Tag: anekal

  • ಬೆಳ್ಳಂಬೆಳಗ್ಗೆ ರಾಜ್ಯದ 9 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ- ಕಡತಗಳ ಪರಿಶೀಲನೆ

    ಬೆಳ್ಳಂಬೆಳಗ್ಗೆ ರಾಜ್ಯದ 9 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ- ಕಡತಗಳ ಪರಿಶೀಲನೆ

    ಬೆಂಗಳೂರು: ಏಕಕಾಲಕ್ಕೆ ರಾಜ್ಯದ 9 ಕಡೆಗಳಲ್ಲಿ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಒಂಭತ್ತು ಜಿಲ್ಲೆಗಳ ಆರ್ ಟಿಓ (RTO) ಚೆಕ್ ಪೋಸ್ಟ್ ಗಳ ಮೇಲೆ ಬೆಳಗ್ಗೆ 4 ಗಂಟೆಯಿಂದ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಗಳೂರು, ಅತ್ತಿಬೆಲೆ, ವಿಜಯಪುರದ ಜಳಲಿ ಪೋಸ್ಟ್, ಬೆಳಗಾವಿಯ ನಿಪ್ಪಾಣಿ, ಚಿಕ್ಕಬಳ್ಳಾಪುರದ ಬಾಗೇಪಲ್ಲಿ, ಕೋಲಾರದ ನಂಗ್ಲಿ, ಬಳ್ಳಾರಿ, ಕೊಪ್ಪಳ, ಹೊಸಪೇಟೆ, ಗುಂಡ್ಲುಪೇಟೆ, ಬೀದರ್ ನ ಹುಮನಬಾದ್ ಚೆಕ್ ಪೋಸ್ಟ್ ಮೇಲೆ ದಾಳಿ ಮಾಡಿದ್ದಾರೆ.

    ಚೆಕ್ ಪೋಸ್ಟ್ ಗಳಲ್ಲಿ ಮಧ್ಯವರ್ತಿಗಳು ಹಾಗೂ ಲಂಚಕ್ಕೆ ಬೇಡಿಕೆ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಕೃಷಿಕ ಎಂದಿದ್ದ ಡಿಕೆಶಿಗೆ ಶಾಕ್‌ ನೀಡಲು ಸಿಬಿಐ ತಯಾರಿ

    ಬೆಂಗಳೂರು ಹೊರವಲಯದ ಅತ್ತಿಬೆಲೆ ಆರ್ ಟಿಒ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. 2 ವಾಹನಗಳಲ್ಲಿ ಬಂದಿರುವ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆ 4 ಗಂಟೆಗೆ ಕಚೇರಿ ಮೇಲೆ ರೈಡ್ ಮಾಡಿದ್ದಾರೆ. ಅತ್ತಿಬೆಲೆ ಆರ್ ಟಿಒ ಕಚೇರಿ ಮೇಲೆ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಕಚೇರಿ ಒಳಗೆ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

    ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಷಿ ನೇತೃತ್ವದಲ್ಲಿ 20 ಮಂದಿ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬಂಧನದ ಭೀತಿಯಿಂದ ಕೇರಳಕ್ಕೆ ಎಸ್ಕೇಪ್ ಆದ್ರಾ ನಟಿ ಶ್ರೀಲೀಲಾ ತಾಯಿ?: ಮನೆಗೆ ಬೀಗ, ಮೊಬೈಲ್ ಆಫ್

    ಬಂಧನದ ಭೀತಿಯಿಂದ ಕೇರಳಕ್ಕೆ ಎಸ್ಕೇಪ್ ಆದ್ರಾ ನಟಿ ಶ್ರೀಲೀಲಾ ತಾಯಿ?: ಮನೆಗೆ ಬೀಗ, ಮೊಬೈಲ್ ಆಫ್

    ಲಯನ್ಸ್ ವಿವಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶ್ರೀಲೀಲಾ (Shrileela) ತಾಯಿ ಸ್ವರ್ಣಲತಾ ಅವರನ್ನು ಬಂಧಿಸಲು ಆನೇಕಲ್ ಪೊಲೀಸರು ಸಿದ್ಧತೆ ನಡೆಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ವರ್ಣಲತಾ ಎಸ್ಕೇಪ್ ಆಗಿದ್ದಾರೆ. ಕೋರಮಂಗಲದಲ್ಲಿರುವ ಸ್ವರ್ಣಲತಾ ಮನೆಗೆ ಬೀಗ ಹಾಕಿದ್ದು, ಅವರ  ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಹೀಗಾಗಿ ಬಂಧನದಿಂದ ತಪ್ಪಿಸಿಕೊಳ್ಳಲು ಅವರು ಕೇರಳಕ್ಕೆ ಹಾರಿದ್ದಾರೆ ಎನ್ನಲಾಗುತ್ತಿದೆ.

