Tag: anekal

  • ನೇಣು ಬಿಗಿದುಕೊಂಡು ವಿಲೇಜ್ ಅಕೌಂಟೆಂಟ್ ಆತ್ಮಹತ್ಯೆ

    ನೇಣು ಬಿಗಿದುಕೊಂಡು ವಿಲೇಜ್ ಅಕೌಂಟೆಂಟ್ ಆತ್ಮಹತ್ಯೆ

    ಆನೇಕಲ್: ವಿಲೇಜ್ ಅಕೌಂಟೆಂಟ್ (ಗ್ರಾಮ ಲೆಕ್ಕಿಗರು) ಆಗಿ ಕೆಲಸ ಮಾಡುತ್ತಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಹೊರವಲಯ ಆನೇಕಲ್ (Anekal) ಪಟ್ಟಣದ ಮುನಿ ವೀರಪ್ಪ ಗಲ್ಲಿಯಲ್ಲಿ ನಡೆದಿದೆ.

    ಶ್ರೀನಿವಾಸ್ ರೆಡ್ಡಿ ಅವರ ಮನೆಯಲ್ಲಿ ವಾಸವಿದ್ದ ಆಲಿಯ ಅಂಜುಮ್ ಅಣ್ಣಿಗೇರಿ (22) ಮೃತ ಯುವತಿ. ಈಕೆ ಸರ್ಜಾಪುರ ನಾಡಕಚೇರಿಯಲ್ಲಿ ವಿಲೇಜ್ ಅಕೌಂಟೆಂಟ್ (VA) ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಯುಪಿ ಪೊಲೀಸರಿಂದ ಹತ್ಯೆಯಾಗುವ ಭಯವಿದೆ – ಬಂಧನದಲ್ಲಿರುವ ಮಾಜಿ ಸಂಸದ ಅತಿಕ್ ಅಹಮ್ಮದ್

    ಆನೆಕಲ್‌ ಪಟ್ಟಣದಲ್ಲಿ ತನ್ನ ಅಣ್ಣನೊಂದಿಗೆ ವಾಸವಿದ್ದರು. ಅಣ್ಣ ಕೆಲಸದ ಮೇಲೆ ಬಳ್ಳಾರಿಗೆ ಹೋಗಿದ್ದನು. ಈ ವೇಳೆ ಮನೆಯಲ್ಲಿ ಒಂಟಿಯಾಗಿದ್ದ ಆಲಿಯಾ ಭಾನುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: 4 ಮಕ್ಕಳೊಂದಿಗೆ ಬಾವಿಗೆ ಹಾರಿದ ಮಹಿಳೆ – ಸಾವಿಗೆ ಹೆದರಿ ಹಿರಿಯ ಮಗಳೊಂದಿಗೆ ಮೇಲೆ ಬಂದ್ಲು

    ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ, ತನಿಖೆ ಮುಂದುವರಿದಿದೆ.

  • ಬೆಂಕಿ ಹೊತ್ತಿಕೊಂಡು ಎರಡು ಅಂಗಡಿಗಳು ಭಸ್ಮ

    ಬೆಂಕಿ ಹೊತ್ತಿಕೊಂಡು ಎರಡು ಅಂಗಡಿಗಳು ಭಸ್ಮ

    ಬೆಂಗಳೂರು: ಗ್ಯಾರೇಜ್ (Garej) ಅಂಗಡಿಗೆ ಹೊತ್ತಿಕೊಂಡ ಬೆಂಕಿ ಪಕ್ಕದ ಅಂಗಡಿಗೂ ಆವರಿಸಿ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಜಿಗಣಿಯ ಎಪಿಸಿ ವೃತ್ತದಲ್ಲಿ ನಡೆದಿದೆ.

    ಗೋಪಿ ಎಂಬವರಿಗೆ ಸೇರಿದ ಗ್ಯಾರೇಜ್‌ನಲ್ಲಿ ಸೋಮವಾರ ಮಧ್ಯಾಹ್ನ 2:30ರ ಸಮಯಕ್ಕೆ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಗ್ಯಾರೇಜ್‌ನಲ್ಲಿದ್ದ ಟಯರ್ ಹಾಗೂ ಆಯಿಲ್‌ಗೆ ಬೆಂಕಿ ಆವರಿಸಿಕೊಂಡಿದ್ದು, ಇದರಿಂದ ಪಕ್ಕದ ಸ್ಟಿಕ್ಕರ್ ಡಿಸೈನ್ ಅಂಗಡಿಗೂ ಕೂಡ ಬೆಂಕಿ ಆವರಿಸಿಕೊಂಡಿದೆ. ಆಯಿಲ್‌ಗೆ ಹತ್ತಿಕೊಂಡಿದ್ದ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡವನ್ನೇ ಆವರಿಸಿದ್ದು, ಎರಡೂ ಅಂಗಡಿಯಲ್ಲಿರುವ ಬಹುತೇಕ ವಸ್ತುಗಳು ಬೆಂಕಿಗಾಹುತಿಯಾಗಿದೆ. ಇದನ್ನೂ ಓದಿ: 4 ಮಕ್ಕಳೊಂದಿಗೆ ಬಾವಿಗೆ ಹಾರಿದ ಮಹಿಳೆ – ಸಾವಿಗೆ ಹೆದರಿ ಹಿರಿಯ ಮಗಳೊಂದಿಗೆ ಮೇಲೆ ಬಂದ್ಲು

    ಗ್ಯಾರೇಜ್‌ನ ಆಯಿಲ್‌ಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಘಟನೆಯಿಂದಾಗಿ ಕೆಲ ಹೊತ್ತು ಅಕ್ಕಪಕ್ಕದ ಅಂಗಡಿ ಹಾಗೂ ಕಟ್ಟಡದಲ್ಲಿದ್ದ ಮನೆಗಳ ನಿವಾಸಿಗಳು ಆತಂಕಕ್ಕೆ ಒಳಗಾಗಬೇಕಾಯಿತು. ಜನನಿ ಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದರಿಂದ ಬಿಸಿಲಿನ ಝಳಕ್ಕೆ ಬೆಂಕಿಯ ಆರ್ಭಟ ಹೆಚ್ಚಾಗಿತ್ತು. ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ವಾಹನಗಳು (Fire Department) ಬೆಂಕಿಯನ್ನು ಹತೋಟಿಗೆ ತಂದಿದ್ದು, ಅಕ್ಕಪಕ್ಕದ ಅಂಗಡಿ ಹಾಗೂ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

    ಈ ಘಟನೆ ಕುರಿತು ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಾಂಸ ತರದ್ದಕ್ಕೆ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಯುಕೆಜಿ ಮಗುವನ್ನು ಫೇಲ್ ಮಾಡಿದ ಶಿಕ್ಷಣ ಸಂಸ್ಥೆಗೆ ನೋಟಿಸ್

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಯುಕೆಜಿ ಮಗುವನ್ನು ಫೇಲ್ ಮಾಡಿದ ಶಿಕ್ಷಣ ಸಂಸ್ಥೆಗೆ ನೋಟಿಸ್

    ಆನೇಕಲ್: ಯುಕೆಜಿ (UKG) ಮಗುವನ್ನು ಫೇಲ್ ಮಾಡಿ ಎಡವಟ್ಟು ಮಾಡಿದ ಸುದ್ದಿ ಪಬ್ಲಿಕ್ ಟಿವಿಯಲ್ಲಿ ನಿರಂತರವಾಗಿ ಪ್ರಸಾರವಾಗುತ್ತಿದ್ದಂತೆಯೇ ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ನೋಟಿಸ್ ಜಾರಿ ಮಾಡಿದೆ.

    ಸೆಂಟ್ ಜೋಸೆಫ್ ಚಾರ್ಮಿನೆಡ್ ಶಾಲೆಗೆ ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮಿ ನೋಟಿಸ್ ಜಾರಿ ಮಾಡಿದ್ದಾರೆ. ಅನುತ್ತೀರ್ಣ ಮಾಡಿರುವ ಕುರಿತು ಮಾಹಿತಿ ಕೇಳಿದ್ದಾರೆ. ನಿಯಮಾನುಸಾರ 9ನೇ ತರಗತಿಯವರೆಗೆ ಅನುತ್ತೀರ್ಣ ಮಾಡುವಂತಿಲ್ಲ. ಯುಕೆಜಿ ಮಗುವನ್ನು ಯಾಕೆ ಅನುತ್ತೀರ್ಣ ಮಾಡಿದ್ದೀರಿ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣ (Social Media) ದಲ್ಲಿ ಹರಿದಾಡುತ್ತಿದೆ. ಇದು ಶಿಕ್ಷಣ ಇಲಾಖೆಗೆ ಮುಜುಗರ ತರುವಂತ ವಿಚಾರ. ಆದಕಾರಣ ಸಂಪೂರ್ಣ ಲಿಖಿತ ವಿವರಣೆಯನ್ನು ನೀಡಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಒಂದು ವೇಳೆ ತಪ್ಪಿದ್ದಲ್ಲಿ ನಿಮ್ಮ ಶಾಲೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಅಧಿವೇಶನ ಬಳಿಕ 4 ಕಡೆಗಳಿಂದ ರಥಯಾತ್ರೆ, ಮತ್ತೊಮ್ಮೆ ಬಿಜೆಪಿ ಸರ್ಕಾರ ನಿಶ್ಚಿತ: ಬಿಎಸ್‌ವೈ

    ಸದ್ಯ ಶಿಕ್ಷಣ ಸಂಸ್ಥೆ ಸ್ಪಷ್ಟೀಕರಣ ನೀಡಲು ತಡಕಾಡುತ್ತಿದೆ. ಈ ಬಗ್ಗೆ ಪ್ರಾಂಶುಪಾಲರು, ಡಿಜಿಟಲ್ ಎಂಟ್ರಿಯಲ್ಲಿ ಆಗಿರುವ ಪ್ರಮಾದ ಎಂದಿದ್ದಾರೆ. ಪರೀಕ್ಷೆಯಲ್ಲಿ `ಸಿ’ ಗ್ರೇಡ್ ಕೊಟ್ಟಿದ್ದೆವು. ಸಿಸ್ಟಂ ಎಂಟ್ರಿಯಲ್ಲಿ ಎಡವಟ್ಟಾಗಿದೆ ಎಂದು ಹೇಳಿದ್ದಾರೆ. ವಿದ್ಯಾರ್ಥಿನಿ ತಂದೆ ಗಮನಕ್ಕೆ ಇ-ಮೇಲ್ ಮೂಲಕ ತರಲಾಗಿದೆ ಎಂದು ಪ್ರಾಂಶುಪಾಲ ಸಾಜು ಇ-ಮೇಲ್ ಗಳನ್ನ ತೋರಿಸಿದ್ದಾರೆ.

    ಏನಿದು ಘಟನೆ..?: ಆನೇಕಲ್ (Anekal) ತಾಲೂಕಿನ ಹುಸ್ಕೂರು ಗೇಟ್ ಸಮೀಪದ ಬಳಿ ಇರುವ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿ ಯುಕೆಜಿ ಓದುತ್ತಿದ್ದ ಮಗುವನ್ನು ಫೇಲ್ ಮಾಡಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಶಾಲೆಯ ಆಡಳಿತ ಮಂಡಳಿ ಕ್ರಮಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ (Suresh Kumar) ಟ್ವೀಟ್ ಮಾಡಿದ್ದು, ಮಗುವನ್ನು ಏನು ಮಾಡಲು ಹೊರಟಿದೆ ಎಂದು ಪ್ರಶ್ನಿಸಿದ್ದಾರೆ. ವಿದ್ಯಾರ್ಥಿನಿಯ ಪೋಷಕರು ಕೂಡ ಸರಣಿ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • UKG ಮಗುವನ್ನು ಫೇಲ್ ಮಾಡಿ ಶಿಕ್ಷಣ ಸಂಸ್ಥೆ ಎಡವಟ್ಟು- ಸುರೇಶ್ ಕುಮಾರ್ ಕಿಡಿ

    UKG ಮಗುವನ್ನು ಫೇಲ್ ಮಾಡಿ ಶಿಕ್ಷಣ ಸಂಸ್ಥೆ ಎಡವಟ್ಟು- ಸುರೇಶ್ ಕುಮಾರ್ ಕಿಡಿ

    ಆನೇಕಲ್: ತಾಲೂಕಿನ ಹುಸ್ಕೂರು ಗೇಟ್ ಸಮೀಪದ ಬಳಿ ಇರುವ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿ ಎಡವಟ್ಟು ಮಾಡಿದೆ. ಯುಕೆಜಿ ಓದುತ್ತಿದ್ದ ಮಗುವನ್ನು ಶಿಕ್ಷಣ ಸಂಸ್ಥೆ ಫೇಲ್ ಮಾಡಿ ಫಜೀತಿಗೆ ಸಿಲುಕಿದೆ.

    ಹೌದು. ಯುಕೆಜಿ ಓದುತ್ತಿದ್ದ ವಿದ್ಯಾರ್ಥಿನಿ ಪುಟಾಣಿ ಬಿ ನಂದಿನಿಯನ್ನು ಸಂಸ್ಥೆ ಫೇಲ್ ಮಾಡಿದ್ದು, ಇದೀಗ ಶಾಲೆಯ ಆಡಳಿತ ಮಂಡಳಿ ಕ್ರಮಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

    ಈ ಬೆನ್ನಲ್ಲೇ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ (Suresh Kumar) ಟ್ವೀಟ್ ಮಾಡಿದ್ದು, ಮಗುವನ್ನು ಏನು ಮಾಡಲು ಹೊರಟಿದೆ ಎಂದು ಪ್ರಶ್ನಿಸಿದ್ದಾರೆ. ವಿದ್ಯಾರ್ಥಿನಿಯ ಪೋಷಕರು ಕೂಡ ಸರಣಿ ಟ್ವೀಟ್ (Tweet) ಮಾಡಿ ಕಿಡಿಕಾರಿದ್ದಾರೆ.

    ಸುರೇಶ್ ಕುಮಾರ್ ಹೇಳಿದ್ದೇನು..? ಮಗುವನ್ನು ಫೇಲ್ ಮಾಡಿರುವ ಶಿಕ್ಷಣ ಸಂಸ್ಥೆಗೆ ತಲೆಯೂ ಇಲ್ಲ ಹೃದಯ ಮೊದಲೇ ಇಲ್ಲ. ಈ ಮಹಾಕೃತ್ಯ ಗೊತ್ತಾದ ಕೂಡಲೇ ಆನೇಕಲ್ ತಾಲೂಕು ಶಿಕ್ಷಣ ಇಲಾಖೆಗೆ ಮಾಹಿತಿ ತಿಳಿಸಿದ್ದೇನೆ. ನಾನು ಕೂಡ ಒಮ್ಮೆ ಈ ಶಾಲೆಗೆ ಸದ್ಯದಲ್ಲೇ ಭೇಟಿ ನೀಡಿ ಪಾವನಾಗಲು ಬಯಸಿದ್ದೇನೆ ಎಂದು ಮಾಜಿ ಸಚಿವರು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಬಡ್ಡಿ ಆಡುತ್ತಿದ್ದ ವೇಳೆ ವಿದ್ಯಾರ್ಥಿನಿ ದುರ್ಮರಣ

    ಕಬಡ್ಡಿ ಆಡುತ್ತಿದ್ದ ವೇಳೆ ವಿದ್ಯಾರ್ಥಿನಿ ದುರ್ಮರಣ

    ಆನೇಕಲ್: ಕಬಡ್ಡಿ (Kabaddi) ಆಡುತ್ತಿದ್ದ ವೇಳೆ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಹೃದಯಘಾತ (Heart Attack) ದಿಂದ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

    ಶಾಲೆಯಲ್ಲಿ ಆಯೋಜನೆ ಮಾಡಿದ್ದ ಕಬಡ್ಡಿ ಪಂದ್ಯಾವಳಿ ವೇಳೆ ರೈಡ್‍ಗೆ ಹೋಗಿದ್ದ ವಿದ್ಯಾರ್ಥಿ ಮೇಲೆ ನಾಲ್ಕೈದು ಜನ ವಿದ್ಯಾರ್ಥಿಗಳು ಬಿದ್ದಿದ್ದು, ಈ ವೇಳೆ 19 ವರ್ಷದ ವಿದ್ಯಾರ್ಥಿನಿ ಸಂಗೀತಾಳಿಗೆ ಹೃದಯಘಾತವಾಗಿದೆ. ಇದನ್ನೂ ಓದಿ: ಪಿಎಂ ಆವಾಸ್ ಯೋಜನೆಯ ಹಣ ಪಡೆದು 4 ಮಹಿಳೆಯರು ಪ್ರೇಮಿಗಳೊಂದಿಗೆ ಪಲಾಯನ

    ಅತ್ತಿಬೆಲೆಯ ಸೆಂಟ್ ಫಿಲೋಮಿನಾ ಶಾಲೆ (St. Philomena School Attibele) ಯಲ್ಲಿ ಘಟನೆ ನಡೆದಿದೆ. ತಕ್ಷಣ ಆಕೆಯನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಸಂಗೀತಾ ಸಾವನ್ನಪ್ಪಿದ್ದಾಳೆ. ಸಂಗೀತಾ ಧಾರವಾಡ (Dharwad) ಮೂಲದವಳಾಗಿದ್ದು ಆನೇಕಲ್ ತಾಲೂಕಿನ ಬಳಗಾರನಹಳ್ಳಿಯಲ್ಲಿ ವಾಸವಿದ್ದರು ಎನ್ನಲಾಗ್ತಿದೆ.

    ಘಟನೆ ಸಂಬಂಧ ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ವಿದ್ಯಾರ್ಥಿನಿ ಸಾವನ್ನಪ್ಪಿರುವ ಹಿನ್ನೆಲೆ ಸೇಂಟ್ ಫಿಲೋಮಿನಾ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಆದರೆ ಉಪವಿಭಾಗದ ಆನೇಕಲ್ ತಾಲೂಕಿನ ಉಪವಿಭಾಗದ ಡಿಎಸ್‍ಪಿ ಲಕ್ಷ್ಮೀನಾರಾಯಣ ಕೇಳಿದರೆ ಮಾಧ್ಯಮಕ್ಕೆ ನಾವು ಯಾವುದೇ ಮಾಹಿತಿ ಕೊಡಲು ಬರಲ್ಲ ಮೇಲಾಧಿಕಾರಿಗಳನ್ನು ಕೇಳಿ ಅಂತ ಉಡಾಫೆ ಉತ್ತರ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುತ್ಯಾಲಮಡುವು ಪ್ರವಾಸಿತಾಣದಲ್ಲಿ ಈಜಲು ಹೋಗಿ ವ್ಯಕ್ತಿ ನೀರುಪಾಲು

    ಮುತ್ಯಾಲಮಡುವು ಪ್ರವಾಸಿತಾಣದಲ್ಲಿ ಈಜಲು ಹೋಗಿ ವ್ಯಕ್ತಿ ನೀರುಪಾಲು

    ಆನೇಕಲ್: ಈಜಲು ಹೋಗಿ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆಸರಾಂತ ಪ್ರವಾಸಿ ತಾಣ ಮುತ್ಯಾಲಮಡುವಿ (Muthyala Maduvu) ನಲ್ಲಿ ನಡೆದಿದೆ.

    ಜಿಗಣಿ ನಿವಾಸಿ ಜೋತಿಶ್ ಕುಮಾರ್ ಮೃತ ವ್ಯಕ್ತಿಯಾಗಿದ್ದು, ತನ್ನ ಎರಡು ವರ್ಷದ ಮಗನ ಜೊತೆಯಲ್ಲಿ ಮಧ್ಯಾಹ್ನ ಮುತ್ಯಾಲಮಡುವಿಗೆ ದ್ವಿಚಕ್ರ ವಾಹನದಲ್ಲಿ ಬಂದಿದ್ದರು. ಮುತ್ಯಾಲಮಡು ಜಲಪಾತದ ಬಳಿಗೆ ತೆರಳಿ ಅಲ್ಲಿಯೇ ಮದ್ಯವನ್ನ ಸೇವಿಸಿ ಬಳಿಕ ಈಜಲು ಮುಂದಾಗಿದ್ದರು. ಇದನ್ನೂ ಓದಿ: ತುಂಗಾ ತೀರದಲ್ಲಿ ಟ್ರಯಲ್‌ ಬ್ಲಾಸ್ಟ್‌ ಕೇಸ್‌ – ಐಸಿಸ್‌ ಸಂಪರ್ಕಿತರಿಂದ ಹಣ, ಇಬ್ಬರು ಅರೆಸ್ಟ್‌

    ಈ ವೇಳೆ ನೀರಿನಲ್ಲಿ ಮುಳುಗಿದ್ದ ಜ್ಯೋತಿಶ್ ಕುಮಾರ್ ಅಲ್ಲಿದ್ದ ಇತರೆ ಪ್ರವಾಸಿಗಳು ನೀರಿನಿಂದ ಹೊರತೆಗೆದಿದ್ದಾರೆ. ಅಷ್ಟರಲ್ಲಿ ಆಗಲೇ ಜ್ಯೋತಿಶ್ ಕುಮಾರ್ ಪ್ರಾಣಪಕ್ಷಿ ಹಾರಿಹೋಗಿದ್ದು, ಆನೇಕಲ್ ಪೋಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೋಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗಾಂಜಾ ಮತ್ತಿನಲ್ಲಿ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಿರಾತಕರ ಗ್ಯಾಂಗ್‌

    ಗಾಂಜಾ ಮತ್ತಿನಲ್ಲಿ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಿರಾತಕರ ಗ್ಯಾಂಗ್‌

    ಬೆಂಗಳೂರು: ರಾತ್ರಿ ಸಮಯದಲ್ಲಿ ಗಾಂಜಾ (Marijuana) ಮತ್ತಿನಲ್ಲಿ ಹಲ್ಲೆ, ದರೋಡೆ, ಕಳ್ಳತನ ಮಾಡುತ್ತಿದ್ದ ಕದೀಮರನ್ನು ಹಿಡಿಯಲು ಹೋದ ಪೊಲೀಸ್ ಪೇದೆ (Police Constable) ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆನೇಕಲ್‌ನಲ್ಲಿ ನಡೆದಿದೆ. ಪೊಲೀಸರ ಮೇಲೆ ಹಲ್ಲೆ ನಡೆದರೂ ಸಹ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇಲಾಖೆಯಲ್ಲಿಯೇ ಅಪಸ್ವರ ಕೇಳಿ ಬಂದಿದೆ.

    ಪೊಲೀಸ್‌ ಪೇದೆ ರಂಗನಾಥ್ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಸಂಜೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ಪಟ್ಟಣದ ದೇವರಕೊಂಡಪ್ಪ ವ್ರತದಲ್ಲಿ ರಸ್ತೆಯ ಮಧ್ಯದಲ್ಲಿ ಗಾಂಜಾ ಮತ್ತಿನಲ್ಲಿ ಯುವಕರ ತಂಡ ತೂರಾಡುತ್ತಿದ್ದರು. ಇದನ್ನು ಪ್ರಶ್ನೆ ಮಾಡಲು ರಂಗನಾಥ್‌ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪುಂಡರು, ದಿನ್ನೂರು ರಸ್ತೆಯ ನೀಲಗಿರಿ ತೋಪಿನತ್ತ ಎಸ್ಕೇಪ್ ಆಗಿದ್ದಾರೆ. ಈ ಸಂದರ್ಭದಲ್ಲಿ ಕಿರಾತಕರ ಬೆನ್ನು ಹತ್ತಿದ್ದ ರಂಗನಾಥ್ ನೀಲಗಿರಿ ತೋಪಿನ ಒಳಗೆ ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಆನ್‌ಲೈನ್ ಕ್ಯಾಸಿನೋ ಹುಚ್ಚು – ಬ್ಯಾಂಕ್‌ನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದ ಮ್ಯಾನೇಜರ್ ಜೈಲುಪಾಲು

    ಈ ವೇಳೆ ರೌಡಿ ವರುಣ್ ಅಲಿಯಾಸ್ ಕೆಂಚಾ ಹಾಗೂ ಡ್ಯಾನಿ ಎಂಬ ಇಬ್ಬರು, ಪೊಲೀಸ್ ಪೇದೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ರಂಗನಾಥ್ ಮರ್ಮಾಂಗ ಹಾಗೂ ದೇಹದ ಹಲವಾರು ಕಡೆ ಗಾಯಗೊಳಿಸಿ ಅಲ್ಲಿಂದ ಎರಡು ದ್ವಿಚಕ್ರ ಬೈಕಿನಲ್ಲಿ ನಾಲ್ವರ ತಂಡ ಎಸ್ಕೇಪ್ ಆಗಿದೆ. ಬೈಕ್‌ಗಳಲ್ಲಿ ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಇತ್ತೀಚಿಗೆ ಆನೇಕಲ್ ಉಪ ವಿಭಾಗದ ವ್ಯಾಪ್ತಿಯಲ್ಲಿ ನಿರಂತರವಾಗಿ ಕಳ್ಳತನ, ದರೋಡೆ, ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜಾರೋಷವಾಗಿ ಹಾಡುಹಗಲಿನಲ್ಲಿ ಕೃತ್ಯಗಳು ನಡೆಯುತ್ತಿವೆ. ನಿನ್ನೆ ಸಂಜೆ ಘಟನೆ ನಡೆದರೂ ಸಹ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದಿರಲಿಲ್ಲ. ಇಂದು ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಂಗನಾಥ ಆರೋಗ್ಯವನ್ನು ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್‌ಪಿ ಪುರುಷೋತ್ತಮ್ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರಿಂದ ಹಾಕಿ ವಿಶ್ವಕಪ್ ಟ್ರೋಫಿ-2023 ಅನಾವರಣ

    Live Tv
    [brid partner=56869869 player=32851 video=960834 autoplay=true]

  • ಹೆತ್ತ ಮಗುವನ್ನೇ ಮಾರಿದ ತಾಯಿ – ನಾಲ್ಕೂವರೆ ವರ್ಷದ ಬಳಿಕ ಮತ್ತೆ ತಂದೆಯನ್ನ ಸೇರಿದ ಬಾಲಕ

    ಹೆತ್ತ ಮಗುವನ್ನೇ ಮಾರಿದ ತಾಯಿ – ನಾಲ್ಕೂವರೆ ವರ್ಷದ ಬಳಿಕ ಮತ್ತೆ ತಂದೆಯನ್ನ ಸೇರಿದ ಬಾಲಕ

    ಆನೇಕಲ್: ಪತಿಯೊಂದಿಗೆ (Husband) ಜಗಳವಾಡಿ ಪತ್ನಿಯೊಬ್ಬಳು ತನ್ನ ಒಂದುವರೆ ವರ್ಷದ ಮಗುವನ್ನು ಬೇರೆಯವರಿಗೆ ಮಾರಾಟ ಮಾಡಿದ್ದು, ನಾಲ್ಕುವರೆ ವರ್ಷದ ತಂದೆಯ (Father) ಬಳಿಕ ತಂದೆಗೆ ಸಿಕ್ಕಿರುವ ಘಟನೆ ಬೆಂಗಳೂರು (Bengaluru) ಹೊರವಲಯದಲ್ಲಿ ನಡೆದಿದೆ.

    ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಮಮತಾ ಹಾಗೂ ಬಾಲಮಣಿ 2012ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಅದಾದ ಬಳಿಕ ಆನೇಕಲ್‍ನಲ್ಲೇ ತನ್ನ ಪತಿಯೊಂದಿಗೆ ಮನೆ ಮಾಡಿಕೊಂಡು ವಾಸವಿದ್ದಳು. ಆದರೆ 2018ರಲ್ಲಿ ಗಂಡ – ಹೆಂಡತಿ ನಡುವೆ ಜಗಳ ಆಗಿತ್ತು. ಆ ವೇಳೆ ಬಾಲಮಣಿ ಬೆಂಗಳೂರಿನ ಜಯನಗರದ ನಿವಾಸಕ್ಕೆ ಹೋಗಿದ್ದಾನೆ.

    ಬಾಲಮಣಿ ಮತ್ತೇ 45 ದಿನಗಳ ಬಳಿಕ ಮರಳಿ ಬಳ್ಳೂರಿಗೆ ಬಂದಾಗ ಮನೆಯಲ್ಲಿ ಹೆಣ್ಣು ಮಗು ಮಾತ್ರ ಇತ್ತು. ಗಂಡು ಮಗು ಇರಲಿಲ್ಲ. ಆಗ ಪತ್ನಿ ಮಮತಾಳನ್ನು ಪ್ರಶ್ನೆ ಮಾಡಿದಾಗ ಹಾಸ್ಟೆಲ್‍ನಲ್ಲಿ ಮಗು ಇರುವುದಾಗಿ ಹೇಳಿದ್ದಾಳೆ. ವಾರ ಕಳೆದರೂ ಕೂಡ ಮಗು ಎಲ್ಲಿದೆ ಎನ್ನುವ ಬಗ್ಗೆ ಸರಿಯಾದ ಮಾಹಿತಿಯನ್ನು ಮಮತಾ ಪತಿಗೆ ನೀಡಲಿಲ್ಲ. ಆಗ ಮಮತಾ ಮಗುವನ್ನು ಏನೋ ಮಾಡಿದ್ದಾಳೆ ಎಂದು ಬಾಲಮಣಿ ಆತಂಕಕ್ಕೆ ಒಳಗಾಗಿದ್ದಾನೆ. ಇದನ್ನೂ ಓದಿ: ಶ್ರದ್ಧಾ ಭೀಕರ ಹತ್ಯೆ ಪ್ರಕರಣ – ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟ ಕಿರಾತಕ

    POLICE JEEP

    ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದು ಮಮತಾ ಹೊಸೂರು ಸಮೀಪದ ಸಿಪ್‍ಕಾಟ್ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಪೊಲೀಸರು ಠಾಣೆಗೆ ಬಾಲಮಣಿಯನ್ನು ಕರೆದು ಬುದ್ಧಿವಾದ ಹೇಳುತ್ತಿದ್ದಾರೆ. ಆದರೆ ಇನ್ನೊಂದು ಹೆಣ್ಣು ಮಗುವನ್ನು ಪತಿಯನ್ನು ಸಹ ತಾಯಿ ಮಮತಾಳನ್ನು ಬಿಟ್ಟು ಹೋಗಿದ್ದಾಳೆ. ಬಾಲಮಣಿ ಹೆಣ್ಣು ಮಗುವನ್ನು ಹಾಸ್ಟೆಲ್‍ಗೆ ಸೇರಿಸಿ ವಿದ್ಯಾಭ್ಯಾಸ ನೀಡುತ್ತಾ, ಕಳೆದ ನಾಲ್ಕೂವರೆ ವರ್ಷದಿಂದ ತನ್ನ ಮಗನಿಗಾಗಿ ತಮಿಳುನಾಡಿನ ಹಲವಡೆ ಹುಡುಕಾಟ ನಡೆಸಿದ್ದಾನೆ. ಇದನ್ನೂ ಓದಿ: ಪಾರಂಪರಿಕವಾಗಿ ಗುಂಬಜ್ ನಿರ್ಮಾಣ – ತಜ್ಞರನ್ನು ಕಳಿಸಲು ಸರ್ಕಾರಕ್ಕೆ ರಾಮದಾಸ್ ಪತ್ರ

    ಕೊನೆಗೂ ಮಗು ಇರುವುದು ಗೊತ್ತಾದರೂ ಸಹ ಪೊಲೀಸರು ಸಹಕಾರ ನೀಡದ ಹಿನ್ನೆಲೆ ಕರೆದುಕೊಂಡು ಬರಲು ಸಹಾಯ ಆಗಿರಲಿಲ್ಲ. ಬಳಿಕ ಜಯನಗರದ ಆಮ್ ಆದ್ಮಿ ಪಾರ್ಟಿಯ ಸದಸ್ಯರು ಭಾಸ್ಕರ್ ರಾವ್ ಮೂಲಕ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ತಿಳಿಸಿದ ಬಳಿಕ ಪೊಲೀಸರು ತಮಿಳುನಾಡಿನ ಈ ರೋಡ್‍ನಲ್ಲಿರುವ ಮಗುವನ್ನು ಅತ್ತಿಬೆಲೆ ಠಾಣೆಗೆ ಕರೆತಂದು ಮಗುವಿನ ತಂದೆಗೆ ಒಪ್ಪಿಸಿದ್ದು, ಮಗನನ್ನು ನೋಡಿದ ಬಾಲಮಣಿ ತಬ್ಬಿಕೊಂಡು ಮಗುವನ್ನು ಮುದ್ದಾಡಿದ್ದಾನೆ. ಇನ್ನೊಂದೆಡೆ ತಮಿಳುನಾಡಿನಲ್ಲಿ ನಾಲ್ಕೈದು ಜನರ ಕೈ ಬದಲಾಗಿ ಹಳ್ಳಿಯೊಂದರಲ್ಲಿ ಸೇರಿದ್ದ ಮಗುವನ್ನು ಮರಳಿ ಸೇರಿಸಲು ಜೊತೆಗೆ ನಿಂತ ಆಮ್ ಆದ್ಮಿ ಪಾರ್ಟಿಯ ಸದಸ್ಯರು ಖುಷಿ ಪಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ATM ಕಳ್ಳರ ಖತರ್ನಾಕ್ ಪ್ಲಾನ್- ಯೂಟ್ಯೂಬ್‍ನಲ್ಲಿ ವೀಡಿಯೋ ನೋಡಿ ಟ್ರೈನಿಂಗ್

    ATM ಕಳ್ಳರ ಖತರ್ನಾಕ್ ಪ್ಲಾನ್- ಯೂಟ್ಯೂಬ್‍ನಲ್ಲಿ ವೀಡಿಯೋ ನೋಡಿ ಟ್ರೈನಿಂಗ್

    ಆನೇಕಲ್ (ಬೆಂಗಳೂರು): ಯೂಟ್ಯೂಬ್‍ನಲ್ಲಿ ಟ್ರೈನಿಂಗ್ ಪಡೆದು ಎಟಿಎಂ (ATM) ದರೋಡೆಗೆ ಇಳಿದಿದ್ದ ಖತರ್ನಾಕ್ ಗ್ಯಾಂಗ್‍ವೊಂದು ಖಾಕಿ ಬಲೆಗೆ ಬಿದ್ದಿದೆ. ರಾಜ್ಯ, ಹೊರರಾಜ್ಯಗಳಲ್ಲಿ ತಮ್ಮ ಕೈಚಳಕ ತೋರಿದ್ದ ಖದೀಮರಿಗೆ ಪೊಲೀಸರು ಜೈಲೂಟ ಬಡಿಸಿದ್ದಾರೆ.

    ಹೌದು. ಹೀಗೆ ಎಟಿಎಂ ಕೇಂದ್ರದ ಒಳಗೆ ಗ್ಯಾಸ್ ಕಟರ್ ಮೂಲಕ ಕಳ್ಳತನಕ್ಕೆ ಯತ್ನಿಸುತ್ತಿರುವ ಈ ಅಸಾಮಿಗಳು ಇದೀಗ ಆನೇಕಲ್ ಉಪವಿಭಾಗದ ಜಿಗಣಿ ಪೋಲೀಸರ ಅತಿಥಿಯಾಗಿದ್ದಾರೆ. ಬೇಗನೇ ಹಣ (Money) ಮಾಡುವ ಉದ್ದೇಶದಿಂದ ಎಟಿಎಂ ದೋಚಲು ಹೋಗಿ ಜೈಲಿಗೆ ಸೇರಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನ ಆಧರಿಸಿ ಜಿಗಣಿ ಪೊಲೀಸರು ಕಳ್ಳರನ್ನ ಪತ್ತೆಹಚ್ಚಿದ್ದಾರೆ. ಆರೋಪಿಗಳಾದ ಅಸ್ಸಾಂ ಮೂಲದ ಬಾಬುಲ್ ನೋನಿಯಾ, ಮಹ್ಮದ್ ಆಸೀಪ್ ಉದ್ದಿನ್, ತಪಸ್ ಬಿಸ್ವಾಸ್, ದಿಲ್ವಾರ್ ಹುಸೇನ್ ಲಷ್ಕರ್, ರೂಹುಲ್ ಅಮೀನ್ ಎಂಬವರನ್ನ ಬಂಧಿಸಿದ್ದಾರೆ.

    ಬಂಧಿತರು ಅಸ್ಸಾಂ ಮೂಲದವರಾಗಿದ್ದು ಕೆಲ ವರ್ಷಗಳ ಹಿಂದೆ ಅತ್ತಿಬೆಲೆ ಸಮೀಪದ ತಿರುಪಾಳ್ಯಕ್ಕೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು. ಅತೀ ಬೇಗನೆ ಹೆಚ್ಚು ಹಣ ಸಂಪಾದನೆ ಮಾಡುವ ಪ್ಲ್ಯಾನ್ ಮಾಡಿದ್ದ ಅಸಾಮಿಗಳು ಯೂಟ್ಯೂಬ್‍ನಲ್ಲಿ ಎಟಿಎಂ ಕಳ್ಳತನ ಮಾಡುವುದು ಹೇಗೆ ಎನ್ನುವ ಬಗ್ಗೆ ಟ್ರೈನಿಂಗ್ (Training) ಪಡೆದಿದ್ರು. ಮೊದಲಿಗೆ ಸಿಲಿಂಡರ್ ಒಂದನ್ನ ಕಳ್ಳತನ ಮಾಡಿಕೊಂಡು ಬಂದಿರುತ್ತಾರೆ. ತದನಂತರ ಗ್ಯಾಸ್ ಕಟರ್ ತೆಗೆದುಕೊಂಡು ಮನೆಯಲ್ಲಿ ಕಬ್ಬಿಣವನ್ನ ಕಟ್ ಮಾಡಿ ಟ್ರೈನಿಂಗ್ ಪಡೆದುಕೊಳ್ತಾರೆ.

    ಈ ಐವರ ತಂಡ ಆಟೋದಲ್ಲಿ ಕಳೆದ ತಿಂಗಳ 22ರಂದು ರಾತ್ರಿ ಶ್ರೀರಾಮಪುರದ ಎಟಿಎಂ ಕೇಂದ್ರಕ್ಕೆ ನುಗ್ಗಿ ಕಳ್ಳನಕ್ಕೆ ಮುಂದಾಗ್ತಾರೆ. ಈ ವೇಳೆ ಸೈರನ್ ಬಂದಾಗ ಸಿಲಿಂಡರ್, ಗ್ಯಾಸ್ ಕಟರ್‍ಗಳನ್ನ ಅಲ್ಲಿಯೇ ಬಿಟ್ಟು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಜಿಗಣಿ ಪೋಲೀಸ್ ಇನ್ಸ್ ಪೆಕ್ಟರ್ ಸುದರ್ಶನ್ ನೇತೃತ್ವದ ತಂಡ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ರು. ಸುಮಾರು 250 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಅಸ್ಸಾಂ ಕಡೆ ಪರಾರಿಯಾಗಲು ಮುಂದಾಗಿದ್ದ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

    ಒಟ್ಟಿನಲ್ಲಿ ಎಟಿಎಂ ಕಳ್ಳತನ ಮಾಡಲೆಂದು ಯೂಟ್ಯೂಬ್‍ನಲ್ಲಿ ಟ್ರೈನಿಂಗ್ ಪಡೆದು ಕಳ್ಳತನಕ್ಕೆ ಯತ್ನಿಸಿ ಪೋಲೀಸರ ಕೈಗೆ ಸಿಗದೆ ಪರಾರಿಯಾಗಲು ಮುಂದಾಗಿದ್ರು. ಮಾಡಿದ್ದುಡ್ಡೋ ಮಾರಾಯ ಎನ್ನುವಂತೆ ಈಗ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ. ಜಿಗಣಿ ಪೋಲೀಸರ ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸದ್ದಕ್ಕೆ ಯುವಕ ಆತ್ಮಹತ್ಯೆ

    ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸದ್ದಕ್ಕೆ ಯುವಕ ಆತ್ಮಹತ್ಯೆ

    ಆನೇಕಲ್: ದೀಪಾವಳಿ (Deepavali) ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಿಲ್ಲ ಎಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

    ತಮಿಳುನಾಡಿನ ಡೆಂಕಣಿಕೋಟೆ ಸಮೀಪದ ಉಳಿಮಂಗಲಂ ನಲ್ಲಿ ಈ ಪ್ರಕರಣ ನಡೆದಿದೆ. ಮೃತನನ್ನು ಶಿವಕುಮಾರ್(19) ಎಂದು ಗುರುತಿಸಲಾಗಿದೆ. ನರ್ಸರಿ ಫಾರ್ಮ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಶಿವಕುಮಾರ್, ಇದೀಗ ಪೋಷಕರು ಬಟ್ಟೆ (New Dress) ಕೊಡಿಸಿಲ್ಲ ಎಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಪತ್ನಿಯನ್ನು ಉಳಿಸೋ ಬದ್ಲು ವೀಡಿಯೋ ಮಾಡಿಕೊಂಡ ಪತಿ

    ಇತ್ತೀಚೆಗೆ ಯುವಕರ ಜೊತೆ ಸೇರಿ ಶಿವಕುಮಾರ್ ಮದ್ಯವ್ಯಸನಿಯಾಗಿದ್ದ. ಈ ಮಧ್ಯೆ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸುವಂತೆ ಪೋಷಕರ ಬಳಿ ಕೇಳಿದ್ದ. ಆದರೆ ಪೋಷಕರು ಬಟ್ಟೆ ಕೊಡಿಸಲು ನಿರಾಕರಿಸಿದ್ದಾರೆ. ಇದರಿಂದ ಮನನೊಂದು ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಬಾತ್ ರೂಮ್ ನಲ್ಲಿ ನೇಣು ಹಾಕಿಕೊಂಡಿದ್ದಾನೆ.

    POLICE JEEP

    ಸ್ಥಳಕ್ಕೆ ಡೆಂಕಣಿಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಡೆಂಕಣಿಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಡೆಂಕಣಿಕೋಟೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಗಿಫ್ಟ್ ನೀಡೋ ನೆಪದಲ್ಲಿ 18 ಲಕ್ಷ ರೂ. ವಂಚನೆ – ವಿದೇಶಿ ಜೋಡಿಯಿಂದ ಮಹಿಳೆಗೆ ಪಂಗನಾಮ

    Live Tv
    [brid partner=56869869 player=32851 video=960834 autoplay=true]