Tag: anekal

  • ಪತಿ ಬಿಟ್ಟಾಕೆ ಪ್ರಿಯಕರನೊಂದಿಗೂ ಜಗಳ ಮಾಡಿಕೊಂಡು ಕೊಲೆಯಾದ್ಲು!

    ಪತಿ ಬಿಟ್ಟಾಕೆ ಪ್ರಿಯಕರನೊಂದಿಗೂ ಜಗಳ ಮಾಡಿಕೊಂಡು ಕೊಲೆಯಾದ್ಲು!

    ಆನೇಕಲ್: ಪತಿಯಿಂದ ದೂರವಾಗಿದ್ದ ಮಹಿಳೆ ಆಸ್ತಿ ವಿಚಾರಕ್ಕೆ ಪ್ರಿಯಕರನೊಂದಿಗೆ ಜಗಳ ಮಾಡಿಕೊಂಡು ಆತನಿಂದಲೇ ಕೊಲೆಯಾಗಿರುವ ಘಟನೆ ಬೆಂಗಳೂರು ಹೊಸೂರು ಮುಖ್ಯರಸ್ತೆ ಹೊಸರೋಡ್ ಬಳಿ ನಡೆದಿದೆ.

    ಅರ್ಚನಾ ರೆಡ್ಡಿ ಕೊಲೆಯಾದ ಮಹಿಳೆ. ಪ್ರಿಯಕರ ನವೀನ್ ಕುಮಾರ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಇವರು ಆನೇಕಲ್ ತಾಲೂಕಿನ ಜಿಗಣಿ ನಿವಾಸಿಯಾಗಿದ್ದರು.

    ಅರ್ಚನಾ ರೆಡ್ಡಿ 5 ವರ್ಷಗಳ ಹಿಂದೆ ಪತಿಯಿಂದ ದೂರವಾಗಿದ್ದು, ನಂತರದ ದಿನಗಳಲ್ಲಿ ಪ್ರಿಯಕರ ನವೀನ್ ಕುಮಾರ್ ಜೊತೆ ಇದ್ದಳು. ಇತ್ತೀಚೆಗೆ ಚನ್ನಪಟ್ಟಣ ಬಳಿಯ ಆಸ್ತಿಯೊಂದರ ಸಲುವಾಗಿ ಇಬ್ಬರ ನಡುವೆ ಜಗಳವಾಗಿದೆ. ಅಂದಿನಿಂದ ಅರ್ಚನಾ ರೆಡ್ಡಿ ಮೊದಲ ಪತಿಯ ಮಗನೊಂದಿಗೆ ಬೆಳ್ಳಂದೂರಿನಲ್ಲಿ ವಾಸವಿದ್ದಳು. ಇದನ್ನೂ ಓದಿ: ಚರಂಡಿ ಸ್ವಚ್ಛಗೊಳಿಸುವ ವಿಚಾರಕ್ಕೆ ಜಗಳ – ದೆಹಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮಗನ ಹತ್ಯೆ

    ನಿನ್ನೆ ಜಿಗಣಿ ಪುರಸಭೆಯ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಚನಾ ಜಿಗಣಿಗೆ ತೆರಳಿರುವ ಬಗ್ಗೆ ಮಾಹಿತಿ ಪಡೆದಿದ್ದ ನವೀನ್ ಕುಮಾರ್, ತನ್ನ ಸಹಚರರೊಂದಿಗೆ ಹೊಸರೋಡ್ ಬಳಿ ಕಾದು ಕುಳಿತಿದ್ದರು. ರಾತ್ರಿ ಅರ್ಚನಾ, ಮಗ ಹಾಗೂ ಮತ್ತಿಬ್ಬರು ಯುವಕರೊಂದಿಗೆ ಕಾರಿನಲ್ಲಿ ಬರುವ ವೇಳೆ ನವೀನ್ ಕುಮಾರ್ ಹಾಗೂ ಸಹಚರರು ಹಾಕಿ ಸ್ಟಿಕ್ ಹಾಗೂ ಲಾಂಗ್‌ನಿಂದ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ನಿಂದಿಸಿದ್ದಕ್ಕೆ ಯುವಕನ ಅಪಹರಿಸಿ ಕೊಂದರು!

    ಈ ವೇಳೆ ಕಾರು ಚಾಲಕ ಅರ್ಚನಾ ಮಗ ಇನ್ನುಳಿದವರು ಪರಾರಿಯಾಗಿದ್ದು, ನವೀನ್ ಕುಮಾರ್ ಹಾಗೂ ಸಹಚರರು ಅರ್ಚನಾಳನ್ನು ನದುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಎಲೆಕ್ಟ್ರಾನ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನವೀನ್ ಹಾಗೂ ಸಹಚರರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • ನೀರಿನ ವಿಚಾರಕ್ಕೆ ಮನೆಗೆ ನುಗ್ಗಿ ದಾಂಧಲೆ ನಡೆಸಿದ ರೌಡಿಗಳು

    ನೀರಿನ ವಿಚಾರಕ್ಕೆ ಮನೆಗೆ ನುಗ್ಗಿ ದಾಂಧಲೆ ನಡೆಸಿದ ರೌಡಿಗಳು

    ಆನೇಕಲ್: ನೀರು ಹಿಡಿಯುವ ವಿಚಾರಕ್ಕೆ ಮನೆಗೆ ನುಗ್ಗಿ ರೌಡಿಗಳು ದಾಂಧಲೆ ನಡೆಸಿರುವ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಪತ್ರಿಕಾ ಏಜೆಂಟ್ ಆಗಿರುವ ರಾಜಪ್ಪ ಹಾಗೂ ಅವರ ಮನೆಯವರು ಹಲ್ಲೆಗೊಳಗಾದವರು. ಆನೇಕಲ್ ತಾಲೂಕಿನ ಕಾಳನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ನೀರು ಹಿಡಿಯುವ ವಿಚಾರಕ್ಕೆ ಎರಡು ಕುಟುಂಬದ ನಡುವೆ ಗಲಾಟೆಯಾಗಿದೆ. ಇದರಿಂದ ಕೋಪಗೊಂಡ ರೌಡಿಗಳು ಪೇಪರ್ ಏಜೆಂಟ್ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

    ಮೇರಿ ಹಾಗೂ ಅರುಣ್, ಬೇಬಿ ಎಂಬುವವರು ಗಲಾಟೆ ನಡೆಸಿದ್ದಾರೆ. ಮನೆಯ ವಸ್ತುಗಳನ್ನು ಬಿಸಾಡಿ, ಮಹಿಳೆಯರ ಮೇಲೂ ದರ್ಪ ತೋರಿದ್ದಾರೆ. ಗಲಾಟೆ ಬಳಿಕ ಬೇಬಿ, ಯುವಕರನ್ನು ಕರೆಸಿಕೊಂಡಿದ್ದಾರೆ. ಹಲ್ಲೆ ಮಾಡಿದ ಬಳಿಕ ಮನೆ ಧ್ವಂಸ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ರೌಡಿಗಳು ದಾಂಧಲೆ ನಡೆಸಿದ್ದರು. ಇದನ್ನೂ ಓದಿ: ಅನಾರೋಗ್ಯದಿಂದ ಜಾಮೀನಿನ ಮೇಲೆ ಹೊರಬಂದಿರೋ ಪ್ರಜ್ಞಾ ಸಿಂಗ್‌ರಿಂದ ಕ್ರಿಕೆಟ್, ಡ್ಯಾನ್ಸ್ – ವೀಡಿಯೋ ವೈರಲ್

    ಪ್ರಕರಣ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರಿಂದ ದೂರು ದಾಖಲಾಗಿದೆ. ಇದನ್ನೂ ಓದಿ: ಬಿಜೆಪಿಯಿಂದ ದೆಹಲಿಯಲ್ಲಿ ಮೂಲಸೌಕರ್ಯ ಸುಧಾರಿಸಿದೆ: ಅಮಿತ್ ಶಾ

  • ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಬಿದ್ದು ಮಗು ಸಾವು

    ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಬಿದ್ದು ಮಗು ಸಾವು

    ಆನೇಕಲ್:  ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಮಗು ಬಿದ್ದು ಸಾವನ್ನಪ್ಪಿರುವ ಘಟನೆ ಆನೆಕಲ್‌ನಲ್ಲಿ ನಡೆದಿದೆ.

    ದಿವ್ಯಾಂಶ್ ರೆಡ್ಡಿ (2) ಮೃತಪಟ್ಟ ಬಾಲಕ. ಎಲೆಕ್ಟ್ರಾನಿಕ್ ಸಿಟಿ ನೀಲಾದ್ರಿ ಇನ್ವೆಸ್ಟ್ ಮೆಂಟ್ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಮಗು ಸಾವನ್ನಪ್ಪಿದೆ.

    ಬಾಡಿಗೆ ಮನೆ ವಿಚಾರಿಸಲು ದಿವ್ಯಾಂಶ್ ಅಜ್ಜಿಯೊಂದಿಗೆ ತೆರಳಿದ್ದನು. ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಲ್ಲಿ ಅಜ್ಜಿ ಮನೆ ನೋಡುತ್ತಿದ್ದರೆ, ದಿವ್ಯಾಂಶ್ ಬಾಲ್ಕನಿಯಲ್ಲಿ ಆಟವಾಡುತ್ತಿದ್ದನು. ಆ ವೇಳೆ ಬಾಲ್ಕನಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ದಿವ್ಯಾಂಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: 6 ಲಕ್ಷ ರೂ. ಬಹುಮಾನ ಘೋಷಣೆಯಾಗಿದ್ದ ಇಬ್ಬರು ಮಹಿಳಾ ನಕ್ಸಲರ ಹತ್ಯೆ

    POLICE JEEP

    ಪ್ರಕರಣ ಸಂಬಂಧ  ಅಪಾರ್ಟ್‌ಮೆಂಟ್‌ನ ಮಾಲೀಕನ ವಿರುದ್ಧ ದೂರು ದಾಖಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಕನ್ನಡಿಗ ಕೆ.ಎಲ್ ರಾಹುಲ್ ಟೀಂ ಇಂಡಿಯಾದ ಉಪನಾಯಕ?

  • ನೀಲಗಿರಿ ತೋಪಿನಲ್ಲಿ ಯುವತಿ ಮೇಲೆ ರೇಪ್ – 10 ದಿನವಾದ್ರೂ ನ್ಯಾಯ ಸಿಕ್ಕಿಲ್ಲವೆಂದು ಪೋಷಕರು ಕಣ್ಣೀರು

    ನೀಲಗಿರಿ ತೋಪಿನಲ್ಲಿ ಯುವತಿ ಮೇಲೆ ರೇಪ್ – 10 ದಿನವಾದ್ರೂ ನ್ಯಾಯ ಸಿಕ್ಕಿಲ್ಲವೆಂದು ಪೋಷಕರು ಕಣ್ಣೀರು

    ಆನೇಕಲ್: ಡ್ರಾಪ್ ಕೊಡುವುದಾಗಿ ಹೇಳಿ ಬೈಕಿನಲ್ಲಿ ಕರೆದೊಯ್ದು ಇಬ್ಬರು ಅಪರಿಚಿತರು ಯುವತಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹೊರವಲಯದಲ್ಲಿ ನಡೆದಿದೆ.

    ಹೊಸಕೋಟೆ ಬಳಿಯ ನೀಲಗಿರಿ ತೋಪಿನ ಬಳಿ ಕರೆದೊಯ್ದು ದುಷ್ಕೃತ್ಯ ಎಸಗಲಾಗಿದೆ. 38 ವರ್ಷದ ಇನ್ನೂ ಮದುವೆಯಿಲ್ಲದೆ ಯುವತಿಯ ಮೇಲೆ ಅಪರಿಚಿತರು ಪೈಶ್ಯಾಚಿಕ ಕೃತ್ಯ ಮೆರೆದಿದ್ದಾರೆ. ನವೆಂಬರ್ 14 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ 14ರ ಸಂಜೆ ವಾಕಿಂಗ್ ಹೋಗಿ ಮನೆಗೆ ವಾಪಸ್ಸಾಗುತ್ತಿದ್ದ ಸಂತ್ರಸ್ತೆಯನ್ನು ಮನೆ ಬಳಿ ಬಿಡೋದಾಗಿ ನಂಬಿಸಿ ಬೈಕಿನಲ್ಲಿ ಕೂರಿಸಿಕೊಂಡು ಕರೆದೊಯ್ದು ಅತ್ಯಾಚಾರ ಮಾಡಲಾಗಿದೆ.

    ಕೃತ್ಯದ ನಂತರ ಸಂತ್ರಸ್ತೆಯನ್ನ ನೀಲಗಿರಿ ತೂಪಿನಲ್ಲೇ ಬಿಟ್ಟು ಕಾಮುಕರು ಪರಾರಿಯಾಗಿದ್ದಾರೆ. ಸದ್ಯ ಸ್ಥಳೀಯರ ಸಹಾಯದಿಂದ ಸಂತ್ರಸ್ತೆ ಮನೆಗೆ ವಾಪಸ್ ಬಂದಿದ್ದಾರೆ. ಘಟನೆ ನಡೆದ ರಾತ್ರಿ 10 ಗಂಟೆಯಾದರೂ ಮಗಳು ಮನೆಗೆ ಬಾರದ ಕಾರಣ ಮಗಳು ನಾಪತ್ತೆಯಾಗಿರೋ ಬಗ್ಗೆ ಸಂತ್ರಸ್ತೆಯ ತಂದೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮುಂಜಾನೆ ಮೂರು ಗಂಟೆಗೆ ಮಗಳು ಮನೆಗೆ ಬಂದಿದ್ದನ್ನು ಕಂಡು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತೆ ತಂದೆ ಇದೇ 15 ರಂದು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    POLICE JEEP

    ನ.16 ರಂದು ಸಂತ್ರಸ್ತೆಗೆ ಮೆಡಿಕಲ್ ಟೆಸ್ಟ್ ಮಾಡಿಸಿ ಪೊಲೀಸರಿಂದ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗಿ 10 ದಿನ ಕಳೆದರೂ ಕ್ರಮ ಕೈಗೊಂಡಿಲ್ಲ ಅಂತ ಆಕೆಯ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ನ್ಯಾಯಕ್ಕಾಗಿ ನೊಂದ ಪೋಷಕರು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಸ್- ಕೊಡಗಿನಲ್ಲಿ ಬಿಜೆಪಿ, ಕಾಂಗ್ರೆಸ್ ಫೈಟ್

  • ಮನೆಯಲ್ಲಿ ಸಿಲಿಂಡರ್ ಬ್ಲಾಸ್ಟ್ 7 ಕಾರ್ಮಿಕರಿಗೆ ಗಾಯ

    ಮನೆಯಲ್ಲಿ ಸಿಲಿಂಡರ್ ಬ್ಲಾಸ್ಟ್ 7 ಕಾರ್ಮಿಕರಿಗೆ ಗಾಯ

    ಬೆಂಗಳೂರು(ಆನೇಕಲ್): ಕಾರ್ಮಿಕರು ಬೆಳಿಗ್ಗೆ ಉಪಹಾರ ಸೇವಿಸಿ ತಮ್ಮ ಕೆಲಸಕ್ಕೆ ತೆರಳಲು ಸಿದ್ಧತೆ ನಡೆಸುತಿದ್ರು, ಇತ್ತ ಓರ್ವ ಕಾರ್ಮಿಕ ಉಪಹಾರ ತಯಾರಿಸುತ್ತಿದ್ದ ಆಗ ಇದ್ದಕಿದ್ದಂತೆ  ಸಿಲಿಂಡರ್‌ಗೆ ಬೆಂಕಿ ತಗುಲಿ ಬ್ಲಾಸ್ಟ್ ಆಗಿ ಇಡೀ ಮನೆ ಹೊತ್ತಿ ಉರಿದಿದೆ.

    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಈ ಘಟನೆ ನಡೆದಿದೆ. ಜಿಗಣಿ ಪೊಲೀಸ್ ಠಾಣೆ ಹಿಂಬಾಗದಲ್ಲಿರುವ ಮಂಜುನಾಥ್ ರೆಡ್ಡಿ ಮನೆ ಈ ಮನೆಯಲ್ಲಿ ಕಳೆದೆರಡು ವರ್ಷಗಳಿಂದ ಆ ಮನೆಯಲ್ಲಿ ಉತ್ತರ ಭಾರತದ 3 ಮಂದಿ ಬಾಡಿಗೆ ಆಧಾರದಲ್ಲಿ ವಾಸವಿದ್ದರು. ಆದರೆ ನಿನ್ನೆ ಹಬ್ಬ ಅಂತ ಹೇಳಿ ಸಂಬಂಧಿಕರು ಸಹ ಮನೆಗೆ ಬಂದಿದ್ದರು ಇಂದು ಬೆಳಿಗ್ಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಈ ವೇಳೆ ಐದು ಮಂದಿಗೆ ಗಂಭೀರ ಗಾಯವಾಗಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ

    ಗಾಯಾಳುಗಳನ್ನು ಜಗದೀಶ್. ಶಾಂತಿಬೈ, ಪ್ರಕಾಶ್, ಕಾಡು, ಜೈಮುಲ್, ಮಂಜು ಹಾಗೂ ವಲ್ಲಿ ಎಂದು ಗುರಿತಿಸಲಾಗಿದೆ. ಇವರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಮುಂಜಾನೆ ಕೆಲಸಕ್ಕೆ ಹೊರಡಲು ಸಿದ್ಧವಾಗುವ ವೇಳೆ ಘಟನೆ ನಡೆದಿದ್ದರಿಂದ ಪ್ರಣಾಪಯಾದಿಂದ ಪಾರಾಗಿದ್ದಾರೆ ಘಟನೆಗೆ ಕಾರಣ ಏನು ಎಂಬುದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಅಗ್ನಿಶಾಮಕದ ಅಧಿಕಾರಿಗಳಿಂದ ತನಿಖೆ ಕೈಗೊಂಡಿದ್ದಾರೆ ಜೊತೆಗೆ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

  • ಯುವಕನ ಕೊಲೆಗೈದು ಮನೆ ಗೇಟ್ ಮುಂಭಾಗ ಎಸೆದು ಹೋದ್ರು!

    ಯುವಕನ ಕೊಲೆಗೈದು ಮನೆ ಗೇಟ್ ಮುಂಭಾಗ ಎಸೆದು ಹೋದ್ರು!

    ಆನೇಕಲ್: ಯುವಕನನ್ನು ಬೇರೆಡೆ ಕೊಲೆ ಮಾಡಿ ಮನೆ ಗೇಟಿನ ಮುಂಭಾಗ ಎಸೆದು ಹೋಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ದಾಸನಪುರದಲ್ಲಿ ನಡೆದಿದೆ.

    ದಾಸನಪುರ ವೆಂಕಟೇಶಪ್ಪನ ಮಗ ಸತೀಶ್(23) ಕೊಲೆಯಾದವ. ಹೂ ಸಾಗಣೆ ಮಾಡುವ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸತೀಶ್, ಗ್ರಾಮದಲ್ಲಿ ಸಭ್ಯನೆನಿಸಿಕೊಂಡಿದ್ದ. ಆದರೆ ಇದೀಗ ಆತ ಕೊಲೆಯಾಗಿರುವ ದೃಶ್ಯವನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ.

    ಮನೆಯ ಮುಂದಿನ ಗೇಟಿನ ರಸ್ತೆಯಲ್ಲಿ ಬೆಳಗ್ಗೆ ಬಾಯಿಯಲ್ಲಿ ರಕ್ತ ತಲೆಯ ಹಿಂಬದಿ ಗಾಯವಾಗಿರುವ ಸ್ಥಿತಿಯಲ್ಲಿ ಯುವಕನ ಶವ ಕಂಡಿತ್ತು. ಎದುರು ಮನೆಯಾಕೆ ಎಂದಿನಂತೆ ಗೇಟು ತೆರೆದಾಗ ಯಾರೋ ಕುಡಿದು ಬಿದ್ದಿರಬಹುದೆಂದು ಮನೆಯ ಯಜಮಾನನನ್ನು ಎಬ್ಬಿಸಿ ಪರಿಶೀಲಿಸಿದಾಗ ಸತೀಶ್ ಸತ್ತುಬಿದ್ದಿರಬಹುದೆಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

    POLICE JEEP

    ಸ್ಥಳಕ್ಕೆ ಅತ್ತಿಬೆಲೆ ಪೊಲೀಸ್ ಇನ್ಸ್ ಪೆಕ್ಟರ್ ಬೆಂಗಳೂರು ಗ್ರಾಮಾಂತರ ಎಸ್‍ಪಿ ವಂಶಿ ಕೃಷ್ಣ ಭೇಟಿ ನೀಡಿ ಸಂಜೆ ಕೊಲೆಯಾಗಿದೆ ಎಂದು ದೃಢೀಕರಿಸಿದ್ದಾರೆ. ಜೊತೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: ಮಹಾರಾಷ್ಟ್ರದ ಮಾಜಿ ಗೃಹ ಸಚಿವರಿಗೆ 14 ದಿನ ನ್ಯಾಯಾಂಗ ಬಂಧನ

  • ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟ – 7 ಮಂದಿಗೆ ಗಾಯ

    ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟ – 7 ಮಂದಿಗೆ ಗಾಯ

    ಬೆಂಗಳೂರು/ಆನೇಕಲ್: ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು 7 ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿದೆ.

    cylinder-blast

    ಜಿಗಣಿ ಪೊಲೀಸ್ ಠಾಣೆ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ಮಂಜುನಾಥ್ ರೆಡ್ಡಿ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಬಾಡಿಗೆಗೆ ಇದ್ದ ಉತ್ತರ ಭಾರತ ಮೂಲದ ಏಳು ಕಾರ್ಮಿಕರು ಗಾಯಗೊಂಡಿದ್ದಾರೆ.  ಇದನ್ನೂ ಓದಿ: ನಟಿ ಆಥಿಯಾ ಶೆಟ್ಟಿ ಜೊತೆಗಿನ ಡೇಟಿಂಗ್ ಗಾಸಿಪ್‌ಗೆ ಬ್ರೇಕ್ ಹಾಕಿದ ರಾಹುಲ್

    ಬೆಳಿಗ್ಗೆ 8 ಗಂಟೆ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡು, ಮನೆ ಬೆಂಕಿಯಿಂದ ಹೊತ್ತಿ ಉರಿದಿದೆ. ಘಟನೆಯಲ್ಲಿ ಕಾರ್ಮಿಕರಾದ ಜಗದೀಶ್ ಶಾಂತಿಬೈ, ಪ್ರಕಾಶ್, ಕಾಡು, ಜೈಮುಲ್, ಮಂಜು, ವಲ್ಲಿ ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಇದೀಗ ಅವರನ್ನು ಜಿಗಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.  ಇದನ್ನೂ ಓದಿ: ಅಪ್ಪು ಜೊತೆಗಿನ ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಿರುವ ಶಿವಣ್ಣ, ರಾಘಣ್ಣ

     

  • ಮಳೆ ನೀರಿನಿಂದ ಬಡಾವಣೆ ಜಲಾವೃತ

    ಮಳೆ ನೀರಿನಿಂದ ಬಡಾವಣೆ ಜಲಾವೃತ

    ಆನೇಕಲ್: ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಡಾವಣೆಯೊಂದು ಸಂಪೂರ್ಣ ಜಲಾವೃತವಾಗಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ ಕಂಡು ಬಂದಿದೆ.

    ಆನೇಕಲ್ ತಾಲೂಕಿನ ಹಾರಗದ್ದೆ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರೋ ವೀನಸ್ ಕೌಂಟಿ ಬಡಾವಣೆ ಕಳೆದ ಎರಡು ದಿನ ಸುರಿದ ಮಳೆಗೆ ಸಂಪೂರ್ಣ ಜಲಾವೃತವಾಗಿದೆ. ಮಳೆಯ ನೀರಿನ ಜೊತೆಗೆ ಜಿಗಣಿ ಕೈಗಾರಿಕಾ ಪ್ರದೇಶದ ಕೊಳಚೆ ನೀರು ಸೇರಿ ಇಡೀ ಬಡಾವಣೆಯೇ ಗಬ್ಬುನಾರುತ್ತಿದೆ. ಈ ಸಮಸ್ಯೆಗೆ ಬಡಾವಣೆಯ ನಿರ್ಮಿಸಿದವರ ಅವೈಜ್ಞಾನಿಕ ಒಳಚರಂಡಿ ನಿರ್ಮಾಣ ಹಾಗೂ ಬಡಾವಣೆ ಪಕ್ಕದಲ್ಲಿದ್ದ 40 ಅಡಿ ರಾಜಕಾಲುವೆಯನ್ನು 20 ಅಡಿಯಷ್ಟು ಕಿರಿದು ಮಾಡಿರೋದು ಕಾರಣವಾಗಿದೆ. ದಲಿತರ ಬಗ್ಗೆ ಮಾತನಾಡಿದ್ರೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕಾಗುತ್ತೆ: ಮುನಿಸ್ವಾಮಿ

    ಕೇವಲ 2 ದಿನದ ಮಳೆಗೆ ಬಡಾವಣೆಯ ರಸ್ತೆಗಳು ಪಾರ್ಕ್ ಕೊಳಚೆ ನೀರಿನಿಂದ ತುಂಬಿಹೋಗಿದ್ದು ಇದೆ ನೀರಿನಲ್ಲಿ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದ್ದು ರೋಗದ ಭೀತಿ ಇಲ್ಲಿನ ಬಡಾವಣೆ ನಿವಾಸಿಗಳನ್ನು ಕಾಡುತ್ತಿದೆ. ಮಳೆ ನೀರು ಬಡಾವಣೆಗೆ ನುಗ್ಗಿದ್ದರಿಂದ ಬೈಕ್ ಕಾರುಗಳು ನೀರಿನಲ್ಲಿ ಮುಳುಗಿದ್ದು ದುರಸ್ತಿ ಮಾಡಲಾಗದಷ್ಟು ಹಾಳಾಗಿವೆ. ಈ ಸಂಬಂಧ ಬಡಾವಣೆ ನಿವಾಸಿಗಳು ಹಾರಗದ್ದೆ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೆ ಅವರ ಇದು ನಮ್ಮ ಕೆಲಸವಲ್ಲ ಎಂದು ಸ್ಥಳೀಯರು ದೂರಿದ್ದಾರೆ.

  • ಪುನೀತ್ ರಾಜ್‍ಕುಮಾರರಂತೆ ನೇತ್ರ ದಾನ ಮಾಡಲು ನೇಣಿಗೆ ಶರಣಾದ ಅಭಿಮಾನಿ!

    ಪುನೀತ್ ರಾಜ್‍ಕುಮಾರರಂತೆ ನೇತ್ರ ದಾನ ಮಾಡಲು ನೇಣಿಗೆ ಶರಣಾದ ಅಭಿಮಾನಿ!

    ಆನೇಕಲ್: ನಟ ಪುನೀತ್ ರಾಜ್‍ಕುಮಾರ್ ಅವರಂತೆಯೇ ನಿಧನ ನಂತರ ತಾನೂ ನೇತ್ರ ದಾನ ಮಾಡುವುದಕ್ಕಾಗಿ ಅಭಿಮಾನಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಬನ್ನೇರುಘಟ್ಟ ಸಮೀಪದ ಶ್ಯಾನುಬೋಗನಹಳ್ಳಿಯಲ್ಲಿ ನಡೆದಿದೆ.

    ರಾಜೇಂದ್ರ (40) ನೇಣಿಗೆ ಶರಣಾದ ಅಭಿಮಾನಿ. ಪುನೀತ್ ರಾಜಕುಮಾರರಂತೆಯೇ ತನ್ನ ಕಣ್ಣನ್ನು ದಾನ ಮಾಡಿ ಎಂದು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು

    ಭಾನುವಾರ ಸಂಜೆ ಸಾವನ್ನಪ್ಪಿದ ರಾಜೇಂದ್ರನ ಮೃತದೇಹವನ್ನು ಕಂಡ ಸಂಬಂಧಿಗಳು ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ನಟ ಪುನೀತ್ ಸಾವಿನಿಂದ ಕಂಗಾಲಾಗಿದ್ದ ರಾಜೇಂದ್ರ, ಇದೇ ದುಃಖದಲ್ಲಿ ಪುನೀತ್ ಕಣ್ಣು ದಾನ ಮಾಡಿದ್ದನ್ನು ಆದರ್ಶವಾಗಿ ತೆಗೆದುಕೊಂಡು ವಿಷಯವನ್ನು ಮನೆಯವರಿಗೆ ತಿಳಿಸುತ್ತಲೇ ಇದ್ದ. ವರ್ಷದ ಹಿಂದೆ ಮದುವೆಯಾಗಿದ್ದ ರಾಜೇಂದ್ರ ತಮ್ಮ ನೆಚ್ಚಿನ ನಾಯಕನ ಮಾದರಿಯನ್ನು ಜೀವಂತವಾಗಿಡಲು ಜೀವ ಬಿಟ್ಟಿದ್ದಾನೆ ಎಂದು ಸಹೋದರ ಲೋಹಿತ್ ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ – ಅಭಿಮಾನಿಗಳಿಗಾಗಿ ಥಿಯೇಟರ್‌ಗೆ ಬಂದ `ರಾಜಕುಮಾರ’

     

    ಭಾನುವಾರ ಮಧ್ಯಾಹ್ನ ತನ್ನ ತಾಯಿಯೊಂದಿಗೆ ನೇತ್ರದಾನ ಮಾಡಿದ ನೆಚ್ಚಿನ ನಟನ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದ. ಆತ್ಮಹತ್ಯೆ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಮುತ್ಯಾಲಮಡುವು ಗಡಿಭಾಗದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ

    ಮುತ್ಯಾಲಮಡುವು ಗಡಿಭಾಗದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ

    ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ವಣಕನಹಳ್ಳಿ ಗ್ರಾಮ ಪಂಚಾಯಿತಿ ಮುತ್ಯಾಲಮಡುವು ವ್ಯಾಪ್ತಿಯಲ್ಲಿ ಇಂದು ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಯಿತು.

    ವಣಕನಹಳ್ಳಿ ಗ್ರಾಮಪಂಚಾಯತಿಯ ಚೂಡೇನ ಹಳ್ಳಿ, ಸುಣವಾರ, ಸೋಲೂರು, ಮೆಣಸನಹಳ್ಳಿ, ಪಣಕನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರಿನ ಅಭಾವ ಬಹಳಷ್ಟು ಇದ್ದು, ಈ ಸಮಸ್ಯೆಯನ್ನು ನೀಗಿಸಲು ಹಲವು ವರ್ಷಗಳಿಂದ ಪಂಚಾಯತಿ ಅಧಿಕಾರಿಗಳು ಹಾಗೂ ಸದಸ್ಯರು ಸಾಕಷ್ಟು ಪ್ರಯತ್ನ ಪಡುತ್ತಿದ್ದರು. ಈ ವಿಚಾರವಾಗಿ ಈಗಾಗಲೇ ಅನೇಕ ಬಾರಿ ಚರ್ಚೆಗಳಾಗಿದ್ದರೂ, ಸಹ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಗಿಣಿರಾಮನ ರಾಣಿಗೆ ಮೋಹಕ ತಾರೆ ಕೊಟ್ರು ಕಾಂಪ್ಲಿಮೆಂಟ್

    ಇದೀಗ ಒಂದು ಖಾಸಗಿ ಕಂಪನಿ ಕಾಂಟಿನೆಂಟಲ್ ಪ್ರೈವೇಟ್ ಲಿಮಿಟೆಡ್ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ಸಲುವಾಗಿ ಚೆಕ್ ಡ್ಯಾಮ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ. ಈ ಕಂಪನಿ ಸುಮಾರು ನಾಲ್ಕು ದಶಲಕ್ಷ ಲೀಟರ್ ನಷ್ಟು ನೀರು ಶೇಖರಣೆಯಾಗುವಂತಹ ಚೆಕ್ ಡ್ಯಾಂ ನಿರ್ಮಾಣಕ್ಕೆ ಮುಂದಾಗಿದ್ದು, ವನಕನಹಳ್ಳಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಇಂದು ಗುದ್ದಲಿ ಪೂಜೆ ನೆರವೇರಿದೆ.

    ಚೂಡೇನಹಳ್ಳಿ ಗ್ರಾಮದ ಪಕ್ಕದಲ್ಲಿ ಮುತ್ಯಾಲಮಡು ಜಲಪಾತದ ಕಾಲುವೆ ಹಾದು ಹೋಗುತ್ತಿದ್ದು, ಇದೇ ನೀರಿಗೆ ಸಿಎಸ್‌ಆರ್ ಫಂಡ್ ಮೂಲಕ ಕಾಂಟಿನೆಂಟಲ್ ಪ್ರೈವೇಟ್ ಲಿಮಿಟೆಡ್ ಚೆಕ್ ಡ್ಯಾಂ ನಿರ್ಮಾಣ ಮಾಡಲು ಮುಂದಾಗಿದೆ. ಈ ನೀರು ಶೇಖರಣೆಯಾದರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನೇಕ ಹಳ್ಳಿಗಳಿಗೆ ನೀರಿನ ಸಮಸ್ಯೆ ಪರಿಹಾರವಾಗುತ್ತದೆ. ಇದನ್ನೂ ಓದಿ: ಆನ್‍ಲೈನ್ ಪಾಠ ಕೇಳಿ ಕುಗ್ಗಿದ್ದ ಮಕ್ಕಳಿಗೆ ವಿಶೇಷ ತರಬೇತಿ ನೀಡಿದ ಸುರಾನ ವಿದ್ಯಾಲಯ

    ಜೊತೆಗೆ ಕೃಷಿ ಚಟುವಟಿಗೆಗಳಿಗೆ ಉಪಯೋಗವಾಗುತ್ತದೆ. ಕೇವಲ ಎರಡು ವರ್ಷಗಳಲ್ಲಿ ನಿರ್ಮಾಣ ಕಾರ್ಯ ಮುಗಿದು ಡ್ಯಾಂ ನೀರು ಬಳಸುವಂತೆ ಆಗುತ್ತೆ ಎಂದು ಕಂಪೆನಿ ಭರವಸೆಯನ್ನು ನೀಡಿದೆ. ಇದರಿಂದ ಅಲ್ಲಿನ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ ಎಂದು ಪಂಚಾಯತಿ ಅಧ್ಯಕ್ಷರು ಅನುಪಮಾ ತಿಳಿಸಿದ್ದಾರೆ.