Tag: anekal

  • ವಿಷ ಅನಿಲ ಸೇವಿಸಿ ಇಬ್ಬರು ನೌಕರರು ಸಾವು

    ವಿಷ ಅನಿಲ ಸೇವಿಸಿ ಇಬ್ಬರು ನೌಕರರು ಸಾವು

    ಆನೇಕಲ್: ಖಾಸಗಿ ಬ್ಯಾಟರಿ ಕಾರ್ಖಾನೆಯಲ್ಲಿ ವಿಷಾನಿಲ ಸೇವಿಸಿ ಇಬ್ಬರು ನೌಕರರ ಸಾವನ್ನಪ್ಪಿರುವ ಘಟನೆ ಎಕ್ಸಿಡ್ ಬ್ಯಾಟರಿ ಕಂಪೆನಿಯಲ್ಲಿ ನಡೆದಿದೆ.

    ಹೊಸೂರು ಸಮೀಪದ ಕೋತಪಲ್ಲಿ ಗ್ರಾಮದ ನಾಗೇಶ್ (25) ಮತ್ತು ಸೂಡಪುರಂ ಗ್ರಾಮದ ಮಂಜುನಾಥ್ (32) ಸಾವನ್ನಪ್ಪಿದ ಗುತ್ತಿಗೆ ಕೆಲಸಗಾರರು. ಕರ್ನಾಟಕದ ಬಿಲ್ಲಾಪುರ ಹಾಗೂ ತಮಿಳುನಾಡಿನ ಸೇವಗಾನ ಪಳ್ಳಿಯಲ್ಲಿರುವ ಕಂಪೆನಿಯಲ್ಲಿ ತ್ಯಾಜ್ಯ ತೊಟ್ಟಿಯನ್ನು ಸರಿಪಡಿಸುವಾಗ ಈ ಅವಘಡ ನಡೆದಿದೆ.

    ಸ್ಥಳಕ್ಕೆ ಬಾಗಲೂರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಸಿದ್ದು, ಈ ಘಟನೆ ಸಂಬಂಧಪಟ್ಟಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಸಮಸ್ಯೆ

    ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಸಮಸ್ಯೆ

    ಬೆಂಗಳೂರು: ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಸಮಸ್ಯೆ ಉಂಟಾಗಿದೆ.

    ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನೀರಿನ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಳ್ಳಂದೂರು ಕೆರೆ ಕೋಡಿ ಹರಿದಿದ್ದು ಈಗ ನೊರೆ ಬೆಟ್ಟದಂತೆ ಶೇಖರಣೆಯಾಗಿದೆ. ಇದರಿಂದಾಗಿ ಬೆಳ್ಳಂದೂರು – ಹೆಚ್‍ಎಎಲ್ ಮಾರ್ಗವಾಗಿ ಸಂಚರಿಸುವ ವಾಹನ ಸವಾರರ ಮೇಲೆ ಗಾಳಿ ಬಂದಾಗ ನೊರೆಯ ಸಿಂಚನವಾಗಿ ಕಿರಿಕಿರಿ ಅನುಭವಿಸುತ್ತಿದ್ದಾರೆ.

    ಕೆಲ ವರ್ಷಗಳಿಂದ ಈ ಸಮಸ್ಯೆ ಕಾಡುತ್ತಿದ್ದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿ ಟಿ) ಬಿಬಿಎಂಪಿಗೆ ಹಲವು ಬಾರಿ ಚಾಟಿ ಬೀಸಿದ್ರೂ ಸಂಬಂಧಪಟ್ಟ ಅಧಿಕಾರಿಗಳು ಕೆರೆಯನ್ನು ಶುಚಿಗೊಳಿಸಿ, ಕೆರೆಗೆ ಬರುವ ಕರುಷಿತ ನೀರಿಗೆ ಕಡಿವಾಣ ಹಾಕದೆ ಇರುವುದರಿಂದ ಈಗ ಮತ್ತೆ ನೊರೆ ಕಾಣಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=ovmwvtWl0HU

