Tag: Anekal police

  • ಸಂಸಾರದಲ್ಲಿ ಹುಳಿ ಹಿಂಡಿದ ಬ್ಯೂಟಿ ಪಾರ್ಲರ್ ಆಂಟಿ – ಗೃಹಿಣಿ ಅನುಮಾನಾಸ್ಪದ ಸಾವು; ಕೊಲೆ ಆರೋಪ

    ಸಂಸಾರದಲ್ಲಿ ಹುಳಿ ಹಿಂಡಿದ ಬ್ಯೂಟಿ ಪಾರ್ಲರ್ ಆಂಟಿ – ಗೃಹಿಣಿ ಅನುಮಾನಾಸ್ಪದ ಸಾವು; ಕೊಲೆ ಆರೋಪ

    – ಪತಿಯೇ ಕ್ರಿಮಿನಾಶಕ ಕುಡಿಸಿ ಕೊಲೆ ಮಾಡಿರುವ ಆರೋಪ

    ಆನೇಕಲ್: 12 ವರ್ಷಗಳ ಹಿಂದೆ ಗುರುಹಿರಿಯರ ಸಮ್ಮುಖದಲ್ಲಿ ಆ ಜೋಡಿ ಮದ್ವೆಯಾಗಿತ್ತು (Marriage). ಮುದ್ದಾದ ಇಬ್ಬರು ಗಂಡು ಮಕ್ಕಳಿದ್ದರು. ಸಂಸಾರ ಸುಃಖವಾಗಿತ್ತು ಅನ್ನುವಾಗಲೇ ದುರಂತ ನಡೆದುಬಿಟ್ಟಿದೆ. ಅದೊಂದು ವಿಚಾರ ಆ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿ, ಒಬ್ಬರ ಸಾವಿಗೂ ಕಾರಣವಾಗಿದೆ.

    ದುರಂತದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿ ದೀಪು, ಹಲ್ಲೆ ಮಾಡಿದ ಪತಿ ಉದಯ್‌. ಮೂಲತಃ ಪಿರಿಯಾಪಟ್ಟಣದ (Piriyapatna) ನಿವಾಸಿಯಾದ ದೀಪು 12 ವರ್ಷಗಳ ಹಿಂದೆ ಗುರು ಹಿರಿಯರ ಸಮ್ಮುಖದಲ್ಲಿ ಉದಯ್‌ ಎಂಬಾತನನ್ನ ವಿವಾಹವಾಗಿದ್ದಳು. ದಂಪತಿಗೆ ಮುದ್ದಾದ ಇಬ್ಬರು ಗಂಡು ಮಕ್ಕಳಿದ್ದರು. ಸಂಸಾರದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದ್ರೆ ಇತ್ತೀಚೆಗೆ ಉದಯ್-ದೀಪಾ ದಂಪತಿ ನಡುವೆ ಬ್ಯೂಟಿ ಪಾರ್ಲರ್ ಆಂಟಿ ಎಂಟ್ರಿ ಕೊಟ್ಟಿದ್ದು, ಸಂಸಾರಕ್ಕೆ ಹುಳಿ ಹಿಂಡಿತ್ತು. ಇದನ್ನೂ ಓದಿ: Ramanagara | ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ – ಇಬ್ಬರ ಮೇಲೆ ಪ್ರಕರಣ ದಾಖಲು

    ಚಾಮುಂಡಿಬೆಟ್ಟದಲ್ಲಿ ಮಾತುಕತೆ ನಡೆದು ಗಂಡ ಉದಯ್ ಬ್ಯೂಟಿ ಪಾರ್ಲರ್ ಆಂಟಿಗೆ (Beauty Parlour Aunty) ಕಟ್ಟಿದ ತಾಳಿ ತೆಗೆಸಿದ್ರು. ಆದರೂ ಸಂಸಾರದ ತಾಳ ಮೇಳ ಸರಿಯಾಗಲಿಲ್ಲ. ನಿತ್ಯ ಮನೆಯಲ್ಲಿ ಆಂಟಿ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳ ಹೊಡೆದಾಟ ಕಾಮನ್ ಆಗಿತ್ತು. ಇದೇ ತಿಂಗಳು 6ನೇ ತಾರೀಖು ಆಂಟಿ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಗಂಡ ಉದಯ್ ಹಲ್ಲೆ ನಡೆಸಿ ನೀನು ಎಲ್ಲಾದರೂ ಹೋಗಿ ಸಾಯಿ ಎಂದು ಹೊಡೆದಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ಪತ್ನಿ ದೀಪಾ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ಚಿಕಿತ್ಸೆ ಫಲಕಾರಿಯಾಗದೇ 9ನೇ ತಾರೀಖು ನಗರದ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಗಂಡು ಹುಟ್ಟಲಿಲ್ಲ ಅಂತ ಬೇಸರಗೊಂಡು ಹೆಣ್ಣುಮಗಳಿಗೆ ವಿಷವಿಕ್ಕಿ ಕೊಂದ ಸೇನಾ ಸಿಬ್ಬಂದಿ

    ಇತ್ತ ದೀಪಾಳ ಪೋಷಕರು ಕ್ರಿಮಿ ನಾಶಕ ಕುಡಿಸಿ ಮಗಳನ್ನ ಉದಯ್ ಕೊಂದಿರುವುದಾಗಿ ಆರೋಪಿಸಿದ್ದಾತೆ. ಮಹಿಳೆಯೊಬ್ಬಳ ಅಕ್ರಮ ಸಂಬಂಧ ವಿಚಾರಕ್ಕೆ ಪದೇ ಪದೇ ಹಲ್ಲೆ ನಡೆಸುತ್ತಿದ್ದ ಉದಯ್‌. ಕಿವಿ ಓಲೆ ಕೂಡ ಹಲ್ಲೆ ವೇಳೆ ಮುರಿದು ಹೋಗಿತ್ತು. ಬದುಕಲು ಸಾಧ್ಯವಿಲ್ಲ ಎಂದಾಗ ಬುದ್ಧಿ ಮಾತು ಹೇಳಿದ್ದೆವು. ಆದರೂ ಮನೆಯ ವಿಚಾರ ನಿಮ್ಮ ಕುಟುಂಬದವರಿಗೆ ತಿಳಿಸುತ್ತಿಯಾ ಎಂದು ಹಲ್ಲೆ ನಡೆಸಿದ್ದಾನೆ. ಹಣಕ್ಕಾಗಿಯು ಸಾಕಷ್ಟು ಪೀಡಿಸಿದ್ದಾನೆ. ಕೊನೆಗೆ ಕ್ರಿಮಿನಾಶಕ ಕುಡಿದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ಕೊನೆ ಕ್ಷಣದಲ್ಲಿ ನಮಗೆ ತಿಳಿಸಿದ್ರು ಮಗಳ ಗಂಡ ಉದಯ್ ವಿಶ ಕುಡಿಸಿ ಕೊಂದಿರುವ ಸಾಧ್ಯತೆ ಇದೆ. ಪೊಲೀಸರು ನ್ಯಾಯ ಕೊಡಿಸಬೇಕು ಎಂದು ಮೃತ ದೀಪಾ ಕುಟುಂಬದವರು ಆಗ್ರಹಿಸಿದ್ದಾರೆ.

    ಸದ್ಯ ಮೃತ ದೀಪಾ ತಾಯಿ ಸುಗುಣಮ್ಮ ದೂರು ಆಧರಿಸಿ ಆತ್ಮಹತ್ಯೆ ಪ್ರಚೋದನೆ ಸೇರಿದಂತೆ ಜಾಮೀಜು ರಹಿತ ಸೆಕ್ಷನ್ ಅಡಿಯಲ್ಲಿ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ರು. ಆರೋಪಿ ಉದಯ್‌ನನ್ನ ವಶಕ್ಕೆ ಪಡೆದು ಬಳಿಕ ಬಿಟ್ಟು ಕಳುಹಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ನಾಗ್ಪುರ | ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಮೃತದೇಹವನ್ನ ಬೈಕ್‌ನಲ್ಲೇ ಸಾಗಿಸಿದ ಪತಿ

  • ಬೆಂಗಳೂರು | ಅಪ್ರಾಪ್ತೆಯನ್ನು ಕರೆದೊಯ್ದು ಮದುವೆಗೆ ಯತ್ನ – ಆರೋಪಿ ಅರೆಸ್ಟ್

    ಬೆಂಗಳೂರು | ಅಪ್ರಾಪ್ತೆಯನ್ನು ಕರೆದೊಯ್ದು ಮದುವೆಗೆ ಯತ್ನ – ಆರೋಪಿ ಅರೆಸ್ಟ್

    ಆನೇಕಲ್: ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋಗಿ ಮದುವೆ (Marriage) ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರು ಹೊರ ವಲಯದ ಆನೇಕಲ್ ಪೋಲಿಸ್ ಠಾಣಾ (Anekal Police Station) ವ್ಯಾಪ್ತಿಯಲ್ಲಿ ನಡೆದಿದೆ.

    ಕೋರಮಂಗಲ (Koramangala) ಮೂಲದ ನಿವಾಸಿ ಸೊಸೆರಾಜು ಬಂಧಿತ ಆರೋಪಿ. ಬೆಂಗಳೂರಿನ ಕೋರಮಂಗಲದಲ್ಲಿರುವ ಅಜ್ಜಿಯ ಮನೆಗೆಂದು ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಆರೋಪಿ ಕರೆದುಕೊಂಡು ಓಡಿ ಹೋಗಿದ್ದ. ಇದನ್ನೂ ಓದಿ: ಮಂಗಳೂರು | ಲವ್-ಸೆಕ್ಸ್ ದೋಖಾ ಕೇಸ್‌ – ಬಿಜೆಪಿ ಪ್ರಭಾವಿ ಮುಖಂಡನ ಪುತ್ರ ಅರೆಸ್ಟ್‌

    ವಿಚಾರ ತಿಳಿಯುತ್ತಿದ್ದಂತೆ ಅಪ್ರಾಪ್ತೆಯ ತಂದೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವುದಾಗಿ ದೂರು ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿಯನ್ನು ಬಂಧಿಸಿ ಆನೇಕಲ್ ಠಾಣೆಗೆ ಕರೆತಂದಿದ್ದಾರೆ. ಇದನ್ನೂ ಓದಿ: ಉದ್ಯಮಿ ನೀರವ್ ಮೋದಿ ಸಹೋದರ ನೇಹಲ್ ಮೋದಿ ಬಂಧನ

    ಈ ಪ್ರಕರಣ ಸಂಭವಿಸಿ ಎರಡು ದಿನ ಕಳೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಹೆಂಡ್ತಿ ಕೊಂದು ಮಹಾರಾಷ್ಟ್ರ ಬಾರ್ಡರ್‌ನಲ್ಲಿ ವಿಷ ಖರೀದಿಸಿದ್ದ ಟೆಕ್ಕಿ – ಹಂತಕನನ್ನ ಪುಣೆಯಿಂದ ಕರೆತಂದ ಪೊಲೀಸರು

    ಹೆಂಡ್ತಿ ಕೊಂದು ಮಹಾರಾಷ್ಟ್ರ ಬಾರ್ಡರ್‌ನಲ್ಲಿ ವಿಷ ಖರೀದಿಸಿದ್ದ ಟೆಕ್ಕಿ – ಹಂತಕನನ್ನ ಪುಣೆಯಿಂದ ಕರೆತಂದ ಪೊಲೀಸರು

    – ಅತ್ತೆ ಮಗಳನ್ನೇ ಕೊಂದು ಈಗ ಪಶ್ಚಾತಾಪ
    – ಆರೋಪಿಗೆ 14 ದಿನ ಜೈಲು

    ಬೆಂಗಳೂರು: ಹೆಂಡ್ತಿಯನ್ನ ಕೊಂಡು ಪೀಸ್‌ ಪೀಸ್‌ ಮಾಡಿ, ತುಂಡರಿಸಿದ ಮೃತದೇಹವನ್ನ ಸೂಟ್‌ಕೇಸ್‌ನಲ್ಲಿಟ್ಟು ಎಸ್ಕೇಪ್‌ ಆಗಿದ್ದ ಟೆಕ್ಕಿ ಹಂತಕನನ್ನ ಕೊನೆಗೂ ಪೊಲೀಸರು ಬೆಂಗಳೂರಿಗೆ (Bengaluru) ಕರೆ ತಂದಿದ್ದಾರೆ.

    ಸ್ವಂತ ಅತ್ತೆ ಮಗಳನ್ನ ಕುಟುಂಬದ ವಿರೋಧದ ನಡುವೆ ಮದುವೆಯಾಗಿದ್ದ ಟೆಕ್ಕಿ, ಇದೀಗ ಕೊಲೆ ಮಾಡಿ ಪಶ್ಚಾತ್ತಾಪದಲ್ಲಿದ್ದಾನೆ. ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ (Hulimavu Police Station) ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯಲ್ಲಿ ಪತ್ನಿ ಗೌರಿಯನ್ನು ಕೊಂದು ಸೂಟ್ ಕೇಸ್‌ಗೆ ತುಂಬಿದ್ದ ಆರೋಪಿ ಟೆಕ್ಕಿ ರಾಕೇಶ್ ನನ್ನ ನಿನ್ನೆ ರಾತ್ರಿಯೇ ಕೋರಮಂಗಲದ ಮ್ಯಾಜಿಸ್ಟ್ರೇಟ್ ನಿವಾಸದಲ್ಲಿ ಹಾಜರು ಪಡಿಸಿದ್ದಾರೆ. ಇದನ್ನೂ ಓದಿ: ಮಾಟಮಂತ್ರದ ಹೆಸರಿನಲ್ಲಿ ವ್ಯಕ್ತಿಯ ಶಿರಶ್ಛೇದನ – ದೇಹವನ್ನು ಹೋಳಿಕಾ ದಹನ್‌ನಲ್ಲಿ ಸುಟ್ಟ ಆರೋಪಿಗಳು

    ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ ಟೆಕ್ಕಿ ರಾಕೇಶ್. ನಾಳೆ ಓಪನ್ ಕೋರ್ಟ್ ನಲ್ಲಿ ಬಾಡಿ ವಾರೆಂಟ್ ಮೇಲೆ ಅರ್ಜಿ ಸಲ್ಲಿಸಿ ಕಸ್ಟಡಿಗೆ ಪಡೆಯಲು ಪೊಲೀಸ್ರು ಸಿದ್ಧತೆ ಮಾಡ್ಕೊಂಡಿದ್ದಾರೆ. ಇದನ್ನೂ ಓದಿ: ಪತ್ನಿ ತುಂಡರಿಸಿ ಸೂಟ್‍ಕೇಸ್‍ಗೆ ತುಂಬಿ, ಪುಣೆಯಲ್ಲಿ ವಿಷ ಸೇವಿಸಿದ್ದ ಹಂತಕ!

    ಮಹಾರಾಷ್ಟ್ರ ಬಾರ್ಡರ್‌ನಲ್ಲಿ ವಿಷ ಖರೀದಿ
    ಕೊಲೆ ಮಾಡಿ ಪುಣೆ ಕಡೆ ಹೋಗ್ತಿದ್ದ ಆರೋಪಿ ಕರ್ನಾಟಕ ಮಹಾರಾಷ್ಟ್ರ ಬಾರ್ಡರ್ ಕಾಗಲ್ ಎಂಬಲ್ಲಿ ವಿಷ ಖರೀದಿಸಿದ್ದ. ಪೆನಾಯಿಲ್ ಮತ್ತು ಜಿರಲೆ ಔಷಧಿಯನ್ನ ಖರೀದಿ ಮಾಡಿಟ್ಟುಕೊಂಡು ಮುಂದೆ ಸಾಗಿದ್ದ. ಶಿರವಾಲ್‌ಗೆ ಹೋಗುವ ದಾರಿಯಲ್ಲಿ ಖಂಬಟ್ಕಿ ಎಂಬಲ್ಲಿ ಕಾರು ನಿಲ್ಲಿಸಿ ವಿಷ ಸೇವನೆ ಮಾಡಿದ್ದ. ವಿಷ ಸೇವಿಸಿದ ಕೂಡಲೇ ಆರೋಗ್ಯದಲ್ಲಿ ಏರು ಪೇರು ಕಂಡುಬಂದಿತ್ತು. ಈತನನ್ನ ನೋಡಿ ಏನಾಯ್ತು ಎಂದು ಕೇಳಿದ ಬೈಕ್ ಸವಾರನಿಗೆ ಕೊಲೆ ಮಾಡಿದ್ದ ಕಥೆ ಹೇಳಿದ್ದ. ಅಲ್ಲದೇ ತಾನು ವಿಷ ಸೇವನೆ ಮಾಡಿರೋದಾಗಿ ಹೇಳಿದ್ದ. ಕೂಡಲೇ ರಾಕೇಶ್ ನನ್ನ ಬೈಕ್ ನಲ್ಲೆ ಆಸ್ಪತ್ರೆಗೆ ದಾಖಲಿಸಿದ್ದ. ಇದನ್ನೂ ಓದಿ: ಆನೇಕಲ್‌ | ಪತ್ನಿ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದ ಟೆಕ್ಕಿ ಪತಿ – ಮಹಾರಾಷ್ಟ್ರದಲ್ಲಿ ಹಂತಕ ಅರೆಸ್ಟ್

    ಇನ್ನು ಘಟನೆ ಬಗ್ಗೆ ಆರೋಪಿ ರಾಕೇಶ್ ತಂದೆ ರಾಜೇಂದ್ರ ಕೇಡೆಕರ್ ಹೇಳಿಕೆ ನೀಡಿದ್ದು, ಮೃತ ಗೌರಿ ನನ್ನ ಸಹೋದರಿಯ ಮಗಳು. ರಾಕೇಶ್ ಗೌರಿ ಮದುವೆಗೆ ನಮ್ಮ ಕುಟುಂಬದ ಒಪ್ಪಿಗೆ ಇರ್ಲಿಲ್ಲ. ಮದುವೆ ವಿಚಾರಕ್ಕೆ ಕುಟುಂಬದ ಜೊತೆ ಗೌರಿ ಜಗಳ ಮಾಡ್ಕೊಂಡಿದ್ಲು. ಸ್ವಭಾವತಃ ಗೌರಿ ಜಗಳ ಪ್ರೌವೃತ್ತಿಯವಳಾಗಿದ್ಲು, ಎರಡು ವರ್ಷದ ಹಿಂದೆ ವಿರೋಧದ ನಡುವೆಯೂ ಮದುವೆ ಆಗಿದ್ರು. ಗೌರಿ ಯಾವಾಗಲೂ ನನ್ನ ಮಗ ಮತ್ತು ಕುಟುಂಬಸ್ಥರ ಜೊತೆ ಹಲವು ಬಾರಿ ಜಗಳ ಆಡ್ತಿದ್ಲು. ಗಂಡ-ಹಂಡತಿ ಜಗಳ ಪೊಲೀಸ್ ಠಾಣೆವರೆಗೂ ಹೋಗಿತ್ತು. ರಾಕೇಶ್ ಕೊಲೆ‌ ಮಾಡಿದೀನಿ ಅಂತಾ ಗುರುವಾರ ನನಗೆ ಕಾಲ್ ಮಾಡಿ ಹೇಳಿದ್ದ. ಅಲ್ಲದೇ ತಾನೂ ಕೂಡ ಆತ್ಮಹತ್ಯೆ ಮಾಡ್ಕೊಳ್ತಿದೀನಿ ಅಂತಾ ಹೇಳಿದ್ದ. ನಿನ್ನ ನಿರ್ಧಾರ ತುಂಬಾ ಕಠಿಣವಾಗಿದೆ ಅಂತಾ ನಾನು ಹೇಳಿದ್ದೆ. ಗೌರಿ ತಾಯಿ ಮತ್ತು ಮುಂಬೈನ ಮೆಗವಾಡಿ ಪೊಲೀಸ್ರಿಗೆ ಘಟನೆ ಬಗ್ಗೆ ತಿಳಿಸಿದ್ದೆ. ನಂತರ ಶಿರವಾಲ್ ಪೊಲೀಸ್ರು ಆತನನ್ನ ಪತ್ತೆ ಹಚ್ಚಿದ್ರು ಅಂತಾ ಆರೋಪಿ ರಾಕೇಶ್ ತಂದೆ ರಾಜೇಂದ್ರ ಹೇಳಿಕೆ ನೀಡಿದ್ದಾರೆ.

    ಕ್ಷುಲ್ಲಕ ವಿಚಾರಕ್ಕೆ ಅತ್ತೆ ಮಗಳನ್ನೇ ಕೊಂದು ಟೆಕ್ಕಿ ಇದೀಗ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾನೆ. ಈತ ಮಾಡಿದ ತಪ್ಪಿಗೆ ಎರಡು ಕುಟುಂಬಗಳು ಪರಿತಪಿಸುವಂತೆ ಮಾಡಿದ್ದಾನೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ – ಗಂಡನ ಹಿಂಸೆ ತಾಳಲಾರದೆ ತವರು ಸೇರಿದ್ದ ಪತ್ನಿ

  • ಆನೇಕಲ್‌ | ಪತ್ನಿ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದ ಟೆಕ್ಕಿ ಪತಿ – ಮಹಾರಾಷ್ಟ್ರದಲ್ಲಿ ಹಂತಕ ಅರೆಸ್ಟ್

    ಆನೇಕಲ್‌ | ಪತ್ನಿ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದ ಟೆಕ್ಕಿ ಪತಿ – ಮಹಾರಾಷ್ಟ್ರದಲ್ಲಿ ಹಂತಕ ಅರೆಸ್ಟ್

    ಆನೇಕಲ್‌: ಸುಂದರ ಸಂಸಾರವದು. ಗಂಡನಿಗೆ ಸಾಫ್ಟ್‌ವೇರ್‌ ಕೆಲಸ… ಕೈ ತುಂಬ ಸಂಬಳ… ಹೆಂಡ್ತಿ ಕೂಡ ಡಿಗ್ರಿ ಮುಗಿಸಿ ಕೆಲಸಕ್ಕಾಗಿ ಹುಡುಕ್ತಿದ್ದರು ಸ್ಫುರದ್ರೂಪಿ ಅವಳು. ಹೀಗಿದ್ದಾಗ ಹೆಂಡ್ತಿಯನ್ನ ಕೊಲೆ ಮಾಡಿ ಸೂಟ್ ಕೇಸ್‌ಗೆ ತುಂಬಿ ಪುಣೆಯಲ್ಲಿ ಅರೆಸ್ಟ್ ಆಗಿರೋ ಗಂಡನ ಕ್ರೈಂ ಸ್ಟೋರಿ ನೋಡಿದ್ರೆ ಬೆಚ್ಚಿಬೀಳೋದಂತೂ ಗ್ಯಾರಂಟಿ.

    ಗೌರಿ ಅನಿಲ್ ಸಾಂಬೇಕರ್ ಕೊಲೆಯಾದ ಮಹಿಳೆ. ಮಾಸ್ ಕಮ್ಯುನಿಕೇಷನ್‌ನಲ್ಲಿ ಡಿಗ್ರಿ ಮುಗಿಸಿದ್ರು, ಎರಡು ವರ್ಷದ ಹಿಂದೆ ರಾಕೇಶ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಸಾಫ್ಟ್ ವೇರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ರಾಕೇಶ್ ವರ್ಕ್ ಫ್ರಂ ಹೋಮ್‌ನಲ್ಲೇ ಕೆಲಸ ನಿರ್ವಹಿಸ್ತಿದ್ದ. ಇಬ್ಬರೂ ಕೂಡ ಮಹಾರಾಷ್ಟ್ರ ಮೂಲದವರು. ಕಳೆದ ಒಂದು ತಿಂಗಳ ಹಿಂದೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯಲ್ಲಿ ಬಾಡಿಗೆಗೆ ಬಂದಿದ್ರು ಈ ದಂಪತಿ. ಇದನ್ನೂ ಓದಿ: ಆನೇಕಲ್‌| ಪತ್ನಿ ದೇಹ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ ಪಾಪಿ ಪತಿ

    ಸೂಟ್‌ಕೇಸ್‌ಗಳನ್ನು ಟಾಯ್ಲೆಟ್‌ನಲ್ಲಿಟ್ಟಿದ್ದ ಪತಿ ರಾಕೇಶ್:
    ಇನ್ನು ನಿನ್ನೆ ಸಂಜೆ ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿಗೆ ಕರೆ ಮಾಡಿ ಹೆಂಡ್ತಿಯನ್ನು ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿಟ್ಟಿರೋದಾಗಿ ಹೇಳಿದ್ದ. ಕೆಳಗಿನ ಮನೆಯ ಬಾಡಿಗೆದಾರ ಕೂಡಲೇ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ರು. ಸ್ಥಳಕ್ಕೆ ಎಫ್‌ಎಸ್‌ಎಲ್ ಟೀಂ, ಸೋಕೊ ಟೀಂ ಜೊತೆ ಎಂಟ್ರಿ ಕೊಟ್ಟ ಹುಳಿಮಾವು ಪೊಲೀಸರಿಗೆ ಕೊಲೆಯಾಗಿರೋದು ಕನ್ಫರ್ಮ್ ಆಗಿತ್ತು. ಹೆಂಡತಿಯ ದೇಹವನ್ನು ಅರ್ಧ ಕತ್ತರಿಸಿ, ಹೊಟ್ಟೆಭಾಗ ಕೊಯ್ದು ಸೂಟ್‌ಕೇಸ್‌ನಲ್ಲಿ ತುರುಕಿ, ಟಾಯ್ಲೆಟ್ ರೂಂನಲ್ಲಿಟ್ಟು ಪತಿರಾಯ ಎಸ್ಕೇಪ್ ಆಗಿದ್ದ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಗೆ ತಟ್ಟಿದ ಬರ – 20 ಗ್ರಾಮಗಳಲ್ಲಿ ಒಂದು ತೊಟ್ಟು ನೀರಿಲ್ಲ, ಬತ್ತಿದ ಬಾವಿಗಳ ಅಂತರ್ಜಲ

    ಮೊನ್ನೆ ರಾತ್ರಿ ಊಟದ ಸಮಯಕ್ಕೆ ಗಂಡ ಹೆಂಡ್ತಿ ನಡುವೆ ಗಲಾಟೆಯಾಗಿದೆ. ಈ ವೇಳೆ ಹೆಂಡ್ತಿಯನ್ನ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿಯ ಸಿಡಿಆರ್ ಜಾಡು ಹಿಡಿದ ಪೊಲೀಸರು ಪುಣೆಯ ಶಿರವಾಲ್ ಪೊಲೀಸರು ಬಂಧಿಸಿದ್ದಾರೆ. ಹುಳಿಮಾವು ಪೊಲೀಸ್ರು ಪುಣೆ ರೀಚ್ ಆಗಿದ್ದು, ಆರೋಪಿಯನ್ನ ಕರೆತರ್ತಿದ್ದಾರೆ. ಇನ್ನು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ಗೌರಿ ಪೋಷಕರಿಗೆ ವಿಚಾರ ಮುಟ್ಟಿಸಿದ್ದಾರೆ.

    ಗಂಡ ಹೆಂಡ್ತಿ ಅಂದ್ ಮೇಲೆ ನೂರು ವಿಚಾರ ಬರುತ್ತೆ ಹೋಗುತ್ತೆ. ಅಷ್ಟಕ್ಕೆ ಹೆಂಡ್ತಿ ಕೊಲೆ ಮಾಡಿ ಸೂಟ್ ಕೇಸ್‌ಗೆ ತುಂಬ್ತಾನಂದ್ರೆ ಟೆಕ್ಕಿ ಎಂಥಾ ಕಟುಕನಿರಬೇಡ. ಸದ್ಯ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.  ಇದನ್ನೂ ಓದಿ: ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು ದುರಂತ – ಕೆಳಹಂತದ 4 ಅಧಿಕಾರಿಗಳು ಅಮಾನತು

  • ಆನೇಕಲ್‌ನಲ್ಲಿ ಡಬಲ್ ಬ್ಯಾರಲ್ ಗನ್ ಸದ್ದು – ಜಗಳ ಬಿಡಿಸಲು ಹೋದವನಿಗೆ ಗುಂಡೇಟು!

    ಆನೇಕಲ್‌ನಲ್ಲಿ ಡಬಲ್ ಬ್ಯಾರಲ್ ಗನ್ ಸದ್ದು – ಜಗಳ ಬಿಡಿಸಲು ಹೋದವನಿಗೆ ಗುಂಡೇಟು!

    ಆನೇಕಲ್: ಪಟ್ಟಣದಲ್ಲಿ ಮತ್ತೆ ಡಬಲ್ ಬ್ಯಾರಲ್ ಗನ್ ಸದ್ದು ಮಾಡಿದೆ. ಇಬ್ಬರ ಜಗಳ ಬಿಡಿಸಲು ಹೋದಾಗ ಮೂರನೆ ವ್ಯಕ್ತಿಗೆ ಗುಂಡೇಟು ತಗುಲಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ (Anekal) ತಾಲೂಕಿನ ಸಿಡಿ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.

    ಸಂಪಂಗಿ ಗುಂಡೇಟು ತಿಂದ ವ್ಯಕ್ತಿಯಾಗಿದ್ದು, ಚಂದ್ರಶೇಖರ್ ಗನ್ ನಿಂದ ಗುಂಡು ಹಾರಿಸಿರುವ ಆರೋಪಿ. ಚಂದ್ರಶೇಖರ್ ಹಾಗೂ ಶ್ರೀನಿವಾಸ್ ಸಿಡಿ ಹೊಸಕೋಟೆ (Hosakote) ಗ್ರಾಮದ ಮುನಿರಾಜು ವೆಂಬು ಅವರ ಮಗನಾಗಿದ್ದು ತಂದೆ ಮಕ್ಕಳು ಇಬ್ಬರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಳ್ಳುತ್ತಿದ್ದರು. ಇದೇ ಸಮಯದಲ್ಲಿ ಹಲ್ಲೆ ಮಾಡುತ್ತಿದ್ದಾಗ ಬಿಡಿಸಲು ಮುನಿರಾಜು ಅವರ ಅಣ್ಣನಾದ ಸಂಪಂಗಿ ಹಾಗೂ ಪತ್ನಿ ಬಂದಿದ್ದಾರೆ.

    ಬಂದು ಸಮಾಧಾನ ಮಾಡಲು ಬಂದಿದ್ದ ಚಂದ್ರಶೇಖರ್ ಸಂಪಂಗಿಯ ಮೇಲೆ ಫೈರಿಂಗ್ ಮಾಡಿದ್ದಾನೆ. ಸಂಪಂಗಿಯ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಆನೇಕಲ್‌ನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಲಾಗಿದೆ ಹೆಚ್ಚಿನ ಚಿಕಿತ್ಸೆಗಾಗಿ ಸಂಪಂಗಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ವಕ್ಫ್‌ ಆಸ್ತಿ ವಿವಾದದ ಕಿಚ್ಚು – ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ

    ಈ ಸಂಬಂಧ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಉಡುಪಿ| ಮಗುವಿನ ಮೇಲೆ ಹಲ್ಲೆ ನಡೆಸಿದ್ದ ತಾಯಿ, ಆಕೆಯ ಪ್ರಿಯಕರನಿಗೆ ನ್ಯಾಯಾಂಗ ಬಂಧನ

  • ಆನೇಕಲ್‌ನಲ್ಲಿ ತುಪಾಕಿ ಸದ್ದು – ಸಿನಿಮೀಯ ಶೈಲಿಯಲ್ಲಿ ಕಾಂಗ್ರೆಸ್‌ ಪುರಸಭಾ ಸದಸ್ಯ ಹಂತಕನ ಬಂಧನ

    ಆನೇಕಲ್‌ನಲ್ಲಿ ತುಪಾಕಿ ಸದ್ದು – ಸಿನಿಮೀಯ ಶೈಲಿಯಲ್ಲಿ ಕಾಂಗ್ರೆಸ್‌ ಪುರಸಭಾ ಸದಸ್ಯ ಹಂತಕನ ಬಂಧನ

    ಬೆಂಗಳೂರು: ಪುರಸಭೆಯ ಕಾಂಗ್ರೆಸ್‌ ಸದಸ್ಯ ರವಿ ಹಂತಕನ ಕಾಲಿಗೆ ಗುಂಡು ಹಾರಿಸಿ, ಸಿನಿಮೀಯ ಶೈಲಿಯಲ್ಲಿ ಆನೆಕಲ್‌ ಪೊಲೀಸರು ಹಂತಕನನ್ನು ಬಂಧಿಸಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ (Anekal) ನಡೆದಿದೆ. ಹಂತಕನನ್ನು ಕಾರ್ತಿಕ್ ಅಲಿಯಾಸ್‌ ಜೆಕೆ ಎಂದು ಗುರುತಿಸಲಾಗಿದೆ.

    ಸಿನಿಮೀಯ ಸ್ಟೈಲ್‌ನಲ್ಲಿ ಅರೆಸ್ಟ್‌:
    ಇತ್ತೀಚೆಗಷ್ಟೇ ನಡುರಸ್ತೆಯಲ್ಲೇ ಪುರಸಭಾ ಸದಸ್ಯ ರವಿ ಅವರನ್ನ ಬರ್ಬರವಾಗಿ ಕೊಲೆ ಮಾಡಿದ್ದ ಘಟನೆ ಆನೇಕಲ್ ಪಟ್ಟಣದ ಬಹದ್ದೂರ್‌ಪುರದ ಬಳಿ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡ ಆನೇಕಲ್‌ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಇದನ್ನೂ ಓದಿ: Wayanad Landslides: ನಾಲ್ವರು ಕನ್ನಡಿಗರು ದುರ್ಮರಣ – ಬೆಂಗಳೂರಿನ ಇಬ್ಬರು ಪ್ರವಾಸಿಗರು ಕಣ್ಮರೆ!

    ಆರೋಪಿ ಕಳೆದ ಒಂದು ವಾರದಿಂದಲೂ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ. ಈತನ ಬಂಧನಕ್ಕಾಗಿ ಎರಡು ವಿಶೇಷ ತಂಡಗಳನ್ನ ನಿಯೋಜಿಸಲಾಗಿತ್ತು. ಬುಧವಾರ (ಇಂದು) ಮುಂಜಾನೆ ಮೈಸೂರಮ್ಮನದೊಡ್ಡಿ ಬಳಿ ಆರೋಪಿ ಅಡಗಿರುವುದು ಗೊತ್ತಾಗಿ, ಆತನನ್ನ ಬಂಧಿಸಲು ಮುಂದಾಗಿದ್ದರು. ಇದನ್ನೂ ಓದಿ: ಕೆಆರ್‌ಎಸ್‌ನಿಂದ 1.50 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ – ಕಬಿನಿಯಿಂದ 80,000 ಕ್ಯುಸೆಕ್‌ ನೀರು ಹೊರಕ್ಕೆ

    ಪೊಲೀಸರು ಬಂಧಿಸಲು ಮುಂದಾದಾಗ ಪೇದೆ ಸುರೇಶ್‌ ಮೇಲೆಯೇ ಆರೋಪಿ ಕಾರ್ತಿಕ್‌ ಹಲ್ಲೆ ನಡೆಸಿದ್ದ. ಇದರಿಂದ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ ಪೊಲೀಸರು ಶರಣಾಗುವಂತೆ ಸೂಚನೆ ಕೊಟ್ಟರು. ಆದರೂ ಮಾರಕಸ್ತ್ರ ಹಿಡಿದು ಮುನ್ನುಗುತ್ತಿದ್ದ ವೇಳೆ ಆನೇಕಲ್‌ ಇನ್ಸ್‌ಪೆಕ್ಟರ್‌ ತಿಪ್ಪೇಸ್ವಾಮಿ ಅವರು, ಆರೋಪಿ ಕಾರ್ತಿಕ್‌ ಕಾಲಿಗೆ ಗುಂಡು ಹಾರಿಸಿದರು. ಆರೋಪಿ ಬಲಗಾಲಿಗೆ ಗುಂಡು ತಾಗಿತು. ಬಳಿಕ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಇದನ್ನೂ ಓದಿ: ಮೂಳೆ ಶಸ್ತ್ರಚಿಕಿತ್ಸೆಯಾಗಿದೆ ಮನೆ ಊಟ ಕೊಡಿ – ಮ್ಯಾಜಿಸ್ಟ್ರೇಟ್‌ಗೆ ಮೂರು ಪತ್ರ ಬರೆದ ದರ್ಶನ್‌!

  • ಆನೇಕಲ್‌: ಕಾಂಗ್ರೆಸ್‌ ಪುರಸಭಾ ಸದಸ್ಯನ ಬರ್ಬರ ಕೊಲೆ – ಹೊಂಚು ಹಾಕಿ ಹತ್ಯೆ

    ಆನೇಕಲ್‌: ಕಾಂಗ್ರೆಸ್‌ ಪುರಸಭಾ ಸದಸ್ಯನ ಬರ್ಬರ ಕೊಲೆ – ಹೊಂಚು ಹಾಕಿ ಹತ್ಯೆ

    ಬೆಂಗಳೂರು: ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಪುರಸಭಾ ಸದಸ್ಯನನ್ನ (Congress Municipal Councilor) ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆನೇಕಲ್ (Anekal) ಪಟ್ಟಣದ ಬಹದ್ದೂರ್‌ಪುರದ ಬಳಿ ನಡೆದಿದೆ.

    ಕಾಂಗ್ರೆಸ್‌ ಪಕ್ಷದ (Congress Party) ಪುರಸಭಾ ಸದಸ್ಯ ರವಿ ಕೊಲೆಯಾದ ವ್ಯಕ್ತಿ. ಹೊಂಚು ಹಾಕಿ ಹಂತಕರು ಕೊಲೆ ಮಾಡಿದ್ದಾರೆ. ಘಟನೆ ಸಂಭವಿಸಿದ ಕೂಡಲೇ ಹಂತಕರು ಎಸ್ಕೇಪ್‌ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಸರ್ ನರಕ ಅನುಭವಿಸ್ತಿದ್ದಾರೆ: ಜೈಲಿನಲ್ಲಿದ್ಧ ಖೈದಿ ಸಿದ್ಧಾರೂಢ

    ಏನಿದು ಭೀಕರ ಕೃತ್ಯ?
    ಕಳೆದ 15 ದಿನಗಳಿಂದಲೂ ಯುವಕರ ಗ್ಯಾಂಗ್‌ವೊಂದು ಲಾಂಗ್‌ ಹಿಡಿದು ಓಡಾಡುತ್ತಿತ್ತು. ಈ ಬಗ್ಗೆ ʻಪಬ್ಲಿಕ್‌ ಟಿವಿʼ ವರದಿ ಮಾಡಿ ಎಚ್ಚರಿಸಿತ್ತು. ಇದೀಗ ಲಾಂಗ್‌ ಹಿಡಿದು ಓಡಾಡುತ್ತಿದ್ದ ಅದೇ ಯುವಕರ ಗ್ಯಾಂಗ್‌ನಿಂದ ಬಹದ್ದೂರ್‌ಪುರದ ಬಳಿ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನೂ ಪರಿಶೀಲಿಸಿದ್ದಾರೆ.

    ಸದ್ಯ ಹಳೇ ವೈಷಮ್ಯಕ್ಕೆ ಹಂತಕರು ಸಿಕ್ಕ ಸಿಕ್ಕ ಕಡೆಗಳಲ್ಲಿ ಮಚ್ಚು ಬೀಸಿ ಕೊಲೆಗೈದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅರಣ್ಯ ಇಲಾಖೆ ಭರದ ಸಿದ್ಧತೆ – 18 ಆನೆಗಳು ಗುರುತು

  • ಕಳ್ಳ ಅರೆಸ್ಟ್ 13 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

    ಕಳ್ಳ ಅರೆಸ್ಟ್ 13 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

    ಬೆಂಗಳೂರು/ಆನೇಕಲ್: ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಮನೆಕಳ್ಳನನ್ನು ಬಂಧಿಸಿದ್ದಾರೆ.

    ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ ಆತನಿಂದ ಸುಮಾರು 13 ಲಕ್ಷ ಮೌಲ್ಯದ 150 ಗ್ರಾಂ ಚಿನ್ನ ಮತ್ತು 3 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ನಾನೂ ಕೂಡು ಒಕ್ಕಲಿಗ ಪಂಗಡದವನು, ಆದರೆ ನಾವು ಲಿಂಗಾಯತರು: ಎಂ.ಬಿ.ಪಾಟೀಲ್

    ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಷಿ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗ ಎಸಿಪಿ ಪವನ್ ಕುಮಾರ್ ರವರ ಮಾರ್ಗದಶನದಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂದೀಪ್, ಸಬ್ ಇನ್ಸ್ ಪೆಕ್ಟರ್ ಪಿ.ಮಂಜುನಾಥ್, ಅಪರಾಧ ಸಿಬ್ಬಂದಿ ಪ್ರಕರಣವನ್ನು ಬೇಧಿಸಿದ್ದು ಪರಪ್ಪನ ಅಗ್ರಹಾರ ಪೊಲೀಸರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.