Tag: anekal

  • ಭಾನುವಾರವೂ ಬಿರುಗಾಳಿ ಸಹಿತ ಮಳೆ – ಧರೆಗುರುಳಿತು ಮರಗಳು, ಜನ ಜೀವನ ಅಸ್ತವ್ಯಸ್ತ

    ಭಾನುವಾರವೂ ಬಿರುಗಾಳಿ ಸಹಿತ ಮಳೆ – ಧರೆಗುರುಳಿತು ಮರಗಳು, ಜನ ಜೀವನ ಅಸ್ತವ್ಯಸ್ತ

    ಬೆಂಗಳೂರು/ಹುಬ್ಬಳ್ಳಿ : ರಾಜ್ಯದಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಇಂದು ಹುಬ್ಬಳ್ಳಿ ನಗರದಲ್ಲಿ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

    ಮಧ್ಯಾಹ್ನ ವೇಳೆಗೆ ಭಾರೀ ಪ್ರಮಾಣದಲ್ಲಿ ಮಳೆ ಆರಂಭವಾಗಿದ್ದು, ಬಿರುಗಾಳಿಗೆ ಮರಗಳು ಮನೆಯ ಮೇಲೆ ಉರುಳಿಬಿದ್ದ ಪರಿಣಾಮ ಹಲವರು ಸಮಸ್ಯೆ ಎದುರಿಸಿದರೆ, ಕೆಲವೆಡೆ ಮನೆಯ ಮೇಲ್ಚಾವಣಿಗಳು ಹಾರಿ ಹೋದ ಕುರಿತು ವರದಿಯಾಗಿದೆ. ಭಾರೀ ಮಳೆಯ ಕಾರಣ ನಗರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಸಮಸ್ಯೆ ಹೆಚ್ಚಾಗಲು ಕಾರಣವಾಗಿತ್ತು. ಕಳೆದ ರಾತ್ರಿಯೂ ಭಾರೀ ಪ್ರಮಾಣದ ಮಳೆ ಗಾಳಿಗೆ ತತ್ತರಿಸಿದ ಜನತೆ ಆತಂಕ ಎದುರಿಸಿದರು.

    ಇನ್ನು ಬೆಂಗಳೂರು ವಲಯದ ಆನೇಕಲ್, ವಿಜಯಪುರ, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಮಳೆ ಆಗಿದೆ. ಚಂದಾಪುರ ವ್ಯಾಪ್ತಿಯ ರೈಲ್ವೇ ಅಂಡರ್ ಪಾಸ್ ನೀರಿನಿಂದ ಆವೃತವಾಗಿತ್ತು. ಚಂದಾಪುರದಿಂದ ದೊಮ್ಮಸಂದ್ರಕ್ಕೆ ಹೋಗುವ ಏಕೈಕ ರಸ್ತೆ ಇದಾಗಿದ್ದ ಕಾರಣ ವಾಹನ ಸವಾರರು ಪರದಾಟ ನಡೆಸಿದರು. ಅಲ್ಲದೇ ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಸ್ಥಳೀಯ ಆಡಳಿತ ವಿರುದ್ಧವು ತೀವ್ರ ಆಕ್ರೋಶ ಹೊರಹಾಕಿದರು.

    ಹುಬ್ಬಳ್ಳಿಯಲ್ಲಿ ಭಾರೀ ಮಳೆಗೆ ಹತ್ತಾರು ಮರಗಳು ಉರುಳಿವೆ. ಭಾರೀ ಬಿರುಗಾಳಿಗೆ ಮನೆ ಮೇಲ್ಚಾವಣಿಗಳು ಹಾರಿ ಹೋಗಿವೆ. ಅಲ್ಲಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅತ್ತ ವಿಜಯಪುರದಲ್ಲಿ 50ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಸಿಂದಗಿ ತಾಲೂಕಿನ ಮುಳಸಾವಳಗಿಯಲ್ಲಿ ಹಲವು ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ವಿಜಯಪುರ ಜಿಲ್ಲಾಧಿಕಾರಿ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಂಡು ಸ್ವತಃ ಡಿಸಿ ಪರದಾಡಿದ್ದರು. ಇಂದು ಮಂಡ್ಯದ ಮುತ್ತತ್ತಿಯಲ್ಲಿ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಬೆಂಗಳೂರಿನ ವೆಂಕಟೇಶ್ ಮೊಸಳೆ ಪಾಲಾಗಿದ್ದಾರೆ.