  • ನ್ಯಾಯ ಸಿಗದಿದ್ದರೆ ನನ್ನ ದಾರಿ ನನಗೆ: ಹೈಕಮಾಂಡ್ ವಿರುದ್ಧ ಎಂಟಿಬಿ ಗುಡುಗು

    ನ್ಯಾಯ ಸಿಗದಿದ್ದರೆ ನನ್ನ ದಾರಿ ನನಗೆ: ಹೈಕಮಾಂಡ್ ವಿರುದ್ಧ ಎಂಟಿಬಿ ಗುಡುಗು

    ಆನೇಕಲ್: ಮಂತ್ರಿ ಸ್ಥಾನ ಸಿಗದಿದ್ದರೆ ರಾಜೀನಾಮೆ ಅಥವಾ ಪಕ್ಷ ಬದಲಾವಣೆ ಮಾಡುವಂತೆ ಕಾರ್ಯಕರ್ತರು ಸೂಚಿಸಿದರೆ ಅದಕ್ಕೆ ನಾನು ಸಿದ್ದವೆಂದು ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು ಮಂತ್ರಿ ಮಂಡಲದ ವಿಸ್ತರಣೆ ಮಾಡುವಾಗ ನಿಮಗೂ ಯಾವುದಾದರೂ ಒಂದು ಅವಕಾಶ ಕೊಡುತ್ತೇವೆ ಎಂದು ಹೈಕಮಾಂಡ್ ಹೇಳಿದರು. ವಿದೇಶದಿಂದ ಬಂದ ಬಳಿಕ ಸಿದ್ದರಾಮಯ್ಯ ಅವರು ಏನೂ ಮಾತನಾಡಿಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನನ್ನೊಂದಿಗೆ ಮಾತಾಡಿದ್ದಾರೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ನ್ಯಾಯ ಸಿಗದಿದ್ದರೆ ನನ್ನ ದಾರಿ ನನಗೆ ಎಂದು ಗುಡುಗಿದ್ದಾರೆ.

    ದಿನೇಶ್ ಗುಂಡೂರಾವ್ ಅವರು ಸಂಧಾನ ಮಾಡುತ್ತಿದ್ದು ಇವತ್ತು ಕೂಡ ಮಾತನಾಡಲು ಕರೆದಿದ್ದಾರೆ ಹೀಗಾಗಿ ಹೋಗುತ್ತಿದ್ದೇನೆ. ಸೋಮವಾರ ಸಿದ್ದರಾಮಯ್ಯ, ಜಾರಕಿಹೊಳಿ, ಸುಧಾಕರ್ ಅವರೆಲ್ಲಾ ಮಾತುಕತೆ ಮಾಡಿದ್ದಾರೆ. ಆದರೆ ಏನೂ ಮಾಡಿದ್ದಾರೆ ಎಂಬುದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ ಎಂದರು.

    ನಮಗೂ ನಮ್ಮ ಪಕ್ಷದ ಕಾರ್ಯಕರ್ತರಿಗೆ ಬೇಸರ ಇದೆ. ಏಕೆಂದರೆ ನಾಲ್ಕು ಬಾರಿ ಹೊಸಕೋಟೆಯಲ್ಲಿ ಸ್ಪರ್ಧಿಸಿದ್ದು, 3 ಬಾರಿ ಗೆದ್ದಿದ್ದೇನೆ. ಜನರು ನನ್ನನ್ನು ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ನನಗಿಂತ ಚಿಕ್ಕವರೆಲ್ಲಾ ಕಾಂಗ್ರೆಸ್ ನಲ್ಲಿ ಮಂತ್ರಿ ಗಳಾಗಿದ್ದಾರೆ. 2 ಬಾರಿ ಶಾಸಕರಾದವರು 2 ಬಾರಿ ಮಂತ್ರಿಗಳಾಗಿದ್ದಾರೆ. ಜೆಡಿಎಸ್ ನಿಂದ ಬಂದವರು ಕಾಂಗ್ರೆಸ್ ನಲ್ಲಿ ಮಂತ್ರಿಗಳಾಗಿದ್ದಾರೆ. ನಾನು 35 ವರ್ಷಗಳಿಂದ ಪ್ರಾಮಾಣಿಕವಾಗಿ ನಗರ ಸಭೆ ಸದಸ್ಯನಾಗಿ ಕೆಲಸ ಮಾಡಿದ್ದರಿಂದ ಏನೋ ಕಾಂಗ್ರೆಸ್ ನಿರ್ಲಕ್ಷ್ಯ ಮಾಡುತ್ತಿದೆ. ಇದರಿಂದ ಕಾರ್ಯಕರ್ತರೆಲ್ಲ ಬೇಸರಗೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿಕ್ಷಣಕ್ಕೆ ಸಹಾಯ ಮಾಡಿ ಅನ್ನುತ್ತಿದ್ದಾಳೆ ಪ್ರತಿಭಾವಂತ ಬಾಲಕಿ

