಭಾಗಿಯಾಗಿದ್ದರು. ನಂತರ ನಟಿ ಶುಭ ಪೂಂಜಾರಿಂದ ಅತ್ತಿಬೆಲೆಯ ಪ್ರಮುಖ ಬೀದಿಗಳಲ್ಲಿ ಸ್ವಚ್ಛತಾ ಜಾಥಾ ನಡೆಸಲಾಯಿತು.

  • ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ- ಚಕ್ರದಡಿ ಸಿಲುಕಿ ಸವಾರ ದುರ್ಮರಣ

    ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ- ಚಕ್ರದಡಿ ಸಿಲುಕಿ ಸವಾರ ದುರ್ಮರಣ

    ಬೆಂಗಳೂರು: ಬೈಕ್‍ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಆನೇಕಲ್ ತಾಲೂಕಿನ ತಟ್ಟನಹಳ್ಳಿ ನಿವಾಸಿ ಮಂಜುನಾಥ್ (30) ಮೃತ ದುರ್ದೈವಿ. ಇವರು ಇಂದು ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.

    ಈ ಘಟನೆ ಹೊಸೂರು ಮುಖ್ಯರಸ್ತೆ ಹೊಸರೋಡ್ ಜಂಕ್ಷನ್ ನಲ್ಲಿ ನಡೆದಿದೆ. ತನ್ನ ಬೈಕಿಗೆ ಡಿಕ್ಕಿ ಹೊಡೆದ ರಭಸಕ್ಕೆ ಸವಾರ ಮಂಜುನಾಥ್ ಕೆಳಗೆ ಬಿದ್ದಿದ್ದು, ಅವರ ಮೇಲೆ ಟಿಪ್ಪರ್ ಹರಿದಿದೆ. ಘಟನೆ ನಡೆದ ಕೂಡಲೇ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದು, ಟಿಪ್ಪರ್ ಚಾಲಕ ಗಣೇಶನನ್ನ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

    ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಆನೇಕಲ್ ಬಳಿ 500, 2000 ರೂ. ಖೋಟಾ ನೋಟು ಮುದ್ರಿಸ್ತಿದ್ದವರನ್ನ ಬಂಧಿಸಿದ ಕೇರಳ ಪೊಲೀಸರು

    ಆನೇಕಲ್ ಬಳಿ 500, 2000 ರೂ. ಖೋಟಾ ನೋಟು ಮುದ್ರಿಸ್ತಿದ್ದವರನ್ನ ಬಂಧಿಸಿದ ಕೇರಳ ಪೊಲೀಸರು

    ಬೆಂಗಳೂರು: ನೋಟ್‍ಬ್ಯಾನ್ ಆಗಿ ಬುಧವಾರ ಒಂದು ವರ್ಷ ಪೂರೈಸುತ್ತಿರೋ ಹೊತ್ತಲ್ಲೇ ಆನೇಕಲ್ ಬಳಿ ಖೋಟಾನೋಟು ದಂಧೆ ನಡೆಸುತ್ತಿದ್ದ ವಿಚಾರ ಬಯಲಾಗಿದೆ. ಖೋಟಾ ನೋಟು ಮುದ್ರಿಸುತ್ತಿದ್ದ 3 ಆರೋಪಿಗಳನ್ನ ಕೇರಳ ಪೊಲೀಸರು ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ರಾಮಸಾಗರದಲ್ಲಿ ಬಂಧಿಸಿದ್ದಾರೆ.

    ಓಲ್ಡ್ ಜೋಸೆಫ್(30)ಖೋಟಾ ನೋಟು ಪ್ರಿಂಟ್ ಮಾಡುತಿದ್ದ. ಬಂಧಿತ ಆರೋಪಿಗಳು ಕೇರಳ ಮೂಲದವರಾಗಿದ್ದಾರೆ. ರಾಮಸಾಗರದ ನಾರಾಯಣ ರೆಡ್ಡಿ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಸೀರೆ ವ್ಯಾಪಾರ ಮಾಡುವುದಾಗಿ ಮನೆ ಬಾಡಿಗೆ ಪಡೆದಿದ್ದರು ಎಂದು ತಿಳಿದುಬಂದಿದೆ.

    ಬಂಧಿತರು ಹೊಸ 2000 ಸಾವಿರ ರೂ. ಹಾಗು 500 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿದ್ದರು. ಸದ್ಯ ಕೇರಳ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದು, ಸುಮಾರು 50 ಲಕ್ಷ ರೂ. ಖೋಟಾ ನೋಟು ಹಾಗು ಪ್ರಿಂಟಿಂಗ್ ಮಿಷೀನ್ ವಶಕ್ಕೆ ಪಡೆದಿದ್ದಾರೆ.

    ಆನೇಕಲ್ ತಾಲೂಕಿನ ಸೂರ್ಯ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಗ್ಯಾಸ್ ಗೀಸರ್‍ ನ ಸಿಲಿಂಡರ್ ಸ್ಫೋಟಗೊಂಡು ತಾಯಿ, ಮಗನಿಗೆ ಗಂಭೀರ ಗಾಯ

    ಗ್ಯಾಸ್ ಗೀಸರ್‍ ನ ಸಿಲಿಂಡರ್ ಸ್ಫೋಟಗೊಂಡು ತಾಯಿ, ಮಗನಿಗೆ ಗಂಭೀರ ಗಾಯ

    ಆನೇಕಲ್: ಗ್ಯಾಸ್ ಗೀಸರ್‍ ನ ಸಿಲಿಂಡರ್‍ನಿಂದ ಅನಿಲ ಸೋರಿಕೆಯಾದ ಪರಿಣಾಮ ಸಿಲಿಂಡರ್ ಸ್ಫೋಟಗೊಂಡು ತಾಯಿ ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ.

    ಆನೇಕಲ್ ಪಟ್ಟಣದ ಮರಿಯಪ್ಪ ಬಡಾವಣೆಯಲ್ಲಿ ಘಟನೆ ಸಂಭವಿಸಿದ್ದು, ಜಯಮ್ಮ(55) ಆಕೆಯ ಮಗ ಸತೀಶ್ (22) ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಮುಂಜಾನೆ ಸ್ನಾನಕ್ಕೆ ನೀರು ಕಾಯಿಸುವ ವೇಳೆ ಗ್ಯಾಸ್ ಆನ್ ಮಾಡಿದಾಗ ಸಿಲಿಂಡರ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಮನೆಯಲ್ಲಿನ ಕಿಟಕಿ ಗಾಜುಗಳು ಪುಡಿಪುಡಿಯಾಗಿದೆ ಹಾಗೂ ಮನೆಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.

    ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳಕ್ಕೆ ಆನೇಕಲ್ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬಾಟಲಿಯಿಂದ ಪತ್ನಿಯನ್ನು ಚುಚ್ಚಿ, ಕುತ್ತಿಗೆಯನ್ನು ಕಾಲಿನಿಂದ ತುಳಿದು ಕೊಂದ!

    ಬಾಟಲಿಯಿಂದ ಪತ್ನಿಯನ್ನು ಚುಚ್ಚಿ, ಕುತ್ತಿಗೆಯನ್ನು ಕಾಲಿನಿಂದ ತುಳಿದು ಕೊಂದ!

    ಅನೇಕಲ್: ಶೀಲ ಶಂಕಿಸಿದ ಪತಿರಾಯ ತನ್ನ ಪತ್ನಿಯನ್ನು ಬಾಟಲಿನಿಂದ ಚುಚ್ಚಿ, ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಅತ್ತಿಬೆಲೆ ಸಮೀಪದ ಮುತ್ಸಂದ್ರ ಗ್ರಾಮದಲ್ಲಿ ಕಲಾವತಿ (24) ಕೊಲೆಯಾದ ದುರ್ದೈವಿ. ಪತಿ ನಾಗೇಶ್ ತನ್ನ ಪತ್ನಿ ಶೀಲ ಶಂಕಿಸಿ ನಿತ್ಯ ಜಗಳವಾಡುತ್ತಿದ್ದು, ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಕುಡಿದು ಮನೆಗೆ ಬಂದು ಹೆಂಡತಿ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ನಾಗೇಶ್ ಮದ್ಯದ ಬಾಟಲಿಯಿಂದ ಪತ್ನಿಗೆ ಚುಚ್ಚಿ, ಕುತ್ತಿಗೆಯನ್ನು ಕಾಲಿನಿಂದ ತುಳಿದುಕೊಂಡು ಉಸಿರುಗಟ್ಟಿಸಿ ಸಾಯಿಸಿದ್ದಾನೆ.

    ಈ ಕೃತ್ಯ ನಡೆಸಿದ ನಂತರ ಪತಿ ನಾಗೇಶ್ ಅತ್ತಿಬೆಲೆ ಪೊಲೀಸ್ ಠಾಣೆಗೆ ಬಂದು ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಕಲಾವತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ. ತಾಯಿ ಕೊಲೆಯಾಗಿದ್ದು, ತಂದೆ ಜೈಲು ಪಾಲಾಗಿರುವುದರಿಂದ ಅಪ್ಪ ಅಮ್ಮ ಇಲ್ಲದೆ ತಬ್ಬಲಿಯಾಗಿವೆ.

  • ಬನ್ನೇರುಘಟ್ಟ ಝೂನಲ್ಲಿ ಮತ್ತೊಂದು ಅವಘಡ – ಬಿಳಿಹುಲಿ ಮರಿ ದಾಳಿಗೆ ಅನಿಮಲ್ ವಾಚರ್ ಬಲಿ

    ಬನ್ನೇರುಘಟ್ಟ ಝೂನಲ್ಲಿ ಮತ್ತೊಂದು ಅವಘಡ – ಬಿಳಿಹುಲಿ ಮರಿ ದಾಳಿಗೆ ಅನಿಮಲ್ ವಾಚರ್ ಬಲಿ

    ಬೆಂಗಳೂರು: ನಗರಕ್ಕೆ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಕಾಡು ಪ್ರಾಣಿಗಳ ಪ್ರವಾಸಿ ತಾಣವಾಗಿದ್ದು, ರಾಷ್ಟ್ರದಲ್ಲಿಯೆ ಪ್ರಖ್ಯಾತಿ ಗಳಿಸಿದೆ. ಆದರೆ ಕಳೆದ ಎರಡು ವರ್ಷಗಳಿಂದ ಇಲ್ಲಿನ ಅಧಿಕಾರಿಗಳ ಬೇಜವಬ್ದಾರಿ ತನದಿಂದಾಗಿ ಕಾಡುಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದು, ಇದೀಗ ಸಿಬ್ಬಂದಿಗಳು ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗುವಂತಾಗಿದೆ.

    ಬೆಂಗಳೂರಿನ ರಾಷ್ಟ್ರೀಯ ಉದ್ಯಾನವನ ಬನ್ನೇರುಘಟ್ಟದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. 7 ದಿನಗಳ ಹಿಂದಷ್ಟೇ ಅಸಿಸ್ಟೆಂಟ್ ಅನಿಮಲ್ ವಾಚರ್ ಆಗಿ ಕೆಲಸಕ್ಕೆ ಸೇರಿಕೊಂಡ 35 ವರ್ಷದ ಆಂಜನೇಯ ಹುಲಿಗಳ ದಾಳಿಗೆ ಬಲಿಯಾಗಿದ್ದಾರೆ.

    ನಿನ್ನೆ ಸಂಜೆ 5:30ರ ಸುಮಾರಿನಲ್ಲಿ ಎಂದಿನಂತೆ ಹುಲಿಗಳಿಗೆ ಆಹಾರ ನೀಡಿದ ನಂತರ ಹುಲಿಗಳನ್ನ ಕೇಜ್‍ನಲ್ಲಿ ಬಿಡಲು ಆಂಜನೇಯ ಹೋಗಿದ್ರು. ಈ ವೇಳೆ, 1 ವರ್ಷ ವಯಸ್ಸಿನ 2 ಹುಲಿ ಮರಿಗಳು ಆಂಜನೇಯ ಮೇಲೆ ದಾಳಿ ಮಾಡಿವೆ. ಇದರಿಂದ ಗಾಬರಿಗೊಂಡ ಆಂಜನೇಯ ಕೆಳಬಿದ್ದಿದ್ದಾರೆ. ಹುಲಿ ಮರಿಗಳ ದಾಳಿ ಬೆನ್ನಲ್ಲೇ ದೊಡ್ಡ ಹುಲಿಗಳು ದಾಳಿ ಮಾಡಿವೆ.

    ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಆಂಜನೇಯ ಮೃತಪಟ್ಟಿದ್ದಾರೆ. ಇನ್ನು ಪಾರ್ಕ್ ನಲ್ಲಿ ಪ್ರಾಣಿಗಳಿಗೆ ಆಹಾರ ನೀಡುವ ಸಂದರ್ಭದಲ್ಲಿ ನುರಿತ ಅನಿಮಲ್ ಕೀಪರ್ ಇರಬೇಕಿತ್ತು. ಆದರೆ ಆತ ಇರದೇ ಇದ್ದದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

    ಘಟನೆ ನಡೆದ ನಂತರ ಯಾವುದೇ ಮಾಧ್ಯಮದವರು ಒಳ ಹೋಗದಂತೆ ಬನ್ನೇರುಘಟ್ಟ ಪಾರ್ಕ್ ಡಿಎಫ್‍ಓ ಕುಶಾಲಪ್ಪ ಉದ್ಯಾನವನದ ಮುಖ್ಯ ಗೇಟ್‍ಗೆ ಬೀಗ ಹಾಕಿದ್ದಾರೆ. ಇದುವರೆಗೂ ಹುಲಿದಾಳಿಗೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿಯನ್ನು ಪಾರ್ಕ್ ಅಧಿಕಾರಿಗಳು ನೀಡಿಲ್ಲ. ಇನ್ನು ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ಕೊಟ್ಟ ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ವಿಕ್ಟೊರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

    ಒಂದೂವರೆ ವರ್ಷದ ಹಿಂದೆ ಬೆಂಗಾಲ್ ಟೈಗರ್‍ಗಳು ಕೃಷ್ಣಾ ಎಂಬ ಪ್ರಾಣಿಪಾಲಕನ ಮೇಲೆ ಎರಗಿದ್ದವು. ಅದೃಷ್ಟವಶಾತ್ ಕೃಷ್ಣಾ ತೀವ್ರ ಗಾಯಗೊಂಡರೂ ಬದುಕುಳಿದು ಚೇತರಿಸಿಕೊಂಡಿದ್ದರು. ಇನ್ನು, 2 ತಿಂಗಳ ಹಿಂದೆ ಇದೆ ಬಿಳಿಹುಲಿಯೊಂದು ಬೆಂಗಾಲ್ ಟೈಗರ್ ಕೇಜ್ ಗೆ ಹೋಗಿ ದಾಳಿಗೀಡಾಗಿ ಸಾವನ್ನಪ್ಪಿತ್ತು.

    https://www.youtube.com/watch?v=8sATYADYfzc

    https://www.youtube.com/watch?v=gkyumRjXHk0

  • ಏರಿಯಾ ಹುಡ್ಗನ ಮೇಲೆ ಕಾಮದ ಕಣ್ಣು-ಗಂಡನಿಗೆ ಗೊತ್ತಾಗಿ ಉಲ್ಟಾ ಹೊಡೆದ ಯಜಮಾನಿ!

    ಏರಿಯಾ ಹುಡ್ಗನ ಮೇಲೆ ಕಾಮದ ಕಣ್ಣು-ಗಂಡನಿಗೆ ಗೊತ್ತಾಗಿ ಉಲ್ಟಾ ಹೊಡೆದ ಯಜಮಾನಿ!

    ಬೆಂಗಳೂರು: ಎರಿಯಾ ಹುಡುಗನ ಮೇಲೆ ಮನೆಯ ಯಜಮಾನಿಯೇ ಕಣ್ಣು ಹಾಕಿ ಲೈಂಗಿಕ ಕ್ರಿಯೆಗೆ ಕರೆದಿದ್ದಾಳೆ. ಈ ವಿಷಯ ಗಂಡನಿಗೆ ಗೊತ್ತಾದ ಮೇಲೆ ಯಜಮಾನಿ ನೀವಿಲ್ಲದ ವೇಳೆ ನನ್ನನ್ನು ಮಂಚಕ್ಕೆ ಕರೆದ ಎಂದು ಉಲ್ಟಾ ಡೈಲಾಗ್ ಹೊಡೆದಿದ್ದಾಳೆ.

    ನಗರದ ಹೊರವಲಯ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಂಜುಳಾ ಎಂಬಾಕೆಯೇ ಉಲ್ಟಾ ಹೊಡೆದ ಯಜಮಾನಿ. ಮಂಜುಳಾ ತಾನು ವಾಸವಾಗಿರುವ ಏರಿಯಾದ ಮುನೇಂದ್ರ ಮೇಲೆ ಕಾಮದ ಕಣ್ಣು ಹಾಕಿದ್ದಾಳೆ. ಮನೆಯಲ್ಲಿ ಪತಿ ಸಂತೋಷ ಇಲ್ಲದ ವೇಳೆಯಲ್ಲಿ ಮುನೇಂದ್ರನನ್ನು ಸೆಕ್ಸ್ ಗೆ ಕರೆದಿದ್ದಾಳೆ. ಮಂಜುಳಾ ಮಾತಿಗೆ ಮುನೇಂದ್ರ ಒಪ್ಪಿಕೊಂಡಿಲ್ಲ.

    ಸಂತೋಷ್

    ಇದರಿಂದ ಕೋಪಗೊಂಡ ಮುಂಜುಳಾ ತನ್ನ ಪತಿ ಸಂತೋಷ್ ಮನೆಗೆ ಬರುತ್ತಿದ್ದಂತೆ, ಮುನೇಂದ್ರನ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾಳೆ. ಕೋಪಗೊಂಡ ಸಂತೋಷ ಪತ್ನಿಯೊಂದಿಗೆ ಸೇರಿಕೊಂಡು ರಾಡ್ ಹಾಗು ದೊಣ್ಣೆಯಿಂದ ಹಲ್ಲೆ ನಡೆಸಿ ಎರಡನೇ ಮಹಡಿಯಿಂದ ನನ್ನನ್ನು ಕೆಳಗೆ ತಳ್ಳಿದ್ದಾರೆ ಎಂದು ಮುನೇಂದ್ರ ಹೇಳಿದ್ದಾನೆ.

    ಹಲ್ಲೆಯ ಪರಿಣಾಮ ಮುನೇಂದ್ರ ಬೆನ್ನಿನ ಮೂಳೆ ಹಾಗೂ ಕೈ ಕಾಲು ಮುರಿದಿದ್ದು, ನಗರದ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಮಂಜುಳಾ ಆನೇಕಲ್ ಪೊಲೀಸ್ ಠಾಣೆಯಲ್ಲಿ ಮುನೇಂದ್ರ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಇತ್ತ ಮಂಜುಳಾ ವಿರುದ್ಧ ಮುನೇಂದ್ರ ಲೈಂಗಿಕ ಕ್ರಿಯೆಗೆ ಕರೆದು ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದಾನೆ.

  • ಪ್ಲೈ ಓವರ್ ಮೇಲೆ ಹೊತ್ತಿ ಉರಿತು ಕಾಂಕ್ರೀಟ್ ಮಿಕ್ಸರ್ ಲಾರಿ

    ಪ್ಲೈ ಓವರ್ ಮೇಲೆ ಹೊತ್ತಿ ಉರಿತು ಕಾಂಕ್ರೀಟ್ ಮಿಕ್ಸರ್ ಲಾರಿ

    ಬೆಂಗಳೂರು: ಚಲಿಸುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ನಡು ರಸ್ತೆಯಲ್ಲೆ ಧಗಧಗನೇ ಹೊತ್ತಿ ಉರಿದ ಘಟನೆ ಬೆಂಗಳೂರಿನ ಹೊಸೂರು ಮುಖ್ಯರಸ್ತೆಯ ಫ್ಲೈ ಓವರ್ ಮೇಲೆ ನಡೆದಿದೆ.

    ಸಿಲ್ಕ್ ಬೋರ್ಡ್ ಪ್ಲೈ ಓವರ್ ಮೇಲೆ ಬೆಂಕಿ ಅವಘಡ ಸಂಭವಿಸಿದ್ದು, ಕಾಂಕ್ರೀಟ್ ಮಿಕ್ಸರ್ ಲಾರಿಯಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಲಾರಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಚಾಲಕ ಲಾರಿಯನ್ನು ಫ್ಲೈ ಓವರ್ ಮೇಲೆ ಬಿಟ್ಟು ವಾಹನದಿಂದ ಕೆಳಗಿಳಿದು ಓಡಿ ನೋಡ ನೋಡುತ್ತಿದ್ದಂತೆ ಬೆಂಕಿ ಪ್ರಮಾಣ ಹೆಚ್ಚಾಗಿ ಲಾರಿ ತುಂಬಾ ಬೆಂಕಿ ಆವರಿಸಿಕೊಂಡಿದೆ.

    ಕೂಡಲೇ ಸ್ಥಳದಲ್ಲಿದ್ದವರು ಬಕೆಟ್‍ನಲ್ಲಿ ನೀರು ಹಿಡಿದು ಬೆಂಕಿಯನ್ನು ನಂದಿಸಲು ಮುಂದಾಗಿದ್ದಾರೆ. ಆದರೆ ಬೆಂಕಿಯ ಕೆನ್ನಾಲಿಗೆ ಜಾಸ್ತಿಯಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದರು. ಸಮಯಪ್ರಜ್ಞೆಯಿಂದ ಚಾಲಕ ಜೀವಾಪಾಯದಿಂದ ಪಾರಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆಯಿಂದಾಗಿ ಹೊಸೂರು ಮುಖ್ಯರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಪಿಕ್ ಜಾಮ್ ಉಂಟಾಗಿದ್ದು, ಕೆಲ ಗಂಟೆಗಳ ಕಾಲ ವಾಹನ ಸವಾರರು ಪರದಾಡುವಂತಹ ಸ್ಥಿತಿ ಉಂಟಾಗಿತ್ತು.

    https://www.youtube.com/watch?v=ns1_yMiHH-Q

  • ಕಚೇರಿಗೆ ನುಗ್ಗಿ ತಹಶೀಲ್ದಾರ್‍ಗೆ ಬೆಂಗ್ಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಧಮ್ಕಿ

    ಕಚೇರಿಗೆ ನುಗ್ಗಿ ತಹಶೀಲ್ದಾರ್‍ಗೆ ಬೆಂಗ್ಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಧಮ್ಕಿ

    ಬೆಂಗಳೂರು: ಒತ್ತುವರಿ ತೆರವು ವಿಚಾರವಾಗಿ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಹಾಗು ಜಿಲ್ಲಾ ಪಂಚಾಯತ್ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಆನೇಕಲ್ ನಲ್ಲಿ ನಡೆದಿದೆ.

    ಬೆಂಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ. ಮುನಿರಾಜು ಹಾಗೂ ಆನೇಕಲ್ ತಾಲೂಕು ತಹಶೀಲ್ದಾರ್ ಆಶಾ ಪರ್ವಿನ್ ನಡುವೆ ಮಾತಿನ ಚಕಮಕಿ ನಡೆದಿದೆ. ಆನೇಕಲ್ ತಾಲೂಕಿನ ಸರ್ಜಾಪುರ ಗ್ರಾಮದ ಬಳಿ ಸರ್ವೇ ನಂ.24 ರ ಒಟ್ಟು 1.5 ಗುಂಟೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುವುದು ಸರ್ವೆಯಲ್ಲಿ ಸಾಬೀತಾದ ಹಿನ್ನಲೆಯಲ್ಲಿ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಜಾಗವನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸೇರಿ ಒಟ್ಟು 10 ಮಂದಿ ಒತ್ತುವರಿ ಮಾಡಿಕೊಂಡಿದ್ದರು. ತಕ್ಷಣ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಾಗವನ್ನು ತೆರುವುಗೊಳಿಸುವಂತೆ ತಹಶೀಲ್ದಾರ್ ನೋಟಿಸ್‍ನಲ್ಲಿ ಸೂಚಿಸಿದ್ದರು.

    ಈ ನೋಟಿಸ್ ವಿಚಾರವಾಗಿ ತಾಲೂಕು ಕಚೇರಿಗೆ ಆಗಮಿಸಿ ಜಿಲ್ಲಾ ಪಂಚಾಯತ್ ಅಧಕ್ಷರು ಹಾಗೂ ಅವರ ಬೆಂಬಲಿಗರು ತಹಶೀಲ್ದಾರ್ ಆಶಾ ಪರ್ವಿನ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಆಶಾ, ಯಾರೇ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡರೂ ಅದನ್ನು ತೆರವುಗೊಳಿಸುವುದು ನಮ್ಮ ಕರ್ತವ್ಯ. ಈಗಾಗಲೇ ವಿವಾದಿತ ಸ್ಥಳದಲ್ಲಿ ಎರಡು ಬಾರಿ ಸರ್ವೇ ಕಾರ್ಯವನ್ನು ನಡೆಸಲಾಗಿದೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಈ ವರ್ತನೆ ಸಮಂಜಸವಲ್ಲ. ಅಲ್ಲದೇ ನಮ್ಮ ಅಧಿಕಾರಿಗಳ ಜೊತೆಯೂ ಅನುಚಿವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು.

    ಇನ್ನೂ ಜಿಲ್ಲಾ ಪಂಚಾಯತ್ ಅಧ್ಯಕ್ಷರ ವಾದವೇ ಬೇರೆಯಾಗಿದೆ. ಈ ಜಾಗ ನಮ್ಮ ತಾತನ ಕಾಲದಿಂದಲೂ ಬಂದಿರುವ ಆಸ್ತಿಯಾಗಿದ್ದು, ತಹಶೀಲ್ದಾರರು ಕೆಲವರ ಚಿತಾವಣೆಯ ಮೇರೆಗೆ ಸುಖಾಸುಮ್ಮನೆ ಕಿರುಕುಳವನ್ನು ನೀಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಕೈವಾಡವಿದೆ ಎಂದು ಆರೋಪಿಸಿದರು.

  • ವೈದ್ಯರು ನಿಗದಿತ ಸಮಯಕ್ಕೆ ಬಾರದೇ ಇದ್ರೆ 100 ಹಾಸಿಗೆಯುಳ್ಳ ಆನೇಕಲ್ ಆಸ್ಪತ್ರೆಗೆ ಬೀಗ!

    ವೈದ್ಯರು ನಿಗದಿತ ಸಮಯಕ್ಕೆ ಬಾರದೇ ಇದ್ರೆ 100 ಹಾಸಿಗೆಯುಳ್ಳ ಆನೇಕಲ್ ಆಸ್ಪತ್ರೆಗೆ ಬೀಗ!

    ಬೆಂಗಳೂರು: ನಿಗದಿತ ಸಮಯಕ್ಕೆ ವೈದ್ಯರು ಬಾರದ ಕಾರಣ ಆಸ್ಪತ್ರೆ ಮುಂಭಾಗದಲ್ಲಿ ರೋಗಿಗಳು ಪರದಾಟ ನಡೆಸಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.

    ಪ್ರತಿ ನಿತ್ಯದಂತೆ ರೋಗಿಗಳು ಗುರುವಾರ ಬೆಳಗ್ಗೆ ಆಸ್ಪತ್ರೆಗೆ ಬಂದಾಗ ಬಾಗಿಲಿಗೆ ಬೀಗ ಹಾಕಲಾಗಿತ್ತು. ಆದರೆ ಸಮಯ 10 ಗಂಟೆಯಾದರೂ ಬಾಗಿಲು ತೆರೆಯದೇ ಇದ್ದಾಗ ರೋಗಿಗಳ ಸಂಬಂಧಿಕರು ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಮುಂದಾಗಿದ್ದಾರೆ.

    ಮುಂಭಾಗದ ಬಾಗಿಲಲ್ಲಿ ರೋಗಿಗಳ ನರಳಾಟ ಕಂಡು ಚಿತ್ರೀಕರಣಕ್ಕೆ ಮುಂದಾದ ಮಾಧ್ಯಮದವರ ಮೇಲೆ ಆಸ್ಪತ್ರೆ ಸಿಬ್ಬಂದಿ ವಾಗ್ವಾದ ನಡೆಸಿದ್ದಾರೆ. ಆಸ್ಪತ್ರೆಗೆ ವೈದ್ಯರು ಬಾರದ ಕಾರಣ ಕ್ಲೀನ್ ಮಾಡುವ ನೆಪದಲ್ಲಿ ಸಿಬ್ಬಂದಿ ಬೀಗ ಜಡಿದಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬಂದಿದೆ.

    100 ಹಾಸಿಗೆ ಹೊಂದಿರುವ ಆಸ್ಪತ್ರೆ ಇದಾಗಿದ್ದು, ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆಗಾಗಿ ಭೇಟಿ ನೀಡುತ್ತಾರೆ. ಆದರೆ ನಿಗದಿತ ಸಮಯಕ್ಕೆ ವೈದ್ಯರು ಬಾರದೆ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೊಮ್ಮೆ ಡಾಕ್ಟರ್ ಇಲ್ಲದ ಸಮಯದಲ್ಲಿ ಆಸ್ಪತ್ರೆ ಕ್ಲೀನಿಂಗ್ ನೆಪದಲ್ಲಿ ಸಿಬ್ಬಂದಿ ಬೀಗ ಜಡಿಯುವ ಪ್ಲಾನ್ ರೂಪಿಸಿ ರೋಗಿಗಳು ಪರದಾಡುವಂತೆ ಮಾಡುತ್ತಿದ್ದಾರೆಂದು ರೋಗಿಯೊಬ್ಬರ ಸಂಬಂಧಿ ರಮೇಶ್ ಆರೋಪಿಸಿದ್ದಾರೆ.