Tag: anekal

  • ಬರ್ತ್‌ಡೇ ಆಚರಿಸಲು ಬಂದ ಸ್ನೇಹಿತರಿಂದ್ಲೇ ಡೆತ್ ಡೇ – ಪಾರ್ಟಿಯ ಬಿಲ್ ಕಟ್ಟೋ ವಿಚಾರಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ

    ಬರ್ತ್‌ಡೇ ಆಚರಿಸಲು ಬಂದ ಸ್ನೇಹಿತರಿಂದ್ಲೇ ಡೆತ್ ಡೇ – ಪಾರ್ಟಿಯ ಬಿಲ್ ಕಟ್ಟೋ ವಿಚಾರಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ

    ಆನೇಕಲ್: ಬರ್ತ್‌ಡೇ ಆಚರಿಸೋಕೆ ಬಂದ ದಿನವೇ ಪಾರ್ಟಿಯ ಬಿಲ್ ಕಟ್ಟುವ ವಿಚಾರಕ್ಕೆ ಗಲಾಟೆ ನಡೆದು, ಅದೇ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಬೆಂಗಳೂರು (Bengaluru) ಹೊರವಲಯ ಜಿಗಣಿ (Jigani) ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡರಪಾಳ್ಯದಲ್ಲಿ ನಡೆದಿದೆ.

    ಅ.16ರಂದು ಸಂದೀಪ್‌ನ ಬರ್ತಡೇ ಇತ್ತು. ಆ ದಿನ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಕುಂಬಾರನಹಳ್ಳಿ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಹೋಗಿದ್ದರು. ಅಲ್ಲಿ ಕೇಕ್ ಕಟ್ ಮಾಡಿ, ಬಳಿಕ ಸ್ನೇಹಿತರೆಲ್ಲ ಸೇರಿಕೊಂಡು ಎಣ್ಣೆ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದಿದ್ದರು. ಕೊನೆಯಲ್ಲಿ ಬಿಲ್ ಕಟ್ಟುವಾಗ ಸಂದೀಪ್ ನನ್ನ ಬಳಿ ಅಷ್ಟೊಂದು ಹಣ ಇಲ್ಲ ಎಂದಿದ್ದ. ಆಗ ಸಂದೀಪ್ ಮತ್ತು ಸಂತೋಷ್ ನಡುವೆ ಗಲಾಟೆ ಆಗಿದೆ. ಇದನ್ನೂ ಓದಿ: ಟೋಲ್ ಸಿಬ್ಬಂದಿ ಮೇಲೆ ಪುತ್ರನಿಂದ ಹಲ್ಲೆ – ನನ್ನ ಮಗನ ತಪ್ಪಿದ್ದರೆ ಕ್ಷಮೆ ಕೇಳಿಸ್ತೀನಿ: ವಿಜೂಗೌಡ ಪಾಟೀಲ್‌

    ಅಲ್ಲಿದ್ದ ಉಳಿದ ಸ್ನೇಹಿತರು ಜಗಳ ಬಿಡಿಸಿ ಇಬ್ಬರನ್ನು ಕಳುಹಿಸಿದ್ದರು. ಆದರೆ ಮನೆಗೆ ಹೋಗದ ಸಂದೀಪ್ ಅಲ್ಲಿಂದ ಊರಿನ ಬಳಿಯಿರುವ ವಾಲಿಬಾಲ್ ಕೋರ್ಟ್‌ಗೆ ಎಣ್ಣೆ ಹಾಕೋಕೆ ಹೋಗಿದ್ದ. ವಿಚಾರ ತಿಳಿದ ಸಂತೋಷ್ ಮತ್ತು ಸಾಗರ್ ಅಲ್ಲಿಗೆ ಎಂಟ್ರಿ ಕೊಟ್ಟು ಏಕಾಏಕಿ ಸಂದೀಪ್ ಮೇಲೆ ಹಲ್ಲೆ ನಡೆಸಿದ್ದರು. ಆಗ ಸಂದೀಪ್ ಅಲ್ಲಿಂದ ಜಿಗಣಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ, ಮನೆಗೆ ಬಂದಿದ್ದ.

    ಗಲಾಟೆಯ ಬಳಿಕ ಮನೆಯಲ್ಲಿದ್ದ ಸಂದೀಪ್‌ಗೆ ವಾಂತಿ, ತಲೆನೋವು ಶುರುವಾಗಿದೆ. ತಲೆಯೊಳಗೆ ರಕ್ತ ಹೆಪ್ಪುಗಟ್ಟಿ ಮೆದುಳಿಗೆ ಪೆಟ್ಟು ಬಿದ್ದಿತ್ತು. ಹತ್ತಿರದ ಕ್ಲಿನಿಕ್‌ಗೆ ಹೋಗಿ ಇಂಜೆಕ್ಷನ್ ತೆಗೆದುಕೊಂಡು ಬಂದು ಮನೆಯಲ್ಲಿ ಮಲಗಿದ್ದ. ಮತ್ತೆ ಒಂದು ದಿನದ ಬಳಿಕ ಅದೇ ರೀತಿ ತಲೆನೋವು, ವಾಂತಿ ಶುರುವಾಯ್ತು. ಬಳಿಕ ಖಾಸಗಿ ಆಸ್ಪತ್ರೆಗೆ ಬಂದಿದ್ದ ಸಂದೀಪ್‌ಗೆ ಚಿಕಿತ್ಸೆ ನೀಡಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ಕಳುಹಿಸಿದ್ದರು.

    ಅಲ್ಲಿನ ವೈದ್ಯರು ಪರೀಕ್ಷೆ ನಡೆಸಿದಾಗ ಸಂದೀಪ್ ತಲೆಗೆ ಗಂಭೀರ ಗಾಯವಾಗಿರೋದು ತಿಳಿದಿದೆ. ಅಲ್ಲಿಂದ ಮಡಿವಾಳದ ಕಾವೇರಿ ಆಸ್ಪತ್ರೆಗೆ ಶಿಫ್ಟ್ ಮಾಡಿ, ಚಿಕಿತ್ಸೆ ನೀಡಲಾಗುತ್ತಿತ್ತು. ಸಂಪೂರ್ಣ ಪ್ರಜ್ಞೆ ಕಳೆದುಕೊಂಡು ಕೋಮಾಗೆ ತಲುಪಿದ ಸಂದೀಪ್ ಚಿಕಿತ್ಸೆ ಫಲಕಾರಿಯಾಗದೇ ಅ.28ರಂದು ಸಾವನ್ನಪ್ಪಿದ್ದಾನೆ.