    ಶಿಕ್ಷಣಕ್ಕೆ ಸಹಾಯ ಮಾಡಿ ಅನ್ನುತ್ತಿದ್ದಾಳೆ ಪ್ರತಿಭಾವಂತ ಬಾಲಕಿ

    ಬೆಂಗಳೂರು: ಶಿಕ್ಷಣಕ್ಕಾಗಿ ಸಹಾಯ ಮಾಡಿ ಅಂತಾ 13 ವರ್ಷದ ಬಾಲಕಿ ಇಂದು ‘ಬೆಳಕು’ ಕಾರ್ಯಕ್ರಮಕ್ಕೆ ಬಂದಿರುವ ವಿದ್ಯಾರ್ಥಿನಿ ಹೆಸರು ಭವ್ಯಶ್ರೀ.

    ಬೆಂಗಳೂರು ಹೊರವಲಯದ ಅನೇಕಲ್ ತಾಲೂಕಿನ ನೆರಳೂರಿನಲ್ಲಿ ವಾಸಿಸುತ್ತಿದ್ದಾಳೆ. ತಂದೆ 8 ವರ್ಷಗಳ ಹಿಂದೆ ತೀರಿ ಹೋಗಿದ್ದು ತಾಯಿ ಯಲ್ಲಮ್ಮ ಮಗಳ ಶಿಕ್ಷಣಕ್ಕಾಗಿ ಕೂಲಿ ಕೆಲಸ ಮಾಡಿ ಆನೇಕಲ್‍ನ ಸ್ವಾಮಿ ವಿವೇಕಾನಂದ ಶಾಲೆಗೆ ಸೇರಿಸಿದ್ದಾರೆ.

    ಆಟ ಪಾಠದಲ್ಲಿ ತುಂಬಾ ಚೂಟಿಯಾಗಿರುವ ಭವ್ಯಶ್ರೀ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ತಾಯಿ ಯಲ್ಲಮ್ಮಗೆ ಕಣ್ಣಿನ ಕ್ಯಾನ್ಸರ್ ಕೊನೆ ಹಂತ ತಲುಪಿದ್ದು ತನ್ನ ಕೆಲಸ ತಾನು ಮಾಡಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ತಾಯಿ ಯಲ್ಲಮ್ಮಗೆ ಚಿಕಿತ್ಸೆ ಪಡೆಯಲು ಆಗದೇ, ಮಗಳ ವಿದ್ಯಾಭ್ಯಾಸಕ್ಕೆ ಶುಲ್ಕ ಪಾವತಿಸಲಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭವ್ಯಶ್ರೀ ತಾಯಿಯನ್ನು ನೋಡಿಕೊಳ್ಳೋದ್ರ ಜೊತೆಗೆ ವಿದ್ಯಾಭ್ಯಾಸ ಮುಂದುವರಿಸಬೇಕಾಗಿದೆ.

    ಕಡು ಬಡತನದಲ್ಲಿರುವ ಈ ಕುಟುಂಬಕ್ಕೆ ಸೋದರಮಾವ ಆಸರೆಯಾಗಿದ್ದಾರೆ. ವಿದ್ಯಾರ್ಥಿನಿ ಭವ್ಯಶ್ರೀ ವಿದ್ಯಾಭ್ಯಾಸಕ್ಕೆ ಹಾಗೂ ತಾಯಿಯ ಆರೈಕೆಗೆ ಹಣವಿಲ್ಲದೆ ಪರದಾಡುತ್ತ ನೆರವಿಗಾಗಿ ಅಂಗಲಾಚುತ್ತಿದ್ದಾಳೆ. ಯಾರಾದ್ರೂ ದಾನಿಗಳು ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ಮೂಲಕ ನೆರವು ಬಯಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=CJKaHx7Sw0A

