Tag: anekal

  • ನಿಧಿ ಕದಿಯಲು ಹೋದ ಚೋರರ ಮೇಲೆ ಕುಸಿದ ಪಾಳು ಮಂಟಪ- ಓರ್ವ ಸಾವು

    ನಿಧಿ ಕದಿಯಲು ಹೋದ ಚೋರರ ಮೇಲೆ ಕುಸಿದ ಪಾಳು ಮಂಟಪ- ಓರ್ವ ಸಾವು

    ಆನೇಕಲ್: ನಿಧಿ ಕದಿಯಲು ಹೋದ ಕಳ್ಳರ ಮೇಲೆ ಪಾಳು ಬಿದ್ದ ಮಂಟಪ ಕುಸಿದು ಓರ್ವ ಮೃತಪಟ್ಟು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಹಿಂಡಿಗನಾಳ ಗ್ರಾಮದಲ್ಲಿ ನಡೆದಿದೆ.

    ಇದೇ ಗ್ರಾಮದ ಗ್ರಾಮದ ಸುರೇಶ್ (23) ನಿಧಿ ಮಂಟಪದ ಕೆಳಗೆ ಸಿಲುಕಿ ಮೃತಪಟ್ಟಿರುವ ದುರ್ದೈವಿ. ಒಟ್ಟು 9 ಜನರ ತಂಡ ಹಿಂಡಿಗನಾಳ ಗ್ರಾಮದ ಹೆದ್ದಾರಿ ರಸ್ತೆಯ ಬಳಿ ಇರುವ ಸುಮಾರು 1000 ವರ್ಷಗಳ ಪುರಾತನ ಸರೋವರ ಆಂಜನೇಯ ಸ್ವಾಮಿ ದೇವಾಲಯದ ನಿಧಿಗೆ ಕನ್ನ ಹಾಕಲು ಮುಂದಾಗಿದ್ದಾರೆ.

    ನಿಧಿ ತೆಗೆಯಲು ಈ ಚೋರರು ಮುಂದಾದಾಗ ದೇವಾಲಯ ಪುರಾತನವಾದ್ದರಿಂದ ಮಂಟಪ ಇದ್ದಕ್ಕಿದ್ದಂತೆ ಕುಸಿದಿದೆ. ಪರಿಣಾಮ ಮಂಟಪದ ಅಡಿಯಲ್ಲಿ ಸಿಲುಕಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಉಳಿದಂತೆ ಮಂಟಪದ ಅಡಿಯಲ್ಲಿ 3 ಜನ ಸಿಲುಕಿಕೊಂಡಿದ್ದಾರೆ.

    ಈ ಸಮಯದಲ್ಲಿ ಮಂಟಪದ ಅಡಿಯಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವ ಸಲುವಾಗಿ ಜೊತೆಯಲ್ಲಿಯೇ ನಿಧಿ ತೆಗೆಯಲು ಬಂದಂತಹ ಇತರೆ ಸಹಚರರು 108 ಅಂಬುಲೆನ್ಸ್ ಗೆ ಕರೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬಂದ ಅಂಬುಲೆನ್ಸ್ ಚಾಲಕನು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

    ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಕೆಂಬಡಿಗಾನಹಳ್ಳಿ ಗ್ರಾಮದ ಶ್ರೀನಿವಾಸ (22) ಮತ್ತು ಮಂಜುನಾಥ್ (23) ಹಾಗೂ ಯಲಹಂಕದ ಸಬಾಸಿನ್ (22) ಎಂಬವರನ್ನ ರಕ್ಷಿಸಿ ವಶಕ್ಕೆ ಪಡೆದಿದ್ದಾರೆ. ಮಧ್ಯರಾತ್ರಿ 12 ಗಂಟೆಯ ಸಮಯದಲ್ಲಿ ಈ ದುಷ್ಕರ್ಮಿಗಳು ದೇವಾಲಯದಲ್ಲಿ ನಿಧಿ ತೆಗೆಯಲು ಮುಂದಾದ ವೇಳೆ ಈ ಘಟನೆ ನಡೆದಿದೆ.