    ಮಗನ ಸಾವಿನ ವಿಷಯ ತಿಳಿದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸೂಕ್ತ ತನಿಖೆ ನಡೆಸಿ ಸಾವಿಗೆ ಕಾರಣರಾದವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು ಮೃತ ಸಂದೀಪ್ ತಂದೆ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಸಂತೋಷ್ ಮತ್ತು ಸಾಗರ್ ಇಬ್ಬರನ್ನು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.ಇದನ್ನೂ ಓದಿ: Mumbai Hostage | 17 ಮಕ್ಕಳನ್ನ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರೋಪಿ ಪೊಲೀಸರ ಗುಂಡಿಗೆ ಬಲಿ

  • ಕುಡಿಯಲು ಹಣ ನೀಡದಕ್ಕೆ ಗೆಳೆಯ ಆತ್ಮಹತ್ಯೆ – ಮೃತಪಟ್ಟಿರೋದು ಕಂಡು ತಾನೂ ನೇಣಿಗೆ ಶರಣಾದ ಲಿವಿನ್ ಗೆಳತಿ

    ಕುಡಿಯಲು ಹಣ ನೀಡದಕ್ಕೆ ಗೆಳೆಯ ಆತ್ಮಹತ್ಯೆ – ಮೃತಪಟ್ಟಿರೋದು ಕಂಡು ತಾನೂ ನೇಣಿಗೆ ಶರಣಾದ ಲಿವಿನ್ ಗೆಳತಿ

    ಆನೇಕಲ್: ಕುಡಿಯಲು ಹಣ ನೀಡದಕ್ಕೆ ಗೆಳೆಯ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡು ಲಿವಿನ್ ಗೆಳತಿ ತಾನೂ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ (Anekal) ತಾಲ್ಲೂಕಿನ ಕಲ್ಲುಬಾಳುವಿನಲ್ಲಿ ನಡೆದಿದೆ.

    ಮೃತರನ್ನು ಒಡಿಶಾ (Odisha) ಮೂಲದ ಸೀಮಾ ನಾಯಕ್(25) ಹಾಗೂ ರಾಕೇಶ್ ಪಾತ್ರ(23) ಎನ್ನಲಾಗಿದ್ದು, ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರು ಲಿವಿಂಗ್ ಟುಗೇದರ್‌ನಲ್ಲಿದ್ದರು ಎಂದು ತಿಳಿದುಬಂದಿದೆ.ಇದನ್ನೂ ಓದಿ: ಡಿಕೆಶಿಯನ್ನು ಭೇಟಿಯಾದ ಕಿರಣ್ ಮಜುಂದಾರ್ ಶಾ – ಉತ್ತಮ ಚರ್ಚೆಯಾಗಿದೆ ಎಂದ ಡಿಸಿಎಂ

    ಎರಡು ದಿನಗಳಿಂದ ಮನೆ ಬಾಗಿಲು ತೆರೆಯದ ಹಿನ್ನೆಲೆ ಸ್ಥಳೀಯರು ಅನುಮಾನಗೊಂಡು ಕಿಟಕಿ, ಗಾಜು ಒಡೆದು ಪರಿಶೀಲನೆ ಮಾಡಿದಾಗ ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ, ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್, ಜಿಗಣಿ ಠಾಣೆ ಇನ್ಸ್‌ಪೆಕ್ಟರ್‌ ಮಂಜುನಾಥ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

    ಪೊಲೀಸರ ಮಾಹಿತಿ ಪ್ರಕಾರ, ಮೃತ ರಾಕೇಶ್ ಹಣಕ್ಕಾಗಿ ಪದೇ ಪದೇ ಕುಡಿದು ಜಗಳ ಮಾಡುತ್ತಿದ್ದ. ಭಾನುವಾರ ಸಹ ಹಣಕ್ಕಾಗಿ ಸೀಮಾ ಜೊತೆ ಜಗಳ ಮಾಡಿದ್ದ. ಹಣ ನೀಡುವುದಿಲ್ಲ ಎಂದು ಸೀಮಾ ಮಲಗಿದ್ದಳು. ಬೆಳಿಗ್ಗೆ ಎದ್ದು ನೋಡಿದಾಗ ರಾಕೇಶ್ ನೇಣು ಬಿಗಿದುಕೊಂಡಿದ್ದ. ಹಗ್ಗ ತುಂಡರಿಸಿ ಬದುಕಿಸಲು ಪ್ರಯತ್ನ ಮಾಡಿದಾಗ ಮೃತಪಟ್ಟಿರುವುದು ಖಾತ್ರಿಯಾಗಿದೆ. ಬಳಿಕ ಸೀಮಾ ಕೂಡ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿಸಿದ್ದಾರೆ

    ಸದ್ಯ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: Maharashtra | ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ – ನಾಲ್ವರು ಸಾವು, 10 ಮಂದಿಗೆ ಗಾಯ

  • ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಹತ್ಯೆ – ಕರೆಂಟ್ ಶಾಕ್‌ನಿಂದ ಸತ್ತಿದ್ದಾಳೆಂದು ಬಿಂಬಿಸಿದ್ದ 2ನೇ ಪತಿ ಅರೆಸ್ಟ್

    ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಹತ್ಯೆ – ಕರೆಂಟ್ ಶಾಕ್‌ನಿಂದ ಸತ್ತಿದ್ದಾಳೆಂದು ಬಿಂಬಿಸಿದ್ದ 2ನೇ ಪತಿ ಅರೆಸ್ಟ್

    ಆನೇಕಲ್: ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಹತ್ಯೆ ಮಾಡಿ ಬಳಿಕ ಕರೆಂಟ್ ಶಾಕ್‌ನಿಂದ ಸತ್ತಿದ್ದಾಳೆಂದು ಬಿಂಬಿಸಿದ್ದ 2ನೇ ಪತಿಯನ್ನು ಹೆಬ್ಬಗೋಡಿ ಪೊಲೀಸರು (Hebbagodi Police) ಬಂಧಿಸಿದ್ದಾರೆ.