  • ಕೆಎಸ್‌ಆರ್‌ಟಿಸಿ ಬಸ್ ಎಂಜಿನ್‍ಗೆ ಬೆಂಕಿ: 30 ಪ್ರಯಾಣಿಕರು ಬಚಾವ್

    ಕೆಎಸ್‌ಆರ್‌ಟಿಸಿ ಬಸ್ ಎಂಜಿನ್‍ಗೆ ಬೆಂಕಿ: 30 ಪ್ರಯಾಣಿಕರು ಬಚಾವ್

    ಬೆಂಗಳೂರು: ಆನೇಕಲ್ ಬಸ್ ನಿಲ್ದಾಣದಿಂದ ಹೊರಡಲು ಸಿದ್ಧವಾಗಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

    ಹೊಸೂರು ಮಾರ್ಗವಾಗಿ ಆನೇಕಲ್-ತಮಿಳುನಾಡು ಸಂಚರಿಸುವ ಎಕೆ-41 ಜಿ-038 ನಂಬರಿನ ಬಸ್ಸು ಆನೇಕಲ್ ಬಸ್ ನಿಲ್ದಾಣದಲ್ಲಿ ಬಂದು ನಿಂತಿತ್ತು. ಬಳಿಕ 30 ಜನ ಪ್ರಯಾಣಿಕರನ್ನು ಹೊತ್ತು ಹೊಸೂರು ಕಡೆ ತೆರಳಲು ಸಿದ್ಧವಾಗಿತ್ತು. ಆದರೆ ಬಸ್ಸಿನ ಎಂಜಿನ್‍ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಜಾಗೃತನಾದ ಚಾಲಕ ಪ್ರಯಾಣಿಕರನ್ನು ಕೆಳಗೆ ಇಳಿಯುವಂತೆ ಸೂಚಿಸಿ, ನೀರು ಹಾಕಿ ಬೆಂಕಿ ನಂದಿಸಿದ್ದಾರೆ.

    ಕೆಲ ಹೊತ್ತು ಬಸ್ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹಳೇ ವಾಹನಗಳನ್ನು ಸಂಚಾರಕ್ಕೆ ಬಿಡುತ್ತಾರೆ. ಕಳೆದ ವಾರವೂ ಸಹ ಇಂತಹದ್ದೇ ಘಟನೆ ನಡೆದಿದ್ದು, ಕೂಡಲೇ ಹಳೆಯ ಬಸ್ಸುಗಳನ್ನು ಬದಲಾವಣೆ ಮಾಡಿ ಮುಂದಾಗುವ ಅನಾಹುತಗಳನ್ನು ತಡೆಯಬೇಕು ಎಂದು ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಡಿಪೋ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿನಿಮಾ ಶೈಲಿಯಲ್ಲಿ ವ್ಯಕ್ತಿಯನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ!

    ಸಿನಿಮಾ ಶೈಲಿಯಲ್ಲಿ ವ್ಯಕ್ತಿಯನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ!

    ಆನೇಕಲ್: ಬಡ್ಡಿ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿದ ವ್ಯಕ್ತಿಯನ್ನು ಸಿನಿಮಾ ಶೈಲಿಯಲ್ಲಿ ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ.

    ನಾರಾಯಣಸ್ವಾಮಿ (32) ಹಲ್ಲೆಗೊಳಗಾದ ವ್ಯಕ್ತಿ. ಹೊಸಕೋಟೆಯ ಕೆ ಮುತ್ಸಂದ್ರ ಗ್ರಾಮದ ನಿವಾಸಿ ನಾರಾಯಣಸ್ವಾಮಿಯನ್ನು ಕುಂಬಳಹಳ್ಳಿ ಗ್ರಾಮದ ನಿವಾಸಿಗಳಾದ ಪ್ರಕಾಶ್, ಶಶಿ ಹಾಗೂ ಇಬ್ಬರು ಸಹಚರರು ನಿನ್ನೆ ರಾತ್ರಿ 10 ಕ್ಕೆ ಮುತ್ಸಂದ್ರ ಗ್ರಾಮದ ಗೇಟ್‍ನ ಹೋಟೆಲ್ ಬಳಿ ಹಲ್ಲೆ ನಡೆಸಿ ಅಲ್ಟೋ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ.

