Tag: anekal balaraj

  • `ಕರಿಯ’ ಚಿತ್ರ ನಿರ್ಮಾಪಕ ಆನೇಕಲ್ ಬಾಲರಾಜ್ ನಿಧನ

    `ಕರಿಯ’ ಚಿತ್ರ ನಿರ್ಮಾಪಕ ಆನೇಕಲ್ ಬಾಲರಾಜ್ ನಿಧನ

    ನ್ನಡ ಚಿತ್ರರಂಗದ ಹಿಟ್ ಚಿತ್ರ `ಕರಿಯಾ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಆನೇಕಲ್ ಬಾಲರಾಜ್ ನಿಧನರಾಗಿದ್ದಾರೆ. ಬೆಳಿಗ್ಗೆ ವಾಕಿಂಗ್ ಹೋಗುವಾಗ ಅಪಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳಿದ್ದಾರೆ.

    ದರ್ಶನ್ ನಟನೆಯ `ಕರಿಯ’ ಚಿತ್ರ ಮತ್ತು ಪುತ್ರ ಸಂತೋಷ್ ನಟನೆಯ ಕರಿಯ 2, ಗಣಪ, ಬರ್ಕ್ಲಿ ಚಿತ್ರ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಆನೇಕಲ್ ಬಾಲರಾಜ್ ಇಂದು ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಜೆಪಿ ನಗರದಲ್ಲಿ ವಾಕಿಂಗ್‌ಗೆ ಹೋಗುವಾಗ ಆಕ್ಸಿಡೆಂಟ್ ಆಗಿದ್ದು, ವಾಹನ ತಾಗಿ ಪೆಟ್ಟು ಬಿದ್ದು ಫುಟ್‌ಪಾತ್‌ಗೆ ತಲೆ ತಾಕಿತ್ತು. ಆಸ್ಪತ್ರೆಗೆ ದಾಖಲಿಸಿದ ನಂತರ ನಿರ್ಮಾಪಕ ಆನೇಕಲ್ ಬಾಲರಾಜ್ ಚಿಕ್ಸಿತೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಈ ಪಾಕ್ ನಟಿಯ ಗ್ರಹಚಾರ ನೆಟ್ಟಗಿಲ್ಲ: ಪಾಕಿಸ್ತಾನದಲ್ಲಿ ತಿನ್ನೋಕೆ ಏನೂ ಇಲ್ಲವಾ ಎಂದ ನೆಟ್ಟಿಗರು

    ಸಾಕಷ್ಟು ಚಿತ್ರ ನಿರ್ಮಾಣಗಳ ಮೂಲಕ ಸಿನಿಮಾರಂಗಕ್ಕೆ ಕೊಡುಗೆ ನೀಡಿದ್ದ ಆನೇಕಲ್ ಬಾಲರಾಜ್ 58ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ತಂದೆಯ ಅನಿರೀಕ್ಷಿತ ಸಾವು ನಟ ಸಂತೋಷ್ ಮತ್ತು ಅವರ ಕುಟುಂಬಕ್ಕೆ ಆಘಾತವಾಗಿದೆ. ಇದೀಗ ಆನೇಕಲ್ ಬಾಲರಾಜ್ ಅಪಘಾತ ಕುರಿತು ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.