    ಬಂಧಿತ ಆರೋಪಿ ಪ್ರಶಾಂತ್ ಕುಮಾರ್ ಎಂದು ಗುರುತಿಸಲಾಗಿದ್ದು, ಪತ್ನಿ ರೇಷ್ಮಾಳನ್ನು (32) ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.ಇದನ್ನೂ ಓದಿ: ಸೀನಿಯರ್‌ನಿಂದ ಪ್ರೀತಿಸುವಂತೆ ಕಿರುಕುಳ ಆರೋಪ – ಬೆಂಗಳೂರಲ್ಲಿ ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ

    ಮೃತ ಮಹಿಳೆ ರೇಷ್ಮಾಗೆ ಮದುವೆಯಾಗಿ ಪತಿ ಸಾವನ್ನಪ್ಪಿದ್ದ. ತನ್ನ 15 ವರ್ಷದ ಮಗಳೊಂದಿಗೆ ರೇಷ್ಮಾ ಶಿಕಾರಿಪಾಳ್ಯದ ಓಂಶಕ್ತಿ ಲೇಔಟ್‌ನಲ್ಲಿ ವಾಸವಾಗಿದ್ದರು. ಇದೇ ವೇಳೆ ಇನ್‌ಸ್ಟಾಗ್ರಾಂನಲ್ಲಿ ಆರೋಪಿ ಪ್ರಶಾಂತ್ ಕುಮಾರ್ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಪ್ರೀತಿ ಶುರುವಾಗಿ ಕಳೆದ 9 ತಿಂಗಳ ಮದುವೆಯಾಗಿದ್ದರು. ಆದರೆ ಮದುವೆಯಾದ ಬಳಿಕ ಪತ್ನಿಯ ಶೀಲ ಶಂಕಿಸಿ ಪ್ರಶಾಂತ್ ಪ್ರತಿದಿನ ಜಗಳವಾಡುತ್ತಿದ್ದ. ಅ.15ರಂದು ಇಬ್ಬರ ಮಧ್ಯೆ ಜಗಳವಾಗಿ ತಾರಕಕ್ಕೇರಿತ್ತು. ಗಲಾಟೆಯಲ್ಲಿ ರೇಷ್ಮಾಗೆ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಬಾತ್‌ರೂಮ್‌ನಲ್ಲಿ ಮೃತದೇಹ ಹಾಕಿ, ವಾಟರ್‌ಹೀಟರ್ ಸ್ವಿಚ್ ಆನ್ ಮಾಡಿ, ಕರೆಂಟ್ ಶಾಕ್ ತಗುಲಿ ಸತ್ತಿದ್ದಾಳೆಂದು ಬಿಂಬಿಸಿ ಅಲ್ಲಿಂದ ಪರಾರಿಯಾಗಿದ್ದ. ಮೃತ ರೇಷ್ಮಾ ಮಗಳು ಮನೆಗೆ ಬಂದು ನೋಡಿದಾಗ ತಾಯಿ ಅಸ್ವಸ್ಥಳಾಗಿ ಬಾತ್‌ರೂಮ್‌ನಲ್ಲಿ ಬಿದ್ದಿದ್ದರು. ಕೂಡಲೇ ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದರು.

    ಮೊದಲು ತಾಯಿಯನ್ನು ನೋಡಿದ್ದ ಮಗಳು ಬಾತ್‌ರೂಮ್ ಚಿಲಕ ಹೊರಗಿನಿಂದ ಹಾಕಿದ್ದನ್ನು ಗಮನಿಸಿದ್ದಳು. ಇದರಿಂದ ಅನುಮಾನಗೊಂಡು ಕೂಡಲೇ ಸಂಬಂಧಿಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಪೊಲೀಸರು ತಕ್ಷಣ ಆರೋಪಿ ಪ್ರಶಾಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯವನ್ನು ಬಾಯ್ಬಿಟ್ಟಿದ್ದಾನೆ.

    ಸದ್ಯ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಜೈಲಿಗಟ್ಟಿದ್ದಾರೆ.ಇದನ್ನೂ ಓದಿ: ಬೆಳಗಾವಿ | ಪ್ರೀತಿಸಿ ಮದ್ವೆಯಾದ, ವಿಚ್ಛೇದನ ಪಡೆದು ಮಾಜಿ ಪತ್ನಿ ಕೊಂದ ಪೊಲೀಸಪ್ಪ

  • BETL ಅಧಿಕಾರಿಗಳ ನಿರ್ಲಕ್ಷ್ಯ – ಹೊಸೂರು ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್

    BETL ಅಧಿಕಾರಿಗಳ ನಿರ್ಲಕ್ಷ್ಯ – ಹೊಸೂರು ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್

    ಆನೇಕಲ್: ಬಿಇಟಿಎಲ್ (BETL) ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿ ಹಾಗೂ ಬೇಜವಾಬ್ದಾರಿತನದಿಂದ ಇತ್ತೀಚಿಗೆ ರಾಷ್ಟ್ರೀಯ ಹೆದ್ದಾರಿ ಹೊಸೂರು ರಸ್ತೆ (Hosur Road) ಸಂಪೂರ್ಣವಾಗಿ ಟ್ರಾಫಿಕ್ ಜಾಮ್‌ನಿಂದ (Traffic Jam) ವಾಹನ ಸಮಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇಂದು ಸಹ ಹೊಸೂರು ರಸ್ತೆಯ ಗೆಸ್ಟ್ ಲೈನ್ ಸರ್ಕಲ್‌ನಿಂದ ಕೋನಪ್ಪನ ಅಗ್ರಹಾರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಸಾಕಷ್ಟು ಸಮಸ್ಯೆಯನ್ನು ಎದುರಿಸಿದ್ದಾರೆ.

    ಇತ್ತೀಚಿಗೆ ಬಿಇಟಿಎಲ್ ವತಿಯಿಂದ ಗೆಸ್ಟ್ ಲೈನ್ ಸಮೀಪ ಕಾಮಗಾರಿಯೊಂದನ್ನು ಮಾಡುತ್ತಿದ್ದು, ಕಾಮಗಾರಿಗಾಗಿ ಹಳ್ಳವನ್ನು ಅಗೆಯಲಾಗಿದೆ. ಆದರೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದ ಕಾಂಟ್ರಾಕ್ಟರ್ ಹಾಗೂ ಬಿಇಟಿಎಲ್ ಸಂಸ್ಥೆಯಿಂದಾಗಿ ಪ್ರತಿನಿತ್ಯ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದರಿಂದ ವಾಹನ ಸವಾರರು ಬಿಇಟಿಎಲ್‌ಗೆ ಶಾಪ ಹಾಕುತ್ತಿದ್ದಾರೆ. ಇದನ್ನೂ ಓದಿ: ದೊಡ್ಡಗೌಡರ ಆರೋಗ್ಯ ವಿಚಾರಿಸಿದ ಬಿಎಸ್‌ವೈ, ವಿಜಯೇಂದ್ರ

    ಅಲ್ಲದೇ ಇಂದು ವಾರಾಂತ್ಯವಾಗಿದ್ದು, ತಮಿಳುನಾಡಿನತ್ತ ತಮ್ಮ ಊರುಗಳಿಗೆ ಅನೇಕ ಮಂದಿ ಹೊರಟಿದ್ದರು. ಆದರೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡು ಕಿರಿಕಿರಿ ಅನುಭವಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭೇಟಿಯಾದ ಸೆರ್ಗಿಯೊ ಗೋರ್ – ಟ್ರಂಪ್ ಮೋದಿಯನ್ನ ಗ್ರೇಟ್‌ ಫ್ರೆಂಡ್‌ ಅಂತ ಪರಿಗಣಿಸ್ತಾರೆ: ಯುಎಸ್‌ ರಾಯಭಾರಿ

  • Anekal | ವಿಜೃಂಭಣೆಯಿಂದ ಜರುಗಿದ ಚೌಡೇಶ್ವರಿ ಜಂಬೂಸವಾರಿ – ಪುಳಕಿತರಾದ ಭಕ್ತ ಸಾಗರ

    Anekal | ವಿಜೃಂಭಣೆಯಿಂದ ಜರುಗಿದ ಚೌಡೇಶ್ವರಿ ಜಂಬೂಸವಾರಿ – ಪುಳಕಿತರಾದ ಭಕ್ತ ಸಾಗರ

    ಆನೇಕಲ್: ಮಿನಿ ಮೈಸೂರು ಖ್ಯಾತಿಯ ಆನೇಕಲ್ (Anekal) ಪಟ್ಟಣದಲ್ಲಿ ಶಕ್ತಿ ದೇವತೆ ಚೌಡೇಶ್ವರಿ ದೇವಿ (Chowdeshwari) ವಿಜಯದಶಮಿ (Vijayadashami) ದಸರಾ ಉತ್ಸವ ಮತ್ತು ಜಂಬೂಸವಾರಿ (Jamboo Savari) ವಿಜೃಂಭಣೆಯಿಂದ ಆಚರಿಸಲಾಯಿತು. ನಾಡ ಹಬ್ಬ ಮೈಸೂರು ದಸರಾದಲ್ಲಿ ಚಾಮುಂಡೇಶ್ವರಿಯ ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ಹೆಜ್ಜೆ ಹಾಕಿದ್ರೆ ಆನೇಕಲ್‌ನಲ್ಲಿ ಕೇರಳದ ಕೊಚ್ಚಿಯ ಶೇಖರ್ ಆನೆ ಚೌಡೇಶ್ವರಿ ದೇವಿ ಉತ್ಸವ ಮೂರ್ತಿ ಅಂಬಾರಿ ಹೊತ್ತು ಹೆಜ್ಜೆ ಹಾಕಿತು.

    ಮೈಸೂರಿನಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿ ಜಂಬೂಸವಾರಿ ನಡೆಸಿದಂತೆ ಆನೇಕಲ್‌ನಲ್ಲಿ ನಾಡಹಬ್ಬ ದಸರಾ (Dasara) ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ. ನಗರದ ಆದಿ ದೇವತೆ ಚೌಡೇಶ್ವರಿ ದೇವಿ ಅಂಬಾರಿಯನ್ನು ಹೊತ್ತ ಕೇರಳದ ಕೊಚ್ಚಿಯ ಶೇಖರ್ ಆನೆ ಪಟ್ಟಣದ ತಾಲೂಕು ಕಚೇರಿಯಿಂದ ತಿಲಕ್ ವೃತ್ತದ ಚೌಡೇಶ್ವರಿ ದೇವಾಲಯದ ಬಳಿ ಬರುತ್ತಿದ್ದಂತೆ ಜನಸಾಗರ ತುಂಬಿತ್ತು. ಗಣ್ಯರು ಜಂಬೂಸವಾರಿ ಹೊರಟಿದ್ದ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದ್ದಾರೆ. ಬಳಿಕ ಆನೇಕಲ್ ನಗರದ ಪ್ರಮುಖ ಬೀದಿಗಳಲ್ಲಿ ಜಂಬೂಸವಾರಿ ಗಜಗಾಂಭೀರ್ಯವಾಗಿ ಸಾಗಿದೆ. ಇದನ್ನೂ ಓದಿ: ದಾವಣಗೆರೆಯಲ್ಲಿ ವಿಜಯದಶಮಿ ಶೋಭಾಯಾತ್ರೆ – 50,000 ಮಂದಿ ಭಾಗಿ, ಕಣ್ಮನ ಸೆಳೆಯುತ್ತಿರುವ ಟ್ಯಾಬ್ಲೋಗಳು

    ಇದಕ್ಕೂ ಮೊದಲು ತಿಲಕ್ ವೃತ್ತದ ಬಳಿ ಚೌಡೇಶ್ವರಿ ದೇವಿ ಅಂಬಾರಿ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪಕ್ಕದ ತಮಿಳುನಾಡು, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಆಪಾರ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಚೌಡೇಶ್ವರಿ ದೇವಿ ಅಂಬಾರಿ ಹೊತ್ತು ಸಾಗಿದ ಶೇಖರ್ ಆನೆಯನ್ನು ಕಂಡು ಭಕ್ತರು ರೋಮಾಂಚನಗೊಂಡಿದ್ದಾರೆ. ಇದನ್ನೂ ಓದಿ: ಚಿತ್ರಗಳಲ್ಲಿ ಮೈಸೂರು ಜಂಬೂಸವಾರಿ ನೋಡಿ

    ಆನೇಕಲ್ ಪಟ್ಟಣದ ಚೌಡೇಶ್ವರಿ ದೇವಿ ದಸರಾ ಮಹೋತ್ಸವ ನೋಡಲು ಕಳೆದ ಮೂರು ವರ್ಷದಿಂದ ಇಲ್ಲಿಗೆ ಬರುತ್ತೆವೆ. ಈ ಬಾರಿಯು ಕುಟುಂಬ ಸಮೇತ ಆಗಮಿಸಿದ್ದು, ತಾಯಿ ಚೌಡೇಶ್ವರಿ ಜಂಬೂ ಸವಾರಿಯನ್ನು ನೋಡಲು ತುಂಬಾ ಖುಷಿಯಾಯಿತು. ತುಂಬಾ ವಿಜೃಂಭಣೆಯಿಂದ ಈ ಬಾರಿ ದಸರಾ ಆಚರಣೆ ಮಾಡಿದ್ದಾರೆ. ಸಾವಿರಾರು ಮಂದಿ ಭಕ್ತರು ಆಗಮಿಸಿದ್ದು, ದೇವಿಯ ದರ್ಶನ ಪಡೆದಿದ್ದಾರೆ. ವಿಶ್ವ ವಿಖ್ಯಾತ ಮೈಸೂರು ದಸರಾ ನೋಡಲು ಸಾದ್ಯವಾಗದ ಭಕ್ತರು ಆನೇಕಲ್ ದಸರಾ ನೋಡಿ ಕಣ್ತುಂಬಿಕೊಳ್ಳುತ್ತಾರೆ. ಜೊತೆಗೆ ವಿವಿಧ ಕಡೆಯಿಂದ ಆಗಮಿಸಿದ್ದ ಆಕರ್ಷಕ ಕಲಾತಂಡಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿವೆ ಎಂದು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ದಸರಾ | ಜಂಬೂ ಸವಾರಿಗೆ ಅದ್ದೂರಿ ಚಾಲನೆ

  • Bannerghatta | ಸಫಾರಿಗೆ ತೆರಳಿದ್ದ ಪ್ರವಾಸಿಗ ಹೃದಯಾಘಾತಕ್ಕೆ ಬಲಿ

    Bannerghatta | ಸಫಾರಿಗೆ ತೆರಳಿದ್ದ ಪ್ರವಾಸಿಗ ಹೃದಯಾಘಾತಕ್ಕೆ ಬಲಿ

    ಆನೇಕಲ್: ಸಫಾರಿಗೆ (Safari) ಹೋಗಿದ್ದ ಪ್ರವಾಸಿಗ (Tourist) ಹೃದಯಾಘಾತಕ್ಕೆ (Heart Attack) ಬಲಿಯಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯ ಬನ್ನೇರುಘಟ್ಟ (Bannerghatta) ಜೈವಿಕ ಉದ್ಯಾನವನದಲ್ಲಿ ನಡೆದಿದೆ.

    ಬೆಂಗಳೂರಿನ ನಾಗರಬಾವಿಯ ನಿವಾಸಿ ನಂಜಪ್ಪ (45) ಮೃತ ವ್ಯಕ್ತಿ. ಶನಿವಾರ ಸಫಾರಿಗೆ ಬಂದಿದ್ದ ವೇಳೆ ಘಟನೆ ನಡೆದಿದೆ. ಪತ್ನಿ ಇಬ್ಬರು ಮಕ್ಕಳೊಂದಿಗೆ ಸಫಾರಿ ವೀಕ್ಷಣೆ ಬಂದಿದ್ದ ವೇಳೆ ನಂಜಪ್ಪ ಸಫಾರಿ ಬಸ್ಸಿನಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇದನ್ನೂ ಓದಿ: ಮಾನವ ಕಳ್ಳಸಾಗಣಿಕೆ ಮಾಡಿದ್ದೀಯಾ ಅಂತ ಮಹಿಳಾ ವಿಜ್ಞಾನಿಗೆ ಬೆದರಿಸಿ ಲಕ್ಷ ಲಕ್ಷ ಪೀಕಿದ ಸೈಬರ್ ವಂಚಕ

    ಝೂ ಅಂಬುಲೆನ್ಸ್ ಮೂಲಕ ನಂಜಪ್ಪರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಂಜಪ್ಪ ಮೃತಪಟ್ಟಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮನ್ ಕೀ ಬಾತ್‌ನಲ್ಲಿ ಅಕ್ಷರ ಮಾಂತ್ರಿಕ ಎಸ್‌.ಎಲ್‌ ಭೈರಪ್ಪರನ್ನ ನೆನೆದ ಮೋದಿ

  • ವಿಶ್ವದಲ್ಲೇ ಮೊದಲ ಬಾರಿಗೆ ಕರಡಿಗೆ ಕೃತಕ ಕಾಲು ಜೋಡಣೆ – ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಯಶಸ್ವಿ ಕಾರ್ಯ

    ವಿಶ್ವದಲ್ಲೇ ಮೊದಲ ಬಾರಿಗೆ ಕರಡಿಗೆ ಕೃತಕ ಕಾಲು ಜೋಡಣೆ – ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಯಶಸ್ವಿ ಕಾರ್ಯ

    – ಪಶು ವೈದ್ಯಕೀಯ ಕ್ಷೇತ್ರದಲ್ಲಿ ಮೈಲಿಗಲ್ಲು

    ಆನೇಕಲ್: ವಿಶ್ವದಲ್ಲೇ ಮೊದಲ ಬಾರಿಗೆ ಕರಡಿಗೆ ಕೃತಕ ಕಾಲನ್ನು ಯಶಸ್ವಿಯಾಗಿ ಜೋಡಣೆ ಮಾಡಿರುವ ಅಪರೂಪದ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta National Park) ನಡೆದಿದೆ.

    ಬನ್ನೇರುಘಟ್ಟ ಜೈವಿಕ ಉದ್ಯಾನವನದ ವಸಿಕರನ್ ಎಂಬ ಕರಡಿಗೆ ವೈಲ್ಡ್ ಲೈಫ್ SOS ಸಂಸ್ಥೆ ಹಾಗೂ ಕರ್ನಾಟಕ ಅರಣ್ಯ ಇಲಾಖೆ (Forest Deparment) ಸಹಯೋಗದಲ್ಲಿ ಕಳೆದ ಮೂರು ದಿನಗಳಿಂದ ಕೈಗೊಂಡಿದ್ದ ಕೃತಕ ಕಾಲು ಜೋಡಣೆ ಕಾರ್ಯ ಯಶಸ್ವಿಯಾಗಿದ್ದು, ಇದೀಗ ಮೊದಲಿನಂತೆ ನಡೆಯಲು ಪ್ರಾರಂಭಿಸಿದೆ.ಇದನ್ನೂ ಓದಿ: ಕೆಲಸದಿಂದ ತೆಗೆದಿದ್ದಕ್ಕೆ ಸಿಟ್ಟು; ಫುಡ್ ಡೆಲಿವರಿ ನೆಪದಲ್ಲಿ ವೃದ್ಧೆ ಕೈ-ಕಾಲು ಕಟ್ಟಿಹಾಕಿ 8 ಲಕ್ಷ ದರೋಡೆ

    2019ರಲ್ಲಿ ಬೇಟೆಗಾರರ ಬಲೆಗೆ ಸಿಲುಕಿ ಜೀವನ್ಮರಣದ ಹೋರಾಟ ನಡೆಸಿದ್ದ ವಸಿಕರನ್ ಕರಡಿಯನ್ನು ಬಳ್ಳಾರಿ ಅರಣ್ಯ ಪ್ರದೇಶದಿಂದ ರಕ್ಷಣೆ ಮಾಡಲಾಗಿತ್ತು. ಈ ವೇಳೆ ಹಿಂಬದಿಯ ಎಡಗಾಲು ಮುರಿದು ಕರಡಿ ನರಳಾಡುತ್ತಿತ್ತು. ಗಾಯಗೊಂಡಿದ್ದ ವಸಿಕರನ್ ಅನ್ನು ಬನ್ನೇರುಘಟ್ಟ ಕರಡಿ ಆರೈಕೆ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು. ಬಳಿಕ ಆರೋಗ್ಯ ಸುಧಾರಣೆಯಾಗಿ, ಮೂರು ಕಾಲಿನಿಂದ ನಡೆಯಲು ಅಭ್ಯಾಸ ಮಾಡಿಕೊಂಡಿತ್ತು.