    ನಂತರ ಬೆಂಗಳೂರು ಪೂರ್ವ ತಾಲೂಕಿನ ಕಾಡುಗೋಡಿ ಸಮೀಪದ ಬನಹಳ್ಳಿ ಬಳಿ ಕರೆ ತಂದು ಕೊಲೆ ಮಾಡಲು ಯತ್ನಿಸಿದಾಗ ಸಿನಿಮಾದ ರೀತಿಯಲ್ಲಿ ಅಪಹರಣಕಾರರಿಂದ ನಾರಾಯಣಸ್ವಾಮಿ ತಪ್ಪಿಸಿಕೊಂಡು ಬಂದಿದ್ದಾರೆ. ಬಳಿಕ ಖಾಸಗಿ ಶಾಲೆಯೊಂದರ ಸೆಕ್ಯೂರಿಟಿ ಗಾರ್ಡ್ ಮೊಬೈಲ್ ನಿಂದ ತಮ್ಮ ಅಣ್ಣನಿಗೆ ಕಾಲ್ ಮಾಡಿ ಕರೆಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದು, ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರಮಹಾಲಕ್ಷ್ಮಿ ಹಬ್ಬದಂದೇ ಆನೇಕಲ್‍ನಲ್ಲಿ ಕಳ್ಳರ ಕೈಚಳಕ!

    ವರಮಹಾಲಕ್ಷ್ಮಿ ಹಬ್ಬದಂದೇ ಆನೇಕಲ್‍ನಲ್ಲಿ ಕಳ್ಳರ ಕೈಚಳಕ!

    ಆನೇಕಲ್: ವರಮಹಾಲಕ್ಷ್ಮಿ ಹಬ್ಬದಂದೇ ಮುಸುಕುದಾರಿ ಕಳ್ಳರು ಬಾಗಿಲು ಮುರಿದು ನಗದು, ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಸರ್ಜಾಪುರದ ಎಸ್.ಎನ್.ಆರ್. ಬಡಾವಣೆಯ ಮನೆಯೊಂದರಲ್ಲಿ ನಡೆದಿದೆ.

    ಮುನಿಸ್ವಾಮಿ ಎನ್ನುವವರ ಮನೆಯಲ್ಲಿ ನಾಲ್ವರು ಮುಸುಕುದಾರಿ ಕಳ್ಳರಿಂದ ಕೃತ್ಯ ಎಸಗಿದ್ದು, ನಾಲ್ಕು ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಲೂಟಿ ಮಾಡಲಾಗಿದೆ. ಖತರ್ನಾಕ್ ಕಳ್ಳರು ಕೆಲ ಮನೆಗಳ ಬಳಿ ಬಂದು ಸಿಸಿಟಿವಿ ಇರುವುದು ನೋಡಿ ವಾಪಾಸ್ ಆಗಿದ್ದಾರೆ. ಕೊನೆಗೆ ಸಿಸಿಟಿವಿ ಇಲ್ಲದ ಮನೆ ನೋಡಿ ಕಳ್ಳತನ ಮಾಡಿದ್ದಾರೆ.

    ಈ ಘಟನೆ ಪಕ್ಕದ ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ಗೇಟ್ ತೆಗೆದು ಒಳನುಗ್ಗುತ್ತಿರುವ ದೃಶ್ಯ ಸೆರೆಯಾಗಿದೆ. ಇದೇ ರೀತಿ ಎಸ್ ಎನ್ ಆರ್ ಬಡಾವಣೆಯಲ್ಲಿ ಸತತ ನಾಲ್ಕನೇ ಬಾರಿ ಕಳ್ಳತನ ನಡೆದಿದ್ದು, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಅಂತ ಬಡಾವಣೆಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಡ್ ಬಳಸಿ ಡೋರ್ ಒಡೆದು ಕಳ್ಳರ ಕೈಚಳಕ

    ರಾಡ್ ಬಳಸಿ ಡೋರ್ ಒಡೆದು ಕಳ್ಳರ ಕೈಚಳಕ

    ಆನೇಕಲ್: ರಸ್ತೆ ಬದಿಯಲ್ಲಿರುವ ಮೆಡಿಕಲ್ ಶಾಪ್ ಹಾಗೂ ಪ್ರಾವಿಜನ್ ಸ್ಟೋರ್ ಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕು ನಂದಗುಡಿಯಲ್ಲಿ ನಡೆದಿದೆ.

