Tag: anekal

  • ಲವರ್‌ ಜೊತೆ ಮೂರು ಮಕ್ಕಳ ತಾಯಿ ಜೂಟ್‌ – ಇತ್ತ ಹೆಂಡ್ತಿ ಬೇಕೆಂದು ಗಂಡ ಕಣ್ಣೀರು

    ಲವರ್‌ ಜೊತೆ ಮೂರು ಮಕ್ಕಳ ತಾಯಿ ಜೂಟ್‌ – ಇತ್ತ ಹೆಂಡ್ತಿ ಬೇಕೆಂದು ಗಂಡ ಕಣ್ಣೀರು

    ಆನೇಕಲ್: 11 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನ ಬಿಟ್ಟು ಪ್ರಿಯಕರನೊಂದಿಗೆ (Lover) ಮೂರು ಮಕ್ಕಳ ತಾಯಿ ಎಸ್ಕೇಪ್‌ ಆಗಿರುವ ಘಟನೆ ಬನ್ನೇರುಘಟ್ಟ (Bannerghatta) ಸಮೀಪದ ಬಸವನಪುರ ಗ್ರಾಮದಲ್ಲಿ ನಡೆದಿದೆ.

    ಲೀಲಾವತಿ ಪ್ರಿಯಕರನ ಜೊತೆ ಓಡಿ ಹೋಗಿದ್ದ ಪತ್ನಿ, ಮಂಜುನಾಥ್‌ ನೊಂದ ಪತಿ. ದಂಪತಿಗೆ 2 ಗಂಡು ಮಕ್ಕಳು, ಒಂದು ಹೆಣ್ಣು ಮಗು ಇದೆ. ಇದನ್ನೂ ಓದಿ: ಉತ್ತರ ಪ್ರದೇಶ | ನಕಲಿ ಐಎಎಸ್ ಅಧಿಕಾರಿ ಅರೆಸ್ಟ್‌ – ಐಷಾರಾಮಿ ಕಾರುಗಳು ಸೀಜ್‌

    ಪತ್ನಿ ಲೀಲಾವತಿ ಭಾನುವಾರ (ಆ.31) ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಪತಿ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಿಸಿದ ನಂತರ ಆಕೆಯೂ ಪೊಲೀಸ್‌ ಠಾಣೆಗೆ ಬಂದಿದ್ದಾಳೆ. ಬಳಿಕ ಪ್ರಿಯಕರನೇ ಬೇಕೆಂದು ಆತನೊಂದಿಗೆ ಹೋಗಿದ್ದಾಳೆ. ಇತ್ತ ನೊಂದ ಪತಿ ತನಗೆ ಹೆಂಡ್ತಿ ಬೇಕೆಂದು ಕಣ್ಣೀರಿಡುತ್ತಿದ್ದಾನೆ. ಮಕ್ಕಳೂ ಕೂಡ ಕಣ್ಣೀರಿಡುತ್ತಿದ್ದಾನೆ. ಇದನ್ನೂ ಓದಿ: ನನ್ನ ಹಣವನ್ನೆಲ್ಲ ತಿಂದು ತೇಗಿದ್ದೀಯಾ: ಡಿವೋರ್ಸ್‌ ವಿಚಾರಕ್ಕೆ ಪತ್ನಿಗೆ ಗುಂಡಿಟ್ಟು ಕೊಂದ ಪತಿ

    ಆ ದಿನ ಏನಾಯ್ತು?
    ಬಸವನಪುರದಲ್ಲಿ (Basavanapura) ವಾಸವಿದ್ದ ಲೀಲಾವತಿ, ಮಂಜುನಾಥ್ ದಂಪತಿ 11 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದರು. ಮಂಜುನಾಥ್‌ ಕ್ಯಾಬ್‌ ಡ್ರೈವರ್‌ ಆಗಿ ಕೆಲಸ ಮಾಡ್ತಿದ್ದಾನೆ. ಕಳೆದ 2 ವರ್ಷಗಳ ಹಿಂದೆ ಲೀಲಾವತಿಗೆ ಪ್ರಿಯಕರ ಸಂತೋಷ್‌ನ ಪರಿಚಯವಾಗಿತ್ತು. ಇಬ್ಬರ ನಡುವೆ ಸಲುಗೆ ಹೆಚ್ಚಾಗಿ ಅಕ್ರಮ ಸಂಬಂಧ ಬೆಳೆದಿತ್ತು. ಸಾಕಷ್ಟು ಬಾರಿ ಮಂಜುನಾಥ್‌ ಇದನ್ನ ಪ್ರಶ್ನೆ ಮಾಡಿದ್ದ. ಆದರೂ ಬುದ್ಧಿ ಕಲಿಯದ ಲೀಲಾವತಿ ಭಾನುವಾರ ಮನೆಯಿಂದ ಎಸ್ಕೇಪ್‌ ಆಗಿದ್ದಾಳೆ.

    ಈ ಕುರಿತು ಪತಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಬಳಿಕ ಠಾಣೆಗೆ ಹಾಜರಾದ ಲೀಲಾವತಿ ತನಗೆ ಪ್ರಿಯಕರನೇ ಬೇಕೆಂದು ತಾಳಿ ಕಿತ್ತಿಟ್ಟು, ಹೋಗಿದ್ದಾಳೆ. ಇತ್ತ ಗಂಡ – ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಹೋಟೆಲ್‌ನಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕನ ಕೂಡಿಹಾಕಿ ಹಿಂಸೆ, ಹಲ್ಲೆ – ಚಿಕಿತ್ಸೆ ಫಲಿಸದೇ ಸಾವು

  • ಟೈರ್ ಬ್ಲಾಸ್ಟ್ ಆಗಿ ಕಾಂಪೌಂಡ್ ಗೋಡೆಗೆ ಖಾಸಗಿ ಬಸ್ ಡಿಕ್ಕಿ – 10 ಮಂದಿಗೆ ಗಂಭೀರ ಗಾಯ

    ಟೈರ್ ಬ್ಲಾಸ್ಟ್ ಆಗಿ ಕಾಂಪೌಂಡ್ ಗೋಡೆಗೆ ಖಾಸಗಿ ಬಸ್ ಡಿಕ್ಕಿ – 10 ಮಂದಿಗೆ ಗಂಭೀರ ಗಾಯ

    ಆನೇಕಲ್: ಟೈರ್ ಬ್ಲಾಸ್ಟ್ (Tyre Blast) ಆದ ಪರಿಣಾಮ ನಿಯಂತ್ರಣ ತಪ್ಪಿ ಖಾಸಗಿ ಕಂಪನಿಯ ಕಾಂಪೌಂಡ್ ಗೋಡೆಗೆ ಖಾಸಗಿ ಬಸ್ (Private Bus) ಡಿಕ್ಕಿಯಾಗಿ 10 ಮಂದಿ ಗಂಭೀರ ಗಾಯಗೊಂಡ ಘಟನೆ ತಮಿಳುನಾಡಿನ (Tamil Nadu) ಹೊಸೂರಿನ (Hosur) ದರ್ಗಾ ಎಂಬಲ್ಲಿ ನಡೆದಿದೆ.

    ಬೆಂಗಳೂರು-ಹೊಸೂರು ಹೆದ್ದಾರಿಯ ಹೊಸೂರಿನಲ್ಲಿ ಚಲಿಸುತ್ತಿದ್ದ ಬಸ್ಸಿನ ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್ – ಜಾಮೀನಿನ ಮೇಲೆ ಹೊರಗಿರುವ 5 ಆರೋಪಿಗಳಿಗೂ ಶುರುವಾದ ಸಂಕಷ್ಟ

    ಘಟನೆ ಸಂಭವಿಸಿದ ವೇಳೆ ಬಸ್ಸಿನಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಈ ಪೈಕಿ 10 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಪ್ಕಾಟ್ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕ್ಷೇತ್ರಕ್ಕೆ ಅವಮಾನ – ಯೂಟ್ಯೂಬರ್‌ ಸಮೀರ್‌ ನಾಪತ್ತೆ

  • KIADB ಭೂಸ್ವಾಧೀನ ವಿರೋಧಿಸಿ ಆನೇಕಲ್‌ನಲ್ಲಿ ರೈತರಿಂದ ಬೃಹತ್ ಪ್ರತಿಭಟನೆ

    KIADB ಭೂಸ್ವಾಧೀನ ವಿರೋಧಿಸಿ ಆನೇಕಲ್‌ನಲ್ಲಿ ರೈತರಿಂದ ಬೃಹತ್ ಪ್ರತಿಭಟನೆ

    ಆನೇಕಲ್: ಆನೇಕಲ್ ಸುತ್ತಮುತ್ತಲು ಹಲವು ಕೈಗಾರಿಕಾ ಪ್ರದೇಶಗಳಿದ್ದರೂ, ಇದೀಗ ಮತ್ತೊಮ್ಮೆ ಕೈಗಾರಿಕೆಗಳಿಗಾಗಿ 2,000 ಎಕರೆ ಭೂಮಿ ಸ್ವಾಧೀನಕ್ಕೆ ನೋಟಿಫಿಕೇಶನ್ ಹೊರಡಿಸಿರುವುದನ್ನ ವಿರೋಧಿಸಿ ಆನೇಕಲ್‌ನಲ್ಲಿ ರೈತರು ಬೃಹತ್‌ ಪ್ರತಿಭಟನೆ ನಡೆಸಿದರು.

    KIADB ಭೂ ಸ್ವಾಧೀನದ ವಿರುದ್ಧ ಸಿಡಿದೆದ್ದಿರುವ ರೈತರು, ನಮ್ಮ ಭೂಮಿ ನಮ್ಮ ಹಕ್ಕು ಎಂದು ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರ ಹಾಗೂ KIADB ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಈಗಾಗಲೇ ಐದಕ್ಕೂ ಹೆಚ್ಚು ಕೈಗಾರಿಕಾ ಪ್ರದೇಶಗಳಿದ್ದರೂ, ಇದೀಗ ಸ್ವೀಪ್ಟ್ ಸಿಟಿ ಹೆಸರಿನಲ್ಲಿ ಟೆಕ್ ಪಾರ್ಕ್ ನಿರ್ಮಾಣಕ್ಕಾಗಿ ಮೂರು ಹಂತಗಳಲ್ಲಿ 2000 ಎಕರೆ ಜಮೀನುಗಳಿಗೆ ನೋಟಿಸ್ ಜಾರಿ ಮಾಡಿರುವುದಕ್ಕೆ ರೊಚ್ಚಿಗೆದ್ದ ಅನ್ನದಾತ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

    ಒಂದು ಕಾಲದಲ್ಲಿ ಆನೇಕಲ್ ತಾಲೂಕು ರಾಜ್ಯದಲ್ಲೇ ಅತಿ ಹೆಚ್ಚು ರಾಗಿ ಬೆಳೆಯುವ ಕಣಜವಾಗಿತ್ತು. ಅದರೆ ಈಗ ಇದೊಂದು ಕಾಂಕ್ರಿಟ್ ಕಾಡಾಗಿದೆ. KHB ವಸತಿ ಬಡಾವಣೆಗಳ ಹೆಸರಿನಲ್ಲಿ ಸಾವಿರಾರು ಎಕರೆ ಸ್ವಾಧೀನ‌ಪಡಿಸಿಕೊಂಡಿದ್ದರೂ ಅಳಿದುಳಿದ ತುಂಡು ಭೂಮಿಗಳನ್ನ ಸ್ವಾಧೀನಕ್ಕೆ ಮುಂದಾಗಿರುವುದಕ್ಕೆ ಮಣ್ಣಿನ ಮಗ ಸಿಡಿದೆದ್ದು, ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಮತ್ತು ರೈತರ ನಡುವೆ ಜಟಾಪಟಿ ನಡೆಯಿತು. ಸರ್ಕಾರದ ಭೂಸ್ವಾಧೀನ ನಡೆಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

  • ಬ್ರೇಕ್ ಫೇಲ್ ಆಗಿ ರಸ್ತೆಬದಿ ಕಂದಕಕ್ಕೆ ನುಗ್ಗಿದ ಬಿಎಂಟಿಸಿ ಬಸ್

    ಬ್ರೇಕ್ ಫೇಲ್ ಆಗಿ ರಸ್ತೆಬದಿ ಕಂದಕಕ್ಕೆ ನುಗ್ಗಿದ ಬಿಎಂಟಿಸಿ ಬಸ್

    ಆನೇಕಲ್: ಬ್ರೇಕ್ ಫೇಲ್ (Brake Failure) ಆಗಿ ರಸೆಲ್ಬದಿಯ ಕಂದಕಕ್ಕೆ ಬಿಎಂಟಿಸಿ (BMTC) ಬಸ್ ನುಗ್ಗಿದ ಘಟನೆ ಬೆಂಗಳೂರು ಹೊರವಲಯ ಜಿಗಣಿ (Jigani) ಸಮೀಪದ ಹರಪ್ಪನಹಳ್ಳಿ ಬಳಿ ನಡೆದಿದೆ.

    ಪ್ರಯಾಣಿಕರಿದ್ದ ಬಸ್ ಚಲಿಸುತ್ತಿರುವಾಗಲೇ ಏಕಾಏಕಿ ಬ್ರೇಕ್ ಫೇಲ್ ಆಗಿದೆ. ಬ್ರೇಕ್ ಫೇಲ್ ಆದ ಪರಿಣಾಮ ಬಸ್ ನಿಯಂತ್ರಣಕ್ಕೆ ಸಿಗದೆ ರಸ್ತೆ ಬದಿಯ ಕಂದಕಕ್ಕೆ ನುಗ್ಗಿದೆ. ಘಟನೆಯಲ್ಲಿ ಪ್ರಯಾಣಿಕರು ಸೇಫ್ ಆಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿ ಶವ ಪತ್ತೆ – ಪತಿ ವಿರುದ್ಧ ಕೊಲೆ ಆರೋಪ

    ಜಿಗಣಿ ಡಿಪೋಗೆ ಸೇರಿದ ಬಿಎಂಟಿಸಿ ಬಸ್ ಇದಾಗಿದ್ದು, ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: 7 ದಿನಗಳಲ್ಲಿ ಅಫಿಡವಿಟ್‌ ಸಲ್ಲಿಸಿ ಇಲ್ಲವೇ ದೇಶದ ಕ್ಷಮೆ ಕೇಳಿ: ರಾಹುಲ್‌ಗೆ ಚುನಾವಣಾ ಆಯೋಗ ಡೆಡ್‌ಲೈನ್‌

  • ಸಂಸಾರದಲ್ಲಿ ಹುಳಿ ಹಿಂಡಿದ ಬ್ಯೂಟಿ ಪಾರ್ಲರ್ ಆಂಟಿ – ಗೃಹಿಣಿ ಅನುಮಾನಾಸ್ಪದ ಸಾವು; ಕೊಲೆ ಆರೋಪ

    ಸಂಸಾರದಲ್ಲಿ ಹುಳಿ ಹಿಂಡಿದ ಬ್ಯೂಟಿ ಪಾರ್ಲರ್ ಆಂಟಿ – ಗೃಹಿಣಿ ಅನುಮಾನಾಸ್ಪದ ಸಾವು; ಕೊಲೆ ಆರೋಪ

    – ಪತಿಯೇ ಕ್ರಿಮಿನಾಶಕ ಕುಡಿಸಿ ಕೊಲೆ ಮಾಡಿರುವ ಆರೋಪ

    ಆನೇಕಲ್: 12 ವರ್ಷಗಳ ಹಿಂದೆ ಗುರುಹಿರಿಯರ ಸಮ್ಮುಖದಲ್ಲಿ ಆ ಜೋಡಿ ಮದ್ವೆಯಾಗಿತ್ತು (Marriage). ಮುದ್ದಾದ ಇಬ್ಬರು ಗಂಡು ಮಕ್ಕಳಿದ್ದರು. ಸಂಸಾರ ಸುಃಖವಾಗಿತ್ತು ಅನ್ನುವಾಗಲೇ ದುರಂತ ನಡೆದುಬಿಟ್ಟಿದೆ. ಅದೊಂದು ವಿಚಾರ ಆ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿ, ಒಬ್ಬರ ಸಾವಿಗೂ ಕಾರಣವಾಗಿದೆ.

    ದುರಂತದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿ ದೀಪು, ಹಲ್ಲೆ ಮಾಡಿದ ಪತಿ ಉದಯ್‌. ಮೂಲತಃ ಪಿರಿಯಾಪಟ್ಟಣದ (Piriyapatna) ನಿವಾಸಿಯಾದ ದೀಪು 12 ವರ್ಷಗಳ ಹಿಂದೆ ಗುರು ಹಿರಿಯರ ಸಮ್ಮುಖದಲ್ಲಿ ಉದಯ್‌ ಎಂಬಾತನನ್ನ ವಿವಾಹವಾಗಿದ್ದಳು. ದಂಪತಿಗೆ ಮುದ್ದಾದ ಇಬ್ಬರು ಗಂಡು ಮಕ್ಕಳಿದ್ದರು. ಸಂಸಾರದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದ್ರೆ ಇತ್ತೀಚೆಗೆ ಉದಯ್-ದೀಪಾ ದಂಪತಿ ನಡುವೆ ಬ್ಯೂಟಿ ಪಾರ್ಲರ್ ಆಂಟಿ ಎಂಟ್ರಿ ಕೊಟ್ಟಿದ್ದು, ಸಂಸಾರಕ್ಕೆ ಹುಳಿ ಹಿಂಡಿತ್ತು. ಇದನ್ನೂ ಓದಿ: Ramanagara | ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ – ಇಬ್ಬರ ಮೇಲೆ ಪ್ರಕರಣ ದಾಖಲು

    ಚಾಮುಂಡಿಬೆಟ್ಟದಲ್ಲಿ ಮಾತುಕತೆ ನಡೆದು ಗಂಡ ಉದಯ್ ಬ್ಯೂಟಿ ಪಾರ್ಲರ್ ಆಂಟಿಗೆ (Beauty Parlour Aunty) ಕಟ್ಟಿದ ತಾಳಿ ತೆಗೆಸಿದ್ರು. ಆದರೂ ಸಂಸಾರದ ತಾಳ ಮೇಳ ಸರಿಯಾಗಲಿಲ್ಲ. ನಿತ್ಯ ಮನೆಯಲ್ಲಿ ಆಂಟಿ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳ ಹೊಡೆದಾಟ ಕಾಮನ್ ಆಗಿತ್ತು. ಇದೇ ತಿಂಗಳು 6ನೇ ತಾರೀಖು ಆಂಟಿ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಗಂಡ ಉದಯ್ ಹಲ್ಲೆ ನಡೆಸಿ ನೀನು ಎಲ್ಲಾದರೂ ಹೋಗಿ ಸಾಯಿ ಎಂದು ಹೊಡೆದಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ಪತ್ನಿ ದೀಪಾ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ಚಿಕಿತ್ಸೆ ಫಲಕಾರಿಯಾಗದೇ 9ನೇ ತಾರೀಖು ನಗರದ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಗಂಡು ಹುಟ್ಟಲಿಲ್ಲ ಅಂತ ಬೇಸರಗೊಂಡು ಹೆಣ್ಣುಮಗಳಿಗೆ ವಿಷವಿಕ್ಕಿ ಕೊಂದ ಸೇನಾ ಸಿಬ್ಬಂದಿ

    ಇತ್ತ ದೀಪಾಳ ಪೋಷಕರು ಕ್ರಿಮಿ ನಾಶಕ ಕುಡಿಸಿ ಮಗಳನ್ನ ಉದಯ್ ಕೊಂದಿರುವುದಾಗಿ ಆರೋಪಿಸಿದ್ದಾತೆ. ಮಹಿಳೆಯೊಬ್ಬಳ ಅಕ್ರಮ ಸಂಬಂಧ ವಿಚಾರಕ್ಕೆ ಪದೇ ಪದೇ ಹಲ್ಲೆ ನಡೆಸುತ್ತಿದ್ದ ಉದಯ್‌. ಕಿವಿ ಓಲೆ ಕೂಡ ಹಲ್ಲೆ ವೇಳೆ ಮುರಿದು ಹೋಗಿತ್ತು. ಬದುಕಲು ಸಾಧ್ಯವಿಲ್ಲ ಎಂದಾಗ ಬುದ್ಧಿ ಮಾತು ಹೇಳಿದ್ದೆವು. ಆದರೂ ಮನೆಯ ವಿಚಾರ ನಿಮ್ಮ ಕುಟುಂಬದವರಿಗೆ ತಿಳಿಸುತ್ತಿಯಾ ಎಂದು ಹಲ್ಲೆ ನಡೆಸಿದ್ದಾನೆ. ಹಣಕ್ಕಾಗಿಯು ಸಾಕಷ್ಟು ಪೀಡಿಸಿದ್ದಾನೆ. ಕೊನೆಗೆ ಕ್ರಿಮಿನಾಶಕ ಕುಡಿದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ಕೊನೆ ಕ್ಷಣದಲ್ಲಿ ನಮಗೆ ತಿಳಿಸಿದ್ರು ಮಗಳ ಗಂಡ ಉದಯ್ ವಿಶ ಕುಡಿಸಿ ಕೊಂದಿರುವ ಸಾಧ್ಯತೆ ಇದೆ. ಪೊಲೀಸರು ನ್ಯಾಯ ಕೊಡಿಸಬೇಕು ಎಂದು ಮೃತ ದೀಪಾ ಕುಟುಂಬದವರು ಆಗ್ರಹಿಸಿದ್ದಾರೆ.

    ಸದ್ಯ ಮೃತ ದೀಪಾ ತಾಯಿ ಸುಗುಣಮ್ಮ ದೂರು ಆಧರಿಸಿ ಆತ್ಮಹತ್ಯೆ ಪ್ರಚೋದನೆ ಸೇರಿದಂತೆ ಜಾಮೀಜು ರಹಿತ ಸೆಕ್ಷನ್ ಅಡಿಯಲ್ಲಿ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ರು. ಆರೋಪಿ ಉದಯ್‌ನನ್ನ ವಶಕ್ಕೆ ಪಡೆದು ಬಳಿಕ ಬಿಟ್ಟು ಕಳುಹಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ನಾಗ್ಪುರ | ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಮೃತದೇಹವನ್ನ ಬೈಕ್‌ನಲ್ಲೇ ಸಾಗಿಸಿದ ಪತಿ

  • ಖಾಸಗಿ ಆಸ್ಪತ್ರೆಯ ಉದ್ಘಾಟನೆ ವೇಳೆ 10 ನಿಮಿಷ ಲಿಫ್ಟ್‌ನಲ್ಲಿ ಸಿಲುಕಿದ ರಾಮಲಿಂಗಾ ರೆಡ್ಡಿ

    ಖಾಸಗಿ ಆಸ್ಪತ್ರೆಯ ಉದ್ಘಾಟನೆ ವೇಳೆ 10 ನಿಮಿಷ ಲಿಫ್ಟ್‌ನಲ್ಲಿ ಸಿಲುಕಿದ ರಾಮಲಿಂಗಾ ರೆಡ್ಡಿ

    ಆನೇಕಲ್: ಖಾಸಗಿ ಆಸ್ಪತ್ರೆಯ ಉದ್ಘಾಟನೆ ವೇಳೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) 10 ನಿಮಿಷಗಳ ಕಾಲ ಲಿಫ್ಟ್‌ನಲ್ಲಿ (Lift) ಸಿಲುಕಿದ ಘಟನೆ ರಾಜ್ಯ ಗಡಿಭಾಗ ತಮಿಳುನಾಡಿನ (Tamil Nadu) ಹೊಸೂರಿನಲ್ಲಿ (Hosur) ನಡೆದಿದೆ.

    ಹೊಸೂರಿನ ಖಾಸಗಿ ಆಸ್ಪತ್ರೆಯ ಉದ್ಘಾಟನೆ ವೇಳೆ ಘಟನೆ ನಡೆದಿದೆ. ನೆಲಮಹಡಿಯಿಂದ ಲಿಫ್ಟ್‌ನಲ್ಲಿ ಹೋಗುವ ವೇಳೆ ಸಚಿವ ರಾಮಲಿಂಗಾರೆಡ್ಡಿ, ಹೊಸೂರು ಶಾಸಕ ಪ್ರಕಾಶ್ ಸೇರಿ ಸುಮಾರು ಹತ್ತು ಮಂದಿ ಇದ್ದ ಲಿಫ್ಟ್ ಕೆಟ್ಟು ನಿಂತು ಕೆಲಕಾಲ ಪರದಾಟ ನಡೆಸಿದರು. ಸುಮಾರು 10 ನಿಮಿಷಗಳ ಕಾಲ ಸಚಿವರು ಹಾಗೂ ಶಾಸಕರು ಲಿಫ್ಟ್‌ನಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: ಟರ್ಕಿಯಲ್ಲಿ 6.1 ತೀವ್ರತೆಯ ಭೂಕಂಪ – ಓರ್ವ ಸಾವು, 29 ಮಂದಿಗೆ ಗಾಯ

    ಘಟನೆಯಿಂದ ಕೆಲಹೊತ್ತು ಆಸ್ಪತ್ರೆಯ ಆವರಣ ಗೊಂದಲಕ್ಕೀಡಾಗಿತ್ತು. ಬಳಿಕ ಲಿಫ್ಟ್ ಆಪರೇಟರ್ ಸಹಾಯದಿಂದ ಡೋರ್ ಓಪನ್ ಮಾಡಲಾಯಿತು. ತದನಂತರ ರಾಮಲಿಂಗಾ ರೆಡ್ಡಿ ಆಸ್ಪತ್ರೆ ಉದ್ಘಾಟಿಸಿ ಅಲ್ಲಿಂದ ತೆರಳಿದ್ದಾರೆ. ಇದನ್ನೂ ಓದಿ: ರಾಯರು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 354 ವರ್ಷ: ಮಂತ್ರಾಲಯದಲ್ಲಿ ಮಧ್ಯಾರಾಧನೆ ಸಂಭ್ರಮ

  • ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿದ ನಟ ಸಂತೋಷ್ ಬಾಲರಾಜ್ ಅಂತ್ಯಕ್ರಿಯೆ

    ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿದ ನಟ ಸಂತೋಷ್ ಬಾಲರಾಜ್ ಅಂತ್ಯಕ್ರಿಯೆ

    ಗಣಪ, ಕರಿಯಾ-2 ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರುಗಳಿಸಿದ್ದ ನಟ ಸಂತೋಷ್ ಬಾಲರಾಜ್ (Santosh Balaraj) ಅವರ ಅಂತ್ಯಕ್ರಿಯೆ ಇಂದು (ಆ.6) ಆನೇಕಲ್‌ನಲ್ಲಿ ನೆರವೇರಿತು.

    ನಟ ಸಂತೋಷ್ ಬಾಲರಾಜ್ ಅವರ ಹುಟ್ಟೂರು ಆನೇಕಲ್ (Anekal) ಪಟ್ಟಣದ ಸಂತವನ ಚಿನ್ನಪ್ಪನವರ ಪುಣ್ಯಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಲಾಗಿತ್ತು. ಫಾದರ್ ಶಾಂತರಾಜು ಥಾಮಸ್ ಅವರು ಪಾರ್ಥಿವ ಶರೀರಕ್ಕೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಂತಿಮ ವಿಧಿ-ವಿಧಾನ ಪೂರ್ಣಗೊಳಿಸಿದರು. ಕ್ರಿಶ್ಚಿಯನ್ ಸಂಪ್ರದಾಯದಂತೆ ತಂದೆಯ ಸಮಾಧಿ ಪಕ್ಕದಲ್ಲಿಯೇ ನಟ ಸಂತೋಷ್ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.ಇದನ್ನೂ ಓದಿ: ಪ್ರಸಾದ್‌ ಯೋಜನೆಯಡಿ ಕೊಲ್ಲೂರು ದೇವಸ್ಥಾನ ಸೇರಿಸಿ: ನಿರ್ಮಲಾ ಸೀತಾರಾಮನ್‌ಗೆ ಬಿ.ವೈ.ರಾಘವೇಂದ್ರ ಮನವಿ

    ಕಳೆದ ತಿಂಗಳು ಜಾಂಡೀಸ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಬಳಿಕ ಸಂತೋಷ್ ಅವರು ತೀವ್ರವಾಗಿ ಅಸ್ವಸ್ಥರಾಗಿದ್ದರು. ಮತ್ತೆ ಆಸ್ಪತ್ರೆಗೆ ದಾಖಲಾಗಿ, ತೀವ್ರ ನಿಗಾ ಘಟಕದಲ್ಲಿದ್ದರು. ಜಾಂಡೀಸ್ ಮೈಗೆಲ್ಲ ಹರಡಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತೋಷ್ ಅವರು ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ (ಆ.5) ನಿಧನರಾದರು.

    ಕರಿಯಾ-2, ಕೆಂಪ, ಗಣಪ, ಬರ್ಕ್ಲಿ ಹಾಗೂ ಸತ್ಯ ಸಿನಿಮಾಗಳಲ್ಲಿ ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿದ್ದರು.ಇದನ್ನೂ ಓದಿ: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಕೊಪ್ಪಳ ಮೂಲದ ಓರ್ವ ವಶಕ್ಕೆ

  • ಮಹಿಳೆಯ ಬರ್ಬರ ಹತ್ಯೆ – ಕೊಲೆ ಬಳಿಕ ಆರೋಪಿಯೂ ನೇಣಿಗೆ ಶರಣು

    ಮಹಿಳೆಯ ಬರ್ಬರ ಹತ್ಯೆ – ಕೊಲೆ ಬಳಿಕ ಆರೋಪಿಯೂ ನೇಣಿಗೆ ಶರಣು

    ಆನೇಕಲ್: ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿದ ಆರೋಪಿಯು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಹೆಬ್ಬಗೋಡಿ ಸಮೀಪದ ತಿರುಪಾಳ್ಯದಲ್ಲಿ (Tirupalya) ನಡೆದಿದೆ.

    ಮಂದಿರ ಮಂಡಲ್ (27) ಕೊಲೆಯಾದ ಮಹಿಳೆ ಹಾಗೂ ಸುಮನ್ ಮಂಡಲ್ (28) ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಪತಿಯ ಸ್ನೇಹಿತನೇ ಮಹಿಳೆ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ಬಿಎಸ್ಸಿ ಪದವೀಧರೆ ನಾಪತ್ತೆ – ಲವ್ ಜಿಹಾದ್ ಆರೋಪ, ಕೇಸ್‌ ದಾಖಲು

    ಕಳೆದ 8 ವರ್ಷದ ಹಿಂದೆ ಬಿಜೋನ್ ಮಂಡಲ್ ಎಂಬಾತನನ್ನು ಮಹಿಳೆ ವಿವಾಹವಾಗಿದ್ದಳು. ದಂಪತಿಗೆ ಆರು ವರ್ಷದ ಗಂಡು ಮಗನಿದ್ದ. ಎರಡು ವರ್ಷಗಳಿಂದ ಪತಿ, ಪತ್ನಿ ಇಬ್ಬರೂ ಬೇರ್ಪಟ್ಟಿದ್ದರು. ಬಳಿಕ ಮಹಿಳೆಯು ತಿರುಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಇದನ್ನೂ ಓದಿ: ಕೊಪ್ಪಳ ಯುವಕನ ಹತ್ಯೆಗೆ ಬಿಗ್ ಟ್ವಿಸ್ಟ್ – ಟ್ರಯಾಂಗಲ್ ಲವ್ ಸ್ಟೋರಿಗೆ ಹೆಣವಾದ್ನಾ?

    ಆರೋಪಿ ಸುಮನ್ ಮಂಡಲ್ ಕೊಲೆಯಾದ ಮಹಿಳೆ ಪತಿಯ ಸ್ನೇಹಿತನಾಗಿದ್ದ. ಒಂದು ವರ್ಷದ ಹಿಂದೆ ಬಿಜೋನ್ ಮಂಡಲ್, ಸುಮನ್ ಮಂಡಲ್ ಕೆಲಸಕ್ಕಾಗಿ ಅಂಡಮಾನ್‌ಗೆ ಹೋಗಿದ್ದರು. ಕಳೆದ 15 ದಿನಗಳ ಹಿಂದೆ ಆರೋಪಿಯು ವಾಪಸ್ ಆಗಿದ್ದ. ಮಂಗಳವಾರ ಸಂಜೆ ಮಹಿಳೆಯ ಮನೆಗೆ ಆರೋಪಿ ಹೋಗಿದ್ದ. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದು, ಆರೋಪಿ ಸುಮನ್ ಮಂಡಲ್ ಮನೆಯಲ್ಲಿದ್ದ ಚಾಕುವಿನಿಂದ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿದ್ದ. ಇದನ್ನೂ ಓದಿ: ಉತ್ತರಕಾಶಿ ಮೇಘಸ್ಫೋಟ | ಕೊಚ್ಚಿ ಹೋದ ಗ್ರಾಮ – ಹಲವು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ

    ಕೊಲೆಯ ಬಳಿಕ ಆತನೂ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇದೀಗ ಪೋಲೀಸರು ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

  • ಬಾಲಕನ ಬರ್ಬರ ಹತ್ಯೆ ಕೇಸ್ – ನಿಶ್ಚಿತ್ ಕೊನೇ ಕ್ಷಣದ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

    ಬಾಲಕನ ಬರ್ಬರ ಹತ್ಯೆ ಕೇಸ್ – ನಿಶ್ಚಿತ್ ಕೊನೇ ಕ್ಷಣದ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

    ಬೆಂಗಳೂರು: ಹುಳಿಮಾವು (Hulimavu) ಬಳಿ ಬಾಲಕನನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧಿಸಿದಂತೆ ಟ್ಯೂಷನ್ ಮುಗಿಸಿ ಮನೆಗೆ ವಾಪಸ್ಸಾಗ್ತಿದ್ದ ಬಾಲಕನ ಕೊನೆಯ ಸಿಸಿಟಿವಿ ದೃಶ್ಯವೊಂದು (CCTV Footage) ಲಭ್ಯವಾಗಿದೆ.

    ಗುರುಮೂರ್ತಿ ಮತ್ತು ಗೋಪಾಲ ಕೃಷ್ಣ ಬಂಧಿತ ಆರೋಪಿಗಳು. ಬುಧವಾರ (ಜು.30) ಸಂಜೆ ಬಾಲಕ ನಿಶ್ಚಿತ್ ಸ್ನೇಹಿತರ ಜೊತೆ ಟ್ಯೂಷನ್ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ದೃಶ್ಯ ಸಿಸಿಟಿವಿಯೊಂದಲ್ಲಿ ಸೆರೆಯಾಗಿದೆ. ಟ್ಯೂಷನ್ ಮುಗಿಸಿಕೊಂಡು ಸ್ನೇಹಿತರ ಜೊತೆ ಹೊರಗಡೆ ಬಂದಿದ್ದ. ಬಳಿಕ ಅಲ್ಲಿಯೇ ಸ್ನೇಹಿತರ ಜೊತೆ ಮಾತಾಡುತ್ತಾ ನಿಂತಿದ್ದ. ಈ ವೇಳೆ ಆರೋಪಿ ಗುರುಮೂರ್ತಿ ಬಾಲಕನನ್ನು ಕರೆದಿದ್ದಾನೆ. ನಿಶ್ಚಿತ್ ಮನೆಯಲ್ಲಿಯೇ ಆತ ಕೆಲಸ ಮಾಡಿ ಪರಿಚಯವಿದ್ದ ಕಾರಣ ಆತ ಸಹಜವಾಗಿಯೇ ಹೋಗಿದ್ದ. ಬಳಿಕ ಆರೋಪಿಗಳು ರಾತ್ರಿ 8 ಗಂಟೆ ಸುಮಾರಿಗೆ ಕೊಲೆ ಮಾಡಿ, ಬಳಿಕ ಮೃತದೇಹ ಸುಟ್ಟು ಹಾಕಿದ್ದರು.ಇದನ್ನೂ ಓದಿ: ಕಿಡ್ನ್ಯಾಪ್‌ & ಮರ್ಡರ್ ಕೇಸ್‌ – ಬಾಲಕನ ಮನೆಯಲ್ಲಿ ಚಾಲಕನಾಗಿದ್ದವನಿಂದಲೇ ಕೃತ್ಯ

    ಏನಿದು ಪ್ರಕರಣ?
    ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಅಚ್ಯುತ್ ಮತ್ತು ಕವಿತಾ ದಂಪತಿಯ ಪುತ್ರ ನಿಶ್ಚಿತ್ (13) ಬುಧವಾರ ಸಂಜೆ ಟ್ಯೂಷನ್‌ಗೆ ಹೋಗಿದ್ದಾಗ ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದರು. ಸಂಜೆ 7:30ಕ್ಕೆ ಟ್ಯೂಷನ್ ಮುಗಿಸಿಕೊಂಡು ಪ್ರತಿನಿತ್ಯ ಮನೆಗೆ ವಾಪಸ್ ಬರುತ್ತಿದ್ದ ಮಗ 8 ಗಂಟೆಯಾದರೂ ವಾಪಸ್ ಬಂದಿರಲಿಲ್ಲ. ಇದರಿಂದ ಆತಂಕಗೊAಡ ಪೋಷಕರು ಟ್ಯೂಷನ್ ಶಿಕ್ಷಕರಿಗೆ ಕರೆ ಮಾಡಿ ವಿಚಾರಿಸಿದ್ದರು. ಆಗ ಟ್ಯೂಷನ್ ಮುಗಿಸಿಕೊಂಡು 7:30ಕ್ಕೆ ಹೋಗಿದ್ದಾಗಿ ಅವರು ಹೇಳಿದ್ದರು.ಇದನ್ನೂ ಓದಿ: ಆನೇಕಲ್ | ಟ್ಯೂಷನ್‌ಗೆ ಹೋಗ್ತಿದ್ದ ಬಾಲಕನ ಕಿಡ್ನ್ಯಾಪ್ ಮಾಡಿ ಬರ್ಬರ ಹತ್ಯೆ

    ಇದರಿಂದ ಗಾಬರಿಗೊಂಡ ಪೋಷಕರು ಮಗನ ಸ್ನೇಹಿತರು ಮತ್ತು ನೆಂಟರಿಗೆ ಕರೆ ಮಾಡಿ ವಿಚಾರಿಸಿದ್ದರು. ಯಾರ ಕಡೆಯಿಂದನೂ ನಿಶ್ಚಿತ್ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಆದರೆ ನಿಶ್ಚಿತ್ ಸೈಕಲ್ ಅರೆಕೆರೆ ಸಮೀಪದ ಫ್ಯಾಮಿಲಿ ಪಾರ್ಕ್ ಬಳಿ ಪತ್ತೆ ಆಗಿತ್ತು. ಇದರಿಂದ ಗಾಬರಿಗೊಂಡ ಪೋಷಕರು ಹುಳಿಮಾವು ಪೊಲೀಸರಿಗೆ ಮಗ ಕಾಣೆ ಆಗಿರುವ ಬಗ್ಗೆ ದೂರು ನೀಡಿದ್ದರು.

    ಮರುದಿನ ನಿಶ್ಚಿತ್‌ನ ತಂದೆಗೆ ಆರೋಪಿಗಳು ಕರೆ ಮಾಡಿ, 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ನಿಶ್ಚಿತ್ ತಂದೆ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಟವರ್ ಲೊಕೇಷನ್ ಟ್ರ‍್ಯಾಕ್ ಮಾಡುವಷ್ಟರಲ್ಲಿ ಬಾಲಕನ ಮೃತದೇಹ ಅರೆಬೆಂದ ಸ್ಥಿತಿಯಲ್ಲಿ ಬನ್ನೇರುಘಟ್ಟ ಬಳಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಕುರಿಗಾಯಿಗಳು ಮೃತ ದೇಹವನ್ನು ನೋಡಿ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದರು.ಇದನ್ನೂ ಓದಿ: ಆನೇಕಲ್ | ಬಾಲಕ ನಿಶ್ಚಿತ್ ಬರ್ಬರ ಹತ್ಯೆ; ಆರೋಪಿಗಳ ಕಾಲಿಗೆ ಗುಂಡೇಟು, ಇಬ್ಬರು ಅರೆಸ್ಟ್

  • ಕಿಡ್ನ್ಯಾಪ್‌ & ಮರ್ಡರ್ ಕೇಸ್‌ –  ಬಾಲಕನ ಮನೆಯಲ್ಲಿ ಚಾಲಕನಾಗಿದ್ದವನಿಂದಲೇ ಕೃತ್ಯ

    ಕಿಡ್ನ್ಯಾಪ್‌ & ಮರ್ಡರ್ ಕೇಸ್‌ – ಬಾಲಕನ ಮನೆಯಲ್ಲಿ ಚಾಲಕನಾಗಿದ್ದವನಿಂದಲೇ ಕೃತ್ಯ

    ಬೆಂಗಳೂರು: ಹುಳಿಮಾವು (Hulimavu) ಬಳಿ ಬಾಲಕನನ್ನು ಕಿಡ್ನ್ಯಾಪ್‌ ಮಾಡಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು (Police) ಗುಂಡೇಟು ನೀಡಿದ್ದಾರೆ. ಗುಂಡೇಟು ತಿಂದ ಆರೋಪಿಗಳಲ್ಲಿ ಓರ್ವ, ಬಾಲಕನ ಮನೆಯಲ್ಲಿ ಹಿಂದೆ ಚಾಲಕನಾಗಿ ಕೆಲಸ ಮಾಡಿದ್ದ. ಇದೇ ಸಲುಗೆಯಿಂದ ಸುಲಭವಾಗಿ ಬಾಲಕನನ್ನು ಆರೋಪಿ ಅಪಹರಿಸಿದ್ದ.

    ಪ್ರಕರಣದ ಆರೋಪಿಗಳಾದ ಗುರುಮೂರ್ತಿ ಮತ್ತು ಗೋಪಾಲನನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ, ಇಬ್ಬರು ಸೇರಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಆನೇಕಲ್ | ಟ್ಯೂಷನ್‌ಗೆ ಹೋಗ್ತಿದ್ದ ಬಾಲಕನ ಕಿಡ್ನ್ಯಾಪ್ ಮಾಡಿ ಬರ್ಬರ ಹತ್ಯೆ

    ಆರೋಪಿ ಗುರುಮೂರ್ತಿ ಈ‌ ಹಿಂದೆ ನಿಶ್ಚಿತ್ ಮನೆಯಲ್ಲಿ ಡೈವರ್ ಆಗಿ ಕೆಲಸ ಮಾಡಿದ್ದ. ಇನ್ನೂ ಅಪಹರಣಕ್ಕೆ ಸಾಥ್ ನೀಡಿದ್ದ ಗೋಪಾಲ, ಕದ್ದಿದ್ದ ಮೊಬೈಲ್‌ನಿಂದ ನಿಶ್ವಿತ್ ತಂದೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ತಿಳಿದುಬಂದಿದೆ.

    ಏನಿದು ಪ್ರಕರಣ?
    ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಅಚ್ಯುತ್ ಮತ್ತು ಕವಿತಾ ದಂಪತಿಯ ಪುತ್ರ ನಿಶ್ಚಿತ್ (13) ಬುಧವಾರ ಸಂಜೆ ಟ್ಯೂಷನ್‌ಗೆ ಹೋಗಿದ್ದಾಗ ಆರೋಪಿಗಳು ಕಿಡ್ನ್ಯಾಪ್‌ ಮಾಡಿದ್ದರು. ಸಂಜೆ 7:30ಕ್ಕೆ ಟ್ಯೂಷನ್‌ ಮುಗಿಸಿಕೊಂಡು ಪ್ರತಿನಿತ್ಯ ಮನೆಗೆ ವಾಪಸ್ ಬರುತ್ತಿದ್ದ ಮಗ 8 ಗಂಟೆಯಾದರೂ ವಾಪಸ್ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಟ್ಯೂಷನ್ ಶಿಕ್ಷಕರಿಗೆ ಕರೆ ಮಾಡಿ ವಿಚಾರಿಸಿದ್ದರು. ಆಗ ಟ್ಯೂಷನ್ ಮುಗಿಸಿಕೊಂಡು 7:30ಕ್ಕೆ ಹೋಗಿದ್ದಾಗಿ ಅವರು ಹೇಳಿದ್ದರು.

    ಇದರಿಂದ ಗಾಬರಿಗೊಂಡ ಪೋಷಕರು ಮಗನ ಸ್ನೇಹಿತರು ಮತ್ತು ನೆಂಟರಿಗೆ ಕರೆ ಮಾಡಿ ವಿಚಾರಿಸಿದ್ದರು. ಯಾರ ಕಡೆಯಿಂದನೂ ನಿಶ್ಚಿತ್ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಆದರೆ ನಿಶ್ಚಿತ್ ಸೈಕಲ್ ಅರೆಕೆರೆ ಸಮೀಪದ ಫ್ಯಾಮಿಲಿ ಪಾರ್ಕ್ ಬಳಿ ಪತ್ತೆ ಆಗಿತ್ತು. ಇದರಿಂದ ಗಾಬರಿಗೊಂಡ ಪೋಷಕರು ಹುಳಿಮಾವು ಪೊಲೀಸರಿಗೆ ಮಗ ಕಾಣೆ ಆಗಿರುವ ಬಗ್ಗೆ ದೂರು ನೀಡಿದ್ದರು.

    ಮರುದಿನ ನಿಶ್ಚಿತ್‌ನ ತಂದೆಗೆ ಆರೋಪಿಗಳು ಕರೆ ಮಾಡಿ, 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ನಿಶ್ಚಿತ್ ತಂದೆ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಟವರ್ ಲೊಕೇಷನ್ ಟ್ರ್ಯಾಕ್ ಮಾಡುವಷ್ಟರಲ್ಲಿ ಬಾಲಕನ ಮೃತದೇಹ ಅರೆಬೆಂದ ಸ್ಥಿತಿಯಲ್ಲಿ ಬನ್ನೇರುಘಟ್ಟ (Bannerugatta) ಬಳಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಕುರಿಗಾಯಿಗಳು ಮೃತ ದೇಹವನ್ನು ನೋಡಿ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ | ತುಂಬಿದ ಬಸ್‌ಗಳಲ್ಲಿ ಕೈಚಳಕ ತೋರಿಸ್ತಿದ್ದ ಕಳ್ಳಿಯರ ಗ್ಯಾಂಗ್‌‌ ಲಾಕ್‌