    ಈ ಸಮಯದಲ್ಲಿ ಪ್ರಾಣಿಗಳ ಜಾಗತಿಕ ಮೂಳೆ ತಜ್ಞರಾದ ಅಮೆರಿಕದ ಡೆರಿಕ್ ಕಂಪನಾ ಬನ್ನೇರುಘಟ್ಟಕ್ಕೆ ಭೇಟಿ ನೀಡಿದ್ದರು. ಆಗ ಕರಡಿ ವಸಿಕರನ್ ಓಡಾಡುವುದನ್ನ ಗಮನಿಸಿದ್ದರು. ಬಳಿಕ ಮಣ್ಣು ತೋಡಲು, ಮರ ಹತ್ತಲು, ಮೇವು ಸಂಗ್ರಹಕ್ಕೆ ಕೃತಕ ಕಾಲನ್ನು ಸಿದ್ಧಪಡಿಸಿದರು. ಸದ್ಯ ಇದೀಗ ಕರಡಿ ಕೃತಕ ಕಾಲಿನಿಂದ ಮೊದಲಿನ ಹಾಗೆ ಓಡಾಡುತ್ತಿದೆ.

    ಈ ಕುರಿತು ಡೆರಿಕ್ ಕಂಪನಾ ಅವರು ಪ್ರತಿಕ್ರಿಯಿಸಿದ್ದು, ಪ್ರಾಣಿ ಎಂಬುದು ನನಗೆ ಹೊಸ ವಿಷಯ ಕಲಿಸುತ್ತದೆ. ಆದರೆ, ವಸಿಕರನ್ ಪ್ರಕರಣದಲ್ಲಿ ಇದೊಂದು ಅತ್ಯದ್ಭುತವೇ ಹೌದು. ಕರಡಿಗೆ ಕೃತಕ ಕಾಲು ಸಿದ್ಧಪಡಿಸುವುದು ದೊಡ್ಡ ಸವಾಲಾಗಿತ್ತು. ಆದರೆ, ವಸಿಕರನ್ ನಡಿಗೆಯನ್ನು ಕಂಡು ನಮ್ಮ ಶ್ರಮಕ್ಕೆ ಬೆಲೆ ಸಿಕ್ಕಂತಾಗಿದೆ ಎಂದಿದ್ದಾರೆ. ಇದನ್ನೂ ಓದಿ: 579 ಕೋಟಿ ಜೆರ್ಸಿ ಪ್ರಾಯೋಜಕತ್ವ – ಪ್ರತಿ ಪಂದ್ಯಕ್ಕೆ ಬಿಸಿಸಿಐಗೆ ಸಿಗಲಿದೆ ಕೋಟಿ ಕೋಟಿ ರೂ.

  • ಕೆರೆ ಜಾಗದಲ್ಲಿದ್ದ ಮನೆಗಳ ತೆರವು ಕಾರ್ಯಾಚರಣೆ; ಕಣ್ಮುಂದೆಯೇ ಕಟ್ಟಡಗಳು ನೆಲಸಮ – ಜನರ ಕಣ್ಣೀರು

    ಕೆರೆ ಜಾಗದಲ್ಲಿದ್ದ ಮನೆಗಳ ತೆರವು ಕಾರ್ಯಾಚರಣೆ; ಕಣ್ಮುಂದೆಯೇ ಕಟ್ಟಡಗಳು ನೆಲಸಮ – ಜನರ ಕಣ್ಣೀರು

    ಆನೇಕಲ್: ಕೆರೆ ಜಾಗವನ್ನ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಮನೆಗಳನ್ನ ಶುಕ್ರವಾರ ಜೆಸಿಬಿಗಳ ಮೂಲಕ ತೆರವುಗೊಳಿಸಲಾಯಿತು.

    ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರ ಸಮ್ಮುಖದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಮನೆಗಳನ್ನು ತೆರವುಗೊಳಿಸಲಾಯಿತು. ಬೆಂಗಳೂರು ದಕ್ಷಿಣ ತಾಲೂಕು ದೊಡ್ಡನಾಗಮಂಗಲ ಸರ್ವೇ ನಂಬರ್ 54 ರಲ್ಲಿನ ರಾಯಸಂದ್ರ ಕೆರೆಯು ಒಟ್ಟು 56 ಎಕರೆ 20 ಗುಂಟೆ ಜಾಗವಿದ್ದು, ಇದರಲ್ಲಿ 4 ಎಕರೆ 22 ಗುಂಟೆ ಒತ್ತುವರಿ ಮಾಡಿಕೊಳ್ಳಲಾಗಿತ್ತು.

    ರಾಮರೆಡ್ಡಿ ಆ್ಯಂಡ್ ಗ್ಯಾಂಗ್ ನಕಲಿ ದಾಖಲೆ ಸೃಷ್ಠಿಸಿ ಬಡಾವಣೆ ಮಾಡಿ ಬಡಜನರಿಗೆ ಸೈಟ್‌ಗಳನ್ನ ಮಾರಾಟ ಮಾಡಿದ್ದು, ನೂರಾರು ಮಂದಿ ಮನೆಗಳನ್ನ ಕಟ್ಟಿಕೊಂಡಿದ್ದರು. ಇದೀಗ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜೆಸಿಬಿಗಳ ಮೂಲಕ ಕಟ್ಟಡಗಳನ್ನ ನೆಲಸಮ ಮಾಡಲಾಗಿದೆ. ಈ ವೇಳೆ ಜನರು ಆಕ್ರೋಶ ಹೊರಹಾಕಿದ್ದಾರೆ.

    ಮನೆಗಳಲ್ಲಿನ ವಸ್ತುಗಳನ್ನ ಹೊರಗೆ ಇಟ್ಟುಕೊಂಡು ನಿವಾಸಿಗಳು ಕಣ್ಣೀರಿಟ್ಟು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೆರೆ ಜಾಗವನ್ನ ಒತ್ತುವರಿ ಮಾಡಿಕೊಳ್ಳುವುದಲ್ಲದೇ ಸೈಟ್‌ಗಳನ್ನ ಮಾರಾಟ ಮಾಡಿರುವ ವ್ಯಕ್ತಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

  • ಸಾಕಿದ ನಾಯಿಯ ಮೇಲೆ ಮಾರಣಾಂತಿಕ ಹಲ್ಲೆ – ಕರುಳು ಕಿತ್ತು ಬರುವಂತಿದೆ ಈ ದೃಶ್ಯ

    ಸಾಕಿದ ನಾಯಿಯ ಮೇಲೆ ಮಾರಣಾಂತಿಕ ಹಲ್ಲೆ – ಕರುಳು ಕಿತ್ತು ಬರುವಂತಿದೆ ಈ ದೃಶ್ಯ

    – ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿದ ವೃದ್ಧರು

    ಆನೇಕಲ್: ಸಾಕಿದ ನಾಯಿಯನ್ನು ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಹೊಸೂರು (Hosuru) ಸಮೀಪದ ಇರುತುಕೋಟೆ (Irutukote) ಗ್ರಾಮದಲ್ಲಿ ನಡೆದಿದೆ.

    ಕೋಳಿ, ಮೇಕೆಗಳನ್ನು ಕಚ್ಚುತ್ತಿದೆ ಎಂದು ನಾಯಿಯನ್ನು ಕಂಬಕ್ಕೆ ಕಟ್ಟಿಹಾಕಿ, ಇಬ್ಬರು ವೃದ್ಧರು ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.ಇದನ್ನೂ ಓದಿ: ಬಸ್ಸಿನಲ್ಲಿ ಪುತ್ರಿಗೆ ಲೈಂಗಿಕ ಕಿರುಕುಳ – ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ

    ಹಲ್ಲೆ ಮಾಡುವಾಗ ಸ್ಥಳದಲ್ಲೇ ಇದ್ದ ಜನರು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ದೃಶ್ಯಗಳನ್ನು ನೋಡಿದರೆ ಕರುಳು ಕಿತ್ತು ಬರುವಂತಿದೆ. ನಾಯಿ ಎಷ್ಟೇ ಕಿರುಚಾಡಿದರೂ ಕೂಡ ಅಲ್ಲಿದ್ದವರು ಯಾರು ನಾಯಿಯ ರಕ್ಷಣೆಗೆ ಬಂದಿಲ್ಲ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ಕೃಷ್ಣಗಿರಿ ಜಿಲ್ಲಾ ಪ್ರಾಣಿ ಹಿಂಸೆ ತಡೆ ಸಂಘದ ಸದಸ್ಯರು ಭೇಟಿ ನೀಡಿ, ನಾಯಿಯ ರಕ್ಷಣೆ ಮಾಡಿದ್ದಾರೆ. ಸದ್ಯ ನಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಡೆಂಕಣಿಕೋಟೆ ಪೊಲೀಸ್ ಠಾಣೆಯಲ್ಲಿ ನಾಯಿಯ ಮಾಲೀಕ ಮತ್ತು ಮತ್ತೋರ್ವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸತ್ಯದ ಹೋರಾಟದಲ್ಲಿ ಸುಳ್ಳು ಸೃಷ್ಟಿ ಮಾಡಿದ್ರೆ ಶಿಕ್ಷೆ ಅನುಭವಿಸಬೇಕು: ಜಯಂತ್

  • ಒಂದಲ್ಲ ಎರಡಲ್ಲ ಮೂವರೊಟ್ಟಿಗೆ ಕಾಂಟ್ಯಾಕ್ಟ್‌ನಲ್ಲಿದ್ದ ಬ್ಯೂಟಿ – ಸ್ಟೇಷನ್‌ನಲ್ಲೇ ತಾಳಿ ಕಿತ್ತು ಗಂಡನ ಕೈಗಿಟ್ಟು ಹೋದ ಪತ್ನಿ

    ಒಂದಲ್ಲ ಎರಡಲ್ಲ ಮೂವರೊಟ್ಟಿಗೆ ಕಾಂಟ್ಯಾಕ್ಟ್‌ನಲ್ಲಿದ್ದ ಬ್ಯೂಟಿ – ಸ್ಟೇಷನ್‌ನಲ್ಲೇ ತಾಳಿ ಕಿತ್ತು ಗಂಡನ ಕೈಗಿಟ್ಟು ಹೋದ ಪತ್ನಿ

    – ರಾತ್ರಿ ಕ್ಯಾಬ್‌ ಡ್ರೈವಿಂಗ್‌ ಕೆಲಸಕ್ಕೆ ಹೋಗ್ತಿದ್ದ ಪತಿ
    – ಇತ್ತ ಪ್ರಿಯಕರನೊಂದಿಗೆ ಚಕ್ಕಂದ ಆಡ್ತಿದ್ದ ಪತ್ನಿ

    ಆನೇಕಲ್: 11 ವರ್ಷಗಳ ಪ್ರೀತಿ-ಮದ್ವೆ ಸಂಬಂಧಕ್ಕೆ ಎಳ್ಳು ನೀರು ಬಿಟ್ಟ ಬಸವನಪುರ (Basavanapura) (ಬನ್ನೇರುಘಟ್ಟ ಸಮೀಪ) ಗ್ರಾಮದ ಬ್ಯೂಟಿಯ ಬಗ್ಗೆ ಇನ್ನಷ್ಟು ರಹಸ್ಯಗಳು ಬಯಲಾಗಿವೆ. ಮೂರು ಮಕ್ಕಳ ತಾಯಿಯಾಗಿದ್ದ ಈಕೆ ಒಂದಲ್ಲ ಎರಡಲ್ಲ ಮೂವರೊಟ್ಟಿಗೆ ಸಂಪರ್ಕದಲ್ಲಿದ್ದಳು ಅನ್ನೋದು ತಿಳಿದುಬಂದಿದೆ.

    2 ವರ್ಷಗಳಿಂದ ಸತೋಷ್‌ ಜೊತೆ ಲವ್ವಿ ಡವ್ವಿ ಶುರು ಮಾಡಿಕೊಂಡಿದ್ದ ಆಂಟಿ ಲೀಲಾವತಿ ಇನ್ನೊಬ್ಬಾತನೊಂದಿಗೂ ಸಂಪರ್ಕದಲ್ಲಿದ್ದಳು ಅನ್ನೋದಕ್ಕೆ ಫೋಟೋ ಸಾಕ್ಷ್ಯ ಸಿಕ್ಕಿದೆ. ಇದನ್ನೂ ಓದಿ: ಲವರ್‌ ಜೊತೆ ಮೂರು ಮಕ್ಕಳ ತಾಯಿ ಜೂಟ್‌ – ಇತ್ತ ಹೆಂಡ್ತಿ ಬೇಕೆಂದು ಗಂಡ ಕಣ್ಣೀರು

    ಲವ್ವಿ ಡವ್ವಿ ಶುರುವಾಗಿದ್ದು ಹೇಗೆ?
    ಬಸವನಪುರದಲ್ಲಿ ವಾಸವಿದ್ದ ಲೀಲಾವತಿ, ಮಂಜುನಾಥ್ ದಂಪತಿ 11 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದರು (Marriage). ಮಂಜುನಾಥ್‌ ಕ್ಯಾಬ್‌ ಡ್ರೈವರ್‌ ಆಗಿ ಕೆಲಸ ಮಾಡ್ತಿದ್ದ. ರಾತ್ರಿ ಕ್ಯಾಬ್‌ ಡ್ರೈವಿಂಗ್‌ ಕೆಲಸಕ್ಕೆ ಹೋಗ್ತಿದ್ದಂತೆ, ಸಂತೋಷ್‌ ಮನೆಗೆ ಬರುತ್ತಿದ್ದ. ಆಗ ಈಕೆ ಸಂತೋಷ್‌ ಜೊತೆಗೆ ಚಕ್ಕಂದ ಶುರು ಮಾಡಿಕೊಳ್ತಿದ್ಳು. ಇದನ್ನೂ ಓದಿ: ನನ್ನ ಹಣವನ್ನೆಲ್ಲ ತಿಂದು ತೇಗಿದ್ದೀಯಾ: ಡಿವೋರ್ಸ್‌ ವಿಚಾರಕ್ಕೆ ಪತ್ನಿಗೆ ಗುಂಡಿಟ್ಟು ಕೊಂದ ಪತಿ

    ಕೆಲ ದಿನಗಳ ಬಳಿಕ ಲೀಲಾವತಿ ನಡವಳಿಕೆಯಿಂದ ಪತಿ ಮಂಜುನಾಥ್‌ ಅನುಮಾನಗೊಂಡಿದ್ದ. ಈಕೆ ಕಾಮದಾಟವನ್ನು ಬಯಲಿಗೆಳೆಯಬೇಕು ಅಂತ ಭಾನುವಾರ ಕೆಲಸಕ್ಕೆ ಹೋಗುವುದಾಗಿ ಹೇಳಿ, ಮನೆಯ ಸಮೀಪವೇ ಕಾರಿನಲ್ಲಿ ಕುಳಿತಿದ್ದ. ರಾತ್ರಿ ಲೀಲಾವತಿ ಫೋನ್‌ ಮಾಡಿ ಎಲ್ಲಿದ್ದೀಯಾ ಅಂತ ಕೇಳಿದಾಗ ಹೆಚ್‌ಎಎಲ್‌ ಬಳಿ ಇದ್ದೀನಿ ಅಂತ ಮಂಜುನಾಥ್‌ ಹೇಳಿದ್ದ. ಆಗ ಲೀಲಾವತಿ, ಸಂತೋಷ್‌ಗೆ ಫೋನ್‌ ಮಾಡಿ ಮನೆಗೆ ಕರೆಸಿಕೊಂಡು ಕಾಮದಾಟ ಶುರು ಮಾಡಿಕೊಂಡಿದ್ಳು. ಅಷ್ಟರಲ್ಲಿ ಮನೆಗೆ ಎಂಟ್ರಿ ಕೊಟ್ಟ ಪತಿ, ರೆಡ್‌ಹ್ಯಾಂಡಾಗಿ ಇಬ್ಬರನ್ನು ಹಿಡಿದಿದ್ದ. ಈ ವೇಳೆ ಜೋರು ಗಲಾಟೆಯೂ ನಡೆದಿತ್ತು. ಬಳಿಕ ಈ ಪ್ರಕರಣ ಬನ್ನೇರುಘಟ್ಟ ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು.

    ಠಾಣೆಯಲ್ಲಿ ಪತಿ ಮನವೊಲಿಸಲು ಪ್ರಯತ್ನಿಸಿದ ಹೊರತಾಗಿಯೂ ವಿಫಲವಾಯಿತು. ತಾಳಿಯನ್ನ ಕಿತ್ತು ಮಂಜುನಾಥ್ ಕೈಗೆ ಕೊಟ್ಟವಳೇ ಪೊಲೀಸ್ ಠಾಣೆಯಿಂದ ನೇರವಾಗಿ ಸಂತೋಷ್ ಹೊರಟೇಬಿಟ್ಟಳು. ಇತ್ತ ಹೆಂಡ್ತಿ ಬೇಕೆಂದು ಪತಿ ಮಂಜುನಾಥ್ ಕಣ್ಣೀರು, ತಾಯಿ ಬೇಕೆಂದು ಮಕ್ಕಳು ಕಣ್ಣೀರಿಡುವಂತಾಗಿದೆ. ಇದನ್ನೂ ಓದಿ: ಮಹಿಳೆಯ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರಕ್ಕೆ ಯತ್ನ – ಆರೋಪಿ ಅರೆಸ್ಟ್‌

    ಆ ದಿನ ಏನಾಯ್ತು?
    ಬಸವನಪುರದಲ್ಲಿ ವಾಸವಿದ್ದ ಲೀಲಾವತಿ, ಮಂಜುನಾಥ್ ದಂಪತಿ 11 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದರು. ಮಂಜುನಾಥ್‌ ಕ್ಯಾಬ್‌ ಡ್ರೈವರ್‌ ಆಗಿ ಕೆಲಸ ಮಾಡ್ತಿದ್ದಾನೆ. ಕಳೆದ 2 ವರ್ಷಗಳ ಹಿಂದೆ ಲೀಲಾವತಿಗೆ ಪ್ರಿಯಕರ ಸಂತೋಷ್‌ನ ಪರಿಚಯವಾಗಿತ್ತು. ಇಬ್ಬರ ನಡುವೆ ಸಲುಗೆ ಹೆಚ್ಚಾಗಿ ಅಕ್ರಮ ಸಂಬಂಧ ಬೆಳೆದಿತ್ತು. ಸಾಕಷ್ಟು ಬಾರಿ ಮಂಜುನಾಥ್‌ ಇದನ್ನ ಪ್ರಶ್ನೆ ಮಾಡಿದ್ದ. ಆದರೂ ಬುದ್ಧಿ ಕಲಿಯದ ಲೀಲಾವತಿ ಭಾನುವಾರ ಮನೆಯಿಂದ ಎಸ್ಕೇಪ್‌ ಆಗಿದ್ದಳು.