    ನಗರದ ಗಾಂಧಿ ಸರ್ಕಲ್ ಮತ್ತು ಕೆನರಾ ಬ್ಯಾಂಕ್ ಎಟಿಮ್ ಪಕ್ಕದಲ್ಲಿ ಇರುವ ಮಧು ಮೆಡಿಕಲ್ಸ್ ಮತ್ತು ಪ್ರಾವಿಜನ್ ಸ್ಟೋರ್ ನಲ್ಲಿ ಮಂಗಳವಾರ ನಸುಕಿನ ಜಾವ 2.30 ರ ವೇಳೆ ಕಾರಿನಲ್ಲಿ ಬಂದ ನಾಲ್ವರು ಕಳ್ಳರು ರಾಡ್ ಸಹಾಯದಿಂದ ಡೋರ್ ಒಡೆದು ಒಳನುಗ್ಗಿದ್ದಾರೆ. ಬಳಿಕ ಕ್ಯಾಶ್ ಬಾಕ್ಸ್ ನಲ್ಲಿ ಇದ್ದ ಸುಮಾರು 25 ಸಾವಿರ ರೂ. ನಗದು ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಮುಂಜಾನೆ ಪೇಪರ್ ಹಾಕುವ ಹುಡುಗರು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

    ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ನಂದಗುಡಿ ಪೊಲೀಸರು ಪರಿಶೀಲನೆ ನಡೆಸಿ, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೈಕ್‍ಗೆ ಹಿಂದಿನಿಂದ ಲಾರಿ ಡಿಕ್ಕಿ – ಸವಾರ ಸಾವು, ಮತ್ತೊರ್ವನಿಗೆ ಗಂಭೀರ ಗಾಯ

    ಬೈಕ್‍ಗೆ ಹಿಂದಿನಿಂದ ಲಾರಿ ಡಿಕ್ಕಿ – ಸವಾರ ಸಾವು, ಮತ್ತೊರ್ವನಿಗೆ ಗಂಭೀರ ಗಾಯ

    ಆನೇಕಲ್: ಲಾರಿ ಚಾಲಕನ ಅತಿವೇಗದ ಚಾಲನೆಯಿಂದ ಓರ್ವ ಬೈಕ್ ಸವಾರ ಮೃತಪಟ್ಟಿದ್ದು, ಇನೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ.

    ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ 7 ಗಂಟೆಗೆ ಬೆಂಗಳೂರಿನಿಂದ ಹೊಸೂರು ಕಡೆ ಬರುತ್ತಿದ್ದ ಬೈಕ್ ಸವಾರನಿಗೆ ಹಿಂಬದಿಯಿಂದ ಅತಿವೇಗವಾಗಿ ಬಂದ ಲಾರಿ ಚಾಲಕ ನಿಯಂತ್ರಣ ತಪ್ಪಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ್ದಾನೆ. ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟಿದ್ದು, ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡಿರುವ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಮೃತಪಟ್ಟವನನ್ನು ತಮಿಳುನಾಡಿನ ಕೃಷ್ಣಗಿರಿ ಮೂಲದವರು ಎಂದು ಹೇಳಲಾಗಿದ್ದು, ಅಪಘಾತ ನಡೆದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕಣ್ಣು ಬಿಡುವ ಮುನ್ನವೇ ತಾಯಿಯಿಂದ ಬೇರ್ಪಟ್ಟ ಸಿಂಹದ ಮರಿಗಳು – ಮೇಕೆಯೇ ಅಮ್ಮ

    ಕಣ್ಣು ಬಿಡುವ ಮುನ್ನವೇ ತಾಯಿಯಿಂದ ಬೇರ್ಪಟ್ಟ ಸಿಂಹದ ಮರಿಗಳು – ಮೇಕೆಯೇ ಅಮ್ಮ

    – ಅಪರೂಪದ ಕಾರ್ಯಕ್ಕೆ ಸಾಕ್ಷಿಯಾಯ್ತು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್

