Tag: anekal

  • ಪಿಡಿಓ ಅಧಿಕಾರಿ ಅಮಾನತು

    ಪಿಡಿಓ ಅಧಿಕಾರಿ ಅಮಾನತು

    ಆನೇಕಲ್: ವ್ಯಕ್ತಿಯೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ವಿವರವನ್ನು ನೀಡಲು ವಿಳಂಬ ಮಾಡಿದ ಹಿನ್ನೆಲೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಲಾಗಿರುವ ಘಟನೆ ಬೆಂಗಳೂರು ಹೊರವಲಯದ ಹೆನ್ನಾಗರದಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಪಂ ಅಭಿವೃದ್ಧಿ ಅಧಿಕಾರಿ ತುಳಸಿನಾಥ್ ಅಮಾನತುಗೊಂಡ ಅಧಿಕಾರಿ. ಬೆಂಗಳೂರು ನಗರ ಜಿಪಂ ಸಿಇಒ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಆನೇಕಲ್ ತಾಲೂಕು ಜಿಗಣಿ ಹೋಬಳಿ ಗ್ರಾಮದ ಹೆನ್ನಾಗರ ಗ್ರಾಪಂ ಪಿಡಿಓ ತುಳಸಿನಾಥ್ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ದಾಖಲೆಯನ್ನು ಕೇಳಿ ವೀರಭದ್ರಸ್ವಾಮಿ ಎಂಬುವವರು ಅರ್ಜಿ ಸಲ್ಲಿಸಿದ್ದರು. ಆದರೆ ದಾಖಲೆಯನ್ನು ನೀಡದೆ ಹಲವು ಬಾರಿ ಮಾಹಿತಿ ಕೇಳಿದರೂ ಸಹ ವಿಳಂಬ ಮಾಡಿದ್ದರು.

    ಕರ್ತವ್ಯಲೋಪ ವಿಚಾರದಲ್ಲಿ ಮಾಹಿತಿ ಹಕ್ಕು ಕಾಯ್ದೆ ಪ್ರಕರಣದಲ್ಲಿ ರಾಜ್ಯ ಮಾಹಿತಿ ಆಯುಕ್ತರು ಎಚ್. ಪಿ. ಸುಧಾಮ್‍ದಾಸ್ ಅವರ ಆದೇಶದಂತೆ ಜಿಪಂ ಸಂಗಪ್ಪ ಐಎಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಶಿಸ್ತುಕ್ರಮ ಜರುಗಿಸುವಂತೆ ಆದೇಶ ಮಾಡಿರುತ್ತಾರೆ. ಅದರಂತೆ ಜಿಲ್ಲಾ ಪಂಚಾಯಿತಿ ಅವರು ಆಯೋಗದ ಆದೇಶಕ್ಕೆ ಮಾನ್ಯತೆ ನೀಡಿ ಬೇಜವಾಬ್ದಾರಿಯಿಂದ ಮಾಹಿತಿ ಕೊಡದೆ ಮಾಹಿತಿ ಆಯೋಗದ ನೀತಿ-ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಇಂತಹ ಅಧಿಕಾರಿ ವಿರುದ್ಧ ಮಹತ್ವದ ಆದೇಶವಾಗಿದೆ. ಇದನ್ನೂ ಓದಿ: ಎದುರಾಳಿಗಳ ನಂಬರ್ ಎಷ್ಟೇ ಇರಲಿ, ಗೇಮ್ ನಮ್ಮದೇ: ಆಪರೇಷನ್ ಕಮಲದ ಸಂದೇಶ ಏನು!?

    Live Tv

  • ಮರಕ್ಕೆ ಬೈಕ್ ಡಿಕ್ಕಿಯಾಗಿ ಯುವಕ-ಯುವತಿ ದಾರುಣ ಸಾವು

    ಮರಕ್ಕೆ ಬೈಕ್ ಡಿಕ್ಕಿಯಾಗಿ ಯುವಕ-ಯುವತಿ ದಾರುಣ ಸಾವು

    ಆನೇಕಲ್: ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಅತಿವೇಗವಾಗಿ ಬೈಕ್ ಚಲಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಯುವಕ ಮತ್ತು ಯುವತಿ ಮೃತಪಟ್ಟಿರುವ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ.

    ಮಾರತಹಳ್ಳಿ ಮೂಲದ ಗಗನ್ ದೀಪ್ ಹಾಗೂ ಬನಶಂಕರಿ ಮೂಲದ ಯಶಸ್ವಿನಿ ಮೃತಪಟ್ಟ ದುರ್ದೈವಿಗಳು. ಇಂದು ಮುಂಜಾನೆ ಸರ್ಜಾಪುರದಿಂದ ಮನೆಗೆ ವಾಪಸ್ ಹೋಗುವಾಗ ಅತಿ ವೇಗವಾಗಿ ಚಲಿಸಿ ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಸರ್ಜಾಪುರದ ಪ್ರೆಸ್ಟೀಜ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಟೀ ಅಂಗಡಿಯಲ್ಲಿ ಅಗ್ನಿ ಅವಘಡ- ಬಾಲಕಿ ಗಂಭೀರ

    ಮೃತದೇಹಗಳನ್ನು ಅತ್ತಿಬೆಲೆ ಆಕ್ಸ್ಫರ್ಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೆಳಗ್ಗಿನ ಜಾವ ಯುವಕ-ಯುವತಿ ಎಲ್ಲಿಗೆ ಹೋಗಿ ಬರುತ್ತಿದ್ದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.

  • ಟೀ ಅಂಗಡಿಯಲ್ಲಿ ಅಗ್ನಿ ಅವಘಡ- ಬಾಲಕಿ ಗಂಭೀರ

    ಟೀ ಅಂಗಡಿಯಲ್ಲಿ ಅಗ್ನಿ ಅವಘಡ- ಬಾಲಕಿ ಗಂಭೀರ

    ಆನೇಕಲ್: ಶಾರ್ಟ್ ಸರ್ಕ್ಯೂಟ್ ನಿಂದ ಟೀ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿ ಅಂಗಡಿಯ ಒಳಗಿದ್ದ ಪುಟ್ಟ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಹೆಬ್ಬಗೋಡಿಯಲ್ಲಿ ನಡೆದಿದೆ.

    ಹೆಬ್ಬಗೋಡಿಯ ಗೊಲ್ಲಹಳ್ಳಿಯಲ್ಲಿ ಘಟನೆ ನಡೆದಿದ್ದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕವಾಗಿ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಂಗಡಿ ಮಾಲೀಕನ ಪುತ್ರಿ ಪಂಕಜ(11) ತಂದೆಯ ಜೊತೆಯಲ್ಲಿ ಅಂಗಡಿಯ ಒಳಗೆ ಇದ್ದಳು. ಈ ಸಂದರ್ಭದಲ್ಲಿ ಹೊತ್ತಿಕೊಂಡ ಬೆಂಕಿ ಅಂಗಡಿಯನ್ನು ಸಂಪೂರ್ಣವಾಗಿ ಆವರಿಸಿದ್ದು, ಶೇ.50ರಷ್ಟು ಭಾಗ ಮಗುವಿನ ದೇಹ ಸುಟ್ಟುಹೋಗಿದೆ.

    ಸ್ಥಳಕ್ಕೆ ಆಗಮಿಸಿದ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ದಳದ ಸಿಬ್ಬಂದಿ ಅಂಗಡಿಯಲ್ಲಿ ಬೆಂಕಿ ಹಾರಿಸಿದ್ದಾರೆ. ಶಾರ್ಟ್ ಸಕ್ರ್ಯೂಟ್ ಆದ ಸಂದರ್ಭದಲ್ಲಿ ಮತ್ತು ಸಿಲಿಂಡರ್ ಬ್ಲಾಸ್ಟ್ ಆಗಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ. ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಪುಟ್ಟ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಮೊಬೈಲ್ ಫೋನಿಗಾಗಿ ಜನ್ಮಕೊಟ್ಟ ತಾಯಿಯನ್ನೇ ಕೊಂದ ಮಗ!

    ಸ್ಥಳಕ್ಕೆ ಆಗಮಿಸಿದ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮೊಬೈಲ್ ಫೋನಿಗಾಗಿ ಜನ್ಮಕೊಟ್ಟ ತಾಯಿಯನ್ನೇ ಕೊಂದ ಮಗ!

    ಮೊಬೈಲ್ ಫೋನಿಗಾಗಿ ಜನ್ಮಕೊಟ್ಟ ತಾಯಿಯನ್ನೇ ಕೊಂದ ಮಗ!

    ಆನೇಕಲ್: ಆಕೆ ಹೊಟ್ಟೆ ಬಟ್ಟೆ ಕಟ್ಟಿ ಮಗನನ್ನ ಸಾಕಿದ್ಳು. ಎದೆ ಎತ್ತರಕ್ಕೆ ಬೆಳೆದು ನಿಂತ ಮಗ ತಾಯಿಗೂ ನೆರಳಾಗಿದ್ದ. ಆದರೆ ಮೊಬೈಲ್ ಗಾಗಿ ನಡೆದ ಗಲಾಟೆ ಆತನನ್ನ ಹಂತಕನನ್ನಾಗಿ ಮಾಡಿಬಿಡ್ತು. ಜನ್ಮ ಕೊಟ್ಟ ಅಮ್ಮನನ್ನೇ ಕೊಂದು ಪೊಲೀಸರ ಅತಿಥಿಯಾಗಿದ್ದಾನೆ. ಆಕೆ ಗಂಡನಿಲ್ಲದ ಮಗಳಿಗೆ ನೆರಳಾಗಿದ್ಳು. ಅನಾರೋಗ್ಯದಿಂದ ಬಳಲುತ್ತಿದ್ದ ಪತಿಗೆ ಆಸರೆಯಾಗಿದ್ಳು. ಪಿಟ್ಸ್ ಖಾಯಿಲೆಯಿಂದ ನರಳ್ತಿದ್ದ ಮಗನಿಗೂ ಹೆಗಲಾಗಿದ್ಳು. ಸೊಪ್ಪು ಮಾರಿ ಇಡೀ ಸಂಸಾರವನ್ನೇ ನೋಡಿಕೊಳ್ತಿದ್ಳು. ಆದರೆ ಜನ್ಮ ಕೊಟ್ಟ ಮಗನೇ ಇವತ್ತು ಹೆತ್ತಮ್ಮನ ಉಸಿರು ನಿಲ್ಲಿಸಿದ್ದಾನೆ. ಮೊಬೈಲ್ ಕೊಡಿಸಿಲ್ಲ ಅನ್ನೋ ಕೋಪಕ್ಕೆ ಕೊಂದೇ ಬಿಟ್ಟಿದ್ದಾನೆ.

    ಈಕೆಯ ಹೆಸರು ಫಾತಿಮಾ ಮೇರಿ 50 ವರ್ಷ. ಮೂಲತಃ ತಮಿಳುನಾಡಿನವರಾಗಿರುವ ಇವರು 20 ವರ್ಷದ ಹಿಂದೆಯೇ ಬೊಮ್ಮನಹಳ್ಳಿ ಸಮೀಪದ ಬೇಗೂರಿಗೆ ಬಂದು ಬದುಕು ಕಟ್ಟಿಕೊಂಡಿದ್ರು. ಐದು ವರ್ಷದ ಹಿಂದಷ್ಟೇ ಲೂಕಾಸ್ ಲೇಔಟ್ ನ ಇದೇ ಬಾಡಿಗೆ ಮನೆಯಲ್ಲಿ ವಾಸವಿದ್ರು. ಪತಿ ಅರೋಗ್ಯಸ್ವಾಮಿ ಅನಾರೋಗ್ಯದಿಂದ ಬಳಲ್ತಿದ್ದಾರೆ. 28 ವರ್ಷದ ಮಗ ದೀಪಕ್ ಗೂ ಪಿಟ್ಸ್ ಇದೆ. ಮಗಳು ಜಾಯಿಸ್ ಮೇರಿ ಮದುವೆಯಾಗಿದ್ದು ಎರಡು ವರ್ಷ ಹಿಂದಷ್ಟೇ ಪತಿ ತೀರಿಕೊಂಡು ತಾಯಿ ಮನೆಯಲ್ಲಿಯೇ ವಾಸವಿದ್ದಾಳೆ. ಮಡಿವಾಳ ಮಾರ್ಕೆಟ್ ನಲ್ಲಿ ಸೊಪ್ಪು ಮಾರಿ ಇಡೀ ಕುಟುಂಬವನ್ನೇ ಸಾಕ್ತಿದ್ಳು. ಆದರೆ ಆಕೆಯ ಸಾವು ಇಡೀ ಕುಟುಂಬವೇ ಬೀದಿಗೆ ಬೀಳುವಂತೆ ಮಾಡಿದೆ. ಇದನ್ನೂ ಓದಿ: ಉಡುಪಿಯ ಯುಪಿಸಿಎಲ್‍ಗೆ ಹಸಿರುಪೀಠ ಚಾಟಿ – ಅವಾಂತರಕ್ಕೆ 52 ಕೋಟಿ ರೂ. ದಂಡ

    ಮಗ ದೀಪಕ್ ಮೊಬೈಲ್ ಡಿಸ್ಪ್ಲೇ ಮೂರು ತಿಂಗಳ ಹಿಂದೆಯೇ ಒಡೆದುಹೋಗಿತ್ತು. ಅಂದಿನಿಂದ ತಾಯಿಗೆ ಹೊಸ ಮೊಬೈಲ್ ಕೊಡಿಸುವಂತೆ ಗಂಟುಬಿದ್ದಿದ್ದ. ಆದರೆ ತಾಯಿ ಮಾತ್ರ ದುಡ್ಡಿಲ್ಲ ಜೀವನ ಸಾಗಿಸೋದೆ ಕಷ್ಟ ಆಗಿದೆ ಸ್ವಲ್ಪದಿನ ಕಾಯುವಂತೆ ಹೇಳಿದ್ಳು. ಜೂನ್ 1ರಂದು ಎಂದಿನಂತೆ ಫಾತಿಮಾ ಮೇರಿ ಗಂಡ ಆರೋಗ್ಯಸ್ವಾಮಿ ಹಾಗೂ ಮಗ ಪದೀಪಕ್ ಮೂರು ಗಂಟೆಗೆ ಎದ್ದು ಮಡಿವಾಳ ಮಾರ್ಕೆಟ್ ಗೆ ತೆರಳಿ ಸೊಪ್ಪು ವ್ಯಾಪಾರ ಮುಗಿಸಿ ಮನೆಗೆ ಬಂದಿದ್ರು. ಸ್ವಲ್ಪಹೊತ್ತು ಮಲಗಿ 10 ಗಂಟೆ ಸುಮಾರಿಗೆ ಫಾತಿಮಾ ಮೇರಿ ನೈಸ್ ರಸ್ತೆ ಪಕ್ಕದಲ್ಲೇ ಇರೊ ಮೈಲಸಂದ್ರ ಬಳಿಯ ತೋಟಕ್ಕೆ ನಾಳೆಗೆ ಅಂತಾ ಸೊಪ್ಪು ಕೀಳಲು ಬ್ಯಾಗ್ ಹಿಡಿದು ಬಂದಿದ್ದಾರೆ. ಮಧ್ಯಾಹ್ನ 12 ಗಂಟೆ ಆಗ್ತಿದ್ದಂತೆ ಮಲಗಿದ್ದ ಮಗನನ್ನ, ತಂಗಿ ಜಾಯಿಸ್ ಮೇರಿ ಬಳಿ ಕರೆತರುವಂತೆ ಹೇಳಿ ಕಳಿಸಿದ್ದಾಳೆ. ಈ ವೇಳೆ ತಾಯಿ ಬಳಿ ಬಂದವನು ಮೊಬೈಲ್ ಕೊಡಿಸುವಂತೆ ಕೇಳಿಕೊಂಡಿದ್ದ. ತಾಯಿ ಒಪ್ಪದಿದ್ದಾಗ ಜಗಳವಾಗಿದೆ. ತಾಯಿ ಮಗನಿಗೆ ಥಳಿಸಿದ್ದಾಳೆ. ಈತನು ಹೊಡೆದಿದ್ದ. ಕೋಪಗೊಂಡ ದೀಪಕ್ ತಾಯಿ ಉಟ್ಟಿದ್ದ ಅದೇ ಸೀರೆಯಿಂದ ಕತ್ತು ಬಿಗಿದು ಕೊಂದೇ ಬಿಟ್ಟಿದ್ದ.

    ಬಳಿಕ ಸ್ಥಳೀಯರು ಕೊಟ್ಟ ಮಾಹಿತಿ ಮೇರೆಗೆ ಆರೋಪಿ ಮಗ ದೀಪಕ್ ನನ್ನ ಬೇಗೂರು ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.

  • 100 ಅಡಿ ಆಳದ ಹಳ್ಳಕ್ಕೆ ಬಿದ್ದ ಸ್ಕೂಲ್ ಬಸ್ – ಚಾಲಕನಿಗೆ ಗಂಭೀರ ಗಾಯ

    100 ಅಡಿ ಆಳದ ಹಳ್ಳಕ್ಕೆ ಬಿದ್ದ ಸ್ಕೂಲ್ ಬಸ್ – ಚಾಲಕನಿಗೆ ಗಂಭೀರ ಗಾಯ

    ಬೆಂಗಳೂರು: ಬೆಳ್ಳಂಬೆಳಗ್ಗೆ ಶಾಲಾ ಬಸ್ ಒಂದು ಅಪಘಾತಕ್ಕೀಡಾಗಿ, ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಗುರುವಾರ ಬೆಳಗ್ಗೆ ಬೊಮ್ಮನಹಳ್ಳಿ ಸಮೀಪದ ಕೂಡ್ಲು ಬಳಿ ನಡೆದಿದೆ.

    ಹೆಚ್‌ಎಸ್‌ಆರ್ ಲೇಔಟ್‌ನ ಫ್ರೀಡಂ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ಸೇರಿದ ಬಸ್, ಬೆಳಗ್ಗೆ ವಿದ್ಯಾರ್ಥಿಗಳನ್ನು ಕರೆತರಲು ಹೋಗಿತ್ತು. ಈ ವೇಳೆ ಕೂಡ್ಲು ಬಳಿ ಇದ್ದ ಬಂಡೆ ಹಳ್ಳಕ್ಕೆ ಶಾಲಾ ಬಸ್ ಬಿದ್ದಿದೆ. ಇದನ್ನೂ ಓದಿ: ಯೋಧರು ಪ್ರಯಾಣಿಸುತ್ತಿದ್ದ ವಾಹನ ಸ್ಫೋಟ: 3 ಸೈನಿಕರ ಸ್ಥಿತಿ ಗಂಭೀರ

    ಅದೃಷ್ಟವಶಾತ್ ಘಟನೆ ವೇಳೆ ಬಸ್‌ನಲ್ಲಿ ಮಕ್ಕಳು ಇರಲಿಲ್ಲ. ಆದರೆ ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಹಾಸನ ಕಟ್ಟಿನಕೆರೆ ಮಾರುಕಟ್ಟೆ ಬಂದ್ – 500ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್

    ಕೂಡ್ಲು ಬಳಿಯ ರಸ್ತೆ ಪಕ್ಕ ಇರುವ ಬಂಡೆ ಹಳ್ಳ 100 ಅಡಿಗೂ ಹೆಚ್ಚು ಆಳವಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಹಳ್ಳವನ್ನು ಮುಚ್ಚಿಸಲು ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರು. ಆದರೂ ಯಾವುದೇ ಪ್ರಯೋಜನವಾಗಿರದ ಕಾರಣ ಇದೀಗ ಅಪಘಾತದಿಂದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಯೋಗದಿಂದ ಸ್ಥಿತಪ್ರಜ್ಞೆ, ಸಮಯಪ್ರಜ್ಞೆ, ಸಾತ್ವಿಕತೆಯಿರುವ ಆರೋಗ್ಯಕರ ಸಮಾಜ ನಿರ್ಮಾಣ: ಸಿಎಂ

    ಯೋಗದಿಂದ ಸ್ಥಿತಪ್ರಜ್ಞೆ, ಸಮಯಪ್ರಜ್ಞೆ, ಸಾತ್ವಿಕತೆಯಿರುವ ಆರೋಗ್ಯಕರ ಸಮಾಜ ನಿರ್ಮಾಣ: ಸಿಎಂ

    ಆನೇಕಲ್: ಯೋಗದಿಂದ ಸ್ಥಿತಪ್ರಜ್ಞೆ, ಸಮಯಪ್ರಜ್ಞೆ, ಸಾತ್ವಿಕತೆಯಿರುವ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬ ಮಕ್ಕಳಲ್ಲೂ ಯೋಗದ ಅರಿವು ಮೂಡಿಸುವ ಕೆಲಸ ಮಾಡಬೇಕು. ಭಾರತವನ್ನು ಭವ್ಯ ಭಾರತವನ್ನಾಗಿ ಮಾಡುವ ಕನಸು ನನಸಾಗಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಬೊಮ್ಮಾಯಿ ಅವರು ಇಂದು ಬೆಂಗಳೂರು ಹೊರವಲಯದ ಜಿಗಿಣಿ ಸಮೀಪದ ಪ್ರಶಾಂತಿ ಕುಟೀರ ಎಸ್.ವ್ಯಾಸ ಸ್ವಾಯತ್ತ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿರುವ 24th International Conference of Frontiers and Yoga Research and Its Application(INCOFYRA) ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಜಗ್ಗೇಶ್, ನಿರ್ಮಲಾ ಸೀತರಾಮನ್‍ಗೆ ಸಿಕ್ತು ಬಿಜೆಪಿ ಟಿಕೆಟ್ 

    ಮನಸ್ಸಿನ ಏಕಾಗ್ರತೆಗೆ ಯೋಗ ಮತ್ತು ಧ್ಯಾನ ಪೂರಕವಾಗಿವೆ. ಯೋಗದಿಂದ ಮನಸ್ಸಿನ ಸಮಚಿತ್ತತೆಯನ್ನು ಪಡೆಯುವವರು ಸೃಷ್ಟಿಯ ಭಾಗವಾಗಿ ಮೋಕ್ಷವನ್ನು ಪಡೆಯುತ್ತಾರೆ. ಈಗ ಮನುಷ್ಯ ಸಂಪತ್ತು ಹಾಗೂ ಹಣ ಗಳಿಕೆಯನ್ನು ಗುರಿಯಾಗಿಸಿಕೊಂಡಿದ್ದಾನೆ. ಈ ರೀತಿಯ ಚಿಂತನೆ ಬದಲಾಗಿ ಮಾನವನ ಒಳಿತನ್ನು ಗುರಿಯಾಗಿಸಿಕೊಂಡರೆ, ವಿಶ್ವವೇ ಒಂದು ಸುಂದರ ತಾಣವಾಗುತ್ತದೆ ಎಂದರು.

    ಮನುಷ್ಯನಿಗೆ ಯೋಚನಾಶಕ್ತಿ ಅಭೂತಪೂರ್ವವಾಗಿದೆ. ಮನುಕುಲಕ್ಕೆ ಒಗ್ಗಿಕೊಳ್ಳುವಿಕೆಯ ಗುಣವಿದೆ. ಮನುಷ್ಯನೊಳಗೆ ಎಲ್ಲ ಸಮಸ್ಯೆಗಳಿಗೆ ಉತ್ತರವಿದೆ. ನಮ್ಮ ದೇಹದೊಳಗಿನ ಎಲ್ಲ ಸಮಸ್ಯೆಗಳಿಗೆ ಯೋಗದಲ್ಲಿ ಪರಿಹಾರವಿದೆ. ಮನಸ್ಸು ಹಾಗೂ ದೇಹವನ್ನು ಸದೃಢಗೊಳಿಸಲು ಯೋಗ ಸಹಕರಿಸುತ್ತದೆ. ತನ್ನ ಮೇಲೆ ನಿಯಂತ್ರಣಹೊಂದಿರುವವನೇ ನಿಜವಾದ ಯೋಗಿ. ಯೋಗಿಯಾದವರು ಮಾತ್ರ ಯುಗಪುರುಷರಾಗಲು ಸಾಧ್ಯ ಎಂದು ತಿಳಿಸಿದರು.

    ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ. ಆತ್ಮ ಶಾಶ್ವತವಾಗಿರುವಂಥದ್ದು, ತೃಪ್ತಿಕರವಾದ ಜೀವನವನ್ನು ನಡೆಸಲು ಆರೋಗ್ಯಕರ ದೇಹ ಮತ್ತು ಮನಸ್ಸು ಅಗತ್ಯ. ಮನುಷ್ಯ ತನ್ನ ಬಾಲ್ಯದಲ್ಲಿರುವ ಮುಗ್ಧತೆಯನ್ನು ಕೊನೆಯವರೆಗೆ ಇರಿಸಿಕೊಳ್ಳಬೇಕು. ಯೋಗಗುರುಗಳ ಕಣ್ಣುಗಳಲ್ಲಿ ಕಾಂತಿಯಿರುತ್ತದೆ. ಯೋಗದಿಂದ ಜೀವನದಲ್ಲಿ ಪರಿಪೂರ್ಣತೆ ಸಾಧಿಸುವ ಮುಗ್ಧತೆಯನ್ನು ಕಾಯ್ದುಕೊಳ್ಳಬಹುದು. ದೇವರು ನೀಡಿದ್ದನ್ನು ಯೋಗದಿಂದ ನಿರಂತರವಾಗಿ ಕಾಪಾಡಿಕೊಳ್ಳಬಹುದು ಎಂದು ವಿವರಿಸಿದರು.

    ದೇಹದ ಮೆಟಬಾಲಿಸಂಗಾಗಿ ಯೋಗ ಅವಶ್ಯಕ. ಯಾರ ಬದುಕಿನಲ್ಲಿ ನಗುವಿರುತ್ತದೋ, ಅಂತಹವರು ಆನಂದದಿಂದ ಅರ್ಥಪೂರ್ಣವಾಗಿ ಬದುಕುತ್ತಾರೆ. ಜೀವನದ ಸಣ್ಣ-ಸಣ್ಣ ಖುಷಿಗಳ ಆನಂದವನ್ನು ಪಡೆಯಬೇಕು. ಮನಸ್ಸನ್ನು ನಿಗ್ರಹಿಸಿ ಸ್ಥಿತಪ್ರಜ್ಞತೆಯನ್ನು ಕಾಯ್ದುಕೊಳ್ಳಬೇಕು. ಎಸ್.ವ್ಯಾಸ ವಿಶ್ವವಿದ್ಯಾಲಯ ಭವಿಷ್ಯದ ನಾಸವನ್ನು ನಿರ್ಮಿಸುತ್ತಿದೆ. ಆರೋಗ್ಯಕರ ಮನಸ್ಸು ಮತ್ತು ದೇಹ ಮಾತ್ರ ವೈಜ್ಞಾನಿಕ ಚಿಂತನೆ ಮಾಡಲು ಸಾಧ್ಯ. ಆಧ್ಯಾತ್ಮ, ವೈಜ್ಞಾನಿಕ ಚಿಂತನೆಗೆ ದಾರಿಮಾಡಿಕೊಡುತ್ತದೆ. ಯೋಗ ಒಂದು ವಿಜ್ಞಾನ. ಈ ವಿಜ್ಞಾನವನ್ನು ಅಧ್ಯಯನ ಮಾಡಿ, ಅರ್ಥೈಸಿಕೊಂಡು, ದಾಖಲಿಸಿ, ಬೋಧಿಸುವ ಕೆಲಸವನ್ನು ವಿಶ್ವವಿದ್ಯಾಲಯದ ಮುಖ್ಯಸ್ಥರು ಮಾಡುತ್ತಿರುವುದು ಶ್ಲಾಘನೀಯ. ಯೋಗದ ಮೂಲಕ ನಮ್ಮನ್ನು ನಾವೇ ಮರೆತು ಸಾತ್ವಿಕತೆ ಅರಿವು ಮೂಡಿಸುವ ಕೇಂದ್ರವಾಗಿದೆ. ಈ ಕೇಂದ್ರದ ಎಲ್ಲ ಯೋಜನೆಗಳಿಗೆ ಸರ್ಕಾರದ ಸಹಕಾರ ಇರಲಿದೆ ಎಂದು ಭರವಸೆ ಕೊಟ್ಟರು. ಇದನ್ನೂ ಓದಿ: ಅಂಡರ್‌ವೇರ್‌ನಲ್ಲಿ ಬಂದು ಮತ ಚಲಾಯಿಸಿದ್ರೆ, ಒಳ ಉಡುಪು ಫ್ರೀ 

    ಭಾರತ ದೇಶದ ಮೌಲ್ಯ, ಸಂಸ್ಕೃತಿ, ಪರಂಪರೆಗಳು ಅಮೂಲ್ಯವಾದವು. ಭಾರತದ ಅಂತರ್ಗತ ಶಕ್ತಿಯನ್ನು ಇಡೀ ಜಗತ್ತಿಗೆ ತಿಳಿಹೇಳಲು ಚಿಂತನೆಯಿಂದ ಪ್ರಧಾನಿ ಮೋದಿ ಅವರು ಯೋಗವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ್ದಾರೆ. ಆಯುಷ್ ಇಲಾಖೆ ಸ್ಥಾಪಿಸಿ ಯೋಗದ ಅರಿವು ಮೂಡಿಸುತ್ತಿರುವ ಪ್ರಧಾನಿ ಅವರ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ನಾಯಕನ ನೇತೃತ್ವದಲ್ಲಿ ಯೋಗವನ್ನು ಮುಂದುವರೆಸೋಣ. ಬರುವ ವರ್ಷದಿಂದ ಶಾಲೆಗಳಲ್ಲಿ ಯೋಗಶಿಕ್ಷಣವನ್ನು ನೀಡಲು ವಿಶೇಷ ಕಾರ್ಯಕ್ರಮವನ್ನು ಸರ್ಕಾರ ರೂಪಿಸಲಿದೆ ಎಂದರು.

  • ಜನಿಸಿದ ಕೆಲವೇ ನಿಮಿಷಗಳಲ್ಲಿ ಪುಟ್ಟ ಕಂದಮ್ಮನನ್ನು ರಸ್ತೆಗೆ ಎಸೆದ ತಾಯಿ

    ಜನಿಸಿದ ಕೆಲವೇ ನಿಮಿಷಗಳಲ್ಲಿ ಪುಟ್ಟ ಕಂದಮ್ಮನನ್ನು ರಸ್ತೆಗೆ ಎಸೆದ ತಾಯಿ

    ಆನೇಕಲ್: ನವಜಾತ ಶಿಶುವನ್ನು ಹೆತ್ತ ತಾಯಿಯೇ ರಸ್ತೆಗೆ ಎಸೆದು ಹೋಗಿದ್ದು, ಸ್ಥಳೀಯರು ಮಗುವಿನ ಅಳುವಿನ ಶಬ್ದ ಕೇಳಿ ರಕ್ಷಣೆ ಮಾಡಿರುವ ಘಟನೆ ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿ ನಡೆದಿದೆ.

    ಮುಂಜಾನೆ ವಿವರ್ಸ್ ಕಾಲೋನಿಯ 5ನೇ ಕ್ರಾಸ್ ರಸ್ತೆ ಬದಿಯಲ್ಲಿ ಮಗುವಿನ ಅಳುವಿನ ಶಬ್ದ ಕೇಳಿಸಿಕೊಂಡ ನಿವಾಸಿಗಳು ಹೊರ ಬಂದು ನೋಡಿದಾಗ ರಕ್ತಸಿಕ್ತ ಸ್ಥಿತಿಯಲ್ಲಿ ಆಗಷ್ಟೇ ಜನಿಸಿದ ಮಗು ಪತ್ತೆಯಾಗಿದೆ. ಅಕ್ಕಪಕ್ಕದ ನಿವಾಸಿಗಳು ಮಗುವನ್ನು ರಕ್ಷಣೆ ಮಾಡಿದ್ದು, ಏರಿಯಾದ ಚೂಡಾಮಣಿ ಎಂಬ ಮಹಿಳೆ ರಕ್ತಸಿಕ್ತವಾಗಿದ್ದ ಮಗುವನ್ನು ಶುಚಿ ಮಾಡಿ ಸ್ನಾನ ಮಾಡಿಸಿದ್ದಾರೆ.

    ಇನ್ನೂ ಪ್ರಪಂಚವೇ ಅರಿಯದ ಹಸುಗೂಸುನ್ನು ರಸ್ತೆಗೆಸೆದಿರುವ ಹೆತ್ತಮ್ಮ ಅಪ್ರಾಪ್ತೆ ಇಲ್ಲವೇ ಅನೈತಿಕ ಸಂಬಂಧಕ್ಕೆ ಜನಿಸಿರುವ ಸಂಶಯ ವ್ಯಕ್ತವಾಗಿದ್ದು, ಪುಟ್ಟ ಕಂದನನ್ನು ರಸ್ತೆಯಲ್ಲಿ ಎಸೆದು ಹೋಗಿರುವ ನಿರ್ದಯಿ ತಾಯಿಯ ವಿರುದ್ಧ ಸ್ಥಳೀಯರು ಆಕ್ರೋಶವನ್ನು ಹೊರಹಾಕಿದರು. ಇದನ್ನೂ ಓದಿ: ಕೆಲಸದಲ್ಲಿ ತೃಪ್ತಿ ಇಲ್ಲ – ಡೆತ್ ನೋಟ್ ಬರೆದು ಪೊಲೀಸ್ ಆತ್ಮಹತ್ಯೆ

    ವಿಷಯ ತಿಳಿದು ಸ್ಥಳಕ್ಕೆ ಬಂದ ಕೋಣನಕುಂಟೆ ಪೊಲೀಸರು ಬೇಟಿ ನೀಡಿದ್ದಾರೆ. ಬಳಿಕ ಕಂದಮ್ಮನನ್ನ ರಕ್ಷಣೆ ಮಾಡಿದ ಮಹಿಳೆ ಚೂಡಾಮಣಿ ಮಗುವನ್ನು ಸಾಕಲು ನಮ್ಮ ಸುಪರ್ದಿಗೆ ನೀಡಿ ಎಂದು ಗೊಗರೆದ್ದಾರೆ. ಆದರೆ ಕೊಂಣನಕುಂಟೆ ಪೊಲೀಸರು ನವಜಾತ ಹೆಣ್ಣು ಮಗುವನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈಗಲೂ ಬೇಕಾದ್ರೆ ಅವಳನ್ನೇ ಮದುವೆ ಆಗ್ತೀನಿ: ಆ್ಯಸಿಡ್ ನಾಗನ ದುರಹಂಕಾರದ ಮಾತು

  • ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಹೊತ್ತಿ ಉರಿದ ಫ್ಲವರ್ ಡೆಕೊರೇಷನ್ ಗೋದಾಮು

    ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಹೊತ್ತಿ ಉರಿದ ಫ್ಲವರ್ ಡೆಕೊರೇಷನ್ ಗೋದಾಮು

    ಆನೇಕಲ್: ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಫ್ಲವರ್ ಡೆಕೊರೇಷನ್ ಗೋದಾಮಿಗೆ ಬೆಂಕಿ ಹೊತ್ತಿಕೊಂಡು 20 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಬಳಿ ನಡೆದಿದೆ.

    ಕುಮಾರ್ ಎಂಬವರಿಗೆ ಸೇರಿದ ಫ್ಲವರ್ ಡೆಕೊರೇಷನ್ ಗೋದಾಮಿಗೆ ಶನಿವಾರ ತಡರಾತ್ರಿ ಬೆಂಕಿ ಬಿದ್ದಿದೆ. ಫೈಬರ್ ಹಾಗೂ ಪ್ಲಾಸ್ಟಿಕ್ ವಸ್ತುಗಳು ಹೆಚ್ಚಾಗಿದ್ದರಿಂದ ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಇಡೀ ಗೋದಾಮಿಗೆ ಆವರಿಸಿಕೊಂಡಿದೆ. ಇದೇ ಗೋದಾಮಿನ ಪಕ್ಕದಲ್ಲಿ ಸ್ಕ್ರಾಪ್ ಗೋದಾಮು ಇದ್ದವು.

    ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಆನೇಕಲ್ ಪಟ್ಟಣದ ಅಗ್ನಿಶಾಮಕ ಠಾಣೆಯ ಎರಡು ವಾಹನಗಳು ಹಾಗೂ ಸಿಬ್ಬಂದಿ 3 ಗಂಟೆಗೂ ಹೆಚ್ಚು ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿಯ ಕೆನ್ನಾಲಿಗೆ ಹತೋಟಿಗೆ ತಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಆರಂಭ – ಡಾ. ಸಿ.ಎನ್.ಮಂಜುನಾಥ್ ಎಚ್ಚರಿಕೆ

    ತಿಮ್ಮರಾಯಸ್ವಾಮಿ ದೇವಾಲಯಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದರಿಂದ ರಾತ್ರಿ ಸಮಯದಲ್ಲಿ ಯಾರಾದರೂ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರಾ ಅಥವಾ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದೆಯಾ ಎನ್ನುವ ಬಗ್ಗೆ ಅನುಮಾನವಿದ್ದು, ಬೆಂಕಿ ಹೊತ್ತಿಕೊಳ್ಳುತ್ತಿದ್ದರೂ ಅಕ್ಕಪಕ್ಕದ ನಿವಾಸಿಗಳಿಗೆ ಕೆಲಹೊತ್ತು ಏನಾಯ್ತು ಎಂದು ಗೊತ್ತಾಗದೇ ಸ್ಥಳದಲ್ಲಿ  ಜಮಾಯಿಸಿದ್ದರು.

    ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಠಾಣೆಯ ಸಿಬ್ಬಂದಿಗೆ ಸ್ಥಳೀಯರು ಕೂಡ ಸಹಕಾರ ನೀಡಿದರು. ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಬಳಿ ಶಾಶ್ವತವಾಗಿ ಇರಿಸಲಾಗಿದೆ: ರಾಜಸ್ಥಾನ ಸಿಎಂ

  • ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

    ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

    ಆನೇಕಲ್: ನೂರಾರು ಕುಟುಂಬಗಳು ವಾಸಿಸುತ್ತಿರುವ ಪ್ರತಿಷ್ಠಿತ ಲೇಔಟ್‌ನಲ್ಲಿ ಕಳೆದ(ಶನಿವಾರ) ರಾತ್ರಿ ಕಳ್ಳತನ ಮಾಡಲು ದರೋಡೆಕೋರ ಬಂದಿದ್ದಾನೆ. ಲೇಔಟ್ ಕಾಂಪೌಂಡ್ ಹಾರಿ ಒಳನುಗ್ಗಿದ ಕಳ್ಳ ಮನೆಯ ಬಾಗಿಲು ಒಡೆದು ರಾಬರಿ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಎಚ್ಚರಗೊಂಡ ಮನೆಯವರು ಸಿನಿಮೀಯ ರೀತಿಯಲ್ಲಿ ದರೋಡೆಕೋರನ ಬಳಿ ಇದ್ದ ಲಾಂಗು, ಮಚ್ಚುಗಳನ್ನ ಕಸಿದು, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಏನಾಯಿತು?
    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ಖಾಸಗಿ ಬಡಾವಣೆಯಲ್ಲಿ ಬೃಹತ್ ಗಾತ್ರದ ಕಾಂಪೌಂಡ್ ಹಾಕಲಾಗಿತ್ತು. ಸೆಕ್ಯುರಿಟಿ ಗಾರ್ಡ್‍ಗಳ ಭದ್ರತೆ ಸಹ ಹೆಚ್ಚಾಗಿತ್ತು. ಈ ಬಡಾವಣೆಯೊಳಗೆ 3:45 ರ ಸಮಯದಲ್ಲಿ ಕಾಂಪೌಂಡ್ ಹಾರಿ ಕಳ್ಳನೊಬ್ಬ ಒಳಗೆ ಬಂದಿದ್ದಾನೆ. ಒಳಗಿನ ʼವಿಲ್ಲಾʼ ಒಂದರ ಮೆಟ್ಟಿಲು ಹತ್ತಿ ಮೇಲೆ ಮಹಡಿಯಲ್ಲಿದ್ದ ಬಾಗಿಲನ್ನು ಕಬ್ಬಿಣದ ಸರಳಿನಿಂದ ಒಡೆದು ಒಳಗೆ ನುಗ್ಗಲು ಯತ್ನಿಸಿದ್ದಾನೆ. ಇದನ್ನೂ ಓದಿ: ಹನುಮಾನ್ ಮೆರವಣಿಗೆಗೆ ಪುಷ್ಪವೃಷ್ಟಿ ಸುರಿಸಿದ ಮುಸ್ಲಿಮರು

    ಬಾಗಿಲು ಒಡೆದು ಒಳ ಬರುತ್ತಿದ್ದ ಶಬ್ದ ಕೇಳುತ್ತಿದ್ದಂತೆ ಮನೆಯಲ್ಲಿದ್ದ ಮಹಿಳೆ ಬಾಗಿಲ ಬಳಿ ಬಂದು ಆತನ ಬಳಿಯಿದ್ದ ಕಬ್ಬಿಣ ಗಮನಿಸಿದ್ದಾಳೆ. ಈ ವೇಳೆ ಆಕೆಯನ್ನು ಗಮನಿಸಿದ ಕಳ್ಳ ಆಕೆ ಮೇಲೆ ದಾಳಿ ಮಾಡಲು ಮುಂದಾಗುತ್ತಾನೆ. ಮನೆಯ ಕೆಳಮಹಡಿಯಲ್ಲಿ ಮಲಗಿದ್ದ ವಾಮದೇವ್ ಶರ್ಮಾ ಮೇಲೆ ಓಡಿ ಬಂದಿದ್ದು, ಕೈಯಲ್ಲಿ ಲಾಂಗು ಹಿಡಿದು ಕಬ್ಬಿಣದ ರಾಡ್ ಮೂಲಕ ಸೊಸೆಗೆ ಹಲ್ಲೆ ಮಾಡುತ್ತಿರುವುದನ್ನು ನೋಡಿದ್ದಾರೆ. ಕೂಡಲೇ ಬಲಗೈಯಲ್ಲಿ ಆತ ಹಿಡಿದಿದ್ದ ಲಾಂಗ್ ಕಸಿದುಕೊಳ್ಳಲು ಯತ್ನಿಸಿದ್ದಾರೆ.

    ಬೆರಳು ಕತ್ತರಿಸು ಹಂತದಲ್ಲಿತ್ತು
    ಈ ವೇಳೆ ಶರ್ಮಾ ಅವರ ಬಲಗೈ ಬೆರಳುಗಳು ಲಾಂಗ್‍ನಿಂದ ಕತ್ತರಿಸುವ ಹಂತಕ್ಕೆ ಬಂದಿದ್ದರೂ ಸಹ ಮನೆಯಲ್ಲಿ ಮಗು, ಸೊಸೆ ಹಾಗೂ ಮಗನಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಕಳ್ಳನ ಜೊತೆ ಹೋರಾಟ ನಡೆಸಿದ್ದಾರೆ. ತಮ್ಮ ಮನೆಯ ಅಕ್ಕಪಕ್ಕದಲ್ಲಿ ಇದ್ದವರು ಶರ್ಮ ಅವರು ಕೂಗಾಡಿ ಕೊಳ್ಳುತ್ತಿರುವ ಶಬ್ದ ಕೇಳಿ ಓಡಿ ಬಂದಿದ್ದಾರೆ. ಬಳಿಕ ಸ್ಥಳೀಯರು ಸೇರಿ ಆರೋಪಿಯನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಲು ಮುಂದಾದಾಗ ಕಿರಾತಕ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ್ದಾನೆ. ಇದನ್ನೂ ಓದಿ: ಅಗೌರವ ತೋರಿದ ಅಧಿಕಾರಿಗಳಿಗೆ ನಡುರಸ್ತೆಯಲ್ಲೇ ತರಾಟೆ ತೆಗೆದುಕೊಂಡ ಮೇಯರ್ 

    ಬಡಾವಣೆಯಲ್ಲಿದ್ದ ಕಾವಲುಗಾರ ಹಾಗೂ ಸ್ಥಳೀಯರು ಆತನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸರ್ಜಾಪುರ ಇನ್‍ಸ್ಪೆಕ್ಟರ್ ರಾಘವೇಂದ್ರ ಹಾಗೂ ಸಿಬ್ಬಂದಿಗಳನ್ನು ಬಂಧಿಸಲು ತೆರಳಿದಾಗಲು ಪೊಲೀಸರಿಂದಲೂ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆತನ ಬೆನ್ನು ಹತ್ತಿ ಬಂಧಿಸಿ ಠಾಣೆಗೆ ಕರೆತಂದಿದ್ದು, ದೂರು ದಾಖಲಿಸಿಕೊಂಡು ವಿಚಾರಣೆಯನ್ನ ನಡೆಸುತ್ತಿದ್ದಾರೆ.

  • ಸೋಮೇಶ್ವರ ದೇವಾಲಯ ಜಾಗಕ್ಕೆ ಕಿತ್ತಾಟ: ವ್ಯಕ್ತಿಯ ವಿರುದ್ಧ ತಿರುಗಿಬಿದ್ದ ಗ್ರಾಮಸ್ಥರು

    ಸೋಮೇಶ್ವರ ದೇವಾಲಯ ಜಾಗಕ್ಕೆ ಕಿತ್ತಾಟ: ವ್ಯಕ್ತಿಯ ವಿರುದ್ಧ ತಿರುಗಿಬಿದ್ದ ಗ್ರಾಮಸ್ಥರು

    ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಮಡಿವಾಳ ಗ್ರಾಮದಲ್ಲಿ ಸೋಮೇಶ್ವರ ದೇವಾಲಯಕ್ಕೆ ಸೇರಿದ ಜಾಗದ ವಿವಾದ ಕೆಲ ಘಂಟೆಗಳ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

    ಇಲ್ಲಿನ ಖಾಸಗಿ ವ್ಯಕ್ತಿ ಮುನಿರಾಜು ಮರಸೂರು ಗ್ರಾಮ ಪಂಚಾಯ್ತಿಯಲ್ಲಿ ಅಕ್ರಮವಾಗಿ ಸೋಮೇಶ್ವರ ದೇವಾಲಯಕ್ಕೆ ಸೇರಿದ ಜಾಗವನ್ನು ಕಬಳಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಊರಿನ ಗ್ರಾಮಸ್ಥರು ಆತನ ವಿರುದ್ಧ ತಿರುಗಿಬಿದ್ದಿದ್ದರು. ಇದನ್ನೂ ಓದಿ: ಆಧಾರ್ ಕಾರ್ಡ್ ಇರೋರೆಲ್ಲ ಭಾರತೀಯರು: ವಚನಾನಂದ ಶ್ರೀ

    ಇದೇ ಜಾಗದಲ್ಲಿ ಮುಸ್ಲಿಮರ ಕಡೆಯಿಂದ ಇಲ್ಲಿನ ಸ್ಥಳೀಯ ವ್ಯಕ್ತಿಯಾದ ಮುನಿರಾಜುಗೆ ಮಾರಾಟ ಮಾಡಿರುವುದಾಗಿ ದಾಖಲೆಗಳಿವೆ. ಹೀಗಾಗಿ ಮುನಿರಾಜು ನನಗೆ ಸೇರಿದ ಜಾಗ ಅಂತ ಸರ್ವೆ ಮಾಡಿಕೊಂಡಿದ್ದರು. ಅದಕ್ಕಾಗಿ ಕೆಲ ಘಂಟೆಗಳ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನೂ ಓದಿ: ಕಲಾವಿದನ ನಾಲಿಗೆಯಿಂದ ಅರಳಿತು ಅಂಬೇಡ್ಕರ್ ಚಿತ್ರ

    ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ದಂಡಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೋಮೇಶ್ವರ ದೇವಾಲಯದ ಜಾಗವನ್ನು ಬಿಟ್ಟುಕೊಡುವಂತೆ ಸೂಚಿಸಿದರು. ಈ ವೇಳೆ ಕೆಲ ಗಂಟೆಗಳ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.