    ತಮಗೆ ಬೇಲ್ ಸಿಗುವತನಕ ಪೊಲೀಸರ ಕೈಗೆ ಸಿಗದಂತೆ ಸ್ವರ್ಣಲತಾ (Swarnalatha) ಎಸ್ಕೇಪ್ ಆಗಿದ್ದು, ಆನೇಕಲ್ ಪೊಲೀಸರು ಅವರಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಬಂಧನ ಮಾಡದಂತೆ ಪ್ರಭಾವಿ ಸಚಿವರಿಂದಲೂ ಕೂಡ ಪೊಲೀಸರ ಮೇಲೆ ಸ್ವರ್ಣಲತಾ ಒತ್ತಡ ಹೇರುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದ್ದು, ಆನೇಕಲ್ ಪೊಲೀಸರಿಗೆ ಹಲವು ಬಾರಿ ಪ್ರಭಾವಿ ಸಚಿವರು ಕರೆ ಕೂಡ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ:ನಾಗಚೈತನ್ಯ- ಸಮಂತಾ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಾರ್ಜುನ್

    ಖ್ಯಾತ ರಾಜಕಾರಣಿಯೊಬ್ಬರಿಗೆ ಅಲೆಯನ್ಸ್ (Alliance) ವಿಶ್ವ ವಿದ್ಯಾಲಯ ಮಾರಿಸಲು ಸ್ವರ್ಣಲತಾ ಮುಂದಾಗಿದ್ದರು ಎನ್ನುವ ಕಾರಣಕ್ಕಾಗಿ ಅವರ ಮೇಲೆ ದೂರು ದಾಖಲಾಗಿದೆ. ಇದರ ಹಿಂದೆ ನೂರಾರು ಕೋಟಿ ಡೀಲ್ ಕೂಡ ಇದೆ ಎಂದು ಹೇಳಲಾಗುತ್ತಿದೆ. ಮಧುಕರ್ ಅಂಗೂರ್ (Madhukar Angur) ಅವರಿಂದ ಯುನಿವರ್ಸಿಟಿ ಮಾರಾಟಕ್ಕೆ ಸ್ವರ್ಣಲತಾ ಡೀಲ್ ಕುದುರಿಸಿದ್ದರು ಎಂದು ಹೇಳಲಾಗಿದ್ದು, ಮಧುಕರ್ ಮತ್ತು ಸ್ವರ್ಣಲತಾ ಗೂಂಡಾಗಳ ಜೊತೆ ವಿವಿಗೆ ನುಗ್ಗಿ ಸಿಬ್ಬಂದಿಗೆ ಮತ್ತು ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ. ಸೆ.10ರಂದು ಬಂದೂಕು ಹಿಡಿದ ಗೂಂಡಾಗಳ ಜೊತೆ ಸ್ವರ್ಣಲತಾ ವಿವಿಗೆ ನುಗ್ಗಿದ್ದರು ಎನ್ನಲಾಗುತ್ತಿದೆ.

    ಈ ಕುರಿತು ಆನೇಕಲ್ (Anekal) ಪೊಲೀಸ್ ಠಾಣೆಗೆ ದೂರು ನೀಡಿರುವ ವಿವಿ ರಿಜಿಸ್ಟಾರ್ ಡಾ. ನಿವೇದಿತಾ ಮಿಶ್ರಾ (Nivedita Mishra), ‘ಸೆ.10 ರಂದು ಸ್ವರ್ಣಲತಾ ಮತ್ತು ಮಧುಕರ್ ಅಂಗೂರು ಜೊತೆಯಾಗಿ ಗೂಂಡಾಗಳ ಜೊತೆ ವಿವಿಗೆ ನುಗ್ಗಿದ್ದಾರೆ. ಗೂಂಡಾಗಳ ಬಳಿ ಬಂದೂಕು ಕೂಡ ಇದ್ದವು. ವಿವಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಹೆದರಿಸುವಂತಹ ಮತ್ತು ಬಂದೂಕಿನಿಂದ ಶೂಟ್ ಮಾಡುವುದಾಗಿ ಹೆದರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಮಧುಕರ್ ಬಂಧನವಾಗಿದ್ದು, ಸ್ವರ್ಣಲತಾ ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟಿ ಶ್ರೀಲೀಲಾ ತಾಯಿ ವಿರುದ್ಧ ಎಫ್ಐಆರ್: ಬಂಧನಕ್ಕಾಗಿ ಬಲೆ ಬೀಸಿದ ಪೊಲೀಸರು

    ನಟಿ ಶ್ರೀಲೀಲಾ ತಾಯಿ ವಿರುದ್ಧ ಎಫ್ಐಆರ್: ಬಂಧನಕ್ಕಾಗಿ ಬಲೆ ಬೀಸಿದ ಪೊಲೀಸರು

    ನ್ನಡದ ಹೆಸರಾಂತ ನಟಿ ಶ್ರೀಲೀಲಾ (Shrileela) ತಾಯಿ ಸ್ವರ್ಣಲತಾ ಮೇಲೆ ಎಫ್.ಐ.ಆರ್ ದಾಖಲಾಗಿದ್ದು, ಬಂಧನಕ್ಕಾಗಿ ಈಗಾಗಲೇ ಪೊಲೀಸರು ಬಲೆ ಬೀಸಿದ್ದಾರೆ. ಖ್ಯಾತ ರಾಜಕಾರಣಿಯೊಬ್ಬರಿಗೆ ಅಲೆಯನ್ಸ್ (Alliance)ವಿಶ್ವ ವಿದ್ಯಾಲಯ ಮಾರಿಲಸು ಸ್ವರ್ಣಲತಾ (Swarnalatha) ಮುಂದಾಗಿದ್ದರು ಎನ್ನುವ ಕಾರಣಕ್ಕಾಗಿ ಅವರ ಮೇಲೆ ದೂರು ದಾಖಲಾಗಿದೆ. ಇದರ ಹಿಂದೆ ನೂರಾರು ಕೋಟಿ ಡೀಲ್ ಕೂಡ ಇದೆ ಎಂದು ಹೇಳಲಾಗುತ್ತಿದೆ.