    ಆನೇಕಲ್ : ಕಣ್ಣು ಬಿಡುವ ಮುನ್ನವೇ ತನ್ನ ತಾಯಿಯಿಂದ ಬೇರ್ಪಟ್ಟಿದ್ದ ಸಿಂಹದ ಮರಿಗಳಿಗೆ ಹೊಸ ತಾಯಿಯನ್ನು ನೀಡುವ ಮೂಲಕ ಅವುಗಳಿಗೆ ಮರುಜೀವ ನೀಡಿರುವ ಅಪರೂಪದ ಕಾರ್ಯಕ್ಕೆ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಸಾಕ್ಷಿಯಾಗಿದೆ.

    ನಗರದ ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಳೆದ ಒಂದು ತಿಂಗಳ ಹಿಂದೆ ಸನಾ ಹಾಗೂ ಶಂಕರ್ ಎಂಬ ಸಿಂಹಗಳು ಮುದ್ದಾದ ಸಿಂಹದ ಮರಿಗಳಿಗೆ ಜನ್ಮ ನೀಡಿದ್ದವು. ಒಂದು ತಿಂಗಳ ಹಿಂದೆ ಸನಾ 4 ಸಿಂಹದ ಮರಿಗಳಿಗೆ ಜನ್ಮ ನೀಡಿತ್ತು. ಆದರೆ ಹುಟ್ಟಿದ್ದ ಒಂದೇ ದಿನಕ್ಕೆ 1 ಮರಿಯನ್ನ ತಿಂದು ಹಾಕಿದ್ದ ಸನಾ ಮತ್ತೊಂದು ಮರಿಯನ್ನ ತುಳಿದು ಕೊಂದಿತ್ತು. ಇನ್ನುಳಿದ ಎರಡು ಮರಿಗಳ ಆರೈಕೆಯನ್ನು ಮಾಡುವ ಸ್ಥಿತಿಯಲ್ಲಿ ಆಕೆ ಇರಲಿಲ್ಲ. ಹೀಗಾಗಿ ಈ ಎರಡು ಮರಿಗಳನ್ನ ಕಣ್ಣು ಬಿಡುವ ಮುನ್ನವೇ ಉದ್ಯಾನವನದ ಅಧಿಕಾರಿಗಳು ತಾಯಿ ಸನಾಳಿಂದ ಅನಿವಾರ್ಯವಾಗಿ ದೂರ ಮಾಡಿ ಆರೈಕೆ ಮಾಡಿದ್ದರು.

    ತಾಯಿಯಿಂದ ಬೇರ್ಪಟ್ಟಿದ್ದ ಮರಿಗಳಿಗೆ ಹಾಲು ಕೂಡಿಸುವುದೇ ದೊಡ್ಡ ಸಮಸ್ಯೆಯಾಗಿತ್ತು. ಇದರಿಂದ ಪಾರ್ಕ್ ನ ವೈದ್ಯ ಡಾ. ಉಮಾಶಂಕರ್ ಮರಿಗಳಿಗೆ ಮೇಕೆಯ ಹಾಲು ಪೂರೈಸಲು 3 ಮೇಕೆಗಳನ್ನ ಖರೀದಿಸಿ ಮರಿಗಳಿಗೆ ಮೇಕೆಗಳನ್ನು ಎರಡನೇ ತಾಯಿಯಾಗಿ ಪರಿಚಯಿಸಿದರು. ಮೇಕೆ ಹಾಲನ್ನು ಕುಡಿದ ಸಿಂಹದ ಮರಿಗಳು ಕ್ರಮೇಣ ಚೇತರಿಸಿಕೊಂಡು ಈಗ ಆರೋಗ್ಯವಾಗಿದ್ದು, ಇಂದು ಮೃಗಾಲಯದ ಪ್ರಮುಖ ಆಕರ್ಷಣೆಯಯಾಗಿದೆ.

