ಬೆಂಗಳೂರು: 2 ವರ್ಷದ ಹೆಣ್ಣು ಮಗುವಿನ ಮೇಲೆ ತನ್ನ ದೊಡ್ಡಪ್ಪನೇ ಅತ್ಯಾಚಾರ ಎಸಗಿದ್ದು, ತೀವ್ರ ರಕ್ತಸ್ರಾವದಿಂದ ಮಗು ಮೃತಪಟ್ಟಿರುವ ಘಟನೆ ಆನೆಕಲ್ ತಾಲೂಕಿನಲ್ಲಿ ನಡೆದಿದೆ. ಆರೋಪಿಯನ್ನು ದೀಪು ಎಂದು ಗುರುತಿಸಲಾಗಿದ್ದು, ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ದೀಪು ಕಳೆದ 10 ದಿನಗಳ ಹಿಂದೆ ದೊಡ್ಡಬಳ್ಳಾಪುರದಿಂದ ತನ್ನ ತಮ್ಮನ 2 ವರ್ಷದ ಹೆಣ್ಣುಮಗಳನ್ನು ಊರಿನಿಂದ ಅತ್ತಿಬೆಲೆಗೆ ಕರೆತಂದಿದ್ದ. ಅಂತೆಯೇ ಒಂದು ದಿನ ನೆರಳೂರು ಗೇಟ್ ಬಳಿ ಚಿಕನ್ ತರಲು ಸ್ನೇಹಿತನ ಜೊತೆಗೂಡಿ ಮಗುವನ್ನೂ ಕರೆದೊಯ್ದಿದ್ದ. ಮಾರ್ಗಮಧ್ಯದಲ್ಲಿ ಸ್ನೇಹಿತನನ್ನು ಮದ್ಯ ತರಲು ಕಳುಹಿಸಿದ್ದಾನೆ. ಇದೇ ವೇಳೆ ಕಾರಿನಲ್ಲೇ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಪೈಶಾಚಿಕ ಕೃತ್ಯದಿಂದ ನಲುಗಿದ್ದ ಮಗುವಿನ ಗುಪ್ತಾಂಗದಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದೆ. ಇದನ್ನೂ ಓದಿ: ಟ್ರಾನ್ಸ್‌ಫಾರ್ಮರ್ ಸ್ಫೋಟ- ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಿದ ಸುನೀಲ್ ಕುಮಾರ್
ಅತ್ಯಾಚಾರ ಎಸಗಿದ ಬಳಿಕ ಮಗು ಸ್ತಬ್ಧವಾಗಿದ್ದನ್ನು ಕಂಡು ಆತಂಕಗೊಂಡ ದೀಪು, ಅತ್ತಿಬೆಲೆಯ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಮಗುವಿನ ತಲೆಗೆ ಗಾಯ ಆಗಿದೆ ಎಂದು ಸುಳ್ಳು ಹೇಳಿ ಚಿಕಿತ್ಸೆ ಕೊಡಿಸಲು ಯತ್ನಿಸಿದ್ದಾನೆ. ಆದರೆ ಮಗು ಮೃತಪಟ್ಟಿತ್ತು. ನಂತರ ಸ್ಥಳೀಯ ಪೊಲೀಸ್ ಠಾಣೆಗೆ ತಾನೇ ಹೋಗಿ, ಹಠಾತ್ತನೆ ಕಾರಿನ ಬ್ರೇಕ್ ಹಾಕಿದ್ದರಿಂದ ಬಿದ್ದು ಮಗುವಿನ ತಲೆಗೆ ಪೆಟ್ಟಾಗಿ ಮೃತಪಟ್ಟಿದೆ ಎಂದು ದೂರು ದಾಖಲಿಸಿದ್ದ.
ಇತ್ತ ಈತನ ನಡವಳಿಕೆ ಬಗ್ಗೆ ಪೊಲೀಸರು ಅನುಮಾನಗೊಂಡಿದ್ದು, ಮಗುವಿನ ಮರಣೋತ್ತರ ಪರೀಕ್ಷೆಗೆ ಶಿಫಾರಸು ಮಾಡಿದ್ದರು. ಈಗ ಮಗುವಿನ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಮಗುವನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಆರೋಪಿ ದೀಪು ಎಂಬಾತನನ್ನು ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.
ಬೆಂಗಳೂರು: ಶಾಲಾ, ಕಾಲೇಜುಗಳಲ್ಲಿ ಯಾವುದೇ ಕಾಂಟ್ರವರ್ಸಿ ಬೇಡ. ಶಾಲೆಗಳು ಮಾಡಿರುವ ಕ್ರಮವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಲಹೆ ನೀಡಿದರು.
ಆನೇಕಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಶಾಲಾ ಕಾಲೇಜುಗಳು, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯನ್ನು ಹೊಂದಬೇಕು. ಪರಿಸರ ಕಾಳಜಿ, ರೇಡಿಯೋ, ಹವಮಾನ ಸೇರಿದಂತೆ ಹಲವು ವಿಚಾರವನ್ನು ಒಳಪಡಿಸಬೇಕು. ಇಡೀ ದೇಶದ ಶೈಕ್ಷಣಿಕ ಸಂಸ್ಥೆಗಳನ್ನು ಅಳವಡಿಸಬೇಕು. ಅಲ್ಲದೇ ನಮ್ಮ ಧರ್ಮದ ಬಗ್ಗೆ ತಿಳಿಸಬೇಕು ಎಂದರು.
ಆದರೆ ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಒಳ್ಳೆಯದಲ್ಲ. ನಾವೆಲ್ಲಾ ಭಾರತೀಯರು. ಶಾಲೆಯಲ್ಲಿ ಯಾವುದೇ ಜಾತಿ ಮತ ಭಾಷೆ ಇಲ್ಲ, ಭಾರತೀಯತೆ ನಮ್ಮದಾಗಬೇಕು ಎಂದು ಕಿವಿಮಾತು ಹೇಳಿದರು. ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್ ಹಿಡಿದ ದಂಪತಿ
ನಮ್ಮ ಮಾತೃಭಾಷೆಯನ್ನು ಮರೆಯಬಾರದು. ಇರುವೆಗಳಿಗೆ ಸಕ್ಕರೆ ಹಾಕಿ, ಹಾವಿಗೆ ಹಾಲೆರದು, ಪಶುಗಳಿಗೆ ಮೇವು ಹಾಕಿ, ತಿಲಕವಿಟ್ಟು ಗೌರವಿಸುವ ಸಂಸ್ಕಾರ ನಮ್ಮದು. ಎಲ್ಲಾ ಭಾಷೆಯನ್ನು ಕಲಿಯಬೇಕು. ಆದರೆ ಮೊದಲು ನಿಮ್ಮ ಮಾತೃ ಭಾಷೆ ಕಲೀರಿ. ಮೊದಲು ಕನ್ನಡ ಕಲೀರಿ. ಮಾತೃಭಾಷೆ ಎನ್ನುವುದು ಕಣ್ಣು ಇದ್ದಂತೆ. ಇತರ ಭಾಷೆ ಕನ್ನಡಕ ಇದ್ದಂತೆ, ಕಣ್ಣೇ ಇಲ್ಲದಿದ್ದರೇ ರಿಬಾನ್ ಗ್ಲಾಸ್ ಹಾಕಿದ್ರೂ ಏನ್ ಪ್ರಯೋಜನ ಎಂದು ತಿಳಿಸಿದರು. ಹರಿದ್ವಾರದಿಂದ ತಂದ ಪವಿತ್ರ ಗಂಗಾಜಲ 2 ಸಾವಿರ ಶಿವ ದೇವಾಲಯಗಳಿಗೆ ವಿತರಣೆ
ಆದಿತ್ಯ ಬುಧವಾರ ಬೆಳಗ್ಗೆ ಎದ್ದವನು ಮನೆಯಲ್ಲಿ ಇದ್ದ. ನಂತರ ಮಧ್ಯಾಹ್ನ ಒಂದು ಗಂಟೆಗೆ ಆತನಿಗೆ ಪರೀಕ್ಷೆ ಇತ್ತು. ಇದರಿಂದ ಬೆಳಗ್ಗೆಯಿಂದ ಮನೆಯಲ್ಲಿಯೇ ಓದುತ್ತಿದ್ದ. ಮದ್ಯಾಹ್ನ 12 ಗಂಟೆಯ ಸುಮಾರಿಗೆ ಅಂಗಡಿಗೆ ಹೋಗಿ ಬರ್ತೀನಿ ಅಂತ ಹೋಗಿದ್ದಾನೆ. ಆದರೆ ಡ್ಯಾಡಿ ಗಾರ್ಡನ್‌ನಲ್ಲಿರುವ ಐದು ಅಂತಸ್ತಿನ ಕಟ್ಟಡ ಮೇಲಿಂದ ಹಾರಿ ತನ್ನ ಪ್ರಾಣ ಬಿಟ್ಟಿದ್ದಾನೆ.
ಘಟನೆ ಬಳಿಕ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಮಲ್ಲೇಶ್ ಅವರು ಸಾವಿನ ನಿಖರ ಕಾರಣದ ಬಗ್ಗೆ ಪರಿಶೀಲನೆ ನಡೆಸಿದ್ದು, ಆದಿತ್ಯನ ಮೊಬೈಲ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆನೇಕಲ್: ಖಾಸಗಿ ವಸತಿ ಶಾಲೆಯ ಶಿಕ್ಷಕರ ಕ್ವಾಟ್ರಸ್ ನಲ್ಲಿ ವಾಸವಾಗಿದ್ದ ಶಿಕ್ಷಕಿ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಅದು ಅಲ್ಲದೇ ಮನೆಯ ಗೋಡೆಗಳ ಮೇಲೆ ಅಶ್ಲೀಲ ಚಿತ್ರ ಬಿಡಿಸುವ ಮೂಲಕ ವಿಕೃತಿ ಮೆರೆದಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ದೊಮ್ಮಸಂದ್ರದಲ್ಲಿ ನಡೆದಿದೆ.
ಶಿಕ್ಷಕಿ ಹೊಸವರ್ಷದ ಸಲುವಾಗಿ ತವರಿಗೆ ಹೋಗಿದ್ದ ಸಂದರ್ಭದಲ್ಲಿ ಕಳ್ಳತನ ನಡೆದಿದ್ದು, ತವರಿನಿಂದ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
ಆನೇಕಲ್: ಕೋರ್ಟ್ ಗೆ ಹಾಜರಾಗಿ ಮನೆಯತ್ತ ತೆರಳುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಶಿವಾಜಿ ವೃತ್ತದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಬಿ.ಟಿ.ಎಂ.ನಿವಾಸಿ ರಾಜಶೇಖರ್ ರೆಡ್ಡಿ ಎಂದು ಗುರುತಿಸಲಾಗಿದೆ. ಇವರು ಜಮೀನಿನ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಆನೇಕಲ್ ಕೋರ್ಟಿಗೆ ಹಾಜರಾಗಿ ನಿವಾಸದತ್ತ ತೆರಳುತ್ತಿದ್ದರು. ಈ ವೇಳೆ 3 ಬೈಕ್ ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ.
ಆನೇಕಲ್ ಪಟ್ಟಣದಲ್ಲಿರುವ ಕೇಂದ್ರ ಸರ್ಕಾರದ ಮಂತ್ರಿ ಎ ನಾರಾಯಣಸ್ವಾಮಿ ನಿವಾಸದ ಮುಂದೆ ರಾಜಶೇಖರ್ ರೆಡ್ಡಿ ತನ್ನ ಸ್ವಿಫ್ಟ್ ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ನಂತರ ಮೊದಲಿಗೆ ಗನ್ ಮೂಲಕ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿ ನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಆನೇಕಲ್: ವೈಟ್‌ಫೀಲ್ಡ್ ಠಾಣೆಯ ಎಎಸ್‌ಐ ದೇವರಾಜ್ ಅವರು ಬಾಬು ಎಂಬುವರಿಂದ 10 ಸಾವಿರ ರೂ. ಲಂಚ ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಆರೋಪಿ ದೇವರಾಜ್ ಅವರು ಸಿಮೆಂಟ್ ಮತ್ತು ಸ್ಟೀಲ್ ಅಂಗಡಿ ಮಾಲೀಕರ ವಾಹನ ರಸ್ತೆಯಲ್ಲಿ ಕಂಡಾಕ್ಷಣ ಅದನ್ನು ವಶ ಪಡಿಸಿಕೊಂಡು ಠಾಣೆಗೆ ತರುತ್ತಿದ್ದರು. ನಂತರ ಆ ವಾಹನವನ್ನು ಬಿಡಿಸಿಕೊಳ್ಳಲು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಹಣ ನೀಡದಿದ್ದರೆ ಮಾಲೀಕರು ಕಳ್ಳ ಸಾಗಣೆ ಮಾಡುತ್ತಿದ್ದಾರೆ ಎಂದು ಕೇಸು ದಾಖಲು ಮಾಡುವುದಾಗಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಮೊದಲಿನಿಂದಲೂ ಕೇಳಿಬಂದಿತ್ತು.
ಬಾಬು ಅವರು ಸ್ಟೀಲ್ ವ್ಯಾಪಾರ ಮತ್ತು ಸ್ಟೀಲ್ ಸರಬರಾಜು ಮಾಡುವ ವಾಹನಗಳನ್ನು ಹೊಂದಿದ್ದರು. ಇವರಿಂದಲೂ ಸಾಕಷ್ಟು ಬಾರಿ ಹಣ ವಸೂಲಿ ಮಾಡಿದ್ದಾರೆ. ಬ್ಯಾಂಕ್ ಲೋನ್ ಕಟ್ಟಲು ಹಣ ಬೇಕು. 50 ಸಾವಿರ ರೂ. ಕೊಡು ಎಂದು ಆಗಾಗ ಕಾಲ್ ಮಾಡಿ ಹಿಂಸೆ ಕೊಡುತ್ತಿದ್ದರು. ಇದರಿಂದ ಬೇಸತ್ತ ಬಾಬು ಎಸಿಬಿ ಮೊರೆ ಹೋಗಿದ್ದಾರೆ. ಇಂದು ಟ್ರ‍್ಯಾಪ್ ಮಾಡಿಸಿ ಬಲೆಗೆ ಬೀಳಿಸಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಬೆಳತ್ತೂರು ಪರಮೇಶ್ ತಿಳಿಸಿದರು.
ಕಳೆದ ಏಳು ಎಂಟು ವರ್ಷಗಳಿಂದ ಹಣ ವಸೂಲಿ ಮಾಡಿ ಎರಡು ಎಕರೆ ಜಮೀನು, ಬಗಲುಗುಂಟೆ ವ್ಯಾಪ್ತಿಯಲ್ಲಿ ನಾಲ್ಕು ಸೈಟ್ ಖರೀದಿ ಮಾಡಿದ್ದಾರೆ. ತೊಂಡೆ ಕೊಪ್ಪದಲ್ಲಿ ಐಶಾರಾಮಿ ಬಂಗಲೆ ಕಟ್ಟಿದ್ದಾನೆ ಎಂದು ಪರಮೇಶ್ ಆರೋಪಿಸಿದ್ದಾರೆ. ಇದನ್ನೂ ಓದಿ: ಸ್ಟಾರ್‌ಲಿಂಕ್ ಇಂಡಿಯಾದ ಮುಖ್ಯಸ್ಥ ಸಂಜಯ್ ಭಾರ್ಗವ ರಾಜೀನಾಮೆ
ಡಿಸಿಪಿ ಕಚೇರಿ ಕೆಳಗೆ ಇರುವ ಠಾಣೆಯಲ್ಲೇ ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದೆ. ಇನ್ನೂ ಬೇರೆ ಕಡೆ ಯಾವ ರೀತಿ ಭ್ರಷ್ಟಾಚಾರ ನಡೆಯಬಹುದು ಎಂದ ಅವರು, ಸದ್ಯದಲ್ಲೇ ಮತ್ತೊಬ್ಬ ಅಧಿಕಾರಿಯ ಬಣ್ಣ ಬಯಲು ಮಾಡುವುದಾಗಿ ತಿಳಿಸಿದರು.
ಆನೇಕಲ್: ಕಳೆದ ಆರು ತಿಂಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಮಹಿಳೆಯನ್ನು ಆಕೆಯ ಪತಿ ಹಾಗೂ ಅವನ ಮನೆಯವರು ಕೊಲೆ ಮಾಡಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮಹಿಳೆಯ ಶವ ಅನುಮಾನಸ್ಪದ ರೀತಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಆನೇಕಲ್‌ನಲ್ಲಿ ನಡೆದಿದೆ.
ಆನೇಕಲ್ ತಾಲೂಕಿನ ಜಗಣಿ ಸಮೀಪದ ರಾಜಾಪುರ ನಿವಾಸಿಯಾಗಿರುವ ಯಶವಂತ್ ಹಾಗೂ ಬೆಂಗಳೂರಿನ ಟೀಚರ್ಸ್ ಕಾಲೋನಿಯ ರಾಣಿ ಕಳೆದ ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಯಶವಂತ್ ಸರ್ಕಾರಿ ಕೆಲಸ ಮಾಡಿಕೊಂಡಿದ್ದ. ಯಶವಂತ್‌ಗೆ ಇದು ಎರಡನೇ ಮದುವೆಯಾಗಿದೆ.
ಮದುವೆಯಾದ ಬಳಿಕ ರಾಣಿಗೆ ಯಶವಂತ ಹಾಗೂ ಆತನ ಕುಟುಂಬಸ್ಥರು ಚಿತ್ರಹಿಂಸೆ ನೀಡುತ್ತಿದ್ದರು. ಯಶವಂತ ಕೂಡ ಅಂತರ್ಜಾತಿ ವಿವಾಹ ಆಗಿದ್ದರಿಂದ ಹಿಂಸೆ ನೀಡುತ್ತಿದ್ದ. ಆದರೆ ಇಂದು ರಾಣಿ, ರಾಜಪುರದ ತನ್ನ ಮನೆಯಲ್ಲಿ ಅನುಮಾನಸ್ಪದವಾಗಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಮನೆಯವರು ಕೊಲೆ ಮಾಡಿದ್ದಾರೆ ಶಂಕಿಸಲಾಗಿದೆ. ಇದನ್ನೂ ಓದಿ: ಮಣ್ಣಿಗೆ ಬಿದ್ದರೂ ಜೋಡಿಯ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾತ್ರ ಸೂಪರ್!
ಮನೆಯ ಮೇಲ್ ಮಹಡಿಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಇದ್ದರೂ ಸಹ ಪತಿ ಹಾಗೂ ಮನೆಯವರು ನೋಡಲು ಕೂಡ ಬಂದಿಲ್ಲ. ಅಂತರ್ಜಾತಿ ವಿವಾಹ ಆಗಿದ್ದರಿಂದ ಇವರೇ ಕೊಲೆ ಮಾಡಿದ್ದಾರೆ ಎಂದು ರಾಣಿಯ ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಮೀನುಗಾರರ 2 ಗುಂಪುಗಳ ನಡುವೆ ಕಿತ್ತಾಟ- 7 ಮಂದಿಗೆ ಗಾಯ
ಈ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ತನಿಖೆ ಕೈಗೊಂಡ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳಿಸಿಕೊಟ್ಟಿದ್ದಾರೆ. ವರದಿ ಬಂದ ನಂತರ ಮುಂದಿನ ತನಿಖೆಯನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಕಂಟೈನರ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಎಂಟಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಹೊಸೂರು ಬೆಂಗಳೂರು ಮುಖ್ಯರಸ್ತೆಯ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಬೆಂಗಳೂರಿನಿಂದ ಸೇಲಂಗೆ ಕೆಎಸ್‌ಆರ್‌ಟಿಸಿ ಬಸ್ ಹೋಗುತ್ತಿತ್ತು. ಅತ್ತಿಬೆಲೆ ಸಮೀಪದಲ್ಲಿ ಬೆಂಗಳೂರಿನಿಂದ ಹೊಸೂರಿಗೆ ಹೋಗುತ್ತಿದ್ದ ಕಂಟೈನರ್ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ಬಸ್ ಎಡಭಾಗ ಹಾಗೂ ಮುಂಭಾಗ ಸಂಪೂರ್ಣ ಜಖಂಗೊಂಡು ಬಸ್‍ನಲ್ಲಿದ್ದ ಸುಮಾರು ಎಂಟರಿಂದ ಹತ್ತು ಮಂದಿಗೆ ಗಾಯಗಳಾಗಿವೆ. ಇದನ್ನೂ ಓದಿ: ಸಣ್ಣ ವಯಸ್ಸಿನಿಂದಲೇ ಸೇವಾ ಮನೋಭಾವವನ್ನು ಬೆಳೆಸಬೇಕು: ಎಂ.ವೆಂಕಯ್ಯ ನಾಯ್ಡು
ಘಟನಾ ಸ್ಥಳಕ್ಕೆ ಆಗಮಿಸಿದ ಅತ್ತಿಬೆಲೆ ಪೊಲೀಸರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಾಯಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ಸಿನ ಚಾಲಕ ಹಾಗೂ ನಿರ್ವಾಹಕರಿಗೂ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತ್ತಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತಜ್ಞರ ವರದಿಯ ಆಧಾರದ ಮೇಲೆ ಸರ್ಕಾರ ಕ್ರಮ ತಗೆದುಕೊಳ್ಳುತ್ತೆ: ಭಗವಂತ್ ಖೂಬಾ
ಆನೇಕಲ್: ಬೆಂಗಳೂರನ್ನೇ ಬಿಚ್ಚಿ ಬೀಳಿಸಿದ್ದ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಬಹುತೇಕ ಬೇಧಿಸಿದ್ದಾರೆ. ಹೊಸ ರೋಡ್‍ನಲ್ಲಿ ನಡೆದ ಕೊಲೆ ಪ್ರಕರಣವನ್ನು ಪೊಲೀಸರು ಕೆದಕ್ತಿದ್ದಂತೆ ಹೊಸ ತಿರುವು ಪಡೆದುಕೊಂಡಿದೆ. ಅರ್ಚನಾ ನಡುಬೀದಿಯಲ್ಲಿ ಹೆಣವಾಗಲು ಹೆತ್ತ ಮಗಳೇ ಕಾರಣವಾದಳಾ ಎಂಬ ಅನುಮಾನ ಮೂಡಿದೆ. ಕೊಲೆಗೆ ಆಸ್ತಿ, ಹಣ, ಅಕ್ರಮ ಸಂಬಂಧನೇ ಕಾರಣ ಅಂತಾನೂ ಹೇಳಲಾಗ್ತಿದೆ.
ಇದೇ ತಿಂಗಳ 27ರ ರಾತ್ರಿ ಹೊಸೂರು ರೋಡ್ ಸಿಗ್ನಲ್ ಬಳಿ ನಡೆದಿದ್ದ ಬರ್ಬರ ಕೊಲೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ನೋಡ ನೋಡ್ತಿದ್ದಂತೆ ಇಬ್ಬರು ಕಿಡಿಗೇಡಿಗಳು ಮಾರಕಾಸ್ತ್ರಗಳಿಮದ ಅರ್ಚನಾ ರೆಡ್ಡಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ರು. ಕೇಸ್ ದಾಖಲಿಸಿಕೊಂಡು ಆರೋಪಿಗಳ ಬೆನ್ನತ್ತಿದ್ದ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳ ಕೈಗೆ ಖೋಳ ತೊಡಿಸಿದ್ದಾರೆ. ಇಷ್ಟಕ್ಕೂ ಇಲ್ಲಿ ನಡುರಸ್ತೆಯಲ್ಲಿ ನೆತ್ತರಕೋಡಿ ಹರಿಸಿದ್ದು ಬೇರಾರೂ ಅಲ್ಲ, ಕೊಲೆಯಾದ ದುರ್ದೈವಿ ಅರ್ಚನಾ ಪ್ರಿಯಕರ ಅಲಿಯಾಸ್ ಮೂರನೇ ಪತಿ ನವೀನ್.
ಅರವಿಂದ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದ ಅರ್ಚನಾ 10 ವರ್ಷ ಸಂಸಾರ ಮಾಡಿದ್ಲು. 1 ಗಂಡು, 1 ಹೆಣ್ಣು ಮಗುವಾಗಿತ್ತು. ಬಳಿಕ ಮೊದಲ ಡಿವೋರ್ಸ್ ಪಡೆದು 15 ಕೋಟಿ ಪರಿಹಾರ ಪಡೆದುಕೊಂಡಿದ್ಲು. ಅದ್ರಲ್ಲೇ ರಿಯಲ್ ಎಸ್ಟೇಟ್ ಬಿಸಿನೆಸ್ ಶುರುಮಾಡಿದ್ಲು. ಈ ವೇಳೆ ಬೆಂಗಳೂರಿನ ಬಹುತೇಕ ರೌಡಿಗಳ ಪರಿಚಯವಾಗಿ, ಸಿದ್ದಿಕ್ ಎಂಬಾತನ ಜೊತೆ 3 ವರ್ಷ ಲೀವಿಂಗ್ ಟುಗೆದರ್ ರಿಲೇಶನ್‍ನಲ್ಲಿದ್ಲು. ಆದ್ರೆ ಆದನ ಜೊತೆಗೂ ಜಗಳವಾಗಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ಲು. ಈ ವೇಳೆ ಈ ಖರ್ತನಾಕ್ ನವೀನ್ ಪರಿಚಯವಾದ.
ಅರ್ಚನಾ ಹೆಸರಲ್ಲಿತ್ತು 40 ಕೋಟಿ ಆಸ್ತಿ!
ನವೀನ್ ಪರಿಚಯದ ಬಳಿಕ ಇಬ್ಬರ ಅರ್ಚನಾ ಜೊತೆ ಸಲುಗೆ ಹೆಚ್ಚಾಗಿ ಅಕ್ರಮ ಸಂಬಂಧ ಶುರುವಾಗಿತ್ತು. ಅರ್ಚನಾ ಹೆಸ್ರಲ್ಲಿದ್ದ ಆಸ್ತಿ ಮೇಲೆ ಕಿರಾತಕ ನವೀನನ ಕಣ್ಣು ಬಿದ್ದಿತ್ತು. 40 ಕೋಟಿ ಒಡತಿಯಾಗಿದ್ದ ಅರ್ಚನಾ ಚನ್ನಪಟ್ಟಣದಲ್ಲಿ 12 ಎಕರೆ ಜಮೀನು, ಜಿಗಣಿ, ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ 2 ಐಷಾರಾಮಿ ಬಂಗಲೆ, ಐಷಾರಾಮಿ ಕಾರುಗಳನ್ನು ಹೊಂದಿದ್ದಳು. ಇದನ್ನೂ ಓದಿ: ಪತಿಯನ್ನು ಜೈಲಿನಿಂದ ಹೊರತರಲು ಸಹಾಯ ಮಾಡೋದಾಗಿ ಹೇಳಿ ಮಹಿಳೆಯ ರೇಪ್ ಮಾಡಿದ್ರು!
ನವೀನ್ ಜೊತೆ ಲಿವಿಂಗ್ ಟುಗೆದರ್ ರಿಲೇಷನ್‍ನಲ್ಲಿದ್ದ ಅರ್ಚನಾಗೆ ನವೀನ್ ಗೆಳೆಯ ರೌಡಿ ರೋಹಿತರ ಪರಿಚಯವಾಗಿತ್ತು. ಅವ್ನ ಜೊತೆಯೂ ಅರ್ಚನಾಗೆ ಸಂಬಂಧ ಶುರುವಾಗಿತ್ತು. ಇದೇ ವಿಚಾರವಾಗಿ ಅರ್ಚನಾ – ನವೀನ್ ನಡುವೆ ಜಗಳವಾಗಿತ್ತು. ಅರ್ಚನಾ ವರ್ತನೆಯಿಂದ ಬೇಸತ್ತಿದ್ದ ನವೀನ್ ಅರ್ಚನಾ ಪುತ್ರಿ ಯುವಿಕಾ ಜೊತೆ ತುಂಬ ಸಲುಗೆಯಿಂದ ಇರ್ತಿದ್ದ. ಯುವಿಕಾ ಜೊತೆ ಆಸ್ತಿಯೂ ಸಿಗುತ್ತೆ ಅಂತ ಮಗಳಿಗೆ ಬಲೆ ಬೀಸಿದ್ದ. ಈ ವಿಚಾರವನ್ನು ರೌಡಿ ರೋಹಿತ್ ಬಳಿ ಹೇಳಿಕೊಂಡಿದ್ದ ಅರ್ಚನಾ, ನವೀನ್‍ಗೆ ಬೆದರಿಕೆ ಹಾಕಿಸಿದ್ಲು.. ಇದರಿಂದ ಸಿಟ್ಟಿಗೆದ್ದಿದ್ದ ನವೀನ್ ಅರ್ಚನಾ ಕೊಲೆಗೆ ಸಂಚು ರೂಪಿಸಿದ್ದ.. ಅಂದುಕೊಂಡಂತೆ ಹೊಸೂರು ರಸ್ತೆಯಲ್ಲಿ ಡಿಸೆಂಬರ್ 27 ರಂದು ಅರ್ಚನಾಳನ್ನು ಯಮನಪಾದ ಸೇರಿಸಿದ್ದ.
ಇಡೀ ಪ್ರಕರಣವನ್ನು ಭೇದಿಸಿರೋ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿ ನವೀನ್ ಹಾಗೂ ಆತನ ಸ್ನೇಹಿತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ನಡುವೆ ಅರ್ಚನಾ ಪುತ್ರ ನವೀನ್ ಆಸ್ತಿಗಾಗಿ ತನ್ನ ಅಕ್ಕಳನ್ನು ಬಳಸಿಕೊಂಡಿದ್ದ ಅಂತ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದಾನೆ. ಇದೀಗ ಪೊಲೀಸರಿಗೆ ಅಮ್ಮನ ಕೊಲೆಗೆ ಮಗಳೇ ಕಾರಣವಾದಳಾ ಎಂಬ ಅನುಮಾನ ಮೂಡಿದ್ದು, ಆಕೆಯ ಬೆನ್ನು ಬಿದ್ದಿದ್ದಾರೆ. ಒಟ್ಟಿನಲ್ಲಿ ನಡುರಸ್ತೆಯಲ್ಲಿ ಭೀಕರವಾಗಿ ಕೊಲೆಯಾಗಿ ಹೋದ 40 ಕೋಟಿಗೂ ಹೆಚ್ಚಿನ ಆಸ್ತಿಯ ಒಡತಿ ಅರ್ಚನಾ ಸಾವು ದಿನಕ್ಕೊಂದು ರೀತಿಯ ಟ್ವಿಸ್ಟ್ ಪಡೆಯುತ್ತಿದ್ದು, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ. ಇದನ್ನೂ ಓದಿ: ತಾಯಿ ಮೇಲೆ ಹಲ್ಲೆ ಮಾಡಿದನೆಂದು ಸಂಬಂಧಿಯನ್ನೇ ಕೊಂದ ಬಾಲಕಿಯರು!
ದಕ್ಷಿಣ ಆಫ್ರಿಕಾದಿಂದ ದೇವನಹಳ್ಳಿ ಏರ್ಪೋರ್ಟ್‍ಗೆ ಆಗಮಿಸಿದ್ದ ವ್ಯಕ್ತಿಯನ್ನು ತಪಾಸಣೆ ಮಾಡಲಾಗಿತ್ತು. ಅಲ್ಲಿಂದ ಆತ ನೇರವಾಗಿ ಬಳ್ಳೂರು ಅಪಾಟ್ರ್ಮೆಂಟ್ ಒಂದಕ್ಕೆ ಬಂದಿದ್ದ. ರಿಪೋರ್ಟ್ ಪಾಸಿಟಿವ್ ಬಂದ ಹಿನ್ನೆಲೆ, ಆರೋಗ್ಯ ಇಲಾಖೆ ಡಿ.24ರಂದು ಆತನನ್ನು ಬೋರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದೆ.
ಆತನ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಪ್ರಸ್ತುತ ಬಳ್ಳೂರು ಅಪಾರ್ಟ್ಮೆಂಟ್ ಬಳಿ ಆರೋಗ್ಯ ಇಲಾಖೆ ಸಿಬ್ಬಂದಿ ಬೀಡುಬಿಟ್ಟಿದ್ದು, ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಕಟ್ಟೆಚ್ಚರ ವಿಧಿಸಲಾಗಿದೆ. ಇದನ್ನೂ ಓದಿ: ಸಂಸತ್ತಿನಲ್ಲೇ ಪರಸ್ಪರ ಹೊಡೆದಾಡಿಕೊಂಡ ಜನಪ್ರತಿನಿಧಿಗಳು
ರಾಜ್ಯದಲ್ಲಿ ಈವರೆಗೆ ಒಟ್ಟು 39 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.