    ಮಧುಕರ್ ಅಂಗೂರ್ (Madhukar Angur) ಅವರಿಂದ ಯುನಿವರ್ಸಿಟಿ ಮಾರಾಟಕ್ಕೆ ಸ್ವರ್ಣಲತಾ ಡೀಲ್ ಕುದುರಿಸಿದ್ದರು ಎಂದು ಹೇಳಲಾಗಿದ್ದು, ಮಧುಕರ್ ಮತ್ತು ಸ್ವರ್ಣಲತಾ ಗೂಂಡಾಗಳ ಜೊತೆ ವಿವಿಗೆ ನುಗ್ಗಿ ಸಿಬ್ಬಂದಿಗೆ ಮತ್ತು ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ. ಸೆ.10ರಂದು ಬಂದೂಕು ಹಿಡಿದ ಗೂಂಡಾಗಳ ಜೊತೆ ಸ್ವರ್ಣಲತಾ ವಿವಿಗೆ ನುಗ್ಗಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ: ಮುಂದೆ ಕ್ಲೋಸ್ ಆಗಿರುವ ಜಯಶ್ರೀಯೇ ಸೋನು ಬಗ್ಗೆ ಕೆಟ್ಟ ಭವಿಷ್ಯ ನುಡಿದಳಾ?

    ಈ ಕುರಿತು ಆನೇಕಲ್ (Anekal) ಪೊಲೀಸ್ ಠಾಣೆಗೆ ದೂರು ನೀಡಿರುವ ವಿವಿ ರಿಜಿಸ್ಟಾರ್ ಡಾ. ನಿವೇದಿತಾ ಮಿಶ್ರಾ, (Nivedita Mishra) ‘ಸೆ.10 ರಂದು ಸ್ವರ್ಣಲತಾ ಮತ್ತು ಮಧುಕರ್ ಅಂಗೂರು ಜೊತೆಯಾಗಿ ಗೂಂಡಾಗಳ ಜೊತೆ ವಿವಿಗೆ ನುಗ್ಗಿದ್ದಾರೆ. ಗೂಂಡಾಗಳ ಬಳಿ ಬಂದೂಕು ಕೂಡ ಇದ್ದವು. ವಿವಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಹೆದರಿಸುವಂತಹ ಮತ್ತು ಬಂದೂಕಿನಿಂದ ಶೂಟ್ ಮಾಡುವುದಾಗಿ ಹೆದರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಮಧುಕರ್ ಬಂಧನವಾಗಿದ್ದು, ಸ್ವರ್ಣಲತಾ ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 20ಕ್ಕೂ ಹೆಚ್ಚು ಎಮ್ಮೆ, ಹಸುಗಳ ಮೇಲೆ ಆ್ಯಸಿಡ್ ಎರಚಿದ ಕಿಡಿಗೇಡಿಗಳು!

    20ಕ್ಕೂ ಹೆಚ್ಚು ಎಮ್ಮೆ, ಹಸುಗಳ ಮೇಲೆ ಆ್ಯಸಿಡ್ ಎರಚಿದ ಕಿಡಿಗೇಡಿಗಳು!

    ಆನೇಕಲ್: ಎಮ್ಮೆ ಹಾಗೂ ಹಸುಗಳ ಮೇಲೆ ಆ್ಯಸಿಡ್ ಎರಚಿ ಅಮಾನುಷವಾಗಿ ನಡೆದುಕೊಂಡಿರುವ ಘಟನೆ ತಮಿಳುನಾಡಿನ ಮೆಟ್ಟುಪಾಳ್ಯಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ನೆಟ್ಟುಪಾಳ್ಯಂ ಸಮೀಪದ ರಾಜಕುಮಾರ್ ಎಂಬವರಿಗೆ ಸೇರಿದ ಸುಮಾರು 20ಕ್ಕೂ ಹೆಚ್ಚು ಎಮ್ಮೆ ಹಾಗೂ ಹಸುಗಳ ಮೇಲೆ ಕೆಲ ದುಷ್ಕರ್ಮಿಗಳು ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ರಾಜಕುಮಾರ್ ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನವನ್ನು ಸಾಗಿಸುತ್ತಿದ್ದರು. ಆದರೆ ಯಾರೋ ಕಿಡಿಗೇಡಿಗಳು ಮೊನ್ನೆ ರಾತ್ರಿ ಪ್ರಾಣಿಗಳ ಮೇಲೆ ಆ್ಯಸಿಡ್ ಎರಚಿದ್ದು, ಬೆನ್ನು ತಲೆ ಕಾಲು ಹಾಗೂ ದೇಹದ ಹಲವು ಭಾಗಗಳಿಗೆ ಆ್ಯಸಿಡ್ ಬಿದ್ದು ತೀವ್ರ ರಕ್ತಸ್ರಾವವಾಗಿದೆ.

    ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಜಾನುವಾರುಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಈ ಕೃತ್ಯವನ್ನು ಮಾಡಿರುವಂತಹ ಕಿಡಿಗೇಡಿಗಳು ಯಾರು ಎಂಬ ಮಾಹಿತಿ ಇನ್ನು ಸಹ ಲಭ್ಯವಾಗಿಲ್ಲ.

    ಅಮಾನುಷ ಕೃತ್ಯ ಎಸಗಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಜಾನ್ ವೇಳೆ ಧ್ವನಿವರ್ಧಕ ಬಳಕೆ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    Live Tv
    [brid partner=56869869 player=32851 video=960834 autoplay=true]

  • ನೀರಿನ ತೊಟ್ಟಿಗೆ ಬಿದ್ದು ಎರಡು ವರ್ಷದ ಬಾಲಕಿ ಸಾವು

    ನೀರಿನ ತೊಟ್ಟಿಗೆ ಬಿದ್ದು ಎರಡು ವರ್ಷದ ಬಾಲಕಿ ಸಾವು

    ಆನೇಕಲ್: ಎರಡು ವರ್ಷದ ಪುಟ್ಟ ಕಂದಮ್ಮ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟ ಘಟನೆ ಆನೇಕಲ್ ಗಡಿ ಭಾಗದ ಹೊನ್ನಹಟ್ಟಿ ಗ್ರಾಮದ ಬಳಿ ನಡೆದಿದೆ.

    ಮೃತ ಬಾಲಕಿಯನ್ನು ಮೀನಾಕ್ಷಿ ಎಂದು ಗುರುತಿಸಲಾಗಿದೆ. ಈಕೆ ಒರಿಸ್ಸಾ ಮೂಲದ ದಂಪತಿಯ ಮಗಳು. ಮೀನಾಕ್ಷಿ ತಂದೆ-ತಾಯಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಇತ್ತ ಮೀನಾಕ್ಷಿ ತನ್ನ ಪಾಡಿಗೆ ತಾನು ನೀರಿನಲ್ಲಿ ಆಟ ಆಡುತ್ತಿದ್ದಳು. ಹೀಗೆ ಆಟವಾಡುತ್ತಾ ನೀರಿನ ತೊಟ್ಟಿ ಬಳಿ ಹೋಗಿ ಬಿದ್ದಿದ್ದಾಳೆ. ಇದನ್ನೂ ಓದಿ: ಬಿಲ್ಕಿಸ್‌ ಬಾನು ಕೇಸ್‌ – ಅಪರಾಧಿಗಳ ಬಿಡುಗಡೆ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

    ಈ ವಿಚಾರ ತಿಳಿಯುತ್ತಿದ್ದಂತೆಯೇ ದಂಪತಿ ತೊಟ್ಟಿಯಿಂದ ಮಗುವನ್ನು ಮೇಲೆತ್ತಿ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ಬರುವ ಮಧ್ಯದಲ್ಲೇ ಮಗು ಸಾವನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗು ಮೃತಪಟ್ಟ ವಿಚಾರ ಗೊತ್ತಾಗುತ್ತಿದ್ದಂತೆಯೇ ಆಸ್ಪತ್ರೆ ಬಳಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

    ಈ ಸಂಬಂಧ ತಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕುಡಿದ ಮತ್ತಿನಲ್ಲಿ ಚರಂಡಿಯೊಳಗೆ ಬಿದ್ದ ವೃದ್ಧ

    ಕುಡಿದ ಮತ್ತಿನಲ್ಲಿ ಚರಂಡಿಯೊಳಗೆ ಬಿದ್ದ ವೃದ್ಧ

    ಆನೇಕಲ್: ಕಂಠಪೂರ್ತಿ ಕುಡಿದಿದ್ದ ವೃದ್ಧ ಭಾರೀ ಮಳೆಗೆ ಜಲಾವೃತವಾಗಿದ್ದ ರಸ್ತೆಯ ಬದಿಯಲ್ಲಿದ್ದ ತೆರೆದ ಚರಂಡಿಯೊಳಗೆ ಬಿದ್ದು, ಗಾಯಗೊಂಡಿರುವ ಘಟನೆ ಅತ್ತಿಬೆಲೆ ಗಡಿ ಹೊಸೂರಿನಲ್ಲಿ ನಡೆದಿದೆ.

    ಕಂಠಪೂರ್ತಿ ಕುಡಿದು ರಸ್ತೆ ಬದಿಯಲ್ಲಿ ವಾಹನ ಸವಾರರಿಗೆ ಕಿರಿಕಿರಿ ಮಾಡುತ್ತಿದ್ದ ವೃದ್ಧ ಭಾರೀ ಮಳೆಗೆ ಜಲಾವೃತವಾಗಿದ್ದ ರಸ್ತೆ ಬದಿ ಇದ್ದ ಚರಂಡಿಗೆ ಬಿದ್ದಿದ್ದಾನೆ. ಟ್ರಾಫಿಕ್ ಜಾಮ್‌ನಲ್ಲಿ ವೃದ್ಧ ವಾಹನ ಸವಾರರಿಗೆ ಕಿರಿಕಿರಿ ಮಾಡುತ್ತಿದ್ದುದನ್ನು ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿಯುತ್ತಿದ್ದರು. ಈ ವೇಳೆ ವೃದ್ಧ ಚರಂಡಿಯೊಳಗೆ ಬಿದ್ದಿದ್ದು, ಈ ದೃಶ್ಯವೂ ಸೆರೆಯಾಗಿದೆ. ಇದನ್ನೂ ಓದಿ: ಸಿಮ್ ಕಾರ್ಡ್ ಇಲ್ಲದ ಮೊಬೈಲ್, ಖಾಲಿ ಹಾಳೆ ಕೈಗಿತ್ತು ಹೆತ್ತಮ್ಮನನ್ನೇ ಬಿಟ್ಟು ಹೋದ

    ಚರಂಡಿಯೊಳಗೆ ಬಿದ್ದಿದ್ದ ವೃದ್ಧ ಮಳೆಯ ಆರ್ಭಟಕ್ಕೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ. ಸದ್ಯ ಸ್ಥಳೀಯರ ಸಮಯಪ್ರಜ್ಞೆಯಿಂದ ವೃದ್ಧ ಬದುಕುಳಿದಿದ್ದಾನೆ. ವೃದ್ಧ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರು ಆತನನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ಸಚಿವರ ಹಿಂಬಾಲಕರಿಂದ ನಡೀತಿದ್ಯಾ ವರ್ಗಾವಣೆ ದಂಧೆ..?

    ಘಟನೆಯಲ್ಲಿ ವೃದ್ಧನ ತಲೆಗೆ ಗಾಯವಾಗಿ ರಕ್ತ ಬರುತ್ತಿದ್ದರೂ ಬಳಿಕ ಬಂದ ಪೊಲೀಸರ ಜೊತೆಗೂ ತಾನು ಆಸ್ಪತ್ರೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಕೊನೆಗೆ ವೃದ್ಧನ ಮನವೊಲಿಸಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದೊಣ್ಣೆಯಿಂದ ಹೊಡೆದು ಮಹಿಳೆಯ ಬರ್ಬರ ಹತ್ಯೆ

    ದೊಣ್ಣೆಯಿಂದ ಹೊಡೆದು ಮಹಿಳೆಯ ಬರ್ಬರ ಹತ್ಯೆ

    ಬೆಂಗಳೂರು/ಆನೇಕಲ್: ದೊಣ್ಣೆಯಿಂದ ಹೊಡೆದು ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆನೇಕಲ್ ತಾಲೂಕಿನ ಲಕ್ಷ್ಮಿಸಾಗರದಲ್ಲಿ ನಡೆದಿದೆ.

    ತಮಿಳುನಾಡಿನ ಡೆಂಕಣಿಕೋಟೆ ಮೂಲದ ಮಾದಮ್ಮ ಕೊಲೆಯಾದ ಮಹಿಳೆ. ಕಳೆದ ಕೆಲ ವರ್ಷಗಳ ಹಿಂದೆ ಪತಿ ತೀರಿಕೊಂಡ ಹಿನ್ನೆಲೆ ಮಾದಮ್ಮ ತಮಿಳುನಾಡಿನಿಂದ ಆನೇಕಲ್ ತಾಲೂಕಿನ ಲಕ್ಷ್ಮಿಸಾಗರ ಗ್ರಾಮಕ್ಕೆ ಬಂದು ಕಟ್ಟಡ ನಿರ್ಮಾಣದ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಮಣಿ ಎಂಬಾತನ ಪರಿಚಯವಾಗಿ ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿದ್ದು, ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇದನ್ನೂ ಓದಿ: ಅಕ್ರಮ ಸಂಬಂಧ ಹೊಂದುವಂತೆ ಪತ್ನಿಗೆ ಬ್ಲಾಕ್‍ಮೇಲ್ – ಪೊಲೀಸಪ್ಪನ ಮೂಗು, ಕಿವಿ, ತುಟಿ ಕಟ್

     

    ಪ್ರತಿದಿನ ಇಬ್ಬರು ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗಿ ಬಂದು ಸಂಜೆ ವೇಳೆಯಲ್ಲಿ ಮದ್ಯ ಸೇವನೆ ಮಾಡುತ್ತಿದ್ದರು. ಅದೇ ರೀತಿ ಇಂದು ಸಹ ಮದ್ಯ ಸೇವನೆ ಮಾಡುವಾಗ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, ಅಲ್ಲಿಯೇ ಇದ್ದ ದೊಣ್ಣೆಯಿಂದ ಮಾದಮ್ಮನ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆಗೈದು ಆರೋಪಿ ಮಣಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ- ಇಂದು ಡಿಕೆಶಿ ಜಾಮೀನು ಅರ್ಜಿಯ ತೀರ್ಪು ಪ್ರಕಟ

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಆನೇಕಲ್ ಉಪವಿಭಾಗದ ಡಿವೈಎಸ್‍ಪಿ ಮಲ್ಲೇಶ್ ಹಾಗೂ ಸೂರ್ಯನಗರ ಪೊಲೀಸ್ ಇನ್ಸ್​ಪೆಕ್ಟರ್ ರಾಘವೇಂದ್ರ ಗೌಡ ಸ್ಥಳ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಣಿಗಾಗಿ ಬಲೆ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದರೋಡೆ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ದುಷ್ಕರ್ಮಿಗಳು – ಐವರು ಅರೆಸ್ಟ್‌

    ದರೋಡೆ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ದುಷ್ಕರ್ಮಿಗಳು – ಐವರು ಅರೆಸ್ಟ್‌

    ಬೆಂಗಳೂರು/ಆನೇಕಲ್: ಕೈಗಾರಿಕಾ ಪ್ರದೇಶದಲ್ಲಿ ಮನೆಗೆ ತೆರಳುತ್ತಿರುವ ಕಾರ್ಮಿಕರು ಹಾಗೂ ದಾರಿಹೋಕರನ್ನು ತಡೆದು ದರೋಡೆಗೆ ಯತ್ನಿಸುತ್ತಿದ್ದ ದುಷ್ಕರ್ಮಿಗಳನ್ನು ಬೆಂಗಳೂರು ಹೊರವಲಯದ ಸೂರ್ಯ ನಗರ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.

    ಸೂರ್ಯ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ತಿರುಮಗೊಂಡನಹಳ್ಳಿ ಪೆಟ್ರೋಲ್ ಬಂಕ್ ಬಳಿ ಸಂಜೆ ಆಗುತ್ತಿದ್ದಂತೆ ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಯತ್ನಿಸುತ್ತಿದ್ದ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಆನೇಕಲ್ ಉಪವಿಭಾಗ ಸೂರ್ಯಸಿಟಿ ಪೊಲೀಸರು, ತಿರುಮಗೊಂಡನಹಳ್ಳಿಯ ಪೆಟ್ರೋಲ್ ಬಂಕ್ ಬಳಿ ಅವಿತು ಕುಳಿತು, ಐವರು ದರೋಡೆಕೋರರನ್ನು ರೆಡ್ ಹ್ಯಾಂಡ್ ಆಗಿ ಮಾರಕಾಸ್ತ್ರ ಹಾಗೂ ದೊಣ್ಣೆಗಳ ಸಮೇತ ಬಂಧಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಆಕ್ರೋಶ – ಕರಾವಳಿ ಬಿಜೆಪಿಗರ ಟ್ರ್ಯಾಕ್ ರೆಕಾರ್ಡ್ ತರಿಸಿದ ಹೈಕಮಾಂಡ್

    ರಸ್ತೆಯಲ್ಲಿ ಓಡಾಡುವಂತಹ ಜನರು ಹಾಗೂ ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ಕಾರ್ಮಿಕರನ್ನೇ ಟಾರ್ಗೆಟ್ ಮಾಡಿಕೊಂಡು ಅವರನ್ನು ಅಡ್ಡಗಟ್ಟಿ ಕಿಡಿಗೇಡಿಗಳು ಮೊಬೈಲ್, ಹಣ ದರೋಡೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಪೊಲೀಸರು ವಿನಯ್ ಕುಮಾರ್, ಶಿವ, ಮುರುಗೇಶ್, ಶಂಕರ್ ನಾಯಕ್ ಅನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಹರೀಶ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಲಿಫ್ಟ್‌ನಲ್ಲಿ ತ್ರಿವಳಿ ತಲಾಖ್ ಹೇಳಿ ಹೊರದಬ್ಬಿದ ಪತಿ ವಿರುದ್ಧ ಪತ್ನಿ ದೂರು

    ಖದೀಮರ ತಂಡದಲ್ಲಿದ್ದ ವಿನಯ್ ಕುಮಾರ್ ನಟೋರಿಯಸ್, ಗಾಂಜಾ ವ್ಯಸನಿಯಾಗಿದ್ದು ಈತ ಇನ್ನು ಯಾವ, ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಬಡ್ಡಿ ಆಡುತ್ತಲೇ ಕೋರ್ಟ್‍ನಲ್ಲಿ ಕೊನೆಯುಸಿರೆಳೆದ ಕ್ರೀಡಾಪಟು!

    ಕಬಡ್ಡಿ ಆಡುತ್ತಲೇ ಕೋರ್ಟ್‍ನಲ್ಲಿ ಕೊನೆಯುಸಿರೆಳೆದ ಕ್ರೀಡಾಪಟು!

    ಆನೇಕಲ್/ಚೆನ್ನೈ: ಕಬಡ್ಡಿ ಆಟಗಾರನೊಬ್ಬ ಮೈದಾನದಲ್ಲೇ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಪಂರುತಿ ಎಂಬಲ್ಲಿ ನಡೆದಿದೆ.

    ಮೃತನನ್ನು ವಿಮಲ್ ರಾಜ್ ಎಂದು ಗುರುತಿಸಲಾಗಿದ್ದು, ಇವರು ಪರಂತಿ ಪಕ್ಕದ ಕಾಟಂಪಲಿಯೂರಿನ ಪೆರಿಯಪುರಾಂಗಣಿ ನಿವಾಸಿಯಾಗಿದ್ದು, ಖಾಸಗಿ ಕಾಲೇಜಿನಲ್ಲಿ ಬಿಎಸ್‍ಸಿ 2ನೇ ವರ್ಷ ಓದುತ್ತಿದ್ದರು. ನಿನ್ನೆ ಪರುಂತಿ ಸಮೀಪದ ಮಂಡಿಕುಪ್ಪಂನಲ್ಲಿ ತಮಿಳುನಾಡಿನ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿ ರೈಡ್‍ನಲ್ಲಿದ್ದ ವೇಳೆ ವಿಮಲ್‍ರಾಜ್‍ಗೆ ಹೃದಯಾಘಾತವಾಗಿದೆ.

    ಎದುರಾಳಿ ಆಟಗಾರನೊಬ್ಬ ಹಿಡಿಯಲು ಹೋದಾಗ ವಿಮಲ್ ರಾಜ್ ಎದೆ ಮೇಲೆ ಬಿದ್ದಿದ್ದ. ಈ ವೇಳೆ ಕೆಳಗೆ ಬಿದ್ದ ವಿಮಲರಾಜ್ ಮೇಲೇಳಲು ಯತ್ನಿಸಿದ್ದಾರೆ. ಆದರೆ ಆಟ ಆಡುತ್ತಲೇ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಕೂಡಲೇ ಆಘಾತಗೊಂಡ ಸಹ ಆಟಗಾರರು ವಿಮಲರಾಜ್ ರಕ್ಷಣೆ ಮಾಡಲು ಯತ್ನಿಸಿದ್ದಾರೆ. ಇದನ್ನೂ ಓದಿ: ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದ ಅಳಿಯ-ಮಗಳನ್ನ ಕುಡುಗೋಲಿನಿಂದ ಕೊಚ್ಚಿದ ತಂದೆ

    ಸಮೀಪದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಕ್ರೀಡಾಪಟು ಕೊನೆಯುಸಿರೆಳೆದಿದ್ದಾರೆ. ವಿಮಲರಾಜ್ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯುವಕರಿಗೆ ಪೊಲೀಸ್ ಕೆಲ್ಸ – ಕಲರ್ ಕಲರ್ ಕಥೆ ಕಟ್ಟಿದ್ದ ನಕಲಿ ಪೊಲೀಸಪ್ಪ ಪರಾರಿ

    ಯುವಕರಿಗೆ ಪೊಲೀಸ್ ಕೆಲ್ಸ – ಕಲರ್ ಕಲರ್ ಕಥೆ ಕಟ್ಟಿದ್ದ ನಕಲಿ ಪೊಲೀಸಪ್ಪ ಪರಾರಿ

    – ಸಾವಿರಾರು ರೂ. ಹಣ ಪಡೆದು ವಂಚನೆ
    – ವಂಚನೆ ಬಯಲಾಗುತ್ತಿದ್ದಂತೆ ಪರಾರಿ

    ಆನೇಕಲ್: ಪಿಎಸ್‍ಐ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಈಗ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ತಾನು ನಿವೃತ್ತ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಬಡ ಹಾಗೂ ಅಮಾಯಕ ನಿರುದ್ಯೋಗಿ ಯುವಕರಿಗೆ ವ್ಯಕ್ತಿಯೊಬ್ಬ ವಂಚಿಸಿ ಪರಾರಿಯಾಗಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ದೊಡ್ಡಬಳ್ಳಾಪುರ ಮೂಲದ ಜ್ಞಾನಮೂರ್ತಿ ಎಂಬಾತ ಬಣ್ಣ ಬಣ್ಣದ ಕಥೆ ಕಟ್ಟಿ ಯುವಕರನ್ನು ವಂಚಿಸಿ ಈಗ ಓಡಿ ಹೋಗಿದ್ದಾನೆ. ಬೆಂಗಳೂರು ಹೊರವಲಯ ಆನೇಕಲ್ ಭಾಗದಲ್ಲಿ ನಾನು ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂದು ಪೋಸ್ ಕೊಟ್ಟು ಹೇಳಿ ಯುವಕರಿಂದ ಸಾವಿರಾರು ರೂ. ಪಡೆದು ಈಗ ಜಾಗ ಖಾಲಿ ಮಾಡಿದ್ದಾನೆ. ಇದನ್ನೂ ಓದಿ: ಕರಾವಳಿ ಜಿಲ್ಲೆಗಳಿಗೆ ಕುಚ್ಚಲಕ್ಕಿ ವಿತರಣೆಗೆ ರಾಜ್ಯ ಸರ್ಕಾರ ಚಿಂತನೆ: ಕೋಟ ಶ್ರೀನಿವಾಸ ಪೂಜಾರಿ ವಿಶೇಷ ಸಭೆ 

    ಆನೇಕಲ್ ಥಳಿ ಮುಖ್ಯರಸ್ತೆಯ ಸಿಕೆ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಮೇ ತಿಂಗಳಿನಲ್ಲಿ ಆಗಮಿಸಿದ ಜ್ಞಾನಮೂರ್ತಿ ನಾನು ಆನೇಕಲ್ ಭಾಗದಲ್ಲಿ 80 ಲಕ್ಷಕ್ಕೆ ಜಮೀನು ಖರೀದಿ ಮಾಡಿದ್ದೇನೆಂದು ಪರಿಚಯ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ನಾನು ಸಬ್-ಇನ್ಸ್‌ಪೆಕ್ಟರ್ ಎಂದು ಹೇಳಿ ಹೇಳಿ ಡಿಸ್ಕೌಂಟ್‍ನಲ್ಲಿ ರೂಮ್ ಪಡೆದಿದ್ದಾನೆ. ಜಮೀನು ವ್ಯವಹಾರ ಮುಗಿಯುವವರೆಗೂ ಬಂದು ಹೋಗುತ್ತೇನೆಂದು ರೂಮ್ ಬಾಡಿಗೆ ಪಡೆದು ತನ್ನ ಕೃತ್ಯ ಆರಂಭಿಸಿದ್ದ.

    ಬಡ ಯುವಕರೇ ಟಾರ್ಗೆಟ್
    ಮೊದಲು ತಾನು ಉಳಿದುಕೊಂಡಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಕಳ್ಳಾಟವಾಡಿದ್ದ. ತನ್ನ ಮಾತಿನ ಶಕ್ತಿಯಿಂದ ಕಿಶೋರ್ ಹಾಗೂ ಕ್ಯಾಷಿಯರ್ ಆನಂದ್ ಅವರನ್ನ ಪರಿಚಯ ಮಾಡಿಕೊಂಡು ಬಲೆಗೆ ಬೀಳಿಸಿದ್ದ ಜ್ಞಾನಮೂರ್ತಿ, ಡಿಜಿಪಿ ಅವರ ಪಿಎ ನನ್ನ ಸ್ನೇಹಿತ. ಅವರ ಸಹಾಯದಿಂದ ನಿಮಗೆ ಪೊಲೀಸ್ ಕೆಲಸ ಕೊಡಿಸುತ್ತೇನೆಂದು ನಂಬಿಸಿದ್ದ.

    ನಾನು ಈಗಾಗಲೇ ಹಲವು ಮಂದಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ನೋಡಿದ್ದು ನಿಮಗೆ ಉದ್ಯೋಗ ಬೇಕಾದರೆ ಮುಂಗಡ ಹಣವನ್ನು ನೀಡಬೇಕು ಎಂದು ಹೇಳಿದ್ದಾನೆ. ಈತನ ಮಾತಿಗೆ ಮರಳಾಗಿ ಆನಂದ್ 30 ಸಾವಿರ ರೂ. ಹಾಗೂ ಸಪ್ಲೇಯರ್ ಕಿಶೋರ್ 45 ಸಾವಿರ ರೂ. ನೀಡಿದ್ದಾರೆ. ಈತ ವ್ಯವಹಾರದಲ್ಲಿ ಎಷ್ಟು ಚಾಲಕಿ ಎಂದರೆ ತನ್ನ ಮೇಲೆ ಯುವಕರಿಗೆ ನಂಬಿಕೆ ಬರಲೆಂದು ಡಿಜಿಪಿ ಪಿಎ ಎಂದು ಬೇರೊಬ್ಬ ವ್ಯಕ್ತಿಯ ಮೂಲಕ ಫೋನ್‍ನಲ್ಲಿ ಮಾತನಾಡಿಸಿದ್ದ.

    ತಾನು ಉಳಿದುಕೊಂಡಿದ್ದ ರೆಸ್ಟೋರೆಂಟ್ ಸಿಬ್ಬಂದಿಗೆ ಮೋಸ ಮಾಡಿದ ಬಳಿಕ ತನ್ನ ಕಳ್ಳಾಟದ ಕ್ಷೇತ್ರವನ್ನು ಮುತ್ಯಾಲಮಡು ಪ್ರವಾಸಿ ತಾಣಕ್ಕೆ ವಿಸ್ತರಿಸಿದ್ದ. ಈ ತಾಣದಲ್ಲಿ ಕೆಲಸ ಮಾಡುತ್ತಿದ್ದ ಯುವಕರಿಗೆ, ಮೈಸೂರು ಕುದುರೆ ಹಾಗೂ ಪೊಲೀಸರು ಸೀಜ್ ಮಾಡಿರುವ ಪೆಟ್ಟಿ ಅಂಗಡಿಯನ್ನ ಕಡಿಮೆ ಬೆಲೆಗೆ ಕೊಡಿಸೋದಾಗಿ ಕಥೆ ಕಟ್ಟಿದ್ದ. ಈತನ ಮಾತಿಗೆ ಮರಳಾಗಿ ರವಿ 75 ಸಾವಿರ ರೂ. ನೀಡಿದ್ದರು. ಇದನ್ನೂ ಓದಿ: ಆಚರಣೆ, ವೈಭವಗಳನ್ನ ಇಷ್ಟಪಡದ ಸಿದ್ದರಾಮಯ್ಯ ಈಗ ಉತ್ಸವ ಆಚರಿಕೊಳ್ಳುತ್ತಿದ್ದಾರೆ: ವಿ.ಸೋಮಣ್ಣ 

    ವಂಚಿಸುವುದರಲ್ಲಿ ನಿಸ್ಸೀಮನಾಗಿದ್ದ ಈತ ಯುವಕರನ್ನು ಕರೆದೊಯ್ದು ನಾಲ್ಕೈದು ಬಿಲ್ಡಿಂಗ್ ತೋರಿಸಿ ಇದೆಲ್ಲವೂ ನನ್ನದೇ ಎಂದು ಪೋಸ್ ಕೊಟ್ಟಿದ್ದ. ರಾಜ್ಯದಲ್ಲಿ ಸಂಚಲನ ಮೂಡಿಸಿದ ಪಿಎಸ್‍ಐ ಹಗರಣ ಬೆಳಕಿಗೆ ಬಂದ ಬಳಿಕ ಯುವಕರಿಗೆ ಜ್ಞಾನಮೂರ್ತಿಯ ಬಗ್ಗೆ ಅನುಮಾನ ಬಂದಿದೆ. ಅನುಮಾನ ಬಂದ ಬೆನ್ನಲ್ಲೇ ಈತನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ನಕಲಿ ಪೊಲೀಸಪ್ಪನ ಅಸಲಿ ಕಹಾನಿ ಬಯಲಾಗಿದೆ.

    ಸಾವಿರಾರು ರೂಪಾಯಿ ಹಣ ಪಡೆದು ವಂಚಿಸಿದ್ದಾನೆ ಎಂದು ವಂಚನೆಗೊಳಗಾದ ಯುವಕರು ಆರೋಪಿಸಿದ್ದಾರೆ. ಈ ಅಸಾಮಿ ಫೋನ್ ಮೂಲಕ ಬಣ್ಣ, ಬಣ್ಣದ ಕಥೆಗಳನ್ನ ಹೇಳಿ ಮೋಸ ಮಾಡಿರುವ ಆಡಿಯೋವನ್ನ ಯುವಕರು ರೆಕಾರ್ಡ್ ಮಾಡಿಟ್ಟುಕೊಂಡಿದ್ದಾರೆ.

    ಸದ್ಯ ಜ್ಞಾನಮೂರ್ತಿ ವಂಚನೆ ಪ್ರಕರಣ ಆನೇಕಲ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆರೋಪಿ ಸಿಕ್ಕ ಬಳಿಕ ಎಲ್ಲಿ? ಯಾರಿಗೆ ಎಷ್ಟು ಹಣ ವಂಚಿಸಿದ್ದಾನೆ ಎಂಬುದರ ಬಗ್ಗೆ ತಿಳಿಯಬೇಕಿದೆ.

    Live Tv
    [brid partner=56869869 player=32851 video=960834 autoplay=true]