  • ನಮ್ಮ ಕಾರ್ಯಕರ್ತರನ್ನ ಮುಟ್ಟಿದ್ರೆ ಪರಿಸ್ಥಿತಿ ನೆಟ್ಟಗಿರಲ್ಲ – ಹಾಲಿ ಶಾಸಕರ ವಿರುದ್ಧ ತೊಡೆ ತಟ್ಟಿದ ಮಾಜಿ ಸಚಿವ

    ನಮ್ಮ ಕಾರ್ಯಕರ್ತರನ್ನ ಮುಟ್ಟಿದ್ರೆ ಪರಿಸ್ಥಿತಿ ನೆಟ್ಟಗಿರಲ್ಲ – ಹಾಲಿ ಶಾಸಕರ ವಿರುದ್ಧ ತೊಡೆ ತಟ್ಟಿದ ಮಾಜಿ ಸಚಿವ

    ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸೋತಿರೋ ಬಿಜೆಪಿ ಅಭ್ಯರ್ಥಿ ಕಾರ್ಯಕರ್ತರ ಮಧ್ಯೆ ಭರ್ಜರಿ ಭಾಷಣ ಮಾಡಿ ತೊಡೆ ತಟ್ಟಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರನ್ನು ವಿನಃ ಕಾರಣ ಮುಟ್ಟಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಹಾಲಿ ಶಾಸಕರ ವಿರುದ್ಧ ತೊಡೆತಟ್ಟಿದ ಪ್ರಸಂಗ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಆನೇಕಲ್ ನಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ ಮಾಜಿ ಸಚಿವ ನಾರಾಯಣ ಸ್ವಾಮಿ ಹಾಲಿ ಕಾಂಗ್ರೆಸ್ ಶಾಸಕ ಬಿ ಶಿವಣ್ಣ ವಿರುದ್ಧ ವಾಗ್ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ.

    ಬಿಜೆಪಿ ಕ್ಷೇತ್ರದಲ್ಲಿ ಸೋತಿರಬಹುದು, ಆದರೆ ಕಾರ್ಯಕರ್ತರೊಂದಿಗೆ ತಾವು ಮುಂದೆಯೂ ಇರುತ್ತೇವೆ. ಈಗಾಗಲೇ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಇದೆ. ಒಂದು ವೇಳೆ ಹಾಗೇನಾದರೂ ನಮ್ಮ ಕಾರ್ಯಕರ್ತರನ್ನು ಮುಟ್ಟಿದರೆ ಪರಿಸ್ಥಿತಿ ನೆಟ್ಟಗಿರುವುದಲ್ಲ ಎಂದು ಸಮಾರಂಭದಲ್ಲಿ ಬಹಿರಂಗವಾಗಿ ತೊಡೆತಟ್ಟಿ ಸವಾಲೆಸದರು.

    ಇದೇ ವೇಳೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡು ಪಕ್ಷದ ಬೆನ್ನಿಗೆ ಹಿಂದಿನಿಂದ ಚೂರಿ ಹಾಕುವವರು ಒಬ್ಬ ಅಪ್ಪನಿಗೆ ಹುಟ್ಟಿದ್ದರೆ, ಮುಂದೆ ಬಂದು ಮಾತನಾಡಿ ಎಂದು ಪಕ್ಷ ವಿರೋದಿಗಳಿಗೆ ಸಮಾರಂಭದಲ್ಲಿ ಬಹಿರಂಗವಾಗಿ ಸವಾಲು ಹಾಕಿದ್ರು.