    ಪುಟ್ಟ ಮರಿಗಳನ್ನು ತಾಯಿಯಿಂದ ಬೇರೆ ಮಾಡಿ ಅವುಗಳನ್ನ ಉಳಿಸಿಕೊಂಡಿರುವುದು ಪಾರ್ಕ್ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದ್ದು, ಈ ಹಿಂದೆ ಸಹ ಸನಾ ತನ್ನ ಎಲ್ಲಾ ಮರಿಗಳನ್ನ ತಿಂದು ಹಾಕಿತ್ತು. ಹೀಗಾಗಿ ಈ ಬಾರಿಯೂ ಅದೇ ರೀತಿ ತೊಂದರೆ ಮಾಡಬಹುದೆಂಬ ಮುಂಜಾಗ್ರತೆ ವಹಿಸಿದ ಪಾರ್ಕ್ ಡಿಡಿ ಕುಶಾಲಪ್ಪ ಹಾಗೂ ಇಡಿ ಗೋಕುಲ್ ಹೊಸ ಉಪಾಯ ಮಾಡಿ ಮರಿಗಳನ್ನ ಉಳಿಸಿಕೊಂಡಿದ್ದಾರೆ.

    ಒಂದು ತಿಂಗಳ ಮರಿಗಳು ಸ್ವಲ್ಪ ಮಾಂಸಾಹಾರ ಸಹ ಸೇವನೆ ಮಾಡುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಮಕ್ಕಳಂತೆ ಓಡಾಡಿಕೊಂಡಿರುವ ಈ ಸಿಂಹದ ಮರಿಗಳನ್ನು ಆರೈಕೆ ಮಾಡುವಲ್ಲಿ ಸಿಬ್ಬಂದಿಗಳು ಕಾರ್ಯವೂ ಇದೆ. ಸದ್ಯ ಇನ್ನು ಎರಡು ತಿಂಗಳ ಕಾಲ ಮರಿಗಳಿಗೆ ಆರೈಕೆ ಅಗತ್ಯವಿದ್ದು, ಬಳಿಕ ತಾಯಿ ಸನಾ ಜೊತೆ ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಇದೇ ರೀತಿ ಮರಿಗಳನ್ನು ತಿನ್ನುವ ಇನ್ನೂ ಕೆಲವು ಚಿರತೆಗಳಿದ್ದು ಅವುಗಳ ಮರಿಗಳನ್ನು ಕೂಡ ಇದೇ ರೀತಿ ರಕ್ಷಣೆ ಮಾಡಿ ಜೀವಂತ ಉಳಿಸಿಕೊಳ್ಳಬಹುದು ಎಂದು ಡಿಡಿ ಕುಶಾಲಪ್ಪ ತಿಳಿಸಿದ್ದಾರೆ.  ಇದನ್ನೂ ಓದಿ: ಅಮ್ಮನಿಂದ ಬೇರ್ಪಟ್ಟ ಕೋತಿಗೆ ಇದೀಗ ಮೇಕೆಯೇ ತಾಯಿ!

    ತಾಯಿ ಬಳಿ ಹಾಲನ್ನೇ ಕುಡಿಯದ ಆ ಪುಟ್ಟ ಸಿಂಹದ ಮರಿಗಳಿಗೆ ಪಾರ್ಕ್‍ನ ಸಿಬ್ಬಂದಿ ಹಾಗೂ ವೈದ್ಯರೇ ತಂದೆ-ತಾಯಿಯಾಗುವ ಮೂಲಕ ಪೋಷಣೆ ಮಾಡುತ್ತಿದ್ದು, ತಾಯಿ ಮಡಿಲು ಸೇರಲು ಸಿದ್ಧವಾಗಿರುವ ಮರಿಗಳನ್ನ ಇನ್ನೂ ಕೆಲವೇ ತಿಂಗಳುಗಳಲ್ಲಿ ತಾಯಿ ಸನಾ ಜೊತೆ ಸಫಾರಿಯಲ್ಲಿ ಪ್ರವಾಸಿಗರು ವೀಕ್ಷಣೆ ಮಾಡಬಹುದಾಗಿದೆ.  ಇದನ್ನೂ ಓದಿ: ತಾಯಿ ಸಿಂಹದ ಹೊಟ್ಟೆ ಸೇರುತ್ತಿದ್ದ 2 ಮರಿಗಳನ್ನು ರಕ್ಷಿಸಿದ ಸಿಬ್ಬಂದಿ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews