Tag: anekal

  • ಕೇವಲ 7 ನಿಮಿಷಗಳಲ್ಲಿ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದಾರೆ: ಸತೀಶ್ ರೆಡ್ಡಿ

    ಕೇವಲ 7 ನಿಮಿಷಗಳಲ್ಲಿ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದಾರೆ: ಸತೀಶ್ ರೆಡ್ಡಿ

    – ಪ್ರಕರಣವನ್ನು ರಾಜಕೀಯವಾಗಿ ತೆಗೆದುಕೊಳ್ಳಲ್ಲ

    ಆನೇಕಲ್: ಕೇವಲ 7 ನಿಮಿಷಗಳಲ್ಲಿ ಕಾರುಗಳಿಗೆ ಬೆಂಕಿ ಇಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದಾರೆ ಎಂದು ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ.

    ಘಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಪ್ರಕಾರ 1 ಗಂಟೆ 23 ನಿಮಿಷಕ್ಕೆ ಇಬ್ಬರು ಎಂಟ್ರಿಯಾಗಿದ್ದಾರೆ. ಕೇವಲ 7 ನಿಮಿಷಗಳಲ್ಲಿ ಕೃತ್ಯ ಎಸಗಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಹಿಂದಿನ ಗೇಟ್ ನಿಂದ ಇಬ್ಬರು ಎಸ್ಕೇಪ್ ಆಗಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.

    ಹಿಂದಿನ ಗೇಟ್ ನಲ್ಲಿ ಸಿಸಿಟಿವಿ ಇದೆ ಅದರೆ ಅರಲ್ಲಿ ಮುಖ ಸರಿಯಾಗಿ ಕಾಣಿಸೋದಿಲ್ಲ. ಪೊಲೀಸ್, ವಾಚ್ ಮೆನ್ ಇಬ್ಬರು ಮುಂದಿನ ಗೇಟಿನ ಬಳಿ ಇದ್ದರು. ಬೈಕ್ ಗಳಲ್ಲಿ ಇಬ್ಬರು ಬಂದಿದ್ರು ಅನ್ನೋದು ಗೊತ್ತಾಗಿದೆ. ಪೊಲೀಸರು ಈಗಾಗಲೇ ತನಿಖೆಯನ್ನ ಆರಂಭಿಸಿದ್ದಾರೆ ಎಂದರು. ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!

    ನನಿಗೆ ಇಲ್ಲಿ ಯಾವುದೇ ರಾಜಕೀಯ ವೈಷ್ಯಮ ಇಲ್ಲ. ಹೀಗಾಗಿ ಇದನ್ನ ರಾಜಕೀಯವಾಗಿ ತೆಗೆದುಕೊಳ್ಳುವುದನ್ನ ನಿರಾಕರಿಸುತ್ತೇನೆ. ಯಾರೋ ಒಂದು ದುರಾಲೋಚನೆಯ ಮೆಸೇಜ್ ಪಾಸ್ ಮಾಡಿದ್ದಾರೆ. ಯಾರ ಮನೆಯಲ್ಲಿ ಏನು ಬೇಕಾದ್ರೂ ಮಾಡಬಹುದು ಅಂತಾ ತೋರಿಸೋಕೆ ಹೀಗೆ ಮಾಡಿದ್ದಾರೆ ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ.

  • ಸಿಎಂ ಮೇಲೆ ನಂಬಿಕೆ ಇದ್ದು, ಪ್ರಬಲ ಖಾತೆ ನೀಡುವ ವಿಶ್ವಾಸವಿದೆ: ಎಂಟಿಬಿ

    ಸಿಎಂ ಮೇಲೆ ನಂಬಿಕೆ ಇದ್ದು, ಪ್ರಬಲ ಖಾತೆ ನೀಡುವ ವಿಶ್ವಾಸವಿದೆ: ಎಂಟಿಬಿ

    – ಯಾವುದೇ ಖಾತೆ ಕೊಟ್ರೂ ನಿಭಾಯಿಸುತ್ತೇನೆ

    ಆನೇಕಲ್(ಬೆಂಗಳೂರು): ನನಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೇಲೆ ನಂಬಿಕೆ ಇದೆ. ಅವರು ನನಗೆ ಪ್ರಬಲ ಖಾತೆ ನೀಡುವ ಭರವಸೆ ನೀಡಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಖಾತೆ ಬದಲಾವಣೆ ಮಾಡಿಕೊಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಅವರ ಭರವಸೆ ಮೇಲೆ ನನಗೆ ನಂಬಿಕೆ ಇದೆ. ಪ್ರಬಲ ಖಾತೆ ನೀಡುವ ಭರವಸೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಮುಖ್ಯಮಂತ್ರಿಗಳು ಪ್ರಬಲ ಖಾತೆ ಕೊಡುವ ನಿರೀಕ್ಷೆ ಇದೆ ಎಂದು ಹೇಳಿದ ಸಚಿವರು ಇದೇ ವೇಳೆ ಆನಂದ್ ಸಿಂಗ್ ರಾಜಿನಾಮೆ ಬಗ್ಗೆ ನನಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ದೆಹಲಿಯಲ್ಲಿ ಜಾರಕಿಹೊಳಿ, ಯೋಗೇಶ್ವರ್, ರೇಣುಕಾಚಾರ್ಯ ಲಾಬಿ

    ಬಸವರಾಜ್ ಬೊಮ್ಮಾಯಿ ನೃತ್ವದ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಭಿನ್ನಮತ ಎದುರಾಗಿದೆ. ಸಚಿವ ಆನಂದ್ ಸಿಂಗ್ ಅವರು ಪ್ರಬಲ ಖಾತೆಗೆ ಪಟ್ಟು ಹಿಡಿದಿದ್ದಾರೆ. ಈ ಬೆನ್ನಲ್ಲೇ ಇದೀಗ ಎಂಟಿಬಿ ಕೂಡ ಖಾತೆ ಬದಲಾವಣೆ ಮಾಡುವಂತೆ ಹಠಕ್ಕೆ ಬಿದ್ದಿದ್ದಾರೆ. ಇದನ್ನೂ ಓದಿ: ಕಚೇರಿಯ ಬೋರ್ಡ್ ತೆರವು – ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಆನಂದ್ ಸಿಂಗ್?

  • ಕುಡಿದ ಮತ್ತಿನಲ್ಲಿ ವ್ಯಕ್ತಿಯ ಕೊಲೆ

    ಕುಡಿದ ಮತ್ತಿನಲ್ಲಿ ವ್ಯಕ್ತಿಯ ಕೊಲೆ

    ಬೆಂಗಳೂರು/ಆನೇಕಲ್: ನಿರ್ಮಾಣ ಹಂತದ ಕಟ್ಟಡದಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಣಿ ಮೃತನಾಗಿದ್ದಾನೆ. ಈತ ಕಟ್ಟಡದ ಮೇಸ್ತ್ರಿ ಕೆಲಸ ಮಾಡುತ್ತಿದ್ದನು. ಪರಿಚಿತನ ಜೊತೆ ಎಣ್ಣೆ ಪಾರ್ಟಿ ಮಾಡಿರೋದು ಈ ಕೊಲೆಗೆ ಕಾರಣವಾಗಿದೆ. ಇದನ್ನೂ ಓದಿ: ಜಹಾಂಗೀರ್ ಎಂದು ಪುತ್ರನಿಗೆ ಹೆಸರಿಟ್ಟ ಕರೀನಾ

    ನಿನ್ನೆ ರಾತ್ರಿ ತನ್ನ ಪರಿಚಿತನೊಂದಿಗೆ ಎಣ್ಣೆ ಪಾರ್ಟಿ ನಡೆಸಿದ್ದು, ಈ ವೇಳೆ ಮೇಸ್ತ್ರಿ ಹಾಗೂ ಪರಿಚಿತನ ನಡುವೆ ಗಲಾಟೆ ನಡೆದಿದೆ. ಎಣ್ಣೆ ಅಮಲಿನಲ್ಲಿದ್ದ ಮೇಸ್ತ್ರಿಯ ಪರಿಚಿತ ಕೈಗೆ ಸಿಕ್ಕ ಮಾರಕಾಸ್ತ್ರದಿಂದ ಮೇಸ್ತ್ರಿಯನ್ನು ಕೊಚ್ಚಿ ಬರ್ಬರವಾಗಿ ಕೊಲೆಮಾಡಿ ಪರಾರಿಯಾಗಿದ್ದಾನೆ. ಈ ಘಟನೆ ತಡರಾತ್ರಿ ನಡೆದಿದ್ದು, ಇಂದು ಬೆಳಿಗ್ಗೆ ಗಾರೆಕೆಲಸದ ಸಿಬ್ಬಂದಿ ನೋಡಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ಕೊಲೆಗಾರನ ಬಂಧನಕ್ಕೆ ಬಲೆ ಬೀಸಿದ್ದಾರೆ.

  • ನಾನು ತಾಯಿಯಾಗಿದ್ದು ನನ್ನ ಬದುಕಿನ ಅತೀ ಸಂಭ್ರಮದ ಕ್ಷಣ: ಮಯೂರಿ

    ನಾನು ತಾಯಿಯಾಗಿದ್ದು ನನ್ನ ಬದುಕಿನ ಅತೀ ಸಂಭ್ರಮದ ಕ್ಷಣ: ಮಯೂರಿ

    ಆನೇಕಲ್: ಎದೆಹಾಲು ನೀಡುವುದರ ಅವಶ್ಯಕತೆಯ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾರತ್ ಹಳ್ಳಿಯ ರೈನ್ ಬೋ ಮಕ್ಕಳ ಆಸ್ಪತ್ರೆಯು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸ್ಯಾಂಡಲ್‍ವುಡ್ ನಟಿ ಮಯೂರಿ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಯಾಮರಾ ಮುಂದೆ ಹಲವು ಪಾತ್ರ ನಿಭಾಯಿಸಿದ್ದ ನನಗೆ, ನಿಜ ಜೀವನದಲ್ಲಿ ತಾಯಿಯಾದಾಗ ಆ ಪಾತ್ರ ಅದೆಷ್ಟು ಜವಾಬ್ದಾರಿಯುತ ಎಂಬುದು ಅರ್ಥವಾಯಿತು. ಆ ಬದಲಾವಣೆಯನ್ನ ಅತೀವ ಸಂಭ್ರಮದಿಂದ ಸ್ವೀಕರಿಸಿದ್ದೇನೆ. ಮಗುವನ್ನ ನೋಡಿಕೊಳ್ಳುವುದು ನಿಜಕ್ಕೂ ಬಹು ದೊಡ್ಡ ಹೊಣೆ ಎಂಬುದು ನನಗೆ ಮನವರಿಕೆಯಾಗಿದೆ. ನಾನು ಈ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ ಎಂದರೆ ಇದರಲ್ಲಿ ನನ್ನ ಪತಿ ಮತ್ತು ಕುಟುಂಬದವರ ಬೆಂಬಲದಿಂದಲೇ ಎಂದು ಹೇಳಿದರು. ಇದನ್ನೂ ಓದಿ: ಬೆಡ್‍ನಲ್ಲೇ ಮಲ, ಮೂತ್ರ ವಿಸರ್ಜನೆ – ಆರೋಗ್ಯದ ಬಗ್ಗೆ ನಟಿ ಯಶಿಕಾ ಆನಂದ್ ಅಪ್ಡೇಟ್

    ಶಿಶುವಿನ ಆರೋಗ್ಯಕರ ಬೆಳವಣಿಗೆಗೆ ತಾಯಿ ಎದೆಹಾಲು ಅತ್ಯಗತ್ಯ. ನಾನು ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಎದೆಹಾಲಿನ ಮಹತ್ವದ ಕುರಿತು ರೈನ್ ಬೋ ಕೈಗೊಂಡಿರುವ ಈ ಜಾಗೃತಿ ಕಾರ್ಯಕ್ರಮ ತುಂಬಾ ಸಮಯೋಚಿತವಾಗಿದೆ. ಆಸ್ಪತ್ರೆಯ ಈ ಕಾಳಜಿಯ ಅಭಿಯಾನದಲ್ಲಿ ನಾನು ಜೊತೆಯಾಗಿರುವುದು ಸಂತಸ ತಂದಿದೆ ಎಂದರು.

  • ರೌಡಿಶೀಟರ್‌ಗಳಿಗೆ ಪೊಲೀಸರಿಂದ ಬಿಗ್ ಶಾಕ್- ಮನೆಗಳ ಮೇಲೆ ದಾಳಿ

    ರೌಡಿಶೀಟರ್‌ಗಳಿಗೆ ಪೊಲೀಸರಿಂದ ಬಿಗ್ ಶಾಕ್- ಮನೆಗಳ ಮೇಲೆ ದಾಳಿ

    ಬೆಂಗಳೂರು/ಆನೇಕಲ್: ಬೆಳಂಬೆಳ್ಳಗ್ಗೆ ಗಾಢ ನಿದ್ರೆಯಲ್ಲಿದ್ದ ರೌಡಿಶೀಟರ್‌ಗಳಿಗೆ ಬೆಂಗಳೂರು ಹೊರವಲಯದ ಆನೇಕಲ್ ಉಪ ವಿಭಾಗದ ಪೊಲೀಸರು ಬಿಗ್‍ಶಾಕ್ ನೀಡಿದ್ದಾರೆ.

    ಆನೇಕಲ್ ಉಪ ವಿಭಾಗದ ಗ್ರಾಮಾಂತರ ಎಎಸ್‍ಪಿ ಲಕ್ಷ್ಮಿ ಗಣೇಶ್ ನೇತೃತ್ವದಲ್ಲಿ, ರೌಡಿ ಶೀಟರ್ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ರಾತ್ರಿ ಮಲಗಿದ್ದ ಸುಮಾರು 150ಕ್ಕೂ ಹೆಚ್ಚು ರೌಡಿ ಶೀಟರ್ ಮನೆಗಳ ಮೇಲೆ ಬೆಳಗಿನ ಜಾವ 3ಗಂಟೆಗೆ ದಾಳಿ ಮಾಡಲಾಗಿದ್ದು, ಮನೆಗಳಲ್ಲಿ ಅಕ್ರಮ ಶಸ್ತ್ರಾಸ್ತ್ರ ಮತ್ತು ಮಾರಾಕಾಸ್ತ್ರಗಳ ಹುಡುಕಾಟ ನಡೆಸಿದ್ದಾರೆ.

    ಆನೇಕಲ್, ಅತ್ತಿಬೆಲೆ, ಸರ್ಜಾಪುರ, ಹೆಬ್ಬಗೋಡಿ, ಜಿಗಣಿ, ಬನ್ನೇರುಘಟ್ಟ ಮತ್ತು ಸೂರ್ಯ ಸಿಟಿ ವ್ಯಾಪ್ತಿಯ ರೌಡಿಶೀಟರ್‌ಗಳನ್ನು ವಶಕ್ಕೆಪಡೆದಿದ್ದಾರೆ. ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಸರ್ಕಾರಿ ಶಾಲಾ ಕ್ರೀಡಾಂಗಣದಲ್ಲಿ ಪೆರೇಡ್ ನಡೆಸಲಾಯಿತು. ಪೆರೇಡ್ ವೇಳೆ ರೌಡಿಶೀಟರ್‌ಗಳಿಗೆ ಖಡಕ್ ವಾನಿರ್ಂಗ್ ನೀಡಿದ ಎಎಸ್‍ಪಿ ಲಕ್ಷ್ಮಿ ಗಣೇಶ್ ನಂತರ ಮಾತನಾಡಿ ಯಾವುದೇ ಅಕ್ರಮ ಮತ್ತು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದರೆ ಗೂಂಡಾ ಕಾಯಿದೆ ಜಾರಿ ಮಾಡಿ, ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

  • ಕೊರೊನಾದಿಂದ ಪತ್ನಿ ಸಾವು- ಮನನೊಂದ ಪತಿ ಮಕ್ಕಳ ಜೊತೆಗೆ ಆತ್ಮಹತ್ಯೆ

    ಕೊರೊನಾದಿಂದ ಪತ್ನಿ ಸಾವು- ಮನನೊಂದ ಪತಿ ಮಕ್ಕಳ ಜೊತೆಗೆ ಆತ್ಮಹತ್ಯೆ

    ಆನೇಕಲ್: ಕೊರೊನಾದಿಂದ ಪತ್ನಿ ಸಾವನ್ನಪ್ಪಿರುವ ನೋವನ್ನು ತಡೆಯಲಾರದೆ, ಒಂದೇ ಕುಟುಂಬ ಮೂರು ಮಂದಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್‍ನಲ್ಲಿ ನಡೆದಿದೆ.

    ಅಪ್ಪ ಸತೀಶ್ ಮತ್ತು ಇಬ್ಬರು ಹೆಣ್ಣು ಮಕ್ಕಳಾದ ಕೀರ್ತಿ, ಮೋನಿಷ ಮೃತರಾಗಿದ್ದಾರೆ. ಆನೇಕಲ್ ಉಪವಿಭಾಗ ಅತ್ತಿಬೆಲೆಯ ಅಂಬೇಡ್ಕರ್ ಕಾಲೋನಿಯ ನಿವಾಸಿಗಳಾಗಿದ್ದಾರೆ. ಪತ್ನಿಯನ್ನು ಕಳೆದುಕೊಂಡ ಪತಿ ಮಾನಸಿಕವಾಗಿ ನೊಂದು ಮಕ್ಕಳೊಂದಿಗೆ ನೇಣಿಗೆ ಶರಣಾಗಿದ್ದಾರೆ.

    ಮೃತ ಸತೀಶ್ ಗಾರ್ಮೇಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಕೆಲಸವನ್ನು ಬಿಟ್ಟಿದ್ದನು. ಮಕ್ಕಳಾದ ಕೀರ್ತಿ ಪ್ರಥಮ ವರ್ಷದ ಬಿಎಸ್ಸಿ, ಹಾಗೂ ಮತ್ತೋರ್ವ ಪುತ್ರಿ ಮೋನಿಷ 9ನೇ ತರಗತಿ ವಿಧ್ಯಾಭ್ಯಾಸ ಮಾಡುತ್ತಿದ್ದರು ಎನ್ನಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಸತೀಶ್ ಪತ್ನಿ ಆಶಾ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.

    ಪತ್ನಿಯನ್ನ ಕಳೆದುಕೊಂಡ ಸತೀಶ್ ಹಾಗೂ ತಾಯಿಯನ್ನು ಕಳೆದು ಕೊಂಡ ಮಕ್ಕಳು ನಿತ್ಯ ಮೃತ ಆಶಾರ ನೆನಪಿನಲ್ಲಿದ್ದರು. ಪತ್ನಿ ಕಳೆದುಕೊಂಡು ಮಾನಸಿಕವಾಗಿ ನೊಂದಿದ್ದ ಪತಿ ಸತೀಶ್ ಕಳೆದ ರಾತ್ರಿ ಮಕ್ಕಳ ಜೊತೆಗೆ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಜಾನೆ ಮನೆಯ ಬಾಗಿಲು ತೆರೆಯದೆ ಫೋನ್ ಕರೆಗಳನ್ನು ಸ್ವೀಕರಿಸದೆ ಇದ್ದಾಗ ಮನೆಯ ಬಳಿ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಅತ್ತಿಬೆಲೆ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ದೂರು ದಾಖಲಿಸಿಕೊಂಡಿದ್ದಾರೆ.

  • ಕ್ಷೇತ್ರದ ಪ್ರತಿ ಮನೆಗೆ ಫುಡ್ ಕಿಟ್ ವಿತರಿಸುತ್ತಿರೋ ಶಾಸಕ ಸತೀಶ್ ರೆಡ್ಡಿ

    ಕ್ಷೇತ್ರದ ಪ್ರತಿ ಮನೆಗೆ ಫುಡ್ ಕಿಟ್ ವಿತರಿಸುತ್ತಿರೋ ಶಾಸಕ ಸತೀಶ್ ರೆಡ್ಡಿ

    ಬೊಮ್ಮನಹಳ್ಳಿ(ಆನೇಕಲ್): ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಜನ ಬಡ ಕಾರ್ಮಿಕರು ಒಂದು ಹೊತ್ತಿನ ಊಟಕ್ಕೂ ಪರದಾಟ ನಡೆಸುವಂತಾಗಿದೆ. ಇದನ್ನು ಅರಿತ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಮನೆ ಮನೆಗೆ ತೆರಳಿ ಕ್ಷೇತ್ರದ ಜನರಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನ ವಿತರಣೆ ಮಾಡಿದ್ದಾರೆ.

    ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ 65 ಸಾವಿರ ಬಡ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ವಿತರಿಸುವ ಕಾರ್ಯಕ್ಕೆ ಇಂದು ಹೊಂಗಸಂದ್ರದಲ್ಲಿ ಶಾಸಕ ಸತೀಶ್ ರೆಡ್ಡಿ ಚಾಲನೆ ನೀಡಿ ಆಹಾರ ಸಾಮಗ್ರಿಗಳ ಕಿಟ್ ಗಳನ್ನ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಕ್ಷೇತ್ರದ ವಾರ್ಡುಗಳಲ್ಲಿ ತಲಾ ಏಳು ಸಾವಿರ ಬಡ ಕುಟುಂಬಗಳನ್ನು ಗುರುತಿಸಲಾಗಿದೆ. ಇಂದಿನಿಂದ ಸಂಕಷ್ಟದಲ್ಲಿರುವ ಜನರ ಮನೆ ಬಾಗಿಲಿಗೆ ಆಹಾರ ಧಾನ್ಯ ಕಿಟ್ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

    ಕೊರೊನಾ ನಿಯಂತ್ರಣಕ್ಕೆ ಲಾಕ್‍ಡೌನ್ ಅನಿವಾರ್ಯವಾಗಿದ್ದು, ಇದರಿಂದ ಬಡವರ ಬದುಕು ಕಷ್ಟಕ್ಕೆ ಸಿಲುಕಿದ್ದು, ಶಾಸಕನಾಗಿ ಜನರ ನೆರವಿಗೆ ನಿಲ್ಲುವುದು ನನ್ನ ಕರ್ತವ್ಯ. ಕ್ಷೇತ್ರದ ಜನ ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇನೆ. ಒಂದು ವೇಳೆ ಸರ್ಕಾರ ಲಾಕ್‍ಡೌನ್ ಮುಂದುವರಿಸಲು ತೀರ್ಮಾನಿಸಿದ್ದಲ್ಲಿ ಸರ್ಕಾರವೂ ಜನರ ನೆರವಿಗೆ ನಿಲ್ಲುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

    ಆಹಾರ ಸಾಮಗ್ರಿಗಳ ಕಿಟ್ ಪಡೆದ ಮಹಿಳೆ ರೇಣುಕಾ ಮಾತನಾಡಿ, ನಾನು ಗಾರ್ಮೆಂಟ್ಸ್ ಕಂಪನಿಯಲ್ಲಿ ಪೀಸ್ ವರ್ಕ್ ಕೆಲಸ ಮಾಡುತ್ತಿದ್ದೆ, ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಊಟಕ್ಕೂ ತುಂಬಾ ತೊಂದರೆ ಆಗಿತ್ತು. ಕಿಟ್ ಕೊಡುತ್ತಿರುವುದರಿಂದ ಒಂದಷ್ಟು ದಿನ ದೂಡಬಹುದು ಎಂದು ತಿಳಿಸಿದರು.

  • ಆಸ್ಪತ್ರೆ ಮುಂದೆಯೇ ನರಳಾಡಿ ಪ್ರಾಣಬಿಟ್ಟ ಸೋಂಕಿತ..!

    ಆಸ್ಪತ್ರೆ ಮುಂದೆಯೇ ನರಳಾಡಿ ಪ್ರಾಣಬಿಟ್ಟ ಸೋಂಕಿತ..!

    ಆನೇಕಲ್: ಮಹಾಮಾರಿ ಕೊರೊನಾದಿಂದಾಗಿ ಸಾಕಷ್ಟು ಅವಾಂತರಗಳು ನಡೆದು ಹೋಗಿವೆ, ಇನ್ನೂ ನಡೆಯುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ ಸೋಂಕಿತನೊಬ್ಬ ಆಸ್ಪತ್ರೆಯ ಮುಂದೆಯೇ ನರಳಾಡಿ ಪ್ರಾಣಬಿಟ್ಟ ಘಟನೆ ಬೆಂಗಳೂರು ಹೊರವಲಯ ಆನೇಕಲ್ ನಲ್ಲಿ ನಡೆದಿದೆ.

    ಮೃತನನ್ನು ನಾಗೇಶ್ ಎಂದು ಗುರುತಿಸಲಾಗಿದ್ದು, ಈತ ಆನೇಕಲ್ ತಾಲೂಕಿನ ಹಾಲ್ದೇನಹಳ್ಳಿ ನಿವಾಸಿ. ಜ್ವರದಿಂದ ಬಳಲುತ್ತಿದ್ದ ನಾಗೇಶ್‍ಗೆ ಇಂದು ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಆದರೆ ವರದಿ ಬರುವುದು ವಿಳಂಬವಾಗಿ ಬೆಡ್ ಸಿಕ್ಕಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಎದುರು ಕಾದು ಕುಳಿತಿದ್ದ ಸೋಂಕಿತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಸೋಂಕಿತ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಗ್ರಾಮ ಪಂಚಾಯ್ತಿ ಸದಸ್ಯ ತಿಮ್ಮರಾಜು ನೇತೃತ್ವದಲ್ಲಿ ಹಾಲ್ದೇನಹಳ್ಳಿ ಕೆರೆಗೆ ಬಳಿ ಅಂತ್ಯಸಂಸ್ಕಾರ ಮಾಡಲಾಗಿದೆ. ಆನೇಕಲ್ ತಾಲೂಕು ಆಡಳಿತ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯ ಆಕ್ರೋಶ ಹೊರಹಾಕಿದ್ದು, ಸೋಂಕಿತ ನರಳಾಡಿ ಸಾವನ್ನಪ್ಪಲು ಸರ್ಕಾರ ಕಾರಣ ಎಂದು ಆರೋಪ ಮಾಡುತ್ತಿದ್ದಾರೆ.

  • ಮುಂಜಾನೆ ಭೀಕರ ಅಪಘಾತ – ಐದು ಮಂದಿ ದಾರುಣ ಸಾವು

    ಮುಂಜಾನೆ ಭೀಕರ ಅಪಘಾತ – ಐದು ಮಂದಿ ದಾರುಣ ಸಾವು

    ಆನೇಕಲ್: ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐದು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ತಮಿಳುನಾಡು ಈರೋಡ್‍ನ ಕಾವೇರಿಪಟ್ಟಣಂ ಬಳಿ ನಡೆದಿದೆ.

    ಘಟನೆಯಲ್ಲಿ ಬಸ್ಸಿನಿಂದ ಇಳಿಯುತ್ತಿದ್ದ ಪ್ಯಾಸೆಂಜರ್ ಹಾಗೂ ಓಮ್ನಿಯಲ್ಲಿದ್ದ ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ದುರ್ದೈವಿಗಳನ್ನು ಪ್ರಶಾಂತ್, ಲಿಂಗಾ, ಸುರೇಂದರ್, ಶಿವಕುಮಾರ್, ಓಮ್ನಿ ಚಾಲಕ ಹಾಗೂ ಬಸ್ ಪ್ಯಾಸೆಂಜರ್ ದೇವರಾಜು ಎಂದು ಗುರುತಿಸಲಾಗಿದೆ.

    ಸ್ನೇಹಿತರೆಲ್ಲ ಸೇರಿ ಈರೋಡ್ ಜಿಲ್ಲೆಯ ಭವಾನಿಯಿಂದ ಬೆಂಗಳೂರಿನ ವಂಡರ್ ಲಾ ಹೊರಟಿದ್ದರು. ಈ ಸಂದರ್ಭದಲ್ಲಿ ಅಂದರೆ ಮುಂಜಾನೆ 4 ಗಂಟೆ ಸುಮಾರಿಗೆ ಪ್ರವಾಸಿ ತಾಣಕ್ಕೆ ಹೋಗುವ ದಾರಿಯಲ್ಲಿ ಈ ದುರಂತ ಸಂಭವಿಸಿದೆ.

    ವ್ಯಕ್ತಿಯೊಬ್ಬರು ರಸ್ತೆ ದಾಟಲು ಯತ್ನಿಸಿದ್ದಾರೆ. ಹೀಗಾಗಿ ಬಸ್ಸಿನ ಚಾಲಕ ಬ್ರೇಕ್ ಹಾಕಿದ್ದಾನೆ. ಈ ವೇಳೆ ಹಿಂದಿನಿಂದ ಬಂದ ಓಮ್ನಿ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಓಮ್ನಿ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಪರಿಣಾಮ 5 ಮಂದಿ ಸ್ಥಳದಲ್ಲಿ ಮೃತಪಟ್ಟರೆ ಓಮ್ನಿಯಲ್ಲಿದ್ದ ಗೌತಮ್, ಭರಣಿ ಹಾಗೂ ಅಶೋಕ್ ಎಂಬವರಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಥಳಕ್ಕೆ ಕಾವೇರಿಪಟ್ಟಣಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

  • ಬೇಗೂರಿನಲ್ಲಿ ಚಿರತೆ ಭಯ – ಸಿಸಿಟಿವಿ, ಡ್ರೋಣ್ ಬಳಸಿ 6 ದಿನಗಳಿಂದ ಹುಡುಕಾಟ

    ಬೇಗೂರಿನಲ್ಲಿ ಚಿರತೆ ಭಯ – ಸಿಸಿಟಿವಿ, ಡ್ರೋಣ್ ಬಳಸಿ 6 ದಿನಗಳಿಂದ ಹುಡುಕಾಟ

    ಆನೇಕಲ್: ಬೇಗೂರು ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ಬಳಿ ಚಿರತೆ ಪ್ರತ್ಯಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದರೂ ಚಿರತೆ ಮಾತ್ರ ಪತ್ತೆಯಾಗಿಲ್ಲ. ಅಪಾರ್ಟ್ ಮೆಂಟ್ ಸುತ್ತಮುತ್ತಲಿನ ಏರಿಯಾಗಳಲ್ಲಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

    ನಿನ್ನೆ ಡ್ರೋನ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ ಮಾಡಿದ್ದರು. ಡ್ರೋನ್ ಕ್ಯಾಮ್ ನಿಂದ ಐಡೆಂಟಿಫಿಕೇಷನ್ ಕಷ್ಟ ಅನ್ನೋ ಕಾರಣಕ್ಕೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸಿಬ್ಬಂದಿ ಚಿರತೆ ಸೆರೆಹಿಡಿಯಲು ಬೋನ್ ಗಳನ್ನು ನಿರ್ಮಿಸಿದ್ದಾರೆ. ನಾಲ್ಕು ದಿನಗಳಿಂದ ಸಿಸಿಟಿವಿಗೂ ಕಾಣಿಸಿಕೊಂಡಿಲ್ಲ, ಬೋನ್ ಗಳ ಕಡೆ ಕೂಡ ಬಂದಿಲ್ಲ. ಹೀಗಾಗಿ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಬೋನ್ ಗಳನ್ನು ತೆರವು ಮಾಡುವ ಸಾಧ್ಯತೆ ಇದೆ.

    ಸತತ ಆರನೇ ದಿನವೂ ಚಿರತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸೋಮವಾರ ಮುಂಜಾನೆ ಕಾಣಿಸಿಕೊಂಡಿದ್ದ ಚಿರತೆ ಇಲ್ಲಿವರೆಗೂ ನಾಪತ್ತೆಯಾಗಿದೆ. ಅರಣ್ಯ ಇಲಾಖೆಯಿಂದ ಸತತ ಮೂರನೇ ದಿನವೂ ಬೋನ್ ಇಟ್ಟು ಸಿಬ್ಬಂದಿ ಕಾಯುತ್ತಿದ್ದಾರೆ. ಬೋನ್ ಒಳಗಡೆ ಮೇಕೆ ಮರಿಯನ್ನು ಇಡಲಾಗಿದ್ದು ಚಿರತೆಗಾಗಿ ಕಾದುಕುಳಿತಿದ್ದಾರೆ. ನಿನ್ನೆ ರಾತ್ರಿ ಪೂರ್ತಿ ಐದು ಮಂದಿ ಅರಣ್ಯ ಸಿಬ್ಬಂದಿಯಿಂದ ಚಿರತೆಗಾಗಿ ಹುಡುಕಾಟ ನಡೆಯಿತು.

    ಚಿರತೆ ರಾತ್ರಿ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವುದರಿಂದ ಹತ್ತಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳು ಹಾಕಲಾಗಿದೆ. ಚಿರತೆ ಚಲನವಲನಗಳ ಬಗ್ಗೆ ನಿಗಾ ಇಡಲು ತಜ್ಞರು ಸೂಚನೆ ನೀಡಿದ್ದಾರೆ. ಡ್ರೋನ್ ಕ್ಯಾಮೆರಾ ಮೂಲಕ ಚಿರತೆ ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಕಲ್ಲು ಕ್ವಾರಿಯಲ್ಲಿ ಚಿರತೆ ಅಡಗಿರುವ ಶಂಕೆ ವ್ಯಕ್ತವಾಗುತ್ತಿದ್ದು, ಬಿಟಿಎಂ ಬಡಾವಣೆಯ ಜನ ಯಾರು ಸಹ ಸಂಜೆ ಮತ್ತು ಬೆಳಗ್ಗಿನ ಜಾವ ಹೊರಗಡೆ ಬರಬಾರದು ಅಂತ ಅರಣ್ಯ ಇಲಾಖೆ ಸೂಚನೆ ನೀಡಿದೆ.