  • ಸಿಲಿಂಡರ್ ಬ್ಲಾಸ್ಟ್ ಆದ ರಭಸಕ್ಕೆ ಕಟ್ಟಡ ಕುಸಿದು ಓರ್ವ ಸಾವು – ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

    ಸಿಲಿಂಡರ್ ಬ್ಲಾಸ್ಟ್ ಆದ ರಭಸಕ್ಕೆ ಕಟ್ಟಡ ಕುಸಿದು ಓರ್ವ ಸಾವು – ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

    ಆನೇಕಲ್: ಕಾಡುಗೋಡಿ ಬಳಿಯ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿಯ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟವಾಗಿದ್ದು, ಸ್ಫೋಟದ ರಭಸಕ್ಕೆ ಕಟ್ಟಡವೇ ಕುಸಿದು ಓರ್ವ ಮೃತಪಟ್ಟ ಘಟನೆ ನಡೆದಿದೆ.

    ಘಟನೆಯಲ್ಲಿ ಅಪ್ಸರ್ ಪಾಷಾ(22) ಅವರ ತಲೆಯ ಭಾಗಕ್ಕೆ ಹೆಚ್ಚಿನ ಪ್ರಮಾಣದ ಗಾಯವಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೃತ ಅಪ್ಸರ್ ಪಾಷಾ ಪತ್ನಿ ಸುಲ್ತಾನ, ಅವರ ಮಗು ಜೈನ್ ಗಾಯಗೊಂಡಿದ್ದಾರೆ. ಸದ್ಯ ಇವರುಗಳು ಮೂವರು ಗಾಯಾಳುಗಳು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ.

    ಇಂದು ಬೆಳಗ್ಗೆ 10:25 ರ ವೇಳೆಗೆ ಈ ಘಟನೆ ನಡೆದಿದ್ದು, ಬಿಲ್ಡಿಂಗ್ ನಲ್ಲಿ ಅಕ್ರಮವಾಗಿ ಗ್ಯಾಸ್ ಫಿಲ್ ಮಾಡಲಾಗುತ್ತಿತ್ತು ಎಂದು ಶಂಕೆ ವ್ಯಕ್ತವಾಗಿದೆ.

    ಘಟನೆ ಸಂದರ್ಭದಲ್ಲಿ ಕಟ್ಟಡದ ಒಳಗೆ ಸುಮಾರು ಏಳೆಂಟು ಮಂದಿ ಇದ್ದರು ಎನ್ನಲಾಗಿದೆ. ಇದರಲ್ಲಿ ಈಗಾಗಲೇ ಮೂವರನ್ನು ರಕ್ಷಿಸಲಾಗಿದೆ. ಕಟ್ಟಡದ ಅವಶೇಷಗಳ ಅಡಿ ಓರ್ವ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಶೋಧ ಮುಂದುವರೆಸಿದ್ದಾರೆ.

    ಸಿಲಿಂಡರ್ ಸ್ಫೋಟದಿಂದ ಮನೆಯ ಮುಕ್ಕಾಲು ಭಾಗ ಕುಸಿದಿದೆ. ಅಗ್ನಿಶಾಮಕ ಸಿಬ್ಬಂದಿ ಕಟ್ಟಡದ ಅವಶೇಷಗಳನ್ನ ತೆರವುಗೊಳಿಸುತ್ತಿದ್ದಾರೆ.

  • ಐವರು ದರೋಡೆಕೋರರಿಂದ ಮನೆ ಮಾಲೀಕ, ಮಗನಿಗೆ ಚಾಕು ಇರಿತ- ಚೀರಾಟದಿಂದ ಸ್ಥಳಕ್ಕಾಗಮಿಸಿದ ಸ್ಥಳೀಯರಿಂದ ಓರ್ವನಿಗೆ ಗೂಸಾ

    ಐವರು ದರೋಡೆಕೋರರಿಂದ ಮನೆ ಮಾಲೀಕ, ಮಗನಿಗೆ ಚಾಕು ಇರಿತ- ಚೀರಾಟದಿಂದ ಸ್ಥಳಕ್ಕಾಗಮಿಸಿದ ಸ್ಥಳೀಯರಿಂದ ಓರ್ವನಿಗೆ ಗೂಸಾ

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದರೋಡೆಕೋರರ ಹಾವಳಿ ಹೆಚ್ಚಾಗುತ್ತಿದೆ. ದರೋಡೆ ನಡೆಸಲು ಒಂಟಿ ಮನೆಗೆ ನುಗ್ಗಿದ ದರೋಡೆಕೋರರು ಮನೆ ಮಾಲೀಕ ಹಾಗೂ ಆತನ ಮಗನಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ರಾಮಸಾಗರದಲ್ಲಿ ಗ್ರಾಮದ ಹೊರಭಾಗದಲ್ಲಿರುವ ಡೈರಿ ನಾರಾಯಣರೆಡ್ಡಿ ಎಂಬವರ ಮನೆಗೆ ರಾತ್ರಿ ಕಳೆದ ರಾತ್ರಿ 8 ಗಂಟೆ ಸುಮಾರಿನಲ್ಲಿ ನುಗ್ಗಿದ ಐವರು ದರೋಡೆಕೋರರು ಮನೆ ಮಾಲೀಕ ಡೈರಿ ನಾರಾಯಣಸ್ವಾಮಿ ಹಾಗೂ ಮಗ ಚೇತನ್ ಇಬ್ಬರಿಗೆ ಚಾಕು ಇರಿದು ಹಲ್ಲೆ ನಡೆಸಿದ್ದಾರೆ.

    ಇವರ ಚೀರಾಟ ಕಂಡ ಸ್ಥಳೀಯರು ಸ್ಥಳಕ್ಕಾಗಮಿಸಿ ದರೋಡೆಗೆ ಬಂದಿದ್ದ ಒಬ್ಬ ವ್ಯಕ್ತಿಯನ್ನ ಹಿಡಿದು ಥಳಿಸಿದ್ದಾರೆ. ದರೋಡೆಕೋರರಿಂದ ಹಲ್ಲೆಗೊಳಗಾಗಿದ್ದ ತಂದೆ ಮಗ ಹಾಗೂ ದರೋಡೆಕೋರ ಮೂವರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

    ಸೂರ್ಯಸಿಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಕಳೆದ ವಾರವಷ್ಟೆ ಇಂತಹ ಕೃತ್ಯ ನಡೆದಿದ್ದು, ಇದೀಗ ಮತ್ತೆ ಇಂದು ಸಂಭವಿಸಿರುವ ಘಟನೆ ಆನೇಕಲ್ ತಾಲೂಕಿನ ಜನತೆಯನ್ನು ಬೆಚ್ಚಿ ಬೀಳಿಸಿದೆ.

  • ಬನ್ನೇರುಘಟ್ಟಕ್ಕೆ 2 ವರ್ಷ, 2ತಿಂಗ್ಳ ಗೌರಿಯ ಆಗಮನ

    ಬನ್ನೇರುಘಟ್ಟಕ್ಕೆ 2 ವರ್ಷ, 2ತಿಂಗ್ಳ ಗೌರಿಯ ಆಗಮನ

    ಬೆಂಗಳೂರು: ನಗರದ ಆನೇಕಲ್ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಇಂದು ಮತ್ತೊಂದು ಹೊಸ ಅತಿಥಿಯ ಆಗಮನವಾಗಿದೆ.

    ಹೌದು. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಪ್ರಾಣಿಗಳ ಗುಂಪಿಗೆ ಜಿರಾಫೆಯೊಂದು ಸೇರ್ಪಡೆಗೊಂಡಿದೆ. ಮೈಸೂರಿನ ಮೃಗಾಲಯದಲ್ಲಿ ಕೃಷ್ಣಾರಾಜ ಹಾಗೂ ಲಕ್ಷ್ಮಿ ಜಿರಾಫೆಗೆ ಜನಿಸಿದ್ದ ಗೌರಿ ಎಂಬ 2 ವರ್ಷ, 2 ತಿಂಗಳ ಜಿರಾಫೆಯನ್ನು ಬನ್ನೇರುಘಟ್ಟಕ್ಕೆ ತರಲಾಯಿತು.

    ಮಧ್ಯರಾತ್ರಿ 12 ಗಂಟೆಗೆ ಕೇಜ್ ಗೆ ಹತ್ತಿದ ಗೌರಿಯನ್ನು ಟ್ರಕ್ ಮೂಲಕ ಬನ್ನೇರುಘಟ್ಟಕ್ಕೆ ತಂದು, ಉದ್ಯಾನವನದಲ್ಲಿ ಜಿರಾಫೆಗೆಂದು ನಿರ್ಮಿಸಲಾಗಿರುವ ಆವರಣಕ್ಕೆ ಬಿಡಲಾಯಿತು. ಈ ಮೊದಲು ಜಿರಾಫೆ ಇರುವ ಕೇಜ್ ಗೆ ಪೂಜೆ ಸಲ್ಲಿಸಲಾಗಿತ್ತು. ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಕೇಜ್ ನಿಂದ ಹೊರಬರಲು ಸತಾಯಿಸಿದ ಗೌರಿಗೆ ಹಣ್ಣು, ಬೆಲ್ಲ ಹಾಗೂ ಮರದ ಎಲೆಗಳ ಆಸೆ ತೋರಿಸಿ ಹೊರಕ್ಕೆ ಕರೆತರಲಾಯಿತು.

    ಸದ್ಯಕ್ಕೆ ಒಂದೆರಡು ದಿನಗಳ ಕಾಲ ಪ್ರವಾಸಿಗರ ವೀಕ್ಷಣೆಗೆ ನಿಷೇಧವಿದ್ದು ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಂಡ ನಂತರ ಸಾರ್ವಜನಿಕರಿಗೆ ಮುಕ್ತ ಮಾಡಲಾಗುವುದು ಎಂದು ಉದ್ಯಾನವನದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

  • ಕುಡಿದ ಮತ್ತಿನಲ್ಲಿ ತಮ್ಮನನ್ನೇ ಗುಂಡಿಟ್ಟು ಕೊಂದ ಅಣ್ಣ

    ಕುಡಿದ ಮತ್ತಿನಲ್ಲಿ ತಮ್ಮನನ್ನೇ ಗುಂಡಿಟ್ಟು ಕೊಂದ ಅಣ್ಣ

    ಅನೇಕಲ್: ಕುಡಿದ ಮತ್ತಿನಲ್ಲಿ ಸಹೋದರರ ನಡುವೆ ಜಗಳ ನಡೆದು ಅಣ್ಣ ತಮ್ಮನ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ತಮ್ಮ ಸ್ಥಳದಲ್ಲೇ ಸಾವನಪ್ಪಿದ ಘಟನೆ ಆನೇಕಲ್ ಗಡಿಗೆ ಹೊಂದಿಕೊಂಡಿರೋ ತಮಿಳುನಾಡಿನ ದೇವರಬೆಟ್ಟ ಗ್ರಾಮದಲ್ಲಿ ನಡೆದಿದೆ.

    ದೇವರಬೆಟ್ಟ ಗ್ರಾಮದ ಗಣೇಶ್(32) ಅಣ್ಣ ಶಂಕರಪ್ಪನಿಂದ ಕೊಲೆಯಾದ ದುರ್ದೈವಿ. ಗಣೇಶ ಅನೇಕಲ್ ಸುತ್ತಮುತ್ತ ಕೂಲಿ ಕೆಲಸ ಮಾಡಿಕೊಂಡಿದ್ದು ಹಬ್ಬದ ಪ್ರಯುಕ್ತ ನಿನ್ನೆ ಸ್ವಗ್ರಾಮ ದೇವರಬೆಟ್ಟಕ್ಕೆ ತೆರಳಿದ್ದ. ಅಣ್ಣ, ತಮ್ಮ ಇಬ್ಬರು ಒಟ್ಟಿಗೆ ಸೇರಿ ಮದ್ಯಪಾನ ಪಾರ್ಟಿ ನಡೆಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಶಂಕರಪ್ಪ ಮನೆಯಲ್ಲಿದ್ದ ಡಬ್ಬಲ್ ಬ್ಯಾರಲ್ ಗನ್ ನಿಂದ ತಮ್ಮನ ಮೇಲೆ ಗುಂಡು ಹರಿಸಿದ್ದಾನೆ. ಗುಂಡೇಟು ತಿಂದ ಗಣೇಶ್ ಸ್ಥಳದಲ್ಲೇ ಸಾವನಪ್ಪಿದ್ದಾನೆ.

    ಪ್ರಕರಣ ದಾಖಲಿಸಿಕೊಂಡ ತಮಿಳುನಾಡಿನ ಥಳಿ ಪೊಲೀಸರು ಆರೋಪಿ ಶಂಕರಪ್ಪನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

  • ನಡು ರಸ್ತೆಯಲ್ಲೇ ಹೂತು ಹೋದ ಗ್ರಾನೈಟ್ ಲಾರಿ- ತಪ್ಪಿತು ಭಾರೀ ಅನಾಹುತ

    ನಡು ರಸ್ತೆಯಲ್ಲೇ ಹೂತು ಹೋದ ಗ್ರಾನೈಟ್ ಲಾರಿ- ತಪ್ಪಿತು ಭಾರೀ ಅನಾಹುತ

    ಬೆಂಗಳೂರು: ಗ್ರಾನೈಟ್ ಲಾರಿಯೊಂದು ಓವರ್ ಲೋಡ್ ಆಗಿ ರಸ್ತೆ ಮಧ್ಯೆದಲ್ಲಿಯೇ ಹೂತುಹೋದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.

    ಈ ಘಟನೆ ಆನೇಕಲ್ -ಬನ್ನೇರುಘಟ್ಟ ಮುಖ್ಯರಸ್ತೆಯ ಬೇಗೆಹಳ್ಳಿ ಬಳಿ ನಡೆದಿದೆ. ನಿರ್ಮಾಣ ಹಂತದ ರಸ್ತೆಯಲ್ಲಿ ಲಾರಿ ಹೂತಿದ್ದು, ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತವೊಂದು ಕೈ ತಪ್ಪಿದೆ.

    16 ಟನ್ ಅನುಮತಿ ಇರುವ ಲಾರಿಯಲ್ಲಿ 40 ಟನ್‍ಗೂ ಅಧಿಕವಾಗಿ ಕಲ್ಲುಗಳನ್ನು ತುಂಬಿದ್ದೇ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಲಾರಿ ನಡುರಸ್ತೆಯಲ್ಲಿಯೇ ನಿಂತಿದ್ದರಿಂದ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ಥವಾಗಿದ್ದು, ಸವಾರರು ಪರದಾಡಿದ್ದಾರೆ.

     

  • ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ- ತಲೆಗೆ ತೀವ್ರ ಪೆಟ್ಟಾಗಿ ಕಾಲೇಜು ವಿದ್ಯಾರ್ಥಿ ದುರ್ಮರಣ

    ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ- ತಲೆಗೆ ತೀವ್ರ ಪೆಟ್ಟಾಗಿ ಕಾಲೇಜು ವಿದ್ಯಾರ್ಥಿ ದುರ್ಮರಣ

    ಬೆಂಗಳೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಧಾರವಾಡ ಮೂಲದ ಸಯ್ಯದ್ ನಿಹಾಲ್(24) ಮೃತ ದುರ್ದೈವಿ. ಸಯ್ಯದ್ ನಿಹಾಲ್ ಆನೇಕಲ್ ಪಟ್ಟಣದ ಪ್ರತಿಷ್ಠಿತ ಅಲೆಯನ್ಸ್ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು. ಎಂದಿನಂತೆ ತನ್ನ ಯಮಹಾ ಆರ್ 15 ಬೈಕ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆನೇಕಲ್ ಚಂದಾಪುರ ರಸ್ತೆಯ ಬ್ಯಾಗಡದೇನಹಳ್ಳಿ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಸಯ್ಯದ್ ತಲೆಗೆ ತೀವ್ರ ಪೆಟ್ಟುಬಿದ್ದು ರಕ್ತಸ್ರಾವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಆನೇಕಲ್ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪರಿಚಿತ ವಾಹನಕ್ಕಾಗಿ ಶೋಧ ನಡೆಸಿದ್ದಾರೆ.

    ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಮದ್ದೂರಮ್ಮ ಜಾತ್ರೆಯಲ್ಲಿ 75 ಅಡಿ ಎತ್ತರದ ರಥ ಉರುಳಿಬಿತ್ತು- ವಿಡಿಯೋ ನೋಡಿ

    ಮದ್ದೂರಮ್ಮ ಜಾತ್ರೆಯಲ್ಲಿ 75 ಅಡಿ ಎತ್ತರದ ರಥ ಉರುಳಿಬಿತ್ತು- ವಿಡಿಯೋ ನೋಡಿ

    ಆನೇಕಲ್: ಇತಿಹಾಸ ಪ್ರಸಿದ್ಧ ಮದ್ದೂರಮ್ಮ ಜಾತ್ರೆಯಲ್ಲಿ 75 ಅಡಿ ಎತ್ತರದ ರಥ ಉರುಳಿಬಿದ್ದಿದ್ದು ಅದೃಷ್ಟವಶಾತ್ ಸಂಭವಿಸಬೇಕಿದ್ದ ಭಾರಿ ಅನಾಹುತ ತಪ್ಪಿದೆ.

    ಹೆಚ್ಚು ಎತ್ತರವಿದ್ದ ಕಾರಣ ನಿಯಂತ್ರಣ ಕಳೆದುಕೊಂಡು ಉರುಳಿಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಬೆಂಗಳೂರು ಹೊರವಲಯ ಅನೇಕಲ್ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಇಂದು ಮದ್ದೂರಮ್ಮ ದೇವಿಯ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದ್ದು ಈ ಜಾತ್ರೆಗೆ ಸುತ್ತಮುತ್ತಲಿನ 7 ಗ್ರಾಮಗಳಿಂದ 100 ಅಡಿಗೂ ಎತ್ತರದ ರಥಗಳನ್ನು ದೇವಸ್ಥಾನದ ಬಳಿಗೆ ಎಳೆದು ತರುತ್ತಾರೆ.

    ಈ ದೇವಾಲಯಕ್ಕೆ ಈ ಹಿಂದೆ ಸುಮಾರು 11 ಹಳ್ಳಿಗಳಿಂದ ರಥಗಳು ಬರುತಿತ್ತು. ಬೆಂಗಳೂರು ಬೆಳವಣಿಗೆಯಾದಂತೆ ಹೊಲಗದ್ದೆಗಳು ಲೇಔಟ್ ಅದ ಪರಿಣಾಮ ಇದೀಗ ರಥಗಳನ್ನು ಎಳೆದು ತರಲು ಆಗದೆ ಕೇವಲ 7 ಗ್ರಾಮಗಳ ರಥಗಳು ಬರುತ್ತಿವೆ.

    https://www.youtube.com/watch?v=2qNdNlSwWNY&feature=youtu.be

     

  • ಬೆಂಗಳೂರಿನಲ್ಲಿ ಮ್ಯಾನ್ ಹೋಲ್ ದುರಂತ: ರಾಯಚೂರು ಮೂಲದ ಇಬ್ಬರು ಕೂಲಿ ಕಾರ್ಮಿಕರು ಬಲಿ

    ಬೆಂಗಳೂರಿನಲ್ಲಿ ಮ್ಯಾನ್ ಹೋಲ್ ದುರಂತ: ರಾಯಚೂರು ಮೂಲದ ಇಬ್ಬರು ಕೂಲಿ ಕಾರ್ಮಿಕರು ಬಲಿ

    ಆನೇಕಲ್: ಕಳೆದ ಕೆಲ ದಿನಗಳ ಹಿಂದಯಷ್ಟೇ ಬೆಂಗಳೂರಿನ ಸೋಮಸಂದ್ರ ಪಾಳ್ಯದಲ್ಲಿ ನಡೆದಿದ್ದ ಮ್ಯಾನ್ ಹೋಲ್ ದುರಂತ ಮಾಸುವ ಮುನ್ನವೇ ಮಂಗಳವಾರ ಚರಂಡಿ ನೀರನ್ನು ಶುಚಿಗೊಳಿಸಲು ಹೋಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ.

    ಬೆಂಗಳೂರಿನ ಎಚ್‍ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಇಸಿಎಸ್ ಬಡಾವಣೆಯ ವಾಣಿಜ್ಯ ಕಟ್ಟಡದಲ್ಲಿ ಘಟನೆ ಸಂಭವಿಸಿದ್ದು, ರಾಯಚೂರು ಮೂಲದ ರಾಮು(35) ಹಾಗೂ ರವಿ(28)ಮೃತ ದುರ್ದೈವಿಗಳಾಗಿದ್ದಾರೆ.

    ಇಂದು ಮಧ್ಯಾಹ್ನ ಯಮ್ ಲೋಕ್ ಹೋಟೆಲ್ ನ ಚರಂಡಿ ನೀರನ್ನು ಕ್ಲೀನ್ ಮಾಡಲು ವೇಳೆ ರಾಮು ಮ್ಯಾನ್ ಹೋಲ್ ಗೆ ಇಳಿದಿದ್ದಾರೆ. ಈ ವೇಳೆ ಅವರು ಉಸಿರು ಕಟ್ಟಿ ಸಹಾಯಕ್ಕೆ ಕೂಗಾಡಿದ್ದಾರೆ. ರಾಮು ಅವರನ್ನು ರಕ್ಷಣೆ ಮಾಡಲು ರವಿ ಕೂಡ ಒಳಗೆ ಇಳಿದಿದ್ದು ಈ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ.

    ಈ ವಿಚಾರ ತಿಳಿದ ಸ್ಥಳೀಯರು ಹೆಚ್‍ಎಎಲ್ ಪೊಲೀಸರಿಗೆ ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಪಡೆ ಹರಸಹಾಸ ಪಟ್ಟು ಶವವನ್ನು ಹೊರತೆಗೆದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ನಗರದ ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ.

    ಹೋಟೆಲ್ ಮಾಲೀಕ ಅವಿನಾಶ್ ಗುಪ್ತ, ಮ್ಯಾನೇಜರ್ ಆಯುಷ್ ಗುಪ್ತ, ಕಟ್ಟಡ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವೆಂಕಟೇಶ್ ವಿರುದ್ಧ ಎಚ್‍ಎಎಲ್ ಪೊಲೀಸರು ದೂರು ದಾಖಲಿಸಕೊಂಡಿದ್ದಾರೆ. ಮ್ಯಾನೇಜರ್ ಆಯುಷ್ ಗುಪ್ತ ಹಾಗೂ ವೆಂಕಟೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಜನವರಿ ಮೊದಲ ವಾರದಲ್ಲಿ ಸೋಮಸಂದ್ರಪಾಳ್ಯ ಮ್ಯಾನ್‍ಹೋಲ್‍ಗೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದರು. ಎನ್ ಡಿ ಸೆಫಲ್ ಅಪಾರ್ಟ್ ಮೆಂಟ್ ಬಳಿಯ ಒಳಚರಂಡಿ ನೀರು ಸಂಸ್ಕರಣಾ ಘಟಕ(ಎಸ್ ಟಿಪಿ)ಕ್ಕೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದರು.