ಆನೇಕಲ್(ಬೆಂಗಳೂರು): ಇಲ್ಲಿನ ಜೆಡಿಎಸ್ ಯುವಘಟಕದ ಅಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಹಲ್ಲೆಗೊಳಗಾಗಿರುವವರನ್ನು ರುದ್ರೇಶ್ ಎಂದು ಗುರುತಿಸಲಾಗಿದೆ. ಆನೇಕಲ್ ಪಟ್ಟಣದ ಹೊಸೂರು ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಭಾನುವಾರ 8.30ರ ಸುಮಾರಿಗೆ ಮನೆಗೆ ತೆರಳುವ ಸಂದರ್ಭದಲ್ಲಿ ಘಟನೆ ನಡೆದಿದೆ.
ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಹೆಲ್ಮೆಟ್ ನಿಂದ ಮನಬಂದಂತೆ ಥಳಿಸಿ ಮಾರಣಾಂತಿಕವಾ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದ ರುದ್ರೇಶ್ ಅವರನ್ನು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಗಮನಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ರಾಜಕೀಯ ಪ್ರೇರಿತರಾಗಿ ಹಲ್ಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣನ ಜೊತೆ ಗುರುತಿಸಿಕೊಂಡಿದ್ದ ರುದ್ರೇಶ್, ಇತ್ತೀಚೆಗೆ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿದ್ದರು. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ
ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆನೇಕಲ್: ಅವರಿಬ್ಬರು ಸ್ನೇಹಿತರು, ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ಒಬ್ಬಾತ, ಇನ್ನೊಬ್ಬ ಸ್ನೇಹಿತ ತರಕಾರಿ ವ್ಯಾಪಾರ ಮಾಡುತ್ತಿದ್ದ. ಗುರುವಾರ ಮಧ್ಯಾಹ್ನ ಇಬ್ಬರೂ ಮನೆಯಿಂದ ಹೊರಟಿದ್ದರು. ಆದರೆ ಮನೆಯಿಂದ ಹೋದವರು ಸ್ನೇಹಿತರು ನಿರ್ಜನ ಪ್ರದೇಶದಲ್ಲಿ ಹೆಣವಾಗಿ ಹೋಗಿದ್ದಾರೆ. ಜೂಜಾಟ, ಬಡ್ಡಿ ವ್ಯಾಪಾರವೇ ಇವರಿಬ್ಬರ ಪ್ರಾಣ ಹೋಗೋದಕ್ಕೆ ಕಾರಣವಾಯ್ತಾ.? ಅಥವಾ ಇನ್ನೂ ಬೇರೆ ಕಾರಣ ಇದೆಯಾ ಅಂತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಳ್ಳೂರು ರಸ್ತೆಯ ನಿರ್ಜನ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳ ಕೊಲೆ ನಡೆದು ಹೋಗಿದೆ. ಟಿವಿಎಸ್ ರಸ್ತೆ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಅತ್ತಿಬೆಲೆ ನಿವಾಸಿ ಫೈನಾನ್ಸಿಯರ್ ಆಗಿರುವ ದೀಪಕ್(45) ಹಾಗೂ ತರಕಾರಿ ವ್ಯಾಪಾರಿ ಮಾಯಸಂದ್ರದ ಭಾಸ್ಕರ್ (28) ಅವರ ಕೊಲೆಯಾಗಿದೆ.
ದೀಪಕ್ ಸಣ್ಣ ಮಟ್ಟದ ಬಡ್ಡಿ ವ್ಯವಹಾರ ನಡೆಸುತ್ತಿದ್ದು, ತಮಿಳುನಾಡು ಮೂಲದ ದೊರೆ ಎಂಬವನಿಗೆ 20 ಸಾವಿರ ಸಾಲ ನೀಡಿದ್ದ. ಸಾಲ ಹಿಂದಿರುಗಿಸದ ಕಾರಣ ಭಾಸ್ಕರ್ ಜೊತೆ ದೊರೆ ಊರಿಗೆ ತೆರಳಿ ಅವಾಜ್ ಹಾಕಿ, ಅವನ ಹೀರೋ ಎಕ್ಸ್ಟ್ರೀಮ್ ತೆಗೆದುಕೊಂಡು ಬಂದಿದ್ದ. ನಂತರ ದುಡ್ಡು ಕೊಡೋದಾಗಿ ಹೇಳಿದ ದೊರೆ, ತನ್ನ ಬೈಕ್ ವಾಪಸ್ ಪಡೆಯಲು ಬಂದಾಗ ದೊಡ್ಡ ಜಗಳ ನಡೆದಿದೆ ಎನ್ನಲಾಗಿದೆ.
ಇತ್ತ ಮೊದಲೇ ನಿರ್ಧಾರ ಮಾಡಿಕೊಂಡು ಬಂದಿದ್ದ ದೊರೆ ಹಾಗೂ ಅರುಣ್ ಕಡೆಯ ಆರೇಳು ಮಂದಿ, ರಾಡ್ ದೊಣ್ಣೆಗಳಿಂದ ದೀಪಕ್ ನನ್ನು ಥಳಿಸಿದ್ದಾರೆ. ಇದಕ್ಕೆ ಅಡ್ಡ ಬಂದ ಭಾಸ್ಕರ್ ನನ್ನೂ ಹೊಡೆದಿದ್ದಾರೆ ಅಂತ ಹೇಳಲಾಗ್ತಿದೆ. ಕೇವಲ 20 ಸಾವಿರ ಹಣಕ್ಕೆ ಕೊಲೆ ನಡೆದಿರಬಹುದಾ ಅಥವಾ ಬೇರೆ ಏನಾದರೂ ಕಾರಣಗಳಿವೆಯಾ ಎಂದು ಬೇರೆ ಬೇರೆ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಟೀಲ್‍ಗೆ ಸೀರೆ ಉಡಿಸಿದ್ರೆ ಆತ ಹೆಂಗಸು ಅಲ್ಲ, ಗಂಡಸು ಅಲ್ಲ: ಬೇಳೂರು ಗೋಪಾಲಕೃಷ್ಣ
ತನ್ನ ಗಂಡ ದೀಪಕ್ ಯಾರ ಜೊತೆಯೂ ಜಗಳ ಮಾಡ್ತಾ ಇರಲಿಲ್ಲ. ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದರು ಅಂತ ದೀಪಕ್ ಪತ್ನಿ ಸ್ನೇಹ ಕಣ್ಣೀರಿಟ್ಟಿದ್ದಾರೆ. ಇತ್ತ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಭಾಸ್ಕರ್, ಇತ್ತೀಚೆಗೆ ಜೂಜಾಡುವ ಚಟ ಮೈಗೂಡಿಸಿಕೊಂಡಿದ್ದ, ಮೊನ್ನೆಯಷ್ಟೇ ತಮಿಳುನಾಡು ಪೊಲಿಸರಿಂದ ಅರೆಸ್ಟ್ ಆಗಿ ಬೇಲ್ ಮೇಲೆ ಹೊರ ಬಂದಿದ್ದ. ಆನೇಕಲ್ ಹೊಸೂರು ಭಾಗದಲ್ಲಿ ನಡೆಯುವ ಇಸ್ಪೀಟು ಅಡ್ಡೆಗಳಲ್ಲಿ ಸಕ್ರಿಯವಾಗಿ ಜೂಜಾಡುತ್ತಿದ್ದ ಭಾಸ್ಕರ್ ಗೆ ದೀಪಕ್ ಆಗಾಗ ಹಣದ ಸಹಾಯ ಮಾಡುತ್ತಿದ್ದ. ಹೀಗಾಗಿಯೇ ಭಾಸ್ಕರ್, ದೀಪಕ್ ಜೊತೆಯೂ ಅವನ ಬಡ್ಡಿ ವ್ಯವಹಾರದಲ್ಲಿ ಸಹಾಯ ಮಾಡ್ತಿದ್ದ.
ಒಟ್ಟಿನಲ್ಲಿ ಇದೀಗ ಜೂಜಾಟಕ್ಕೆ ಬೇಕಾದ ಹಣದ ಆಸೆಗೆ ಮಾರು ಹೋಗಿ ಹೆಣವಾಗಿರುವ ಭಾಸ್ಕರ್, ದೀಪಕ್ ನ ಜಗಳದಲ್ಲಿ ತಾನೂ ಪ್ರಾಣಕಳೆದುಕೊಂಡಿದ್ದಾನೆ.
ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮರಿಯಾನೆ ಬಂಡೆಯಿಂದ ಜಾರಿ ಬಿದ್ದು, ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಳೆದ ತಿಂಗಳಷ್ಟೇ ತಡೆ ಬೇಲಿಗೆ ಕತ್ತು ಸಿಲುಕಿ ಜಿರಾಫೆ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಬಂಡೆ ಮೇಲಿನಿಂದ ಜಾರಿ ಬಿದ್ದು ಮರಿಯಾನೆಯೊಂದು ಸಾವನ್ನಪ್ಪಿದೆ. ಕಳೆದ 4 ದಿನಗಳ ಹಿಂದೆ ಜೈವಿಕ ಉದ್ಯಾನವನದ 5 ವರ್ಷದ ಗಂಡು ಆನೆಮರಿ ಶ್ರೀರಾಮುಲು ಬಂಡೆ ಮೇಲಿಂದ ಜಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆ ಸಫಾರಿಯಲಿದ್ದ ಶ್ರೀರಾಮುಲು ಆನೆಮರಿ ರಾತ್ರಿ ವೇಳೆ ಕಾಡಿಗೆ ಮೇಯಲು ಬಿಡಲಾಗಿತ್ತು. ಬಂಡೆ ತುದಿಯಲ್ಲಿ ಆಟ ಆಡಬೇಕಾದರೆ ಕಾಲು ಜಾರಿ ಮೇಲಿಂದ ಬಿದ್ದು, ಸಾವನ್ನಪ್ಪಿರುವ ಶಂಕೆ ಇದೆ. ಅದು ಅಲ್ಲದೇ ಕಾಡಿನ ಆನೆಯೊಂದಿಗೆ ಮುಖಾಮುಖಿಯಾದ ಸಮಯದಲ್ಲಿ ಏನಾದರೂ ಕಾಡಿನ ಆನೆ ಮೇಲಿಂದ ಕೆಳಕ್ಕೆ ತಳ್ಳಿರಬಹುದೆಂಬ ಅನುಮಾನವೂ ಮೂಡಿದೆ. ಇದನ್ನೂ ಓದಿ: ಆರ್ಯನ್ ಖಾನ್ ಮೂರು ವರ್ಷದಿಂದ ಡ್ರಗ್ ಸೇವಿಸುತ್ತಿದ್ದಾರೆ – ಎನ್‍ಸಿಬಿ
ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯಾಧಿಕಾರಿಗಳಿಂದ ಮೃತಪಟ್ಟ ಆನೆಮರಿಯ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ.
ಆನೇಕಲ್: ಪ್ರಪಂಚದ ಜೀವ ಸಂಕುಲದಲ್ಲಿ ಆಗಾಗ ಅನೇಕ ಕೌತುಕಗಳು ಘಟಿಸುತ್ತಲೇ ಇರುತ್ತವೆ. ಅಂಥಾದ್ದೇ ಒಂದು ಪ್ರಸಂಗ ತಮಿಳುನಾಡಿನ ಶೂಲಗಿರಿಯಲ್ಲಿ ನಡೆದಿದ್ದು, ಕುರಿಯೊಂದು ಮುಖವೇ ಇಲ್ಲದ ಕುರಿಮರಿಗೆ ಜನ್ಮ ನೀಡಿದೆ.
ತಮಿಳುನಾಡಿನ ಶೂಲಗಿರಿ ರೈತನ ಮನೆಯಲ್ಲಿ ಈ ವಿಚಿತ್ರ ಕುರಿಮರಿ ಹುಟ್ಟಿದೆ. ಎಲ್ಲಾ ಕುರಿಗಳಂತೆ ಈ ಕುರಿಗೂ ನಾಲ್ಕು ಕಾಲು ಬಾಲ ಇದೆ. ಆಕಾರವೂ ಕುರಿಮರಿಯಂತೆ ಸಾಮಾನ್ಯವಾಗಿದೆ. ಆದರೆ ಈ ಮರಿಗೆ ತಲೆ ಮುಖ ಬಾಯಿಯೇ ಇಲ್ಲ. ಆಶ್ಚರ್ಯ ಅಂದ್ರೆ ಈ ಮರಿಗೆ ಎರಡೂ ಕಿವಿಗಳಿವೆ ಆದರೆ ಮುಖ ಮಾತ್ರ ಇಲ್ಲ. ತಾಯಿ ಕುರಿ ಹೊಟ್ಟೆಯಲ್ಲಿ ಇಷ್ಟು ದೊಡ್ಡಾದಾಗಿ ಬೆಳೆದ ಈ ಕುರಿ ಭೂಮಿಗೆ ಬರ್ತಿದ್ದ ಹಾಗೆ ಉಸಿರು ತೆಗೆದುಕೊಳ್ಳಲು ಮೂಗು ಮತ್ತು ಬಾಯಿ ಇಲ್ಲದ ಕಾರಣ ಸಾವನ್ನಪ್ಪಿದೆ. ಇದನ್ನೂ ಓದಿ: ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಟಾಂಗಾದಲ್ಲಿ ಆಗಮಿಸಿದ ಸೋಮಶೇಖರ್
ಹೊಟ್ಟೆಯಲ್ಲಿ ಇದ್ದಷ್ಟು ದಿನ ತಾಯಿ ಕುರಿಯ ಶ್ವಾಸದೊಂದಿಗೆ ಬದುಕಿದ ಈ ಕುರಿ ಹೊಟ್ಟೆಯಿಂದ ಹೊರ ಬರುತ್ತಿದ್ದಂತೆ ಸಾವನ್ನಪ್ಪಿದೆ.
ಬೆಂಗಳೂರು/ಆನೇಕಲ್: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ನಾಯಿಗಳು ದಾಳಿ ಮಾಡಿವೆ. ಬಾಲಕಿ ಮೇಲೆ ನಾಯಿಗಳು ಅಟ್ಯಾಕ್ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಮಾರ್ಕೆಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಿಗ್ಗೆ 16 ವರ್ಷದ ಬಾಲಕಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ 6 ಕ್ಕೂ ಹೆಚ್ಚು ನಾಯಿಗಳು ಏಕಾಏಕಿ ಬಾಲಕಿ ಮೇಲೆ ದಾಳಿ ಮಾಡಿವೆ. ಸ್ಥಳೀಯರ ನೆರವಿನಿಂದ ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇದನ್ನೂ ಓದಿ: ಈಶ್ವರಪ್ಪ ಜೀವನದಲ್ಲಿ ಈವರೆಗೆ ಯಾವ ಕೆಲಸವನ್ನೂ ಸರಿಯಾಗಿ ಮಾಡಿಲ್ಲ: ಎಚ್.ಎಂ. ರೇವಣ್ಣ
ಬಾಲಕಿ ಮೇಲೆ ನಾಯಿಗಳು ಏಕಾಏಕಿ ದಾಳಿ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಗಾಯಗೊಂಡ ಬಾಲಕಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾಳೆ. ಬೀದಿ ನಾಯಿಗಳ ದಾಳಿ ಹೆಚ್ಚಾಗುತ್ತಿದೆ ಅಂತ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾನು ಎಲ್ಲರಿಗಿಂತ ಸೀನಿಯರ್, ಅರ್ಧ ಬೆಂಗಳೂರು ಉಸ್ತುವಾರಿ ಕೊಡಲಿ: ಸೋಮಣ್ಣ
ಆನೇಕಲ್: ಕೊರೊನಾ ಮೂರನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ಆನೇಕಲ್ ತಾಲೂಕು ಆರೋಗ್ಯ ಇಲಾಖೆ ವತಿಯಿಂದ 0-18 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಆನೇಕಲ್ ಪಟ್ಟಣದ ಹಳೆಯ ಮಾಧ್ಯಮಿಕ ಪಾಠಶಾಲೆಯ ಆವರಣದಲ್ಲಿ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳು ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಮಕ್ಕಳಿಗೆ ನೂರಿತ ವಿಶೇಷ ತಜ್ಞರು ಪರೀಕ್ಷಿಸಿದರು. ಅವರಿಗೆ ಸೂಕ್ತ ಔಷಧ ಹಾಗೂ ಚಿಕಿತ್ಸೆಯನ್ನು ನೀಡಿದರು. ಇದನ್ನೂ ಓದಿ: ವಿಗ್ರಹಗಳ ಪಾಲಿಶ್ ಮಾಡಿಕೊಡುವ ನೆಪದಲ್ಲಿ ಮನೆಯಲ್ಲಿದ್ದ ಚಿನ್ನಾಭರಣಗಳ ಲೂಟಿ
ಸ್ಥಳೀಯವಾಗಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಆಯಾ ಏರಿಯಾಗಳಲ್ಲಿನ ಮಕ್ಕಳನ್ನು ಗುರುತಿಸಿ ತೂಕ, ಎತ್ತರ ಸೇರಿದಂತೆ ಆರೋಗ್ಯದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ನಂತರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಕ್ಕಳನ್ನು ಗುರುತಿಸಿ ಇಂದು ಆರೋಗ್ಯ ತಪಾಸಣೆಗೆ ಕರೆತರಲಾಗಿದೆ.
ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಅಪೌಷ್ಟಿಕತೆಗೆ ತುತ್ತಾಗುತ್ತಿದ್ದಾರೆ. ಈ ಮಕ್ಕಳಲ್ಲಿ ಅಂಗವೈಕಲ್ಯ, ಕಡಿಮೆ ಬುದ್ಧಿಶಕ್ತಿ, ಕುರುಡುತನ, ಹೃದಯ ಸಂಬಂಧಿ ಸಮಸ್ಯೆ, ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತ ಈ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಮಕ್ಕಳು ತುತ್ತಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಸೂಚನೆಯಂತೆ ಮಕ್ಕಳ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಚಿನ್ನದ ಪದಕ ಗೆದ್ದ ಜಮ್ಮು ಬಿಯರ್
ತಾಲೂಕಿನಲ್ಲಿ 47 ಅಪೌಷ್ಟಿಕತೆಯ(ಸ್ಯಾಮ್) ಮಕ್ಕಳಿದ್ದು, 120 ಸಾಧಾರಣ ಅಪೌಷ್ಟಿಕತೆಯ (ಮ್ಯಾಮ್) ಮಕ್ಕಳಿದ್ದಾರೆ. ಅವರ ಸಂಪೂರ್ಣ ಮಾಹಿತಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ತೆಗೆದುಕೊಂಡು ಅವರಿಗೆ ಸೂಕ್ತ ಚಿಕಿತ್ಸೆ ಹಾಗೂ ಆಹಾರವನ್ನು ನೀಡಿತ್ತಾರೆ. ಅಪೌಷ್ಟಿಕತೆಯಿಂದ ಮಕ್ಕಳು ಕೂಡಲೇ ಪಾರಾಗಲು ತಜ್ಞ ವೈದ್ಯರು ಚಿಕಿತ್ಸೆಯನ್ನು ನೀಡುತ್ತಾರೆಂದು ಆನೇಕಲ್ ತಾಲೂಕು ವೈದ್ಯಾಧಿಕಾರಿ ಡಾ.ವಿನಯ್ ತಿಳಿಸಿದರು.
ಆನೇಕಲ್(ಬೆಂಗಳೂರು): ಬಿಜೆಪಿ ಕಾರ್ಯಕರ್ತರೊಬ್ಬರು ರಸ್ತೆ ಗುಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಆನೇಕಲ್-ಹೊಸೂರು ಮುಖ್ಯರಸ್ತೆಯ ಸಬ್ ಮಂಗಲದಲ್ಲಿ ಈ ಅವಘಡ ಸಂಭವಿಸಿದೆ.
ಸಬ್ ಮಂಗಲದ ಮಾದೇಶಣ್ಣ(50) ಮೃತ ಬಿಜೆಪಿ ಕಾರ್ಯಕರ್ತ. ರಸ್ತೆ ಕಾಮಗಾರಿಗಾಗಿ ಮರ ತೆರವಿಗೆ ಗುಂಡಿ ಅಗೆಯಲಾಗಿತ್ತು. ಆದರೆ 2 ತಿಂಗಳ ಹಿಂದೆಯೇ ಗುಂಡಿ ತೆಗೆದು ಆ ಬಳಿಕ ಮುಚ್ಚಿರಲಿಲ್ಲ. ರಾತ್ರಿ ಬೈಕ್‍ನಲ್ಲಿ ಹೋಗುವಾಗ ಮಾದೇಶಣ್ಣ ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆ. ಇದನ್ನೂ ಓದಿ: ರೌಡಿಗಳಿಗೆ ಕಾನೂನಿನ ಭಯವಿಲ್ಲದೆ ಅಟ್ಟಹಾಸ ತೋರಿಸುತ್ತಿದ್ದಾರೆ: ಯು.ಟಿ.ಖಾದರ್
ಈ ರಸ್ತೆ ಕಾಮಗಾರಿ ಆದ ಬಳಿಕ ಇಲ್ಲಿಯವರೆಗೂ 8 ಮಂದಿ ಸಾವನ್ನಪ್ಪಿದ್ದಾರೆ. 3 ವರ್ಷದ ಹಿಂದೆಯೇ ಶುರು ಆಗಿದ್ದ ಕಾಮಗಾರಿ ಇನ್ನೂ ಮುಗಿದಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಆನೇಕಲ್ ತಹಶೀಲ್ದಾರ್ ದಿನೇಶ್ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಎಸ್‍ಎಂಕೆ ಸರಿಯಾದ ಆಯ್ಕೆ – ಸಿಎಂಗೆ ಪ್ರತಾಪ್ ಸಿಂಹ ಅಭಿನಂದನೆ
ಬೈಕ್ ಮಾಲೂರಿನಿಂದ ಹೊಸೂರಿಗೆ ತೆರಳುತ್ತಿದ್ದು, ಬಾಗಲೂರಿನಲ್ಲಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಬಾಗಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಹೊಸೂರು ಆಸ್ಪತ್ರೆಗೆ ಸಾಗಿಸಿದ್ದಾರೆ.
ಆನೇಕಲ್: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸತತ್(ಸಸ್ಟೇನಬಲ್ ಆಲ್ಟರ್ನೇಟಿವ್ ಟುವರ್ಡ್ಸ್ ಅಫೋರ್ಡಬಲ್ ಟ್ರಾನ್ಸ್ ಪೊರ್ಟೇಶನ್ ) ಯೋಜನೆಯಡಿಯಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಹುಲ್ಲನ್ನು ಬಳಸಿ ಬಯೋ ಗ್ಯಾಸ್ ತಯಾರು ಮಾಡುವ ಘಟಕ ಸ್ಥಾಪನೆಗೊಂಡಿದ್ದು, ಇಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಘಟಕಕ್ಕೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದರು.
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸೋಲೂರು ಗ್ರಾಮದಲ್ಲಿರುವ ಹೈಕಾನ್ ರೆನೆವಾಬ್ಲೆ ಪ್ರೈವೆಟ್ ಲಿಮಿಟೆಡ್ ಘಟಕವು ದೇಶದಲ್ಲಿಯೇ ಪ್ರಥಮ ಬಾರಿಗೆ ಹುಲ್ಲಿನಿಂದ ಬಯೋ ಗ್ಯಾಸ್ ತಯಾರು ಮಾಡುವ ಘಟಕವಾಗಿದೆ. ಕೇಂದ್ರ ಸರ್ಕಾರವು ಕಳೆದ ಮೂರು ವರ್ಷದ ಹಿಂದೆ ಸತತ್ ಎಂಬ ಯೋಜನೆಯನ್ನು ಸಾಮಾನ್ಯ ಜನರಿಗೆ ಪರಿಚಯಿಸಿದ್ದು, ಗ್ಯಾಸ್ ತಯಾರು ಮಾಡಿದಾಗ ಅದನ್ನು ಇಂಡಿಯನ್ ಆಯಿಲ್ ಹಾಗೂ ಗೇಲ್ ಕಂಪನಿಗಳು ಪಡೆದುಕೊಂಡು ಗ್ರಾಹಕರಿಗೆ ತಲುಪಿಸಲಿದೆ. ಇದನ್ನೂ ಓದಿ: ಉಡುಪಿಯಲ್ಲಿ ಹಟ್ಟಿಗೆ ನುಗ್ಗಿ ಗೋವು ಕಳ್ಳತನ- ಪೊಲೀಸ್ ಠಾಣೆ ಮುಂದೆ ಪ್ರತಿಭಟನಾ ಭಜನೆ
ಹೈಕಾನ್ ರೆನೆವಾಬ್ಲೆ ಪ್ರೈವೆಟ್ ಲಿಮಿಟೆಡ್ ಘಟಕದ ಮುಖ್ಯಸ್ಥ ಶಶಿಕಾಂತ್ ಮತ್ತು ಅವರ ತಂಡ ಈ ಅದ್ಭುತವಾದ ಯೋಜನೆಗೆ ಕೈಜೋಡಿಸಿದ್ದಾರೆಂದು ಗಿರಿರಾಜ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದರು.
ಇಂಡಿಯನ್ ಗ್ಯಾಸ್ ಕಂಪನಿಯ ಜೊತೆ ಹತ್ತು ವರ್ಷಗಳ ಕಾಂಟ್ರಾಕ್ಟ್ ಆಗಿದ್ದು ಸಪ್ಲೈ ಸಹ ಪ್ರಾರಂಭವಾಗಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದಲೂ ಸಬ್ಸಿಡಿ ದೊರೆಯುತ್ತಿದೆ ಎಂದರು.
ಭಾರತದಲ್ಲಿ ಮೊದಲಿನಿಂದಲೂ ಗೊಬ್ಬರದಿಂದ ಗ್ಯಾಸ್ ತಯಾರು ಮಾಡುತ್ತಿದ್ದರೂ ಈಗ ಹೈಕಾನ್ ಕಂಪನಿಯು ಭಾರತದಲ್ಲಿಯೇ ಪ್ರಥಮ ಬಾರಿಗೆ ಹುಲ್ಲಿನಿಂದ ಗ್ಯಾಸ್ ತಯಾರು ಮಾಡುವುದನ್ನು ಪರಿಚಯಿಸಿದೆ. ಸಾಮಾನ್ಯ ರೈತನು ಸಹ ಹುಲ್ಲನ್ನು ಬೆಳೆದು ಈ ರೀತಿ ಗ್ಯಾಸ್ ತಯಾರು ಮಾಡುವ ಘಟಕಗಳನ್ನು ಮಾಡಿಕೊಂಡು ಕಂಪನಿಗಳಿಗೆ, ಮನೆಗಳಿಗೆ ಸೇರಿದಂತೆ ಗ್ಯಾಸ್ ಅವಶ್ಯಕತೆ ಇರುವ ಕಡೆಗಳಿಗೆ ಉತ್ಪಾದನೆ ಮಾಡಬಹುದಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದ ಹಲವೆಡೆ ನಾಲ್ಕು ದಿನ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ
ಈ ಮೂಲಕ ಗ್ಯಾಸ್ ಅನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುವುದು ಕಡಿಮೆಯಾಗಿ, ನಮ್ಮಲ್ಲಿಯೇ ಉತ್ಪಾದನೆ ಹೆಚ್ಚಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆ ಪರಿಚಯಿಸಿದೆ. ಇದರಿಂದ ಸಾಕಷ್ಟು ಜನಕ್ಕೆ ಇದರಿಂದ ಕೆಲಸವು ದೊರೆತಂತಾಗಿದೆ ಎಂದರು.
ಆನೇಕಲ್: ಮೈಸೂರು – ಪುದುಕೋಟೈ ಪ್ಯಾಸೆಂಜರ್ ಎಕ್ಸ್ ಪ್ರೆಸ್ ರೈಲು ಆನೇಕಲ್ ತಾಲೂಕಿನ ಆವಲಹಳ್ಳಿ ಬಳಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ.
ರೈಲಿನಲ್ಲಿ ಸಾವಿರಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ರಾತ್ರಿ 9 ಗಂಟೆ ಸುಮಾರಿಗೆ ಲಾರಿ ಚಾಲಕ ಗೂಗಲ್ ಮ್ಯಾಪ್ ನಂಬಿ ಲಾರಿ ಚಲಾಯಿಸಿಕೊಂಡು ಬಂದಿದ್ದಾನೆ. ಆದರೆ 2 ವರ್ಷಗಳ ಹಿಂದೆಯೇ ಆ ರಸ್ತೆ ಬಂದ್ ಆಗಿದ್ದು, ಪಕ್ಕದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ನೇಣುಬಿಗಿದ ಸ್ಥಿತಿಯಲ್ಲಿ ಪ್ರಯಾಗರಾಜ್ ಸಂತ ನರೇಂದ್ರಗಿರಿ ಪತ್ತೆ
ಸಣ್ಣ ಮಳೆಯಾದರೂ ಈ ಅಂಡರ್‍ಪಾಸ್‍ನಲ್ಲಿ ನೀರು ತುಂಬಿಕೊಳ್ಳುತ್ತದೆ. ಅವೈಜ್ಞಾನಿಕವಾಗಿ ಅಂಡರ್ ಪಾಸ್ ನಿರ್ಮಾಣವಾಗಿತ್ತು. ಇದೀಗ ಆ ಅಂಡರ್ ಪಾಸ್ ದುರಸ್ತಿ ಕಾರ್ಯ ಮಂದಗತಿಯಲ್ಲಿ ನಡೆಯುತ್ತಿದೆ. ಲಾರಿ ಚಾಲಕ ಹಳಿ ದಾಟುವ ಹೊತ್ತಿಗೆ ರೈಲು ಬಂದಿದೆ. ತಕ್ಷಣವೇ ಲಾರಿ ಚಾಲಕ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ. ಆದರೆ ಲಾರಿ ಎಂಜಿನ್ ಅನ್ನು ರೈಲು ಸುಮಾರು ಅರ್ಧ ಕಿ.ಮೀ.ವರೆಗೆ ಎಳೆದೊಯ್ದಿದೆ.
ಮುರ್ನಾಲ್ಕು ಗಂಟೆಗಳ ಕಾಲ ಲಾರಿ ಎಂಜಿನ್ ಅನ್ನು ಹಳಿ ಮೇಲಿಂದ ಎತ್ತಲು ಹರಸಾಹಸ ಪಡಲಾಯಿತು. ಇದರಿಂದ ಕೇರಳ, ತಮಿಳುನಾಡಿನ 2 ರೈಲುಗಳನ್ನ ತಡೆಯಲಾಗಿತ್ತು. ಈ ಎಡವಟ್ಟಿಗೆ ರೈಲ್ವೆ ಇಲಾಖೆಯೇ ಕಾರಣವೆಂದು ಪ್ರಯಾಣಿಕರು ದೂರಿದ್ದಾರೆ. ಇದನ್ನೂ ಓದಿ: ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮುಂದಾದ ಸರ್ಕಾರ – ಮಸೂದೆಯಲ್ಲಿ ಏನಿದೆ?