    ಈ ಸಂಬಂಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಪ್ರೀತಿಸುವ ನಾಟಕವಾಡಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

    ಪ್ರೀತಿಸುವ ನಾಟಕವಾಡಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಕೊರೊನಾ ಸಮಯದಲ್ಲಿ ಪ್ರೀತಿ ನಾಟಕವಾಡಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಸದಸ್ಯರನ್ನು ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಮುನೇಂದ್ರ, ನಾಗೇಶ್, ನವೀನ್, ಶಂಶಾಕ್, ಮಹೇಂದ್ರ ಹಾಗೂ ಅಣ್ಣಮ್ಮ ಎಂದು ಗುರುತಿಸಲಾಗಿದೆ. ಈ ಗ್ಯಾಂಗ್ ಯುವತಿಯಿಂದ ಕರೆ ಮಾಡಿಸಿ ಯುವಕರನ್ನು ಯಾರು ಇಲ್ಲದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ನಂತರ ಅವರನ್ನು ಹೆದರಿಸಿ ಅವರ ಹತ್ತಿರ ಇದ್ದ ಹಣವನ್ನು ಕಸಿದುಕೊಂಡು ಕಳುಹಿಸುತ್ತಿತ್ತು.

    ಇತ್ತೀಚೆಗೆ ಈ ಗ್ಯಾಂಗ್ ಆನೇಕಲ್‍ನ ಕಿರಣ್‍ಗೆ ಯುವತಿಯಿಂದ ಕರೆ ಮಾಡಿಸಿ. ಪ್ರೀತಿ ಪ್ರೇಮದ ನಾಟಕವಾಡಿಸಿದ್ದಾರೆ. ನಂತರ ಒಂದು ದಿನ ಯುವತಿ ಕಾಲ್ ಮಾಡಿ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾಳೆ. ಅಲ್ಲಿ ಈ ಗ್ಯಾಂಗ್‍ನ ಯುವಕರು ಕಿರಣ್‍ನನ್ನು ಹೆದರಿಸಿ ಸುಲಿಗೆ ಮಾಡಿದ್ದರು. ಈ ವಿಚಾರವಾಗಿ ಕಿರಣ್ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.

  • ಬಾತ್ ರೂಂ ಒಳಗಡೆ ಹೋಗೋದಕ್ಕೂ ಕಷ್ಟ- ಕ್ವಾರಂಟೈನ್  ಸೆಂಟರ್‌ನಲ್ಲಿ ಯಮಯಾತನೆ

    ಬಾತ್ ರೂಂ ಒಳಗಡೆ ಹೋಗೋದಕ್ಕೂ ಕಷ್ಟ- ಕ್ವಾರಂಟೈನ್ ಸೆಂಟರ್‌ನಲ್ಲಿ ಯಮಯಾತನೆ

    ಆನೇಕಲ್: ಚೀನಾದ ಮಹಾಮಾರಿ ವೈರಸ್ ರಾಜ್ಯಕ್ಕೆ ಎಂಟ್ರಿ ಕೊಟ್ಟ ಬಳಿಕ ಆಸ್ಪತ್ರೆ ಹಾಗೂ ಕ್ವಾರಂಟೈನ್ ಸೆಂಟರ್ ಗಳ ಒಂದೊಂದೇ ಭಯಾನಕ ದೃಶ್ಯಗಳು ಹೊರಬರುತ್ತಿವೆ. ಇದೀಗ ಅದೇ ರೀತಿ ಆನೇಕಲ್ ಕ್ವಾರಂಟೈನ್ ಸೆಂಟರಿನ ಅವ್ಯವಸ್ಥೆಯು ಕೂಡ ಬಯಲಾಗಿದೆ.

    ಆನೇಕಲ್ ಕಿತ್ತೂರು ರಾಣಿ ಚೆನ್ನಮ್ಮ ಹಾಸ್ಟೆಲ್‍ನಲ್ಲಿ ಕೊರೊನಾ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಸರ್ಕಾರಿ ಕ್ವಾರಂಟೈನ್ ಕೇಂದ್ರದಲ್ಲಿ ಸದ್ಯ 35 ಜನ ಇದ್ದು, ಇದೀಗ ಅಲ್ಲಿನ ಕ್ವಾರಂಟೈನಿಗಳು ಪಬ್ಲಿಕ್ ಟಿವಿಗೆ ಕರೆಮಾಡಿ ತಮ್ಮ ಕಷ್ಟ ತೋಡಿಕೊಂಡಿದ್ದಾರೆ.

    ಕ್ವಾರಂಟೈನ್‍ನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಸೋಂಕು ದೃಢವಾಗಿದೆ. ಸ್ವಚ್ಛತೆ ಇಲ್ಲ, ಕ್ವಾರಂಟೈನ್‍ನಲ್ಲಿರೋರಿಗೆ ಪಾಸಿಟಿವ್ ಬಂದ್ರೂ ಸ್ಯಾನಿಟೈಸ್ ಇಲ್ಲ. ಪಾಸಿಟಿವ್ ಬಂದ ಕೆಲವರವನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ಹೋದ ನಂತರ ಬೇಡ್ ಗಳನ್ನು ಕ್ಲೀನ್ ಮಾಡಲ್ಲ. ಬಾತ್ ರೂಂ ನ ಒಳಗಡೆ ಹೋಗೋದಕ್ಕು ಕಷ್ಟವಾಗತ್ತೆ ಎಂಬ ಆರೋಪ ಕೇಳಿಬಂದಿದೆ. ಯಾರೂ ಇಲ್ಲಿ ನಮ್ಮನ್ನು ಕೇರ್ ಮಾಡಲ್ಲ. ನಾವೇನು ಇಲ್ಲಿಗೆ ಗತಿಗೆಟ್ಟು ಬಂದಿದ್ದೀವಾ ಅಂತ ಅಳಲನ್ನು ತೋಡಿಕೊಂಡಿದ್ದಾರೆ.

    ಬಾತ್ ರೂಂ ಒಳಗಡೆ ಹೋಗೋದಕ್ಕೆ ಕೂಡ ಕಷ್ಟವಾಗತ್ತೆ. ಈ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದ್ರೆ ನಮ್ಮ ಕೆಲಸವಲ್ಲ ಅಂತ ಹೇಳುತ್ತಾರೆ. ತಾಲೂಕು ದಂಡಾಧಿಕಾರಿಗಳು ನಾಪತ್ತೆಯಾಗಿದ್ದಾರೆ. ಜೊತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ಯಾರೂ ಇಲ್ಲ ಎಂದು ಸೋಂಕಿತರ ಸಂಪರ್ಕ ದಲ್ಲಿ ಇದ್ದವರು ಪಬ್ಲಿಕ್ ಟಿವಿಗೆ ಕರೆಮಾಡಿ ತಮ್ಮ ಕಷ್ಟವನ್ನು ಹಂಚಿಕೊಂಡಿದ್ದಾರೆ.

    ಒಟ್ಟಿನಲ್ಲಿ ಹಾಸ್ಟೆಲ್ ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜಗಳಕ್ಕೆ ಸೋಂಕಿತ ರೋಗಿಗಳ ಸಂಬಂಧಿಕರು ಪರದಾಟ ಅನುಭವಿಸುವಂತಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ವ್ಯವಸ್ಥೆ ಸರಿಪಡಿಸಬೇಕಾಗಿ ಕ್ವಾರಂಟೈನಿಗಳು ಆಗ್ರಹಿಸಿದ್ದಾರೆ.

  • ಸರ್ಕಾರಕ್ಕೆ ಕ್ವಾರಂಟೈನ್‍ನಲ್ಲಿರೋರಿಗೆ ಸರಿಯಾದ ಊಟ ಕೊಡೋ ಯೋಗ್ಯತೆ ಇಲ್ಲ: ಡಿ.ಕೆ.ಸುರೇಶ್

    ಸರ್ಕಾರಕ್ಕೆ ಕ್ವಾರಂಟೈನ್‍ನಲ್ಲಿರೋರಿಗೆ ಸರಿಯಾದ ಊಟ ಕೊಡೋ ಯೋಗ್ಯತೆ ಇಲ್ಲ: ಡಿ.ಕೆ.ಸುರೇಶ್

    – ಸರ್ಕಾರದ ಬಳಿ ಬೆಡ್ಡು, ದುಡ್ಡು, ಸ್ಟಾಪ್ ಏನೂ ಇಲ್ಲ

    ಆನೇಕಲ್: ಸರ್ಕಾರಕ್ಕೆ ಕ್ವಾರಂಟೈನ್‍ನಲ್ಲಿ ಇರುವವರಿಗೆ ಸರಿಯಾದ ಊಟ ಕೊಡುವ ಯೋಗ್ಯತೆ ಇಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಅವರು ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ್ದಾರೆ.

    ಇಂದು ಆನೇಕಲ್ ತಾಲೂಕಿನ ಕಾಡು ಜಕ್ಕನಹಳ್ಳಿಯ ಸೂರ್ಯ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸುರೇಶ್ ಅವರು, ಒಂದಿನ ಬೆಂಗಳೂರಿಗೆ ರಾಮುಲು ಉಸ್ತುವಾರಿ ಇನ್ನೊಂದಿನ ಅಶ್ವಥ್ ನಾರಾಯಣ್ ಉಸ್ತುವಾರಿ ಮತ್ತೊಂದಿನ ಸುಧಾಕರ್ ಹಾಗೂ ಅಶೋಕ್ ನೋಡಿಕೊಳ್ಳುತ್ತಾರೆ ಅಂತಾರೆ ಇವರಲ್ಲೇ ಗೊಂದಲ ಇದೆ ಎಂದರು.

    ಕೊರೊನಾ ವೈರಸ್ ಹರಡದಂತೆ ತಡೆಯಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರದ ಬಳಿ ಕೋವಿಡ್-19 ತಡೆಗಟ್ಟಲು ಬೆಡ್ಡು, ದುಡ್ಡು, ಸ್ಟಾಪ್ ಮತ್ತು ಆಸ್ಪತ್ರೆಗಳು ಇಲ್ಲ. ಕೋವಿಡ್ ಆಸ್ಪತ್ರೆ ಕ್ವಾರಂಟೈನ್‍ನಲ್ಲಿರೋರಿಗೆ ಸರಿಯಾದ ಊಟ ಕೊಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. ಇದು ಜವಾಬ್ದಾರಿ ಇಲ್ಲದ ಸರ್ಕಾರ ಬೇಜವಾಬ್ದಾರಿ ಉತ್ತರ ನೀಡಿಕೊಂಡೇ ಕಾಲ ಕಳೆಯುತ್ತಿದ್ದಾರೆ. ಈ ಸರ್ಕಾರ ಮಾಧ್ಯಮಗಳಲ್ಲಿ ಜನರನ್ನು ನಂಬಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

    ಕೊರೊನಾ ಪಾಸಿಟಿವ್ ಬಂದವರು ರೋಡಿನಲ್ಲಿ ನಿಲ್ಲುವಂತ ಪರಿಸ್ಥಿತಿ ಬಂದಿದೆ. ಪಾಸಿಟಿವ್ ಬಂದವರನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳದೆ ರೋಗದ ಲಕ್ಷಣಗಲಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಕೇವಲ ಪ್ರಚಾರಕ್ಕಾಗಿ ಮೀಡಿಯಾ ಮುಂದೆ ಮಾತನಾಡುತ್ತಾರೆ. ಆಸ್ಪತ್ರೆಗಳಲ್ಲಿ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಆಸ್ಪತ್ರೆಯ ಟಾಯ್ಲೆಟ್ ಶುಚಿಗೊಳಿಸಲು ಇವರ ಬಳಿ ಸಿಬ್ಬಂದಿಯಿಲ್ಲ ಎಂದು ಸುರೇಶ್ ಅವರು ಆರೋಪ ಮಾಡಿದ್ದಾರೆ.

  • ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಅವಘಡ- ಇಬ್ಬರು ಸಾವು

    ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಅವಘಡ- ಇಬ್ಬರು ಸಾವು

    ಆನೇಕಲ್(ಬೆಂಗಳೂರು): ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಅವಘಡವೊಂದು ನಡೆದಿದ್ದು, ಇಬ್ಬರು ಸಾವನ್ನಪ್ಪಿ, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

    ಈ ಘಟನೆ ಆನೇಕಲ್ ನ ತಿರುಮಗೊಂಡನಹಳ್ಳಿ ಬಳಿಯ ಪಲೋಮಾ ಎಂಜಿನಿಯರಿಂಗ್ ಪ್ರೈ ಲಿಮಿಟೆಡ್ ಕಂಪನಿಯಲ್ಲಿ ನಡೆದಿದೆ. ಆನಂದ್( 32) ಮತ್ತು ಜೇಮ್ಸ್( 25) ಮೃತ ವ್ಯಕ್ತಿಗಳಾಗಿದ್ದು, ಚಂದ್ರಶೇಖರ್ ಸ್ಥಿತಿ ಚಿಂತಾಜನಕವಾಗಿದೆ.

    ಜೆಟ್ಟಿಂಗ್ ಮಿಷನ್ ಮೂಲಕ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲಾಗುತ್ತಿತ್ತು. ಈ ವೇಳೆ ಆಯತಪ್ಪಿ ಸೆಪ್ಟಿಕ್ ಟ್ಯಾಂಕ್ ಗೆ ಬಿದ್ದ ಟೂಲ್ ತೆಗೆಯಲು ಇಳಿದ ಜೆಟ್ಟಿಂಗ್ ಮಿಷನ್ ಅಪರೇಟರ್ ಜೇಮ್ಸ್ ಮೊದಲು ಪ್ರಜ್ಞಾಹೀನರಾದರು. ಎಷ್ಟೊತ್ತಾದರು ಜೇಮ್ಸ್ ಮೇಲೆ ಬಾರದಿದ್ದಾಗ ಪಲೋಮಾ ಕಂಪನಿ ನೌಕರ ಆನಂದ್ ಟ್ಯಾಂಕ್‍ಗೆ ಇಳಿದಿದ್ದು, ಪ್ರಜ್ಞಾಹೀನಹೀನರಾದರು.

    ಇಬ್ಬರನ್ನು ಹೊರತೆಗೆಯಲು ಟ್ಯಾಂಕ್ ಒಳಗೆ ಕಂಪನಿ ಎಚ್‍ಆರ್ ಸಿಬ್ಬಂದಿ ಚಂದ್ರಶೇಖರ್ ಇಳಿದಿದ್ದು ಅವರು ಕೂಡ ಪ್ರಜ್ಞಾಹೀನರಾದರು. ಕೊನೆಗೆ ಅಗ್ನಿಶಾಮಕ ದಳದಿಂದ ಮೂರು ಮಂದಿಯ ರಕ್ಷಣೆ ಮಾಡಲಾಗಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಜೇಮ್ಸ್ ಮತ್ತು ಆನಂದ್ ಮೃತಪಟ್ಟಿದ್ದಾರೆ. ಸೂರ್ಯಸಿಟಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಹೋಟೆಲ್ ಕಾರ್ಮಿಕನಿಗೆ ನೆರವಾದ ಮನೆಯೇ ಮಂತ್ರಾಲಯ ಕಾರ್ಯಕ್ರಮ

    ಹೋಟೆಲ್ ಕಾರ್ಮಿಕನಿಗೆ ನೆರವಾದ ಮನೆಯೇ ಮಂತ್ರಾಲಯ ಕಾರ್ಯಕ್ರಮ

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್ ಕಾರ್ಮಿಕರೊಬ್ಬರಿಗೆ ಗಂಧದ ನಾಡು ಜನಪರ ವೇದಿಕೆ ಸಂಘಟನೆಯ ಕಾರ್ಯಕರ್ತರು ನೆರವಾಗಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಪಬ್ಲಿಕ್ ಟಿವಿ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮ ನಡೆಸುತ್ತಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹಳೇ ಚಂದಾಪುರದಲ್ಲಿ ವಾಸವಿದ್ದ ರವಿ ಫೋನ್ ಮಾಡಿ ಅಳಲನ್ನು ತೋಡಿಕೊಂಡಿದ್ದರು. ಅವರಿಗೆ ಇಂದು ನೆರವು ಸಿಕ್ಕಿದೆ.

    ರವಿ ಅವರು ಲಾಕ್‍ಡೌನ್‍ನಿಂದಾಗಿ ಕೆಲಸ, ಆಹಾರ ಪದಾರ್ಥವಿಲ್ಲದೆ ಕಂಗಾಲಾಗಿದ್ದರು. ಹೀಗಾಗಿ ಭಾನುವಾರ ಪಬ್ಲಿಕ್ ಟಿವಿಗೆ ಕರೆ ಮಾಡಿ ಆಹಾರ ಪದಾರ್ಥ ಒದಗಿಸುವಂತೆ ಕೇಳಿಕೊಂಡಿದ್ದರು. ಈ ಹಿನ್ನೆಲೆ ಗಂಧದ ನಾಡು ಜನಪರ ವೇದಿಕೆ ಸಂಘಟನೆಯ ಕಾರ್ಯಕರ್ತರು ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ, ಬೇಳೆ, ಎಣ್ಣೆ, ಧವಸ ಧಾನ್ಯದ ಜೊತೆಗೆ ತರಕಾರಿ ನೀಡಿ ಮಾನವೀಯತೆ ಮೆರೆಸಿದ್ದಾರೆ.

    ನೆರವು ಪಡೆದ ರವಿ ಮಾತನಾಡಿ, ಲಾಕ್‍ಡೌನ್ ಆಗಿದ್ದರಿಂದ ಕೆಲಸ ಇಲ್ಲವಾಯಿತು. ಕೈಯಲ್ಲಿದ್ದ ಹಣದಲ್ಲಿ ಇಷ್ಟು ದಿನ ಜೀವನ ನಡೆಸಿದೆ. ಆದರೆ ತುತ್ತು ಅನ್ನಕ್ಕೂ ಕಾಸಿಲ್ಲದಗ ಪಬ್ಲಿಕ್ ಟಿವಿಗೆ ಕರೆ ಮಾಡಿದೆ. ಇದೀಗ ಒಂದು ತಿಂಗಳ ರೇಷನ್ ದೊರೆತಿರುವುದು ಖುಷಿಯಾಗಿದೆ ಎಂದರು.

    ಗಂಧದ ನಾಡು ಜನಪರ ವೇದಿಕೆಯ ಕಾರ್ಯಕರ್ತ ಮಂಜುನಾಥ್ ಮಾತನಾಡಿ, ಭಾನುವಾರ ಮನೆಯೇ ಮಂತ್ರಾಲಯ ಕಾರ್ಯಕ್ರಮ ನೋಡುವಾಗ ರವಿ ಕರೆ ಮಾಡಿದ್ದು ನೋಡಿದೆ. ನಮ್ಮ ಊರಿನವರೆ ತೊಂದರೆಯಲ್ಲಿರುವುದು ತಿಳಿಯಿತು. ಆನೇಕಲ್ ವರದಿಗಾರರ ಮೂಲಕ ರವಿ ಅವರ ವಿಳಾಸ ಪಡೆದು ನೆರವು ನೀಡಿದ್ದೇವೆ ಎಂದರು.

  • ಕಳ್ಳರು ಸೃಷ್ಟಿಸಿದ್ದ ಆತಂಕದಿಂದ ನಿಟ್ಟುಸಿರುಬಿಟ್ಟ ಹೆಬ್ಬಗೋಡಿ ಪೊಲೀಸರು

    ಕಳ್ಳರು ಸೃಷ್ಟಿಸಿದ್ದ ಆತಂಕದಿಂದ ನಿಟ್ಟುಸಿರುಬಿಟ್ಟ ಹೆಬ್ಬಗೋಡಿ ಪೊಲೀಸರು

    ಬೆಂಗಳೂರು: ಇಬ್ಬರು ಕಬ್ಬಿಣ ಕಳ್ಳರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದ್ದರಿಂದ ಪೊಲೀಸ್ ಇಲಾಖೆ ಹಾಗೂ ಹೆಬ್ಬಗೋಡಿ ಠಾಣೆಯ ಸಿಬ್ಬಂದಿಗೆ ಆತಂಕ ಶುರುವಾಗಿತ್ತು. ಆದರೆ ಕ್ವಾರಂಟೈನ್‍ನಲ್ಲಿದ್ದ 30 ಜನ ಪೊಲೀಸರ ಕೋವಿಡ್-19 ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದೆ.

    ಮೂವರು ಆರೋಪಿಗಳು ಮೇ 17ರಂದು ಕಬ್ಬಿಣ ಕಳ್ಳತನ ಮಾಡುವಾಗ ರೆಡ್‍ಹ್ಯಾಂಡ್ ಆಗಿ ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸರ ಕೈಗೆ ಸಿಕ್ಕಿನಿದ್ದಿದ್ದರು. ಅಷ್ಟೇ ಅಲ್ಲದೆ ಸ್ಥಳೀಯರು ಆರೋಪಿಗಳನ್ನು ತಳಿಸಿದ್ದರು. ಈ ಪೈಕಿ ಪಾದರಾಯನಪುರ ನಿವಾಸಿಯಾಗಿದ್ದ ಕಳ್ಳ (ರೋಗಿ-1396)ಗೆ ಸೋಂಕು ತಗುಲಿರುವುದು ಮೇ 19ರಂದು ದೃಢಪಟ್ಟಿತ್ತು. ಇದರಿಂದಾಗಿ ಉಳಿದ ಇಬ್ಬರು ಕಳ್ಳರನ್ನು ಪರೀಕ್ಷೆಗೆ ಒಳಪಡಿಸಿದಾಗ ಒಬ್ಬನ ರಿಪೋರ್ಟ್ ಪಾಸಿಟಿವ್ ಬಂದರೆ, ಇನ್ನೋರ್ವ ಆರೋಪಿಯ ವರದಿಯು ನೆಗೆಟಿವ್ ಬಂದಿತ್ತು.

    ಬುಧವಾರ ಸೋಂಕು ಪತ್ತೆಯಾದ ಕಳ್ಳ ರೋಗಿ-1397 ಆಗಿದ್ದು, ಆತನನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಸೋಂಕಿತರ ಜೊತೆಗೆ ಸಂಪರ್ಕ ಹೊಂದಿದ್ದ ಹೆಬ್ಬಗೋಡಿ ಠಾಣೆಯ ಇನ್ಸ್‍ಪೆಕ್ಟರ್ ಬಿ.ಕೆ.ಶೇಖರ್, ಎಸ್‍ಐ ಶಂಕರ್ ಸೇರಿದಂತೆ 30 ಜನ ಪೊಲೀಸರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಬಳಿಕ ಅವರ ಗಂಟಲು ದ್ರವವನ್ನು ಟೆಸ್ಟ್‍ಗೆ ಕಳುಹಿಸಲಾಗಿತ್ತು. ಇಂದು ಅವರ ರಿಪೋರ್ಟ್ ನೆಗೆಟಿವ್ ಬಂದಿದೆ. ಇದರಿಂದಾಗಿ

    ಮತ್ತೊಬ್ಬ ಕಳ್ಳನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಹೆಬ್ಬಗೋಡಿ ಪೊಲೀಸರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಹೆಬ್ಬಗೋಡಿ ಠಾಣೆಗೆ ದಿನಕ್ಕೆ ಮೂರು ಬಾರಿ ಸ್ಯಾನಿಟೈರ್ ಸಿಂಪಡಣೆ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ಹಾಗೂ ಹೆಬ್ಬಗೋಡಿ ಠಾಣೆಯ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

  • ಮತ್ತೊಬ್ಬ ಕಳ್ಳನಿಗೂ ಕೊರೊನಾ- ಹೆಬ್ಬಗೋಡಿ ಪೊಲೀಸರಿಗೆ ಢವಢವ

    ಮತ್ತೊಬ್ಬ ಕಳ್ಳನಿಗೂ ಕೊರೊನಾ- ಹೆಬ್ಬಗೋಡಿ ಪೊಲೀಸರಿಗೆ ಢವಢವ

    ಬೆಂಗಳೂರು: ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದ ಮತ್ತೋರ್ವ ಕಳ್ಳನಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಪೊಲೀಸರಲ್ಲಿ  ಮತ್ತಷ್ಟು ಆತಂಕ ಹೆಚ್ಚಾಗಿದೆ.

    ಮೂವರು ಆರೋಪಿಗಳು ಮೇ 17ರಂದು ಕಬ್ಬಿಣ ಕಳ್ಳತನ ಮಾಡುವಾಗ ರೆಡ್‍ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿನಿದ್ದಿದ್ದರು. ಅಷ್ಟೇ ಅಲ್ಲದೆ ಸ್ಥಳೀಯರು ಆರೋಪಿಗಳನ್ನು ತಳಿಸಿದ್ದರು. ಈ ಪೈಕಿ ಮಂಗಳವಾರ ಪಾದರಾಯನಪುರ ನಿವಾಸಿಯಾಗಿದ್ದ ಕಳ್ಳ (ರೋಗಿ-1396)ಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದರಿಂದಾಗಿ ಉಳಿದ ಇಬ್ಬರು ಕಳ್ಳರನ್ನು ಪರೀಕ್ಷೆಗೆ ಒಳಪಡಿಸಿದ್ದು, ಒಬ್ಬನ ರಿಪೋರ್ಟ್ ಪಾಸಿಟಿವ್ ಬಂದಿದೆ. ಇನ್ನೋರ್ವ ಆರೋಪಿಯ ವರದಿಯು ನೆಗೆಟಿವ್ ಬಂದಿದೆ.

    ಬುಧವಾರ ಸೋಂಕು ಪತ್ತೆಯಾದ ಕಳ್ಳ ರೋಗಿ-1397 ಆಗಿದ್ದು, ಆತನನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸೋಂಕಿತರ ಜೊತೆಗೆ ಸಂಪರ್ಕ ಹೊಂದಿದ್ದ ಹೆಬ್ಬಗೋಡಿ ಠಾಣೆಯ ಇನ್‌ಸ್ಪೆಕ್ಟರ್‌ ಬಿ.ಕೆ.ಶೇಖರ್, ಎಸ್‍ಐ ಶಂಕರ್ ಸೇರಿದಂತೆ 22 ಜನ ಪೊಲೀಸರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಅವರ ಗಂಟಲು ದ್ರವವನ್ನು ಟೆಸ್ಟ್ ಗೆ ಕಳುಹಿಸಲಾಗಿದ್ದು, ರಿಪೋರ್ಟ್ ಶುಕ್ರವಾರ ಬರಲಿದೆ.

    ಮತ್ತೊಬ್ಬ ಕಳ್ಳನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಹೆಬ್ಬಗೋಡಿ ಪೊಲೀಸರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಹೆಬ್ಬಗೋಡಿ ಠಾಣೆಗೆ ದಿನಕ್ಕೆ ಮೂರು ಬಾರಿ ಸ್ಯಾನಿಟೈರ್ ಸಿಂಪಡಣೆ ಮಾಡಲಾಗುತ್ತಿದೆ.

  • ಅಕ್ರಮ ಮದ್ಯ ಮಾರಾಟದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿ: ರವಿ ಡಿ. ಚೆನ್ನಣ್ಣವರ್

    ಅಕ್ರಮ ಮದ್ಯ ಮಾರಾಟದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿ: ರವಿ ಡಿ. ಚೆನ್ನಣ್ಣವರ್

    ಆನೇಕಲ್: ಅಕ್ರಮ ಮದ್ಯ ಮಾರಾಟದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ತಿಳಿಸಿದ್ರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಎಸ್.ಪಿ ರವಿ ಡಿ ಚನ್ನಣ್ಣನವರ್ ಹೇಳಿದ್ದಾರೆ.

    ಆನೇಕಲ್ ಪಟ್ಟಣದಲ್ಲಿ ಕರುಣೆಯ ಕುಟೀರ ಹಾಗೂ ವಾಚನಾಲಯವನ್ನು ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಆನೇಕಲ್ ನ ಪೋಲಿಸರು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಕರುಣೆಯ ಕುಟೀರ ಹಾಗೂ ವಾಚನಾಲಯ ತೆರೆಯಲಾಗಿದೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಹಾಯ ಮಾಡಬೇಕೆನ್ನುವವರು ಸಹಾಯಹಸ್ತ ನೀಡಬಹುದು. ಬಡವರಿಗೆ ಸಹಾಯ ಆಗುವ ನಿಟ್ಟಿನಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.

    ಅಕ್ರಮ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ತಿಳಿಸಿದ್ರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಈಗಾಗಲೇ ಬನ್ನೇರುಘಟ್ಟ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.

    ಲಾಕ್ ಡೌನ್ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಅನಾವಶ್ಯಕವಾಗಿ ಓಡಾಡುತ್ತಿದ್ದಂತಹ 700ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ಬೆಂಗಳೂರು ಜಿಲ್ಲೆಯಾದ್ಯಂತ ಲಾಕ್ ಡೌನ್ ಉಲ್ಲಂಘನೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ, ರಾಜನಕುಂಟೆ ಪೋಲಿಸ್ ಠಾಣಾ ವ್ಯಾಪ್ತಿಗಳಲ್ಲಿ 4 ಪ್ರಕರಣಗಳ ಸಂಬಂಧ ದೂರು ದಾಖಲಾಗಿದೆ ಎಂದರು.

    ಜಿಗಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಕೊರೋನಾ ಹೊಗಲಾಡಿಸುವ ನಿಟ್ಟಿನಲ್ಲಿ ಪೊಲೀಸರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದು ಅವರನ್ನು ಎಲ್ಲರೂ ಗೌರವಿಸಬೇಕು ಎಂದರು.

  • ಕೈದಿಗಳಿಂದಲೇ ತಯಾರಾಗ್ತಿದೆ 5 ಸಾವಿರ ಮಾಸ್ಕ್

    ಕೈದಿಗಳಿಂದಲೇ ತಯಾರಾಗ್ತಿದೆ 5 ಸಾವಿರ ಮಾಸ್ಕ್

    ಆನೇಕಲ್: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ಮಾಸ್ಕ್ ಧರಿಸುವಂತೆ ಆದೇಶ ಹೊರಡಿಸಲಾಗಿದೆ. ಜೈಲಿನಲ್ಲಿ ಕೈದಿಗಳು 5000 ಮಾಸ್ಕ್ ಗಳನ್ನು ತಯಾರಿಸುತ್ತಿದ್ದಾರೆ.

    ಕೊರೊನಾ ವೈರಸ್ ಭೀತಿ ವಿಶ್ವದಾದ್ಯಂತ ಹರಡಿದ್ದು ಹೆಚ್ಚಿನ ಜನರು ಒಟ್ಟಿಗೆ ಇರುವಂತಹ ಜಾಗಗಳಲ್ಲಿ ಜಾಗರೂಕತೆಯಿಂದ ಇರುವಂತೆ ಸೂಚಿಸಲಾಗಿದೆ. ಅದರಂತೆಯೇ ಜೈಲುಗಳಲ್ಲಿಯೂ ಸಹ ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೊರೊನಾ ವೈರಸ್ ಎಫೆಕ್ಟ್ ಹಿನ್ನೆಲೆ ಕೈದಿಗಳು ಎಲ್ಲರೂ ಮಾಸ್ಕ್ ಧರಿಸುವಂತೆ ಅಧಿಕಾರಿಗಳು ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ.

    ಈ ಹಿನ್ನೆಲೆ ಜೈಲಿನಲ್ಲಿರುವ ಕೈದಿಗಳು ಸ್ವತಃ ತಾವೇ ಸುಮಾರು 5000 ಕ್ಕೂ ಹೆಚ್ಚು ಮಾಸ್ಕ್ ಗಳನ್ನು ತಯಾರು ಮಾಡುತ್ತಿದ್ದಾರೆ. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೈದಿಗಳು ಮಾಸ್ಕ್ ಗಳನ್ನು ತಯಾರಿಕೆ ಮಾಡುತ್ತಿದ್ದು ಅಗತ್ಯವಿದ್ದರೆ ಮಾಸ್ಕ್ ಗಳನ್ನು ಕೆಲ ಸರ್ಕಾರಿ ಆಸ್ಪತ್ರೆಗಳಿಗೂ ರವಾನೆ ಮಾಡುವುದಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.